CHITRADURGA NEWS | 13 JUNE 2024
ಚಿತ್ರದುರ್ಗ: ನಟ ದರ್ಶನ್ ಮತ್ತು ಆತನ ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗ ರೇಣುಕಸ್ವಾಮಿ ಸಾವಿಗೆ ನ್ಯಾಯಕೊಡಿ ಎಂಬ ಕೂಗು ರಾಜ್ಯಾದ್ಯಂತ ಕೇಳಿ ಬರುತ್ತಿದೆ. ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಪ್ರತಿಭಟನೆಗಳ ನಡುವೆ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ಪ್ರಾರಂಭವಾಗಿದೆ.
ರೇಣುಕಾಸ್ವಾಮಿ ಕೊಲೆ ಖಂಡಿಸಿ (X) ಟ್ವಿಟರ್ ಅಭಿಯಾನವನ್ನು ಜೂನ್ 13 ರ ಬೆಳಗ್ಗೆ 10:00 ರಿಂದ ರಾತ್ರಿ 10:00 ರವರೆಗೆ ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ನಡೆಸುತ್ತಿದೆ.

ಕ್ಲಿಕ್ ಮಾಡಿ ಓದಿ: ರೇಣುಕಸ್ವಾಮಿ ಹತ್ಯೆಗೆ ಉಜ್ಜಯಿನಿ ಜಗದ್ಗುರು ಖಂಡನೆ | ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ
ಕಾನೂನು ಎಲ್ಲರಿಗೂ ಒಂದೇ ದರ್ಶನ್ ಇರಲಿ ಅಥವಾ ಸಾಮಾನ್ಯರಿರಲಿ. ಹೆಸರಾಂತ ನಾಯಕ ನಟ ದರ್ಶನ್ ಮತ್ತು ಇತರರು ಸಮುದಾಯದವರಾದ ರೇಣುಕಸ್ವಾಮಿ ಅವರ ಕಗ್ಗೊಲೆಯನ್ನು ಖಂಡಿಸುತ್ತದೆ.
#JusticeForRenukaswamy
#HangDarshanandGang
# ರೇಣುಕಾಸ್ವಾಮಿ ಕಗ್ಗೊಲೆಗೆ ನ್ಯಾಯಕೊಡಿ
ಎಂಬ ಹ್ಯಾಶ್‌ಟ್ಯಾಗ್ ಬಳಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಮುದಾಯದವರು, ಮಾನವತಾವಾದಿಗಳು ದಯಮಾಡಿ ಈ ಅಭಿಯಾನದಲ್ಲಿ ಪಾಲ್ಗೊಂಡು ಈ ಅಭಿಯಾನ ರಾಜ್ಯ ರಾಷ್ಟ್ರ ಅಂತರರಾಷ್ಟ್ರಮಟ್ಟಕ್ಕೆ ತಲುಪಿಸಬೇಕು. ತಪ್ಪು ಮಾಡುವವರಿಗೆ ಶಿಕ್ಷೆ ಕೊಡಲು ಕಾನೂನಿದೆ. ಕಾನೂನನ್ನು ಅಗೌರವಿಸಿ ಕಾನೂನು ಕೈಗೆತ್ತಿಕೊಂಡು ಕೊಲೆಗೈದಿರುವ ದರ್ಶನ್ ಹಾಗೂ ಗ್ಯಾಂಗ್ ಗೆ ಕಠಿಣ ಶಿಕ್ಷೆಯಾಗಲಿ. ಅಭಿಯಾನ ಆರಂಭಿಸಿ ಮೃತ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲೋಣ.
#JusticeForRenukaswamy #HangDarshanandGang#
ರೇಣುಕಾಸ್ವಾಮಿ ಕಗ್ಗೊಲೆಗೆ ನ್ಯಾಯಕೊಡಿ ಎಂದು ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ಮನವಿ ಮಾಡಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
