
CHITRADURGA NEWS | 22 OCTOBER 2025
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿದ್ದು, ಕೋಡಿಯಲ್ಲಿ ಜಲ ವೈಭವ ಕಾಣುತ್ತಿದೆ. ಬರೋಬ್ಬರಿ 89 ವರ್ಷಗಳ ನಂತರ ಅಂದರೆ 2022 ರಲ್ಲಿ ಜಲಾಶಯ ಕೋಡಿ ಬಿದ್ದಾಗ ಕಂಡಿದ್ದ ವೇದಾವತಿಯ ರುದ್ರ ನರ್ತನ ಈಗ ಮತ್ತೆ ಮರುಸ್ಥಾಪಿತವಾಗಿದೆ.
ಜಲಾಶಯದ ಹಿನ್ನೀರು ಭಾಗದ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಬಲ ಬದಿಯಲ್ಲಿರುವ ವಿವಿ ಸಾಗರದ ಕೋಡಿಯಲ್ಲಿ ಅಪಾರ ಪ್ರಮಾಣದ ನೀರು ಹೊರಗೆ ಹರಿಯುತ್ತಿದ್ದು, ಜಲಾಶಯದ ನೀರಿನ ಮಟ್ಟ 132 ಅಡಿಗೆ ತಲುಪಿದೆ.

ಇದನ್ನೂ ಓದಿ: ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ | ಗುಲ್ಬರ್ಗಾದಲ್ಲಿ ಬಂಧಿಸಿದ ಪೊಲೀಸರು
ಮಳೆ ಮುಂದುವರೆದಿದ್ದು, ವಾಣಿವಿಲಾಸ ಸಾಗರ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ವಿವಿ ಸಾಗರ ಜಲಾಶಯಕ್ಕೆ ವೇದಾವತಿ ನದಿ ಹಾಗೂ ಹಳ್ಳ ಕೊಳ್ಳಗಳ ಮೂಲಕ 5823 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಹೊರಗೆ ಹರಿಯುತ್ತಿದೆ.
ಇದನ್ನೂ ಓದಿ: ವಿವಿ ಸಾಗರ ಜಲಾಶಯ ಭರ್ತಿ | 4ನೇ ಸಲ ಕೋಡಿ ಬಿದ್ದು ಹೊಸ ದಾಖಲೆ
ಹಿರಿಯೂರು ತಾಲೂಕಿನ ಪಿಟ್ಲಾಲಿ – ಆಲೂರು ಬಳಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ವರೆಗೆ ನೀರು ತಲುಪಿದ್ದು, ಸಂಜೆ ವೇಳೆಗೆ ನೀರು ಇನ್ನಷ್ಟು ರಭಸವಾಗಿ ಹರಿಯಲಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
