
CHITRADURGA NEWS | 19 October 2025
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿದ್ದು, ಕೋಡಿಯಲ್ಲಿ ನೀರು ಹರಿಯುತ್ತಿದೆ.
ಇದನ್ನೂ ಓದಿ: ಕೋಡಿ ಬಿತ್ತು ವಿವಿ ಸಾಗರ | 118 ವರ್ಷಗಳ ಇತಿಹಾಸದಲ್ಲಿ 3ನೇ ಬಾರಿ ದಾಖಲೆ
130 ಅಡಿ ಎತ್ತರದ ಜಲಾಶಯದಲ್ಲಿ 30.422 TMC ಅಡಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಅಷ್ಟೂ ಭರ್ತಿಯಾಗಿದೆ.
ಅ.18 ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಜಲಾಶಯಕ್ಕೆ ಬರೋಬ್ಬರಿ 1945 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ಜಲಾಶಯ ತುಂಬಿ ಕೋಡಿ ಬಿದ್ದಿದೆ.

ಇದೇ ವರ್ಷ ಜನವರಿಯಲ್ಲಿ ಡ್ಯಾಮ್ ಕೋಡಿ ಹರಿದಿತ್ತು. ಈಗ ಮತ್ತೊಮ್ಮೆ ಕೋಡಿ ಬಿದ್ದಿರುವುದು ಜಲಾಶಯದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.
ವಿವಿ ಸಾಗರ ಡ್ಯಾಂ ನಿರ್ಮಾಣವಾಗಿ ಶತಮಾನ ಕಳೆದಿದ್ದು, ಈವರೆಗೆ ನಾಲ್ಕು ಬಾರಿ ಭರ್ತಿಯಾಗಿ ಕೋಡಿ ಬಿದ್ದಿದೆ.
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 123.50 ಅಡಿವರೆಗೆ ನೀರು ಬಂದಿದ್ದು, ಒಟ್ಟಾರೆ 25.5 TMC ಅಡಿ ನೀರಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಪಠ್ಯೇತರ ಚಟುವಟಿಕೆಗೂ ಮಹತ್ವ ನೀಡಿ | ಶಾಸಕ ಎಂ.ಚಂದ್ರಪ್ಪ
ಜಲಾಶಯ ದೀಪಾವಳಿಗೆ ಮೊದಲೇ ಭರ್ತಿಯಾಗಿರುವುದು ಜಲಾಶಯದ ಸುತ್ತಮುತ್ತಲಿನ ಜನರ ಸಂಭ್ರಮವನ್ನೂ ಹೆಚ್ಚಿಸಿದ್ದು, ಎಲ್ಲರೂ ಕೋಡಿ ಬಳಿ ಹೋಗಿ ವೀಡಿಯೋ, ಪೋಟೊ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
