Connect with us

    ಸನಾತನ ಧರ್ಮಕ್ಕೆ ಪುನಶ್ಚೇತನ ನೀಡಿದವರು ಶಂಕರಾಚಾರ್ಯರು | ಉಪವಿಭಾಗಾಧಿಕಾರಿ ಕಾರ್ತಿಕ್

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮ

    ಮುಖ್ಯ ಸುದ್ದಿ

    ಸನಾತನ ಧರ್ಮಕ್ಕೆ ಪುನಶ್ಚೇತನ ನೀಡಿದವರು ಶಂಕರಾಚಾರ್ಯರು | ಉಪವಿಭಾಗಾಧಿಕಾರಿ ಕಾರ್ತಿಕ್

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 26 MAY 2024

    ಚಿತ್ರದುರ್ಗ: ಸನಾತನ ಧರ್ಮದಲ್ಲಿ ಶೈವ, ವೈಷ್ಣವ, ಶಕ್ತಿ, ಗಣೇಶ ‌ಹಾಗೂ ಸೂರ್ಯನ ಆರಾಧಕ ಪಂಥಗಳು ಇದ್ದವು. ಇವುಗಳ ಭಿನ್ನತೆಯಿಂದಾಗಿ ಸನಾತನ ಧರ್ಮ ಮಂಕಾಗಿತ್ತು. ಶಂಕರಾಚಾರ್ಯರು ಈ ಎಲ್ಲಾ ಪಂಥಗಳನ್ನು ಒಗ್ಗೂಡಿಸಿ ಸನಾತನ ಧರ್ಮಕ್ಕೆ ಪುನಶ್ಚೇತನ ನೀಡಿದರು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು.

    ಇದನ್ನೂ ಓದಿ: ಮೊಳಕಾಲ್ಮೂರು ಘಟನೆಗೆ ಬೆಸ್ಕಾಂ ಸ್ಪಷ್ಟನೆ | ಹಾಗಾದರೆ ಅಂದು ರಾತ್ರಿ ಎಷ್ಟೊತ್ತು ವಿದ್ಯುತ್ ಇರಲಿಲ್ಲ

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾದ ಶ್ರೀ ಶಂಕರಾಚಾರ್ಯರರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,‌ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

    ಬುದ್ದ ಹಾಗೂ ಜೈನ ಧರ್ಮಗಳ‌ ಪ್ರಭಾವದಿಂದ ಸನಾತನ ಧರ್ಮವನ್ನು ಮೇಲೆತ್ತಿ, ಸನಾತನ ಧರ್ಮದ ಉನ್ನತ‌ ತತ್ವಜ್ಞಾನವನ್ನು ಜಗತ್ತಿಗೆ ಸಾರುವ ಕೆಲಸವನ್ನು ಆದಿಗುರು ಶಂಕರಾಚಾರ್ಯರು ಮಾಡಿದರು.

    ಬುದ್ದ ಹಾಗೂ ಜೈನ ಧರ್ಮಗಳು ತಮ್ಮ ವಿಶಿಷ್ಟ ತತ್ವಗಳಿಂದಾಗಿ ಭಾರತ ಹಾಗೂ ಬೇರೆ ದೇಶಗಳಲ್ಲಿಯೂ ಮನ್ನಣೆ ಗಳಿಸಿದ್ದವು. ಬುದ್ಧ ಧರ್ಮ ಏಷ್ಯಾದ ಹಲವು ದೇಶಗಳಿಗೂ ಹಬ್ಬಿತ್ತು. ಶಂಕರಾಚಾರ್ಯರರು ಅದ್ವೈತ ಸಿದ್ದಾಂತ ಪ್ರತಿಪಾದಿಸಿದವರು ಎಂದರು.

    ಇದನ್ನೂ ಓದಿ: ವಿವಿ ಸಾಗರಕ್ಕೆ ಹೆಚ್ಚಾದ ಒಳಹರಿವು | 114 ಅಡಿ ತಲುಪಿದ ಜಲಾಶಯ ಮಟ್ಟ

    ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ ಮಾತನಾಡಿ, ಶಂಕರಾಚಾರ್ಯರು 1300 ವರ್ಷಗಳ ಹಿಂದೆ ಜನಿಸಿದರು. ಐದನೇ ವರ್ಷಕ್ಕೆ ಉಪನಯನ ನಂತರ ಸನ್ಯಾಸ ಸ್ವೀಕರಿಸಿ, ಅಖಂಡ ಭಾರತವನ್ನು 3 ಬಾರಿ ಪ್ರದಕ್ಷಣೆ ಹಾಕಿ ಹಿಂದೂ ಧರ್ಮದ ಪುನರುಜ್ಜೀವನಗೊಳಿಸಿದರು.

    ಈ ಕಾರಣದಿಂದಲೇ ಇಂದಿಗೂ ಭಾರತದಲ್ಲಿ ಸನಾತನ ಹಿಂದೂ ಧರ್ಮದ ಉಳಿದುಕೊಂಡು ಬಂದಿದೆ. ಶಂಕರಾಚಾರ್ಯರು ಜ್ಞಾನಕ್ಕೆ ಹೆಚ್ಚಿನ ಒತ್ತುಕೊಟ್ಟು ನಹಿಃ ಜ್ಞಾನೇನ ಸದೃಶಂ ಎಂದು ಹೇಳಿದರು. ಅಹಂ ಬ್ರಹ್ಮಾಸ್ಮೀ ಎಂಬ ತತ್ವದ ಮೂಲಕ ನಮ್ಮಲ್ಲೇ ನಾವು ದೈವತ್ವನ್ನು ಕಾಣಬೇಕು ಎಂದು ತಿಳಿಸಿದರು. ಇದರೊಂದಿಗೆ ಹಲವು ಗ್ರಂಥಗಳ ಮೇಲೆ ಭಾಷ್ಯಗಳನ್ನು ರಚಿಸಿದರು. ಅವರ ರಚಿಸಿದ ಸ್ತುತಿಗಳು ಇಂದಿಗೂ ಜನಮಾನಸದಲ್ಲಿವೆ ಎಂದರು.

    ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಶಿಕ್ಷಣ ಕ್ಷೇತ್ರ ಕಲುಷಿತ | ಬಿ.ವೈ.ವಿಜಯೇಂದ್ರ ವಾಗ್ದಾಳಿ

    ತಹಶಿಲ್ದಾರ ಡಾ.ನಾಗವೇಣಿ ಮಾತನಾಡಿ ಅದ್ವೈತ ಸಿದ್ದಾಂತ ಜೊತೆಗೆ ದೇಶದ ನಾಲ್ಕು ಮೂಲೆಗಳಲ್ಲಿಯೂ ನಾಲ್ಕು ಮಠಗಳನ್ನು ಸ್ಥಾಪಿಸಿ ಹಿಂದೂ ಧರ್ಮವನ್ನು ಪುನಶ್ಚೇತನಗೊಳಿಸಿದರು ಎಂದರು.

    ಕಾರ್ಯಕ್ರಮದಲ್ಲಿ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಬ್ರಾಹ್ಮಣ ಸಂಘದ ಅಧ್ಯಕ್ಷ ನಿರ್ದೇಶಕ ಶಂಕರ್,ಮುಖಂಡರುಗಳಾದ ಮಂಜುನಾಥ, ಹರೀಶ್, ಭಾರತಿ ಸೇರಿದಂತೆ ಮತ್ತಿತರರು ಇದರು.

    ಇದನ್ನೂ ಓದಿ: ಮೂಡಿಗೆರೆ ಬಳಿ ಭೀಕರ ಅಪಘಾತದಲ್ಲಿ ಮಡಿದವರಿಗೆ ಪರಿಹಾರದ ಭರವಸೆ | ಸಚಿವ ಡಿ.ಸುಧಾಕರ್

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿ ಕೆ.ಪಿ.ಎಂ.ಗುರುದೇವ್ ಭಕ್ತಿಗೀತೆ ಪ್ರಸ್ತುತ ಪಡಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top