Connect with us

    ತಡರಾತ್ರಿ ವೇಳೆ ಕಾಲುಜಾರಿ ರೈಲಿನಿಂದ ಬಿದ್ದ ಮಹಿಳೆ | ಪತಿ ಹುಡುಕಾಡಿದಾಗ ಶವವಾಗಿ ಪತ್ತೆ

    ರೈಲ್ವೇ ಹಳಿ

    ಕ್ರೈಂ ಸುದ್ದಿ

    ತಡರಾತ್ರಿ ವೇಳೆ ಕಾಲುಜಾರಿ ರೈಲಿನಿಂದ ಬಿದ್ದ ಮಹಿಳೆ | ಪತಿ ಹುಡುಕಾಡಿದಾಗ ಶವವಾಗಿ ಪತ್ತೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 26 MAY 2024

    ಚಿತ್ರದುರ್ಗ: ಹೊಳಲ್ಕೆರೆ ಪಟ್ಣಣದ ಮುಷ್ಟಿಗರ ಹಟ್ಟಿಯ ನಿರ್ಮಲಮ್ಮ(55) ರೈಲಿನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಶುಕ್ರವಾರ ತಡರಾತ್ರ ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ.

    ರೈಲಿನೊಳಗೆ ತಡರಾತ್ರಿ ವೇಳೆ ಶೌಚಾಲಯಕ್ಕೆ ಹೋಗಿದ್ದಾಗ ಕಾಲು ಜಾರಿ ಬೋಗಿಯಿಂದ ಹೊರಗೆ ಬಿದ್ದಿದ್ದಾರೆ.

    ಇದನ್ನೂ ಓದಿ: ವಿವಿ ಸಾಗರಕ್ಕೆ ಹೆಚ್ಚಾದ ಒಳಹರಿವು | 114 ಅಡಿ ತಲುಪಿದ ಜಲಾಶಯ ಮಟ್ಟ

    ಹೊಳಲ್ಕೆರೆಯ ಮುಷ್ಟಿಗರಹಟ್ಟಿಯ ರೈತ ಮುಖಂಡ ಕುಮಾರ್ ಆಚಾರ್ ಅವರ ಪತ್ನಿ ನಿರ್ಮಲಮ್ಮ ಹಾಗೂ ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಚೀಟಿ ಹಾಕಿಕೊಂಡು ಆ ಹಣದಲ್ಲಿ ಸುಮಾರು 50 ಜನ ಪ್ರವಾಸಕ್ಕೆ ತೆರಳಿದ್ದರು.

    ಕಳೆದ ವಾರ ಚಿಕ್ಕಜಾಜೂರಿನಿಂದ ರೈಲು ಮೂಲಕ ಪ್ರವಾಸಕ್ಕೆ ತೆರಳಿದ್ದು, ತಮಿಳುನಾಡು ಪ್ರವಾಸ ಮುಗಿಸಿ ಕನ್ಯಾಕುಮಾರಿಯಿಂದ ವಾಪಾಸಾಗಲು ಮಧುರೈ ಮಾರ್ಗದಲ್ಲಿ ಬೆಂಗಳೂರಿಗೆ ಸ್ಲೀಪರ್ ಕೋಚ್‍ನಲ್ಲಿ ಪ್ರಯಾಣಿಸುತ್ತಿದ್ದರು.

    ಇದನ್ನೂ ಓದಿ: ಮೊಳಕಾಲ್ಮೂರು ಘಟನೆಗೆ ಬೆಸ್ಕಾಂ ಸ್ಪಷ್ಟನೆ | ಹಾಗಾದರೆ ಅಂದು ರಾತ್ರಿ ಎಷ್ಟೊತ್ತು ವಿದ್ಯುತ್ ಇರಲಿಲ್ಲ

    ನಿರ್ಮಲಮ್ಮ ತಡರಾತ್ರಿ ಮೂತ್ರ ವಿಸರ್ಜನೆಗಾಗಿ ಶೌಚಾಲಯಕ್ಕೆ ಹೋಗಿದ್ದಾರೆ. ಈ ವೇಳೆ ಕಾಲು ಜಾರಿ ಬೋಗಿಯಿಂದ ಹೊರಗೆ ಬಿದ್ದಿದ್ದಾರೆ. ಪತಿ ಕುಮಾರ ಆಚಾರ್ ಎಚ್ಚರಗೊಂಡಾಗ ಪಕ್ಕದಲ್ಲಿ ಪತ್ನಿ ಇರಲಿಲ್ಲ. ಗಾಬರಿಯಿಂದ ಬೋಗಿಯಲ್ಲಿ ಹುಡುಕಾಡಿದ್ದಾರೆ.

    ಈ ವೇಳೆ ಶೌಚಾಲಯದ ಬಳಿ ನಿರ್ಮಲಮ್ಮ ಅವರ ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿದೆ. ತಕ್ಷಣ ಅದೇ ನಿಲ್ದಾಣದಲ್ಲಿ ಇಳಿದು ಸ್ಥಳೀಯರಿಗೆ ಮಾಹಿತಿ ನೀಡಿ, ಕುಮಾರ್ ಆಚಾರ್ ಮತ್ತು ಅಳಿಯಂದಿರು ಹತ್ತಿರದ ಧರ್ಮಪುರಿ ಠಾಣೆಗೆ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಶಿಕ್ಷಣ ಕ್ಷೇತ್ರ ಕಲುಷಿತ | ಬಿ.ವೈ.ವಿಜಯೇಂದ್ರ ವಾಗ್ದಾಳಿ

    ಪೊಲೀಸರ ಜೊತೆಗೆ ರೈಲ್ವೇ ಹಳಿ ಹುಡುಕಿಕೊಂಡು ಹೋದಾಗ ಟೋನೂರು ಎಂಬಲ್ಲಿ ನಿರ್ಮಲಮ್ಮ ಅವರ ಶವ ಪತ್ತೆಯಾಗಿದೆ.

    ಧರ್ಮಪುರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top