ಮುಖ್ಯ ಸುದ್ದಿ
VV Sagar inflow; ವಿವಿ ಸಾಗರ ಒಳ ಹರಿವು ಹೆಚ್ಚಳ | ಜಲಾಶಯದ ಇಂದಿನ ನೀರಿನ ಮಟ್ಟ

CHITRADURGA NEWS | 22 AUGUST 2024
ಚಿತ್ರದುರ್ಗ: ವಿವಿ ಸಾಗರ(VV Sagar) ಜಲಾಶಯದ ಒಳಹರಿವು ಗುರುವಾರ ಹೆಚ್ಚಳವಾಗಿದೆ.
ಕ್ಲಿಕ್ ಮಾಡಿ ಓದಿ: Rain problem: ಆಯಿಲ್‌ಸಿಟಿಗೆ ವರುಣಾಘಾತ | ನೀರಿನಲ್ಲೇ ನಿಂತು ರಾತ್ರಿ ಕಳೆದ ಜನರು

ಭದ್ರಾ ಜಲಾಶಯದಿಂದ ಬರುತ್ತಿರುವ 700 ಕ್ಯೂಸೆಕ್ ಜೊತೆಗೆ ಮಳೆಯಿಂದ ಹಳ್ಳ ಹರಿಯುತ್ತಿರುವ ನೀರು ಹರಿದು ಬರುತ್ತಿದೆ.
ಗುರುವಾರ ಬೆಳಗ್ಗೆ 8 ಗಂಟೆಗೆ ನಡೆಸಿದ ಮಾಪನದ ವೇಳೆ ವಾಣಿವಿಲಾಸ ಸಾಗರ ಜಲಾಶಯಕ್ಕೆ 1502 ಕ್ಯೂಸೆಕ್ ನೀರಿ ಬಂದು ಸೇರಿದೆ.
130 ಅಡಿ ಎತ್ತರದ ಜಲಾಶಯದಲ್ಲಿ ಸದ್ಯ 117.40 ಅಡಿ ವರೆಗೆ ನೀರು ಬಂದಿದೆ.
ಜಲಾಶಯದ ಒಟ್ಟು ಸಾಮರ್ಥ್ಯ 30 ಟಿಎಂಸಿ ಅಡಿ ಆಗಿದ್ದು, ಇಂದಿಗೆ 20.40 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಕ್ಲಿಕ್ ಮಾಡಿ ಓದಿ: Competitive Exam; ಆ.27 ರಂದು ಗೆಜೆಟೆಡ್ ಪ್ರೊಬೆಷನರ್ಸ್ ಸ್ಪರ್ಧಾತ್ಮಕ ಪರೀಕ್ಷೆ | ಸಿ.ಸಿ ಕ್ಯಾಮೆರಾ, ಮೊಬೈಲ್ ಜಾಮರ್ ಅಳವಡಿಕೆ
ಕಳೆದ ವರ್ಷ ಇದೇ ದಿನಕ್ಕೆ ಜಲಾಶಯದಲ್ಲಿ 122.95 ಅಡಿವರೆಗೆ ನೀರಿತ್ತು. ಒಟ್ಟಾರೆ 24.52 ಟಿಎಂಸಿ ನೀರು ಸಂಗ್ರಹ ಆಗಿತ್ತು.
