ಮುಖ್ಯ ಸುದ್ದಿ
Rain problem: ಆಯಿಲ್‌ಸಿಟಿಗೆ ವರುಣಾಘಾತ | ನೀರಿನಲ್ಲೇ ನಿಂತು ರಾತ್ರಿ ಕಳೆದ ಜನರು

CHITRADURGA NEWS | 21 AUGUST 2024
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ನಗರಕ್ಕೆ ವರುಣಾಘಾತವಾಗಿದ್ದು, ಜನರು ತಲ್ಲಣಿಸಿದ್ದಾರೆ. ನೀರಿನಲ್ಲೇ ನಿಂತು ರಾತ್ರಿ ಕಳೆದಿದ್ದಾರೆ.
ಚಳ್ಳಕೆರೆ ನಗರದ ತಗ್ಗು ಪ್ರದೇಶದ ನಿವಾಸಿಗಳ ಗೋಳು ಕೇಳುವವರು ಇಲ್ಲವಾಗಿದೆ. ರಾಜಕಾಲುವೆ ಅಕ್ಕ ಪಕ್ಕದ ನಿವಾಸಿಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಇಡೀ ರಾತ್ರಿ ನಿದ್ದೆಯಿಲ್ಲದೆ ಕಾಲ ದೂಡಿದ್ದಾರೆ. ರಹೀಂ ನಗರ, ಸೂಜಿಮಲ್ಲೇಶ್ವರ ನಗರ, ಹಳೆ ನಗರ, ಕಾಟಪನಹಟ್ಟಿ, ಅಂಬೇಡ್ಕರ್ ನಗರ, ಪಾವಗಡ ರಸ್ತೆ ಹೀಗೆ ಅನೇಕ ಕಡೆ ನಿವಾಸಿಗಳ ಪಾಡು ಹೇಳತೀರದಾಗಿದೆ.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗದ ಈ ಗ್ರಾಮಕ್ಕೆ ರಾಜ್ಯದಲ್ಲೇ ಅತಿ ಹೆಚ್ಚು ಮಳೆ | ತುಂಬಿ ಹರಿದ ಹಳ್ಳಕೊಳ್ಳ

ರಾಜಕಾಲುವೆಯಲ್ಲಿ ಸ್ವಚ್ಚತೆ ಇಲ್ಲದೆ ಗಿಡಗಂಟೆ ಬೆಳೆದು ಮಳೆಯ ನೀರು ಮುಂದಕ್ಕೆ ಸಾಗದೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮನೆಯಲ್ಲಿರುವ ದವಸ ಧಾನ್ಯ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿವೆ.
ನಗರ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದ ವಾಹನ ಸಾವರರು ಪರದಾಡುವಂತಾಯಿತು. ಪಾವಗಡರಸ್ತೆಯ ನೀಲಕಂಠೇಶ್ವರ ದೇವಸ್ಥಾನ ಸಮೀಪ ರಸ್ತೆ ಮೇಲೆ ನೀರು ಹರಿದ ಕಾರಣ ರಸ್ತೆ ಬಂದ್ ಆಗಿದೆ. ಕಾಟಪನಹಟ್ಟಿಗೆ ಹೋಗುವ ಪಾದಗಟ್ಟೆ ಸಮೀಪದ ಹಳ್ಳ ತುಂಬಿ ಹರಿದ ಪರಿಣಾಮ ರಸ್ತೆಯನ್ನು ತಾತ್ಕಾಲಿಕ ಬಂದ್ ಮಾಡಲಾಗಿದೆ.
