ಹೊಳಲ್ಕೆರೆ
Students missing: ಆತಂಕ ಮೂಡಿಸಿದ 6 ವಿದ್ಯಾರ್ಥಿಗಳ ನಾಪತ್ತೆ ಪ್ರಕರಣ | ವಸತಿ ಶಾಲೆಯಿಂದ ಬೆಳಗ್ಗೆ ತೆರಳಿದ್ದ ಮಕ್ಕಳು | ಬೆಂಗಳೂರಿನಲ್ಲಿ ಪತ್ತೆ

CHITRADURGA NEWS | 21 AUGUST 2024
ಹೊಳಲ್ಕೆರೆ: ವಸತಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ 6 ವಿದ್ಯಾರ್ಥಿಗಳು ವಸತಿ ನಿಲಯದಿಂದ ನಾಪತ್ತೆಯಾಗಿರುವ (Students missing) ಘಟನೆ ಬೆಳಗ್ಗೆ ವರದಿಯಾಗಿತ್ತು. ಆದರೆ, ಸಂಜೆ ವೇಳೆಗೆ ಪ್ರಕರಣ ಸುಖಾಂತ್ಯ ಕಂಡಿದ್ದು ಎಲ್ಲ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಹೊಳಲ್ಕೆರೆ ಪಟ್ಟಣದ ಡ್ರೀಮ್ ವರ್ಲ್ಡ್ ಖಾಸಗಿ ವಸತಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆಗಸ್ಟ್ 21 ಬುಧವಾರ ಬೆಳಗಿನ ಜಾವ 5.30ಕ್ಕೆ ವಿದ್ಯಾರ್ಥಿ ನಿಲಯದಿಂದ ತೆರಳಿದ್ದರು.

ಇದನ್ನೂ ಓದಿ: ಚಿತ್ರದುರ್ಗದ ಈ ಗ್ರಾಮಕ್ಕೆ ರಾಜ್ಯದಲ್ಲೇ ಅತಿ ಹೆಚ್ಚು ಮಳೆ | ತುಂಬಿ ಹರಿದ ಹಳ್ಳಕೊಳ್ಳ
ಬೆಳಗ್ಗೆ ಒಟ್ಟು 9 ವಿದ್ಯಾರ್ಥಿಗಳು ಒಟ್ಟಿಗೆ ತೆರಳಿದ್ದು, ಅದರಲ್ಲಿ ಮೂರು ಜನ ವಾಪಾಸು ಬಂದಿದ್ದಾರೆ. ಉಳಿದ 6 ವಿದ್ಯಾರ್ಥಿಗಳು ವಾಪಾಸು ವಾರದಿರುವುದು ಆತಂಕ ಮೂಡಿಸಿತ್ತು.
ಕಾಣೆಯಾಗಿರುವ ವಿದ್ಯಾರ್ಥಿಗಳ ಪತ್ತೆಗೆ ಪೊಲೀಸರು ಹಾಗೂ ಪೋಷಕರು ಬೆಳಗ್ಗೆಯಿಂದ ಹುಡುಕಾಟ ನಡೆಸುತ್ತಿದ್ದರು.
ಇದನ್ನೂ ಓದಿ: ಆಯಿಲ್‌ಸಿಟಿಗೆ ವರುಣಾಘಾತ | ನೀರಿನಲ್ಲೇ ನಿಂತು ರಾತ್ರಿ ಕಳೆದ ಜನರು
ನಾಪತ್ತೆಯಾಗಿದ್ದ ಓರ್ವ ವಿದ್ಯಾರ್ಥಿ ಶ್ರೇಯಸ್ ಎಂಬುವವನ ಬೆಂಗಳೂರಿನಲ್ಲಿರುವ ಅತ್ತೆ ಶ್ವೇತಾ ಮನೆಗೆ ತೆರಳಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ವಸತಿ ಶಾಲೆಯಾಗಿದ್ದರೂ, ಶಾಲೆ ಹಾಗೂ ವಸತಿ ನಿಲಯದಲ್ಲಿ ಸಿ.ಸಿ.ಕ್ಯಾಮರಾ ಹಾಗೂ ಸೆಕ್ಯೂರಿಟಿ ಇಲ್ಲದಿರುವುದನ್ನು ಕಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತುಂಬಿ ತುಳುಕಿದ ತಳಕು | ಕುಸಿದವು ಮನೆ, ಹೆಕ್ಟೇರ್‌ಗಟ್ಟಲೇ ಬೆಳೆ ನಾಶ
ಶಾಲೆಗೆ ತಹಶೀಲ್ದಾರ್ ಬಿ.ಬಿ.ಫಾತಿಮಾ ಭೇಟಿ ನೀಡಿ ಪೋಷಕರು ಹಾಗೂ ಶಾಲೆಯ ಶಿಕ್ಷಕರ ಜೊತೆಗೆ ಮಾತುಕತೆ ನಡೆಸಿದ್ದಾರೆ.
