
CHITRADURGA NEWS | 16 OCTOBER 2025
ಚಿತ್ರದುರ್ಗ: ಓದುವಾಗ ಕಷ್ಟ ಪಟ್ಟು ಓದದೇ ಇಷ್ಟಪಟ್ಟು ಓದಬೇಕು ಆಗ ಮಾತ್ರ ಜೀವನದಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದು ತುಮಕೂರಿನ ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲ ಸಚಿವರಾದ ಪ್ರೋ.ಡಾ.ಎನ್.ಸತೀಶ್ ಗೌಡ ಕಾನೂನು ವಿದ್ಯಾರ್ಥಿಗಳಿಗೆ ಹೇಳಿದರು.
ಇದನ್ನೂ ಓದಿ: ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಇಳಿಕೆ | ನ್ಯಾ.ರೋಣ ವಾಸುದೇವ್
ನಗರದ ಸರಸ್ವತಿ ವಿದ್ಯಾ ಸಂಸ್ಥೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಸ್ವತಿ ಕಾನೂನು ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ವಿದ್ಯಾರ್ಥಿ ಕಾನೂನು ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ, ಮಾನವ ಹಕ್ಕುಗಳ ವೇದಿಕೆ, ರೆಡ್‍ಕ್ರಾಸ್ ಘಟಕ, ಇಕೋಕ್ಲಬ್ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು,
ಐದು ವರ್ಷಗಳ ಕಾಲ ನೀವುಗಳು ಸತತವಾಗಿ ಶ್ರಮ ಹಾಕಿ ಅಭ್ಯಾಸ ಮಾಡಿದರೆ ಮುಂದಿನ 50 ವರ್ಷಗಳ ಕಾಲ ಜನತೆಯಿಂದ ಗೌರವ ಸ್ವೀಕಾರ ಮಾಡಬಹುದಾಗಿದೆ. ವಿದ್ಯೆ ಮನುಷ್ಯನಿಗೆ ಬದುಕುವ ದಾರಿ ತೋರಿಸುತ್ತದೆ. ಕಾನೂನು ಪದವಿ ಪಡೆಯಲು ಆಯ್ಕೆ ಮಾಡಿದವರು ಹಣ ಮಾಡದೇ ಸೇವಾ ಮನೋಭಾವಯಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯವಿದೆ ಎಂದರು.
ಹುಟ್ಟು-ಸಾವು ಸಾಮಾನ್ಯ ಅದು ಎಲ್ಲರ ಜೀವನದಲ್ಲಿಯೂ ನಡೆಯುತ್ತದೆ, ಇದರ ಮಧ್ಯದಲ್ಲಿ ಉತ್ತಮವಾದ ಸಾಧನೆ ಮಾಡಬೇಕಿದೆ, ಆಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ನಿಮ್ಮಲ್ಲಿ ನೊಂದವರು, ಬೇರೆಯವರಿಂದ ಮೋಸ ಹೋದವರು ಸೇರಿದಂತೆ ವಿವಿಧ ರೀತಿಯ ಜನರು ಬರುತ್ತಾರೆ ಅವರ ನೋವನ್ನು ಕೇಳಿಸಿಕೊಂಡು ಅವರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಿ ಎಂದರು.
ಇದನ್ನೂ ಓದಿ: 30 ಲಕ್ಷ ಪಡೆದು ನಕಲಿ ಚಿನ್ನ ಮಾರಿದ್ದ ಇಬ್ಬರ ಬಂಧನ | ತಳಕು ಪೊಲೀಸರ ಕಾರ್ಯಾಚರಣೆ
ಇಂದಿನ ದಿನಮಾನದಲ್ಲಿ ಹಣವನ್ನು ಹೊಂದಿದವನು ಶ್ರೀಮಂತನಲ್ಲ ಉತ್ತಮವಾದ ಆರೋಗ್ಯ ಹೊಂದಿದವನು ಶ್ರೀಮಂತ. ಆರೋಗ್ಯ ಚನ್ನಾಗಿ ಕಾಪಾಡಿಕೊಳ್ಳಬೇಕಿದೆ. ಇದಕ್ಕಾಗಿ ಪ್ರತಿ ದಿನ ವ್ಯಾಯಾಮ, ಕ್ರೀಡೆಯಲ್ಲಿ ಭಾಗವಹಿಸುವಿಕೆ ಮಾಡುವುದರ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.
ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಬಿ.ಕೇಂಪೇಗೌಡ ಮಾತನಾಡಿ, ಎಲ್ಲರಲೂ ಸಹಾ ಏನಾದರೂ ಒಂದು ಪ್ರತಿಭೆ ಇರುತ್ತದೆ. ಆದನ್ನು ಹೊರ ತೆಗೆಯುವ ಕಾರ್ಯ ಶಿಕ್ಷಕರು ಮಾಡಬೇಕಿದೆ. ಇಂದಿನ ನಮ್ಮ ಸಮಾಜದಲ್ಲಿ ವೈದ್ಯರು, ನ್ಯಾಯಾವಾದಿಗಳು, ಶಿಕ್ಷಕ ವೃತ್ತಿ ಪವಿತ್ರವಾಗಿದೆ.
ಇವುಗಳಲ್ಲಿ ತೊಡಗಿಸಿಕೊಂಡವರು ಸದಾ ಜನತೆಯ ಏಳಿಗೆ ಬಯಸುತ್ತಾರೆ. ನಿಮ್ಮದು ಹಣ ಮಾಡುವ ವೃತ್ತಿಯಲ್ಲ ಸಮಾಜ ಸೇವೆ ಮಾಡುವ ವೃತ್ತಿಯಾಗಿದೆ ನೊಂದವರ ಕಣ್ಣೀರನ್ನು ಒರೆಸುವ ಕಾರ್ಯ ಮಾಡಿ ಎಂದು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶು ಪಾಲರಾದ ಪ್ರೋ.ಡಾ.ಎಂ.ಎಸ್. ಸುಧಾದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸರಸ್ವತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು, ರಾಜ್ಯಸಭಾ ಮಾಜಿ ಸದಸ್ಯ ಹೆಚ್.ಹನುಮಂತಪ್ಪ, ಹಿರಿಯ ವಕೀಲರು ಸರಸ್ವತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಫಾತ್ಯಾರಾಜನ್, ಕಾರ್ಯದರ್ಶಿಗಳಾದ ಡಿ.ಕೆ.ಶೀಲ, ಆಡಳಿತ ಮಂಡಳಿ ಸದಸ್ಯ ರಾಮರಾವ್, ವಿದ್ಯಾರ್ಥಿ ಕಾನೂನು ವೇದಿಕೆಯ ಅಧ್ಯಕ್ಷ ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಕಾನೂನು ವಿದ್ಯಾರ್ಥಿಗಳು ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
