CHITRADURGA NEWS | 24 JUNE 2026
ಚಿತ್ರದುರ್ಗ: 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕಾ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮೆ ನೊಂದಣಿ ಪ್ರಾರಂಭವಾಗಿದೆ.
ಇದನ್ನೂ ಓದಿ: 65 ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ
ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಮಳೆಯಾಶ್ರಿತ, ಈರುಳ್ಳಿ ನೀರಾವರಿ, ಟೊಮ್ಯಾಟೋ ಹಾಗೂ ಕೆಂಪು ಮೆಣಸಿನಕಾಯಿ ಮಳೆಯಾಶ್ರಿತ ಬೆಳೆಗಳಿಗೆ ವಿಮೆ ನೊಂದಣಿ ಮಾಡಬಹುದು.
ತೋಟಗಾರಿಕೆ ಬೆಳೆಗಳ ವಿವರ:
2026ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಗೆ ಅಧಿಸೂಚಿತ ತೋಟಗಾರಿಕೆ ಬೆಳೆಗಳ ವಿವರ ಇಂತಿದೆ. ಚಿತ್ರದುರ್ಗ ತಾಲ್ಲೂಕು ಕಸಬಾ, ತುರುವನೂರು ಹೋಬಳಿ (ಈರುಳ್ಳಿ ನೀರಾವರಿ, ಈರುಳ್ಳಿ ಮಳೆಯಾಶ್ರಿತ), ಹಿರೇಗುಂಟನೂರು ಹೋಬಳಿ (ಈರುಳ್ಳಿ ನೀರಾವರಿ) ಭರಮಸಾಗರ ಹೋಬಳಿ (ಈರುಳ್ಳಿ ನೀರಾವರಿ, ಟೊಮೋಟೊ).
ಚಳ್ಳಕೆರೆ ತಾಲ್ಲೂಕಿನ ಕಸಬಾ, ನಾಯಕನಹಟ್ಟಿ, ಪರುಶುರಾಂಪುರ ಹಾಗೂ ತಳಕು ಹೋಬಳಿಗೆ (ಈರುಳ್ಳಿ ನೀರಾವರಿ, ಟೊಮೋಟೊ) ಹಿರಿಯೂರು ತಾಲ್ಲೂಕು ಕಸಬಾ ಹೋಬಳಿ, ಐಮಂಗಲ, ಜೆ.ಜಿ.ಹಳ್ಳಿ, (ಈರುಳ್ಳಿ ನೀರಾವರಿ), ಧರ್ಮಪುರ ಹೋಬಳಿ (ಈರುಳ್ಳಿ ನೀರಾವರಿ, ಟೊಮೋಟೋ) , ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಹೋಬಳಿ (ಈರುಳ್ಳಿ ನೀರಾವರಿ, ಈರುಳ್ಳಿ ಮಳೆಯಾಶ್ರಿತ), ತಾಳ್ಯ ಹೋಬಳಿ (ಈರುಳ್ಳಿ ನೀರಾವರಿ, ಹೊಸದುರ್ಗ ತಾಲ್ಲೂಕು ಕಸಬಾ ಹೋಬಳಿ ಈರುಳ್ಳಿ ಮಳೆಯಾಶ್ರಿತ, ಟೊಮೊಟೊ, ಕೆಂಪು ಮೆಣಸಿನಕಾಯಿ ಮಳೆಯಾಶ್ರಿತ, ಮೊಳಕಾಲ್ಮುರು ತಾಲ್ಲೂಕು ದೇವಸಮುದ್ರ ಹಾಗೂ ಕಸಬಾ ಹೋಬಳಿ (ಈರುಳ್ಳಿ ನೀರಾವರಿ, ಟೊಮೋಟೊ).
ಇದನ್ನೂ ಓದಿ: ದೇಶದ ಸರ್ವತೋಮುಖ ಪ್ರಗತಿಯಲ್ಲಿ ಪ್ರತಿಯೊಬ್ಬ ತೆರಿಗೆದಾರರ ಪಾತ್ರವೂ ಅತ್ಯಂತ ಪ್ರಮುಖ | ರಾಮನಾಥನ್
ವಿಮಾ ಕಂತಿನ ವಿವರ:
ಟೊಮ್ಯಾಟೋ ಬೆಳೆಯ ವಿಮೆ ಮೊತ್ತ ಪ್ರತಿ ಹೆಕ್ಟೇರ್‍ಗೆ ರೂ.169800 ಇದ್ದು, ರೈತರ ವಿಮಾ ಕಂತು ರೂ.8490 ಆಗಿದೆ. ನೀರಾವರಿ ಈರುಳ್ಳಿ ವಿಮೆ ಮೊತ್ತ ಹೆಕ್ಟೇರ್‍ಗೆ ರೂ.93900 ಇದ್ದು, ರೈತರ ವಿಮಾ ಕಂತು ರೂ.4695 ಆಗಿದೆ. ಮಳೆ ಆಶ್ರಿತ ಈರುಳ್ಳಿ ವಿಮಾ ಮೊತ್ತ ಹೆಕ್ಟೇರ್‍ಗೆ ರೂ. 85600 ಆಗಿದ್ದು, ರೈತರ ಮಿಮಾ ಕಂತು ರೂ.4280 ಆಗಿದೆ.
ಮಳೆ ಆಶ್ರಿತ ಕೆಂಪು ಮೆಣಸಿಕಾಯಿ ವಿಮಾ ಮೊತ್ತ ಹೆಕ್ಟೇರ್‍ಗೆ ರೂ.90800 ಆಗಿದ್ದು, ರೈತರ ವಿಮಾ ಕಂತು 4540 ಆಗಿದೆ. ಅಧಿಸೂಚಿತ ಬೆಳೆಗಳ ವಿಮೆಯನ್ನು ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರ ಹಾಗೂ ಆರ್ಥಿಕ ಸಂಸ್ಥೆಗಳಲ್ಲಿ ನೊಂದಣಿ ಮಾಡಬಹುದು.
2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ. ನೀರಾವರಿ ಆಶ್ರಿತ ಈರುಳ್ಳಿ ಬೆಳೆ ವಿಮೆ ನೊಂದಣಿಗೆ ಜುಲೈ 15 ಕಡೆಯ ದಿನ. ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ಜಿಲ್ಲೆಗೆ ನಿಗಧಿಪಡಿಸಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ನಗರದಲ್ಲಿ ನೂತನ ಆಧಾರ್ ಸೇವಾ ಕೇಂದ್ರ | AC ಡಾ.ಕೆ.ಜೆ.ಕಾಂತರಾಜ್ ಉದ್ಘಾಟನೆ
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಹತ್ತಿರದ ಬ್ಯಾಂಕುಗಳ ಅಧಿಕಾರಿಗಳಣ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

