CHITRADURGA NEWS | 06 OCTOBER 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ (vv sagara) ಜಲಾಶಯಕ್ಕೆ ಹಿಂಗಾರು ಮಳೆ ಕೈ ಹಿಡಿದ್ದು, ಹೊಸದುರ್ಗ, ಕಡೂರು, ಚಿಕ್ಕಮಗಳೂರು ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿದೆ.

ವ್ಯಾಪಕ ಮಳೆಯಿಂದಾಗಿ ವೇದಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಅಕ್ಟೋಬರ್ 6 ಭಾನುವಾರ ಬೆಳಗ್ಗೆ 8 ಗಂಟೆ ವೇಳೆಗೆ ವಿವಿ ಸಾಗರಕ್ಕೆ ಬರೋಬ್ಬರಿ 1964 ಕ್ಯೂಸೆಕ್ ನೀರು ಹರಿದು ಬಂದಿದೆ.
ಇದನ್ನೂ ಓದಿ: ಜಯದೇವ ಶ್ರೀಗಳ ಬೆಳ್ಳಿ ವಿಗ್ರಹದ ಪಲ್ಲಕ್ಕಿ ಉತ್ಸವಕ್ಕೆ ಸಂಸದ ಗೋವಿಂದ ಕಾರಜೋಳ ಚಾಲನೆ
135 ಅಡಿ ಎತ್ತರದ ಜಲಾಶಯದಲ್ಲಿ 30 ಟಿಎಂಸಿ ಸಾಮಥ್ರ್ಯವಿದ್ದು, ಸದ್ಯ 121.25 ಅಡಿವರೆಗೆ ನೀರು ಬಂದಿದೆ. ಇವತ್ತಿಗೆ ಜಲಾಶಯದಲ್ಲಿ 23.09 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ದಿನ ಅಂದರೆ 2023 ಅಕ್ಟೋಬರ್ 6 ರಂದು ಜಲಾಶಯದಲ್ಲಿ 24.15 ಟಿಎಂಸಿ ನೀರಿದ್ದು, 122.55 ಅಡಿವರೆಗೆ ಸಂಗ್ರಹವಾಗಿತ್ತು.
ಇದನ್ನೂ ಓದಿ: ನಾಯಕನಹಟ್ಟಿಯಲ್ಲಿ 91.5 ಮಿ.ಮೀ ಮಳೆ | ತುಂಬಿ ಹರಿದ ಹಳ್ಳಗಳು


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
