
CHITRADURGA NEWS | 10 July 2025
ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರುಗಿ ಶಾಂತವೀರ ಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಮಾಡಲಾಯಿತು.
ಈ ವೇಳೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಪ್ರತಿಯೊಂದು ಸಮಾಜವು ಸಮಾಜದ ಮುಖ್ಯವಾಹಿನಿಯಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅವಕಾಶಗಳನ್ನು ಪಡೆದುಕೊಳ್ಳಲು, ಸಂಘಟನೆಗೊಳ್ಳಲು, ಸಮಾನತೆಯನ್ನು ತರಲು ಸಂವಿಧಾನವು ಸೌಲಭ್ಯವನ್ನು ನೀಡಿದೆ ಎಂದು ಹೇಳಿದರು.

ಗುರುಪೂರ್ಣಿಮೆಯಂದು ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಿಸುತ್ತಿರುವುದು ಔಚಿತ್ಯ ಪೂರ್ಣವಾಗಿದೆ. ಶರಣ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವವರನ್ನು ನೆನಪಿಸಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಸದಾ ಜಾಗೃತವಾಗಿರಬೇಕಿದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯವರ ಜತೆಗೆ ಎಲೆಮರೆಯ ಕಾಯಿಯಂತಿದ್ದ ಅನೇಕ ವಚನಕಾರರನ್ನು ನೆನಪಿಸಿಕೊಂಡು ಅವರ ಜಯಂತಿಯನ್ನು ಆಚರಿಸುವುದು ಅತಿ ಅಗತ್ಯ ಎಂದರು.
ಪ್ರತಿಯೊಬ್ಬ ಶರಣರು ಸಾಮಾಜಿಕ ಮತ್ತು ವೃತ್ತಿಯಿಂದ ಆಯಾ ಸಮಾಜವನ್ನು ಪ್ರತಿನಿಧಿಸುತ್ತಿದ್ದರು. ವ್ಯಕ್ತಿಗಳು ಮಾಡುವ ಕಾಯಕದಿಂದ ಜಾತಿಯು ಮಾರ್ಪಟ್ಟಿದೆ. 12ನೇ ಶತಮಾನದಲ್ಲಿ ಕಾಯಕ ಜೀವಿಗಳ ಸಮ ಸಮಾಜ ನಿರ್ಮಾಣಗೊಂಡಿತ್ತು. ವಚನ ಚಳುವಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತಕಾರ್ಯದರ್ಶಿಯಾಗಿದ್ದರು.
ಈ ಸಂದರ್ಭದಲ್ಲಿ ಶ್ರೀಮಠದ ಶ್ರೀ ಮುರುಘೇಂದ್ರ ಸ್ವಾಮಿಗಳು, ಹರಗುರು ಚರಮೂರ್ತಿಗಳು, ವಿವಿಧ ಸಮಾಜಗಳ ಮುಖಂಡರುಗಳಾದ ಆರ್.ಶ್ರೀನಿವಾಸ್, ಹಡಪದ ಸಮಾಜದ ಗೋಪಿನಾಥ್, ಗೋವಿಂದರಾಜ್, ಶ್ರೀನಿವಾಸ್, ವಿ.ಧರ್ಮಣ್ಣ , ಶ್ರೀನಿವಾಸ್, ವೀರೇಶ್, ವಿಶ್ವನಾಥ ಸ್ವಾಮಿ, ವಕೀಲರು ಸಾಯಿನಾಥ್, ರುದ್ರಪ್ಪ ಗೌಳಿ ಜಾಲಿಕಟ್ಟೆ, ಟಿ.ವಿ.ಮುರುಗೇಶ್, ಮಹಿಳಾ ಶಿವಸಿಂಪಿ ಸಮಾಜ ಅಧ್ಯಕ್ಷರು ಅನಿತಾ ಮುರುಗೇಶ್ ಸೇರಿದಂತೆ ಗುರುಕುಲದ ವಿದ್ಯಾರ್ಥಿಗಳು, ಶ್ರೀಮಠದ ಭಕ್ತರು, ಇತರರು ಭಾಗವಹಿಸಿದ್ದರು.
ಜಮುರಾ ಕಲಾಲೋಕದ ಸಂಗೀತ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ಮಾಡಿದರು. ಸಮಾಜಶಾಸ್ತ್ರದ ಉಪನ್ಯಾಸಕ ಗಿರೀಶ್ ಟಿ.ಎಸ್. ಸ್ವಾಗತಿಸಿದರು. ವಿಶ್ವನಾಥ್ ಸಿ.ಎಂ ನಿರೂಪಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
