
CHITRADURGA NEWS | 10 July 2025
ಚಿತ್ರದುರ್ಗ: ನಗರದ ರೋಟರಿ ಕ್ಲಬ್, ಪೋಟ್ ರೋಟರಿ ಕ್ಲಬ್ ಹಾಗೂ ರೋಟರಿ ಕ್ಲಬ್ ಚಿನ್ಮೂಲಾದ್ರಿ ವತಿಯಿಂದ ಬುಧವಾರ ಸಂಜೆ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಗುರು ಪೂರ್ಣಿಮಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಗುರು ಪೂರ್ಣಿಮಾ ಸಮಾರಂಭ ಕಬೀರಾನಂದಾಶ್ರಮದ ಶಿವಲಿಂಗಾನಂದ ಶ್ರೀಗಳು ಭಾಗವಹಿಸಿ ಮಾತನಾಡಿ, ಗುರು ನಿಜವಾಗಿ ಬ್ರಹ್ಮನು, ರುದ್ರನು ಮಹಾ ವಿಷ್ಣು ಆಗಿದ್ದಾನೆ. ಪರಮಾತ್ಮನ ಸ್ವರೂಪ ಗುರುವನ್ನು ಅಚಲ ನಿಷ್ಠೆಯಿಂದ ನಂಬಿದರೆ ಸಕಲ ವರಗಳನ್ನು ದಯಪಾಲಿಸುವನು ಗುರು. ಒಲಿದರೆ ಹರಿಹರರೂ ಪ್ರಸನ್ನರಾಗುವರು. ಗುರುಗಳ ಅನುಗ್ರಹವಿಲ್ಲದೆ ನಮ್ಮಿಂದ ಯಾವ ಸಾಧನೆಯೂ ಆಗದು ಎಂದು ತಿಳಿಸಿದರು.

ಗುರುವೇ ತಂದೆ, ಗುರುವೇ ತಾಯಿ, ಗುರುವೇ ಪರಶಿವನ ಸ್ವರೂಪನು, ಒಂದು ವೇಳೆ ಶಿವನೇ ಸಿಟ್ಟಾದರೂ ಕೂಡ ಗುರು ಅವನನ್ನು ರಕ್ಷಿಸುವನು. ಆದರೆ ಗುರುವು ಕೋಪಗೊಂಡರೆ ಅವನನ್ನು ಯಾರು ರಕ್ಷಿಸಲಾರರು. ಗುರುವಿನ ಗುಲಾಮನಾಗುವ ತನಕ ನಾನು, ನನ್ನದು, ನನ್ನಿಂದಲೇ ಎಂಬ ಬಲೆಗಳಿಗೆ ಸಿಲುಕಿಕೊಂಡು ಈ ಭವ, ಬಂದನದಿಂದ ಪಾರು ಮಾಡಲು ಒಬ್ಬ ಸಮರ್ಥ ಗುರು ಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಭಾಗ್ಯಲಕ್ಮಿ ಮೂರ್ತಿ, ಕಾರ್ಯದರ್ಶಿಯಾದ ಅನುರಾಧ, ರೋಟರಿ ಕ್ಲಬ್ ಚಿತ್ರದುರ್ಗ ಪೋಟ್‍ನ ಅಧ್ಯಕ್ಷರಾದ ಶಶಿಧರ ಗುಪ್ತ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಚಂದ್ರಕಲಾ, ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷ ದಿಲ್ಷಾದ್ ಉನ್ನಿಸ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
