ಸಂಡೆ ಸ್ಪಷಲ್
Kannada Novel: 23. ಜಂಗಮಯ್ಯರ ಗೃಹ ನಿರ್ಮಾಣ
CHITRADURGA NEWS | 09 MARCH 2025
ನಿವೇಶನಗಳ ಆಯಾ ಮತ್ತು ಮೂಲೆಗಳನ್ನು ಗುರುತು ಮಾಡಿದ ಬಳಿಕ ಊರ ಯಜಮಾನರ ಜತೆ ಮಳೆಯಪ್ಪಯ್ಯ ಮರುಳಯ್ಯ, ಕಾಮಜ್ವರ ಚಪ್ಪರದಡಿಗೆ ನಡೆದರೆ ಶಿವಲಿಂಗಯ್ಯ ಮನೆಗೆ ಹೋಗಿದ್ದ. ಕಾಮಜ್ವರು ಅವರ ಮನೆಯ ಹೆಣ್ಣು ಮಕ್ಕಳಿಗೆ ಮಜ್ಜಿಗೆ ಕೊಡಲು ತಿಳಿಸಿ “ಏನ್ ಸ್ವಾಮಿಗಳೇ ನಾಳೆಯಿಂದ ತರ ತೋಡಿಸಬೇಕು. ಬೋವೇರಿಗೆ ಹೇಳಿ ಕರೆಸಿಗಾಬೇಕು” ಅಂದರು.
ಹಿಂದಿನ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಐಗಳಿಗೆ ಗೃಹ ನಿರಾಣದ ಆಶೆಯಿತ್ತೇ ವಿನಃ ಕೈಯಲ್ಲಿ ಕಾಸಿರಲಿಲ್ಲ. ಮಳಿಯಪ್ಪಯ್ಯ ಮತ್ತು ಮರುಳಯ್ಯ ಮುಖ ಮುಖ ನೋಡಿಕೊಂಡರು. ಗೌಡ್ರು ಮತ್ತು ಗೊಂಚಿಕಾರರು ಕೂಡಾ ಇವರನ್ನು ಗಮನಿಸಿದ್ದರು. “ಅವರತಾಗೆ ಏನೈತೆ? ದುಡ್ಡು ಕಾಸು ಎಲ್ಲಿಂದ ತಂದಾರು? ತಲಾಕೀಟೀಟು ನಾವೇ ಹೊತ್ಸಾ ಬೇಕು”. ಗೌಡ್ರು ತಮ್ಮ ಪ್ರತಿಕ್ರಿಯೆ ನೀಡಿ, ಐಗಳು ಮಜ್ಜಿಗೆ ಲೋಟಗಳನ್ನು ಮುಟ್ಟದಿರುವುದನ್ನು ಗಮನಿಸಿ “ಮಜ್ಜಿಗೆ ಕುಡೀರಿ ಹೊಟ್ಟೆ ತಂಪಾಗುತ್ತೆ” ಅಂದು ಸನ್ನೆ ಮಾಡಿದರು. ಜಂಗಮಯ್ಯರು ಸಂಕೋಚದಿಂದ ಮಜ್ಜಿಗೆ ಕುಡಿದರು.
ಎ ಗೌಡು, ಗೊಂಚಿಕಾರು ಮತ್ತು ಯಜಮಾನ ಕಾಮಜ್ವರು ಐಗಳ ಗೃಹ ನಿಲ್ದಾಣದ ಬಗ್ಗೆ ತಮ್ಮವೇ ಕೆಲವು ಆಲೋಚನೆಗಳಲ್ಲಿ ಮುಳುಗಿದ್ದರು. ತರ ತೋಡಲು ಸೂಚಿಸಿದರೆ ವಾರೊಪ್ಪತ್ತಿನಲ್ಲಿ ಅಗೆದು ಬೋವಿಗಳಿಗೆ ಬಿಡುತ್ತಾರೆ. ಅದ ತುಂಬಲು ಪಟ್ಟಮರಡಿಯಿಂದ ಗುಂಡು ಬಂಡೆ ಹೇರಬೇಕು.
ಆಮೇಲೆ ಕಟ್ಟಡ ಕಟ್ಟಲು ಚಕ್ಕರಿಕೆ ಕಲ್ಲು ಹುಡುಕಿ ಹೇರಬೇಕು. ಅನಂತರ ಮರಮುಟ್ಟು ಜೋಡಿಸಬೇಕು. ಇತ್ಯಾದಿ ಯೋಚಿಸುತ್ತಿದ್ದರು. ಎಲ್ಲರೂ ಮೌನವಾಗಿರುವುದನ್ನು ಗಮನಿಸಿದ ಮಳಿಯಪ್ಪಯ್ಯ, “ಮಾಳಿಗೆ ಮನೆ ಆಯದಾಗೆ ಗುಡ್ಲು ಕಟ್ಟಬೌದಲ್ಲ ಯಜಮಾನಪ್ಪರೆ” ಕೇಳಿದರು. ಯಜಮಾನ ಕಾಮಜ್ಜರು “ಆ ಏನಂದ್ರಿ” ಮಳಿಯಪ್ಪಯ್ಯರನ್ನು ವಿಚಾರಿಸಿದರು. “ನಾನು ಅದೇ ಯೋಚೆ ಮಾಡ್ತಿದ್ದೆ. ಮಾಳಿಗೆ ಮನೆ ಆಯದಾಗೆ ಸದ್ಯಕ್ಕೆ ಗುಡ್ಲು ಮನೆ ಕಟ್ಟಿಗಾಬೌದಲ್ಲ” ಅಂದರು. “ಯಾರು ಬ್ಯಾಡಯ್ತಾರೆ. ಧ್ವಜಾಯದ ಗುಡ್ಡು ಮನೆ ಕಟ್ಟೋಕೂ ಬಾಳ ಮರಮಂಡಿ, ಗಳ, ಬೇಕಾಗ್ತವೆ. ಇದು ಬೇಕು ಅದು ಬ್ಯಾಡ ಅಂಬಂಗಾಗುತ್ತೆ” ಹುಸಿನಗೆ ನಗುತ್ತಲೇ ತಿಳಿಸಿದರು ಮಳಿಯಪ್ಪಯ್ಯ.
ಹಿಂದಿನ ಸಂಚಿಕೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು
ಅಧೀರರಾಗಿರುವುದನ್ನು ಅವರ ಮಾತಿನಿಂದಲೇ ಗ್ರಹಿಸಿದ ಗೌಡ್ರು ಮತ್ತು ಗೊಂಚಿಕಾರು ಪರಸ್ಪರ ಮುಖಾವಲೋಕನ ಮಾಡಿದರು.
ಮರುಳಯ್ಯ ಎರಡೂ ತಿಳಿಯದವನಂತಿದ್ದ. ‘ನಮ್ಮಣ್ಣ ಸುಮ್ಮಿರೋದ ಬಿಟ್ಟು ಮನೆಕಟ್ಟೋ ವಿಷ್ಯ ಯಾಕೆ ತಗ್ಲಾಕ್ಕಂಡ” ಅನ್ನವಂತಾಗಿದ್ದ. ಕೊನೆಗೆ ಗೌಡ್ರು ಮಾತಾಡಿದರು. “ಮನೆ ಕಟ್ಟೋ ವಿಚಾರ ತಪ್ಪಲ್ಲ. ಯಾರೂ ಎಲ್ಲಾ ಸಾಮಾನ್ನ ಜೋಡಿಸ್ಕಂಡೇನೂ ಮನೆ ಕಟ್ಟಾಕೆ ಆರಂಭ ಮಾಡಲ್ಲ. ನಾಳಿಕ್ಕೆ ದೇವಮೂಲೆ ಪೂಜೆ ಮಾಡ್ರಿ ಬೋವೇರಿಗೆ ಹೇಳಿಕಳಿಸಿದ್ರೆ ಬೆಳಿಗ್ಗೇನೇ ತರ ತೋಡಾಕೆ ಬಾರೆ” ನಿಧಾನವಾಗಿ ಮಾತಾಡಿದರು. ಮರುಳಯ್ಯ ಷಡಕಯ್ಯರಿಗೆ ಸದ್ಯ ಬಿಡುಗಡೆಯಾದಂತೆನಿಸಿ ಯಜಮಾನರುಗಳಿಗೆ ವಂದಿಸಿ ಎದ್ದು ಮನೆಕಡೆ ಹೊರಟರು.
ಇವರು ಅತ್ತ ತೆರಳುತ್ತಲೂ ಮೂರು ಜನ ಹಿರಿಯರು “ನಾಳೆಯಿಂದಲೇ ನಮ್ಮ ನಮ್ಮ ಬಂಡಿಗಳಿಗೆ ಮೂರಾಲ್ಕು ಹುಡುಗರನ್ನು ಜತೆ ಮಾಡಿ ಪಟ್ಟಮಳ್ಳಿಯಿಂದ ಗುಂಡು ಬಂಡೆ ಹೇರಿಸಾಕೆ ಆರಂಭ ಮಾಡಾನ. ಎಲ್ಲದನಾ ಮಳೆ ಬಂದ್ರೆ ಎರೆಕಟ್ಟೆಗೆ ಫಸಲು ಇಟ್ಟು ಬಿಡ್ತಾರೆ ಗಾಡಿ ಓಡಾಡಕಾಗಲ್ಲ.
ಮೊದ್ಲು ಅದಿ ತುಂಬಲಿ. ಆಮೇಲೆ ಊರಾಗ್ಯಾರನಾ ಸಹಾಯಕ್ಕೆ ಬರಬೌದು, ಮುಂತಾಗಿ ಮಾತಾಡಿ ಎದ್ದರು.
ಹಿಂದಿನ ಸಂಚಿಕೆ: 3. ಎಲ್ಲರೂ ಲಿಂಗವಂತರಾದರು
ಮನೆಗೆ ಹಿಂದಿರುಗಿದ ಐಗಳು ನಾಳೆ ಬೆಳಿಗ್ಗೆ ದೇವಮೂಲೆ ಪೂಜೆ ಮಾಡಬೇಕು. ಹೊತ್ತು ಮುಂಚೆ ಎದ್ದು ಮೈತೊಳಕಂಡು ಹೂವು ಪತ್ರೆ ತಂದು ಹೊಳ್ತಾನಾ” ಎಂದು ಮಳಿಯಪ್ಪಯ್ಯ ಸೂಚನೆ ಕೊಟ್ಟರು.
ಮಾರನೇ ದಿನ ಜಂಗಮಯ್ಯರ ಮನೆಯಲ್ಲಿ ಸಡಗರ ಮತ್ತು ಸಂಭ್ರಮದ ವಾತಾವರಣ ಕಂಡು ಬಂದಿತ್ತು. ಎಲ್ಲರೂ ಸ್ನಾನಾದಿ ಕ್ರಿಯೆಗಳನ್ನು ಮುಗಿಸಿ ಚಿಕ್ಕುಂಬೊತ್ತಾಗುವುದನ್ನೇ ನಿರೀಕ್ಷಿಸುತ್ತಿದ್ದರು. ಒಂದೆರಡು ಗಳೇವುಗಳನ್ನು ಹೊಡೆದುಕೊಂಡು ಕೆಲವು ರೈತರು ಜಮಾನು ದಿಕ್ಕಿಗೆ ಹೊರಟಿದ್ದನ್ನು ಕಂಡ ಇವರು ನಾಕೈದು ಮನೆಗಳಲ್ಲಿ ಭಿಕ್ಷೆಗೆ ಹೋಗಿ ಬಂದು ಊಟ ಮಾಡದೆ ಮನೆಬಾಗಿಲಿಗೆ ಚಿಲುಕ ಸಿಗಿಸಿ ನಿವೇಶನಗಳ ಕಡೆಗೆ ಹೊರಟರು.
ಅಲ್ಲಿ ಆರೇಳು ಜನ ಬೋವಿಗಳು ನಿವೇಶನದ ತರ ತೋಡಲು ಸಿದ್ಧರಾಗುತ್ತಿದ್ದರು. “ಯಜಮಾನಜ್ಜಾರು ನಿನ್ನೆ ಸಂಜೆ ಕರಿಸಿಗಂಡು ತರ ತೋಡದನ್ನ ಒಪ್ಪಿಸಿದಾರೆ” ಅಲ್ಲಿಗೆ ಬಂದ ಮಳಿಯಪ್ಪಯ್ಯರಿಗೆ ಬೋವಿಗಳ ಹಿರಿಯಾತ ವರದಿ ಮಾಡಿದ. ಬೋವಿ ಮಾತನ್ನು ಆಲಿಸುತ್ತಲೆ ಮಳಿಯಪ್ಪಯ್ಯ, ಗೌಡ್ರು, ಗೊಂಚಿಕಾರು ಮತ್ತು ಯಜಮಾನ ಕಾಮಜ್ಜರನ್ನು ಕರೆತರಲು ತೆರಳಿದರು.
ಹಿಂದಿನ ಸಂಚಿಕೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ
ಸ್ವಲ್ಪ ಹೊತ್ತಿಗೆಲ್ಲಾ ಹಿರಿಯರೊಂದಿಗೆ ಹಿಂತಿರುಗಿದ ಮಳಿಯಪ್ಪಯ್ಯ ಬೋವಿಗಳಿಂದ ಹಾರೆ, ಸಲಿಕೆ ಮುಂತಾದುವನ್ನು ಇಸಗೊಂಡು ದೇವಮೂಲೆಯ ಪೂಜೆಗೆ ತೊಡಗಿಕೊಂಡರು. ಊರಿನ ಕೆಲವರು ಅಲ್ಲಿಗೆ ಆಗಮಿಸಿ ಪೂಜೆಯಲ್ಲಿ ಪಾಲುಗೊಂಡರು. ಜಂಗಮಯ್ಯರ ಹೆಣ್ಣು ಮಕ್ಕಳು ಸೊಂಟದಲ್ಲಿ ಕೂಸುಗಳನ್ನು ಎತ್ತಿಕೊಂಡೇ ಪೂಜೆ ಮಾಡಿದರು.
ಊರೊಳಗಿನ ಮರುಳಯ್ಯನ ನಿವೇಶನದ ದೇವಮೂಲೆಯ ಪೂಜೆ ನೆರವೇರಿಸಿ ಮಳಿಯಪ್ಪಯ್ಯರ ನಿವೇಶನದ ಬಳಿಗೂ ಹೋಗಿ ಅಲ್ಲಿನ ಪೂಜೆ ಮುಗಿಯುವ ಸಮಯಕ್ಕೆ ಬಂಡಿ ತುಂಬ ಗುಂಡು ಕಲ್ಲು ಹೇರಿಕೊಂಡು ಗೌಡರ ಮನೆಯ ಯುವಕರು ಆಗಮಿಸಿದರು. ಇದು ಶುಭ ಸೂಚನೆ ಎಂದು ಅಲ್ಲಿದ್ದವರು ಮಾತಾಡಿಕೊಂಡರು. ಅದಿ ತೋಡುವವರಿಗೆ ಎರಡು ಅಡಿ ಅಗಲ ಮತ್ತು వాత ఒందు మాళ అగియలు తిళనలాయకు “గౌడి, యజమాన ನಾವು ಬೆಳಗಿನ ಊಟ ಮಾಡಿಲ್ಲ. ಮನೀಗೋಗಿ ಉಂಡು ಬತ್ತೀವಿ”, ಎಂದು ತಿಳಿಸಿ ಜಂಗಮಯ್ಯರು ಮನೆಗೆ ಹಿಂದಿರುಗಿದರು.
ಹಿಂದಿನ ಸಂಚಿಕೆ: 5. ಕೆನ್ನಳ್ಳಿಯ ದುರಂತ
ಕಲ್ಲುಗುಂಡು ತುಂಬಿ ತಂದಿದ್ದ ಗಾಡಿಗಳ ಮೂಕಾರಿಸಿ ಅವನ್ನೆಲ್ಲಾ ಉರುಳಿಸಿದ ಮೇಲೆ ಬೋವಿಗಳ ಹಿರಿಯ “ಗೌಡೆ, ಇಂಥಾ ದೊಡ್ಡ ಬಂಡೆ ಆದಿ ತುಂಬ್ಯಾಕೆ ಬರಲ್ಲ. ಇವನ್ನ ಇಲ್ಲೆ ಮಗ್ಲೀಗೆ ಹಾಕ್ತಿವಿ. ಯಾರಾದ್ರೂ ಕುತ್ಥಂಬಾಕೆ ಬತ್ತಾವೆ. ಒಂದೀಟು ಸಣ್ಣವು ತುಂಬಿಕೆಂಡು ಬನ್ನಿ” ಎಂದು ಸಲಹೆ ನೀಡಿದ. ಅಲ್ಲಿ ಕೆಡವಿದ್ದ ಬಂಡೆಗಳ ಮೇಲೆ ಕೆಲವರು ಕುಳಿತು “ಜಂಗಮಯ್ಯರು ಊರಿಗೆ ಬಂದು ಎಳೆರಾ ಆತು. ಒಂದು ಗುಡ್ಲು ಮನೆಯಾಗೆ ಆರು ಜನ ಐದಾರೆ. ಬ್ಯಾರೆ ಮನೆ ಕಟ್ಟಿಗಾಬೇಕು ಅಂತ ಹೊಳೆದಿಲಿಲ್ಲ. ಈವಾಗ ಮನಸ್ಸು ಮಾಡಿದಾರೆ. ಅವರ ತಾಗೆ ಎತ್ತಿಲ್ಲ, ಗಾಡಿ ಇಲ್ಲ. ಆದ್ರೂ ತರಪೂಜೆ ಮಾಡಿದ್ವಿ ನಾನೇ ಅದಿ ತುಂಬ ಕಲ್ಲು ಬಂದ್ವು, ಊರಾಗಿರೋ ಜನಾನೇ ಆಸ್ಕರ ಆಗಬೇಕು. ನೋಡಾನ ಗೌಡ್ರು, ಗೊಂಚಿಕಾರೂ ಏನರಾ ಕೇಳಬೌದು. ಆವಾಗ ಕೈಲಾದ್ದು ಮಾಡಾನ” ಎಂದು ಮಾತಾಡಿಕೊಂಡ್ರು.
ಅಷ್ಟೊತ್ತಿಗೆ ಜಂಗಮಯ್ಯರು ಬೆಳಗಿನ ಊಟ ಮಾಡಿಕೊಂಡು ನಿವೇಶನದ ಬಳಿಗೆ ಆಗಮಿಸಿದರು. ಬೋವಿ ಯುವಕರು ತಮ್ಮ ಹಾರೆಗಳಿಂದ ಮಣ್ಣನ್ನು ಕೆಡವುತ್ತಾ ಮಾತಾಡಿಕೊಳ್ಳುತ್ತಿದ್ದರು. ದೇವಮೂಲೆಯಿಂದ ತೆಂಕಲು ದಿಕ್ಕಿಗೆ ಮತ್ತು ಬಡಗಲ ದಿಕ್ಕಿಗೆ ಅದಿ ತೋಡುವ ಕಾರ ನಡೆದಿತ್ತು. ಇಳಿಹೊತ್ತು ಆದಂತೆಲ್ಲಾ ಊರ ಜನ ಇತ್ತ ಬರಲಾರಂಭಿಸಿದ್ದರು. ಬೇಸಾಯ ಮಾಡಿ ಮನೆಗೆ ಬಂದವರು, ನೀರು ತರಲು ಊರ ಬಾವಿಯ ಕಡೆಗೆ ಬರುವವರು ಮತ್ತು ಗುಂಡಾಚಾರಿ ಮುಂತಾದವರು ತರ ತೋಡುವುದನ್ನು ಬಂದು ನೋಡಿದರು. “ಇವು ಐಗಳು ಆರು ಜನ ಒಂದು ಮನಿಯಾಗಿರಕಾಗಲ್ಲ. ಅಂದ್ರೆ ನಾವು ನೋಡ್ರಿ ಹತ್ತು ಹನ್ನೆರಡು ಜನ ಒಂದೊಂದ್ ಮನಿಯಾಗಿದ್ದೀವಲ್ಲ” ಮುಂತಾಗಿ ಕೆಲವರು ಅಭಿಪ್ರಾಯ ಪಟ್ಟರೆ ಮತ್ತೆ ಕೆಲವರು “ಎಳ್ಳು ಕೂಸು ಸೇರಂಡು ಅವು ಎಂಟು ಜನ ಆಗಿದಾರೆ. ಕಟ್ಟಂಬ್ಲಿ ಬಿಡಿ. ನಮಿಗೆ ವಾಸಕ್ಕಿರೋ ಮನೇನೇ ಸಾಕಾಗೈತೆ. ಅವರಿಗೆ ಇಕ್ಕಟ್ಟಾಗೈತೆ” ಮುಂತಾಗಿ ಮಾತಾಡಿಕೊಂಡರು.
ಹಿಂದಿನ ಸಂಚಿಕೆ: 6. ಎಲ್ಲೆಲ್ಲಿಂದಲೋ ಬಂದರು
ಸಂಜೆಯ ಸಮಯಕ್ಕೆ ಊರ ಹಿರಿಯರು ಆಗಮಿಸಿ “ಏನಪ್ಪಾ ಬೋವಿ ಕಲ್‌ಪಟರ ಕಾಣಿಸ್ತಾ ಇಲ್ಲ ಬರೇ ಬಳಾಪಚಟ್ಟೋ ವಿಚಾರಿಸಿದರು “ರ್ಬ ಸ್ವಾಮಿ ನೋಡಬರಿ ಸುಗ್‌ಪಟರು ಸಿಕೈತೆ ಈ ಮೂಲೇಗೆ” ಎಂದು ಹತ್ತಿರಕ್ಕೆ ಕರೆದ. ಅಲ್ಲಿಗೆ ತೆರಳಿದ ಯಜಮಾನರುಗಳು “ಇನ್ನೇನು ಗಟ್ಟಿ ಸಿಕ್ಕಂಗೆ. ಅದೀಗೆ ಗುಂಡು ಬಂಡೆ ತುಂಬಿಸಿ ಕಟ್ಟಡ ಕಟ್ ಬೌದು” ಅಂದರು. “ಆಗಬೌದು ಸ್ವಾಮಿ” ಬೋವಿ ಸಮ್ಮತಿಸಿದ. ಸಂಜೆ ತರತೋಡುವ ಕೆಲಸ ನಿಲ್ಲಿಸುವ ಸಮಯಕ್ಕೆ ನಾಲ್ಕು ಗಾಡಿ ಭರ್ತಿ ಗುಂಡು ಬಂಡೆ ಬಂದಿದ್ದವು. ಜಂಗಮಯ್ಯರಿಗೆ ಈ ಊರಿನ ಜನ ಮತ್ತು ಯಜಮಾನುಗಳು ಬಾಳ ಉದಾರಿಗಳು ಅನ್ನಿಸಿತ್ತು. ‘ತರ ತೋಡೋ ಬೋವಿಗಳಿಗೆ ಎಷ್ಟು ರೊಕ್ಕ ಕೊಡಬೇಕೋ…. ಅವರ ಮನೆ ಎತ್ತು ಗಾಡಿ ಆಳುಗಳಿಗೆ ನಮ್ ಕೈಲಿ ಕೊಡಕಾದೀತೆ’ ಅನ್ನಿಸಿತ್ತು.
ಮಾರನೇ ದಿನದಿಂದ ಗೌಡ್ರು, ಗೊಂಚಿಕಾರು ಮತ್ತು ಕಾಮಜ್ವರ ಮನೆಯಿಂದ ಒಂದೊಂದು ಗಾಡಿ ಜತೆಗೆ ಮೂರು ಮೂರು ಜನ ಯುವಕರು ಪಟ್ಟಮರಡಿಯಿಂದ ಕಲ್ಲು ಗುಂಡು ಹೇರಲು ತೊಡಗಿಕೊಂಡಿ ದ್ದರು. ಮರುಳಯ್ಯನ ನಿವೇಶನಕ್ಕೆ ಸಾಕಾಗುವಷ್ಟು ಕಲ್ಲು ಹೇರಿದ ಬಳಿಕ ಮಳಿಯಪ್ಪಯ್ಯರ ನಿವೇಶನಕ್ಕೆ ಹೇರಿದರು. ಹದಿನೈದು ದಿನದಲ್ಲಿ ತರತೋಡುವ ಕೆಲಸ ಮುಕ್ತಾಯವಾಗಿತ್ತು. ಬೆನ್ನಿಗೇ ಎರಡೂ ನಿವೇಶನಗಳ ಅದಿ ತುಂಬುವ ಕೆಲಸ ಮುಗಿದು ಮಿಕ್ಕಿದ ಗುಂಡು ಬಂಡೆಗಳನ್ನು ನಿವೇಶನಗಳ ಸಮಾಪದಲ್ಲಿ ಉರುಳಿಸಲಾಯಿತು. ಅಲ್ಲಿಗೆ ಬರುವ ಹಳ್ಳಿಗರು ಕಾಲು ಇಳಿಬಿಟ್ಟುಕೊಂಡು ಕಲ್ಲುಗುಂಡುಗಳ ಮೇಲೆ ಕುಳಿತುಕೊಳ್ಳಲು ಅನುಕೂಲಕರವಾಗಿದ್ದವು. ಭೂಮಟ್ಟದವರೆಗೆ ಅದಿ ತುಂಬಿ ಅದರ ಮೇಲೆ ಕಟ್ಟಡ ಕಟ್ಟುವುದಕ್ಕೆ ಚಕ್ಕರಿಕೆ ಕಲ್ಲುಗಳು ಬೇಕಾಗಿದ್ದವು.
ಹಿಂದಿನ ಸಂಚಿಕೆ: 7. ಊರು ತೊರೆದು ಬಂದವರು
ಗಾಡಿಗಳವರು ಪಟ್ಟಮರಡಿ ಬಳಿ ಬಿದ್ದು ಹೋಗಿದ್ದ ಗೋಡೆಗಳ ಕಲ್ಲುಗಳನ್ನು ಸಲೀಸಾಗಿ ಗಾಡಿಗೆ ತುಂಬಿ ನಿವೇಶನಗಳ ಬಳಿಗೆ ಸಾಗಿಸಿದರು. ‘ಬಿದ್ದ ಗೋಡೆ-ಯ ಕಲ್ಲುಗಳನ್ನು ಇನ್ನೊಂದು ಗೋಡೆ ಕಟ್ಟಲು ಬಳಸಬಾರದೆಂದೇನಿಲ್ಲವಲ್ಲ’. ಬೋವಿಗಳು ಕೆಸರು ಕಲೆಸಲು ಏಳೆಂಟುಗಾಡಿ ಕೆಂಪು ಬಳಾಪಚಟ್ಟು ಮಣ್ಣನ್ನು ನಿವೇಶನದ ಬಳಿಗೆ ಹೇರಿಸಿಕೊಂಡು ನೀರಲ್ಲಿ ಕಲೆಸಿ ಮುಗ್ಗುಹಾಕಿದ್ದರು.
ಬೋವಿಗಳು ಐಗಳ ಗೃಹ ನಿರಾಣದಲ್ಲಿ ನಿರತರಾಗಿದ್ದರೆ ಊರಿನ ಯಜಮಾನರುಗಳು ಮನೆ ನಿರಾಣಕ್ಕೆ ಬೇಕಾದ ಮರಮುಟ್ಟು ಜೋಡಿಸುವ ಯೋಚನೆಯಲ್ಲಿದ್ದರು, ಕಾಮಜ್ವರ ಬಣವೆಯಲ್ಲಿ ಅಟ್‌ನಡಿಗೆ ಹಾಕಿದ್ದ ಎರಡು ಬೇವಿನ ಮರದ ತೊಲೆಗಳನ್ನು ತೆಗೆದು ಮನೆ ಬಳಿಗೆ ತರಿಸಿಕೊಂಡಿದ್ದರು.
ಎರಡು ಮನೆಗೆ ಆರು ಅಡಿ ಉದ್ದದ ಎಂಟು ಕಂಭಗಳು, ಎಂಟು ಅಡಿ ಉದ್ದದ ಎಂಟು ಕಂಭಗಳ ಅಗತ್ಯ ಇತ್ತು. ಒಟ್ಟು ಎಂಟು ತೊಲೆಗಳು ಬೇಕಾಗಿದ್ದವು. ಊರಿನ ಜನರ ಬಳಿ ಇದ್ದ ಮರಮುಟ್ಟನ್ನು ಉಚಿತವಾಗಿ ಪಡೆಯುವ ಆಲೋಚನೆ ಮಾಡಿದ್ದ ಯಜಮಾನರುಗಳು ಈ ವಿಚಾರವನ್ನು ಹತ್ತಿರದವರಲ್ಲಿ ಪ್ರಸ್ತಾಪಿಸಿದ್ದರು. ಉಮೇದುದಾರಿಕೆಗೆ ಹೆಸರಾಗಿದ್ದ ನಂಜಪ್ಪಗಳ ಸಿದ್ದಪ್ಪ, ಗೌಡ್ರ ಗುಂಪಿನ ಜೋಗಪ್ಪ, ಗೊಂಚಿಕಾರರ ಕರಿಯಪ್ಪ ಮುಂತಾದವರು ತಮ್ಮಲ್ಲಿದ್ದ ಒಣಗಿದ ಬೇವಿನ ಮರದ ಕಂಭ ತೊಲೆಗಳನ್ನು ದಾನ ಮಾಡಲು ಮುಂದೆ ಬಂದರು. ಈಗ ಬಡಗಿಗಳನ್ನು ಹುಡುಕುವ ಕೆಲಸವನ್ನು ಯಾರೂ ಒಪ್ಪಿಕೊಳ್ಳಲಿಲ್ಲ. ಊರಿನ ಜನರೇ ತಮ್ಮ ದೊಡ್ಡ ಬಾಳಿ, ಉಜ್ಜುಗೊರಡುಗಳಿಂದ ಕೆತ್ತಿ, ಉಜ್ಜಿ ಕಂಭ ತೊಲೆಗಳಿಗೆ ಹೊಸರೂಪ ನೀಡಿದರು.
ಹಿಂದಿನ ಸಂಚಿಕೆ: 8. ಮೋಜಣಿಕೆ ಮಾಡಿದರು
ಇನ್ನೂ ನಾಲ್ಕು ಕಂಭ, ನಾಲ್ಕು ತೊಲೆಗಳ ಅವಶ್ಯಕತೆ ಇತ್ತು. ಇವುಗಳಿಗಾಗಿ ಬಲಿತ ಬೇವಿನ ಮರಗಳನ್ನು ಕಡಿದುರುಳಿಸುವ ಅಗತ್ಯ ತಲೆದೋರಿತು. ಇವು ಸರಿಯಾಗಿ ಒಣಗಿ ಉಪಯೋಗಿಸಲು ಕನಿಷ್ಠ ಒಂದು ವರ್ಷದ ಸಮಯ ಬೇಕಾಗಿತ್ತು. ಹೀಗಾಗಿ ಜಂಗಮಯ್ಯರ ಹೊಸ ಮನೆಗಳ ನಿರಾಣ ನಿಧಾನ ಗತಿಯಲ್ಲಿ ಸಾಗಿತ್ತು. ಪಡಸಾಲೆಯ ಕಂಭಗಳಡಿಗೆ ಹಾಕಲು ಎರಡೆರಡು ಸುಟ್ಟ ಬಂಡೆಯ ಅಗತ್ಯತೆ ಉಂಟಾಗಿತ್ತು. ಈ ಎಲ್ಲಾ ಕಾರಣಗಳಿಂದ ಮನೆಗಳಿಗೆ ಕಂಭ ನಿಲ್ಲಿಸಿ ಅವುಗಳ ಮೇಲೆ ತೊಲೆಗಳನ್ನು ಕೂಡಿಸುವುದು ವಿಳಂಬವಾಗಿತ್ತು. ಬೋವಿಗಳು ಎರಡು ತಂಡಗಳಲ್ಲಿ ಮರುಳಯ್ಯ ಮತ್ತು ಮಳಿಯಪ್ಪಯ್ಯರ ಹೊಸಾ ಮನೆಗಳ ನಿರಾಣ ಕಾರದಲ್ಲಿ ತೊಡಗಿಕೊಂಡಿದ್ದರು. ಮನೆಯ ಹೊಸ್ತಿಲುಗಳಿಗೆ ಊರ ಹೊರಗಣ ಮಾರಿ ಗುಡಿಯ ಬಳಿ ಬಿದ್ದಿದ್ದ ಕಮರದ ಮರದ ದಿಮ್ಮಿಗಳನ್ನು ಸಾಪಾಗಿ ಕೆತ್ತಿ ತಂದು ಜೋಡಿಸಿದರು.
ಊರ ಯಜಮಾನರುಗಳು “ಎಲ್ಲಾ ವಸ್ತುಗಳು ಜೊತೆಯಾದ ಬಳಿಕವೇ ಐಗಳ ಹೊಸ ಮನೆಗಳನ್ನು ನಿಲೆ ಹಾಕೋಣ. ಬಾಗಿಲು ಕಿಟಕಿ ಮುಂತಾದುವನ್ನು ಸಿದ್ಧಪಡಿಸಿಕೊಂಡೇ ನಿಲ್ಲಿಸೋಣ. ಅಲ್ಲಿ ವರೆಗೆ ಕಟ್ಟಡ ಕಟ್ಟುವ ಕೆಲಸ ತೊಲೆ ಮಟ್ಟಕ್ಕೆ ಆಗಲಿ ಎಲ್ಲದನಾ ಮಳೆ ಬಂದು ಹೊಸಾ ಗೋಡೆಗಳು ನೀರಿಡೀಬಾರು ಅದಕೆ ಗೋಡೆಯ ಮೇಲೆ ಒಣ ಮಣ್ಣು ಸುರಿದು ಉಳಿದ ಪರಿಕರಗಳನ್ನು ಜೋಡಿಸಿಕೊಳ್ಳಲು ತೀರಾನಿಸಿದರು. ಜಂಗಮಯ್ಯರು ದಿನವೂ ಕಟ್ಟಡ ನಿರಿಸುವುದನ್ನು ಮತ್ತು ಮನೆಯ ಆಕಾರವನ್ನು ನೋಡುತ್ತಾ ಅವರದೇ ಕಲ್ಪನಾ ಲೋಕದಲ್ಲಿರುತ್ತಿದ್ದರು.
ಹಿಂದಿನ ಸಂಚಿಕೆ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ
ಮನೆಗಳ ಕಟ್ಟಡದ ನಿರಾಣ ಕಾಮಗಾರಿ ತೊಲೆಮಟ್ಟಕ್ಕೆ ತಲುಪಿದ ಬಳಿಕ ಅದನ್ನು ನಿಲ್ಲಿಸಿ ಗೋಡೆ ಮೇಲೆ ಒಣ ಮಣ್ಣನ್ನು ಸುರಿದು ಬೋವಿಗಳು ಕೆಳಗಿಳಿದರು. ಪಡಸಾಲೆಯ ಎರಡು ಅಡಿ ಕಟ್ಟಡ ಮತ್ತು ಅಡಿಗೆ ಕೋಣೆಯ ಗೋಡೆಯನ್ನು ಬಾಗಿಲೆತ್ತರಕ್ಕೆ ಕಟ್ಟಲು ಯಜಮಾನರುಗಳು ಬೋವಿಗಳಿಗೆ ತಿಳಿಸಿದ್ದರಿಂದ ಅದರ ಕಟ್ಟುವಿಕೆಯನ್ನು ಕೈಗೊಂಡಿದ್ದರು. ಗೋಡೆಯಲ್ಲಿ ಎಲ್ಲೆಲ್ಲಿ ಗೂಡು ಮಾಡಬೇಕು ಎಂಬುದನ್ನು ಬೋವಿಗಳಿಗೆ ಸೂಚನೆ ನೀಡಬೇಕಾಗಿರಲಿಲ್ಲ. ಅವರಿಗೆ ಇವೆಲ್ಲಾ ಕರಗತವಾಗಿತ್ತು. ಕೋಣೆ ಬಾಗಿಲಿನ ಅಗಲ ಎತ್ತರ ಇವೂ ಕೂಡಾ ಅವರಿಗೆ ತಿಳಿದಿತ್ತು. ಜಂಗಮಯ್ಯರು ಮತ್ತು ಅವರ ಹೆಣ್ಣು ಮಕ್ಕಳು ಬೋವಿಗಳ ಜಾಣ್ನೆಯನ್ನು ಮನಸ್ಸಿನಲ್ಲೇ ಮೆಚ್ಚಿಕೊಂಡಿದ್ದರು.
ಒಂದು ಬೆಳಗಿನಲ್ಲಿ ಗೌಡರ, ಗೊಂಚಿಕಾರರ ಮತ್ತು ಯಜಮಾನ ಕಾಮಜ್ಜರ ಮನೆಯಿಂದ ನಾಲ್ಕು ಗಾಡಿಗಳು ಅವುಗಳಲ್ಲಿ ಏಳೆಂಟು ಯುವಕರು ಬುತ್ತಿಕಟ್ಟಿಕೊಂಡು ಕಣಿಮೆ ಉದಿಕಡೆಗೆ ಹೊರಟಿದ್ದರು. ಯಜಮಾನರುಗಳು ಅವರಿಗೆ ಒಣಗಿದ ಮರ ಕಡಿದು ಉರಳಿಸಿದ್ದ ಮರ ಮುಂತಾದುವನ್ನು ಮಾತ್ರ ಸವರಿ ಗಾಡಿಗಳಲ್ಲಿ ಹೇರಿಕೊಂಡು ಬರಲು ಸೂಚನೆ ನೀಡಿದ್ದರಿಂದ ಹಸಿಗಿಡ ಮರಗಳನ್ನು ಕಡಿದುರುಳಿಸದೆ ಕಮರದಲ್ಲಿ ಅಲ್ಲಲ್ಲಿ ಬಿದ್ದಿದ್ದ ಒಣ-ಗಿದ ಮರಗಿಡಗಳ ತುಂಡುಗಳನ್ನು ನಾಲ್ಕು ಗಾಡಿ ತುಂಬಾ ಹೇರಿಕೊಂಡು ಹಗಲೂಟದೊತ್ತಿಗೆ ಊರಿಗೆ ಹಿಂತಿರುಗಿದ್ದರು. ಎರಡು ಗಾಡಿಗಳನ್ನು ಮರುಳಯ್ಯನ ಹೊಸಮನೆ ಬಳಿಗೆ, ಮತ್ತೆರಡು ಗಾಡಿಗಳನ್ನು ಮಳಿಯಪ್ಪಯ್ಯನ ಹೊಸಾ ಮನೆಬಳಿಗೊಯ್ದು ಗಿಡ ಮರದ ತುಂಡುಗಳನ್ನು ಕೆಡವಿದ್ದರು.
ಸಂಜೆ ಅತ್ತ ಸುಳಿದಾಡಿದ್ದ ಊರಜನ “ಕಂಭ ತೊಲೆ ಎಲ್ಲೆದಾವೋ ಮಾರಾಯಾ ಜಂತೆ ಬಂದಾವಲ್ಲಪ್ಪಾ” ಎಂದು ನಗಾಡಿದ್ದರು. “ಜನ ಏನು ಬೇಕಾದ್ರೂ ಮಾತಾಡಬೌದು, ಸಾಮಾನು ಜೋಡಿಸೋರಿಗೆ ಅದರ ಕಷ್ಟ ಗೊತ್ತಾಗೋದು” ಇಂಥಾ ಮಾತುಗಳೂ ಕೇಳಿ ಬಂದಿದ್ದವು. ಯಜಮಾನರುಗಳಿಗೆ ನಾಕೈದು ಕಂಭ ತೊಲೆಗಳನ್ನು ಹೊಂದಿಸೋದಕ್ಕಿಂತ ಪಡಸಾಲೆ ಕಂಭದಡಿಗೆ ಸುಟ್ಟಕಲ್ ಬಂಡೆ ತಂದು ಜೋಡಿಸಬೇಕಾಗಿತ್ತು. ಅವು ಹತ್ತಿರದಲ್ಲಿ ಸಿಗುತ್ತಿರಲಿಲ್ಲ. ತಾವರೆಕೆರೆ ಸಮಾಪದ ಮಧ್ಯಕ್ಕನಹಳ್ಳಿಗೆ ಹೋಗಿ ಅಲ್ಲಿ ದಂಡಿಯಾಗಿ ಸಿಗುತ್ತಿದ್ದ ಸುಟ್ಟಕಲ್ ಬಂಡೆಗಳನ್ನು ತರಬೇಕಾಗಿತ್ತು.
ಹಿಂದಿನ ಸಂಚಿಕೆ: 10. ಹೊಸ ಬಂಡಿಗಳ ಆಗಮನ
‘ತಾವರೆಕೆರೆಗಾಗಲಿ ಮಧ್ಯಕ್ಕನಹಳ್ಳಿಗಾಗಲಿ ಹೋಗಿ ಬರಲು ಎರಡು ದಿನದ ಪಯಣ. ಹುಡುಗರನ್ನು ಗಾಡಿ ಜತೆ ಕಳಿಸಿದರೆ ಸರಿಯಾಗಲ್ಲ. ಯಾರಾದರೂ ಯಜಮಾನರೇ ಹೋಗಿ ಬರಬೇಕು’ ಈ ಆಲೋಚನೆಯಲ್ಲಿ ಊರ ಯಜಮಾನರು ತೊಡಗಿರುವಾಗ ಬೋವಿಗಳ ಹಿರಿಯನಿಗೆ ಈ ವಿಚಾರ ತಿಳಿದು ಆತ ಗೌಡರಲ್ಲಿಗೆ ಬಂದು “ಸ್ವಾಮಿ ಸುಟ್ಟಕಲ್ ಬಂಡೆ ತರಾಕೆ ತಾವರೆಕೆರೆಗಾಗಲಿ ಮದ್ದಕ್ಷಳ್ಳಿಗಾಗಲಿ ಹೋಗೋದು ಬ್ಯಾಡ ಮಸ್ಕಲ್ ಹತ್ರ ಭೀಮನ ಬಂಡೆ ಐತೆ. ಅಲ್ಲಿ ಸುಟ್ಟ ಬಂಡೆ ಸೀಳೋರು ನಮ್ಮೋರೇ ಐದಾರೆ. ಭೀಮನ ಬಂಡೆ ದೂರಾನೂ ಆಗಲ್ಲ. ಎದ್ದಾಗ ಹೊಲ್ಪು ಸಂಜೀಗೆ ಕಲ್ ತಗಂಡು ಬರಬೌದು’ ಎಂದು ಪರಿಹಾರವನ್ನು ಸೂಚಿಸಿದ್ದ.
ಗೌಡ್ರು, ಗೊಂಚಿಕಾರು ಮತ್ತು ಕಾಮಜ್ವಾರಿಗೆ ಬೋವಿಯ ಸಲಹೆ ಕೇಳಿ ಸಂತೋಷವಾಗಿತ್ತು. ಗೌಡರು ಆತನನ್ನು ಮೆಚ್ಚಿಕೊಂಡು “ಸುಟ್‌ಕಲ್ ಬಂಡೆ ಜತಿಗೆ ಐದಾರು ಕಂಭ ತೊಲೆ ಬೇಕಾಗೈದಾವೆ. ಹತ್ತಿರದಲ್ಲೇ ಸುಟ್ಟಕಲ್ ಸಿಗತಾವೆ ಅಂದ್ರೆ ಗಾಡಿ ಹೂಡಿಕೆಂಡು ಹೋಗಿ ತರಬೌದು. ಆದ್ರೆ ಇವೊತ್ತು ಬೇವಿನ ಮರ ಕಡಿದು ಉರುಳಿಸಿದ್ರೆ ಅದು ಪೂರಾ ಒಣಗಾಕೆ ಒಂದೊರಾ ಬೇಕಲ್ಲಪ್ಪಾ” ಅವರ ಇನ್ನೊಂದು ಸಮಸ್ಯೆಯನ್ನು ಹಂಚಿಕೊಂಡರು. ಇದಕ್ಕೆ ಬೋವಿಯಲ್ಲಿ ಪರಿಹಾರ ಇರಲಿಲ್ಲ. ಆತ ಸುಮ್ಮನಾದ. ಕಾಮಜ್ಜರು “ಸುಟ್‌ಕಲ್ ತರಾಕೆ ಗಾಡಿ ಜತೀಗೆ ನೀನೇ ಹೋಗಬೇಕು. ಬಂಡೆ ಸೀಳೋರು ನಿಮ್ಮೊರೆ ಅಂದ್ರೆಲ್ಲಾ ಅವರತಾಗೆ ಮಾತಾಡಿ ಬೆಲೆ ಕುದರಿಸಿ ತರಬೇಕು” ಅಂದರು. “ಆಗಬೌದು ಸ್ವಾಮಿ. ನೀವು ಯಾವಾಗಂದ್ರೆ ಆವಾಗ ನಾನು ಹೊಳ್‌ತೀನಿ” ಬೋವಿ ಆಶ್ವಾಸನೆ ನೀಡಿದ್ದ.
ಹಿಂದಿನ ಸಂಚಿಕೆ: 11. ಬಂಡಿ ತಂದ ಬದಲಾವಣೆ
ಗೌಡ್ರು, ಗೊಂಚಿಕಾರು ಮತ್ತು ಕಾಮಜ್ಜರು ಕಂಭ ತೊಲೆ ಜೋಡಿಸೋ ವಿಚಾರನ್ನ ಸ್ವಲ್ಪದಿನ ಮುಂದಕ್ಕಾಕಿ ಸದ್ಯ ಮರುಳಯ್ಯನ ಮನೆ ನಿಲೆ ಹಾಕಿ ಮಳಿಯಪ್ಪಯ್ಯನ ಮನೆ ತಡಾ ಮಾಡಾನ ಎಂದು ತೀರಾನಿಸಿದರು. ಜಂಗಮಯ್ಯರಿಗೆ ಹೊಸಾ ಮನೆ ಕಟ್ಟಡ ಕಟ್ಟುವ ಕೆಲಸ ಸ್ಥಗಿತಗೊಂಡಿದ್ದನ್ನು ಕಂಡು ನಿರಾಶೆಯಾಗಿತ್ತು. ಊರ ಜನ ನಾನಾ ರೀತಿ ಮಾತಾಡಿಕೊಂಡಿದ್ದರು, ಕೆಲವರು ಮಾತ್ರ “ಮನೆ ಕಟ್ಟೋ ಸಾಮಾನು ಜತೆಯಾಗಿರಕಿಲ್ಲ ಅದಕ್ಕೆ ನಿಲ್ಲಿದಾರೆ” ಅಂದುಕೊಂಡಿದ್ದರು. ಕೆಲವರಿಗೆ “ಬಾಗಿಲು ಕಿಟಕಿ ಮಾಡ್ಲಿಲ್ಲ. ಅದಕೆ ಕೆಲಸ ನಿಲ್ಲಿರಬೌದು” ಅಂದುಕೊಂಡರೆ ಮತ್ತೆ ಕೆಲವರು “ಕಂಭ, ತೊಲೆ, ಬಾಗಿಲು ಕಿಟಕಿ ಎಲ್ಲಾ ಜೋಡಿಸ್ಟಂಡು ಮನೆ ಕಟ್ಟೋ ಕೆಲ್ಲಾ ಹಿಡಿಕಾಬೇಕಾಗಿತ್ತು” ಅಂದುಕೊಂಡಿದ್ದರು.
ಗುಂಡಾಚಾರಿಗೆ “ಕಂಭ ತೊಲೆ ಬಾಗಿಲು ಕಿಟಕಿ ಎಲ್ಲಾ ಜತೆ ಮಾಡಿಕೆಂಡು ಕೆಲ್ಲಾ ಆರಂಭಿಸಬೇಕಿತ್ತು. ಇವು ಗೌಡ್ರು, ಗೊಂಚಿಗಾರು, ಕಾಮಜ್ಜಾರು ಇಂಗೇ ಇದ್ದಕ್ಕಿದ್ದಂಗೆ ಕೆಲ್ಸಾ ಆರಂಭಮಾಡ್ತಾರೆ. ಇವಾಗೇನೂ ತೊಂದ್ರೆ ಆಗಿಲ್ಲವಲ್ಲ, ಈ ಅಯ್ಯಗಳ ಪುಣ್ಯ. ಅವರೇ ಆಗಿದ್ರೆ ಇನ್ನಾ ಹತ್ತೋತ್ಸಾ ಬೇಕಾಗಿತ್ತು ಮಾಳಿಗೆ ಮನೆ ಕಟ್ಟಾಕೆ” ಹೀಗೆಂದು ಪ್ರತಿಕ್ರಿಯಿಸಿದ್ದ.
ಹಿಂದಿನ ಸಂಚಿಕೆ: 12. ಜಂಗಮಯ್ಯರ ಆಗಮನ
ಅಯ್ಯಗಳ ಗೃಹ ನಿರಾಣದ ಕೆಲಸ ಸ್ಥಗಿತಗೊಂಡು ಒಂದು ತಿಂಗಳಾಗುತ್ತಾ ಬಂದಿತ್ತು. ಊರಿನ ಕೆಲವು ಜನರಿಗೆ “ನಾವೂ ಏನಾದರೂ ನೆರವಾಗಬೌದೆ, ಯಾತಕ್ಕೆ ಕಟ್ಟಡದ ಕೆಲ್ಸಾ ನಿಲ್ಲಿದಾರೆ ಅಂದುಕೊಂಡು ಗೌಡ್ರ ಬಳಿ “ಯಾಕೆ ಮಾವಾರೆ ಕಟ್ಟಡದ ಕೆಲ್ಸ ನಿಲ್ಲಿಸಿಬಿಟ್ರಿ? ಏನಾರು ಬೇಕಾಗಿತ್ತೆ” ಎಂದು ಇಬ್ಬರು ಪ್ರಸ್ತಾಪ ಮಾಡಿದ್ದರು. “ಹೂಂಕಣಯ್ಯಾ ನೆಂಟ್ರಿ, ಐದಾರು ಕಂಬ, ಮೂರಾಕು ತೊಲೆ ಸಾಲ್ಲೆ ಬಂದಿದಾವೆ. ಅಷ್ಟೆ ಅವನ್ನ ಜೋಡಿಸ್ಕಂಡು ಕಟ್ಟಡ ಕಟ್ಟನಾಯ್ತಿ ನಿಲ್ಲಿದ್ದೀವಿ” ಎಂದು ಗೌಡರು ತಿಳಿಸಿದ್ದರು. “ನಮ್ಮವೆಲ್ಲು ಬೇವಿನ ಮರ ಐದಾವೆ ಅವು ಕಂಭಕ್ಕೆ ಸರಿಯಾಗ್ತಾವೆ. ನೀವು ಬಂದು ನೋಡಿದ್ರೆ ಇವತ್ತೆ ಅವನ್ನ ಕಡೀಬೌದು” ಎಂದು ಒಬ್ಬರು ತಿಳಿಸಿದರೆ, “ತೊಲೇಗೆ ನೆಟ್ಟನ್ನ ಮರಾನೇ ಆಗಬೇಕು. ನೋಡಾನ ಹುಡುಕುತೀವಿ” ಎಂದು ಇನ್ನೊಬ್ಬಾತ ಆಶ್ವಾಸನೆ ನೀಡಿದ್ದ.
ಈ ವಿಚಾರ ಊರಲ್ಲಿ ಪ್ರಚಾರವಾಗಿ ‘ಜಂಗಮಯ್ಯರಿಗೆ ಮನೆ ಕಟ್ಟಿಸೋದ್ರಲ್ಲಿ ಗೌಡ್ರು, ಗೊಂಚಿಕಾರು ಮತ್ತೆ ಕಾಮಜ್ವಾರೇ ಕಷ್ಟಪಡಬೇಕೇ. ನಾವೂ ಕೈಲಾದ್ದು ಮಾಡೋಣಾ’ ಎಂಬ ಉದಾರತೆ ತಲೆದೋರಿತ್ತು. ಹೀಗಾಗಿ ಗೌಡರ ಬಳಿಗೆ, ಕಾಮಜ್ಜ ಮತ್ತು ಗೊಂಚಿಕಾರರ ಬಳಿ ತಾವೇನು ಸಹಾಯ ಮಾಡಬೌದು ಎಂಬುದನ್ನು ಚರ್ಚಿಸಿ ತಮ್ಮಲ್ಲಿದ್ದ ಬೇವಿನ ಮರ ಇತರೆ ಮರಮುಟ್ಟನ್ನು ಅವರಿಗೆ ತೋರಿಸಿದ್ದರು. ಊರಿನ ಜನ ತಾವು ರಕ್ಷಿಸಿಕೊಂಡಿದ್ದ ಮರಮುಟ್ಟುಗಳು ಒಂದೊಂದಾಗಿ ಹೊರಬಂದವು.
ಹಿಂದಿನ ಸಂಚಿಕೆ: 13. ಮತ್ತೆರಡು ಬಂಡಿ ತಂದರು
ಮರಕೊಯ್ಯುವವರ ಅಗತ್ಯತೆ ಎದುರಾಗಿತ್ತು. ಎಲ್ಲಾ ಸಮಸ್ಯೆಗಳಿಗೂ ಒಂದಿಲ್ಲೊಂದು ಪರಿಹಾರ ಇದ್ದೇ ಇರುತ್ತದೆ ಅನ್ನುವಂತೆ ಮಾರೀಕಣಿವೆಯಲ್ಲಿ ಮರಕೊಯ್ಯುವ ಮರಾಠಿಗರು ಇದ್ದಾರೆ ಅನ್ನುವ ವಿಷಯ ತಿಳಿದು ಅಲ್ಲಿಗೆ ಹೋಗಿ ಅವರನ್ನು ಊರಿಗೆ ಕರೆತರುವ ವಿಚಾರವನ್ನು ಸ್ವತಃ ಗೌಡರು ಮತ್ತು ಗೊಂಚಿಕಾರರೇ ವಹಿಸಿಕೊಂಡರು. ಒಂದು ಬೆಳಿಗ್ಗೆ ಬುತ್ತಿ ಕಟ್ಟಿಸಿಕೊಂಡು ಗೌಡ್ರು ಮತ್ತು ಗೊಂಚಿಕಾರು ಗಾಡಿಯಲ್ಲಿ ಹೊರಟು ದೊಡ್ಡುಂಬೊತ್ತಿಗೆ ಮಾರಿಕಣಿವೆ ತಲುಪಿ ಮರಕೊಯ್ಯುವವರನ್ನು ಹುಡುಕಿ ತೊಲೆಗಳನ್ನು ಕೊಯ್ದುಕೊಡುವ ಬಗ್ಗೆ ಪ್ರಸ್ತಾಪಿಸಿದ್ದರು.
“ನಿಮ್ಮೂರಿಗೆ ಬಂದ ಮೇಲೆ ಕನಿಷ್ಟ ಮೂರು ತಿಂಗಳಿರಬೇಕಾಗುತ್ತೆ. ನಮಿಗೆ ಊಟಕ್ಕೆ ಜ್ವಾಳದ ಹಿಟ್ಟು ಬೀಸಿಕೊಡಬೇಕು. ನಮಿಗೆ ವಾಸಕ್ಕೆ ಅಲಾದಿ ಜಾಗಬೇಕು” ಇತ್ಯಾದಿ ಬೇಡಿಕೆ ಇಟ್ಟಿದ್ದರು. “ಆಯಿತು ಎಲ್ಲ ವ್ಯವಸ್ಥೆ ಮಾಡಿಕೊಡತೀವಿ. ಆದ್ರೆ, ನೀವ್ಯಾಕೆ ಅಡಿಗೆ ಮಾಡೋ ತ್ರಾಸು ತಗೊಳೀರಿ. ನಿಮಿಗೆ ಊಟಕ್ಕೆ ರೊಟ್ಟಿ ಬೇಕಾದ್ರೆ ನಾವೆ ಮಾಡಿಕೊಡ್ತೀವಿ. ನಿಮಿಗೆ ಸರಿಯಾದ್ರೆ ನೋಡ್ರಿ. ಇಲ್ಲಾಂದ್ರೆ ನೀವೇ ಅಡಿಗೆ ಮಾಡ್ಕೊಬೌದು” ಗೌಡ್ರು ಗೊಂಚಿಕಾರು ಸಮಾಧಾನದಿಂದ್ದೇ ತಿಳಿಹೇಳಿದ್ರು, ಅವರವರಲ್ಲೇ ಮಾತಾಡಿ ಕೊನೆಗೆ ಮರಕೊಯ್ಯುವವರು ಒಪ್ಪಿಗೆ ಸೂಚಿಸಿದ್ರು.
“ಊರಿಗೆ ನಮ್ಮು ಕಾಲಿ ಗಾಡಿ ಹೊಗ್ತಾ ಇದೆ. ನಿಮ್ಮ ಗರಗಸ ಇನ್ನೇನಾದ್ರು ಸಾಮಾನಿದ್ರೆ ಗಾಡಿಯೊಳಗೆ ಹಾಕಿಬಿಡಿ ತಗಂಡೋಗ್ತಿವಿ. ನೀವು ಬೇಕಾದ್ರೆ ನಾಳೆ ಬರಬೌದು” ಎಂದು ಗೌಡರು ತಿಳಿಸಿದಾಗ ಅವರು ಎರಡು ದೊಡ್ಡ ಗರಗಸ, ಕೊಡತಿ ಮುಂತಾದುವನ್ನು ಅವರು ಗಾಡಿಯೊಳಗೆ ಹಾಕಿದ್ದರು. ಗೌಡ್ರು, ಗೊಂಚಿಗಾರು ಕಣಿಮೆ ಮಾರಕ್ಕನ ಪೂಜೆ ಮಾಡಿಸಿಕೊಂಡು ಹೊಳೆಯಲ್ಲಿ ಬುತ್ತಿ ಉಂಡು ಹಗಲೂಟದೊತ್ತಿಗೆ ಅಲ್ಲಿಂದ ಹೊರಟು ಸಂಜೆಗೆ ಊರು ತಲುಪಿದ್ದರು. ಜಂಗಮಯ್ಯರು ಊರ ಬಳಿಯ ಓಣಿಬಾಯಿ ಬಳಿ ನಿರೀಕ್ಷಿಸುತ್ತಿದ್ದವರು ಇವರನ್ನು ಕೃತಜ್ಞತೆಯಿಂದ ಬರಮಾಡಿಕೊಂಡಿದ್ದರು.
ಹಿಂದಿನ ಸಂಚಿಕೆ: 14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ
ಮಾರನೇ ದಿನ ಮರಕೊಯ್ಯುವವರಿಗೆ ನೆರಳಿದ್ದರೆ ಅನುಕೂಲವೆಂದು ಗೌಡ್ರು, ಗೊಂಚಿಕಾರರು ಮತ್ತು ಕಾಮಜ್ಜರು ನಾಕುಣಿಸೆ ಮರಗಳಡಿಗೆ ನಡೆದು ಮರಕೊಯ್ಯುಲು ಮೂರುಗಜ ಉದ್ದ, ಎರಡು ಗಜ ಅಗಲದ ಒಂದು ಗುಂಡಿಯನ್ನು ತೋಡಲು ಅವರ ಮನೆಯ ಯುವಕರನ್ನು ತೊಡಗಿಸಿದ್ದರು. ಹಗಲೂಟದೊತ್ತಿಗೆ ಹಳದಿ ಪೇಟಗಳನ್ನು ತಲೆಗೆ ಸುತ್ತಿದ್ದ ಐದಾರು ಜನ ಓಣಿಬಾಯಲ್ಲಿ ಕಾಣಿಸಿಕೊಂಡಿದ್ದರು. ನಾಕುಣಿಸೆ ಮರಗಳಡಿಯಿಂದಲೇ ಅವರನ್ನು ನೋಡಿದ ಗೌಡರು “ಓಡೋಗ್ರಪ್ಪಾ, ಮರಕೊಯ್ಯರಿರಬೇಕು. ಅವನ್ನ ಇಲ್ಲಿಗೇ ಕರಕಂಡ್ ರ್ಬ’ ಎಂದು ಹುಡುಗರನ್ನು ಅಲ್ಲಿಗೆ ಅಟ್ಟಿದರು. ಭದ್ರನೇ ಓಡಿದ ಹುಡುಗರು ತಮ್ಮ ಜತೆಯಲ್ಲಿ ಅವರನ್ನು ನಾಕುಣಿಸೆ ಮರಗಳೆಡೆಗೆ ಕರೆತಂದರು.
ಅವರನ್ನು ಕಾಣುತ್ತಲೇ “ರ್ಬಬರಿ ಬಿಸ್ಲಾಗೇ ನಡಕಂಡ್ ಬಂದಿದೀರಾ. ಊಟ ತಂದಿದೀರಾ? ಇಲ್ಲ ಮಾಡಿಸಬೇಕಾ?” ಗೌಡರು ಕಕ್ಕುಲಾತಿಯಿಂದ ಕೇಳಿದರು. ಮರಕೊಯ್ಯುವವರ ಹಿರಿಯ ಪಾಂಡಪ್ಪ, “ಈವಾಗ ತಂದಿದೀವಿ ರಾತ್ರಿಗೆ ಜೋಳದ ರೊಟ್ಟಿ ಪಲ್ಲೆ ಮಾಡಿಸಿಬಿಡಿ” ಎಂದುತ್ತರಿಸಿ “ಮರಕೊಯ್ಯೋ ಗುಂಡಿ ತೋಡ್ತಾ ಇದೀರಾ ಆರಡಿ ಆಳ ತೋಡ್ಲಿ” ಎಂದು ಸೂಚಿಸಿದ. “ಅಗೋ ನೋಡ್ರಿ ಅಲ್ಲಿ ಕುಡಿಯೋ ನೀರಿನ ಬಾವಿ ಐತೆ ಅಲ್ಲೋಗಿ ಮುಖ ಕೈಕಾಲು ತೊಳಕಂಡು ನೀರತಂದು ಇಲ್ಲೇ ಊಟ ಮಾಡ್ತೀರೊ ಅಷ್ಟೇ ಅಲ್ಲೇ ಮಾಡ್ತೀರೋ ನೋಡ್ರಿ” ಗೌಡರು ಬಾವಿ ತೋರಿಸಿ ಹೇಳಿದ್ದರು. ಊರ ಬಾವಿ ಬಳಿಗೆ ನಡೆದ ಪಾಂಡುವಿನ ಸಂಗಡಿಗರಿಗೆ ಬಾವಿಯ ತಿಳಿನೀರನ್ನು ಕಂಡು ಖುಷಿಯಾಗಿತ್ತು. ಹಿಂದಕ್ಕೆ ಬಂದು ಊಟದ ಗಂಟನ್ನು ಬಾವಿ ಬಳಿಗೊಯ್ದು ಬಾವಿ ಗಡ್ಡೆಯ ಮೇಲೆ ಕುಳಿತು ಊಟ ಮಾಡಿದರು.
ಹಿಂದಿನ ಸಂಚಿಕೆ ಓದಿ: 15.ಹಿರೇ ಬಡಗಿ ಗೌನಹಳ್ಳಿಗೆ ಬಂದರು
ಊಟ ಮಾಡಿ ಹಿಂತಿರುಗಿದ ಮರಕೊಯ್ಯುವವರನ್ನು ಯಜಮಾನಪ್ಪರ ಹಜಾರ ಮತ್ತು ಗೌಡ್ರ ಅಟ್ ಮಾಳಿಗೆಗಳ ಬಳಿಗೆ ಕರೆದೊಯ್ದು “ನಿಮ್ಮಿಷ್ಟ ಬಂದಕಡೆ ನೀವು ವಾಸಕ್ಕಿರಬೌದು” ಎಂದು ಗೌಡರು ತಿಳಿಸಿದ್ದರು. ಪಾಂಡಪ್ಪನು “ಗೌಡ್ರೆ ನನ್ನೆಸ್ರು ಪಾಂಡುರಂಗ, ಇವು ವಿಠಲ, ದೇವುಳ, ದತ್ತಾತ್ರಿ ಹನುಮಾ ಅಂತ. ನಾವು ಇಲ್ಲೇ ಇರತೀವಿ” ಎಂದು ಗೌಡರ ಅಟ್‌ಮಾಳಿಗೆಯನ್ನು ಇಷ್ಟಪಟ್ಟಿದ್ದರು.
ಸಂಜೆ ಹೊತ್ತಿಗೆ ಮರಕೊಯ್ಯುವ ಗುಂಡಿ ಸಿದ್ಧವಾಯಿತು.
ಅಲ್ಲಿಗೆ ಕೆಲವು ಅಡ್ಡತೊಲೆಗಳನ್ನು ಗಾಡಿಯಲ್ಲಿ ಸಾಗಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಪಾಂಡುರಂಗನ ತಂಡ ಜೋಡಿಸಿಕೊಂಡಿತು. “ಗೌಡ್ರೆ ಕೊಯ್ಯೋ ಮರಗಳ ಇಲ್ಲಿಗೆ ತಂದಾಕಿಬಿಡ್ರಿ” ಎಂದು ತಿಳಿಸಿ ಬೆಳಿಗ್ಗೆಯಿಂದ ಮರಕೊಯ್ಯಲು ಸಿದ್ಧರಾದರು. ಜಂಗಮಯ್ಯರು ‘ನಾವು ಮನೆ ಕಟ್ಟಬೇಕು ಅಂದಿದ್ದು ಇಷ್ಟು ದೊಡ್ಡ ವ್ಯವಸ್ಥೆ ಆಗುತ್ತೆ ಅಂದ್ಯಂಡಿರಲಿಲ್ಲ. ಈ ಮಹಾರಾಯರು ಬಾಳ ದೊಡ್ ಮನುಷ್ಯರು. ಯಾವಾದ್ರೂ ಕೆಲಸ ಹಚ್ಚಿಗಂಡ್ರೆ ನಮ್ಮದೇ ಅಂಬೋ ಹಂಗೆ ಹಚ್ಚಂಡು ಬಿಡ್ತಾರೆ’. ಗೌಡ್ರು ಗೊಂಚಿಗಾರು ಮತ್ತು ಕಾಮಜ್ಜರನ್ನು ಕುರಿತು ಧನ್ಯತೆಯಿಂದ ನನೆದುಕೊಂಡರು.
ಎರಡು ಬೇವಿನ ಮರದ ದಿಮ್ಮಿಗಳನ್ನು ನಾಕುಣಿಸೆ ಮರದ ಬಳಿಗೆ ಸಾಗಿಸಲಾಯಿತು. ಪಾಂಡುರಂಗನ ಸಂಗಡಿಗರು ಒಂದು ಗರಗಸದ ಹಲ್ಲುಗಳನ್ನು ಅರದಿಂದ ಉಜ್ಜಿಕೊಂಡರು. ರಾತ್ರಿ ಜೋಳದ ರೊಟ್ಟಿ, ಕುಸುಮೆ ಚಟ್ನ ಜತೆಗೆ ನವಣೆ ಅಕ್ಕಿ ಅನ್ನ ಮೊಸರು ಊಟವನ್ನು ಸವಿದಿದ್ದ ಪಾಂಡುರಂಗನ ಸಂಗಡಿಗರು ಬೆಳಿಗ್ಗೆ ಹಳ್ಳದ ಕಡೆ ಹೋಗುವಾಗ ಜತೆಯಲ್ಲಿ ಸ್ನಾನದ ಪರಿಕರಗಳನ್ನು ಒಯ್ದು ಊರ ಬಾವಿ ಸಮಾಪ ತಣ್ಣೀರಲ್ಲಿ ಮಿಂದು ಬಂದಿದ್ದರು. ಚಿಕ್ಕುಂಬೊತ್ತಿಗೆ ಅವರನ್ನು ಗೌಡರ ಮನೆಯಲ್ಲಿ ಊಟಕ್ಕೆ ಕರೆದು ಜೋಳದ ರೊಟ್ಟಿ, ಸೊಪ್ಪಿನ ಆಮ್ರದ ಜತೆಗೆ ಬೆಣ್ಣೆ ಊಟ ನೀಡಲಾಗಿತ್ತು.
ಹಿಂದಿನ ಸಂಚಿಕೆ ಓದಿ: 16. ಬಡಗಿ ಕಂಡ ಗೌನಳ್ಳಿ
ತಡ ಮಾಡದೆ ಎರಡು ದೊಡ್ಡ ಗರಗಸ ಮತ್ತಿತರ ಸಲಕರಣೆಗಳನ್ನು ಹೊತ್ತು ನಾಕುಣಿಸೆ ಮರಗಳೆಡೆಗೆ ಮರಕೊಯ್ಯುವವರು ನಡೆದರೆ, ಅಲ್ಲಿ ಜಂಗಮಯ್ಯರು ಪೂಜಾ ಸಾಮಗ್ರಿಗಳೊಂದಿಗೆ ಸಿದ್ಧರಿದ್ದರು. ಊರಿನ ಸುಮಾರು ಜನರೂ ಸೇರಿದ್ದರು. ಗೌಡ್ರು, ಗೊಂಚಿಕಾರರು, ಯಜಮಾನ ಕಾಮಜ್ವರು ತಲುಪಿದ ಕೂಡಲೆ ಕೊಯ್ಯುವ ಮರವನ್ನು ಅಡ್ಡ ತೊಲೆಯ ಮೇಲಿರಿಸಿ ಇದ್ದಿಲ ಮಸಿ ನೀರಿನಲ್ಲಿ ಅದ್ದಿದ್ದ ದಾರವನ್ನು ದಿಮ್ಮಿಯ ಉದ್ದಕ್ಕಿಡಿದು ಗುರುತು ಮಾಡಿ ಗರಗಸ, ಉಳಿ ಕೊಡತಿ, ಹಾರೆ ಮುಂತಾದವನ್ನಿಟ್ಟು ಪೂಜಿಸಿದರು. ಕೂಡಲೇ ಪಾಂಡುರಂಗ, ವಿಠಲ, ದತ್ತಾತ್ರಿ, ದೇವುಳರು ಮೇಲಂಗಿಯನ್ನು ಬಿಚ್ಚಿಟ್ಟು, ಜೈ ಪಾಂಡುರಂಗ ವಿಠಲ ಜೈ” ಅಂದು ಜೈಕಾರ ಹಾಕಿ ಇಬ್ಬರು ಗುಂಡಿಯಲ್ಲಿಳಿದು ಗರಗಸದ ತುದಿಯನ್ನು ಹಿಡಿದರೆ ಮತ್ತಿಬ್ಬರು ಮೇಲೆ ನಿಂತು ಮರಕೊಯ್ಯಲು ಆರಂಭಿಸಿದರು.
ಕೊಯ್ಯುವ ಮರದ ದಿಮ್ಮಿಗೆ ಕಂಟು ಬಿದ್ದ ಬಳಿಕ ಪಾಂಡು, ದತ್ತಾತ್ರಿ ಕೈಗೆ ಗರಗಸವನ್ನು ಹಸ್ತಾಂತರಿಸಿ ಊರ ಬಾವಿಗೆ ಹೋಗಿ ಒಂದು ಗಡಿಗೆ ತುಂಬಾ ಕುಡಿಯುವ ನೀರು ತಂದಿರಿಸಿ ಇನ್ನೊಂದು ಗರಗಸದ ಹಲ್ಲುಗಳನ್ನು ಅರದಿಂದ ಮೊನಚು ಮಾಡಲುದ್ಯುಕ್ತನಾದನು. ಗೌಡ್ರು, ಗೊಂಚಿಕಾರು ಮತ್ತು ಕಾಮಜ್ಞರು ಕಂಬಳಿ ಹಾಸಿ ಅದರ ಮೇಲೆ ಕುಳಿತು ವೀಳೇದೆಲೆ, ಅಡಿಕೆಗಳ ಚೀಲವನ್ನು ಬಿಚ್ಚಿದರು. ಊರ ಜನ ಮರ ಕೊಯ್ಯುವ ಕಾವ್ಯವನ್ನು ನೋಡುತ್ತಿದ್ದರು. ಜಂಗಮಯ್ಯರು ಈ ವಿದ್ಯಮಾನವನ್ನು ಕಂಡೇ ಇರಲಿಲ್ಲ. ಹೀಗಾಗಿ ಗುಂಡಿಂ-ತು ಪಕ್ಕ ನಿಂತು ಕುಳಿತು ನೋಡುತ್ತಿದ್ದರು.
ಮರ ಕೊಯ್ಯುವವರು ಮರದ ಮೇಲಿನ ಕರಿಬಣ್ಣದ ಗೆರೆಯನ್ನು ತದೇಕಚಿತ್ತದಿಂದ ನೋಡುತ್ತಾ ಗರಗಸವನ್ನು ಕೆಳಗೆ ಮೇಲೆ ಎಳದಾಡುತ್ತಿದ್ದರು. ಮದ್ಯಾನ್ನದೊತ್ತಿಗೆ ಮರದ ದಿಮ್ಮಿಯಲ್ಲಿ ಎರಡು ತೊಲೆಗಳು ಕಾಣಿಸಿಕೊಂಡಿದ್ದವು. ಮರಕೊಯ್ಯುವವರು ರಟ್ಟೆ ಸೋತಾಗ ಸ್ವಲ್ಪ ಹೊತ್ತು ಮರ ಕೊಯ್ಯುವುದನ್ನು ನಿಲ್ಲಿಸಿ ನೀರು ಕುಡಿದು ಕೈ ಬದಲಾಯಿಸಿಕೊಳ್ಳುತ್ತಿದ್ದರು. ಗುಂಡಿಯೊಳಗಿನವರು ಮೇಲೆ ಬಂದರೆ ಮತ್ತಿಬ್ಬರು ಗುಂಡಿಯೊಳಗಿಳಿದು ಗರಗಸದ ತುದಿಯನ್ನು ಹಿಡಿದುಕೊಳ್ಳುತ್ತಿದ್ದರು. ಅಂತೂ ಮರಕೊಯ್ಯುವ ಕೆಲಸ ನಿರಾತಂಕವಾಗಿ ಸಾಗಿತ್ತು.
ಹಿಂದಿನ ಸಂಚಿಕೆ ಓದಿ: 17. ಕೊಳ್ಳಿ ಇಕ್ಕಿದರು
ಊರ ಜನರಿಗೆ ತಮ್ಮ ಕೆಲಸಗಳ ನೆನಪಾಗಿ ಒಬ್ಬೊಬ್ಬರೇ ಅಲ್ಲಿಂದ ತೆರಳಿದ್ದರು.
ಅಲ್ಲಿ ಉಳಿದವರೆಂದರೆ ಯಜಮಾನ ಕಾಮಜ್ಜ, ಗೌಡ್ರು, ಗೊಂಚಿಕಾರು, ಮರಕೊಯ್ಯುವವರ ಜತೆಗಿದ್ದ ಜಂಗಮಯ್ಯರು. ಹಗಲೂಟದೊತ್ತಿಗೆ ಕಾಮಜ್ಜರ ಮನೆಯಿಂದ ರೊಟ್ಟಿ ಬುತ್ತಿ ಬಂದಿತ್ತು. ಮರಕೊಯ್ಯುವವರಿಗೆ ನಿಜಕ್ಕೂ ಹಸಿವಾಗಿತ್ತು. ಆದರೂ ಮರಕೊಯ್ಯುವವುದನ್ನು ನಿಲ್ಲಿಸದೆ ಮುಂದುವರಿಸಿದ್ದರು.
ಯಜಮಾನರುಗಳು ಎಲೆ ಅಡಿಕೆ ಜಗಿದು ಎದ್ದು ತಾಂಬೂಲ ಉಗುಳುತ್ತಾ ಮರಕೊಯ್ಯುವವರು ತಂದಿದ್ದ ನೀರಿನಲ್ಲಿ ಬಾಯಿ ತೊಳದುಕೊಂಡು ಕಂಬಳಿ ಮೇಲೆ ಅಡ್ಡಾದರು. ಬುತ್ತಿ ತಂದವರು ಊರಬಾವಿ ಬಳಿಹೋಗಿ ಬಿಂದಿಗೆ ತುಂಬಾ ನೀರು ತಂದು ಮರಕೊಯ್ಯುವುದನ್ನು ಗಮನಿಸಿದರು. ನಿನ್ನೆ ದಿಮ್ಮಿಯಾಗಿದ್ದ ಮರದಲ್ಲಿ ಎರಡು ತೊಲೆಗಳು ಪ್ರತ್ಯಕ್ಷವಾಗಿದ್ದವು.
ಸ್ವಲ್ಪ ಸಮಯದ ಬಳಿಕ ಪಾಂಡುರಂಗನ ತಂಡ ಕೆಲಸ ನಿಲ್ಲಿಸಿ ಮುಖಕಾಲು ತೊಳೆದುಕೊಂಡು ರೊಟ್ಟಿ ಬುತ್ತಿ ಉಣ್ಣಲು ಕುಳಿತರು.
“ಗೌನಳ್ಳಿ ಊಟ ಬಾಳ ರುಚಿಯಾಗಿರುತ್ತೆ. ಇಂಥಾ ಬೆಣ್ಣೆ ತುಪ್ಪ ನಾವು ತಿಂದೇ ಇರಲಿಲ್ಲ. ನಾವು ಮರ ಕೊಯ್ಯಬೌದು. ಆದರೆ ನಿಮ್ಮ ರುಚಿಯಾದ ಊಟದ ರಿಣ ತೀರಾಕಾಗಲ್ಲ” ದತ್ತಾತ್ರಿ ಮತ್ತು ವಿಠಲ ಇಬ್ಬರೂ ಮನದುಂಬಿ ಮಾತಾಡಿದ್ದರು. ಊಟ ಬಡಿಸುತ್ತಿದ್ದ ಚಿಕ್ಕಪ್ಪಗೌಡ “ನೀವು ನಮ್ಮೂರಿಗೆ ಬಂದು ಇನ್ನಾ ಎಳ್ಳು ದಿನಾ ಆಗೈತೆ ಈಗ್ಲ ಇಂಗೆ ಮಾತಾಡ ಬ್ಯಾಡ್ರಿ. ಇನ್ನಾ ನೀವು ಬಾಳದಿನ ನಮ್ಮೂರಾಗಿದ್ದೀರಾ” ಅಂದಿದ್ದ. ಹತ್ತಿರದಲ್ಲೇ ಕುಳಿತಿದ್ದ ಗೌಡ್ರು, ಗೊಂಚಿಕಾರು ಮತ್ತು ಕಾಮಜ್ಜಾರು ಈ ಮಾತುಗಳನ್ನು ಕೇಳಿಸಿಗಂಡು ಮುಖಾ ಮುಖ ನೋಡಿಕೊಂಡು ಹುಸಿನಗೆ ಸೂಸಿದ್ದರು.
“ನೀವು ದಿನಾ ಜ್ವಾಳದ್ ರೊಟೀನೇ ಊಟ ಮಾಡೋದಾ ಬ್ಯಾರೆ ಏನೂ ತಿನ್ನದಿಲ್ವೆ?” ಚಿಕ್ಕಪ್ಪ ಗೌಡ ಪಾಂಡುರಂಗಪ್ಪನ ತಂಡದವರನ್ನು ವಿಚಾರಿಸಿದ. “ಹೇ ಅಂಗೇನಿಲ್ಲ, ಸಜ್ಜೆ-ರೊಟ್ಟಿ ತಿಂತೀವಿ. ನಿಮ್ಮ ನವಣೆ ಅಕ್ಕಿ ಅನ್ನ ಆಮ್ರ ಮಜ್ಜಿಗೆ ನಮಿಗೆ ಬಾಳಾ ಇಷ್ಟ ಆಗೈತೆ” ನಸುನಗುತ್ತಾ ಅವರು ತಿಳಿಸಿದ್ದರು.
ಹಿಂದಿನ ಸಂಚಿಕೆ ಓದಿ: 18. ಜಂಗಮಯ್ಯರಿಗೆ ಪುತ್ರೋತ್ಸವ
“ಯಾರಿಗೌಡ್ರೆ ನೀವು ಮನೆ ಕಟ್ಟಿರೋದು. ಗೌಡ್ರು ಗೊಂಚಿಗಾರು ನಮ್ಮನ್ ಕರಿಯಾಕ ಬಂದಿದ್ರು” ವಿಠಲ ಕುತೂಹಲಿಯಾಗಿ ವಿಚಾರಿಸಿದ. ಹತ್ತಿರದಲ್ಲಿ ಕುಳಿತು ಕೊಯ್ಯತ್ತಿದ್ದ ಮರದ ದಿಮ್ಮಿಯನ್ನು ನೋಡುತ್ತಿದ್ದ ಜಂಗಮಯ್ಯರನ್ನು ನೋಡಿದ ಚಿಕ್ಕಪ್ಪ ಸ್ವಲ್ಪ ದನಿ ತಗ್ಗಿಸಿ “ಅಗೋ ನೋಡಿ ಅಲ್ಲಿ ಕುಳಿತಿರದಾರಲ್ಲ ಅವರು ಜಂಗಮಯ್ಯರು. ಅವರು ಗುಬ್ಬಿ ಕಡೇಲಿಂದ ನಮ್ಮೂರಿಗೆ ಬಂದು ಎಲ್ಲೊಯದ ಮೇಲಾಗೈತೆ. ಅವರು ನಮ್ಮೂರಿಗೆ ಬಂದು ಇಲ್ಲೇ ವಾಸಮಾಡ್ತೀವಿ ಅಮ್ಮ ನಮ್ಮಜಮಾನಿಗೆ ತಿಳಿಸಿದ್ರಂತೆ.
“ಜಂಗಮೈಗಳು ದೂರದಿಂದ ಬಂದಿದಾರೆ” ಅಂದ್ಯಂಡು ನಮ್ಮೋರು ಒಂದು ಗುಡಿಸಲು ಕಟ್ಟಿಸಿಕೊಟ್ಟಿದಾರೆ. ಅವರು ಮೂರುಜನ ಗಂಡುಸ್ರು ಮೂರು ಹೆಂಗಸ್ರು ಒಟ್ಟು ಆರು ಜನ ಐದಾರೆ. ಈಗ ಇಬ್ಬರಿಗೆ ಎರಡು ಗಂಡು ಮಕ್ಕಳಾಗಿದಾರೆ. ಈವಾಗ ಎಂಟು ಜನ ಆಗಿ ಗುಡ್ಲುಮನೆ ಇಕ್ಕಟ್ಟಾಗೈತೇ ಅಮ್ಮ ಎರಡು ಮಾಳಿಗೆ ಮನೆ ಕಟ್ಟಿಸ್ತಾ ಇದೀವಿ” ಸಂಕ್ಷಿಪ್ತವಾಗಿ ತಿಳಿಸಿದ. “ಸರಿ ಸರಿ ನಿನ್ನೆಯಿಂದ ಅವರು ಇಲ್ಲೇ ಇದ್ದಾರೆ. ಬೆಳಿಗ್ಗೆ ಪೂಜೆ ಕೂಡಾ ಮಾಡಿದ್ರು” ವಿಠಲ ಖಚಿತಪಡಿಸಿದ.
ಮರಕೊಯ್ಯುವವರು ಊಟ ಮಾಡಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಮರಕೊಯ್ಯಲು ತೊಡಗಿಕೊಂಡರು. ಯಜಮಾನರುಗಳು ತಮ್ಮ ಜೊಂಪಿನಿಂದ ಎಚ್ಚರಗೊಂಡು ಜಂಗಮಯ್ಯರನ್ನು ಹತ್ತಿರಕ್ಕೆ ಕರೆದರು. ಎದ್ದು ಬಂದ ಮರುಳಯ್ಯ ಮತ್ತು ಶಿವಲಿಂಗಯ್ಯ “ಅಣ್ಣನ್ನ ಕರೀಲೆ?” ಎಂದು ಯಜಮಾನರುಗಳನ್ನು ವಿಚಾರಿಸಿದರು. “ಬ್ಯಾಡ ಬರಿ ಕಂಬ್ಲಿ ಮ್ಯಾಲೆ ಕೂಡಬರಿ” ಅಂದು ಹತ್ತಿರಕ್ಕೆ ಕರದರು.
ಹಿಂದಿನ ಸಂಚಿಕೆ ಓದಿ: 19. ಊರ ಬಾವಿ ತೋಡಿದರು
ಅವರಿಬ್ಬರೂ ಹತ್ತಿರಕ್ಕೆ ಬಂದು ಕುಳಿತ ಬಳಿಕ “ನೋಡ್ರಿ ನೀವು ಅದ್ಯಾವ ಗಳಿಗೆಗೆ ಮನೆ ಕಟ್ಟಬೇಕೂ ಅಮ್ಮ ಯೋಚೆ ಮಾಡಿದಿರೋ ಎಲ್ಲೆಲ್ಲೋ ಬಿದ್ದಿದ್ದ ಮರದ ದಿಮ್ಮಿಗಳೆಲ್ಲಾ ಕೊಯ್ಲಿಗಂಡು ಮುಟ್ಟಾಗ್ತವೆ. ಇಲ್ಲದಿದ್ರೆ ಅಲ್ಲೇ ಬಿದ್ದಿತ್ತಾಗೇ ಗೆದ್ದು ಹಿಡೀತಿದ್ದು” ಕಾಮಜ್ಜರು ಮಾತಾಡಿದ್ದರು. ಮರಕೊಯ್ಯುವವರು ಮರುಳಯ್ಯ ಮತ್ತು ಶಿವಲಿಂಗಯ್ಯರಿಗೆ ಏನು ಮಾತಾಡಬೇಕು ಹೊಳೆಯಲಿಲ್ಲ. “ಅಣ್ಣೆಯನ್ನ ಕರು ಬತ್ತೀನಿ” ಅನ್ನುತ್ತಾ ಶಿವಲಿಂಗಯ್ಯ ಎದ್ದು ಮನೆ ಕಡೆ ಹೊರಟ.
“ಈಗ ಇವರಿಗೆ ಮೂರು ತಿಂಗಳು ಕೆಲ್ಲಾ ಕೊಡಬೇಕಲ್ಲ. ಅಷ್ಟು ಮರ ಮುಟ್ಟು ನಮ್ಮೂರಾಗೆ ಇದ್ದೀತಾ” ಗೊಂಚಿಕಾರರು ಆಶ್ಚರ್ ವ್ಯಕ್ತಪಡಿಸಿದರು. “ಈವಾಗ ನೋಡಪ್ಪಾ, ಬೆಳಿಗ್ಗೆಯಿಂದ ಈ ಒಂದು ದಿಮ್ಮಿ ಕೊಯ್ತಾ ಇದಾರೆ, ಇನ್ನಾ ಅರ್ಧ ಆಗಿಲ್ಲ. ನಾಳೆ ಸಂಜಿಗೇನನಾ ಎಳು ತೊಲೆ ಕೊಯ್ಯಾದಾಗಬೌದು” ಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ “ಎಳ್ಳು ದಿನಕ್ಕೆ ಒಂದು ಮರ ಅ೦-ಡ್ಕಂಡ್ರೆ ಆಗಬೌದು” ತಮ್ಮ ಅಂದಾಜನ್ನು ಹೇಳಿದರು. ಅಷ್ಟೊತ್ತಿಗೆ ಅಲ್ಲಿಗೆ ಆಗಮಿಸಿದ ಮಳಿಯಪ್ಪಯ್ಯ “ನಿನ್ನೆಯಿಂದ ಕುತ್ತಿಗೆ ನೋವು ಬಂದಿದೆ. ಅದಕ್ಕೆ ದಿಂಬಿಲ್ಲದೆ ಅಂಗಾತ ಮಲಗಿದ್ದೆ” ಅನ್ನುತ್ತಾ ಕೂತರು.
“ಯಾವುದಾದ್ರೂ ಸಮಯ ಸಂದರ್ಭ ಒದಗಿದಾಗಲೇ ಕೆಲವು ವಿಶೇಷಗಳು ನಡೀತವೆ. ನಾವು ಮನೆ ಕಟ್ಟಿಸ್‌ಬೇಕು ಅಂದಿದ್ದೇನೋ ನಿಜ ಇವಾಗ ನೋಡ್ರಿ ನೀವು ಅದನ್ನ ಎಷ್ಟು ಗಂಭೀರವಾಗಿ ತಗಂಡ್ರಿ ಅಂದ್ರೆ ನನಿಗೆ ಊಹೆ ಮಾಡಕಾಗದಿಲ್ಲ. ನಿಮ್ ಕೈಯಾಗೆ ಎತ್ತು ಗಾಡಿ ಐದಾವೆ. ಜನ ಐದಾರೆ, ಅದಕ್ಕಿನ್ನ ಹೆಚ್ಚಿಂದು ಅಂದ್ರೆ ನಿಮ್ಮ ಒಳ್ಳೇ ಮನಸ್ಸು. ಒಂದಲಾ ನೀವು ಮನಸ್ ಮಾಡಿದಿರಿ ಅಂದ್ರೆ, ಅದು ಆಗೇ ಬಿಡುತ್ತೆ. ಯಾರು ಅಂಟ್ಕಂಡಿದ್ರು ನಾವಂತೂ ಕಲ್ಪನೇನೇ ಮಾಡಿಲಿಲ್ಲ. ಎಳ್ಳು ಮೂರು ವಾರದಾಗೆ ಕುಡಿಯೋ ನೀರಿನ ದೊಡ್ ಬಾವಿ ತೋಡ್ಲಿ ಪವಾಡನೇ ಮಾಡಿದಿರಿ.”
“ಇನ್ನ ಈ ಯಜಮಾನಪ್ಪಾರು ಅದೆಂಥಾ ಕನಸು ಕಂಡಿದ್ರೋ, ಈಗ ಊರಿನ ಜನಾನೆಲ್ಲಾ ‘ಬಟ್ಟೆ ಒಗಿಯಾಕೆ ಎಮ್ಮೆ ದನ ನೀರು ಕುಡಿಸಾಕೆ ಕಾಮಜ್ಜನ ಒಡ್ಡಿಗೋಗಾನಾ’ ಅಯ್ತಾರೆ ಅಂಥ ಸಮುದ್ರದಂಥಾ ಮಡುವು ಸೃಷ್ಟಿ ಮಾಡಿದಿರಿ. ಎಷ್ಟು ದಿನ ಎಷ್ಟು ಜನ, ಎತ್ತು ಗಾಡಿ ಗುಂಡು ಬಂಡೆ ಹೇರಿದ್ದು, ಒಡ್ಡು ಕಟ್ಟಿದ್ದು ಯಾರಾದ್ರೂ ಒಬ್ರನಾ ಕೈ ಮೈ ನೋಯಿಸಿಕೊಳ್ಳಲ್ಲ ಅಂದ್ರೆ ಅದೂ ಸಾಮಾನ್ಯ ಕೆಲ್ಲಾ ಅಲ್ಲ. ಅದಕ್ಕೆ ದೈವದ ಬಲ ಆಶೀಶ್ವಾದ ಇರಬೇಕು”.
ಮಳಿಯಪ್ಪಯ್ಯ ಇಲ್ಲಿಗೆ ಬರುವುದಕ್ಕೆ ಮುಂಚೆ, ಕಾಮಜ್ಜರು ಆಡಿದ್ದ ಮಾತು “ನೋಡ್ರಿ ನೀವು ಅದ್ಯಾವ ಗಳಿಗೆಗೆ ಮನೆ ಕಟ್ಟಬೆಕು ಅಮ್ಮ ಯೋಚೆ ಮಾಡಿದ್ದಿರೋ ಎಲ್ಲಲ್ಲೋ ಬಿದ್ದಿದ್ದ ಮರದ ದಿಮ್ಮಿಗಳೆಲ್ಲಾ ಕೊಯ್ದಗಂಡು ಮುಟ್ಟಾಗ್ತವೆ”, ಅನ್ನೊ ಮಾತನ್ನು ಶಿವಲಿಂಗಯ್ಯ ಇವರಿಗೆ ಹೇಳಿದ್ದ. ಮಳಿಯಪ್ಪಯ್ಯ ಹೃದಯ ತುಂಬಿ ಮಾತಾಡಿದ್ದರು. ಗೌಡ್ರು, ಗೊಂಚಿಕಾರು ಮತ್ತು ಕಾಮಜ್ಜರು ಹುಸಿನಗೆ ನಗುತ್ತಲೇ ಅವರ ಮಾತುಗಳನ್ನು ಆಲಿಸಿದ್ದರು. ಮರುಳಯ್ಯ ಹೌದಲ್ಲವೇ ಈ ಯಜಮಾನರುಗಳು ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸುತ್ತಾರೆ ಅಂದುಕೊಂಡಿದ್ದರು.
ಮರಕೊಯ್ಯುವವರು ದಣಿವಾಗಿ ಸುಧಾರಿಸಿಕೊಳ್ಳಲು ಕೆಲಸ ನಿಲ್ಲಿಸಿ ನೀರು ಕುಡಿದು ಅಲ್ಲಲ್ಲಿ ಅಡ್ಡಾದರು. ಸ್ವಲ್ಪ ಹೊತ್ತಿನಲ್ಲೇ ಇಬ್ಬರು ಹುಡುಗರಂಥವರು ಗೊರಕೆ ಹೊಡೆಯಲು ಸುರು ಮಾಡಿದ್ದರು. “ನೋಡ್ರಪ್ಪಾ ದುಡೀಬೇಕು ಅಂದ್ರೆ ಇಂಗೆ ಮೈಮುರೆ ದುಡೀಬೇಕು. ಈ ಹುಡುಗ್ರು ಗರಗಸ ಎಳೆದೂ ಎಳೆದು ದಣಿದುಬಿಟ್ಟಿದಾರೆ. ಪಾಪ ಸುಧಾರಿಸಿಗಂಬ್ಲಿ” ಕಾಮಜ್ಜರು ಮರ ಕೊಯ್ಯುವವರ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು. ಸ್ವಲ್ಪ ಹೊತ್ತಾದ ಬಳಿಕ ಪಾಂಡುರಂಗ “ಉಠರೇ, ವಿಠಲ, ದತ್ತಾತ್ರಿ”(ಏಳೋ ವಿಠಲ,) ಕೂಗು ಹಾಕಿದ. ಎಲ್ಲರೂ ದಡಬಡ ಎದ್ದು ಮುಖಕ್ಕೆ ನೀರು ಹಾಕಿಕೊಂಡು ಗುಂಡಿಯೊಳಗೆ ಇಳಿದರು.
ಹಿಂದಿನ ಸಂಚಿಕೆ ಓದಿ: 20. ಕಾಮಜ್ಜ ಒಡ್ಡು ಕಟ್ಟಿದ
ಯಜಮಾನರುಗಳು ಮತ್ತು ಮಳಿಯಪ್ಪಯ್ಯ ಮರ ಕೊಯ್ಯುವವರ ಬಳಿಗೆ ನಡೆದು, ದಿಮ್ಮಿಯಲ್ಲಿ ಒಡಮೂಡಿರುವ ಎರಡು ತೊಲೆಗಳನ್ನು ನೋಡಿ ತೃಪ್ತಿ ಪಟ್ಟಿಕೊಂಡರು. ಬೇವಿನ ಮರದ ದಿಮ್ಮಿ ಚೆನ್ನಾಗಿ ಒಣಗಿದ್ದರಿಂದ ಕೊಯ್ಯುವುದು ನಿಧಾನವಾಗಿತ್ತು. ಪಾಂಡು ಮೇಲೆ ನಿಂತು ಗರಗಸವನ್ನು ಮೇಲೆಳೆದುಕೊಳ್ಳುತ್ತಿದ್ದರೆ ಗುಂಡಿಯಲ್ಲಿದ್ದವರು ಶ್ರಮಕೊಟ್ಟು ಕೆಳಗೆ ಎಳೆಯುತ್ತಿದ್ದರು. ಕೆಳಗೆ ಎಳೆಯುವಾಗ ಮರದ ಪುಡಿ ಕೆಳಗೆ ಉದುರುತ್ತಿತ್ತು. ಯಜಮಾನರು ಮತ್ತು ಮಳಿಯಪ್ಪಯ್ಯ ಮಾತಾಡದೆ ಮರಕೊಯ್ಯುವವರ ಶ್ರಮವನ್ನು ಗಮನಿಸಿ ‘ಮರದ ದಿಮ್ಮಿಯಾಗ ಏನೇನು ಮಾಡಬೌದು ಅ ಬಡಗೇರಿಗೆ ಮತ್ತೆ ಇವರಿಗೆ ಮಾತ್ರ ಗೊತ್ತಾಗುತ್ತೆ” ಅಂದುಕೊಂಡಿದ್ದರು.
ಹೊತ್ತು ವಾಲುತ್ತಿರುವುದನ್ನು ಗಮನಿಸಿದ ಕಾಮಜ್ಜ ಮನೆ ಕಡೆ ಹೊರಡೋಣವೆಂದು ತಮ್ಮ ಕೈಲಿದ್ದ ಕೋಲಿನಿಂದ ಸನ್ನೆ ಮಾಡಿದರು.
ಅದನ್ನು ಅನುಸರಿಸಿ ಅವರುಗಳು ಎದ್ದು ಊರಕಡೆ ನಡೆದರು. ಅಲ್ಲಿ ಉಳಿದ ಮಳಿಯಪ್ಪಯ್ಯ ಮತ್ತು ಮರುಳಯ್ಯ ಮರಕೊಯ್ಯುವುದನ್ನು ಗಮನಿಸುತ್ತಾ ಕೊಯ್ಯುತ್ತಿರುವವರ ರಟ್ಟೆಗಳು ಸೋಲುತ್ತಿರುವುದನ್ನು ಗಮನಿಸಿ “ಇವತ್ತಿಗೆ ಸಾಕು ಮಾಡ್ರಿ ಬೆಳಿಗ್ಗೆ ನೋಡಿ ಕೊಂಡ್ರಾಯ್ತು” ಸಲಹೆ ನೀಡಿದರು. ಇವರ ಸಲಹೆಯನ್ನು ತಿರಸ್ಕರಿಸಿದರೇನೋ ಅನ್ನುವಂತೆ ಮರಕೊಯ್ಯುವುದನ್ನು ನಿಲ್ಲಿಸಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಮೇಲಿದ್ದ ಪಾಂಡು “ಕಾಯ್ ಬಸ್ ಕರೇ” (ಸಾಕು ನಿಲ್ಲಿಸೋ) ಅನ್ನುತ್ತಾ ನಿಲ್ಲಿಸಿದ.
ಕೂಡಲೇ ಗುಂಡಿಯಲ್ಲಿದ್ದವರು ಮೇಲೆ ಬಂದು ಉಳಿದಿರುವ ಮರವನ್ನು ಮೊಳದ ಕಡ್ಡಿಯಿಂದ ಅಳೆದರು. ಗರಗಸವನ್ನು ಎತ್ತಿಟ್ಟು ಗಡಿಗೆ ತಂಬಿಗೆ ಹಿಡಿದು ಊರ ಬಾವಿ ಬಳಿಗೆ ನಡೆದು, ಗಡಿಗೆ ತುಂಬ ನೀರು ತುಂಬಿ ದಡದ ಮಲೆ ಬಂದು, ಒಬ್ಬರಾಗುತ್ತು ಮತ್ತೊಬ್ಬರು ಮೈ ಮೇಲೆ ನೀರು ಸುರಿದುಕೊಂಡು ಕೊಂಚ ದಣಿವು ಪರಿಹರಿಸಿಕೊಂಡರು. ಹೊತ್ತು ಮುಳುಗೋ ಸಮಯಕ್ಕೆ ಗೌಡ್ರ ಆಟ್ ಮಾಳಿಗೆಗೆ ಹಿಂತಿರುಗಿದ ಪಾಂಡು ಮತ್ತವನ ತಂಡ ನೆಲ ಸಿಕ್ಕಿದರೆ ಸಾಕು ಅನ್ನುವಷ್ಟು ದಣಿದಿದ್ದರು. ಕುಳಿತಲ್ಲಿಯೇ ನಿದ್ದೆಗೆ ಜಾರಿದ್ದವರನ್ನು ಏಳಿಸಿ ಊಟಕ್ಕೆ ಬಡಿಸಬೇಕಾಗಿತ್ತು.
ಹಿಂದಿನ ಸಂಚಿಕೆ ಓದಿ: 21. ದುಷ್ಟನಿಂದ ದೂರ ಹೋದವರು
“ಈಗ ಮೂರು ತಿಂಗು ಮರಕೊಯ್ಯಾದಿರಲಿಲ್ಲ, ಗೌಡ್ರೆ, ಅದ್ರೆ ಈವೊತ್ತು ಸ್ವಲ್ಪ ದಣಿದಿದ್ದೀವಿ” ಪಾಂಡು ಊಟ ಮಾಡುವಾಗ ಸಮಜಾಯಿಷಿ ನೀಡಿದ್ದ.
ಮಾರನೇ ದಿನದಿಂದ ಊರ ಜನ ಅದೆಲ್ಲಿ ಮಡಗಿದ್ರೋ ಏನೋ ಐದಾರು ಮರದ ದಿಮ್ಮಿಗಳನ್ನು ಹೇರಿಕೊಂಡು ತಂದು ನಾಕುಣಿಸೆ ಮರಗಳಡಿಯಲ್ಲಿ ಕೆಡವಿದ್ದರು. ಮರ ಕೊಯ್ಯುವವರು ದಿಮ್ಮಿಗಳನ್ನ ನೋಡಿ ಎಲ್ಡ್ ತಿಂಗಳ ಕೆಲ್ಲಾ ಸಿಕ್ಕಂಗಾತು ಅಂದುಕೊಂಡಿದ್ದರು. ಮಾರನೆ ದಿನ ಮದ್ಯಾನ್ನದೊತ್ತಿಗೆ ಕೊಯ್ಯುವ ದಿಮ್ಮಿಯನ್ನು ಹಿಂದೆ ಮುಂದು ಮಾಡಲು ಊರಜನರ ನೆರವು ಪಡೆದಿದ್ದರು. ಪಾಂಡು ಅವನ ಸಂಗಡಿಗರಿಗೆ ‘ಈ ಊರ ಜನ ಒಳ್ಳೇ ಜನರಂತೆ ಕಂಡು ಬಂದಿದ್ದರು. ಕರೆದ ಕೂಡಲೇ ಹಾರೆ ಹಿಡಿದು ಬಂದವರು ಕೊಯ್ಯುತ್ತಿದ್ದ ದಿಮ್ಮಿಯನ್ನು ಹಾರೆಗಳಿಂದ ಹಿಂದೆ ಸರಿಸಿ ಹಿಮ್ಮೊಗವನ್ನು ಮುಮ್ಮೊಗನಾಗಿ ತಿರುಗಿಸಿಕೊಟ್ಟಿದ್ದರು.
ಮರದ ತೊಲೆಗಳು ಅಲಾದಿಯಾಗಿ ಮರಕೊಯ್ಯುವ ಗುಂಡಿಯ ಪಕ್ಕಕ್ಕೆ ಉರಳಿಸಲ್ಪಟ್ಟಿದ್ದವು. “ಇವನ್ನು ಉಜ್ಜುಗೊರಡು ಆಡಿಸುವುದೇ ಬೇಡ ಇಂಗೇನೇ ಮೇಲೆತ್ತಿ ಕಂಭದ ಮೇಲೆ ಕೂಡಿಸಬೌದು” ಪಾಂಡು ಸಲಹೆ ನೀಡಿದ್ದ.
ಗೌನಳ್ಳಿ ಸುತ್ತಲಿನ ಗುಡ್ಡಗಳಾಚೆಗಿನ ವಿದ್ಯಮಾನಗಳ ಬಗ್ಗೆ ಅರಿವಿಲ್ಲದಿದ್ದ ಊರ ಜನರಿಗೆ ಊರ ಬಾವಿ ತೋಡುವುದು, ಕಾಮಜ್ಜ ಒಡ್ಡು ಕಟ್ಟಿಸಿದ್ದು, ಈಗ ಜಂಗಮಯ್ಯರ ಗೃಹ ನಿರ್ಯಾಣ, ಈ ಸಂಬಂಧದ ಮರಮುಟ್ಟುಕೊಯ್ಯುವುದು ಇವೇ ಅವರ ಚರ್ಚೆಯ ವಿಷಯಗಳಾಗಿದ್ದವು. ತಮ್ಮ ಬಿಡುವಿನ ವೇಳೆಯಲ್ಲಿ ಒಂದು ಬಾರಿಯಾದರೂ ಊರಜನ ಮರಕೊಯ್ಯುವ ನಾಕುಣಿಸೆ ಮರಗಳೆಡೆಗೆ ಬಂದು ಹೋಗುತ್ತಿದ್ದರು. ಕೆಲವೊಮ್ಮೆ ಮರಕೊಯ್ಯುವವರಿಗೆ ಮುಜುಗರವೂ ಆಗುತ್ತಿತ್ತು. ಆದರೂ ತಮ್ಮ ಕೆಲಸದಲ್ಲಿ ತೊಡಗಿಕೊಂಡು ಒಂದು ಬಗೆಯ ರಂಜನೆ ಪಡೆಯುತ್ತಿದ್ದರು.
ಗೌಡ್ರು, ಗೊಂಚಿಕಾರು ಮತ್ತು ಕಾಮಜ್ವರು “ವಾರ ಎರಡು ವಾರದಾಗೆ ತೊಲೆ ಕಂಭ ಕೈಗೆ ಸಿಗುತಾವೆ. ಕಂಭದಡಿಗೆ ಸುಟ್ಟಕಲ್ ಬಂಡೆ ಜೋಡಿಸಬೇಕು. ಐಗಳ ಮನೆಗೆ ನಾಲಕ್ಕು ಬಂಡೆ ಬೇಕಾಗ್ತವೆ. ಒಂದು ಗಾಡಿಗೆ ಎಲ್ಲ ಬಂಡೆ ಹಾಕ್ಕಂಡ್ ತರಬೌದು. ಜತೀಗೆ ಇನ್ನೆಲ್ಡ್ ಗಾಡಿ ಕಲ್ಲಿ ಇನ್ನಾ ನಾಕು ಬಂಡೆ ತರಬೌದಲ್ಲ” ಎಂದು ತಮ್ಮಲ್ಲೇ ಮಾತಾಡಿಕೊಂಡಿದ್ದರು.
ಅಂದ್ರೆ ಸುಮ್ ಸುಮ್ಮೆ ಗಾಡಿ ಭೀಮನ ಬಂಡೆ ತನಕ ಹೋಗಿ ಬರೇ ಗಾಡಿ ಹೊಡಕಂಡ್ ಬರಬೇಕಾಗುತ್ತ” ಹೀಗೆಲ್ಲಾ ಯೋಚಿಸಿ ಬೋವಿಯನ್ನು ಕರೆದು ಮಾತಾಡೋಣ” ಎಂದು ತೀರಾನಿಸಿ ಸಂಜೆಗೆ ಬೋವಿಯನ್ನು ಗೌಡ್ರ ಮನಗೆ ಕರೆಸಿಕೊಂಡು ಅವನಲ್ಲಿ ಪ್ರಸ್ತಾಪಿಸಿದರು. ಆತ “ದಂಡಿಯಾಗಿ ಸಿಗ್ತಾವೆ ಸ್ವಾಮಿ ಎಂಟು ಬಂಡೆ ಅಂದ್ರೆ ಒಂದೀಟು ಸೋವೀನು ಸಿಗ್ತಾವೆ. ಮಂಗಳವಾರ ಕಲ್ ಸೀಳೋರು ಗಣೀಕಡೆ ಬರೋದಿಲ್ಲ. ಸ್ವಾಮಾರ ಅತ್ವಾ ಬುಧವಾರ ಹೋಗಿಬರಬೇಕಾಗುತ್ತೆ” ಎಂದು ತನ್ನ ಅಭಿಪ್ರಾಯ ತಿಳಿಸಿದ್ದ. “ಸರಿಯಪ್ಪ ಅಂಗೆ ಮಾಡಾನ ನಾಳೆ ಸೋಮವಾರ ಬೆಳಗೀಲೆ ಹೊಲ್ದು ಹೋಗಿ ಸಂಜೀಗೆ ಬಂಡೆ ತಗಂಡ್ ಬರಿ” ಕಾಮಜ್ಜ ತಿಳಿಸಿದರು.
ಹಿಂದಿನ ಸಂಚಿಕೆ ಓದಿ: 22.ಜಂಗಮಯ್ಯರಲ್ಲಿ ಬಿಕ್ಕಟ್ಟು
ಭಾನುವಾರವೇ ಮನೆಯಲ್ಲಿ ಬುತ್ತಿ ಕಟ್ಟಲು ಹೆಣ್ಣುಮಕ್ಕಳಿಗೆ ಸೂಚನೆ ಕೊಟ್ಟು ಸೋಮವಾರ ಮೂಡಲಲ್ಲಿ ಬೆಳ್ಳಿ ಮೂಡುತ್ತಲೇ ಯಜಮಾನಪ್ಪರ ಮನೆಯಿಂದ ಎರಡುಗಾಡಿ, ಗೊಂಚಿಕಾರರ ಒಂದು ಗಾಡಿ ಮತ್ತು ಗೌಡ್ರ ಮನೆಯಿಂದ ಒಂದು ಗಾಡಿಯಲ್ಲಿ ಚಿಕ್ಕಪ್ಪ, ಗೊಂಚಿಕಾರರ ಬಸಯ್ಯ ಸಿದ್ದಿಂಗಪ್ಪ ಮತ್ತು ಕಾಮಜ್ಜರ ಚಿಕ್ಕಪ್ಪ, ಜೊತೆಗೆ ಮತ್ತೊಬ್ಬರು ಮತ್ತು ಹಿರಿಯಬೋವಿ ಗಾಡಿಯಲ್ಲಿ ಕುಳಿತು ಐಗಳ ಹೊಸಾ ಮನೆಗಳಿಗೆ ಸುಟ್ಟಕಲ್ ಬಂಡೆ ತರಲು ಹೊರಟಿದ್ದರು.
ಚಿಕ್ಕುಂಬೊತ್ತಿಗೆಲ್ಲಾ ಕೂಡುರಸ್ತಿ ತಲುಪಿ ಧರಂಪುರ ರಸ್ತೆಯಲ್ಲಿ ಸಾಗಿ ಮಸ್ಕಲ್‌ಗಿಂತ ಹಿಂದೆಯೇ ಇದ್ದ ಭೀಮನ ಬಂಡೆಗಣಿಯನ್ನು ತಲುಪಿ ಬುತ್ತಿಉಂಡಿದ್ದರು. ಬೋವಿಗಳ ಹಿರಿಯನನ್ನು ನೋಡಿದ ಬಂಡ ಸೀಳುವವರಲ್ಲಿ ಇಬ್ಬರು “ಮಾಮಾ ಬಾಗುಂಡವಾ ಇದೇಮಿ ಇಂಚೆಷ್ಟೇ ವಸ್ತಿ ಬಂಡ ಕಾವಲೇಮಿ”(ಮಾಮಾ ಚೆನ್ನಾಗಿದ್ದೀಯಾ, ಇದೇನು ಇಷ್ಟೊತ್ತಿಗೇ ಬಂದ್ರಿ, ಬಂಡೆ ಬೇಕಾಗಿತ್ತಾ?) ಎಂದು ವಿಚಾರಿಸಿಕೊಂಡಿದ್ದರು. “ಗೌಪಲ್ಲಿಲ ರಂಡು ಇಲ್ಲು ಕಡ್ತಾ ಉಂಡಾಮು ದನಿಕಿ ಐದಾರು ಬಂಡ ಕಾವಲಿಸಿಂದಿ, ದನಿಕಿ ಪೊದ್‌ಗಲೇ ವಚ್ಚೇಮು”(ಗೌನಳ್ಳಿಲಿ ಎರಡು ಮನೆ ಕಟ್ಟಾ ಇದೀವಿ, ಅದಕ್ಕೆ ಐದಾರು ಬಂಡೆ ಬೇಕಾಗಿದೆ. ಅದಕ್ಕೆ ಬೆಳಿಗ್ಗೆನೇ ಬಂದಿದ್ದೀವಿ) ಬೋವಿ ತಿಳಿಸಿದ ಕೂಡಲೇ ಕಲ್ಲು ಸೀಳುವ ಬೋವಿಗಳು ‘ಬರ್ರಿ ಸ್ವಾಮಿ ಕಲ್ಲು ನೋಡಬರಿ ಎಲ್ಲಾ ಅರ್ಧ ಅಡಿ ಮಂದ, ಒಂದಡಿ ಅಗಲ, ಆರಡಿ, ಎಂಟಡಿ ಉದ್ದ ಐದಾವೆ. ಮೊನ್ನೆ ದಿನ ಎಳೆ ರೂಪಾಯಿಗೆ ಒಂದು ಕಲ್‌ನಂಗೆ ಕೊಟ್ಟಿದ್ದೀವಿ.
ನಿಮ್ಮ ಎಷ್ಟು ಬಂಡೆ ಬೇಕು” ಅವರಲ್ಲೊಬ್ಬ ಮಾತಾಡಿದ. ಗೌನಳ್ಳಿ ಬೋವಿ “ಗೌಡ್ರೆ ಒಂದು ಮನಿಗೆ ಎಂಟಡಿವು ಎಲ್ಡ್ ಬಂಡೆ, ಆರಡಿ ಒಂದು ಬಂಡೆ ಬೇಕಾಗ್ತವೆ. ಈಗ ಅಂಗೆ ಯಾಪಾರ ಮಾಡಾನ” ಎಂದು ಸಣ್ಣದನಿಯಲ್ಲಿ ಮಾತಾಡಿ “ನಮಿಗೆ ಎಂಟಡಿ ಎಂಟು ಬಂಡೆ, ಆರಡಿವು ನಾಕು ಬಂಡೆ ಬೇಕು. ಅಪರಾ ತಪರಾ ಹೇಳಬ್ಯಾಡ್ರಿ ಯಾಪಾರ ಕುದುರಿಸಿರಿ” ಎಂದು ಕಲ್ಲು ಸೀಳುವವರ ಬಳಿ ಪ್ರಸ್ತಾಪಿಸಿದ. “ಮಾಮ ನೀಕಿ ಸೆಪ್ಟೆದೇಮುಂದಿ ನೀಕಂತಾ ತೆಲುಸು”(ಮಾಮ ನಿನ್ನೆ ಹೇಳೋದೇನಿದೆ. ನಿನಗೆಲ್ಲಾ ಗೊತ್ತು) ಅಂದು “ಗೌಡ್ರೆ ಒಂದು ಗಾಡಿಗೆ ಎಂಟಡಿವು ಎಲ್ಡ್ ಕಲ್ಲು, ಆರಡಿದು ಒಂದು ಕಲ್. ಒಟ್ಟು ಅನ್ನೆಲ್ಲು ರೂಪಾಯ್ ಕೊಟ್ಟು ಹಾಕ್ಕೊಂಡು ಹೋಗಿ” ಬಂಡೆ ತಗಂಡ್ ಬರಿ” ಕಾಮಜ್ಜ ತಿಳಿಸಿದರು.
ಭಾನುವಾರವೇ ಮನೆಯಲ್ಲಿ ಬುತ್ತಿ ಕಟ್ಟಲು ಹೆಣ್ಣುಮಕ್ಕಳಿಗೆ ಸೂಚನೆ ಕೊಟ್ಟು ಸೋಮವಾರ ಮೂಡಲಲ್ಲಿ ಬೆಳ್ಳಿ ಮೂಡುತ್ತಲೇ ಯಜಮಾನಪ್ಪರ ಮನೆಯಿಂದ ಎರಡುಗಾಡಿ, ಗೊಂಚಿಕಾರರ ಒಂದು ಗಾಡಿ ಮತ್ತು ಗೌಡ್ರ ಮನೆಯಿಂದ ಒಂದು ಗಾಡಿಯಲ್ಲಿ ಚಿಕ್ಕಪ್ಪ, ಗೊಂಚಿಕಾರರ ಬಸಯ್ಯ ಸಿದ್ದಿಂಗಪ್ಪ ಮತ್ತು ಕಾಮಜ್ಜರ ಚಿಕ್ಕಪ್ಪ, ಜೊತೆಗೆ ಮತ್ತೊಬ್ಬರು ಮತ್ತು ಹಿರಿಯಬೋವಿ ಗಾಡಿಯಲ್ಲಿ ಕುಳಿತು ಐಗಳ ಹೊಸಾ ಮನೆಗಳಿಗೆ ಸುಟ್ಟಕಲ್ ಬಂಡೆ ತರಲು ಹೊರಟಿದ್ದರು.
ಚಿಕ್ಕುಂಬೊತ್ತಿಗೆಲ್ಲಾ ಕೂಡುರಸ್ತಿ ತಲುಪಿ ಧರಂಪುರ ರಸ್ತೆಯಲ್ಲಿ ಸಾಗಿ ಮಸ್ಕಲ್‌ಗಿಂತ ಹಿಂದೆಯೇ ಇದ್ದ ಭೀಮನ ಬಂಡೆಗಣಿಯನ್ನು ತಲುಪಿ ಬುತ್ತಿಉಂಡಿದ್ದರು. ಬೋವಿಗಳ ಹಿರಿಯನನ್ನು ನೋಡಿದ ಬಂಡ ಸೀಳುವವರಲ್ಲಿ ಇಬ್ಬರು “ಮಾಮಾ ಬಾಗುಂಡವಾ ಇದೇಮಿ ಇಂಚೆಷ್ಟೇ ವಸ್ತಿ ಬಂಡ ಕಾವಲೇಮಿ”(ಮಾಮಾ ಚೆನ್ನಾಗಿದ್ದೀಯಾ, ಇದೇನು ಇಷ್ಟೊತ್ತಿಗೇ ಬಂದ್ರಿ, ಬಂಡೆ ಬೇಕಾಗಿತ್ತಾ?) ಎಂದು ವಿಚಾರಿಸಿಕೊಂಡಿದ್ದರು. “ಗೌಪಲ್ಲಿಲ ರಂಡು ಇಲ್ಲು ಕಡ್ತಾ ಉಂಡಾಮು ದನಿಕಿ ಐದಾರು ಬಂಡ ಕಾವಲಿಸಿಂದಿ, ದನಿಕಿ ಪೊದ್‌ಗಲೇ ವಚ್ಚೇಮು”(ಗೌನಳ್ಳಿಲಿ ಎರಡು ಮನೆ ಕಟ್ಟಾ ಇದೀವಿ, ಅದಕ್ಕೆ ಐದಾರು ಬಂಡೆ ಬೇಕಾಗಿದೆ. ಅದಕ್ಕೆ ಬೆಳಿಗ್ಗೆನೇ ಬಂದಿದ್ದೀವಿ) ಬೋವಿ ತಿಳಿಸಿದ ಕೂಡಲೇ ಕಲ್ಲು ಸೀಳುವ ಬೋವಿಗಳು ‘ಬರ್ರಿ ಸ್ವಾಮಿ ಕಲ್ಲು ನೋಡಬರಿ ಎಲ್ಲಾ ಅರ್ಧ ಅಡಿ ಮಂದ, ಒಂದಡಿ ಅಗಲ, ಆರಡಿ, ಎಂಟಡಿ ಉದ್ದ ಐದಾವೆ. ಮೊನ್ನೆ ದಿನ ಎಳೆ ರೂಪಾಯಿಗೆ ಒಂದು ಕಲ್‌ನಂಗೆ ಕೊಟ್ಟಿದ್ದೀವಿ.
ನಿಮ್ಮ ಎಷ್ಟು ಬಂಡೆ ಬೇಕು” ಅವರಲ್ಲೊಬ್ಬ ಮಾತಾಡಿದ. ಗೌನಳ್ಳಿ ಬೋವಿ “ಗೌಡ್ರೆ ಒಂದು ಮನಿಗೆ ಎಂಟಡಿವು ಎಲ್ಡ್ ಬಂಡೆ, ಆರಡಿ ಒಂದು ಬಂಡೆ ಬೇಕಾಗ್ತವೆ. ಈಗ ಅಂಗೆ ಯಾಪಾರ ಮಾಡಾನ” ಎಂದು ಸಣ್ಣದನಿಯಲ್ಲಿ ಮಾತಾಡಿ “ನಮಿಗೆ ಎಂಟಡಿ ಎಂಟು ಬಂಡೆ, ಆರಡಿವು ನಾಕು ಬಂಡೆ ಬೇಕು. ಅಪರಾ ತಪರಾ ಹೇಳಬ್ಯಾಡ್ರಿ ಯಾಪಾರ ಕುದುರಿಸಿರಿ” ಎಂದು ಕಲ್ಲು ಸೀಳುವವರ ಬಳಿ ಪ್ರಸ್ತಾಪಿಸಿದ. “ಮಾಮ ನೀಕಿ ಸೆಪ್ಟೆದೇಮುಂದಿ ನೀಕಂತಾ ತೆಲುಸು”(ಮಾಮ ನಿನ್ನೆ ಹೇಳೋದೇನಿದೆ. ನಿನಗೆಲ್ಲಾ ಗೊತ್ತು) ಅಂದು “ಗೌಡ್ರೆ ಒಂದು ಗಾಡಿಗೆ ಎಂಟಡಿವು ಎಲ್ಡ್ ಕಲ್ಲು, ಆರಡಿದು ಒಂದು ಕಲ್. ಒಟ್ಟು ಅನ್ನೆಲ್ಲು ರೂಪಾಯ್ ಕೊಟ್ಟು ಹಾಕ್ಕೊಂಡು ಹೋಗಿ” ಗೌಡರ ಮನೆಯಿಂದ ಇಪ್ಪತ್ತು ಸೇರು ರಾಗಿ ಸಂದಾಯವಾಗಿತ್ತು, ಆಗ ಆತ “ನಾಳೆಯಿಂದ ಹೊಸ ಮನೆ ಕೆಲ್ಲಾ ಆರಂಭ ಮಾಡಾನೇ?” ಎಂದು ಕೇಳಿದ್ದ. “ಒಂದು ವಾರ ತಡಿ ಮುಟ್ಟಿಲ್ಲಾ ಜತೆಯಾಗಿ” ಗೌಡರು ಸೂಚನೆ ನೀಡಿದ್ದರು.
ಮರ ಕೊಯ್ಯುವವರ ಕೆಲಸ ನಿರಾತಂಕವಾಗಿ ಸಾಗಿತ್ತು. ಊರ ಜನರಿಗೆ ಉತ್ತಮ ರಂಜನೆ ದೊರೆಯುವ ಸ್ಥಳವಾಗಿ ನಾಕುಣಿಸೆ ಮರಗಳ ನೆರಳು ಸಿಕ್ಕಿತ್ತು.
ಕೆಲವರು ದೊಡ್ಡುಂಬೊತ್ತಿಗೆ ಊಟ ಮಾಡಿ ಯಾವುದೋ ನೆವ ಹೇಳಿಕೊಂಡು ನಾಕುಣಿಸೆ ಮರಗಳೆಡೆಗೆ ಆಗಮಿಸಿದರೆ, ಕೆಲವರು ನೀರಿನ ಅಡ್ಡೆಯಲ್ಲಿ ಎರಡು ಬಿಂದಿಗೆಗಳನ್ನಿಟ್ಟುಕೊಂಡು ಊರ ಬಾವಿ ಬಳಿಗೆ ತೆರಳುವುದು ಬಿಟ್ಟು ಮರ ಕೊಯ್ಯುವಲ್ಲಿಗೆ ಬರುತ್ತಿದ್ದರು. ಇಲ್ಲಿ ಸ್ವಲ್ಪ ಹೊತ್ತು ಅಲ್ಲಿ ಸೇರಿದ್ದವರ ಜತೆ ಮಾತಾಡಿ ನೀರಿಗೆ ಹೋಗುತ್ತಿದ್ದರು. ಕೆಲವು ಯುವಕರು ಗುಂಡಿಯಲ್ಲಿ ಗರಗಸ ಎಳೆಯುವ ಯುವಕರ ಸಲಿಗೆ ಬೆಳೆಸಿಕೊಂಡು ಅವರ ಜತೆ ತಾವೂ ಗರಗಸ ಎಳೆಯುವುದನ್ನು ರೂಢಿಸಿಕೊಂಡಿದ್ದರು. ಊರಿನ ಯುವಕರು ಗರಗಸ ಎಳೆಯುವಾಗ ಇವರು ವಿಶ್ರಾಂತಿ ಪಡೆಯುತ್ತಿದ್ದರು.
ಮರಕೊಯ್ಯುವವರು ಊರಿಗೆ ಬಂದ ಹದಿನೈದು ದಿನಕ್ಕೆಲ್ಲಾ ಊರಿನ ಬಹುಜನಕ್ಕೆ ಪರಿಚಯವಾಗಿದ್ದರು. ಈ ಊರಿನ ಜನರ ಸಲುಗೆ, ಅದರಲ್ಲೂ ಯುವಕರ ಉತ್ಸಾಹಗಳನ್ನು ಮರಕೊಯ್ಯುವವರು ತಾವು ಕೆಲಸ ಮಾಡಿದ ಯಾವ ಊರಲ್ಲೂ ಕಂಡಿರಲಿಲ್ಲ. ಜತೆಗೆ ಇವರಿಗೆ ಮೂರು ಹೊತ್ತು ಊಟ ನೀಡುತ್ತಿದ್ದ ಗೌಡರು, ಗೊಂಚಿಕಾರರು ಮತ್ತು ಯಜಮಾನ ಕಾಮಜ್ಜರಂಥಾ ಉದಾರಿಗಳನ್ನು ಕಂಡಿರಲಿಲ್ಲ. ಈ ಊರಿಗೆ ಬಂದಿರುವ ಜಂಗಮಯ್ಯರಿಗೆ ಉಚಿತವಾಗಿ ಮಾಳಿಗೆ ಮನೆ ಕಟ್ಟಿಕೊಡುವ ವಿಚಾರವೇ ಅವರಿಗೆ ಸೋಜಿಗದ ಸಂಗತಿಯಾಗಿತ್ತು. ‘ಅಂತೂ ಇಂಥದೊಂದು ಊರು ನಮ್ಮ ಊರ ಹತ್ತಿರದಲ್ಲೇ ಇರುವುದು ನಮಿಗೆ ತಿಳಿದೇ ಇರಲಿಲ್ಲ’ ಎಂದು ವಿಸ್ಮಯಗೊಂಡಿದ್ದರು.
ಮರಕೊಯ್ಯುವವರು ಕುತೂಹಲದಿಂದ ಅರ್ಧಕಟ್ಟಿದ್ದ ಎರಡು ಮಾಳಿಗೆ ಮನೆಗಳನ್ನು ನೋಡಿ ಬಂದರು. ಊರಿನ ಜನ ಉಚಿತವಾಗಿ ಮನೆ ಕಟ್ಟಿಕೊಡುವುದನ್ನು ತೀರಾ ಸಾಧಾರಣ ವಿಷಯ ಎಂಬಂತೆ ಭಾವಿಸಿದ್ದರು.