ಸಂಡೆ ಸ್ಪಷಲ್
Kannada Novel: 13. ಮತ್ತೆರಡು ಬಂಡಿ ತಂದರು
CHITRADURGA NEWS | 15 DECEMBER 2024
ಜಂಗಮಯ್ಯರು ಗೌನಹಳ್ಳಿಗೆ ಆಗಮಿಸಿದ ದಿನವೇ ಸಿದ್ದಣ್ಣ ಮತ್ತೆ ಮೂವರು ತಲಾ ಐವತ್ತು ರೋಕಡಿಗಳನ್ನು ಇಮ್ಮಣಿಗೆ ಸೇರಿಸಿ ಸೊಂಟಕ್ಕೆ ಸುತ್ತಿಕೊಂಡು ಗುಬ್ಬಿಗೆ ಹೊಸಾ ಗಾಡಿ ತರಲು ಹೊರಟಿದ್ದರು. ಹಿರಿಯೂರಿನಲ್ಲಿ ಹಬೆಯ ಬಸ್ ಹತ್ತಿ ತುಮಕೂರಲ್ಲಿಳಿದಾಗ ಹಗಲೂಟದೊತ್ತು ಮಾರಿತ್ತು. ಊಟಕ್ಕೆ ಕುಳಿತರೆ ತಡವಾಗುತ್ತದೆಂದು ಗುಬ್ಬಿಗೆ ಹೋಗಲು ಜಟಕಾಗಾಡಿಯನ್ನು ಹುಡುಕಿದರು.
ಗುಬ್ಬಿ ಹೆಸರು ಹೇಳಿದ ಕೂಡಲೇ ಹಳೆಯ ಮತ್ತು ಪರಿಚಯದ ಜಟಕಾ ಸಾಬಿ ಮುಗುಲ್ನಗುತ್ತಾ ಹತ್ತಿರ ಬಂದು “ಬರ್ರಿ ಸ್ವಾಮಿ ಗುಬ್ಬಿಗ್ ಬಿಟ್ಟು ವಾಪಾಸ್ ಬರೋದು ಅಲ್ವೆ, ನಾನು ಬರ್ತೀನಿ” ಎಂದು ತಿಳಿಸಿ ತನ್ನ ಕುದುರೆ ಗಾಡಿ ತಂದು ನಿಲ್ಲಿಸಿದ. ಕೂಡಲೇ ಇವರೆಲ್ಲಾ ತಮ್ಮ ಬುತ್ತಿಗಂಟು ಸಮೇತ ಹತ್ತಿ ಕುಳಿತರು.
“ಏನಪ್ಪಾ ನಿನ್ನ ಕುದುರೆಗೆ ದಾರಿ ಗೊತ್ತಿರೋಂಗಿದೆ. ಎಷ್ಟು ಚೆಂದಾಗಿ ಓಡ್ತಾ ಇದೆ”. ಸಿದ್ದಣ್ಣ ತಾರೀಪ್ ಮಾಡಿದ. “ನಿಮ್ಮನ್ನ ಅಲ್ಲಿ ಇಳಿಸಿ ನಾನು ವಾಪಾಸ್ ಬರಬೇಕು ನೋಡ್ರಿ” ಜಟಕಾ ಸಾಬಿ ತಿಳಿಸಿ ಗಾಡಿ ನಡೆಸಿದ್ದ. ಗುಬ್ಬಿ ತಲುಪಿ ಬಡಗಿಯರ ಕಾರ್ಯಾಗಾರಕ್ಕೆ ಹೋದಾಗ ಅಲ್ಲಿ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತಲ್ಲೀನರಾಗಿದ್ದರು. ಹತ್ತಿರದ ಚಪ್ಪರದಡಿಯಲ್ಲಿ ಎರಡು ಹೊಸಾ ಗಾಡಿಗಳು ಸಿದ್ದವಾಗಿ ನಿಂತಿದ್ದವು. ಸಾಮಾನು ಇಳಿಸಿಕೊಂಡು ಜಟಕಾಸಾಬಿಯನ್ನು ಕಳಿಸಿದ ಕೂಡಲೇ ಇವರಿಗೆ ಹಸಿವು ಕಾಣಿಸಿಕೊಂಡಿತ್ತು. ಬಡಗೀರತ್ರ ಕುಡಿಯುವ ನೀರು ಪಡೆದು ಬಡಗೀರಿಗೆ ತಿಳಿಸಿ ರೊಟ್ಟಿ ಗಂಟು ಬಿಚ್ಚಿದರು.
ಊಟ ಮುಗಿಸಿ ಬಡಗಿಗಳ ಕಾರ್ ನಿಪುಣತೆಯನ್ನು ಸ್ವಲ್ಪ ಹೊತ್ತು ನೋಡಿದರು. ಹಿರಿಯ ಬಡಗಿ ರಸಮಟ್ಟ ಇಟ್ಟುಕೊಂಡು ಗುಂಭಕ್ಕೆ ಆರೇಕಾಲು ರಂಧ್ರದ ಗುರುತು ಮಾಡುತ್ತಿದ್ದರು. ಆಗರದಲ್ಲಿ ಮೊದಲು ಎರಡು ಸಣ್ಣ ರಂಧ್ರಗಳನ್ನು ಕೊರೆದುಕೊಂಡು, ಅವುಗಳ ಸುತ್ತಾ ಚೌಕಾಕಾರದಲ್ಲಿ ಉಳಿಯಿಂದ ಗುರುತು ಮಾಡುತ್ತಿದ್ದರು. ಒಂದು ಆರೇಕಾಲಿನ ರಂಧ್ರಕ್ಕೂ ಇನ್ನೊಂದರ ರಂಧ್ರದ ಗುರುತಿಗೂ ಸಮಾನ ದೂರ ಇಟ್ಟುಕೊಂಡು ಪದ್ದು ತೋಡುತ್ತಿದ್ದರು. ಗೌನಹಳ್ಳಿಯ ಸಿದ್ದಣ್ಣ ಮತ್ತು ಉಳಿದ ಮೂವರನ್ನು ಕಂಡು ಚಪ್ಪರದ ಕಡೆ ಕೈ ತೋರಿಸಿ ‘ನಿಮ್ಮ ಬಂಡಿ ಅಲ್ಲಿದ್ದಾವೆ. ಹೋಗಿ ನೋಡಿರಿ’ ಎಂಬಂತೆ ಸೂಚಿಸಿದ್ದರು.
ಹಿಂದಿನ ಸಂಚಿಕೆ ಓದಿ:1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಇವರೆಲ್ಲಾ ಚಪ್ಪರದ ಬಳಿಗೆ ಹೋಗಿ ಹೊಸಾ ಗಾಡಿಗಳ ಆರೇಕಾಲು, ಹೊಟ್ಟೆಮರಗಳನ್ನು ಕೈಯಿಂದ ಬಡಿದು ಟಂ ಟಂ ಸದ್ದು ಕೇಳಿ ಸಂತಸಗೊಂಡಿದ್ದರು. ಸ್ವಲ್ಪ ಹೊತ್ತಿನಲ್ಲೇ ಬಡಗಿಗಳು ಕೆಲಸ ಮಾಡುವುದು ನಿಂತಿತು. ಹಿರಿಯ ಬಡಗಿ ಹತ್ತಿರದ ಮಂಚದ ಮೇಲೆ ಅಡ್ಡಾಗಿ ಕಣ್ಣು ಮುಚ್ಚಿಕೊಂಡಿದ್ದರು. ಸ್ವಲ್ಪ ಹೊತ್ತಿನಲ್ಲಿ ಚೆನ್ನಬಸಣ್ಣನ ಆಗಮನವಾಯಿತು. “ನೀವು ಬಂದಿರಬೇಕು ಅಂದುಕೊಂಡು ಇಲ್ಲಿಗೆ ಬಂದೆ. ಬೆಳಿಗ್ಗೆ ಗಾಡಿ ಪೂಜೆ ಮಾಡಿಕೊಂಡು ಮುಂಚೇನೇ ಹೊರಟು ಬಿಡೋನಾ. ಕಣ್ಣಗೆ ಬೆಳಕಿದ್ದಂಗೆ ‘ಚಿಕ್ಕನಹಳ್ಳಿಗೆ ತಲುಪಬೌದು. ಎತ್ತುಗಳು ಸುಧಾರಿಸಿಗೆತ್ತತ್ತವೆ” ಅಂದಿದ್ದ. ಇವರೂ ತಲೆ ಹಾಕಿದ್ರು, ಹೊಸಾ ಗಾಡಿ ಕೆಳಗೆ ಮೇಲೆ ಮುಂದೆ ಎಲ್ಲಾ ನೋಡಿ ಮೂಕು ಎತ್ತಿದರೆ ಗಾಡಿ ತಕ್ಕಡಿಯಂಗೆ ನಿಂತುಕೊಂಡಿತು. ಅದನ್ನು ನೋಡಿ ಗಾಡಿ ಮಾಡಿರುವ ಮಾಟವನ್ನು ಮೆಚ್ಚಿಕೊಂಡಿದ್ದರು.
ಅದೂ ಇದೂ ಮಾತಾಡ್ತಾ ಗುಬ್ಬಿ ಪೇಟೆಯಲ್ಲಿ ತಿರುಗಾಡಿ ಚೆನ್ನಬಸವೇಶ್ವರನ ಗುಡಿಗೆ ತೆರಳಿದ್ದರು. ಪೂಜಾರರು ಇನ್ನೂ ಬಂದಿರಲಿಲ್ಲ. ದೇವಸ್ಥಾನದ ಸುತ್ತಾ ಮುತ್ತ ಓಡಾಡಿ ಬಾಗಿಲ ಬಳಿ ಕುಳಿತಿದ್ದರು. ಅಷ್ಟೊತ್ತಿಗೆ ಪೂಜಾರರ ಆಗಮನವಾಗಿತ್ತು. ಆಗಮಿಸುತ್ತಲೇ ಇವರನ್ನು ಕಣ್ಣು ಸಣ್ಣಗೆ ಮಾಡಿ ನೋಡುತ್ತಾ “ನೀವು ಮೊದಲು ಇಲ್ಲಿಗೆ ಬಂದವರಲ್ಲವೇ? ಹೊಸಾ ಗಾಡಿ ಒಯ್ಯಲು ಬಂದಿದ್ದೀರಾ. ನಿಮ್ ಕಡೆ ಮಳೆಬೆಳೆ ಚೆನ್ನಾಗಿ ಆಗಿರಬೇಕು. ಇಲ್ಲಿ ನಾವು ಮೊನ್ನೆ ಮೊನ್ನೆವರೆಗೂ ವರ್ಷಕ್ಕೆ ಎಲ್ಡ್ ಭತ್ತ ಬೆಳೀತಿದ್ವಿ, ಈಗ ಮಳೆಗಾಲದಾಗೂ ಕಷ್ಟ” ಅಂತ ಕೈಯಾಡಿಸುತ್ತಾ ಮಾತಾಡಿದ್ದರು.
“ನಮ್ ಕಡೆ ಮಳೆ ಬೀಳೋದು ಅಷ್ಟಕ್ಕಷ್ಟೆ. ನಮ್ಮೂರ ಮುಂದೆ ಬಸವನಳ್ಳ ಅತ್ತ ಹರಿಯುತ್ತೆ. ದೂರದೂರಾಗೆ ಎಲ್ಲೋ ಮಳೆಯಾದ್ರೆ ನಮ್ಮೂರ್ತಾಗೆ ಜಮಾನ್ನಗೆಲ್ಲಾ ಅಳ್ವಿಕೆಂಡ್ ಈ ಹಳ್ಳ ಹರಿಯುತ್ತೆ. ನಮ್ಮ ಊರ ಅರ್ಧಕ್ಕರ್ಧ ಜನ ಇದರಿಂದ ಬಿತ್ತಿ ಬೆಳೀತಾರೆ. ಈವಾಗೇನೋ ಇಂಗೆ ನಡೀತೈತೆ, ಮುಂದೆಂಗೋ ಗೊತ್ತಿಲ್ಲ”. ಸಿದ್ದಣ್ಣ ಮಾತಾಡಿ ತಮ್ಮ ಅದೃಷ್ಟದ ಹಳ್ಳದ ಬಗ್ಗೆ ತಿಳಿಸಿದ್ದರು.
ಪೂಜಾರರಿಗೆ ಅತ್ಯಾಶ್ಚರವಾಗಿತ್ತು. “ಅದೆಂಗ್ರೀ ಜಮೀನ್ನಗೆಲ್ಲಾ ಹರಿಯುತ್ತೆ? ಅಂದ್ರೆ ನೀರು ಹರಿಯಾಕೆ ಹಳ್ಳ ಇಲ್ವೆ? ಅದೆಷ್ಟು ದೂರದಿಂದ ಹರಿಯುತ್ತೋ ಮಾರಾಯ, ಅದೇನು ಹಳ್ಳವೋ ಹೊಳೆನೋ” ಅಂತ ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದರು. “ಬಾಳ ದೂರದಿಂದ ಹರಕಂಡ್ ಬರುತ್ತೆ. ಅದನ್ನ ಬಸವನ ಹೊಳೆ ಅಂತಾಲೂ ಕರೀತಾರೆ”. ಸಿದ್ದಣ್ಣನ ಜತೆಗಾರ ತಿಳಿಸಿದ್ದ. “ಅಂತೂ ನೀವು ಅದೃಷ್ಟವಂತರಪ್ಪಾ” ಪೂಜಾರರು ಮಾತಾಡಿ ಪೂಜಾ ಕೈಂಕಯ್ಯವನ್ನು ಆರಂಭಿಸಿದ್ದರು.
ಹಿಂದಿನ ಸಂಚಿಕೆ ಓದಿ:2. ಕರುವುಗಲ್ಲು ನೆಟ್ಟು ಊರು ಕಟ್ಟಿದರು
ಗೌನಳ್ಳಿಯವರೆಲ್ಲಾ ಮಂಗಳಾರತಿ ಆಗುವ ತನಕ ಗುಡಿಯಲ್ಲಿದ್ದು ಚೆನ್ನಬಸವೇಶ್ವರನ ಪ್ರಸಾದದೊಂದಿಗೆ ಬಡಗೀರ ಕುಟೀರಕ್ಕೆ ಹಿಂತಿರುಗಿದ್ದರು. ಹಿರಿಯ ಬಡಗಿ “ನಾವು ಊಟ ಮಾಡ್ತೀವಿ. ನೀವು ಸಂಜೇಲಿ ರೊಟ್ಟಿ ಬುತ್ತಿ ಉಂಡಿದೀರಿ. ಈಗ ಎಂಗ್ ಮಾಡ್ತೀರಾ” ಅಂತ ಇವರನ್ನು ವಿಚಾರಿಸಿದ್ದರು. ಸಿದ್ದಣ್ಣನ ತಂಡದವರಿಗೆ ಊಟ ಬೇಡವಾಗಿತ್ತು. “ಅಷ್ಟೋರೇ ನೀವು ಎಲ್ಡ್ ರೊಟ್ಟಿ ತಗಂಡ್ ಬಿಡಿ. ಬುತ್ತಿ ಅನ್ನ ಕೆಂಪಿಂಡಿ ರುಚಿ ನೋಡೀರಂತೆ” ಸಿದ್ದಣ್ಣ ಕಕುಲಾತಿಯಿಂದ ಕೋರಿಕೊಂಡಿದ್ದರು. “ಆಯಿತು. ಎರಡು ರೊಟ್ಟಿ ಚಟ್ಟಿ ಕೊಡಿ” ಎಂದು ಕೇಳಿ ಪಡೆದು ಊಟ ಮಾಡಿದ್ದರು.
ಎತ್ತಿನ ಚೆಂಬಸಣ್ಣ ಆಗಮಿಸಿದ್ದ. ಆತನಿಗೂ ರೊಟ್ಟಿ ಕೆಂಪಿಂಡಿ ನೀಡಿ ಆಮೇಲೆ ಸ್ವಲ್ಪ ಬುತ್ತಿ ಅನ್ನವನ್ನು ನೀಡಿದ್ದರು. ಊಟ ಮುಗಿದ ಬಳಿಕ “ಬೆಳಿಗ್ಗೆ ಮುಂಚೇನೇ ಹೊರಡೋಣ” ಎಂದು ಮಾತಾಡಿ ಆತ ಹೋಗಿದ್ದರು. ನಾಲ್ಕೂ ಜನ ಹೊಸಾ ಬಂಡಿಗಳ ಮೇಲೆ ಮಲಗಿ ನಿದ್ದೆ ಮಾಡಿದ್ದರು. ಬೆಳಿಗ್ಗೆ ಎದ್ದು ಮಾಮೂಲಿನಂತೆ ಹೊಲಗಳಲ್ಲಿ ಸುತ್ತಾಡಿ ಬಡಗೀರ ಸ್ಥಳಕ್ಕೆ ಒಂತಿ- ರುಗಿದ್ದರು. ಹಿರಿಯ ಬಡಗಿ ಪೂಜೆ ಮಾಡಿ, ಅವರ ಸಹಾಯಕರಿಗೆ ಹೇಳಿ ಚಪ್ಪರದಡಿಯಿಂದ ಹೊಸ ಗಾಡಿಗಳನ್ನು ಬಯಲಿಗೆ ತರಿಸಿದರು.
ಸಿದ್ದಣ್ಣ ಸಂಗಡಿಗರಿಬ್ಬರು ಅಂಗಡಿಗೆ ಹೋಗಿ ಪೂಜಾ ಸಾಮಗ್ರಿ ಜತೆಗೆ ಬಾಳೆಹಣ್ಣು, ಮಂಡಕ್ಕಿ, ತೆಂಗಿನಕಾಯಿ, ವೀಳ್ಳೇದೆಲೆ, ಅಡಿಕೆ ಮುಂತಾದುವನ್ನು ತಂದರು. ಬಡಗಿಗಳು ಮತ್ತು ಗಾಡಿಗಳನ್ನು ಕೊಂಡಿದ್ದವರೂ ಭಕ್ತಿಯಿಂದ ಗಾಡಿಗಳನ್ನು ಪೂಜಿಸಿದ್ದರು. “ಇವು ರಥಗಳಪ್ಪಾ ಯಾವ ಕಾರಕ್ಕೆ ಹೊರಡಬೇಕಾದರೂ ಪೂಜೆ ಮಾಡಿ ಎತ್ತಿನ ಕೊಂಬಿಗೆ ವೀಳೇದೆಲೆ ಸಿಗಿಸಿ ನೊಗ ಎತ್ತಬೇಕು”. ಅಂತ ಹಿರಿಯ ಬಡಗಿ ಸೂಚನೆ ನೀಡಿದ್ದರು.
ಅಷ್ಟೊತ್ತಿಗೆ ಚೆಂಬಸಣ್ಣ ಮತ್ತು ಹುಲ್ಲಿನ ಹೊರೆ ಹೊತ್ತು ಎರಡು ಜೊತೆ ಎತ್ತಿನ ಸಂಗಡ ಅವನ ಸಂಗಡಿಗರು ಆಗಮಿಸಿದರು. ಸಿದ್ದಣ್ಣ ಮತ್ತು ಅವರ ತಂಡ, ಎಲ್ಲರ ಸಮ್ಮುಖದಲ್ಲಿ ವೀಳೇದೆಲೆ ಅಡಿಕೆಯಲ್ಲಿ ಬೆಳ್ಳಿ ರೋಕಡಿಗಳನ್ನು ಇಟ್ಟು ಹಿರಿಯ ಬಡಗಿಯವರಿಗೆ ನೀಡಿದರು. ಅವರು ಸಮಾಧಾನದಿಂದ ರೂಪಾಯಿಗಳನ್ನು ಪಡೆದುಕೊಂಡು “ಇನ್ನೊಂದು ತಿಂಗಳಿಗೆ ಬಂದು ಇನ್ನೆರಡು ಗಾಡಿ ಹೊಡಕೊಂಡು ಹೋಗಿರಪ್ಪಾ. ಈಗ ಊಟ ಮಾಡಿರಿ, ಮುಂದೆ ಹಾದ್ಯಾಗೆ ನಿಮಿಗೆ ಸಜ್ಜಾಗಲ್ಲ” ಎಂದು ತಿಳಿಸಿ ಮನೆಯೊಳಗೆ ಹೋಗಿ ಹಣವನ್ನು ತಾಬಂದು ಮಾಡಿ ಬಂದರು. ಗೌನಳ್ಳಿ ಜನ “ಚಿಕ್ಕುಂಬೊತ್ತಾಗೈತೆ ಉಂಡು ಬಿಡಾನ” ಎನ್ನುತ್ತಾ ರೊಟ್ಟಿ ಗಂಟನ್ನು ಬಿಚ್ಚಿದರು. ಗೌನಳ್ಳಿಯವರಲ್ಲದೆ ಚೆಂಬಸಣ್ಣ ಮತ್ತು ಅವನ ಮೂವರು ಸಂಗಡಿಗರಿಗೂ ಎರಡೆರಡು ಸಜ್ಜೆರೊಟ್ಟಿ ಕೆಂಪಿಂಡಿ ಮತ್ತು ತುಪ್ಪವನ್ನು ಹಂಚಿದರು.
ಹಿಂದಿನ ಸಂಚಿಕೆ ಓದಿ:3. ಎಲ್ಲರೂ ಲಿಂಗವಂತರಾದರು
ಹಿರಿಯ ಬಡಗಿಯವರು ಸಹಿ ಮಾಡಿ ತಂದಿದ್ದ ರಹದಾರಿ ಪತ್ರವನ್ನು ಸಿದ್ದಣ್ಣ ಕೈಗಿಡುತ್ತಾ “ನಾನು ಮೈ ತೊಳೆದು ದೇವರ ಪೂಜೆ ಮಾಡಬೇಕು. ಒಂದೆಲ್ಡ್ ರೊಟ್ಟಿ, ಕೆಂಪಿಂಡಿ ಕೊಟ್‌ಬಿಡಿ. ಆಮೇಲೆ ತಿಂತೀನಿ” ಎನ್ನುತ್ತಾ ಹೊಸಾ ಗಾಡಿಗಳ ಬಳಿಗೆ ಹೋದರು. ಗಾಡಿಗಳನ್ನು ತಮ್ಮ ಮಕ್ಕಳಂತೆ ಸವರಿ ಕಣ್ಣುಂಬಿಸಿಕೊಂಡು “ನೋಡ್ರಪ್ಪಾ ಗಾಡಿ ಅಚ್ಚಿಗೆ ಎಣ್ಣೆ ಹಚ್ಚದಲೆ ಗಾಡಿ ಹೂಡಬಾರು, ಹುಡುಗರು ಪುಂಡರ ಕೈಗೆ ಗಾಡಿ ಹೊಡೆಯಕ್ಕೊಡಬೇಡಿ. ಹಾದಿ ಇಲ್ಲದ ಕಡೆ, ಕಲ್ಲು ಗುಂಡಿ ಇರೋಕಡೆ ಗಾಡಿ ಹೊಡದಾಡ ಬ್ಯಾಡ್ರಿ ಆರು ಚೀಲ ಕಾಳು, ದವಸ ಹೇರಬೌದು. ಗಾಡಿ ತಿರಿಗಿಸಬೇಕಾದ್ರೆ ನಿಧಾನವಾಗಿ ನೆಟ್ಟಗೆ ಮುಂದಕ್ಕೋಗಿ ಎತ್ತುಗಳ ತಿರಿಗಿಸಿರಿ.
ಒಂದ್ ಸರ್ತಿ ಗಾಡಿ ಉಳಿಕೆಂದ್ದೂ ಆಂದ್ರೆ ಗಾಲಿ, ಗುಂಭಕ್ಕೆ ಪೆಟ್ಟು ಬೀಳುತ್ತೆ, ಆರೇಕಾಲು ಸಡಿಲ ಆದ್ರೆ ಬಡಗೀರತ್ರ ಗಾಡಿ ಒಯ್ದು ಗುಂಭ ಮತ್ತು ಆರೇಕಾಲು ಬಿಗಿ ಮಾಡಿಸಬೇಕು. ದೇವು ಒಳ್ಳೇದು ಮಾಡ್ತನೇ ಹೋಗಿ ಬರಿ;” ಎಂದು ತುಂಬು ಮನಸ್ಸಿನಿಂದ ಹಾರೈಸಿದ್ದರು. ಆಗ ತಾನೆ ಕೆಲಸಕ್ಕೆ ಬಂದಿದ್ದ ಕೆಲಸಗಾರರಿಗೆ ತೆಂಗಿನಕಾಯಿ ಚೂರು, ಬೆಲ್ಲ ಮಂಡಕ್ಕಿ ಹಂಚಿ ಎಲ್ಲರಿಗೂ ಕೈ ಮುಗಿದು ಗೌನಳ್ಳಿಯವರೂ ಮತ್ತು ಚೆಂಬಸಣ್ಣನ ಸಂಗಡಿಗರು ಗಾಡಿ ಏರಿದರು. ಸೀರಾಕ್ಕೆ ಹೋಗುವ ದಾರಿಯಲ್ಲಿ ಗಾಡಿಗಳು ಹೊರಟಿದ್ದವು.
ಚೆಂಬಸಣ್ಣ ಮತ್ತು ಅವನ ಸಂಗಡಿಗರಿಗೆ ಗೌನಳ್ಳಿ ತುಂಬಾ ಸುಂದರ ಊರಾಗಿ ಕಂಡಿತ್ತು. “ಮೊದಲ ಸರ್ತಿ ನಿಮ್ಮೂರಿಗೆ ಬಂದಾಗ ಎರಡು ಗುಡ್ಡಗಳ ನಡುವಿನ ಬಯಲಿನಲ್ಲಿ ಊರು ಕಟ್ಟಿದಾರೆ. ಎಂಥಾ ಸುಂದರ ಸ್ಥಳ, ಜಮಾನುಗಳು ಬಾಳ ಚೆನ್ನಾಗಿದಾವೆ. ಅದೇನು ಗಿಡಮರ ಸಾಕಿದ್ದೀರಿ ಮಾರಾಯೆ” ಅಂತ ತಾರೀಪ್ ಮಾಡಿದ್ದರು. ಅವರೂರ ಬಡಗೀರ ಬಗ್ಗೆ ಹೇಳುತ್ತಾ “ಈ ಪ್ರದೇಶದಾಗೆಲ್ಲಾ ಗುಬ್ಬಿ ಗಾಡಿ ಅಂದ್ರೆ ಬಾಳ ಹೆಸರುವಾಸಿ. ಈ ಬಡಗೀರು ಅವರ ತಾತನ ಕಾಲದಿಂದ ಗಾಡಿ ಮಾಡ್ಕಂಡು ಬಾ ಇದಾರೆ.
ಎಲ್ಲಾ ಸಾಗುವಾನಿ ಮರದ್ದೇ ಮುಟ್ಟು. ಇದನ್ನೆಲ್ಲಾ ತರೀಕೆರೆಯಿಂದ ರೈಲಲ್ಲಿ ತಾರೆ. ಗಾಡಿ ಅಚ್ಚು ಕೂಡಾ ಅಲ್ಲಿಂದ್ದೇ ತಡ್ತಾರೆ. ಆದ್ರೆ ಅದನ್ನ ಕೆಂಪಗೆ ಕಾಯ್ದೆ ಅಚ್ಚಿಂದೇ ಒಂದು ಅಳತೆ ಮತ್ತೆ ಅದರ ಲೆಕ್ಕಾಚಾರಕ್ಕೆ ಅದನ್ನ ದುಂಡಾಡ್ತಿದ ಮೇಲೆ ತೂಕ ಮಾಡ್ತಾರೆ. ಎಲ್ಲಾ ಅಳತೆ ಮತ್ತೆ ತೂಕದ ಪ್ರಕಾರ ಇಲ್‌ದಿದ್ರೆ ಇವರು ಮಾಡಿದ ಎಲ್ಲಾ ಗಾಡಿ ಖರ್ಚಾಗತಿದ್ವಾ?”, ಚೆಂಬಸಣ್ಣ ಎದೆಯುಬ್ಬಿ ಮಾತಾಡಿದ್ದ.
ಗಾಡಿ ಅಚ್ಚಿಗೆ ಎಣ್ಣೆ ಸವರಿದ್ದರಿಂದ ಗಾಡಿ ಸರಾಗವಾಗಿ ಹೋಗುತ್ತಿದ್ದವು. ಸಿದ್ದಣ್ಣರಿಗೆ ಈ ಗಾಡಿ ಒಯ್ಯುವ ಕಾರ್ ಒಂದು ವಿಶೇಷ ಅನುಭವ ನೀಡಿತ್ತು. ‘ಮೆಣಸಿನಕಾಯಿ ಯಾಪಾರಿ ದಾಸಣ್ಣ ಧೈಯ್ಯ ಹೇಳದಿದ್ರೆ ನಾವು ಗೌನಳ್ಳೇಗೇ ಉಳಿತಿದ್ವಿ, ಗಾಡಿ ಇಲ್ಲ ಗಪ್ಪೆ ಇಲ್ಲ. ಗೌಡ್ರು ಗೊಂಚಿಕಾರ್ರೂ ಮುನಸಬಿಗೆ ಒಂದು ಸರ್ತಿ ಎಳ್ ಸರ್ತಿ ಗಾಡಿ ಕೊಟ್ಟರೂ. ಬೇಕಾದಾಗೆಲ್ಲಾ ಗಾಡಿ ಕೊಡ್ರಪ್ಪಾ ಅಮ್ಮ ಕೇಳಕಾದೀತೇ?. ನಮಿಗಾದ್ರೂ ಮರುವಾದಿ ಬ್ಯಾಲ್ವೇ? ಈವಾಗ ನಮ್ಮೇ ಒಂದು ಗಾಡಿ ಇದ್ರೆ ಬೇಕಾದಾಗೆಲ್ಲಾ ಕೆಲ್ಸ ಮಾಡೋ ಬೌದು, ಮುಂತಾಗಿ ಯೋಚಿಸುತ್ತಿದ್ದರು.
ಹಿಂದಿನ ಸಂಚಿಕೆ ಓದಿ:4. ಮೈಲಾರಲಿಂಗಸ್ವಾಮಿ ಗುಡಿ ನಿರಾಣ
‘ಗಾಡಿ ತರಬೇಕು ಅಮ್ರ ಬಿಸಿನೀರ ಹಬೆ ಬಸ್ ನೋಡಿದ್ವಿ, ಸೀರೇವು, ತುಮಕೂರು. ಗುಬ್ಬಿ ಊರುಗಳ ನೋಡಿದಂಗಾತು. ಸಿದ್ಧಗಂಗೆ ಮಠ ಒಂದ್ ನೋಡಬೇಕಾಗಿತ್ತು. ಆಗಲಿಲ್ಲ. ಮುಂದಿನ ತಿಂಗಳು ಬಂದಾಗ ನೋಡ್‌ಬೇಕು. ಅಲ್ಲಿಗೆ ಹೋಗೊಕಾಗುತ್ತೋ ಇಲ್ಲೊ’. ಸಿದ್ದಣ್ಣನ ಯೋಚನಾ ಲಹರಿ ಹರಿದಿತ್ತು.
ಪಡುವಗಡೆಕೆ ನೋಡಿದರೆ ಹೊತ್ತು ಮುಳಗಾಕೆ ಇನ್ನಾ ಮಾರುದ್ದ ಇತ್ತು. ಗಾಡಿ ಹೊಡೀತಿದ್ದ ಚೆಂಬಸಣ್ಣ ನಿಲ್ಲಿಸಿ ಪಕ್ಕದಾಗಿದ್ದ ಮುತ್ತುಗದ ಮರ ಹತ್ತಿ ಹತ್ತಿಪ್ಪತ್ತು ಅಗಲನ್ನ ಎಲೆ ಕಿತ್ತುಗೊಂಡ. “ರಾತ್ರಿ ಊಟಕ್ಕೆ ಇಸ್ತ್ರದಂಗೆ ಮಾಡ್ಕಂಬನಾ” ಅನ್ನುತ್ತ ಗಾಡಿ ಹತ್ತಿ ಮುಂದೆ ನಡೆಸಿದ. ಕಣ್ಣಿಗೆ ಬೆಳಕಿದ್ದಂಗೆ ಚಿಕ್ಕನಹಳ್ಳಿಗೆ ತಲುಪಿದ್ದರು. ಮೊದಲೇ ನೋಡಿದ್ದ ದೇವಸ್ಥಾನದ ಬಳಿಗೊಯ್ದು ಎತ್ತುಗಳ ಕೊಳ್ಳರಿದರು. ಹತ್ತಿರದ ಮನೆಯಿಂದ ಸೇದೋ ಹಗ್ಗ, ಬಿಂದಿಗೆ, ಕಡಾಯಿಗಳನ್ನು ಇಸಗೊಂಡು ಬಾವಿಯ ನೀರು ಸೇದಿ ಎತ್ತುಗಳಿಗೆ ನೀರು ಕುಡಿಸಿದರು.
ಎತ್ತುಗಳಿಗೆ ದೂರ ನಡೆದು ದಣಿವಾಗಿತ್ತು. ಅವು ಗಾಡಿ ಮಗ್ಗುಲಲ್ಲಿ ಮಲಗಿದ್ದವು. ಮಲಗಿ ಎದ್ದ ಮ್ಯಾಲೆ ಹುಲ್ಲು ಮೇಯಲಿ ಅಂ- ದುಕೊಂಡು ಎತ್ತುಗಳ ಮುಂದೆ ಹುಲ್ಲು ಹಾಕಿ ತಾವೂ ರೊಟ್ಟಿ ಬುತ್ತಿ ಉಣ್ಣಲು ಕುಳಿತರು. ಚಿಕ್ಕನಹಳ್ಳಿ ನಿವಾಸಿಗಳು “ಹೊಸಾ ಗಾಡಿ ತಂದಿದಾರೆ. ಗಾಡಿ ಎಷ್ಟು ಸೆಂದಕ್‌ದಾವೆ. ಎಷ್ಟು ಕೊಟ್ರೆಪ್ಪಾ?” ಎಂದು ಇವರನ್ನು ವಿಚಾರಿಸಿದ್ದರು. ಸಿದ್ದಣ್ಣ “ನೂರು ರೂಪಾಯಿ ಕೊಟ್ಟಿದ್ದೀವಿ” ಅನ್ನುತ್ತಲೇ “ಅಬ್ಬಬ್ಬಬ್ಬ ಅಷ್ಟೊಂದು ಕೊಟ್ಯಾ, ಬಾಳ ಜಾಸ್ತಿ ಆತು” ಎಂದು ಒಬ್ಬಾತ ಉದ್ಗಾರ ತೆಗೆದರೆ “ಅಣ್ಣಯ್ಯಾ ಗಾಡಿ ಮುಟ್ ನೋಡು ಮಾಡಿರ ಮಾಟ ನೋಡು.
ಸುಮ್ಮೆ ಆಗಲ್ಲಪ್ಪಾ” ಎಂದು ಇನ್ನೊಬ್ಬ ಸಮರ್ಥಿಸಿದ್ದ. “ಬರೆಣ್ಣಾ ಸಜ್ಜೆ ರೊಟ್ಟಿ ತಿನ್ಸ್ ಬರ್ರಿ” ಎಂದು ಅವರನ್ನು ಇವರು ಆಹ್ವಾನಿಸಿದರೆ “ಈಟತ್ತಿಗಲೆ ನಾವು ಉಣ್ಣಾಕಿಲ್ಲ. ನೀವು ತಿನ್ನಿ, ಹಗಲೂಟ ಉಂಡಿದ್ರೋ ಹೆಂಗೊ” ಎಂದು ಗಾಡಿಗಳನ್ನು ನೋಡುತ್ತಿದ್ದರು.
ಹಿಂದಿನ ಸಂಚಿಕೆ ಓದಿ:5. ಕೆನ್ನಳ್ಳಿಯ ದುರಂತ
ಚೆಂಬಸಣ್ಣನೂ ಬುತ್ತಿಯನ್ನು ತಂದಿದ್ದ. “ಚೆಂಬಸಣ್ಣಾ ನಿಮ್ ಬುತ್ತಿ ಬಿಚ್ಚಬ್ಯಾಡ. ಬೆಳಿಗ್ಗೆ ನೋಡಾನ” ಎಂದು ಸಲಹೆ ನೀಡಿ ಗೌನಳ್ಳಿಗರ ರೊಟ್ಟೆ ಬುತ್ತಿಗಳನ್ನು ಸವೆಸಿದ್ದರು. ಕತ್ತಲಾಗುತ್ತಿತ್ತು. ಚಂದ್ರ ಹುಟ್ಟೋದು ಇನ್ನಾ ತಡ ಅಂದು ನಾಲ್ಕು ಜನ ಗಾಡಿಗಳ ಮೇಲೆ, ಇಬ್ಬರು ಎತ್ತುಗಳ ಬಳಿ ಮತ್ತಿಬ್ಬರು ದೇವಸ್ಥಾನದಲ್ಲಿ ಮಲಗಿಕೊಂಡರು. ಕಡಾಯಿ ತುಂಬಾ ನೀರಿತ್ತು ಅದು ಗಾಡಿ ಮುಂದೆಯೇ ಎತ್ತುಗಳ ಸಮೀಪ ಇತ್ತು.
ಮೊದಲ ಕೋಳಿ ಕೂಗಿದಾಗ ಸಿದ್ದಣ್ಣ ಎದ್ದು ಆಕಳಿಸಿ ಎತ್ತುಗಳ ಬಳಿ ಹೋದರೆ ಅವುಗಳ ಮುಂದೆ ಹಾಕಿದ್ದ ಹುಲ್ಲು ಖಾಲಿಯಾಗಿತ್ತು. ಒಂದೊಂದೇ ಎತ್ತನ್ನು ಬಿಚ್ಚಿ ಕಡಾಯಿಯಲ್ಲಿದ್ದ ನೀರು ಕುಡಿಸಿದ. ಎರಡೆತ್ತಿಗೆ ನೀರು ಸಾಲದೇ ಬಂತು. ತನ್ನ ಜತೆಗಾರನನ್ನು ಏಳಿಸಿ ಬಾವಿಯಿಂದ ಎರಡು ಬಿಂದಿಗೆ ನೀರು ಸೇದಿ ಎತ್ತುಗಳಿಗೆ ನೀರು ಕುಡಿಸಿ ಉಳಿದವರನ್ನು ಏಳಿಸಿದರು. ಪಕ್ಕದ ಮನೆಯವರನ್ನು ಏಳಿಸಿ ಅವರ ಬಿಂದಿಗೆ ಸೇದೋ ಹಗ್ಗ ಕಡಾಯಿಗಳನ್ನು ಮರಳಿಸಿ, ಎತ್ತುಗಳನ್ನು ಬಂಡಿ ನೊಗಕ್ಕೆ ಹೂಡಿ ಮುಂದೆ ಹೊರಟರು. ಮೊದಲ ಸರ್ತಿ ಬಂದಾಗ್ಲ ಇಂಗೆ ನಸಿಗ್ಗೆಲೆ ಹೊಳ್ಳಿದ್ವಿ” ಅಂತ ಚೆಂಬಸಣ್ಣ ತಿಳಿಸಿ ಗಾಡಿ ನಡೆಸುತ್ತಿದ್ದ. ಅವನೆಣಿಕೆಯಂತೆ ಸೀರಾ ತಲುಪುವ ವೇಳೆಗೆ ಬೆಳ್ಳಂಬೆಳಕಾಗಿತ್ತು.
ಚಿಕ್ಕುಂಬತ್ತಿಗೆ ತಾವರೆಕೆರೆ ತಲುಪಿದ್ದರು. ಅಲ್ಲಿ ರಸ್ತೆ ಪಕ್ಕ ಹೊಸಾ ರೋಣುಗಲ್ಲುಗಳ ವ್ಯಾಪಾರ ನಡೆಯುತ್ತಿತ್ತು. ಸಮೀಪದ ಮದ್ದಕ್ಕನಹಳ್ಳಿ ಬಂಡೆ ಗಣಿಯಿಂದ ರೋಣುಗಲ್ಲು ತಯಾರಿಸಿ ರಸ್ತೆ ಬದಿಯ ತಾವರೆಕೆರೆಯಲ್ಲಿ ಮಾರಾಟ ಮಾಡುತ್ತಿದ್ದರು. ದೊಡ್ಡ ರೋಣಗಲ್ಲಿಗೆ ಮೂರು ರೂಪಾಯಿ, ಸ್ವಲ್ಪ ಚಿಕ್ಕದಕ್ಕೆ ಎರಡು ರೂಪಾಯಿನಂತೆ ವ್ಯಾಪಾರ ಮಾಡುತ್ತಿದ್ದರು. ಸಿದ್ದಣ್ಣ ತನ್ನ ಸಂಗಡಿರೊಂದಿಗೆ ಸಮಾಲೋಚಿಸಿದ್ದ. “ನಮ್ಮೂರಾಗೆ ರೋಣಗಲ್ಲು ಇಲ್ಲ. ಎತ್ತುಕಟ್ಟಿ ಹುಲ್ಲು ತುಳಿಸ್ತೀವಿ. ಯಾಪಾರ ಕುದುರಿದರೆ ಎಳ್ಳು, ಸಣ್ಣದು ದೊಡ್ಡದು ಖರೀದಿ ಮಾಡಾನ”, ಸಿದ್ದಣ್ಣನ ಮುಂದಾಲೋಚನೆ ಎಲ್ಲರಿಗೂ ಹಿಡಿಸಿತ್ತು. ಕೂಡಲೇ ಒಪ್ಪಿದರು. “ಖಾಲಿ ಗಾಡಿ ಹೋಗ್ತಾ ಇದಾವೆ. ಗಾಡಿಗೊಂದೊಂದು ರೋಣಗಲ್ಲು ಹೇರಿಕಂಡು ಹೋಗಾನ” ಅಂತ ಅವರು ಸಲಹೆ ನೀಡಿದರು.
ಹಿಂದಿನ ಸಂಚಿಕೆ ಓದಿ:6. ಎಲ್ಲೆಲ್ಲಿಂದಲೋ ಬಂದರು
ಯಾಪಾರ ನಡೆಯುತ್ತಿದ್ದ ಜಾಗಕ್ಕೆ ಹೋಗಿ “ದೊಡ್ಡದು ಸಣ್ಣದು ಎಲ್ಡೂಕು ಏನು ಕೊಡಬೇಕಪ್ಪ” ಅಂತ ಮಾರಾಟಗಾರರನ್ನು ವಿಚಾರಿಸಿದರು. ಅವರು ಐದು ರೂಪಾಯಿ ಹೇಳಿದರು. ಸ್ವಲ್ಪ ಹೊತ್ತು ಮಾತಾಡಿ ಎರಡಕ್ಕೂ ನಾಲ್ಕು ರೂಪಾಯಿಗೆ ವ್ಯಾಪಾರ ಕುದುರಿ ಇಬ್ಬರಿಗೂ ಒಪ್ಪಿತವಾಗಿತ್ತು. ಗಾಡಿಗಳನ್ನು ಸ್ವಲ್ಪ ತಗ್ಗಿನಲ್ಲಿ ನಿಲ್ಲಿಸಿ ಮೂಕಾರಿಸಿ ರೋಣುಗಲ್ಲುಗಳನ್ನು ಗಾಡಿಯೊಳಗೆ ಎಲ್ಲರೂ ಸೇರಿ ಉರುಳಿಸಿದ್ದರು. ಗಾಡಿಯ ಮಧ್ಯಭಾಗದಲ್ಲಿ ಅಚ್ಚಿನ ಮೇಲೆ ರೋಣುಗಲ್ಲುಗಳು ಉರುಳದಂತೆ ಎದುರುಗಲ್ಲುಗಳನ್ನಿಟ್ಟು ಹಗ್ಗಗಳಿಂದ ಬಂಧಿಸಿ ಕಟ್ಟಿದ್ದರು.
ಆನಂತರ ರೊಟ್ಟಿ ಬುತ್ತಿ ಗಂಟುಗಳನ್ನು ಖಾಲಿ ಮಾಡಿದ್ದರು. ಆದರೂ ಚೆಂಬಸಣ್ಣನ ಬುತ್ತಿಗಂಟು ಹಾಗೇ ಉಳಿಯಿತು. ಲಗುಬಗೆಯಿಂದ ಗಾಡಿ ಹೂಡಿ ಹಿರಿಯೂರ ಹಾದಿ ತುಳಿದರು. “ರಾಗಿ ಕಡ್ಡಿ ಬಡ್ಡೆಗೆ ಕೊಯ್ದು ಎತ್ತುಕಟ್ಟಿ ತುಳಿಸ್ತಿದ್ವಿ, ಕಡ್ಡಿಯಲ್ಲಾ ಸಿಬುರು ಸಿಬುರಾಗಿ ದನ ಮೇಯಾಕೆ ತ್ರಾಸ ಆಗ್ತಿತ್ತು. ಇನ್ನಮ್ಯಾಲೆ ರಾಗಿ ತೆನೆ ಕೊಯ್ದು ರೋಣಗಲ್ಲಾಗೆ ಸಣ್ಣಗೆ ಮಾಡಿಕ್ಯಾಬೌದು”. ಸಿದ್ದಣ್ಣನ ಮಾತಿಗೆ ಉಳಿದವರು ತಲೆಯಾಡಿಸಿದ್ದರು. ಅದೂ ಇದೂ ಮಾತಾಡಿಕ್ಯನ್ತಲೆ ಜವಗಾನಳ್ಳಿ ತಡಾದು ಆದಿವಾಲದ ಹತ್ತತ್ರ ಬಂದಿದ್ದರು. ಯಾರಿಗೂ ಹಗಲೂಟದ ಹಸಿವು ಕಾಣಿಸಿರಲಿಲ್ಲ.
ಆದಿವಾಲ ತಲುಪಿದಾಗ ಹೊತ್ತು ನೆತ್ತಿ ಬಿಟ್ಟು ವಾಲಿತ್ತು. “ಏನಪ್ಪಾ ಯಾರಿಗಾದ್ರು ಹಸಿವಾಗೈತಾ. ಹಸಿವಾಗಿದ್ರೆ ಚೆಂಬಸಣ್ಣನ ಬುತ್ತಿ ಬಿಚ್ಚನಾ” ಸಿದ್ದಣ್ಣ ವಿಚಾರಿಸಿದ್ದರು. ಯಾರೂ ಊಟ ಮಾಡುವ ಇಚ್ಛೆ ಪ್ರಕಟಿಸಲಿಲ್ಲ. ಹೀಗಾಗಿ ಗಾಡಿಗಳನ್ನು ಹಿರಿಯೂರಿಗೆ ನಡೆಸಿದರು.
ಹಿಂದಿನ ಸಂಚಿಕೆ ಓದಿ:7. ಊರು ತೊರೆದು ಬಂದವರು
ಹಿರಿಯೂರು ತಲುಪಿ ತ್ಯಾರಮಲ್ಲೇಶ್ವರ ದೇವಸ್ಥಾನದ ಬಳಿಗೆ ಗಾಡಿ ನಡೆಸಿ ಅಲ್ಲಿ ಎತ್ತುಗಳ ಕೊಳ್ಳರಿದು ಎತ್ತುಗಳಿಗೆ ನೀರು ಕುಡಿಸಲು ಬಾವಿಗಾಗಿ ಹುಡುಕಾಡಿದರು. ಎದುರಿಗೆ ಸಿಕ್ಕಿದವರಿಂದ ಮಾಹಿತಿ ಪಡೆದು ಬಾವಿ ಬಳಿಗೊಯ್ದು ಅಲ್ಲಿನ ಹತ್ತಿರದ ಮನೆಯಿಂದ ಹಗ್ಗ ಬಿಂದಿಗೆ, ಕಡಾಯಿ ಪಡೆದು, ನೀರು ಸೇದಿ ಎತ್ತುಗಳಿಗೆ ನೀರು ಕುಡಿಸಿ ಗಾಡಿ ಬಳಿಗೆ ಬಂದರು. ಅಷ್ಟೊತ್ತಿಗೆ ಇಲ್ಲಿದ್ದವರು ಹತ್ತಿರದ ಮನೆಯಿಂದ ನೀರು ಪಡೆದು ಬುತ್ತಿ ಗಂಟು ಬಿಚ್ಚಿದ್ದರು. ಗೌನಳ್ಳಿ ಕೆಂಪಿಂಡಿ ಇನ್ನೂ ಸ್ವಲ್ಪ ಉಳಿದಿತ್ತು. ಚೆಂಬಸಣ್ಣನ ಬುತ್ತಿ ಎಲ್ಲರೂ ಉಂಡು ಇನ್ನೂ ಸ್ವಲ್ಪ ಮಿಕ್ಕಿತ್ತು.
“ಇನ್ನಾ ಹೊತ್ತೈತೆ ಗಾಡಿ ಹೂಡಿ ಮುಂದೆ ಹೋಗಾನ. ಮಾಚಂದ್ರ ಇಲ್ಲ ಐಗಳಟ್ಟಿಗೆ ಹೋಗಬೇಕು. ಅಲ್ಲಿ ರಾತ್ರಿ ಕಳೆಯಾನ. ಎತ್ತುಗಳು ದಣಿವಾರಿಸಿಗಳವೆ. ಸಿದ್ದಣ್ಣನ ಮಾತಿಗೆ ‘ಹೂಂಕಣಪ್ಪ ಮಾಚಂದ್ರಕ್ಕೋಡ ಎತ್ತುಗಳು ಕಲ್ ಕಡೀಬೇಕಾಗುತ್ತೆ, ಮತ್ತೆ ನಾವೂ ಉಪಾಸ ಮಲಗಬೇಕಾ ಅಲ್ಯಾತ್ತು ಸಿಗುತ್ತೋ ಮಾರಾಯ”, ಸಿದ್ದಣ್ಣನ ಜತೆಗಾರ ಮಾತಾಡಿ “ಒಂದೀಟು ತ್ರಾಸಾದ್ರೂ ಖಗಳಟ್ಟಿಗೆ ಹೋಗಾನ. ಅಲ್ಲಿ ಎತ್ತುಗಳಿಗೆ ಹುಲ್ಲು ನೀರು, ನಮಗೊಂದೀಟು ಅನ್ನ ಸಿಕ್ಕೀತು” ಎಂದು ಸಲಹೆ ನೀಡಿದ್ದ, ಆತನ ಸಲಹೆಯಂತೆ ಎತ್ತುಗಳು ಬೆಳಿಗ್ಗೆಯಿಂದ ಗಾಡಿ ಎಳೆದೂ ಎಳೆದು ಸಾಕಾಗಿದ್ದೂ ಪರಿಚಯದ ಹಾದಿ ಎಂಬಂತೆ ದೊಡ್ಡಜ್ಜೆ ಮೇಲೆ ರಸ್ತೆ ಮೇಲೆ ನಡೆಯುತ್ತಿದ್ದವು, ಹಿರಿಯೂರಿನ ಊಟದ ಪ್ರಭಾವದಿಂದ ಒಂದಿಬ್ಬರು ತೂಕಡಿಸುತ್ತಿದ್ದರು.
ಗಾಡಿ ನಡೆಸುತ್ತಿದ್ದ ಚೆಂಬಸಣ್ಣ, ಇನ್ನೊಬ್ಬಾತ ಪಡುವಗಡೆಗೆ ವಾಲುತ್ತಿದ್ದ ಹೊತ್ತನ್ನು ನೋಡುತ್ತಾ ಎತ್ತುಗಳನ್ನು ಅದ್ದಿಸದೆ ಅವು ನಡೆದಂಗೆ ನಡೆಯಲಿ ಅಂದುಕೊಂಡು ಮುಂದಿನ ದಾರಿಯನ್ನು ಗಮನಿಸುತ್ತಿದ್ದರು. ಸಿದ್ದಣ್ಣನೂ ಎರಡು ಬಾರಿ ಆಕಳಿಸಿದ್ದ. “ಇನ್ನೇನು ಐಗಳಟ್ಟಿ ತಿರುವು ಬಂದೇ ಬಿಡುತ್ತೆ” ಎಂದು ಮುಳುಗುತ್ತಿದ್ದ ಸೂರದೇವರನ್ನು ನೋಡುತ್ತಿದ್ದ ಐಗಳಟ್ಟಿ ತಿರುವು ಬರಲೇ ಗಾಡಿಗಳನ್ನು ಎಡಕ್ಕೆ ತಿರುಗಿಸಿದ್ದರು. ಧೂಳು ಸಂಜೆಯಾಗಿತ್ತು. ಐಗಳಟ್ಟಿಯಲ್ಲಿ ಇದ್ದುದೇ ನಾಲ್ಕಾರು ಮನೆಗಳು. ಊರು ತಲುಪಿ ಒಂದು ಮನೆಯ ಮುಂದೆ ಗಾಡಿಗಳನ್ನು ನಿಲ್ಲಿಸಿ ಎತ್ತುಗಳ ಕೊಳ್ಳು ಹರಿದರು.
ಹಿಂದಿನ ಸಂಚಿಕೆ ಓದಿ:8. ಮೋಜಣಿಕೆ ಮಾಡಿದರು
ಹತ್ತಿರ ಬಂದವರಿಗೆ ತಾವು ಗೌನಹಳ್ಳಿ ಲಿಂಗಾಯ್ತರು” ಎಂದು ತಿಳಿಸಿದರು.
ಇಬ್ಬರು ಯಜಮಾನರಂಥವರು “ರಾತ್ರಿ ಉಂಬೊತ್ತಿಗೆ ಊರಿಗೇ ಹೋಗುತ್ತಿದ್ರಿ, ಇಲ್ಯಾಕೆ ತರುಬಿದ್ರಿ” ಎಂದು ಪ್ರಶ್ನಿಸಿದ್ದಕ್ಕೆ ಇವರು ಜಂಗಮಯ್ಯರಿರಬೇಕೆಂದು “ಸ್ವಾಮೇರೇ ನಸಿಗ್ಗೆಲೆ ಸೀರಾದಾ ಕಡೆ ಚಿಕ್ಕನಹಳ್ಳಿ ತಾವಿಂದ ಒಂದೇ ಸಮನೆ ಎತ್ತುಗಳು ಗಾಡಿ ಎಳೆದು ಸುಸ್ತಾಗಿಬಿಟ್ಟಿದಾವೆ. ತಾವರೆಕೆರೆತಾಗೆ ಈ ಎಳ್ಳು ರೋಣಗಲ್ಲ ಖರೀದಿ ಮಾಡಬೇಕಾದ್ರೆ ಒಂದು ಜಾವದೊತ್ತು ಗಾಡಿ ನಿಲ್ಲಿದ್ವಿ.
ಅಲ್ಲಿಂದ ಹೊಳ್ಳು ಸುಮ್ಮನ ಬಂದೇ ಬಂದ್ವಿ” ಎಂದುತ್ತರಿಸಿದ ಸಿದ್ದಣ್ಣ, “ಎಲೆ ನೀನು ಯಾರ ಮಗನೋ, ಮಕ ನೋಡಿದ್ರೆ ದೊಡ್ಡಸಿದ್ದಪ್ಪನ ಮಗ ಕಂಡಂಗೆ ಕಾಣೀಯ” ಅಂದ ಜಂಗಮಯ್ಯರಿಗೆ “ಹೌದು ಸ್ವಾಮಿ” ಎಂದುತ್ತರಿಸಿದ್ದ, “ನೀವು ಎಂಟು ಜನ ಇದ್ದಂಗಿದೀರಾ, ಇಬ್ಬಿಬ್ರು ಒಂದು ಮನೆಯಾಗೆ ಊಟ ಮಾಡ್ರಿ ನಾಚ್ಚ ಬ್ಯಾಡ್ರಿ, ಎತ್ತುಗಳಿಗೆ ಮೇವು ಐತೋ ಎಂಗೆ, ಇಲ್ಲದಿದ್ರೆ ಆ ಮನೆ ಕಾಣುತ್ತಲ್ಲ ಅಲ್ಲಿ ಇಸಗ” ಎಂದು ತಿಳಿಸಿ ಗಾಡಿಗಳನ್ನು ವೀಕ್ಷಿಸಿದ್ದರು. ‘ಗುಬ್ಬಿ ಗಾಡಿ ಇರಬೇಕಲ್ವೆ ಬಾಳ ಸೆಂದಾಗಿ ಗಾಡಿ ಕೂಡಿಸ್ತಾರೆ. ನಮ್ಮ ಒಳನಾಡಿನಾಗೆ ಗುಬ್ಬಿಗಾಡಿ ಎಲ್ಲೂ ಇಲ್ಲ ಬಿಡು, ಒಂದೊಂದ್ ಗಾಡೀಗೆಷ್ಟು ಕೊಟ್ರೆ” ಅಂತ ವಿಚಾರಿಸಿದ್ದರು.
ಸಿದ್ದಣ್ಣ “ಸ್ವಾಮಿ ಒಂದ್ ಗಾಡಿಗೆ ನೂರು ರೂಪಾಯಂಗೆ, ಇನ್ನೂರು ರೂಪಾಯ್ ಕೊಟ್ ತಂದಿದೀವಿ. ಅಲ್ಲಿಂದ ಗಾಡಿ ಹೊಡಕಂಡ್ ಬರಾಕೆ ಒಂದು ಗಾಡಿಗೆ ಹತ್ತು ರೂಪಾಯಿ ಕೊಡಬೇಕು” ಅನ್ನುತ್ತಾ ಚೆಂಬಸಣ್ಣನ ಮುಖ ನೋಡಿದ್ದ ಸಿದ್ದಣ್ಣ. “ದುಬಾರಿ ಆತೇನೋ. ಈ ಕಾಲದಾಗೆ ಯಾರು ಬತ್ತಾರೆ ಒಂದು ಸೀಮೆಯಿಂದ ದಿನಗಟ್ಟೆ ಗಾಡಿ ಹೊಡಕಂಡು ಇನ್ನೊಂದು ಸೀಮೆಗೆ” ಅಂದಿದ್ದರು.
ಹಿಂದಿನ ಸಂಚಿಕೆ ಓದಿ:9. ಊರಿಗೊಬ್ಬ ಅಕ್ಕಸಾಲಿಯ ಆಗಮನ
“ಲೇ ಶಿವರುದ್ರಾ ಇವು ಎಂಟು ಜನ ಐದಾರೆ. ನಮ್ಮನೆಯಾಗಿಬ್ರು, ನಿಮ್ಮನೆಯಾಗಿಬ್ರು ಊಟ ಮಾಡ್ತಾರೆ. ಹೋಗಿ ಅಡಿವಯ್ಯನ ಮನೆ ಮತ್ತೆ ಸಂಗಯ್ಯನ ಮನೆಗಳಿಗೆ ಅಪ್ಪಯ್ಯ ಹೇಳ್ಳಿತೆ ಗೌನಕ್ಕೇರಿಬ್ರು ಊಟಕ್ಕೆ ಬಾರೇ ಈಗ್ಗೆ ಹೋಗಿ ಹೇಳಿ ಬಾ” ಎಂದು ಒಬ್ಬ ಯುವಕನನ್ನ ಕ- ರೆದು ಹೇಳಿಕಳಿಸಿದ್ದರು. “ಬರೆಯ್ಯಾ ಇಲ್ಲಿ ಕೂಡು ಬರಿ ನೀವು ಗೌನಳ್ಳೇರು, ಧೈಶ್ಯ ಮಾಡ್ತೀರ, ಇವರೆಲ್ಲಾ ಶುದ್ಧ ಸೋಮಾರಿಗಳು. ಐಗಳು ಬ್ಯಾಸಾಯ ಮಾಡಬಾರು ಅಂತ ಯಾವ ಶಾಸ್ತ್ರದಾಗೈತೆ”, ಅವರ ಮನೆ ಮುಂದಿನ ಜಾಪೆ ಮೇಲೆ ಕೂಡುತ್ತಾ ಮಾತಾಡಿದ್ದರು. ಗೌನಳ್ಳಿಯವರು ಮತ್ತು ಗುಬ್ಬಿಯ ಮಂದಿ ಮುಖಮುಖಾ ನೋಡಿಕೊಂಡಿದ್ದರು.
ತಮ್ಮ ಊರಿನ ಜಂಗಮರ ಬಗ್ಗೆ ಅವರು ಮಾತಾಡಿದ್ದರು. “ಸ್ವಾಮೇರೆ ನಾವು ಸಾಯಂಕಾಲ ಬುತ್ತಿ ಉಂಡಿದೀವಿ, ನಮಗ್ಯಾರಿಗೂ ಹೊಟ್ಟೆ ಹಸಿದಿಲ್ಲ” ಅಂತ ಸಿದ್ದಣ್ಣ ನಯವಾಗಿ ಊಟಬೇಡವೆಂದಿದ್ದ. “ರಾತ್ರಿ ಉಪಾಸ ಮಲಗಬಾರದಯ್ಯ ಸ್ವಲ್ಪ ಸ್ವಲ್ಪಾನೇ ಊಟ ಮಾಡ್ರಿ” ಜಂಗಮಯ್ಯ ಹಿತವಚನ ಹೇಳಿದ್ದರು.
ಸ್ವಲ್ಪ ಹೊತ್ತಿಗೆ ಶಿವರುದ್ರಯ್ಯ ಆಗಮಿಸಿ “ಊಟಕ್ಕೆ ಬಣ್ಣಾ” ಎಂದು ಆಹ್ವಾನಿಸಿದ. ಇಬ್ಬರಂತೆ ನಾಲ್ಕು ಮನೆಗಳಿಗೆ ಕರೆದೊಯ್ದ. ಎಲ್ಲರ, ಮನೆಗಳಲ್ಲೂ ಶಿವಪೂಜೆ ಪರಿಕರಗಳನ್ನು ನೀಡಿ ಇವರು ಶಿವಪೂಜೆ ಮಾಡುವ ವಿಧಾನವನ್ನು ಆಯಾ ಮನೆಗಳವರು ಗಮನಿಸಿದ್ದರು. ಎಲ್ಲರ ಮನೆಗಳಲ್ಲೂ ಅರ್ಧಧ್ರ ರಾಗಿ ಮುದ್ದೆ ಸಾರು. ಸ್ವಲ್ಪ ಅನ್ನ ಮಜ್ಜಿಗೆ ಊಟ ಮಾಡಿ ಗಾಡಿಗಳ ಬಳಿಗೆ ಹಿಂತಿರುಗಿದ್ದರು.
ಶಿವರುದ್ರಯ್ಯ ಸೇದೋ ಹಗ್ಗ, ಒಂದು ಬಿಂದಿಗೆ, ಎತ್ತುಗಳಿಗೆ ನೀರು ಕುಡಿಸಲು ಅಗಲನ್ನ ಬಾಯಿಯ ಕಡಾಯಿಯನ್ನು ತಂದು ಕೊಟ್ಟಿದ್ದ. ಇವರು ಮಲಗುವ ಸಮಯಕ್ಕೆ ಸ್ವಲ್ಪ ಮುಂಚೆ ಎತ್ತುಗಳಿಗೆ ನೀರು ಕುಡಿಸಿ ಮಲಗಿದ್ದರು. ಐಗಳು ಕೊಟ್ಟಿದ್ದ ಬತ್ತದ ಹುಲ್ಲನ್ನು ಮೇಯಲು ಎತ್ತುಗಳು ನಿರಾಕರಿಸಿದ್ದವು.
ನಸಿಗ್ಗೆಲೆ ಎದ್ದು ಮುಖ ಕೈಕಾಲು ತೊಳೆದುಕೊಂಡು ಎತ್ತುಗಳಿಗೆ ನೀರು ಕುಡಿಸಿ, ಹಗ್ಗ ಬಿಂದಿಗೆ, ಕಡಾಯಿಗಳನ್ನು ಐಗಳ ಮನೆಗೆ ಮುಟ್ಟಿಸಿ ಗಾಡಿ ಕಟ್ಟಿ ಗೌನಹಳ್ಳಿಗೆ ಹೊರಟರು. ಈಚಲಹಳ್ಳ ತಲುಪುವ ಸಮಯಕ್ಕೆ ಬೆಳ್ಳಂಬೆಳಕಾಗಿತ್ತು. ಅಷ್ಟೊತ್ತಿನಲ್ಲಿ ಈಚಲ ಪೊದೆಗಳಿಂದ ನಾಲ್ಕು ಜನ ಹೊರಬರುತ್ತಿದ್ದರು. ಅವರನ್ನು ಗಮನಿಸದೆ ಇವರು ಗಾಡಿಗಳನ್ನು ಮುಂದೆ ನಡೆಸಿದ್ದರು.
ಹಿಂದಿನ ಸಂಚಿಕೆ ಓದಿ:10. ಹೊಸ ಬಂಡಿಗಳ ಆಗಮನ
ಕಳ್ಳಣಿವೆಯಲ್ಲಿ ಗಾಡಿಗಳನ್ನು ಗುಂಡಿ ತಗ್ಗುಗಳನ್ನು ತಪ್ಪಿಸಿ ಹುಷಾರಿಯಿಂದ ನಡೆಸಿ ಪಟ್ಟಮರಡಿ ಸಮಾಪಕ್ಕೆ ಬರುತ್ತಲೇ ಸಿದ್ದಣ್ಣ ಮುಂದೆ ಬಂದು “ಕಲ್ಲುಂಡಿಯಲ್ಲಿ ಭಾರಿ ಕಲ್ಲು ಗುಂಡು ತಗ್ಗುಗಳಿದ್ದು ಗಾಡಿಗಳ ಅಚ್ಚಿಗೆ ಪೆಟ್ಟು ಬೀಳುತ್ತದೆ. ಆದರಿಂದ ಬಡಗಲ ಮುಖವಾಗಿ ನೆಟ್ಟಗೆ ಹೊಲದ ಬದುವಿನಲ್ಲಿ ಗಾಡಿ ಸಾಗಲಿ, ಊರ ಮುಂದಲ ಹಳ್ಳ ದಾಟಿಸಿ ಊರು ಸೇರೋಣ” ಎಂದು ಹೇಳಿ ಮುಂದೆ ಮುಂದೆ ನಡೆದ. ಸಿದ್ದಣ್ಣನ ಹಿಂದೆ ಗಾಡಿ ಹೊಡೆದುಕೊಂಡು ಹೋಗಿ ಊರ ಮುಂದಲ ಹಳ್ಳ ತಲುಪಿದ್ದರು. ಸಗಣಿ ಕಸ ಬಳಿದು ಕೈಕಾಲು ತೊಳೆಯುತ್ತಿದ್ದ ಊರ ಜನ ಕೆಲವರು, ಗಾಡಿಗಳನ್ನು ಕಂಡು ಸಂತೋಷ ಭರಿತರಾಗಿ ಕೇಕೆ, ಶಿಳ್ಳುಗಳಿಂದ ಸ್ವಾಗತಿಸಿದ್ದರು. ಗಾಡಿಗಳು ಹಳ್ಳದ ದಡವನ್ನು ಹತ್ತಿ ಕರುವುಗಲ್ಲು ಸಮೀಪಕ್ಕೆ ಬಂದವು. ಅಲ್ಲಿಗೆ ಸಮಿಾಪಿಸಿದ್ದ ಹಳ್ಳಿಗರು ನಗುಮೊಗದಿಂದ ಸ್ವಾಗತಿಸಿದ್ದರು.
ಸಮಾಪದಲ್ಲಿದ್ದ ಗುಡಿಸಿಲಿನ ಜಂಗಮಯ್ಯರಿಗೆ ಇದು ಹೊಸ ಸುದ್ದಿಯಾಗಿತ್ತು. ಅವರೂ ಬಂದು ಗಾಡಿಗಳನ್ನು ನೋಡಿದ್ದರು.
ಹೊಸಾಗಾಡಿ ಜತಿಗೆ ರೋಣುಗಲ್ಲು ತಂದಿರುವುದು ಊರಿನ ಜನರಲ್ಲಿ ಸಂತೋಷದ ಜತೆಗೆ ಸಮಾಧಾನ ತಂದಿತ್ತು. ಮುಖ್ಯವಾಗಿ ರಾಗಿ ಮತ್ತು ಸಜ್ಜೆ ಇತ್ಯಾದಿ ಫಸಲುಗಳ ತೆನೆಕೊಯ್ದು ಕಣದಲ್ಲಿ ಕಾಳು ಬೇರ್ಪಡಿಸಲು ರೋಣುಗಲ್ಲುಗಳು ಅಗತ್ಯವಾಗಿ ಬೇಕಾಗಿದ್ದವು. ಸಿದ್ದಣ್ಣನ ಬುದ್ಧಿವಂತಿಕೆ ಮತ್ತು ಮುಂದಾಲೋಚನೆಯನ್ನು ಕೊಂಡಾಡಿದ್ದರು. ಊರಜನ, “ಸಿದ್ದಣ್ಣಾ ನೀವಿನ್ನಾ ಎಳ್ಳೆ ಗಾಡಿ ತರಬೇಕಲ್ಲ. ಅವಾಗ ಇನ್ನೆಲ್ಡ್ ರೋಣಗಲ್ಲು ತಗಂಬರಿ” ಎಂದು ಸಲಹೆ ಕೂಡಾ ನೀಡಿದ್ದರು. ಗುಂಡಾಚಾರಿಯೂ ಕರುವುಗಲ್ಲ ಬಳಿಗೆ ಆಗಮಿಸಿ ಹೊಸಾ ಗಾಡಿಗಳನ್ನು ಮುಟ್ಟಿ ನೋಡಿ ಸಮಾಧಾನ ಪಟ್ಟಿದ್ದ, ಮೆರವಣಿಗೆ ರೀತಿಯಲ್ಲಿ ಗಾಡಿಗಳು ಸಿದ್ದಣ್ಣರ ಮನೆ ಬಳಿಗೆ ಅಗಮಿಸಿದವು. ಮನೆ ಮಂದಿ ಆರತಿ ಎತ್ತಿ ಸ್ವಾಗತಿಸಿದ್ದರು.
ಮನೆಗೆ ಬಂದ ಕೂಡಲೆ ಸಿದ್ದಣ್ಣ ಚೆಂಬಸಣ್ಣನ ಎತ್ತುಗಳನ್ನು ಚಪ್ಪರದಲ್ಲಿನ ಗ್ವಾಂದಿಗೆಗೆ ಕಣ್ಣಿಹಾಕಿ ಹುಲ್ಲು ಹಾಕಿದ್ದ. ಅನಂತರ “ಬರಿ ಮುಖ ಕೈಕಾಲು ತೊಳಕಂಡು ಊಟ ಮಾಡ ಬರ್ರಿ” ಎಂದು ಗುಬ್ಬಿಯಿಂದ ಬಂದಿದ್ದವರನ್ನು ಕರೆದು ಊಟಕ್ಕೆ ಏರ್ಪಾಟು ಮಾಡಿದ್ದ. ಬಿಸಿ ಬಿಸಿ ರಾಗಿ ಮುದ್ದೆ, ಮೊಳಕೆ ಹುರಳಿ ಕಾಳ ಸಾರು, ಮೇಲೆ ಬೆಣ್ಣೆ ಊಟ ತುಂಬಾ ರುಚಿಯಾಗಿ- ತ್ತು. ಚೆಂಬಸಣ್ಣ ಮತ್ತು ಅವನ ಸಂಗಡಿಗರಿಗೆ ‘ಗೌನಳ್ಳಿಯ ಊಟವನ್ನು ಮರೆಯಲು ಸಾಧ್ಯವಿಲ್ಲ’ ಅಂದುಕೊಂಡಿದ್ದರು. ಊಟ ಮಾಡಿ ಚಪ್ಪರದಡಿಗೆ ಬಂದರೆ ಗಾಡಿಗಳನ್ನು ನೋಡುವವರ ಸಂಖ್ಯೆ ಇಮ್ಮಡಿಯಾಗಿತ್ತು, ಅವರ ಸಹಾಯದಿಂದ ಗಾಡಿಗಳ ಮೂಕಾರಿಸಿ ರೋಣಗಲ್ಲುಗಳನ್ನು ಕೆಳಗೆ ಇಳಿಸಿದ್ದರು. ಊರಜನ ರೋಣುಗಲ್ಲುಗಳನ್ನೂ ಮೆಚ್ಚಿಕೊಂಡು ಮಾತಾಡಿದ್ದರು. ಚೆಂಬಸಣ್ಣ ತನ್ನ ಎತ್ತುಗಳು ನವಣೆಹುಲ್ಲು ಮತ್ತು ಸಜ್ಜೆ ದಂಟನ್ನು ರಾಪಾಡಿಕೊಂಡು ಮೇಯುವುದನ್ನು ನೋಡಿ ಸಮಾಧಾನ ಪಟ್ಟುಕೊಂಡಿದ್ದ.
ಹಿಂದಿನ ಸಂಚಿಕೆ ಓದಿ:11. ಬಂಡಿ ತಂದ ಬದಲಾವಣೆ
ಮೊದಲಿಗೇ ಗುಬ್ಬಿ ಗಾಡಿಗಳನ್ನು ತಂದಿದ್ದ ಗೌಡ್ರು ಮತ್ತು ಗೊಂಚಿಗರು ಆಗಮಿಸಿ ಚೆಂಬಸಣ್ಣನ ಯೋಗಕ್ಷೇಮವನ್ನು ವಿಚಾರಿಸಿದ್ದರು. “ಒಂದು ರಾತ್ರಿ ನಮ್ಮೂರಾಗಿದ್ದು ಬೆಳಿಗ್ಗೆ ಹೋಗಬೌದಲ್ಲ” ಎಂದು ಆತನೊಂದಿಗೆ ಪ್ರಸ್ತಾಪಿಸಿದ್ದರು. ಇವತ್ತೇನೂ ಎತ್ತುಗಳು ಬಾಳ ದೂರ ನಡೆದಿಲ್ಲ. ಹೊತ್ತಿಳಿಸಿಗೆಂಡು ಹೊರಟರೆ ಹೋದ ಸರ್ತಿ ಉಳಕಂಡಿದ್ದೀವಲ್ಲ ಆದಿವಾಲದ ಪೂಜಾರ ಮನೆಹತ್ರ ರಾತ್ರಿ ಕಳಕಂಡು ಬೆಳಿಗ್ಗೆ ಹೊರಟರೆ ಸಂಜಿಗೆ ಚಿಕ್ಕನಹಳ್ಳಿಗೋಗ್ತಿವಿ. ನಾಳೆ ರಾತ್ರಿ ಅಲ್ಲಿ ಕಳೆದು ಸಂಜೀಗೆ ನಮ್ಮೂರಿಗೆ ಹೋಗ್ತಿವಿ” ಎಂದು ತಮ್ಮ ಯೋಜನೆಯನ್ನು ಚೆಂಬಸಣ್ಣ ತಿಳಿಸಿದ್ದ.
ಇವರ ಮಾತನ್ನು ಆಲಿಸಿದ ಸಿದ್ದಣ್ಣ ಗುಬ್ಬಿಯಿಂದ ಬಂದಿರುವವರಿಗೆ ಎರಡು ದಿನದ ಬುತ್ತಿ ಸಿದ್ದಪಡಿಸಲು ಮನೆಯ ಹೆಂಗಸರಿಗೆ ಸೂಚಿಸಿ, ಹೊರಗಡೆ ಚಪ್ಪರದಡಿಗೆ ಮುಂದಾಲೋಚನೆಯನ್ನು ಕೊಂಡಾಡಿದ್ದರು. ಊರಜನ, “ಸಿದ್ದಣ್ಣಾ ನೀವಿನ್ನಾ ಎಳ್ಳೆ ಗಾಡಿ ತರಬೇಕಲ್ಲ. ಅವಾಗ ಇನ್ನೆಲ್ಡ್ ರೋಣಗಲ್ಲು ತಗಂಬರಿ” ಎಂದು ಸಲಹೆ ಕೂಡಾ ನೀಡಿದ್ದರು. ಗುಂಡಾಚಾರಿಯೂ ಕರುವುಗಲ್ಲ ಬಳಿಗೆ ಆಗಮಿಸಿ ಹೊಸಾ ಗಾಡಿಗಳನ್ನು ಮುಟ್ಟಿ ನೋಡಿ ಸಮಾಧಾನ ಪಟ್ಟಿದ್ದ, ಮೆರವಣಿಗೆ ರೀತಿಯಲ್ಲಿ ಗಾಡಿಗಳು ಸಿದ್ದಣ್ಣರ ಮನೆ ಬಳಿಗೆ ಅಗಮಿಸಿದವು. ಮನೆ ಮಂದಿ ಆರತಿ ಎತ್ತಿ ಸ್ವಾಗತಿಸಿದ್ದರು.
ಮನೆಗೆ ಬಂದ ಕೂಡಲೆ ಸಿದ್ದಣ್ಣ ಚೆಂಬಸಣ್ಣನ ಎತ್ತುಗಳನ್ನು ಚಪ್ಪರದಲ್ಲಿನ ಗ್ವಾಂದಿಗೆಗೆ ಕಣ್ಣಿಹಾಕಿ ಹುಲ್ಲು ಹಾಕಿದ್ದ. ಅನಂತರ “ಬರಿ ಮುಖ ಕೈಕಾಲು ತೊಳಕಂಡು ಊಟ ಮಾಡ ಬರ್ರಿ” ಎಂದು ಗುಬ್ಬಿಯಿಂದ ಬಂದಿದ್ದವರನ್ನು ಕರೆದು ಊಟಕ್ಕೆ ಏರ್ಪಾಟು ಮಾಡಿದ್ದ. ಬಿಸಿ ಬಿಸಿ ರಾಗಿ ಮುದ್ದೆ, ಮೊಳಕೆ ಹುರಳಿ ಕಾಳ ಸಾರು, ಮೇಲೆ ಬೆಣ್ಣೆ ಊಟ ತುಂಬಾ ರುಚಿಯಾಗಿತ್ತು. ಚೆಂಬಸಣ್ಣ ಮತ್ತು ಅವನ ಸಂಗಡಿಗರಿಗೆ ‘ಗೌನಳ್ಳಿಯ ಊಟವನ್ನು ಮರೆಯಲು ಸಾಧ್ಯವಿಲ್ಲ’ ಅಂದುಕೊಂಡಿದ್ದರು.
ಊಟ ಮಾಡಿ ಚಪ್ಪರದಡಿಗೆ ಬಂದರೆ ಗಾಡಿಗಳನ್ನು ನೋಡುವವರ ಸಂಖ್ಯೆ ಇಮ್ಮಡಿಯಾಗಿತ್ತು, ಅವರ ಸಹಾಯದಿಂದ ಗಾಡಿಗಳ ಮೂಕಾರಿಸಿ ರೋಣಗಲ್ಲುಗಳನ್ನು ಕೆಳಗೆ ಇಳಿಸಿದ್ದರು. ಊರಜನ ರೋಣುಗಲ್ಲುಗಳನ್ನೂ ಮೆಚ್ಚಿಕೊಂಡು ಮಾತಾಡಿದ್ದರು. ಚೆಂಬಸಣ್ಣ ತನ್ನ ಎತ್ತುಗಳು ನವಣೆಹುಲ್ಲು ಮತ್ತು ಸಜ್ಜೆ ದಂಟನ್ನು ರಾಪಾಡಿಕೊಂಡು ಮೇಯುವುದನ್ನು ನೋಡಿ ಸಮಾಧಾನ ಪಟ್ಟುಕೊಂಡಿದ್ದ.
ಮೊದಲಿಗೇ ಗುಬ್ಬಿ ಗಾಡಿಗಳನ್ನು ತಂದಿದ್ದ ಗೌಡ್ರು ಮತ್ತು ಗೊಂಚಿಗರು ಆಗಮಿಸಿ ಚೆಂಬಸಣ್ಣನ ಯೋಗಕ್ಷೇಮವನ್ನು ವಿಚಾರಿಸಿದ್ದರು. “ಒಂದು ರಾತ್ರಿ ನಮ್ಮೂರಾಗಿದ್ದು ಬೆಳಿಗ್ಗೆ ಹೋಗಬೌದಲ್ಲ” ಎಂದು ಆತನೊಂದಿಗೆ ಪ್ರಸ್ತಾಪಿಸಿದ್ದರು. ಇವತ್ತೇನೂ ಎತ್ತುಗಳು ಬಾಳ ದೂರ ನಡೆದಿಲ್ಲ. ಹೊತ್ತಿಳಿಸಿಗೆಂಡು ಹೊರಟರೆ ಹೋದ ಸರ್ತಿ ಉಳಕಂಡಿದ್ದೀವಲ್ಲ ಆದಿವಾಲದ ಪೂಜಾರ ಮನೆಹತ್ರ ರಾತ್ರಿ ಕಳಕಂಡು ಬೆಳಿಗ್ಗೆ ಹೊರಟರೆ ಸಂಜಿಗೆ ಚಿಕ್ಕನಹಳ್ಳಿಗೋಗ್ತಿವಿ.
ಹಿಂದಿನ ಸಂಚಿಕೆ ಓದಿ:12. ಜಂಗಮಯ್ಯರ ಆಗಮನ
ನಾಳೆ ರಾತ್ರಿ ಅಲ್ಲಿ ಕಳೆದು ಸಂಜೀಗೆ ನಮ್ಮೂರಿಗೆ ಹೋಗ್ತಿವಿ” ಎಂದು ತಮ್ಮ ಯೋಜನೆಯನ್ನು ಚೆಂಬಸಣ್ಣ ತಿಳಿಸಿದ್ದ. ಇವರ ಮಾತನ್ನು ಆಲಿಸಿದ ಸಿದ್ದಣ್ಣ ಗುಬ್ಬಿಯಿಂದ ಬಂದಿರುವವರಿಗೆ ಎರಡು ದಿನದ ಬುತ್ತಿ ಸಿದ್ದಪಡಿಸಲು ಮನೆಯ ಹೆಂಗಸರಿಗೆ ಸೂಚಿಸಿ, ಹೊರಗಡೆ ಚಪ್ಪರದಡಿಗೆ ಎಂದು ವೀಳೇದೆಲೆ ಅಡಿಕೆಯಲ್ಲಿ ಇಪ್ಪತ್ತು ರೋಕಡಿಗಳನ್ನಿಟ್ಟು ಗೌಡ್ರ ಕೈಯಿಂದ ಚೆಂಬಸಣ್ಣಾನಿಗೆ ಕೊಡಿಸಿದ್ದ. “ನಿಮ್ಮಿಂದ ಬಾಳ ಉಪಕಾರ ಆಯಿತು” ಎಂದು ಚೆಂಬಸಣ್ಣನಿಗೆ ಕೈ ಮುಗಿದು ಕೃತಜ್ಞತೆ ಸೂಚಿಸಿದ ಸಿದ್ದಣ್ಣ.
ಎತ್ತುಗಳು ನಿಧಾನವಾಗಿ ಹುಲ್ಲು ಮೇಯುತ್ತಿದ್ದವು. ಊಟದ ಪರಿಣಾಮದಿಂದ ಕಣ್ಣು ಮುಚ್ಚಿಕೊಳ್ಳುತ್ತಿದ್ದವು. ಗೌಡ್ರು ಮತ್ತು ಗೊಂಚಿಕಾರರು ಹೊರಡುವ ಸಮಯಕ್ಕೆ ಗೌನಹಳ್ಳಿಗೆ ಇತ್ತೀಚೆಗೆ ಆಗಮಿಸಿದ್ದ ಜಂಗಮಯ್ಯರು ಆಗಮಿಸಿದ್ದರು. ಅವರು ತಮ್ಮ ಪರಿಚಯ ಹೇಳಿಕೊಂಡು, “ಗುಬ್ಬಿಯಿಂದ ಹೊಸಾ ಗಾಡಿಗಳನ್ನು ಗೌನಳ್ಳಿಗೆ ತಂದು ಬಾಳ ಸಹಾಯ ಮಾಡಿದ್ದೀರ” ಎಂದು ತಾರೀಪ್ ಮಾಡಿದ್ದರು. “ಅಲ್ಲಾ ನೀವೆಂಥಾ ಬುದ್ಧಿವಂತರು, ಬರಗಾಲ ಬಂತೂ ಅಮ್ಮ ಊರೇ ಬಿಟ್ಟು ಬಂದಿದೀರಾ” ಅಂತ ಚೆಂಬಸಣ್ಣ ಜಂಗಮಯ್ಯರನ್ನು ಛೇಡಿಸಿದ್ದ. “ಆತು ಬಿಡ್ರಿ, ನೀವು ಇಲ್ಲೇ ಸುಖವಾಗಿರಬೌದು. ಯಾವೂರಾದ್ರೇನು. ಈ ಊರ ಜನಾ ಮಾತ್ರ ಒಳ್ಳೇ ಜನಾ”, ಚೆಂಬಸಣ್ಣ ಗೌನಳ್ಳಿ ವಾಸಿಗಳನ್ನು ಮೆಚ್ಚಿಕೊಡು ಮಾತಾಡಿದ್ದ.
ಅಗಾ ಇಗಾ ಅನ್ನುವುದರೊಳಗೆ ಹೊತ್ತು ನೆತ್ತಿಗೆ ಬಂದಿತ್ತು. “ಚೆಂಬಸಣ್ಣೂರೇ ಊಟ ಮಾಡಿ ಬಿಡಿ. ನಮ್ಮ ಹುಡುಗರು ನಿಮ್ಮನ್ನು ಈಸ್ಥಳ್ಳ ದಾಟಿಸಿ ಕೂಡು ರಸ್ತಿಗೆ ಬಿಟ್ಟು ಬಾರೆ” ಅಂತ ಸಿದ್ದಣ್ಣ ಜ್ಞಾಪಿಸಿದರು. “ಊಟ ಮಾಡಾಕೆ ಸಾಧ್ಯನೇ ಇಲ್ಲ. ಹೊಟ್ಟೆ ಗಡುಸಾಗೈತೆ, ನೀರು ಕುಡಿದು ನಾವು ಹೊರಟು ಬಿಡ್ತೀವಿ” ಎಂದು ಎತ್ತುಗಳನ್ನು ಬಿಚ್ಚಿ ನೀರು ಕುಡಿಸಿದರು. ಅವು ನಾವೀಗ ಹೊರಡಬೇಕು ಎಂಬಂತೆ ಗಂಜು ಹೊಯ್ದು ಸಗಣಿ ಉದುರಿಸಿ ತಲೆಯಾಡಿಸಿದವು.
ಸಿದ್ದಣ್ಣರ ಮೂವರು ಯುವಕರಂಥವರು ಕವೆಗೋಲಿಗೆ ರೊಟ್ಟಿ ಬುತ್ತಿಗಂಟುಗಳನ್ನು ನೇತು ಹಾಕಿಕೊಂಡು ಮುಂದೆ ಹೊರಟರೆ ಇವರು ಅವರನ್ನು ಹಿಂಬಾಲಿಸಿದರು. ಸಿದ್ದಣ್ಣ ಮತ್ತು ಅವರ ಸಂಗಡಿಗರು ಗುಬ್ಬಿಗೆ ಹೊರಟ ತಂಡದ ಜತೆ ಓಣಿ ಬಾಯಿವರೆಗೆ ಜತೆಯಲ್ಲಿ ಹೋಗಿ ಅಲ್ಲಿ ಅವರನ್ನು ಬೀಳ್ಕೊಟ್ಟು ಬಂದರು.