ಮುಖ್ಯ ಸುದ್ದಿ
ಸೇನೆಯಿಂದ ನಿವೃತ್ತಿ ಹೊಂದಿದ ಎಸ್.ಮಲ್ಲಿಕಾರ್ಜುನಗೆ ಸ್ವಗ್ರಾಮದಲ್ಲಿ ಅದ್ದೂರಿ ಸ್ವಾಗತ
CHITRADURGA NEWS | 03 FEBRUARY 2025
ಚಿತ್ರದುರ್ಗ: ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ದೇಶದ ವಿವಿಧ ರಾಜ್ಯಗಳಲ್ಲಿ ಮತ್ತು ಭಾರತದ ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮವಾದ ಕುಂಚಗನಾಳ್ ಗ್ರಾಮಕ್ಕೆ ಆಗಮಿಸಿದ ಎಸ್.ಮಲ್ಲಿಕಾರ್ಜುನ್ ಮತ್ತು ವೇಣುಗೋಪಾಲ್ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
Also Read: ರೆಡ್ಡಿ ಜನಸಂಘದ ವ್ಯವಸ್ಥಾಪಕ ಜಿ.ಎನ್.ಹನುಮಂತರೆಡ್ಡಿ ಇನ್ನಿಲ್ಲ
ಚಿತ್ರದುರ್ಗ ನಗರದ ರಾಜ ಬೀದಿಗಳಲ್ಲಿ ವಾದ್ಯಗೋಷ್ಟಿಯೊಂದಿಗೆ ಮೆರವಣಿಗೆ ಮಾಡಿ, ಅಂಬೇಡ್ಕರ್, ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಂಚಿಗನಾಳು ಗ್ರಾಮದ ಉಪನ್ಯಾಸಕ ಎಸ್.ಲಕ್ಷೀಕಾಂತ್, ವಕೀಲರಾದ ಅಶೋಕ್ ಕುಮಾರ್ ಸಿರಿವೆಲ್ಲಪ್ಪ, ತಮ್ಮಣ್ಣ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕುಟುಂಬ ವರ್ಗದವರ, ಗ್ರಾಮಸ್ಥರು, ಭಾರತೀಯ ನಿವೃತ್ತ ಅರೇ ಸೇನಾ ಸೈನಿಕರ ಸಂಘ ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರವಾಸಿ ಮಂದಿರದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.