ಸಂಡೆ ಸ್ಪಷಲ್
Kannada Novel: 14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ
CHITRADURGA NEWS | 22 DECEMBER 2024
ರೋಣಗಲ್ಲು ತಂದಿದ್ದ ಹೊಸಾಗಾಡಿಗಳನ್ನು ಹೊಲ ಮನೆಗಳಿಗೆ ಹೊಡೆದಾಡಲು ಆರಂಭಿಸಿದ್ದ ಅವುಗಳ ಮಾಲೀಕರಿಗೆ ಒಂದು ಬಗೆಯ ಸಂತೃಪ್ತಿ ಹಾಗೂ ಸಮಾಧಾನವಾಗಿತ್ತು. ಪ್ರತಿದಿನ ಗಾಡಿಗಳಲ್ಲಿ ಬೇಸಾಯದ ಮುಟ್ಟು ಹೇರಿಕೊಂಡು ಹೊಲಕ್ಕೆ ಹೋಗುವುದು ಅಲ್ಲಿ ಮರದ ನೆರಳಲ್ಲಿ ನಿಲ್ಲಿಸಿ ಸಂಜೆ ಮುಟ್ಟಿನ ಜತೆಗೆ ಎತ್ತು ದನ ಎಮ್ಮೆಗಳಿಗೆ ತಲೆ ಮೇವನ್ನು ಗಾಡಿಯಲ್ಲಿ ಹೇರಿಕೊಂಡು ಮನೆಗೆ ತರುತ್ತಿದ್ದರು. ತಲೆಮೇವು ಹೊತ್ತು ತರುವುದು ನಿಂತು ಹೋಗಿತ್ತು. ಕೆಲವು ಬಾರಿ ಬೇರೆ ರೈತರೂ ಈ ಗಾಡಿಗಳ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದರು.
ಜಂಗಮಯ್ಯರು ಕಂತೆಭಿಕ್ಷೆ ಮಾಡಿ ತಂದ ಆಹಾರವನ್ನು ಉಂಡು ಮನೆಯ ಹೊರಗೆ ಬಂದರೆ ಊರಿನ ಜನರೆಲ್ಲಾ ಎತ್ತು ಕರುಗಳ ಸಮೇತ ಬೇಸಾಯದ ಮುಟ್ಟನ್ನು ನೊಗಗಳ ಮೇಲೆ ಹಾಕಿಕೊಂಡು ಹೋಲಗಳ ಮಖನಾಗಿ ಹೋಗುತ್ತಿದ್ದರು. ಇವರೆಲ್ಲಾ ಸ್ವಲ್ಪ ಹೊತ್ತಿನಲ್ಲೇ ಊರಿನಿಂದ ಮಾಯವಾಗಿ ಬಿಟ್ಟರೆ, ಊರಿನಲ್ಲಿ ಸದ್ದಡಗುತ್ತಿತ್ತು.
ಗುಂಡಾಚಾರಿಯ ಚಪ್ಪರದಡಿ ಹೋಗಿ ಕುಳಿತು ಅವನ ಕಾರ ನಿಷ್ಠೆಯನ್ನು ಗಮನಿಸಿದ್ದರು, ಆಚಾರಿ ಮೊದಲೇ ಮಿತಭಾಷಿ. ಇವರನ್ನ ನೋಡಿ ನಸುನ ತನ್ನ ಕರ್ತವ್ಯದಲ್ಲಿ ನಿರತನಾಗುತ್ತಿದ್ದ. ಅವನ ಹೆಂಡತಿ ಕತ್ತರಿಯಿಂದ ಕುಬುಸದ ಕಣಗಳನ್ನು ಕತ್ತರಿಸಿ ಜೋಡಿಸಿ ಹೊಲಿಯುವ ಕಾಯಕದಲ್ಲಿ ತಲ್ಲೀನಳಾಗಿರುತ್ತಿದ್ದಳು. ಅಲ್ಲಿ ಗುಂಡಾಚಾರಿ ಅದ್ದುಗಲ್ಲಿನ ಮೇಲಿಟ್ಟ ಲೋಹದ ತುಂಡನ್ನು ಸಣ್ಣಗೆ ತಟ್ಟುವುದೇ ಸದ್ದು ಬಿಟ್ಟರೆ ಮತ್ತೆ ಬೇರೆ ಸದ್ದಿರಲಿಲ್ಲ,
ಊರಲ್ಲಿ ಅಡ್ಡಾಡಿದರೆ ಅಲ್ಲಲ್ಲಿ ಹೆಂಗಸರು ಕುಟ್ಟಿದ ನವಣೆಯನ್ನು ತಮ್ಮ ಮನೆಗಳ ಮುಂದಿನ ಕೇರಿಯಲ್ಲಿ ತೂರಿ ಅಕ್ಕಿ ತೌಡನ್ನು ಬೇರಡಿಸುತ್ತಿದ್ದರೆ, ಕೆಲವರ ಮನೆಗಳಲ್ಲಿ ಬೀಸುತ್ತಿದ್ದರು. ಬೀಸುವವರು ಹಾಡುತ್ತಿದ್ದ ಸ್ವರ ಮಾಧುರೈದ ಹಾಡುಗಳನ್ನು ನಿಂತು ಆಲಿಸಬೇಕಿತ್ತು. ಊರಲ್ಲಿ ಅಡ್ಡಾಡುವವರೇ ಕಮ್ಮಿ. ಜಂಗಮಯರಿಗೆ ನಾಚುಗೆ ಆದಂತಾಗಿ ತಮ್ಮ ಜಮಾನುಗಳ ಕಡೆಗೆ ಹೆಜ್ಜೆ ಹಾಕಿ ಕಡಿದು ಹಾಕಿದ್ದ ಮುಳ್ಳಿನ ಗಿಡಗಳನ್ನು ಹೊತ್ತೊಯ್ದು ಬೇಲಿಗೆ ಹಾಕಿ ಬೇಲಿಯನ್ನು ಭದ್ರಪಡಿಸಿಕೊಳ್ಳುವ ಮನಸ್ಸಾಗಿತ್ತು.
ಮಾರನೇ ದಿನದಿಂದ ತಮ್ಮ ಹೆಣ್ಣುಮಕ್ಕಳ ಸಮೇತ ಹೊಲಗಳಿಗೆ ಹೋಗಿ ಬೇಲಿ ಭದ್ರಪಡಿಸುವ ಕಾವ್ಯದಲ್ಲಿ ನಿರತರಾಗಿದ್ದರು. ಊರ ಹತ್ತಿರದ ಜಮಾನು ಬೇಲಿ ಭದ್ರ ಪಡಿಸಿದ ಬಳಿಕ ಬಡಗಣ ದಿಕ್ಕಿನ ಜಮಾನಿಗೆ ಹೋಗಿ ಸಂಜೆಯ ತನಕ ಮುಳ್ಳು ಗಿಡಗಳು ಮುಳ್ಳಿನ ಕಂಪೆಗಳನ್ನು ಹೊತ್ತೊಯ್ದು ಸುತ್ತಲಿನ ಬೇಲಿಯನ್ನು ಭದ್ರಪಡಿಸುತ್ತಿದ್ದರು.
ಹಿಂದಿನ ಸಂಚಿಕೆ ಓದಿ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಊರಿನ ಜನ ಬೆಳಿಗ್ಗೆಯಿಂದ ಹೊಲಗಳಲ್ಲಿ ದುಡಿದು ಸಂಜೆಗೆ ಮನೆಗೆ ಮರಳುವಂತೆ ಜಂಗಮಯ್ಯರು ಕೂಡಾ ಹೊಲಗಳ ಬೇಲಿ ಬಂದೋಬಸ್ತ್ ಮಾಡಿ ಸಂಜೆ ಮನೆಗೆ ಹಿಂತಿರುಗಿದ್ದರು. ರೈತರಿಗೆ ಎಲ್ಲಿಯ ಪುರಸೊತ್ತು.
ಸಂಜೆ ಅಡವಿಗೆ ಮೇಯಲು ಹೋಗಿರುತ್ತಿದ್ದ ದನಕರುಗಳು, ಎಮ್ಮೆ ಮತ್ತು ಕರುಗಳನ್ನು ದನದ ಮನೆಯಲ್ಲಿ ಅಥವಾ ವಾಸದ ಮನೆಗಳ ದನದಂಕಣದಲ್ಲಿ ಕಣ್ಣಿ ಹಾಕಿ ಹಾಲು ಹಿಂಡಿಕೊಳ್ಳುವುದು. ಅನಂತರ ತಲೆಮೇವು ಹಾಕಿ, ಸಾಧ್ಯವಾದರೆ ಬಿಸಿನೀರಲ್ಲಿ ಮಿಂದು ಉಂಡು ಮಲಗಿದರೆ, ಮತ್ತೆ ಕೋಳಿ ಕೂಗಿದಾಗಲೆ ಎಚ್ಚರಗೊಳ್ಳುವುದು. ನಾಕೈದು ದಿನ ಹೊಲಕ್ಕೆ ಬೇಲಿ ಹಾಕಿ ದಣಿದಿದ್ದ ಜಂಗಮಯ್ಯಗಳೂ ರಾತ್ರಿಯ ಸುಖನಿದ್ದೆ ಅನುಭವಿಸಿದ್ದರು.
ಬೆಳೆ ಕೊಯ್ದು ಕಾಲ ಆರಂಭವಾಗಿತ್ತು. ಅರದ ಕುಡುಗೋಲುಗಳನ್ನು ಮಣಿಕಲ್ಲಿಗೆ ಉಜ್ಜಿ ಹರಿತ ಮಾಡಿಕೊಂಡು ಬೆಳಿಗ್ಗೆ ಕೂಲಿಯಾಳುಗಳ ಜತೆ ಹೊಲಕ್ಕೆ ಹೋದರೆ, ಹೊತ್ತು ಮುಳುಗುವ ತನಕ ಕೊಯ್ದು, ಸಂಜೆಗೆ ಮರಳಿದರೆ ‘ಊಟ ಬ್ಯಾಡ ಯಾತ್ತೂ ಬ್ಯಾಡ ನೆಲ ಸಿಕ್ಕಿದರೆ ಸಾಕಪ್ಪಾ’ ಅನ್ನುವಷ್ಟು ದಣಿವು. ಮತ್ತೆ ಗಂಡಸರು ನಸಿಗ್ನಲೇ ಹೊಲಕ್ಕೆ ಹೋಗಿ ಕೊಯ್ದ ಮದೆಗಳನ್ನು ತಂಪೊತ್ತಿನಲ್ಲಿ ಸಿವುಡು ಕಟ್ಟುತ್ತಿದ್ದರು. ಬಹಳಷ್ಟು ಬಾರಿ ದೊಡ್ಡುಂಬೊತ್ತಿಗೆ ಹೊಲಕ್ಕೆ ಬುತ್ತಿ ತಂದಾಗಲೇ ಅವರ ಊಟ. ಮತ್ತೆ ಕೊಯ್ದು ಮಾಡಿದ ಸಿವುಡುಗಳನ್ನು ಹೊರೆಗಟ್ಟಿ ಕಣಕ್ಕೆ ಸಾಗಿಸಿ ಬಣವೆ ಒಟ್ಟಬೇಕು. ಇತ್ತೀಚೆಗೆ ಗಾಡಿಗಳು ಬಂದಿದ್ದರಿಂದ ಹೊರೆಗಳನ್ನು ಗಾಡಿಗಳಲ್ಲಿ ಕಣಕ್ಕೆ ಹೇರುವುದು ಕೆಲವರಿಗೆ ಸಾಧ್ಯವಾಗಿತ್ತು. ಗಾಡಿ ಇಲ್ಲದವರು ತಲೆ ಮೇಲೆ ಹೊತ್ತೊಯ್ಯಬೇಕಿತ್ತು.
ಗೌನಳ್ಳಿ ನಿವಾಸಿಗಳ ಕೃಷಿ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಜಂಗಮಯ್ಯರು ತಾವು ಬೇರೊಂದು ದೇಶಕ್ಕೇ ಬಂದಿರುವುದಾಗಿ ಭಾವಿಸಿದ್ದರು. ‘ನಮ್ಮ ಕಡೆ ಕೃಷಿಕರು ತಮ್ಮ ಕೆಲಸಕಾರಗಳಿಗೆ ಹೊರಡುತ್ತಿದ್ದುದೇ ತಡವಾಗಿ. ಹಗಲೂಟವನ್ನು ಜತೆಯಲ್ಲೇ ಒಯ್ಯುತ್ತಿದ್ದರೆ, ಈ ಊರಲ್ಲಿ ಗೃಹಿಣಿಯರು ಬಿಸಿ ಅಡಿಗೆ ಮಾಡಿ ಮಧ್ಯಾಹ್ನ ಹೊಲಗಳಿಗೆ ಹೊತ್ತೊಯ್ಯುತ್ತಾರೆ. ನಮ್ಮ ಕಡೆ ಎಮ್ಮೆ ದನ ಸಾಕುವುದೂ ಕಡಿಮೆ; ಹಾಲು ಹೈನವೂ ಕಡಿಮೆ. ಈ ಊರಲ್ಲಿ ದಂಡಿಯಾಗಿ ಅಡಿವಿಯಿದ್ದು ಅಲ್ಲಿ ಹುಲ್ಲು ಸೊಪ್ಪು, ಸಿಗುವುದರಿಂದ ರೈತರು ಎಮ್ಮೆ ಆಕಳು ಜತೆಗೆ ಮೇಕೆ, ಕುರಿ ಸಹಾ ಸಾಕಿದ್ದಾರೆ. ಹಾಲು ಹೈನದ ಜೊತೆಗೆ ದಂಡಿಯಾಗಿ ಗೊಬ್ಬರ ಹಾಕಿ ಹುಲುಸಾಗಿ ಪೈರು ಬೆಳೆಯುತ್ತಾರೆ.’
ಹಿಂದಿನ ಸಂಚಿಕೆ ಓದಿ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು
‘ಈ ಊರಿಗೆ ವಲಸೆ ಬಂದಿರುವ ಮಣೆಗಾರು, ಕಮ್ಮಾರರು. ಮಡಿವಾಳರು, ಕ್ಷೌರಿಕರು ಕೂಡಾ ಜಮಿನು ಮಾಡಿಕೊಂಡಿದ್ದಾರೆ. ಇವರೆಲ್ಲಾ ಆಯಗಾರರಾಗಿ ಊರಿನ ರೈತರು ಸುಗ್ಗಿಕಾಲದಲ್ಲಿ ಕಣದಲ್ಲೇ ಮೊರಗಟ್ಟೆ ಧಾನ್ಯ ನೀಡುತ್ತಿರುವುದರಿಂದ ಅದರಲ್ಲೇ ತೃಪ್ತರಾಗಿ ಜಮಾನು ಉತ್ತು ಬಿತ್ತುವುದನ್ನು ನಿರಕ್ಷ್ಯ ಮಾಡಿದ್ದಾರೆ.’ ಈ ವಿಚಾರಗಳನ್ನು ಗೌನಳ್ಳಿಗೆ ವಲಸೆ ಬಂದ ತಿಂಗಳೊಪ್ಪತ್ತಿನಲ್ಲಿ ಕಂಡುಕೊಂಡಿದ್ದರು. ಮತ್ತು ‘ತಾವೂ ಕೂಡಾ ಈ ವಾತಾವರಣಕ್ಕೆ ಹೊಂದಿಕೊಂಡು ದುಡಿಯಬೇಕು ಎಂಬ ತೀರಾನಕ್ಕೆ ಬಂದಿದ್ದರು.
ಭಿಕ್ಷದಿಂದ ತಂದ ಅಹಾರವನ್ನು ಉಂಡು ಊರಲ್ಲಿ ಸೋಮಾರಿಗಳಾಗಿ ಸಮಯ ನೂಕಲು ಮನಸ್ಸು ಬಾರದೆ ತಮ್ಮ ಜಮೀನುಗಳ ಕಡೆ ಹೋಗಿ ಹೊಲದ ಬದುಗಳಲ್ಲಿ ಗಿಡಮರಗಳನ್ನು ಬೆಳೆಸಲು ತೀರಾನಿಸಿ ಗಿಡಗಳನ್ನು ನೆಡಿಸಲು ಗುಂಡಿ ತೋಡೋಣ ಎಂಬ ನಿರ್ಧಾರಕ್ಕೆ ಬಂದಿದ್ದರು, ಮಾರನೇ ದಿನ ಯಜಮಾನಪ್ಪರ ಮನೆ ಮತ್ತು ಮಗುದೊಬ್ಬರ ಮನೆಯಿಂದ ಮೊನೆಗುದ್ದಲಿ ಮತ್ತು ಸಲಿಕೆಗಳನ್ನು ಎರವಲಾಗಿ ಪಡೆದು ಗುಂಡಿ ತೋಡಲು ಸಿದ್ದರಾಗಿದ್ದರು. ಯಜಮಾನಪ್ಪರ ಸಲಹೆಯಂತೆ ಹತ್ತು ಜಾಬಿಗೊಂದರಂತೆ ಮೊಳ ಘಾತ. ಮೊಳದಗಲ ಗುಂಡಿ ತೋಡುವುದೇ ತಿಂಗಳ ಕಾಲ ಹಿಡಿದಿತ್ತು.
ತೋಡಿದ ಗುಂಡಿಗಳೆಲ್ಲಾ ಚೆನ್ನಾಗಿ ಒಣಗಿದ ಬಳಿಕ ಅವುಗಳಲ್ಲಿ ಎರಡರಲ್ಲಿ ಎರಡೆರಡು ಬೀವಿನ ಬೀಜ, ಮೂರನೇ ಗುಂಡಿಯಲ್ಲಿ ಸೀಹುಣಿಸೆ ಬೀಜಗಳನ್ನು ಹಾಕಿ ಮೇಲೆ ಸ್ವಲ್ಪ ಸ್ವಲ್ಪ ಮಣ್ಣು ಮುಚ್ಚಿದರು. ಈ ಕಾಲದಲ್ಲಿ ಮಳೆ ಬೀಳುವುದಿಲ್ಲವಾದ್ದರಿಂದ ಗುಂಡಿಯಲ್ಲಿ ಅರ್ಧಧ್ರ ಬಿಂದಿಗೆ ನೀರು ಸುರಿಯಲು ಯಜಮಾನಪ್ಪರು ಸಲಹೆ ನೀಡಿದ್ದರು. ಅದರಂತೆ ಎಲ್ಲಾ ಗುಂಡಿಗಳಿಗೂ ನೀರು ಹಾಕುವುದರಲ್ಲಿ ಸುಸ್ತಾಗಿದ್ದರು.
ಹಿಂದಿನ ಸಂಚಿಕೆ ಓದಿ: 3. ಎಲ್ಲರೂ ಲಿಂಗವಂತರಾದರು
ಏಳೆಂಟು ದಿನಗಳಲ್ಲಿ ಕೆಲವು ಗುಂಡಿಗಳಲ್ಲಿ ಬೀಜಗಳು ಮೊಳಕೆಯೊಡೆದು ಜಂಗಮಯ್ಯರಿಗೆ ಖುಷಿ ನೀಡಿದ್ದವು. “ನೀರು ಹಾಕುವುದನ್ನ ನಿಲ್ಲಿಸಬ್ಯಾಡ್ರಿ ಎಂಟು, ಹತ್ತು ದಿನಕ್ಕೊಂದಾವರ್ತಿ ಗುಂಡಿಗರ್ಧಧ್ರ ಬಿಂದಿಗೆ ನೀರು ಹಾಕ್ತಾ ಇರಿ. ಸಸಿಗಳು ಸೊಂಟ ಮಟ್ಟ ಬೆಳೆದ ಮೇಲೆ ನೀರು ಹಾಕುವುದನ್ನು ನಿಲ್ಲಸಬೌದು”. ಯಜಮಾನಪ್ಪರು ಸಲಹೆ ನೀಡಿದ್ದರು. ಬೇವಿನ ಸಸಿಗಳು ನಳನಳಿಸುತ್ತಾ ಬೆಳೆಯುತ್ತಿದ್ದರೆ ಹುಣಿಸೆ ಸಸಿಗಳು ನಿಧಾನವಾಗಿ ಕುಡಿಯೊಡೆಯುತ್ತಿದ್ದವು. ಊರಿಗೆ ಬಡಗಲು ದಿಕ್ಕಿನಲ್ಲಿದ್ದ ಜಮೀನಿಗೆ ಹತ್ತಿರದಲ್ಲಿ ಬಸವನಹಳ್ಳ ಹರಿಯುತ್ತಿದ್ದು ಹಳ್ಳದಿಂದ ನೀರು ತಂದು ಸಸಿಗಳಿಗೆ ನೀರೆರೆಯುವುದು ಅಷ್ಟೇನೂ ತ್ರಾಸದಾಯಕವಾಗಿರಲಿಲ್ಲ.
ಆದರೆ ಊರಿನ ಪಡುವಲಕ್ಕಿದ್ದ ಜಮಾನಿನ ಸಸಿಗಳಿಗೆ ಊರೊಳಗೆ ಹಾಯ್ದು ಊರ ಮುಂದಿನ ಹಳ್ಳದಿಂದ ನೀರು ಹೊತ್ತೊಯ್ದು ಹಾಕಬೇಕಾಗಿತ್ತು. ದಿನಕ್ಕೆ ಇಪ್ಪತ್ತು ಬಾರಿ ಓಡಾಡಿದರೂ ನಲವತ್ತು ಸಸಿಗಳಿಗೆ ನೀರುಣಿಸುವುದು ಸಾಧ್ಯವಾಗುತ್ತಿತ್ತು. ಈಗ ಜಂಗಮಯ್ಯರಿಗೆ ಗೌನಳ್ಳಿ ನಿವಾಸಿಗಳ ಕಷ್ಟ ಸಹಿಷ್ಣುತೆ ಅರ್ಥವಾಗಿತ್ತು.
ಬೆಳೆ ಕೊಯ್ದು ಕಾಲ ಮುಗಿಯುತ್ತಾ ಬಂದಿತ್ತು. ಗುಬ್ಬಿಯಿಂದ ಎರಡು ಹೊಸಾ ಗಾಡಿಗಳನ್ನು ತಂದು ನಾಲ್ಕು ವಾರದ ಸಮಯ ಮಾರಿತ್ತು. ಇನ್ನೆರಡು ಹೊಸಾ ಗಾಡಿಗಳನ್ನು ಅಲ್ಲಿಂದ ತರಬೇಕಾಗಿತ್ತು. ಇಷ್ಟೊತ್ತಿಗೆ ಹೊಸಾ ಗಾಡಿಗಳನ್ನು ಕೂಡಿಸಿರಬಹುದೆಂದು ಅಂದಾಜು ಮಾಡಿದ್ದ ಸಿದ್ದಣ್ಣ ಈ ಬಾರಿ ಬೇರೆ ಯಾರನ್ನಾದರೂ ಗುಬ್ಬಿಗೆ ಕಳಿಸಿ ಹೊಸಾ ಗಾಡಿಗಳನ್ನು ತರಿಸೋಣವೆಂದು ಯೋಚಿಸುತ್ತಿದ್ದ. ಎರಡು ಹೊಸಾ ಗಾಡಿಗಳಲ್ಲಿ ಒಂದು ಯಜಮಾನಪ್ಪರಿಗೆ ಸೇರಿತ್ತು. ಅವರ ಮನೆಯ ಉಮೇದುಗಾರಿಕೆಯ ಸಿಲ್ಲಿಂಗಪ್ಪನನ್ನು ಕಳಿಸಿಕೊಡೋಣ ಎಂದು ಯೋಚಿಸುತ್ತಿದ್ದ.
ಅವನನ್ನು ಸಂಜೆ ಯಜಮಾನಪ್ಪರು ಮನೆಗೆ ಕರೆದು, “ಸಿದ್ದಣ್ಣಾ ಎಲ್ಡ್ ಸರ್ತಿ ಗುಬ್ಬಿಗೋಗಿ ಬಂದಿದೀಯ. ನಿನಗೆ ಅನುಬೋಗ ಐತೆ. ಈ ಸರ್ತಿ ನಮ್ ಗುರುಸಿದ್ದನ ಜತೇಲಿ ನೀನೂ ಹೋಗಿ ಹೊಸಾ ಗಾಡಿ ಹೊಡಿಸ್ಟಂಡು ಬಾರಪ್ಪ” ಎಂದು ವಿನಂತಿಸಿದ್ದರು. ಇದರಿಂದ ಬೇರೆ ಸಬೂಬು ಹೇಳದೆ “ರೊಟ್ಟಿ ಬುತ್ತಿ ಮಾಡಿ ಕೊಡ್ರಿ. ಕೆಂಪಿಂಡೀನೂ ಮಾಡಿರಿ. ನಾಳಿಕ್ಕೋ ನಾಡೋ ಹೋಗಿ ಬತ್ತೀವಿ” ಎಂದು ಆ ಮನೆಯವರಿಗೆ ಸೂಚಿಸಿದ್ದ. ಹಿತ್ತಿಲಲ್ಲಿ ನೀರೊಲೆಗೆ ಉರಿ ಹಾಕುತ್ತಿದ್ದ ಸಿದ್ದಿಂಗಪ್ಪನಿಗೆ ಸುದ್ದಿ ತಲುಪಿ ಅವನು ಖುಷಿಯಾದ.
ಹಿಂದಿನ ಸಂಚಿಕೆ ಓದಿ: 4.ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ
“ರೊಟ್ಟಿ ಬುತ್ತಿ ಕಟ್‌ಬೇಕಂತೆ, ಎಷ್ಟು ರೊಟ್ಟಿ ಸುಡಬೇಕು ಅಂತ ಸಿದ್ದಣ್ಣನನ್ನ ಕೇಳಿಕೆಂಡ್ ಬಾರಪ್ಪಾ”, ಅತ್ತಿಗೆ ಕೇಳಿದ್ದರು. “ಆಯಪ್ಪನ್ನೇನ್ ಕೇಳನವ್ವ ಒಂದಿಪ್ಪತ್ ಸುಡಿರಿ” ಎಂದು ತಿಳಿಸಿದ್ದ. ‘ಗುಬ್ಬಿಗೆ ಹೋಗಲು ತಯಾರಿ ಯಾತ್ತು ಮಾಡಾದು, ಹೊದಿಯಾಕೊಂದು ಹಚ್ಚಡ, ಜತಿಗೊಂದು ಕಂಬಿ ಸಾಕು’ ಎಂದು ತೀರಾನಿಸಿದ.
ಗುಬ್ಬಿಗೆ ಹೊರಡುವ ದಿನ ಬೆಳಗಿನಲ್ಲಿ ಸಿದ್ದಣ್ಣನ ಗಾಡಿ ಸಿದ್ಧವಾಗಿತ್ತು. ಎರಡು ಮನೆಗಳವರೂ ರೊಟ್ಟಿ ಬುತ್ತಿ ಸಿದ್ದ ಮಾಡಿದ್ದರು. ಯಜಮಾನಪ್ಪರು ಒಂದು ನೂರು ಬೆಳ್ಳಿ ರೋಕಡಿಯನ್ನು ಎಣಿಸಿ ಎರಡು ಹಮ್ಮಿಣಿಗಳಲ್ಲಿ ಸೇರಿಸಿ “ಸಿದ್ದಿಂಗಾ ಸೊಂಟಪಟ್ಟಿ ಎಚ್ಚರ. ಅಂಥಾದ್ದೇನೂ ಆಗಲ್ಲ. ಮನಿಕೆಂಡಾಗ ಒಂದೀಟು ನಿಗಾ ಇರಬೇಕು. ನೀವು ನಾಕು ಜನ ಜತೇಲಿದ್ದೀರ ಹುಸಾರು”. ಯಜಮಾನಪ್ಪಾರು ಎಚ್ಚರಿಸಿದ್ದರು. ಗುಬ್ಬಿಗೆ ಹೋಗುವ ನಾಲ್ವರ ಜತಿಗೆ, ಹಿರಿಯೂರು ತಲುಪಿ ಗಾಡಿ ಹಿಂದಕ್ಕೆ ತರುವವರಿಬ್ಬರು ಗಾಡಿ ಏರಿದ್ದರು. ಸಿದ್ದಣ್ಣನ ಹೋರಿಗಳು ದೊಡ್ಡಜ್ಜೆ ಮೇಲೆ ನಡೆದು ಉಂಬೊತ್ತಿಗೆ ಹಿರಿಯೂರು ತಲುಪಿದ್ದವು. ಬೆಂಕಿ ಹಚಿಯ ಬಸ್‌ಗಾಗಿ ಕಾಯುತ್ತಿದ್ದವರನ್ನು ಕೂಡಿಕೊಂಡು ಬುತ್ತಿಗಂಟುಗಳನ್ನು ಇಳಿಸಿಕೊಂಡು ಗಾಡಿಯನ್ನು ಹಿಂದಕ್ಕೆ ಕಳಿಸಿಕೊಟ್ಟು, ಒಂದೀಟೀಟು ಬುತ್ತಿ ಊಟ ಮಾಡಿದರು.
ಸ್ವಲ್ಪ ಹೊತ್ತಿನಲ್ಲಿ ಬುಸುಗುಡುತ್ತಾ ಬಸ್ಸು ಆಗಮಿಸಿತ್ತು. ಅದರಲ್ಲಿ ಕುಳಿತಿದ್ದ ಹತ್ತಿಪ್ಪತ್ತು ಪ್ರಯಾಣಿಕರ ಜತೆ ಇವರೂ ಏರಿ ಕುಳಿತರು. ತಡಮಾಡದೆ ಬಸ್ ಹೊರಟಿತ್ತು. ಸಿಂಗಪ್ಪನಿಗೆ ಹೊಸಾ ಅನುಭವ ಕುಂಯ್ ಕುಂಯ್ ಅನ್ಸುತ್ತಲೇ ಹೊರಟ ಬಸ್ಸು ಮುಂದೆ ಮುಂದೆ ನಡೆದಂತೆ ವೇಗ ಹೆಚ್ಚಿಸಿಕೊಂಡಿತ್ತು. ಹಿರಿಯೂರಿಂದ ಹೊರಟ ಬಸ್ಸು ಸೀರಾದಲ್ಲಿ ಕೆಲವು ಜನರನ್ನು ಹತ್ತಿಸಿಕೊಂಡು ಮುಂದೆ ಹೋಗಿ ಹಗಲೂಟದೊತ್ತಿಗೆ ತುಮಕೂರು ತಲುಪಿತ್ತು. ಸಿದ್ದಣ್ಣನ ಸಂಗಡಿಗರು ಊಟಕ್ಕೆ ಕುಳಿತರೆ ತಡವಾದೀತೆಂದು ತಮ್ಮ ಬುತ್ತಿಗಂಟುಗಳನ್ನು ಹೊತ್ತು ಸಮಾಪದಲ್ಲಿದ್ದ ಜಟಕಾ ಗಾಡಿಗಳ ಹತ್ತಿರ ಹೋಗಿ ಗುಬ್ಬಿಗೆ ಬರುವವರನ್ನು ಹುಡುಕುತ್ತಿದ್ದರೆ, ಮಾಮೂಲಿ ಜಟಕಾ ಗಾಡಿಯ ಮಾಲೀಕ ಹತ್ತಿರ ಬಂದು “ಬರ್ರಿ ಸ್ವಾಮಿ ಗುಬ್ಬಿಗೆ ಮುಟ್ಟಿಸಿ ಬರ್ರೀನಿ” ಎಂದು ಆಹ್ವಾನಿಸಿದ್ದ.
ಇವರು ನಾಲ್ಕುಜನ ತಮ್ಮ ರೊಟ್ಟಿ ಗಂಟುಗಳ ಸಮೇತ ಜಟಕಾ ಗಾಡಿ ಏರಿ ಕುಳಿತರು. ಕೂಡಲೇ ಪೇಟೆಯ ರಸ್ತೆಗಳನ್ನು ದಾಟಿ ಗುಬ್ಬಿಗೆ ಹೋಗುವ ರಸ್ತೆಯಲ್ಲಿ ಜಟಕಾ ಗಾಡಿ ಓಡುತ್ತಿತ್ತು. ಅಕ್ಕಪಕ್ಕದಲ್ಲಿ ಮರವಿಲ್ಲ, ಗಿಡವಿಲ್ಲ, ಹತ್ತಿರದ ಹೊಲ ಗದ್ದೆಗಳಲ್ಲೂ ಗಿಡಮರಗಳಿರಲಿಲ್ಲ. ಸಿಲ್ಲಿಂಗಪ್ಪನಿಗೆ ಇದೆಂಥಾ ದೇಶವೋ ಮಾರಾಯ ಅನ್ನುವಂತಾಗಿತ್ತು. ಜಟಕಾ ಸಾಬಿ ಸಿದ್ದಣ್ಣನ ಸಂಗಡ ಸಲುಗೆಯಿಂದ ಮಾತಾಡುತ್ತಿದ್ದ. ಹೊಸಾ ಗಾಡಿಗಳ ಬಗ್ಗೆ, ಜಟಕಾ ಕುದುರೆ ಬಗ್ಗೆ ಅದೂ ಇದೂ ಮಾತಾಡುತ್ತಾ ಗುಬ್ಬಿ ಎಂಬ ಊರನ್ನು ಸವಿಾಪಿಸಿದ್ದರು. ಸಿಲ್ಲಿಂಗಪ್ಪನಿಗೆ ಇದೂ ಒಂದು ದೊಡ್ಡ ಊರೇ ಅನ್ನಿಸಿತ್ತು. ಪೇಟೆಯಲ್ಲಿ ಸಾಗಿದ ಜಟಕಾ ಒಂದು ವಿಶಾಲ ಪೌಳಿಯಂಥಾ ಸ್ಥಳವನ್ನು ತಲುಪಿ ನಿಂತುಕೊಂಡಿತು. ಕೂಡಲೇ ಸಿದ್ದಣ್ಣ ಜಟಕಾದಿಂದಿಳಿದು “ಇಳೀರಪ್ಪಾ ಎಲ್ಲಾರು” ಅಂದ. ತಮ್ಮ ರೊಟ್ಟಿ ಬುತ್ತಿಗಂಟುಗಳನ್ನು ಇಳಿಸಿಕೊಂಡು ಜಟಕಾ ಸಾಬಿಗೆ “ಊಟ ಮಾಡಿಕೊಂಡು ಹೋಗಿರಿ” ಎಂದು ಸಿದ್ದಣ್ಣ ವಿನಂತಿಸಿದ್ದ.
“ಬೇಡ ಸ್ವಾಮಿ ಕತ್ತಾಗೋಕೆ ಮುಂಚೆ ತುಮಕೂರು ಸೇರೀನಿ” ಅನ್ನುತ್ತಾ ಆತ ಗಾಡಿ ತಿರುಗಿಸಿದ್ದ. ಸಿದ್ದಣ್ಣ ಜಟಕಾ ಬಾಡಿಗೆಯನ್ನು ಕೊಟ್ಟ ಕೂಡಲೇ ಜಟಕಾ ಗಾಡಿ ಹೊರಟು ಹೋಗಿತ್ತು.
ಬರಪ್ಪಾ ಹೊಟ್ಟೆಗೊಂದಿಷ್ಟು ಕೂಳು ಕಾಣಿಸೋಣಾ” ಅನ್ನುತ್ತಾ ಬಡಗಿಗಳ ಆವರಣದೊಳಗೆ ಸಿದ್ದಣ್ಣ ನಡೆದ. ಅವನನ್ನು ಹಿಂಬಾಲಿಸಿದರೆ ಅಲ್ಲಿ ಹತ್ತಾರು ಜನ ನಾನಾ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅವರಿಗೆ ಇವರ ಪರಿಚಯ ಇದೆಯೇನೋ ಅನ್ನುವಂತೆ ನೋಡಿ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು. ಸಿದ್ದಣ್ಣ ಒಳಗೆ ಹೋಗಿ ದೊಡ್ಡ ಬಡಗಿಯವರಿಗೆ ನಮಸ್ಕರಿಸಿ ಊಟ ಮಾಡಲು ನೀರು ತಂದ. ಎದುರಿಗಿನ ಚಪ್ಪರದಡಿಯಲ್ಲಿ ನಿಲ್ಲಿಸಿದ್ದ ಎರಡು ಹೊಸಾ ಗಾಡಿಗಳ ಬಳಿಗೆ ಹೋಗಿ, ಅಲ್ಲಿ ತಮ್ಮ ರೊಟ್ಟಿ ಬುತ್ತಿ ಗಂಟು ಬಿಚ್ಚಿ ಹೊಟ್ಟೆ ತುಂಬಾ ಉಂಡು ತೇಗಿದ್ದರು. ಅನಂತರ ಹೊಸಾ ಗಾಡಿಗಳ ತಪಾಸಣೆ ಮಾಡಿದ್ದರು. ಎರಡೂ ಗಾಡಿಗಳು ಅವರ ಕಣ್ಣಿಗೆ ಒಪ್ಪವಾಗಿ ಕಂಡಿದ್ದವು.
ಹಿಂದಿನ ಸಂಚಿಕೆ ಓದಿ: 5. ಕೆನ್ನಳ್ಳಿಯ ದುರಂತ
ಸಿದ್ದಣ್ಣ “ಬರೆಪ್ಪಾ ಅಜ್ಜಾರನ್ನ ಮಾತಾಡಿಸೋಣ” ಅನ್ನುತ್ತ ಹಿಂದಕ್ಕೆ ಬಂದು ಒಳಗೆ ಹೋಗಿ ವಯಸ್ಸಾಗಿದ್ದರೂ ಕಣ್ಣಲ್ಲಿ ಕಣ್ಣಿಟ್ಟು ಗುಂಬವೊಂದಕ್ಕೆ ಹುಗುಲು ಮಾಡುತ್ತಿದ್ದ ದೊಡ್ಡ ಬಡಗಿಯನ್ನ ಮಾತಾಡಿಸಿದ. ಅವರು “ಯಾಕೋ ಒಂದು ವಾರ ತಡಾ ಮಾಡ್ಕಂಡು ಬಂದ್ರಿ, ಏನರಾ ಕೆಲ್ಲಾ ಇತ್ತೇನು” ಅಂತ ವಿಚಾರಿಸಿದ್ದರು. “ಪೈರು ಕೊಯ್ದು ಕಾಲ. ಅಡಿವಾಗಿರೋದ್ರ ಕಣಕ್ಕೆ ಮುಟ್ಟಿ ಬಣವೆ ಹಾಕಬೇಕಲ್ಲಣ್ಣಾ, ಅದ್ಯೆ ಒಂದು ವಾರ ತಡಾ ಆಯ್ತು”. ಉತ್ತರಿಸಿ ಹತ್ತಿರ ಹೋಗಿ ಕುಳಿತ. ಸಿದ್ದಿಂಗಪ್ಪ ಮತ್ತಿಬ್ಬರು ಅಲ್ಲಿ ನಡೆಯುತ್ತಿದ್ದ ಕೆಲಸ ಕಾರಗಳನ್ನು ಅವಲೋಕಿಸುತ್ತಾ ನಿಂತಿದ್ದರು. ಅವರುಗಳನ್ನು ಕುಳಿತುಕೊಳ್ಳಲು ಸನ್ನೆ ಮಾಡಿದ ದೊಡ್ಡ ಬಡಗೀರು “ನೀವು ಒಳ್ಳೆ ಗಳಿಗೇಲಿ ಬಂದು ಗಾಡಿ ಮಾಡ್ತಾಕೆ ವೀಳ್ಯ ಕೊಟ್ರಿ. ನೀವು ಕೊಟ್ಟ ಮ್ಯಾಲೆ ಇನ್ನಾ ನಾಕು ಬಂಡಿ ಮಾಡಿ ಕೊಡಿ ಅಂತ ವೀಳ್ಯಾ ಕೊಟ್ಟೋಗಿದಾರೆ. ಮೊದ್ಲು ತಗಂಡೋದ ಗಾಡಿ ಚಂದಾಕಿದಾವ”, ವಿಚಾರಿಸಿದ್ದರು.
“ಗಾಡಿ ಬಾಳ ಉಪಯೋಗಕ್ಕೆ ಸಿಕ್ಕಂಗಾತು. ನಾವು ಹೊಸಾ ಗಾಡಿ ಮಾಡಿಸ್‌ದಿದ್ರೆ ಇನ್ನಾ ಬಾಳ ಕಷ್ಟ ಪಡಬೇಕಾಗಿತ್ತು. ಹುಲ್ಲು ಸೊಪ್ಪು ಹೇರೋದು ಅಷ್ಟೇ ಅಲ್ಲ ಎಲ್ಲಾ ಕೆಲಸಕ್ಕೂ ಗಾಡಿ ಬೇಕಾಗ್ತವೆ. ನಮ್ಮೂರೋರು ಇನ್ನೂ ಎಲ್ಡ್ ಮೂರು ಹೊಸಾ ಗಾಡಿ ಮಾಡಿಸ್‌ಬೇಕು ಅಂತಿದಾರೆ. ಏನ್ ಮಾಡೋದು ಗುಬ್ಬಿ ಬಾಳ ದೂರ ಅಂತಿದಾರೆ.” ಸಿದ್ದಣ್ಣ ಸೂಚನೆ ಕೊಟ್ಟಿದ್ದ. ದೊಡ್ಡ ಬಡಗೀರು ಸಂಜೆಯಾಗ್ತಿರೋದನ್ನ ಕಂಡು ಉಳಿ, ಕೊಡತಿಗಳಿಗೆ ನಮಸ್ಕರಿಸಿ ಅವನ್ನು ಎತ್ತಿಟ್ಟರು. ಅನಂತರ ಮೈಮುರಿದುಕೊಂಡು ಕುತ್ತಿಗೆಯನ್ನು ಅತ್ತಿತ್ತ
ತಿರುಗಿಸಿಕೊಂಡು ಕುಳಿತಿದ್ದ ಜಾಗದಲ್ಲೇ ಕಾಲುಚಾಚಿ ಮಲಗಿದರು. ಅವರು ಕಣ್ಣು ಮುಚ್ಚಿಕೊಂಡುದನ್ನು ಗಮನಿಸಿದ ಸಿದ್ದಣ್ಣ “ಎದ್ದೇಳಿ” ಅನ್ನುವ ಸತ್ಯ ಮಾಡಿ ಎದ್ದು ಹೊರಗೆ ಬಂದರು.
ಕೆಲಸಗಾರರೆಲ್ಲಾ ಹೊರಗೆ ಬಂದು ತಾವೂ ಮೈಮುರಿದುಕೊಂಡು ದೈಹಿಕ ಶ್ರಮಕ್ಕೆ ಆಕಳಿಸುತ್ತಾ ಅತ್ತಿತ್ತ ತೆರಳಿದರು. ಸಿದ್ದಣ್ಣ ತನ್ನ ಸಂಗಡಿಗರೊಂದಿಗೆ ಹೊಸಾ ಗಾಡಿಗಳನ್ನು ತಮ್ಮೂರಿಗೆ ತಂದು ಮುಟ್ಟಿಸುತ್ತಿದ್ದ ಚೆಂಬಸಣ್ಣನ ಮನೆಯನ್ನು ಕಂಡವರಲ್ಲಿ ವಿಚಾರಿಸುತ್ತಾ ಹುಡುಕಿದ್ದರು. ಇವರು ಅಲ್ಲಿಗೆ ಹೋದಾಗ ಆತ ತನ್ನ ಎತ್ತುಗಳಿಗೆ ನೀರುಕುಡಿಸಿ ಮನೆಯೊಳಗೆ ಹಿಡಿದುಕೊಂಡು ಹೋಗುತ್ತಿದ್ದ. ಆತನನ್ನು ಕಾಣುತ್ತಲೇ “ಸೆಂಬಸಣ್ಣಾ ಸೆಂದಕಿದೀಯೇನಪ್ಪಾ”, ಸಿದ್ದಣ್ಣ ಸ್ವಲ್ಪ ಗಟ್ಟಿಯಾಗಿ ಮಾತಾಡಿದ್ದರು. ತಕ್ಷಣ ಹೊರಗಡೆ ಮುಖ ತಿರುಗಿಸಿದ ಆತ ಗುರುತು ಹಿಡಿದು “ಅಣ್ಣಾ ಯಾವಾಗ ಬಂದ್ರಿ ಬರಿ ಬ” ಎಂದು ಮನೆಯೊಳಗೆ ಆಹ್ವಾನಿಸಿದ್ದ.
ಸಿದ್ದಣ್ಣ, ಸಿಲ್ಲಿಂಗಪ್ಪ ಮತ್ತಿಬ್ಬರು ಬಾಗಿಲ ಬಳಿ ಚಪ್ಪಲಿಗಳನ್ನು ಬಿಟ್ಟು ಮನೆಯೊಳಗೆ ನಡೆದರು. ಗುಬ್ಬಿ ಪ್ರದೇಶದ ಮನೆಗಳಲ್ಲಿ ಛಡಿ ಮತ್ತು ಪಡಸಾಲೆಗಳಿರದೆ, ದೊಡ್ಡ ಅಂಕಣ ಮತ್ತು ಮೂಲೆಯಲ್ಲಿ ಅಡಿಗೆ ಮನೆ ಇದ್ದವು. ಆಪಿನ ಚಾಪೆ ಮೇಲೆ ಕುಳಿತ ಗೌನಳ್ಳಿಯವರನ್ನು ಆತ್ಮೀಯತೆಯಿಂದ ಮಾತನಾಡಿಸಿದ್ದ ಚೆಂಬಸಣ್ಣ “ಯಾಕಣ್ಣಾ ಐದು ವಾರದ ಮೇಲಾಯ್ತು. ನಾಕು ವಾರಕ್ಕೇ ನೀವು ಹೊಸಾಗಾಡಿ ತಗಂಡೋಗಕೆ ಬರಿರಾ ಅಂದ್ಯಂಡಿದ್ವಿ, ಏನನಾ ಕೆಲ್ಲಾ ಇತ್ತೇನೋ”, ಕುತೂಹಲಿಯಾಗಿ ಮಾತಾಡಿದ್ದ.
“ಹೂಂಕಣಪ್ಪಾ ಈವಾಗ ನಮ್ ಕಡೆ ಹೊಲದ ಕೊಯ್ದು ಕಾಲ. ಬೆಳೆದದ್ದನ್ನ ಕೂಡಿಕ್ಯಾಬೇಕು. ಕೊಯ್ದದ್ದನ್ನ ಕಣಕ್ಕೆ ಸಾಗಿಸಿ ಬಣವೆ ಒಟ್ಟಮತೀವಿ ಆಮೇಲೆ ಉಗಾದಿಗೆ ಮುಂಚೆ ಕಣಾ ಮಾಡ್ತೀವಿ”. ಸಿದ್ದಣ್ಣ ವಿವರಿಸಿದ. ಸಿಲ್ಲಿಂಗಪ್ಪನಿಗೆ ಇವರಿಬ್ಬರ ಆತ್ಮೀಯತೆಯನ್ನು ಕಂಡು ಆಶ್ಚರವಾಗಿತ್ತು. “ನಿಮ್ ಗಾಡಿ ಕೂಡ್ಲಿ ವಾರದ ಮೇಲಾಗೈತೆ. ಎಲ್ಡ್ ಹೊಸಾ ಗಾಡಿನೂ ಚಪ್ಪರದಡೇಲಿ ನಿಲ್ಲೇದಾರೆ. ನಾನು ದಿನಕ್ಕೊಂದ್ಘಾರಿನಾದ್ರೂ ಅಲ್ಲಾಗೆ ಅಡ್ಡಾಡ್ತಾ ನೊಡ್ತಿದ್ದೀನಿ. ಈವಾಗ ಆದ್ಯಾರೋ ತುರುವೆಕೆರೆಯೋರು ಹೊಸಾಗಾಡಿ ಮಾಡಾಕೆ ಈಳ್ಳೇವು ಕೊಟ್ಟಿದಾರೆ.
ಹಿಂದಿನ ಸಂಚಿಕೆ ಓದಿ: 6. ಎಲ್ಲೆಲ್ಲಿಂದಲೋ ಬಂದರು
ಅವರಿಗಂತೂ ವರ್ಷ ಪೂರ್ತಿ ಕೆಲ್ಲಾ ದುಡಿಮೆ ಇದ್ದೇ ಇರುತ್ತೆ” ಅಂತ ಚೆಂಬಸಣ್ಣ ಮಾತಾಡಿ “ಈವಾಗ ಸಂಜೆ ಆಗೈತೆ ಗುಡಿಕಡೆಕೋಗಿ ಇಲ್ಲಿಗೇ ಬಂದ್ ಬಿಡಿ. ರಾತ್ರಿ ಇಲ್ಲೇ ಊಟ ಮಾಡಾನ” ಅಂತ ಆಹ್ವಾನಿಸಿದ್ದ. “ಅಯ್ಯಯ್ಯಪ್ಪಾ ಮಾರಾಯ ಈಗಿನ್ನಾ ಉಂಡಿದೀವಿ, ರಾತ್ರಿ ಊಟ ಬ್ಯಾಡ.. ಅಷ್ಟೋರಿಗೆ ರೊಟ್ಟಿ, ಕೆಂಪಿಂಡಿ, ಬುತ್ತಿಅನ್ನ ಉಣ್ಣಿಸಬೇಕು. ನೀನು ಅಲ್ಲಿಗೆ ಬಂದ್ ಬಿಡು. ನೀನೂ ಬುತ್ತಿ ಅನ್ನ ಉಣ್ಣಬೌದು”. ಸಿದ್ದಣ್ಣ ಚೆಂಬಸಣ್ಣನ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದ, “ನಾವು ಅಡ್ಡಾಡಿಕ್ಕಂಡು ಹೋಗಿ ದೇವಸ್ಥಾನದಾಗೆ ಪೂಜೆ ನೋಡ್ಕಂಡ್ ಬಡಗೀರ ವಠಾರಕ್ಕೆ ಬತ್ತೀವಿ. ನೀನೂ ಅಲ್ಲಿಗೆ ಬಂದುಬಿಡು” ಅನ್ನುತ್ತಾ ಸಿದ್ದಣ್ಣ ಏಳಲನುವಾದ. “ಅಣ್ಣಾ ತಡಕಳ್ಳಿ, ನಾನೂ ಬತ್ತೀನಿ ದೇವಸ್ಥಾನದ ಪೂಜೆಗೆ” ಅಂದು ಅಡಿಗೆ ಕೋಣೆಗೆ ಹೋಗಿ ಹೆಣ್ಣು ಮಕ್ಕಳು ತಯಾರಿಸಿದ್ದ ನಿಂಬೆಹಣ್ಣಿನ ಪಾನಕದ ಲೋಟಗಳನ್ನು ತಂದು ಇವರ ಮುಂದಿರಿಸಿದ.
ಎಲ್ಲರೂ ಪಾನಕ ಕುಡಿದು ಮೇಲೆದ್ದರು. ಚೆಂಬಸಣ್ಣನೇ ಮುಂದೆ ನಡೆಯುತ್ತಾ ದೇವಸ್ಥಾನದ ಹಾದಿ ಹಿಡಿದಿದ್ದ. ದೇವಸ್ಥಾನ ತಲುಪುತ್ತಲೇ ಚಪ್ಪಲಿಗಳನ್ನು ಹೊರಗಡೆ ಕಳಚಿ ದೇವಸ್ಥಾನದ ಎತ್ತರದ ಹೊಸ್ತಿಲಿಗೆ ನಮಿಸಿ ಚೆಂಬಸಣ್ಣ ಪ್ರವೇಶಿಸಿದ್ದ. ಇವರೂ ಆತನನ್ನೇ ಅನುಸರಿಸಿ ದೇವಸ್ಥಾನದೊಳಗೆ ನಡೆದು ನೇತುಹಾಕಿದ್ದ ಗಂಟೆಗಳ ಸದ್ದು ಮಾಡಿ ಗರ್ಭಗುಡಿಯಲ್ಲಿದ್ದ ಚೆನ್ನಬಸವೇಶ್ವರ ಸ್ವಾಮಿ ವಿಗ್ರಹಕ್ಕೆ ನಮಿಸಿದ್ದರು. ಪೂಜಾರರು ಇವರನ್ನು ಮತ್ತು ಚೆಂಬಸಣ್ಣನನ್ನು ಎರಡೆರಡು ಬಾರಿ ನೋಡಿ ಬೆಟ್ಟು ತೋರಿಸಿ “ನೀವು ಹಿರಿಯೂರ ಕಡೇರು ಅಲ್ವೇನ್ರಿ”, ಪ್ರಶ್ನಿಸಿದ್ದರು. ಕೂಡಲೇ ಸಿದ್ದಣ್ಣ “ಹೂಂ ಸ್ವಾಮಿ ಅಲ್ಲೇ ಗೌನಳ್ಳಿ ನಮ್ಮೂರು” ಅಂದ.
ಪೂಜಾರರಿಗೆ ಗೌನಳ್ಳಿಗೆ ವಲಸೆ ಹೋಗಿರುವ ಜಂಗಮಯ್ಯರ ನೆನಪಾಗಿ “ಏನ್ರಿ ನಿಮ್ಮೂರಿಗೆ ನಮ್ ಕಡೆ ಐದಾರು ಜನ ಜಂಗಮೈಗಳು ಬಂದಿದಾರಂತೆ ನಿಜವೇ?” ಅಂತ ಪ್ರಶ್ನಿಸಿದ್ದರು. “ಹೌದು ಸ್ವಾಮಿ ಅವರು ಬಂದು ತಿಂಗಳು ಮೇಲಾಗೈತೆ. ಅವರು ನಿಮಿಗೇನರಾ ಸಂಬಂಧನಾ” ಸಿದ್ದಣ್ಣ ಹೇಳಿದ. “ಹೌದೂರೀ, ಮೂಗನಾಯ್ಕನ ಕೋಟೆ ಬೆಟ್ಟದಳ್ಳಿ ಕಡೇಲರು, ಹಳೇ ಸಂಬಂಧ. ಅಲ್ಲೆಲ್ಲಾ ಈಗ ನಾಕು ವಕ್ಷದಿಂದ ಮಳೆ ಬಿದ್ದಿಲ್ಲ. ಅಪ್ಪಂತೋರೆ ಕೂಲಿ ಮಾಡಂಗಾಗೈತೆ ಬರ ಬಂದಾಗಿದೆ ಅಂದ್ರೆ ಅಲ್ಲಿ ಏನೂ ಕೂಲಿ ಸಿಕ್ಕಿತು.
ಅಕ್ಕಪಕ್ಕದ ಊರ ಜನಾ ಎಲ್ಲಾ ಕುಣಿಗಲ ಕೆರೆ ಹಿಂದಿನ ಹೊಲಗದ್ದೆಗಳಾಗಿ ಕೂಲಿ ಮಾಡ್ಕಂಡು ಹೊಟ್ಟೆಹೊರೀತಿದಾರೆ. ತುಮಕೂರಿಗೆ ಬಂದು ಕೂಲಿ ಸಾಲಿ ಮಾಡ್ತಿದಾರೆ. ಇವು ಎಂದಾದ್ರೂ ಕೂಲಿ ಕೆಲ್ಲಾ ಮಾಡಿದ್ದಾರಾ. ಅದಿಲ್ಲ ಇಲ್ಲಿಂದ ಅಷ್ಟು ದೂರದ ನಿಮ್ಮೂರಿಗೆ ಯಾಕೆ ಬಂದ್ರು, ಅದೆಂಗೆ ನಿಮ್ಮೂರು ಅವರಿಗೆ ಪರಿಚಯ, ಆದೇ ಆಶ್ಚಯ್ಯ” ಎಂದು ತಮ್ಮ ವಿಸ್ಮಯವನ್ನು ವ್ಯಕ್ತಪಡಿಸಿದ್ದರು.
ಹಿಂದಿನ ಸಂಚಿಕೆ ಓದಿ: 7. ಊರು ತೊರೆದು ಬಂದವರು
“ನಮಿಗೂ ಗೊತ್ತಿಲ್ಲ ಸ್ವಾಮಿ. ಈಗ್ಗೆ ನಾಕೈದು ವಾರದ ಹಿಂದೆ ಒಂದು ಸಂಜೆ ನಮ್ಮೂರಿಗೆ ಬಂದು ಕುಡಿಯಾಕೆ ನೀರು ಕೇಳಿದ್ದಾರೆ. ಆವಾಗ ಅಲ್ಲಿಗೆ ಹೋಗಿದ್ದ ನಮ್ಮಜ್ಜ ‘ಎದ್ದೆ… ಸ್ವಾಮಿ ನಾವೂ ಲಿಂಗಾಯ್ತರೆ ಬರ್ರಿ ಮನಿಗೋಗನ’ ಅಮ್ಮ ಕರಕಂಡು ಬಂದು ಬಿಸಿಬಿಸಿ ಹಾಲು ಕೊಟ್ಟು ಆಮೇಲೆ ಅವರ ಗುರುಕೂನೆ ವಿಚಾರಿಸೈತ” ಸಿಲ್ಲಿಂಗಪ್ಪ ವಿವರಿಸಿದ್ದ. “ಗೌಡ್ರ ಗೊಂಚಿಕಾರೂ ಸೇರಂಡು ಅವರಿಗೆ ವಾಸಮಾಡಾಕೆ ಮನೆ ಕಟ್ಟಿಸಿಕೊಟ್ಟಿದಾರೆ. ಅಷ್ಟೇ ಅಲ್ಲ, ಊರಿಗೆ ಹತ್ತಿರದಾಗೇನೆ ಐದಾರು ಎಕ್ರೆ ಜಮಾನು ಹಸನು ಮಾಡಿಕೊಟ್ಟಿದಾರೆ. ಇದಕ್ಕೆಲ್ಲ ಮುಖ್ಯಕಾರಣಾಂದ್ರೆ ನಮ್ಮೂರಾಗೆ ಬಿನ್ನ ತೀರಿಸೋಕೆ ಜಂಗಮಯ್ಯಗಳು ಇಲ್ಲಿಲ್ಲ”, ಸಿದ್ದಣ್ಣ ತಿಳಿಸಿದ್ದ. ಪೂಜಾರಿಗೆ ಇದೆಲ್ಲಾ ಮಾತ ಆಲಿಸ್ತಾ ಪೂಜಾ ಸಮಯ ಸಮಿಾಪಿಸಿತ್ತು. ಕೂಡಲೇ ದೇವಸ್ಥಾನದ ಬಾವಿಯಿಂದ ತಾಮ್ರದ ಬಿಂದಿಗೆಯಲ್ಲಿ ನೀರು ಸೇದಿ ತಂದು ಚನ್ನಬಸವೇಶ್ವರ ಸ್ವಾಮಿಯ ಪೂಜೆಗಾರಂಭಿಸಿದ್ದರು.
ಮಂಗಳಾರತಿ, ತೀರ್ಥ ಪ್ರಸಾದ ವಿತರಿಸುವಾಗ ಪೂಜಾರು ಕೊಂಚ ವಿಚಲಿತರಾಗಿದ್ದಂತೆ ಕಂಡಿದ್ದರು. ಇದನ್ನ ಗಮನಿಸಿದ ಸಿದ್ದಣ್ಣ “ಗೌನಳ್ಳಿಗೆ ಬಂದಿರೋ ಜಂಗಮಯ್ಯರ ವಿಚಾರ ಪೂಜಾರ ತಲೆ ಹೊಕ್ಕಿರೋಂಗಿದೆ” ಅಂದುಕೊಂಡಿದ್ದ. ಲಗುಬಗೆಯಿಂದ ಚೆಂಬಸಣ್ಣ, ಸಿದ್ದಣ್ಣ, ಗೌನಳ್ಳಿಯ ಮತ್ತೆ ಮೂವರು ಬಡಗೀರ ವಠಾರಕ್ಕೆ ಹಿಂತಿರುಗಿದ್ದರು. ಇವರ ನಿರೀಕ್ಷೆಯಲ್ಲಿದ್ದ ಹಿರಿಯ ಬಡಗಿ, “ಚೆಂಬಸಣ್ಣಾ ನೀನೆಲ್ಲಿ ಜತೆಯಾದೆ. ಬೆಳಿಗ್ಗೆ ಇವರೂರಿಗೆ ಗಾಡಿ ಹೊಡಕಂಡೋಗ್ತಿಯಾ, ಎಲ್ಲಾ ಮಾತಾಡಿದೀರಾ ಹೆಂಗೆ” ವಿಚಾರಿಸಿದ್ದರು. “ನಾವೇನೂ ಮಾತಾಡಿಲ್ಲ ಕಣಣ್ಣಾ. ನಾಳೆ ನಾಡಿದ್ದು ನನಿಗೇನೂ ಬ್ಯಾರೆ ಕೆಲ್ಲಾ ಇಲ್ಲ, ಹೊಸಾಗಾಡಿ ಹೊಡಕಂಡೋಗಬೌದು” ಚೆಂಬಸಣ್ಣ ಉತ್ತರಿಸಿದ್ದ.
“ಸರಿ ಹಂಗಾದ್ರೆ ಬರಿ ಕೂಡು ರ್ಬ”, ಹಿರೇ ಬಡಗಿ ಹತ್ತಿರಕ್ಕೆ ಕರೆದರು. “ಅಣ್ಣಾ ನಿಮ್ ಸ್ನಾನ ಆಗಿದ್ರೆ ನಮ್ ರೊಟ್ಟಿ ಕೆಂಪಿಂಡಿ ರುಚಿ ನೋಡ್ಲಿಡಿ, ಚೆಂಬಸಣ್ಣನೂ ನಮ್ ಬುತ್ತಿ ಅನ್ನ ಊಟ ಮಾಡ್ಲಿ”, ಸಿದ್ದಣ್ಣ ಕಕ್ಕುಲತೆಯಿಂದ ಆಮಂತ್ರಿಸಿದ್ದ. “ನನ್ ಸ್ನಾನ ಆಗೈತೆ. ನೀವೆಲ್ಲಾ ಸಂಜೆ ಉಂಡಿದೀರ, ಹೆಂಗ್ ಮಾಡ್ತೀರಾ ನಾನು ಚೆಂಬಸಣ್ಣ ಇಬ್ರೆ ಉಣ್ಣಬೇಕಾ?”, ಮುಜುಗರವಿಲ್ಲದೆ ಹಿರಿಯ ಬಡಗಿ ಮಾತಾಡಿದ್ದರು. “ಊನಣ್ಣಾ ನಾವ್ಯಾರೂ ಊಟ ಮಾಡಂಗಿಲ್ಲ. ನೀವಿಬ್ರೆ ಊಟ ಮಾಡ್ರಿ, ಸಿಲ್ಲಿಂಗಪ್ಪ ಬುತ್ತಿಗಂಟು ತಂದು ಬಿಚ್ಚಿರಿ” ಎಂದು ಸೂಚಿಸಿದ್ದ. ಸಿಲ್ಲಿಂಗಪ್ಪನಿಗೆ “ಈ ಬಡಗಿ ಯಜಮಾನು ಬೋಸಲೀಸು. ಸಿದ್ದಪ್ಪಣ್ಣಂಗೆ ಏಟು ಸಲೀಸಾಗಿ ಮಾತಾಡ್ತರೆ. ಬಾಳ ದೊಡ್ಡ ಮನುಸ್ತು” ಅಂದುಕೊಂಡ. ಸಜ್ಜೆರೊಟ್ಟಿ ಕೆಂಪಿಂಡಿ ಮೇಲೆ ಗಟ್ಟಿ ತುಪ್ಪ ಬಡಿಸಿದ್ದನ್ನ ಉಂಡು ಒಂದೀಟೀಟು ಬುತ್ತಿ ಅನ್ನ ಉಂಡು ತೇಗಿದ್ದರು ಹಿರಿಯ ಬಡಗಿ ಮತ್ತು ಚೆಂಬಸಣ್ಣ.
“ಅಣ್ಣಾ ಎಳನೆ ಸರಿ ಹೊಳ್ಳಿದ್ದೀವಲ್ಲಾ ಅಂಗೇ ಉಂಬೊತ್ತಿಗೇ ಹೊಳ್ಳೆ ಸಂಜೆ ಹೊತ್ತೆ ಚಿಕ್ಕನಳ್ಳಿ ಸೇರಬೌದು ಹೆಂಗ್ ಮಾಡಾನಾ”, ದೊಡ್ಡ ಬಡಗೀರಲ್ಲಿ ಪ್ರಸ್ತಾಪಿಸಿದ್ದ. “ಅಂಗೇ ಮಾಡ್ರಿ. ಪೂಜೆ ಮಾಡದು ನಗಕ್ಕೆ ಎತ್ತು ಹೂಡದು ಅಷ್ಟೇ ತಾನೆ”, ಅವರು ಹುಕುಂ ನೀಡಿದ್ದರು. ಸಿದ್ದಿಂಗಪ್ಪ ಮತ್ತು ಅವನ ಇಬ್ಬರು ಸಂಗಡಿಗರು ರೊಟ್ಟಿ ಬುತ್ತಿ ಗಂಟನ್ನು ಎತ್ತರದ ಜಾಗದಲ್ಲಿ ಎತ್ತಿಟ್ಟು ಕಂಬಳಿ ದುಪ್ಪಟಿಗಳನ್ನು ಹೊರತೆಗೆದರು. ಸಿದ್ದಣ್ಣ ಹೊಸಾ ಗಾಡಿಗಳನ್ನು ನಿ,ಲ್ಲಿಸಿರುವ ಚಪ್ಪರದತ್ತ ಹೋಗಲು ಸನ್ನೆ ಮಾಡಿದ. ಕೂಡಲೇ ಮೂರುಜನ ಅತ್ತ ನಡೆದರು. ದೊಡ್ಡ ಬಡಗಿಯವರು ಈಗ್ಗೆ ಆರೇಳು ತಿಂಗಳ ಹಿಂದೆ ಮೊದಲ ಸರ್ತಿ ಈ ಊರಿನೋರು ಹೊಸಾ ಬಂಡಿಗೇಮ್ ಬಂದವರು ಎಂಥಾ ಅನ್ನೋನ್ಯತೆ ಬೆಳೆಸಿದರು.
ಹಿಂದಿನ ಸಂಚಿಕೆ ಓದಿ: 8. ಮೋಜಣಿಕೆ ಮಾಡಿದರು
ನಾಳೆ ಬೆಳಿಗ್ಗೆ ಇವರು ಹೊರಟೋದರೆ ಮತ್ತೆ ಬಾರೋ ಹೆಂಗೋ, ಇವರೂರಿನ ರೊಟ್ಟಿ ಬುತ್ತಿಗಿಂತ ಅವರ ನಿಷ್ಕಳಂಕ ನಡವಳಿಕೆ ನನ್ನನ್ನ ಕೊಂಡ್ ಬಿಟ್ಟಿದಾವೆ” ಅಂದುಕೊಂಡು ಅನ್ಯ ಮನಸ್ಕರಾಗಿದ್ದರು. ಸಿದ್ದಣ್ಣನಿಗೆ ಹಗಲೆಲ್ಲಾ ಮೈಮುರೇ ದುಡಿದು ದಣಿದಿದ್ದಾರೆ. ಪಾಪ ನಿದ್ದೆ ಬರಿರಬೌದು ಅಂದುಕೊಂಡು “ಅಣ್ಣಾರೇ ನೀವು ಮಲಿಕ್ಕಳ್ಳಿ, ನಾನು ನಮ್ಮೂರೋರತ್ರ ಹೋಗ್ತಿನಿ” ಅಂದ. ಅವರು “ನಡೀಯಪ್ಪ” ಅಂದು. “ಇನ್ನೇನೇಳನಪ್ಪಾ” ಮನಸ್ಸಿನಲ್ಲೇ ಅಂದುಕೊಂಡರು.
ದೊಡ್ಡ ಬಡಗೀರಿಗೆ ತುಂಬಾ ಹೊತ್ತಿನ ತನಕ ನಿದ್ರೆ ಬಂದಿರಲಿಲ್ಲ. “ತಾನು ಬಡಗಿತನ ಕಲ್ಲು ನೂರಾರು ಹೊಸಾ ಗಾಡಿಗಳು ಕೂಡ್ತಿದ್ದೀನಿ. ಜನಾ ಬತ್ತಾರೆ, ಈಳ್ಳೇವು ಕೊಟ್ಟು ಬಂಡಿ ಮಾಡಿಸ್ಕಂಡ್ ಹೋಗ್ತಾರೆ. ಗಾಡಿ ಹೊಡಕಂಡು ಹೋದೋರು ಮತ್ತೆ ಇತ್ತಾಗಿ ಮುಖ ತಿರಿಗಿಸೋಲ್ಲ. ಯಾಕೆ ಬಂದಾರು, ಅವ್ರ ಕೆಲ್ಲಗಳೇ ಅವರಿಗೆ ಮುಖ್ಯ. ಆದ್ರೆ ಇವರು ನೋಡ್ರಿ ಗೌನಳ್ಳಿ ಅಂತ, ಅದು ಎಲ್ಲೆತೋ, ಬಾಳ ದೂರ ಅಯ್ತಾರೆ. ನಮ್ ಚೆಂಬಸಣ್ಣಂಗೊತ್ತು ಏಟು ದೂರ ಆಮ್ಲ. ನಾಲಕ್ ದಿನಕ್ಕೆ ಗಾಡಿ ಹೊಡಕಂಡೋಗಿ, ತಿರಿಗಿಕ್ಕಂದ ಬಂದ್ ಬಿಡ್ತಾನೆ. ಅವನೇಳ್ತಾನೆ ಆ ಊರು ಸುತ್ತಾಮುತ್ತಾ ಗುಡ್ಡದ ಸಾಲು ಬಾಳ ಚೆಂದಾಗಿದೆ. ಏಟು ಮರ ಗಿಡ ಬೆಳ್ಳಿದಾರೆ ಆ ಊರ್ ಜನ ಅಮ್ಮ, ಅವನು ಹೇಳಾದ್ ಕೇಳಿದ್ರೆ ಒಂದು ಸರ್ತಿ ಅಲ್ಲಿಗೆ ಹೋಗಿ ಬರಾನಾ ಅನ್ಸುತ್ತೆ” ಅಂದುಕೊಳ್ತಾನೇ ನಿದ್ದೆಗೆ ಜಾರಿದ್ದರು.
ಸಿದ್ದಣ್ಣ ಚಪ್ಪರದಡಿಯ ಗಾಡಿಗಳ ಬಳಿಗೆ ಬಂದ. ಸಿದ್ದಿಂಗಪ್ಪ ಮತ್ತಿಬ್ಬರು ನಿದ್ದೆಗೆ ಜಾರಿದ್ದರು. ಆತನೂ ಗಾಡಿ ಪಕ್ಕದ ಜಗಲಿ ಮೇಲೆ ಕಂಬಳಿ ಹಾಸಿ ದುಪ್ಪಟಿ ಹೊದ್ದು ಮಲಗಿದ್ದ. ನಿದ್ದೆ ಬಾರದು. ಸಿದ್ದಿಂಗಪ್ಪ ಕನಸಿನಲ್ಲಿ ‘ಹೂ ಹೋಗೊ ನಿಮ್ಮ. ತಿಳಕಂಡ್ ಮಾತಾಡ್ರಲೇ’ ಎಂದು ಛೇಡಿಸುತ್ತಿದ್ದ. ‘ತುಂಬಾ ಹುಮ್ಮಸ್ಸಿನ ಯುವಕ ಹೆಗಲ ಮ್ಯಾಲೆ ಎಳು ಅಡ್ಡೆಗೆ ನೀರು ಹೊದ್ದಾನೆ. ಅವನ ಗೆಣಿಕಾರರೊಂದಿಗೆ ಮಾತಾಡಿದ್ದನ್ನು ಕನಸಿನಲ್ಲಿ ಕಾಣಿದಾನೆ’ ಅಂದುಕೊಂಡು ಬೆಳಿಗ್ಗೆ ಗಾಡಿ ಪೂಜೆ ಮಾಡಿ ನೊಗ ಎತ್ತಿ ಹೋರಿ ಹೆಗಲ ಮ್ಯಾಲೆ ಇಟ್ಟು ಬಿಟ್ರೆ, ಈ ಬಡಗೀರ ಸವಾಸ ಮುಗುದೋಗುತ್ತೆ. ಈ ಯಜಮಾನು ನಾವು ಬಂದ್ರೆ ಅದೇಟು ಕಕಲಾತಿ, ನಮ್ ರೊಟ್ಟಿಬುತ್ತಿ ಉಡ್ತಾರೆ. ಎಗ್ಗಿಲ್ಲ ಸಿಗ್ಗಿಲ್ಲ ಶಿವರಾತ್ರಿ ಇಲ್ಲ.
ಸಲೀಸಾಗಿ ಉಂಡು ಕೈ ತೊಳಕಮಾರೆ, ಒಂದು ಸರ್ತಿ ನಮ್ಮೂರಿಗೆ ಬರ್ರಿ ಅಮ್ಮ ಯಾಕೆ ಕರೀಬಾರು. ಬಾರೋ ಹೆಂಗೋ, ನಮ್ಮೂರಿಗೆ ಬಂದ್ರೆ ಕನಿಷ್ಟ ನಾಕು ದಿನ ಇಲ್ಲಿ ಅವರ ಕೆಲ್ಸಾ ನಿಂತೋಗುತ್ತೆ. ಏನರಾ ಆಗ್ಲಿ ಬೆಳಿಗ್ಗೆ “ಅಣ್ಣಾರೇ ನಮ್ಮೂರಿಗೆ ಒಂದು ಸರಿ ಬರಿ, ಇವತ್ತೇ ಹೊಲ್ಡ್‌ಬಿಡಿ. ಹೆಂಗಾದ್ರೂ ಹೊಸಾ ಗಾಡಿ ಹೋಗ್ತಾ ಇದಾವೆ ಜತೇಲಿ ಹೋಗಾನ ಬಂದು ಬಿಡ್ರಿ ಅ ಕೇಳೇ ಬಿಡ್ತೀನಿ” ಎಂದು ಯೋಚಿಸುತ್ತಲೇ ಸಿದ್ದಣ್ಣ ಆಕಳಿಸಿದ್ದ.
ಹಿಂದಿನ ಸಂಚಿಕೆ ಓದಿ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ
ಗೌನಳ್ಳಿಯವರಿಗೆ ನಸಿಗ್ಗೆಲೆ ಎದ್ದು ರೂಢಿ. ಸಿದ್ದಣ್ಣ, ಸಿದ್ದಿಂಗಪ್ಪ ಅವರ ಸಂಗಡಿಗರಿಬ್ಬರು ಎದ್ದು ಮೈಮುರಿದುಕೊಂಡು ಕಂಬಳಿ ದುಪ್ಟಿಗಳನ್ನು ಸುಮ್ಮನಾಗಿಬಿಟ್ರಲ್ಲ ಹೆಂಗ್ ಮಾಡೋದು. “ಅಷ್ಟೋರೆ ನೀವು ನಮ ಕೊಡವಿ ಮಡಚಿಟ್ಟು ಬಡಗೀರ ವಠಾರದಿಂದ ಹೊರಗೆ ಬಂದರೆ ಇನ್ನೂ ಮಬ್ಬುಗತ್ತಲು. ನಿಧಾನವಾಗಿ ಬೆಳಕು ಹರಿಯುತ್ತಿತ್ತು. ರೂಢಿಯಂತೆ ಸಿದ್ದಣ್ಣ ಹತ್ತಿರದ ಹೊಲಗದ್ದೆಗಳ ಕಡೆ ನಡೆದ. ಉಳಿದ ಮೂರು ಜನ ಅವನನ್ನು ಹಿಂಬಾಲಿಸಿದ್ದರು. ಎದುರಿಗೆ ಅಥವಾ ಆಸುಪಾಸಿನಲ್ಲಿ ನೀನೇ ಅನ್ನೋ ಪ್ರಾಣಿ ಇರಲಿಲ್ಲ. ಇವರು ತಮ್ಮ ಬೆಳಗಿನ ವಿಧಿಗಳನ್ನು ಮುಗಿಸಿ, ಹೊಲದಲ್ಲಿದ್ದ ತೋಡುಬಾವಿಯಲ್ಲಿಳಿದು ಕೈಕಾಲು ಮುಖ ತೊಳೆದುಕೊಂಡು ಬೆಳಗಿನ ಶಿವಪೂಜೆ ಮುಗಿಸಿದರು.
ದೊಡ್ಡ ಬಡಗೀರನ್ನ ಗೌನಳ್ಳಿಗೆ ಕರೆಯಲು ಚೆಂಬಸಣ್ಣನ ಸಹಾಯ ಕೋರಬೇಕೆಂದು ಆತನ ಮನೆಯ ದಿಕ್ಕಿಗೆ ಹೆಜ್ಜೆಹಾಕಿದ್ದ. ಸಿಲ್ಲಿಂಗಪ್ಪ ಮತ್ತಿಬ್ಬರು ಆತನನ್ನೇ ಹಿಂಬಾಲಿಸಿದ್ದರು. ಚೆಂಬಸಣ್ಣನ ಮನೆ ತಲುಪಿದಾಗ ಆತ ಎತ್ತುಗಳಿಗೆ ಗ್ವಾಂದಿಗೆ ತುಂಬಾ ಮೇವು ತುಂಬಿಸುತ್ತಿದ್ದ. ಇವರನ್ನು ಕಾಣುತ್ತಲೇ “ರ್ಬ ಬರಿ ನಸಿಗ್ಗೆಲೆ ಬಂದ್ರಿ, ಮೈತೊಳಕಾಬೇಕಾ. ನೀರು ಕಾದೈದಾವೆ ತೊಳಕಂಡ ಬಿಡಿ” ಅನ್ನುತ್ತಾ ಸ್ವಾಗತಿಸಿದ್ದ. “ನಂ ಶಿವಪೂಜೆ ಆಗೈತೆ” ಅನ್ನುತ್ತಲೇ ಹೊರಗಿನ ಕಟ್ಟೆಮೇಲೆ ಕುಳಿತುಕೊಳ್ಳುತ್ತಾ “ಚಿಕ್ಕುಂಬೊತ್ತೆ ಗಾಡಿ ಪೂಜೆ ಮಾಡಿ ಹೊಳ್ಳಬಿಟ್ರೆ, ಮತ್ತೆ ಗುಬ್ಬಿ ಕಡಿಗೆ ಯಾವಾಗ ಬತ್ತೀವೋ ಏನೋ? ಬಡಗಿ ಅಣ್ಣಾರಿಗೆ ಒಂದ್ದಾರಿ ನಮ್ಮೂರಿಗೆ ಬರ್ರಿ ಅಮ್ಮ ಕರಿಯೋನಾ ಯೋಚೆ ಮಾಡ್ತಿದ್ದೀನಿ”, ಸಿದ್ದಣ್ಣ ನೇರವಾಗಿ ವಿಷಯ ಪ್ರಸ್ತಾಪಿಸಿದ್ದ.
“ಬಾಳ ಒಳ್ಳೇ ವಿಚಾರ. ನಾನು ನಿಮ್ಮೂರಿನ ಗುಡ್ಡಗಳು, ಗಿಡಮರಗಳ ವಿಚಾರ ಮಾತಾಡಿದ್ರೆ ಅಷ್ಟೋರು ಬಾಳ ಖುಷಿಯಿಂದ ಆಲಿಸ್ತಾರೆ. “ನೀನೇಳೋದ್ ಕೇಳಿದ್ರೆ ಆ ಊರಿಗೆ ಒಂದ್ ಸರ್ತಿ ಹೋಗಿ ಬರಬೇಕು ಅನ್ಸುತ್ತೆ ಅಂತಾರೆ. ನೀವು ಬ ಅಂತ ಕರೆದು ಬಿಡಿ. ನಾನೂ ಮಾತಾಡ್ತೀನಿ.” ಚೆಂಬಸಣ್ಣ ಪ್ರತಿಕ್ರಿಯಿಸಿದ್ದ. ಗುರುಸಿದ್ದ ಮತ್ತಿಬ್ಬರಿಗೆ “ಓಹೋ ಸಿದ್ದಣ್ಣ, ಇದೈ ಬೆಳ್ಳಂಬೆಳಿಗ್ಗೆ ಇತ್ತಾಗಿ ಬಂದಿದ್ದು” ಅಂದುಕೊಂಡು ಅವರೂ ಖುಷಿಯಾದರು. “ಸೆಂಬಸಣ್ಣಾ ನೀನು ಬೇಗ ಬಂದು ಬಿಡು” ಅನ್ನುತ್ತಲೇ ಸಿದ್ದಣ್ಣ ಎದ್ದು ಹೊರಟಿದ್ದ.
ಬಡಗೀರ ವಠಾರದಲ್ಲಿ ಕಸ ಗುಡಿಸಿ ನೀರು ಹಾಕುತ್ತಿದ್ದರು. ಹಿರಿಯ ಬಡಗಿಯವರು ಹೊಸಾ ಗಾಡಿಗಳ ಬಳಿಯಲ್ಲಿದ್ದರು. ಸಿದ್ದಣ್ಣನ ತಂಡ ಅಲ್ಲಿಗೆ ಸವಿಾಪಿಸಿದ ಕೂಡಲೆ ಹಿರಿಯ ಬಡಗಿ “ಬರೆಪ್ಪಾ ಗಾಡಿ ಬಯಲಿಗೆ
ಎಳಿಬರಿ” ಅಂತ ಕರೆದು ಚಪ್ಪರದಿಂದ ಹೊರಗೆ ಬಂದರು. ಸಿದ್ದಣ್ಣ ಅವರ ಮುಖವನ್ನೇ ಗಮನಿಸುತ್ತಿದ್ದ. ಯಾಕೋ ಬಡಗೀರು ಸಪ್ಪಗಿದ್ದಾರೆ ಅನ್ನಿಸಿತ್ತು. “ಈವಾಗ ಮಾತಾಡಿಸ್ಟೇಕೋ ಬ್ಯಾಡೊ ಗೊಂದಲಕ್ಕೀಡಾದ. “ನಿಮ್ಮುಡುಗರ ಕರಕಂಡು ಗಾಡಿ ಅಚ್ಚಿಗೆ ಎಣ್ಣೆ ಹಚ್ಚಿರಪ್ಪ” ಅಂದರು. ಇದೇ ಸಮಯವೆಂದು “ಅಷ್ಟೋರೇ ನಾವು ಹೊಲ್ಲೋದ್ರೆ ಮತ್ತೆ ಇತ್ತಾಗಿ ಯಾವಾಗ ಬತ್ತೀವೋ ಗೊತ್ತಿಲ್ಲ.
ಈಗ ನಮ್ ಜತೀಗೆ ನೀವು ನಮ್ಮೂರಿಗೆ ಬಂದ್ರೆ ಚೆ- ಂದಾಕಿತ್ತು. ಆರು ಗಾಡಿ ತಗಂಡೋಗಿರರು, ಎಲ್ಲ ಬಾಳ ಇಷ್ಟಪಡತಾರೆ”, ವಿನೀತನಾಗಿ ಸಿದ್ದಣ್ಣ ವಿನಂತಿಸಿದ್ದ. ಸಿದ್ದಣ್ಣನತ್ತ ತಲೆಎತ್ತಿ ಸುಮ್ಮನೆ ನೋಡಿದ್ದ ಹಿರೇಬಡಗಿಯವರು ಮನೆಯೊಳಗೆ ನಡೆದಿದ್ದರು. “ಸಿದ್ದಿಂಗಪ್ಪಾ ಬರೆಪ್ಪಾ ಗಾಡಿ ಈಚೆಕಡಿಗೆ ಎಳಕಂಡು ಅಚ್ಚಿಗೆ ಎಣ್ಣೆ ಹಚ್ಚಾನ ಬರಿ” ಅಂತ ಸಿದ್ದಣ್ಣ ಸೂಚಿಸಿದ್ದ. ಅದರಂತೆ ಸಿದ್ದಿಂಗಪ್ಪ, ಇನ್ನೊಬ್ಬರು ಒಂದು ಗಾಡಿಯನ್ನು ಬಯಲಿಗೆ ತಂದರು. ಯಜಮಾನ ಬಡಗಿಯವರು ಎಣ್ಣೆ ಡಬ್ಬದೊಡನೆ ಹೊರಗೆ ಬಂದು ಅದನ್ನು ಸಿದ್ದಣ್ಣನ ಕೈಗೆ ನೀಡಿದರು. ಆಗಲೂ ಸಿದ್ದಣ್ಣ ಬಡಗಿ ಯಜಮಾನರ ಮುಖವನ್ನೇ ದಿಟ್ಟಿಸಿ ನೋಡಿದ. ಅವರೂ ಇವನನ್ನು ನೋಡಿದ್ದರು. ‘ಅವರು ಯಾಕೋ ಪ್ರಸನ್ನರಾಗಿಲ್ಲ’ ಅಂದುಕೊಂಡ ಅವನು ಎರಡೂ ಗಾಡಿಗಳ ಅಚ್ಚಿಗೆ ಎಣ್ಣೆ ಸವರಿ ಎಣ್ಣೆ ಡಬ್ಬಿಯನ್ನು ಹಿಂತಿರುಗಿಸಲು ಅವರ ಮನೆಯೊಳಗೆ ನಡೆದ.
ಹಿಂದಿನ ಸಂಚಿಕೆ ಓದಿ: 10. ಹೊಸ ಬಂಡಿಗಳ ಆಗಮನ
ಬಡಗಿಯವರು “ಕೂತುಗೊಳ್ಳಪ್ಪಾ, ನಿಮ್ಮೂರು ನೋಡಬೇಕು ಅಮ್ಮ ನನಿಗೂ ಇಷ್ಟ ಚೆಂಬಸಣ್ಣ ಬಾಳ ಹೇಳಿಬಿಟ್ಟಿದಾನೆ. ಊರ ಪಡವಲ ದಿಕ್ಕಿಗೆ ಮತ್ತೆ ಮೂಡಲ ದಿಕ್ಕಿಗೆ ಎರಡು ಗುಡ್ಡದ ಸಾಲು ಹಬ್ಬಿದೆಯಂತೆ. ಊರ ಮುಂದೇನೇ ಹಳ್ಳ ಹರಿಯುತ್ತಂತೆ. ಹಳ್ಳದ ಸಾಲಿನಾಗೆ ನೂರಾರು ಗಿಡಮರ ಸಾಕಿದ್ದೀರಂತೆ. ಆ ಊರೇ ಕಣ್ಣಿಗೆ ಒಂದು ಹಬ್ಬ ಅಮ್ಮ ಬಾಳ ಹೊಗಳಿ ಹೇಳಿದಾನೆ. ಅಂಥಾ ಜಾಗದಾಗೆ ಯಾವ ಪುಣ್ಯಾತ್ಮರು ಊರು ಕಟ್ಟಿದರೋ” ಅಂದು ಸುಮ್ಮನಾದರು. ಸಿದ್ದಣ್ಣನಿಗೆ ಸುಮ್ಮನಾಗಿಬಿಟ್ರಲ್ಲ ಹೆಂಗ್ ಮಾಡೋದು. “ಅಷ್ಟೋರೆ ನೀವು ನಮ್ ಜತೀಗೆ ಗಾಡ್ಯಾಗೆ ಬಂದು ಬಿಡಿ. ವಾಪಾಸ್ ಬರಬೇಕಾದ್ರೆ ಬಸ್ಸಿಗೆ ಕಳಿಸ್ತೀವಿ.” ಕಕ್ಕಲಾತಿಯಿಂದ ಮಾತನಾಡಿ ಹಿರೇ ಬಡಗಿಯವರ ಪ್ರತಿಕ್ರಿಯೆಗಾಗಿ ನಿರೀಕ್ಷಿಸಿದ್ದ ಸಿದ್ದಣ್ಣ.
“ಪೂಜೆ ಸಾಮಾನು ತಗಂಡ್ ಬರಿ. ನಮ್ಮ ಹುಡುಗೆಲ್ಲ ಬಝಾರೆ ಇನ್ನು ಮೇಲೆ” ಅಂದು, ಹಿರೇ ಬಡಗಿ ಸ್ನಾನಕ್ಕೆ ಹೋದರು. “ಗುರುಸಿದ್ದಪ್ಪಾ ಈ ಪಕ್ಕದ ಬೀದ್ದಾಗೆ ಒಂದು ಅಂಗಡಿ ಐತೆ ಹೋಗಿ ಇಪ್ಪತ್ತು ಸೇರು ಮಂಡಕ್ಕಿ, ಎಣ್ಣೆ ತೆಂಗಿನ ಕಾಯಿ, ಪೂಜೆ ಸಾಮಾನು, ಇದ್ರೆ ಬಾಳೆಹಣ್ಣು ತಗಂಡ್ ಬನ್ನಿ” ಎಂದು ಎರಡು ರೂಪಾಯಿ ನೀಡಿದ. “ಮಂಡಕ್ಕಿ ಯಾತ್ರಾಗೆ ತರಬೇಕು ಒಳಗಡೆ ಹೋಗಿ ಒಂದು ಚೀಲಾನೋ ಗೂಡೇನೋ ಇಸಗಂಡ್ ಹೋಗಿ” ಎಂದು ಆತನೇ ಹೇಳಿದ. ಸಿದ್ದಿಂಗಪ್ಪನಿಗೆ ಒಂದು ದೊಡ್ಡ ಗೂಡೆ ಸಿಕ್ಕಿತ್ತು. ಅದರೊಂದಿಗೆ ಇಬ್ಬರು ಸಂಗಡಿಗರೊಡನೆ ಅಂಗಡಿಗೆ ಹೋಗಿ ಪೂಜಾ ಸಾಮಗ್ರಿ ಮತ್ತೆಲ್ಲಾ ವಸ್ತು ಸಮೇತ ಹಿಂತಿರುಗಿದ್ದರು. ಅಷ್ಟೊತ್ತಿಗೆ ದೊಡ್ಡ ಬಡಗಿಯವರು ತಮ್ಮ ಸ್ನಾನ ಮುಗಿಸಿ ದೇವರ ಪೂಜೆಗೆ ಸಿದ್ಧರಾಗಿದ್ದರು. ಸಿದ್ದಣ್ಣ ಮತ್ತು ಸಿದ್ದಿಂಗಪ್ಪ ಇಬ್ಬರೂ ಮುಖ ಕೈಕಾಲು ತೊಳೆದು ಗಾಡಿಗಳನ್ನು ಪೂಜಿಸಲು ತೊಡಗಿದ್ದರು.
ವಠಾರದ ಬಡಗಿ ಕೆಲಸಗಾರರು ಒಬ್ಬೊಬ್ಬರೆ ಆಗಮಿಸ ತೊಡಗಿದ್ದರು. ಅವರು ಬಂದವರೇ ಗಾಡಿ ಪೂಜೆಗೆ ಅನುವಾಗಲು ಪೂಜಾ ಸಾಮಗ್ರಿಯನ್ನು ಮುಂದಿರಿಸಿ ತೆಂಗಿನಕಾಯಿ ಗುಂಜು ತೆಗೆದು ಸಿದ್ಧಗೊಳಿಸಿದರು. ಹಿರಿಯ ಬಡಗಿಯವರು ಗಾಡಿಗಳ ಬಳಿಗೆ ಆಗಮಿಸಿ, ನೀರು ಚಿಮುಕಿಸಿ ವಿಭೂತಿ ಗಂಧ ಅರಿಸಿನ ಮುಂತಾದುವನ್ನು ಗಾಡಿಯ ಗುಂಭಕ್ಕೆ, ಕೋಳಿಪೀಠ ಮುಂತಾದುವಕ್ಕೆ ಲೇಪಿಸಿ ಹೂ ಪತ್ರೆ ಹಾಕಿ ಧೂಪದಾರತಿ ಮಾಡಿದರು. ಸಿದ್ದಣ್ಣ, ಸಿದ್ದಿಂಗಪ್ಪ ಮತ್ತುಳಿದವರೂ ಅವರನ್ನೇ ಅನುಸರಿಸಿದ್ದರು. ಆನಂತರ ತೆಂಗಿನ ಕಾಯಿಗಳನ್ನು ಗಾಡಿಗಳಿಗೆ ನೀವಾಳಿಸಿ ಒಡೆದು, ಕಾಯೊಳಗಿನ ನೀರನ್ನು ಚಿಮುಕಿಸಿ ಗಾಡಿಯ ಮುಂದಿರಿಸಿ ಮಗುದೊಮ್ಮೆ ಪೂಜಿಸಿದರು. ಇಂದಿನ ಪೂಜೆ ವಿಶೇಷವಾಗಿತ್ತು. ಅದೇ ಸಮಯಕ್ಕೆ ಆಗಮಿಸಿದ ಚೆಂಬಸಣ್ಣ, ಅವನ ಸಂಗಡಿಗರು ಇನ್ನಷ್ಟು ಬಡಗಿ ಕಾರಿಕರು ಎಲ್ಲರೂ ಪೂಜಿಸಿದ್ದರು.
ಎಲ್ಲರಿಗೂ ಆಶ್ಚಯ್ಯ ಹಿರೇ ಬಡಗಿಯವರು ಎಂದು ಹೀಗೆ ಹೊಸಾ ಗಾಡಿಗಳ ಪೂಜೆ ಮಾಡಿರಲಿಲ್ಲ. ಸಿದ್ದಣ್ಣ ಕೂಡಲೇ ತೆಂಗಿನಕಾಯಿ ಹೋಳುಗಳನ್ನು ತುರಿದುಕೊಂಡು ಬರಲು ಸಿದ್ದಿಂಗಪ್ಪನಿಗೆ ಸೂಚಿಸಿದ. ಬಡಗಿ ಕಾರಿಕರು ಬಾಳೆಹಣ್ಣು ತುಂಡು ಮಾಡಿ ಮಂಡಕ್ಕಿಯಲ್ಲಿ ಬೆರೆಸಿದ್ದರು. ಕಾಯಿ ತುರಿಯ ಜತೆಗೆ ಬೆಲ್ಲದ ಪುಡಿ ಸೇರಿಸಿದ ಮಂಡಕ್ಕಿಯನ್ನು ಎಲ್ಲರಿಗೂ ಹಂಚಿದರು. ಹಿರಿಯ ಬಡಗಿಯವರೂ ಎಗ್ಗಿಲ್ಲದೆ ಮಂಡಕ್ಕಿ ಸವಿದರು. ಆಗ “ಸಿದ್ದಣೋ- ರೇ ಈಗ ಮಂಡಕ್ಕಿ ಕಾಯಿ ತುರಿ, ಬೆಲ್ಲ ತಿಂದ್ರಿ ಊಟ ಹೆಂಗ್ ಮಾಡ್ತೀರಿ” ಹಿರಿಯ ಬಡಗಿಯವರೇ ನಗಾಡಿದ್ದರು.
ಹಿಂದಿನ ಸಂಚಿಕೆ ಓದಿ: 11. ಬಂಡಿ ತಂದ ಬದಲಾವಣೆ
ಚೆಂಬಸಣ್ಣ, ಸಿದ್ದಣ್ಣ, ಸಿದ್ದಿಂಗಪ್ಪರನ್ನು ಒತ್ತಟ್ಟಿಗೆ ಕರೆದು “ಅಣ್ಣೂರು ನಿಮ್ಮೂರಿಗೆ ಬರಾಕೆ ಒಪ್ಪಿದರಾ ಹೆಂಗೆ” ಪಿಸುದನಿಯಲ್ಲಿ ಕೇಳಿದ್ದರು. ಸಿದ್ದಣ್ಣ ಹಿರಿಯ ಬಡಗಿಯರನ್ನೇ ನೋಡುತ್ತಾ “ಇನ್ನೂ ಏನೂ ಹೇಳಿಲ್ಲ” ಎಂದು ತಿಳಿಸಿ, ಅವರೊಂದಿಗೆ ನಡೆಸಿದ್ದ ಸಂಭಾಷಣೆಯನ್ನು ವಿವರಿಸಿದ್ದ. “ಈಗ ನೀವು ಅಷ್ಟೋರನ್ನ ಬುತ್ತಿ ಊಟಕ್ಕೆ ಕರೀರಿ. ಊಟ ಮಾಡಬೇಕಾದ್ರೆ ಆ ಸುದ್ದಿ ಮಾತಾಡನಾ”, ಚೆಂಬಸಣ್ಣ ಸಲಹೆ ನೀಡಿದ್ದ.
ಅದರಂತೆ “ಅಷ್ಟೋರೆ ರೊಟ್ಟಿ ಬುತ್ತಿ ಉಂಡು ಗಾಡಿ ಹೊಳ್‌ದ್ದಾನ. ನೀವು ಊಟ ಮಾಡಬರಿ”, ಸಿದ್ದಣ್ಣ ವಿನಂತಿಸಿದ. ಹಿರೇ ಬಡಗೀರು ನಸುನಗುತ್ತಾ “ನಿಮ್ಮ ರೊಟ್ಟಿ ಬುತ್ತಿ ಸಂಬಂಧ ಬಿಡುವೊಲ್ಲದಪ್ಪಾ. ಕೂಡು ಬರಿ” ಅನ್ನುತ್ತಾ ಮನೆಯ ಹಜಾರದಲ್ಲಿ ಕುಳಿತರು. ಸಿಲ್ಲಿಂಗಪ್ಪ ಬುತ್ತಿಗಂಟು ಬಿಚ್ಚಿದರೆ, ಸಿದ್ದಣ್ಣ ನೀರಿನ ತಂಬಿಗೆ ತಂದಿರಿಸಿದ. ಹಿರೇ ಬಡಗಿಯವರು, ಚೆಂಬಸಣ್ಣ ಮತ್ತು ಅವನ ಸಂಗಡಿಗರನ್ನೂ ಬುತ್ತಿ ಊಟಕ್ಕೆ ಆಹ್ವಾನಿಸಿದರೆ ಅವರು “ನಾವು ಹೊಟ್ಟೆ ತುಂಬ ಉಂಡಿದೀವಿ, ರಾತ್ರಿ ತಂಕ ನಮಿಗೇನೂ ಬ್ಯಾಡ” ಅಂತ ಕೈತಿರುವಿ ತಿಳಿಸಿದರು. ಗೌನಳ್ಳಿಯ ನಾಲ್ಕು ಜನ ಮತ್ತು ಹಿರೇ ಬಡಗಿಯವರು ಸಜ್ಜೆ ರೊಟ್ಟಿ ಕೆಂಪಿಂಡಿ, ತುಪ್ಪ ಸವಿದು ಸ್ವಲ್ಪ ಸ್ವಲ್ಪ ಬುತ್ತಿಯನ್ನೂ ಉಂಡರು.
ಕೈ ತೊಳೆಯಬೇಕಾದರೆ “ಅಣ್ಣಾ ನಮ್ ಜತಿಗೆ ಬರೋ ವಿಷ್ಯ ತಿಳಿಸ್‌ಲಿಲ್ಲ” ಸಣ್ಣಗೆ ನಗುತ್ತಲೇ ಸಿದ್ದಣ್ಣ ಕೇಳಿದ. ಅವರೂ ನಗುತ್ತಲೇ “ಹೊರಡಲೇಬೇಕೇನಪ್ಪಾ, ಕನಿಷ್ಟ ಇಲ್ಲಿ ನಾಕು ದಿವ್ವ ಕೆಲ್ಸ ನಿಂತೋಗುತ್ತೆ ನಾನು ಬಂದ್ರೆ” ಅಂದರು. ಸಿದ್ದಣ್ಣ ಸಿದ್ದಿಂಗಪ್ಪರಿಗೆ ಖುಷಿಯಾಗಿತ್ತು. ಚೆಂಬಸಣ್ಣ ಮತ್ತು ಅವನ ಸಂಗಡಿಗರು ಹೊಸಾ ಗಾಡಿಗಳ ಮೇಲೆ ಹುಲ್ಲು ಹರಡಿದ್ದರು. ಸಿಲ್ಲಿಂಗಪ್ಪ ತಂದಿದ್ದ ಕಂಬಳಿಗಳನ್ನು ಹುಲ್ಲಿನ ಮೇಲೆ ಹಾಸಿದ್ದ. ಹಿರೇ ಬಡಗೀರಿಗೆ ಗಾಡಿಗಳ ಹಣ ಸಂದಾಯ ಮಾಡಲು ಸಿದ್ದಣ್ಣ ಸಿದ್ದಿಂಗಪ್ಪನಿಗೆ ಸನ್ನೆ ಮಾಡಿದ. ಇಬ್ಬರೂ ಒಳಗೆ ನಡೆದು ತಮ್ಮ ಸೊಂಟಪಟ್ಟಿಗಳನ್ನು ಬಿಚ್ಚಿ ತಲಾ ತೊಂಬತ್ತು ಬೆಳ್ಳಿ ರೂಪಾಯಿಗಳನ್ನು ಎಣಿಸಿ ಅದರಲ್ಲಿ ನಾಕೈದು ರೂಪಾಯಿಗಳನ್ನು ವೀಳೇದೆಲೆ ಅಡಿಕೆಯೊಂದಿಗೆ ಹಿರೇಬಡಗಿಯವರ ಕೈಗೆ ನೀಡಿದರು. ಅವರು ಹೂರ್ತಿ ಹಣವನ್ನು ಎಣಿಸಿ ಮನೆಯೊಳಗಿನ ಪಟಾರಿಯಲ್ಲಿ ತಾಬಂದು ಮಾಡಿ ಬಂದರು. ಅವರ ಬಂಟನಿಗೆ “ಮೂರು ಜತೆ ಬಟ್ಟೆ ಕೈಚೀಲಕ್ಕಾತರಿ ಮತ್ತೆಲ್ಲ ಕರಿ” ಅಂದರು.
ಹಿಂದಿನ ಸಂಚಿಕೆ ಓದಿ: 12. ಜಂಗಮಯ್ಯರ ಆಗಮನ
ಕೆಲಸಗಾರರಲ್ಲಿ ‘ಯಜಮಾನ್ರು ಗೌನಗೊಲ್ಟಿದಾರೆ’, ಅನ್ನೊ ಸುದ್ದಿ ಹರಡಿತ್ತು. ಅವರೆಲ್ಲ ಹತ್ತಿರ ಬಂದು ನಿಂತರು. ಅವರನ್ನು ಕೊಡಲು ಸೂಚಿಸಿ ಮುಗುಲ್ನಗುತ್ತಾ “ಈಸ್ ದಿವ್ಯ ನಮ್ಮನ್ನ ಯಾರೂ ಅರ್ಥ ಮಾಡ್ಕಂಡಿರಲಿಲ್ಲ. ಇವರು ನೋಡ್ರಿ ಎಲ್ಲೋ ದೂರದ ಊರಿನೋರು. ‘ಮಾತಾಡಿದಂತೆ ನಡಕತ್ತಾರೆ, ಅವರ ನಡವಳಿಕೆ ನೋಡಿ ನನಗೆ ಬಾಳ ಸಂತೋಷ ಆಗೈತೆ” ಈಗ ಊರಿಗೆ ಬರ್ರಿ ಆಮ್ರ ಕರೀತಿದ್ದಾರೆ. ನನಿಗೂ ಆ ಊರು ನೋಡೋಕು ಅಂತ ಅಶೇ ಆಗಿದೆ.
ಅಲ್ಲಿಗೆ ಹೋಗ್ತಾ ಗಾಡೀಲಿ ಹೋಗಿ ತಿರಿಗ್‌ಕ್ಯಂಡ್ ಬರಬೇಕಾದ್ರೆ ಬಸ್ಸಿಗೆ ಬರ್ತೀನಿ. ಆದ್ರೂ ನಾಕ್ ದಿನ ಆಗಬೌದು. ನಿಮ್ ನಿಮ್ ಕೆಲ್ಲಾ ಎಲ್ಲಾ ಅಚ್ಚುಕಟ್ಟಾಗಿ ಮಾಡ್ರಿ. ಆರೇಕಾಲು ಹೊಟ್ಟೆಮರಗಳ ಉಜ್ಜುಗೊಲ್ಲು ಹೊಡೀರಿ” ಎಂದು ಸೂಚನೆ ನೀಡಿ ಎಲ್ಲರ ಮುಖಗಳನ್ನು ಅವಲೋಕಿಸಿ “ನೀವ್ಯಾರನಾ ಊರಿಗೆ ಪಾರಿಗೆ ಹೋಗಿಬರಬೇಕಾ” ವಿಚಾರಿಸಿದ್ದರು. ಕಾರಿಕರಾರೂ ಮಾತಾಡಲಿಲ್ಲ. ಅವರ ಶಿಷ್ಯ ಬಟ್ಟೆ ಚೀಲ ತಂದಿರಿಸಿದ. ಅವರು ಎದ್ದು ಒಳಗೆ ಹೋಗಿ ಹೆಣ್ಣುಮಕ್ಕಳಿಗೆ ಸೂಚನೆ ನೀಡಿ ಬಂದರು.
ಎಲ್ಲರ ಸಮ್ಮುಖದಲ್ಲಿ ಗಾಡಿ ನೊಗಗಳನ್ನು ಚೆಂಬಸಣ್ಣ ಸಿಲ್ಲಿಂಗಪ್ಪ ಎತ್ತುಗಳ ಕೊರಳುಗಳ ಮೇಲಿರಿಸಿದರು. ಕೂಡಲೇ ಎತ್ತುಗಳು ಮುಂದೆ ನಡೆಯಲು ಚಡಪಡಿಸಿದವು. ಹಿರೇ ಬಡಗಿಯವರು ಮತ್ತು ಸಿದ್ದಣ್ಣ ಮುಂದಿನ ಗಾಡಿ ಏರಿದರೆ, ಉಳಿದವರು ಇನ್ನೊಂದು ಗಾಡಿ ಹತ್ತಿದರು. ಕಾಗ್ನಿಕರೆಲ್ಲಾ ನಿಂತು ಬೀಳ್ಕೊಟ್ಟಂತೆ ಗಾಡಿಗಳು ಸೀರಾ ಮುಖನಾಗಿ ಹೊರಟಿದ್ದವು.
ಹಿಂದಿನ ಸಂಚಿಕೆ ಓದಿ: 13. ಮತ್ತೆರಡು ಬಂಡಿ ತಂದರು