ಸಂಡೆ ಸ್ಪಷಲ್
Kannada Novel: 5. ಕೆನ್ನಳ್ಳಿಯ ದುರಂತ | ಹಬ್ಬಿದಾ ಮಲೆಮಧ್ಯದೊಳಗೆ
CHITRADURGA NEWS | 29 SEPTEMBER 2024
ಗೌನಹಳ್ಳಿ ಊರು ಕಟ್ಟಿಕೊಂಡಾದ ಮೇಲೆ ಊರಿನ ಜನರಲ್ಲಿ ಕೆಲವರು ಪಶು ಸಂಗೋಪನೆ ಮಾಡುತ್ತಾ ಮೂಡಲ ಮತ್ತು ಪಡುವಲ ಗುಡ್ಡಗಳ ತಪ್ಪಲಿನಲ್ಲಿ ದನಕರು, ಎಮ್ಮೆ, ಕುರಿ ಆಡು ಮುಂತಾದುವನ್ನು ಮೇಯಿಸುವುದು ರೂಢಿಯಾಗಿತ್ತು.
ಗುಡ್ಡಗಳ ಮೇಲೆ ಇಳುಕಲಿಗೆ ಅಡ್ಡಲಾಗಿ ಸಾಲು ಸಾಲು ಯಥೇಚ್ಚವಾಗಿ ಬಾದೆ ಹುಲ್ಲು ಬೆಳೆದಿತ್ತು. ಇದು ಎಂಥಾ ಭಾರಿ ಮಳೆ ಸುರಿದರೂ ಗುಡ್ಡದ ಮೇಲ್ಮ ಮಣ್ಣು ಜರುಗದಂತೆ ತಡೆದಿತ್ತು. ಇದರ ಮಧ್ಯೆ ಕರಡದ ಹುಲ್ಲು ಬೆಳೆದು ದನಕರುಗಳಿಗೆ ಉತ್ತಮ ಮೇವಾಗಿತ್ತು.
ಗೋಪಾಲಕರು ತಮ್ಮ ತುರುಮಂದೆಯನ್ನೋ ಅಥವಾ ಎಮ್ಮೆಗಳನ್ನೋ ಗುಡ್ಡದ ತಪ್ಪಲಿನಲ್ಲಿ ಮೇಯಲು ಬಿಟ್ಟು ಹತ್ತಿರದ ಉದೇದ ಮರ, ಹುಳಿಬೇಲದ ಮರ ಮತ್ತಿತರ ಮರಗಳ ನೆರಳಲ್ಲಿ ಅಡ್ಡಾದರೆ ಪಶುಗಳು ಹೊಟ್ಟೆತುಂಬಾ ಹುಲ್ಲು ಮೆಯ್ದು ಬಾಯಾರಿಸಿ ನೀರು ಕುಡಿಯಲು ಸಿದ್ಧರಾಗಿ ತುರುಗಾಹಿಗಳ ಮೈತುರಿಸಿ ನಿದ್ದೆಯಿಂದ ಏಳಿಸುತ್ತಿದ್ದವು.
ಹಿಂದಿನ ಸಂಚಿಕೆ ಇಲ್ಲಿದೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ.
ಅವರು ಎದ್ದು ಕೂಗು ಹಾಕಿ ಪಶುಗಳನ್ನೆಲ್ಲಾ ಒಟ್ಟುಗೂಡಿಸಿ ನೀರು ಕುಡಿಸಲು ಊರ ಮುಂದಲ ಹಳ್ಳಕ್ಕೊ ಅಥವಾ ಸಮೀಪದ ನೀರಾಸರೆ ಕಡೆಗೆ ಪಶುಗಳನ್ನು ನಡೆಸಿಕೊಂಡು ಹೋಗುತ್ತಿದ್ದರು.
ಪಶುಗಳು ನೀರು ಕುಡಿದ ಹಳ್ಳದ ದಂಡೆಯ ಮೇಲೆ ತೂಕಡಿಸುತ್ತಾ ಮಲಗುತ್ತಿದ್ದವು. ಎಮ್ಮೆಗಳು ನೀರಿನಲ್ಲಿ ಮಲಗಿದರೆ ಹೊರಡಿಸುವುದು ಕಷ್ಟವಾಗುತ್ತಿತ್ತು, ಆಗ ದನಗಾಹಿಗಳು ಬುತ್ತಿ ಉಣ್ಣುವುದು ಮಾಡುತ್ತಿದ್ದರು. ಊರು ಸಮೀಪ ಇದ್ದುದರಿಂದ ಕೆಲವರು ಊರೊಳಗೆ ನಡೆದು ಮನೆಯಲ್ಲಿ ಹಗಲೂಟ ಮಾಡುವುದು ರೂಢಿಯಾಗಿತ್ತು. ಸಂಜೆಗೆ ದನಗಳನ್ನು ತಪ್ಪಿಸಿಕೊಂಡಿದ್ದರೆ ಕತ್ತಲಲ್ಲಿ ಹುಡುಕಾಡಿ ಮನೆಗೆ ಮುಟ್ಟಿಸುತ್ತಿದ್ದರು.
ಒಮ್ಮೆ ಗೌನಹಳ್ಳಿಗೆ ವಾಯುವ್ಯ ದಿಕ್ಕಿಗಿದ್ದ ಬಡೆತ್ತಿನ ಕಣಿವೆ ಬಯಲಿನಲ್ಲಿ ದನ ಮೇಯಿಸುತ್ತಿರುವಾಗ ಪಶುಪಾಲಕರಿಗೆ ದೂರದ ದೊಡ್ಡಕಮರದ ಬಳಿ ಹೊಗೆ ಏಳುತ್ತಿರುವುದು ಕಂಡಿತು. ಯಾವೂರವರೋ ಅಲ್ಲಿ ಏನೋ ಮಾಡುತ್ತಿರಬಹುದೆಂದು ಊಹಿಸಿದ್ದರು.
ಕೆಲವು ಕುರಿ ಮತ್ತು ಆಡು ಸಾಕಿದ್ದವರು ಅತ್ತಕಡೆ ಹೋದಾಗ ಏಳೆಂಟು ಜನ ಸೊಂಟಕ್ಕೆ ಒಂದು ಚಲ್ಲಣ ಕಟ್ಟಿಕೊಂಡು ಬರಿಮೈಯ್ಯಾಗಿ ಕಟ್ಟುಮಸ್ತಾಗಿದ್ದ ಕರಿಯರು ಗುಡಿಸಲು ನಿರಿಸುತ್ತಿರುವುದು ಕಂಡಿತ್ತು. ಅವರಲ್ಲಿ ಸೀರೆ ಕಶೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದ ಹೆಂಗಸರೂ ಇದ್ದರು.
ಗೌನಳ್ಳಿಗರು ಅವರು ಯಾರೆಂದು ವಿಚಾರಿಸಿದಾಗ ತಾವು ಬಡಗಲ ಸೀಮೆಯವರು ಮತ್ತು ಹಾಲುಮತಸ್ತರೆಂದು ತಿಳಿಸಿದ್ದರು. “ಈಗ ಇಲ್ಲಿ ಮನೆ ಕಟ್ಟುತ್ತಿದ್ದೀರಾ” ಎಂದು ಕೇಳಿದಾಗ ‘ಹೌದು ಇಲ್ಲಿ ಊರು ಕಟ್ಟುತ್ತೀವಿ’ ಎಂದು ಕೂಡಾ ತಿಳಿಸಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು.
ಇದು ಗೌನಳ್ಳಿಯಲ್ಲಿ ಸುದ್ದಿಯಾಯ್ತಿ ವಿನಾ ಅತ್ತಕಡೆ ಯಾರೂ ಸುಳಿದಾಡಿರಲಿಲ್ಲ. ಊರವರಿಗೆ ಕೃಷಿ ಬದುಕೇ ಹಾಸುವಷ್ಟು ಮತ್ತು ಹೊದೆಯುವಷ್ಟಿತ್ತು.
ಕೆಲ ತಿಂಗಳು, ವರ್ಷಗಳೇ ಸರಿದು ಹೋಗಿದ್ದವು. ಒಂದು ಸಂಜೆ ಹೊಸಾ ಊರಿನ ಕೆಲವರು ಕೈಯಲ್ಲಿ ಮೊಂಡಕುಳಗಳನ್ನು ಹಿಡಿದುಕೊಂಡು ಮೊನೆಗುಳ ಮಾಡಿಸಿಕೊಳ್ಳಲು ಗೌನಳ್ಳಿಗೆ ಆಗಮಿಸಿದ್ದರು. ಕಮ್ಮಾರ ಹಟ್ಟಿಯ ಬಳಿ ಸೇರಿದ್ದ ಕೆಲವರು ಅವರನ್ನು ವಿಚಾರಿಸಿದಾಗ ಅವರೆಲ್ಲಾ ಬಡಗಲ ಸೀಮೆಯಿಂದ ಬಂದಿದ್ದ ಹಾಲುಮತಸ್ಥರೆಂದೂ, ಈಗ ಮುವ್ವತ್ತು ಮನೆ ಕಟ್ಟಿಕೊಂಡಿರುವುದಾಗಿ ತಿಳಿಸಿ ತಮ್ಮ ಊರಿಗೆ ಶಂಕರನಹಳ್ಳಿ ಎಂದು ಕರೆದಿರುವುದಾಗಿ ತಿಳಿಸಿದ್ದರು.
ಇದಾದ ಬಳಿಕ ಆಗಾಗ್ಗೆ ಗೌನಳ್ಳಿಗೆ ಆಗಮಿಗಿಸಿ ಮೊನೆಗುಳ ಕುಡ ಇತ್ಯಾದಿ ತಯಾರಿಸಿಕೊಳ್ಳುತ್ತಿದ್ದರು. ಮುವ್ವತ್ತು ಮನೆಗಳವರಲ್ಲಿ ಕೆಲವರು ಮಾತ್ರ ಜಮೀನು ಬೇಸಾಯ ನಡೆಸಿಕೊಂಡು ಹೋಗುತ್ತಿದ್ದರು.
ಪಶುಗಳು ನೀರು ಕುಡಿದ ಹಳ್ಳದ ದಂಡೆಯ ಮೇಲೆ ತೂಕಡಿಸುತ್ತಾ ಮಲಗುತ್ತಿದ್ದವು. ಎಮ್ಮೆಗಳು ನೀರಿನಲ್ಲಿ ಮಲಗಿದರೆ ಹೊರಡಿಸುವುದು ಕಷ್ಟವಾಗುತ್ತಿತ್ತು, ಆಗ ದನಗಾಹಿಗಳು ಬುತ್ತಿ ಉಣ್ಣುವುದು ಮಾಡುತ್ತಿದ್ದರು.
ಊರು ಸಮೀಪ ಇದ್ದುದರಿಂದ ಕೆಲವರು ಊರೊಳಗೆ ನಡೆದು ಮನೆಯಲ್ಲಿ ಹಗಲೂಟ ಮಾಡುವುದು ರೂಢಿಯಾಗಿತ್ತು. ಸಂಜೆಗೆ ದನಗಳನ್ನು ತಪ್ಪಿಸಿಕೊಂಡಿದ್ದರೆ ಕತ್ತಲಲ್ಲಿ ಹುಡುಕಾಡಿ ಮನೆಗೆ ಮುಟ್ಟಿಸುತ್ತಿದ್ದರು.
ಒಮ್ಮೆ ಗೌನಹಳ್ಳಿಗೆ ವಾಯುವ್ಯ ದಿಕ್ಕಿಗಿದ್ದ ಬಡೆತ್ತಿನ ಕಣಿವೆ ಬಯಲಿನಲ್ಲಿ ದನ ಮೇಯಿಸುತ್ತಿರುವಾಗ ಪಶುಪಾಲಕರಿಗೆ ದೂರದ ದೊಡ್ಡಕಮರದ ಬಳಿ ಹೊಗೆ ಏಳುತ್ತಿರುವುದು ಕಂಡಿತು.
ಯಾವೂರವರೋ ಅಲ್ಲಿ ಏನೋ ಮಾಡುತ್ತಿರಬಹುದೆಂದು ಊಹಿಸಿದ್ದರು. ಕೆಲವು ಕುರಿ ಮತ್ತು ಆಡು ಸಾಕಿದ್ದವರು ಅತ್ತಕಡೆ ಹೋದಾಗ ಏಳೆಂಟು ಜನ ಸೊಂಟಕ್ಕೆ ಒಂದು ಚಲ್ಲಣ ಕಟ್ಟಿಕೊಂಡು ಬರಿಮೈಯ್ಯಾಗಿ ಕಟ್ಟುಮಸ್ತಾಗಿದ್ದ ಕರಿಯರು ಗುಡಿಸಲು ನಿರಿಸುತ್ತಿರುವುದು ಕಂಡಿತ್ತು.
ಅವರಲ್ಲಿ ಸೀರೆ ಕಶೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದ ಹೆಂಗಸರೂ ಇದ್ದರು. ಗೌನಳ್ಳಿಗರು ಅವರು ಯಾರೆಂದು ವಿಚಾರಿಸಿದಾಗ ತಾವು ಬಡಗಲ ಸೀಮೆಯವರು ಮತ್ತು ಹಾಲುಮತಸ್ತರೆಂದು ತಿಳಿಸಿದ್ದರು. “ಈಗ ಇಲ್ಲಿ ಮನೆ ಕಟ್ಟುತ್ತಿದ್ದೀರಾ” ಎಂದು ಕೇಳಿದಾಗ ‘ಹೌದು ಇಲ್ಲಿ ಊರು ಕಟ್ಟುತ್ತೀವಿ’ ಎಂದು ಕೂಡಾ ತಿಳಿಸಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 3. ಎಲ್ಲರೂ ಲಿಂಗವಂತರಾದರು.
ಇದು ಗೌನಳ್ಳಿಯಲ್ಲಿ ಸುದ್ದಿಯಾಯ್ತಿ ವಿನಾ ಅತ್ತಕಡೆ ಯಾರೂ ಸುಳಿದಾಡಿರಲಿಲ್ಲ. ಊರವರಿಗೆ ಕೃಷಿ ಬದುಕೇ ಹಾಸುವಷ್ಟು ಮತ್ತು ಹೊದೆಯುವಷ್ಟಿತ್ತು.
ಕೆಲ ತಿಂಗಳು, ವರ್ಷಗಳೇ ಸರಿದು ಹೋಗಿದ್ದವು. ಒಂದು ಸಂಜೆ ಹೊಸಾ ಊರಿನ ಕೆಲವರು ಕೈಯಲ್ಲಿ ಮೊಂಡಕುಳಗಳನ್ನು ಹಿಡಿದುಕೊಂಡು ಮೊನೆಗುಳ ಮಾಡಿಸಿಕೊಳ್ಳಲು ಗೌನಳ್ಳಿಗೆ ಆಗಮಿಸಿದ್ದರು.
ಕಮ್ಮಾರ ಹಟ್ಟಿಯ ಬಳಿ ಸೇರಿದ್ದ ಕೆಲವರು ಅವರನ್ನು ವಿಚಾರಿಸಿದಾಗ ಅವರೆಲ್ಲಾ ಬಡಗಲ ಸೀಮೆಯಿಂದ ಬಂದಿದ್ದ ಹಾಲುಮತಸ್ಥರೆಂದೂ, ಈಗ ಮುವ್ವತ್ತು ಮನೆ ಕಟ್ಟಿಕೊಂಡಿರುವುದಾಗಿ ತಿಳಿಸಿ ತಮ್ಮ ಊರಿಗೆ ಶಂಕರನಹಳ್ಳಿ ಎಂದು ಕರೆದಿರುವುದಾಗಿ ತಿಳಿಸಿದ್ದರು.
ಇದಾದ ಬಳಿಕ ಆಗಾಗ್ಗೆ ಗೌನಳ್ಳಿಗೆ ಆಗಮಿಗಿಸಿ ಮೊನೆಗುಳ ಕುಡ ಇತ್ಯಾದಿ ತಯಾರಿಸಿಕೊಳ್ಳುತ್ತಿದ್ದರು. ಮುವ್ವತ್ತು ಮನೆಗಳವರಲ್ಲಿ ಕೆಲವರು ಮಾತ್ರ ಜಮೀನು ಬೇಸಾಯ
ಮಾಡುತ್ತಿರುವುದಾಗಿಯೂ, ಎಲ್ಲರೂ ಕುರಿ ಸಾಕಾಣಿಕೆ ಮಾಡುತ್ತಿರುವುದಾಗಿ ತಿಳಿಸಿದ್ದರು. ಶಂಕರನಹಳ್ಳಿಯ ನಿವಾಸಿಗಳಿಗೂ ಹತ್ತಿರದಲ್ಲಿ ಹರಿಯುವ ಬಸವನಹೊಳೆಯೇ ಆಧಾರವಾಗಿತ್ತು.
ಊರ ಸುತ್ತಾ ಪಾರಿಬೇಲಿ ಮತ್ತು ಕುರಿಯ ಹಟ್ಟಿಗಳಿಗೆ ಎತ್ತರದ ಮುಳ್ಳುಬೇಲಿಯ ರಕ್ಷಣೆ ಮತ್ತು ತೋಳನಂಥಾ ಬೇಟೆ ನಾಯಿಗಳನ್ನು ಸಾಕಿಕೊಂಡಿದ್ದರು.
ಶಂಕರನಹಳ್ಳಿಯ ಹಾಲುಮತಸ್ಥರು ತಮ್ಮನ್ನು ರಾವುತರೆಂದು ಕರೆದುಕೊಳ್ಳುತ್ತಿದ್ದರು. ಇದು ಅವರ ಪೂರೀಕರು ಯಾರೋ ರಾಜನೋ ಪಾಳೇಗಾರನ ಬಳಿ ಸೈನಿಕರಾಗಿದ್ದಿರಬೇಕು. ಅವರ ಊರಿನಿಂದ ತೆಂಕಲಿಗೆ ಮತ್ತು ಮೂಡಲಿಗೆ ವಿಶಾಲವಾದ ಅಡವಿ ಇದ್ದು ಕುರಿ ಮೇವಿಗೆ ಆಧಾರವಾಗಿತ್ತು.
ಹೀಗೆ ನಿರುಮ್ಮಳವಾಗಿದ್ದ ಶಂಕರನಹಳ್ಳಿಗೆ ತಿಮ್ಮರಾವುತ ಎಂಬುವನು ಗೌಡನಾಗಿದ್ದ. ಈ ರಾವುತರನ್ನು ಅಂಡೆದನುಗರು ಎಂದೂ ಕೂಡಾ ಕರೆಯಲಾಗುತ್ತಿತ್ತು.
ಶಂಕರನಹಳ್ಳಿಯ ಮೂಡಲಿಗೆ ಹತ್ತಿರದಲ್ಲಿ ಕೆನ್ನಳ್ಳಿ ಹೆಸರಿನ ಒಂದು ಹೊಸಾ ಊರು ಅಸ್ತಿತ್ವಕ್ಕೆ ಬರುತ್ತಿತ್ತು. ಈ ಊರಿನ ನಿವಾಸಿಗಳೆಲ್ಲಾ ನಾಯ್ಕರ ಜಾತಿಗೆ ಸೇರಿದವರಾಗಿದ್ದರು. ಶಂಕರನಹಳ್ಳಿಯ ಗೌಡ ತಿಮ್ಮರಾವುತನಿಗೆ ಲಕ್ಕು ಎಂಬ ಹೆಸರಿನ ಕಡುಚೆಲುವೆ ಮಗಳಿದ್ದಳು.
ಯಾವುದೋ ಕಾರಣಕ್ಕೆ ಕೆನ್ನಳ್ಳಿ ನಾಯ್ಕರಿಗೂ ಶಂಕರನಹಳ್ಳಿಯ ರಾವುತರಿಗೂ ಮನಸ್ತಾಪ ಉಂಟಾಗಿ- ತ್ತು. ಇದಾದ ಕೆಲವೇ ದಿನಗಳಲ್ಲಿ ದುರ್ಗದಲ್ಲಿ ಆಳ್ವಿಕೆ ಮಾಡುತ್ತಿದ್ದ ಇಮ್ಮಡಿ ಮೆದಕೇರಿ ನಾಯಕನಿಗೆ ಶಂಕರನಹಳ್ಳಿಯ ಗೌಡ ತಿಮ್ಮರಾವುತನ ಕಡು ಚೆಲುವೆ ಮಗಳು ಲಕ್ಕುಳ ವಿಷಯ ರವಾನೆಯಾಗಿತ್ತು.
ಅರಸ ಇಮ್ಮಡಿ ಮೆದಕೇರಿ ನಾಯಕನು ಲಕ್ಕುಳಲ್ಲಿ ಮನಸ್ಸಿಟ್ಟು ಅವಳನ್ನು ಲಗ್ನ ಮಾಡಿಕೊಳ್ಳಲು ಇಬ್ಬರು ದಳವಾಯಿಗಳನ್ನು ತಿಮ್ಮರಾವುತನ ಬಳಿಗೆ ಮಾತುಕತೆಗೆ ಕಳಿಸುತ್ತಾನೆ.
ಈ ಪ್ರಸ್ತಾಪದಿಂದ ಹಾಲುಮತಸ್ಥರಾದ ಅವರ ಮಗಳನ್ನು ವಾಲ್ಮೀಕಿ ಜಾತಿಯವರಿಗೆ ಕೊಡುವುದೆ? ಕನ್ಯ ಕೇಳುವುದಕ್ಕೆ ಇವರಿಗೆ ಹಕ್ಕೇನಿದೆ ಎಂದು ಕೃಷ್ಣರಾಗಿ ಹೆಣ್ಣು ಕೇಳಲು ಬಂದಿದ್ದವರನ್ನು ಕಾಲಿಗೆ ಹಗ್ಗ ಕಟ್ಟಿಸಿ ಊರಿನ ಹೊರಗೆ ಎಳೆದು ಹಾಕಿಸುತ್ತಾನೆ ತಿಮ್ಮರಾವುತ.
ಅವರು ದುರ್ಗಕ್ಕೆ ಹಿಂದಿರುಗಿ ತಮಗಾದ ಅವಮಾನವನ್ನು ಪಾಳೇಗಾರನಲ್ಲಿ ಹೇಳಿಕೊಂಡಿದ್ದರು. ಇದರಿಂದ ಕೋಪಗೊಂಡ ಅರಸನು 168 ಜನ ಸೈನಿಕರನ್ನು ತಿಮ್ಮರಾವುತನ ಊರಿಗೆ ಕಳಿಸುತ್ತಾನೆ. ಅವರು ಆಗಮಿಸುತ್ತಲೇ ಊರಿನಲ್ಲಿ
ಕೊಳ್ಳೆ, ಲೂಟಿ ಮತ್ತು ಬಣವೆಗಳಿಗೆ ಬೆಂಕಿ ಹಚ್ಚಿ, ಕೊನೆಗೆ ತಿಮ್ಮರಾವುತನ ಮನೆಯನ್ನು ಮುತ್ತಿ ಅವನ ಚೆಲುವೆ ಮಗಳನ್ನು ಹಿಡಿಯುತ್ತಾರೆ. ಕೂಡಲೇ ಶಂಕರನಹಳ್ಳಿಯ ಐದು ಜನ ಹಿರಿಯ ರಾವುತರು ಮತ್ತು ಮಕ್ಕಳು ಹದಿನೈದು ಜನ ಸೇರಿ ಜವಾನರ ಮೇಲೆ ಬಿದ್ದರು.
ಆಗ ನಡೆದ ಲಡಾಯದಲ್ಲಿ ಅರಸನ ಕಡೆಯ 168ಜನ ಸೈನಿಕರಲ್ಲಿ 112 ಜನರ ತಲೆ ಉರುಳಿದವು. ರಾವುತರ ಕಡೆ ಒಂಬತ್ತು ತಲೆ ಬಿದ್ದವು. ಆಗ ಅರಸನ ಕಡೆಯವರು ಹಿಮ್ಮೆಟ್ಟಿ ಓಡಿಹೋಗಿದ್ದರು.
ರಾವುತರ ಕಡೆ ಅಸು ನೀಗಿದ್ದ ಒಂಬತ್ತು ಜನರನ್ನು ದಹಿಸಲು ಕಿಚ್ಚು ಹಾಕಿದಾಗ ‘ನನ್ನಿಂದಾಗಿ ನನ್ನ ಅಣ್ಣಂದಿರು ಪ್ರಾಣ ಕಳಕೊಂಡರು’ ಎಂದು ದುಃಖ ತಡೆಯಲಾರದೆ ಲಕ್ಕು ಕಿಚ್ಚಿಗೆ ಹಾರಿ ಸುಟ್ಟು ಹೋದಳು.
ಕೂಡಲೇ ಉಳಿದಿದ್ದ ರಾವುತರು, ‘ನಾಳೆ ನಮ್ಮ ಪ್ರಾಣಗಳೂ ಉಳಿಯಲಾರವು’ ಎಂದು ಯೋಚಿಸಿ ಕೂಡಲೇ ಊರು ಬಿಡಲು ತೀರಾನಿಸಿ ರಾತ್ರೋರಾತ್ರಿ ತಮ್ಮ ದೇವರು, ಸಾಮಾನು ಸರಂಜಾಮುಗಳನ್ನು ಬಂಡಿಗಳಲ್ಲಿ ತುಂಬಿಕೊಂಡು, ಎತ್ತು ದನಕರು, ಕುರಿ ಮುಂತಾದುವನ್ನು ನಡೆಸಿಕೊಂಡು ಗಾವುದ ಗಾವುದ ನಡೆದು ಹೋಗಿ ಇಕ್ಕೇರಿ ಸೀಮೆಯನ್ನು ತಲುಪಿ ಅಲ್ಲಿನ ರಾಜನ ಮರೆ ಬಿದ್ದರು. ಇಕ್ಕೇರಿ ಸೀಮೆಯ ಇಕ್ಕೇರಿಯಲ್ಲಿ ಶಿವಪ್ಪನಾಯಕನು (1646-61) ರಾಜ್ಯವಾಳುತ್ತಿದ್ದನು.
ಕೆಲಕಾಲಾನಂತರದಲ್ಲಿ ದುರ್ಗದ ಪಾಳೇಗಾರನಿಗೆ ಶಂಕರನಹಳ್ಳಿಯ ರಾವುತರು ಊರು ತೊರೆದಿರುವುದು ಮತ್ತು ಅವರೆಲ್ಲಾ ಕೆಳದಿ ಸೀಮೆಗೆ ಹೋಗಿ ಅಲ್ಲಿನ ಅರಸನ ಮರೆ ಬಿದ್ದಿದ್ದಾರೆ ಎಂದು ತಿಳಿಯುತ್ತದೆ. ಆಗ ಪಾಳೆಗಾರನು “ನಮ್ಮವರು ಬಂದು ನಿಮ್ಮ ಮರೆಬಿದ್ದಿದ್ದಾರೆ ಅವರನ್ನು ಹಿಡಿದು ಕೊಡಬೇಕು” ಎಂದು ಒಂದು ಪತ್ರವನ್ನು ಕಳಿಸುತ್ತಾನೆ.
ಅದಕ್ಕೆ ಇಕ್ಕೇರಿಯರಸನು “ನಾವು ಇಕ್ಕೇರಿಯವರು ಮರೆಬಿದ್ದವರನ್ನು ಬಿಟ್ಟುಕೊಡುವವರಲ್ಲ ಮತ್ತು ಈ ರಾವುತರ ಪರಾಕ್ರಮಕ್ಕೆ ಮತ್ತು ಲಕ್ಕು ಅಗ್ನಿ- ಕೊಂಡಕ್ಕೆ ಹಾರಿ ಬಿದ್ದಿರುವುದಕ್ಕೆ ಮೆಚ್ಚಿದ್ದೇವೆ” ಎಂದು ಜವಾಬು ಕಳಿಸಿದ್ದನು. ಅಷ್ಟೇ ಅಲ್ಲದೆ ರಾಜ ಶಿವಪ್ಪನಾಯಕನು ಮರೆಬಿದ್ದಿದ್ದ ರಾವುತರಿಗೆ “ನಿಮಗೆ ಏನು ಇಷ್ಟವೋ ಕೇಳಿ” ಎಂದು ಪ್ರಸನ್ನನಾಗಿದ್ದನು.
ಹಿಂದಿನ ಸಂಚಿಕೆ ಇಲ್ಲಿದೆ: 4.ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ
ಆಗ ರಾವುತರು “ಡಿಳ್ಳಿ ಸೀಮೆಗೆ ಸೇರಿದ ತಿಮ್ಮನಕಟ್ಟೆ, ವಿಜಯನಗರ ಸೀಮೆಗೆ ಸೇರಿದ ಕೆಲಕೋಟೆಪುರ ಮತ್ತು ಹಿಡಿಂಬದುರ್ಗದ ಸೀಮೆಗೆ ಸೇರಿದ ಕೆನ್ನಳ್ಳಿ ಈ ಗ್ರಾಮಗಳಲ್ಲಿ ನಮ್ಮ ದೇವರುಗಳಿಗೆ ಯಾವ ಅಡ್ಡಿಯಿತು ಬರದಹಾಗೆ, ನಮ್ಮ ಜಾತಿಯವರ ಲೋಪದೋಷ ಏನಿದ್ದರೂ ನಮ್ಮ ಜಾತಿಯವರಲ್ಲೇ ತೀರಿಸಿಕೊಳ್ಳುವ ಹಾಗೆ ಹಿಂದೆ ಒಂದು ಹುಕುಮು ಇತ್ತು.
ಅದೇ ಪ್ರಕಾರ ನಮ್ಮ ಜಾತಿಯವರ ವ್ಯವಹಾರ ನಾವೆ ತೀರಿಸಿಕೊಳ್ಳುವ ಹಾಗೆ ಹುಕುಮು ಆಗಬೇಕು” ಎಂದು ಕೇಳಿಕೊಂಡರು. ಆಗ ಅರಸ ಶಿವಪ್ಪನಾಯಕ, ರಾಮಪ್ರಧಾನ ಮತ್ತು ಶಿವಲಿಂಗ ಪ್ರಧಾನ ಇವರ ಸಮಕ್ಷಮದಲ್ಲಿ ಇವರಿಗೆ ಗ್ರಾಮ ನೇಮಕ ಮಾಡಿಕೊಟ್ಟರು.
ಆಧಾರ
ಅಜ್ಜಂಪುರದಲ್ಲಿ ದೊರೆತ ಕೆಳದಿ ಮತ್ತು ಚಿತ್ರದುರ್ಗ ಇತಿಹಾಸಕ್ಕೆ ಸಂಬಂಧಪಟ್ಟ ಶಾಸನ, ದುರ್ಗ ಶೋಧನ, ಪುಟ 119 ಮತ್ತು 120, ಪ್ರಕಟಣೆ: ಕನ್ನಡ ಸಾಹಿತ್ಯ ಪರಿಷತ್ತು 2001, ಪಂಪ ಮಹಾಕವಿ ರಸ್ತೆ, ಬೆಂಗಳೂರು, ಲೇಖಕರು, [ಡಾ. ಬಿ. ರಾಜಶೇಖರಪ್ಪ),
ಶಂಕರನಹಳ್ಳಿ ಇದ್ದಿರಬಹುದಾದ ಸ್ಥಳದಲ್ಲಿ ಅನೇಕ ನಿಧಿ ಶೋಧಕರಿಗೆ ಚಿನ್ನದ ನಗನಾಣ್ಯ ಸಿಕ್ಕಿವೆ. ಶಾಸನದಲ್ಲಿ ಉಲ್ಲೇಖವಾಗಿರುವ ಕೆನ್ನಲ್ಲಿ ಕೆಂದಗಾನಹಳ್ಳಿ ನಿವಾಸಿಗಳೆಲ್ಲಾ ನಾಯ್ಕರ ಜಾತಿಗೆ ಸೇರಿದವರಾಗಿದ್ದರು. ಅವರು ಸಾಮಾನ್ಯವಾಗಿ ಶವಗಳನ್ನು ಮಣ್ಣಿನಲ್ಲಿ ಹೂಳುತ್ತಾರೆ.
ಹಾಲು ಮತಸ್ಥರೂ ಶವಗಳನ್ನು ಮಣ್ಣಿನಲ್ಲಿ ಹೂಳುತ್ತಾರಂತೆ. ಇಲ್ಲಿ ರಾವುತರು ಸತ್ತವರನ್ನು ಕಿಚ್ಚಿನಲ್ಲಿ ಸುಡುತ್ತಾರೆ. ಅದೇ ಕಿಚ್ಚಿನಲ್ಲಿ ಹಾರಿ ಲಕ್ಕುವೂ ಸುಟ್ಟು ಹೋಗುತ್ತಾಳೆ. ಶಂಕರನಹಳ್ಳಿ ಈ ಘಟನೆಗಳು ನಡೆವ ಕಾಲಕ್ಕೆ ಪಕ್ಕದಲ್ಲಿ ಕೆನ್ನಲ್ಲಿ ಅಸ್ತಿತ್ವಕ್ಕೆ ಬರುತ್ತಿದ್ದಿರಬೇಕು.
ಕೆನ್ನಳ್ಳಿ ಎರಡು ಮೂರು ಕಡೆ ಕಟ್ಟಿದರೂ ಊರು ಹಾಳಾಗಿದೆ. ಈ ಊರಿನವರು, ಸಮೀಪ ಕಾಡಿನಲ್ಲಿದ್ದ ಕಾಲು ಹಾದಿಯಲ್ಲಿ ಬಂದವರ ಸುಲಿಗೆ ಕೊಲೆ ಮಾಡುತ್ತಿದ್ದರಂತೆ. ಹತ್ತಿರದ ಗೌನಹಳ್ಳಿ, ಕೊಳಾಳು ಮುಂತಾದ ಊರುಗಳಲ್ಲಿನ ಜನ ಈಗಲೂ ಈ ಬಗ್ಗೆ ಮಾತಾಡುತ್ತಾರೆ.
ಕೆನ್ನಳ್ಳಿಯಲ್ಲಿ ಉಳಿದಿದ್ದ ಎರಡು ನಾಯ್ಕರ ಕುಟುಂಬಗಳು 1925-30ರ ಸುಮಾರಿನಲ್ಲಿ ಊರು ತೊರೆದು ಒಂದು ಕುಟುಂಬ ಚಿತ್ರದುರ್ಗ ಸಮೀಪದ ಇಂಗಳದಾಳಿಗೂ ಇನ್ನೊಂದು ಕುಟುಂಬ ಎಲ್ಲೆಲ್ಲೋ ಪರದಾಡಿ ಕೊನೆಗೆ ಗೌನಳ್ಳಿಗೆ ವಲಸೆ ಬಂದಿದೆ.
ಮುಂದುವರೆಯುವುದು..