ಸಂಡೆ ಸ್ಪಷಲ್
Kannada novel: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ
CHITRADURGA NEWS |22 SEPTEMBER 2024
ಶಾಲಿವಾಹನ ಶಕೆ ಆನಂದನಾಮ ಸಂವತ್ಸರದ ಆಶ್ವೇಜ ಮಾಸದಲ್ಲಿ ಗೌನಳ್ಳಿ ಪಟೇಲ ದೊಡ್ಡಸಿದ್ದಪ್ಪ ಮತ್ತು ಗೊಂಚಿಕಾರರ ದೊಡ್ಡಸಿದ್ದಪ್ಪ ಇಬ್ಬರೂ ಕುರಿ, ಮೇಕೆ ಸಾಕಾಣಿಕೆ ಮಾಡುತ್ತಿದ್ದರು.
ಈ ಅವಧಿಯಲ್ಲಿ ಗೊಂಚಿಕಾರ ದೊಡ್ಡಸಿದ್ದಪ್ಪನು ಈಗ ಗುಡಿಹಳ್ಳಿ ಇರುವ ಅಡವಿಯಲ್ಲಿ ಕುರಿ ಮೇಕೆಗಳು ಮೇಯುತ್ತಿರುವಾಗ ಒಂದು ಮರದ ನೆರಳಲ್ಲಿ ಮಲಗಿ ನಿದ್ದೆಗೆ ಜಾರಿದ್ದಾಗ ಕನಸಿನಲ್ಲಿ ಮೈಲಾರಲಿಂಗ ಸ್ವಾಮಿಯು ಕಾಣಿಸಿಕೊಂಡು ತನಗೊಂದು ಆಸರೆಯ ಗುಡಿ ಕಟ್ಟಿಸು ಎಂದು ಅಪ್ಪಣೆ ಮಾಡಿತ್ತು. ನಿದ್ರಾಭಂಗದಿಂದ ಎಚ್ಚೆತ್ತುಗೊಂಡ ದೊಡ್ಡಸಿದ್ದಪ್ಪನು ಪಟೇಲ ದೊಡ್ಡಸಿದ್ದಪ್ಪನ ಬಳಿಗೆ ಹೋಗಿ ಕನಸಿನ ವಿಚಾರವನ್ನು ಹೇಳಿಕೊಂಡನು. ಇಬ್ಬರೂ ಸಾಕಷ್ಟು ವಿಚಾರ ಮಾಡಿ, ಇಬ್ಬರೂ ಮಂಗರಾಯನ ಪಟ್ಟಕ್ಕೆ ಹೋಗಿ ಅಲ್ಲಿನ ಪ್ರಮುಖರೊಂದಿಗೆ ಕನಸಿನ ವಿಷಯವನ್ನು ಪ್ರಸ್ತಾಪಿಸಿದರು. ಅವರು ಅನಂತರ ಗುಡಿಹಳ್ಳಿಗೆ ಹೋಗಿ ಅಲ್ಲಿನ ಕೆಲವರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. ಎಲ್ಲರೂ ಒಮ್ಮನಸ್ಸಿನಿಂದ ಮೈಲಾರಲಿಂಗೇಶ್ವರನಿಗೆ ಗುಡಿ
ಕಟ್ಟಿಸುವ ಕುರಿತು ತೀರಾನಿಸಿದರು. ಇದನ್ನು ಹಿರೇ ಮೈಲಾರದ ಸಂಸ್ಥಾನಿಕರಿಗೆ ತಿಳಿಸಿ ಅವರ ಒಪ್ಪಿಗೆಯನ್ನು ಪಡೆದು ಕೊಂಡಿದ್ದರು.
ಸಿದ್ಧತೆಗಳನ್ನು ಮಾಡಿಕೊಂಡಾದ ಬಳಿಕ ನಾಡು ಮಚ್ಚಿಗನೂರಿನ ತಿಲುಪಯ್ಯನನ್ನು ಭೇಟಿ ಮಾಡಿ ಗುಡಿ ನಿಲ್ದಾಣದ ರೂಪುರೇಷೆಗಳನ್ನು ಸಿದ್ಧಪಡಿಸಿ, ಮೂರೂ ಊರುಗಳ ಪ್ರಮುಖರು, ಗೌನಹಳ್ಳಿ ಪಟೇಲರು ಮತ್ತು ಗೊಂಚಿಕಾರರ ಸಮ್ಮುಖದಲ್ಲಿ ಗುಡಿ ನಿಲ್ದಾಣವನ್ನು ಮುನ್ನೂರು ವರಹಗಳಿಗೆ ಒಪ್ಪಂದಕ್ಕೆ ಕೊಟ್ಟರು. ಶಿಲುಪಯ್ಯನು ತನ್ನ ಕೈಯಿಂದ ಸ್ವಾಮಿಯ ವಿಗ್ರಹವನ್ನು ತಯಾರು ಮಾಡಿದನು.
ಅನಂತರ ದೊಡ್ಡಗುಡ್ಡವನ್ನು ಹತ್ತಿ ಅಲ್ಲಿ ಕರೀ ಭೂತಾಳಿ ಮರವನ್ನು ಹುಡುಕಿ ಕಡಿದು ತಂದು ಶಿಲುಪಯ್ಯನ ಕೈಗೆ ನೀಡಿ ಆ ಮರದಿಂದ ಸ್ವಾಮಿಯ ತೇಜಿ (ಕುದುರೆ) ಮಾಡಿಸಿದರು.
ಗುಡಿ ನಿರಾಣವನ್ನು ವಾಸ್ತು ಪ್ರಕಾರವೇ ಆಯನೋಡಿ ಕರಾರುವಾಕ್ಕಾಗಿ ನಿರಿಸಲು ಉದ್ಯುಕ್ತರಾದರು. ಪೂತ್ವಕ್ಕೆ ಬಾಗಿಲು ಮಾಡಿ, ಗುಡಿಯ ಮಧ್ಯದಲ್ಲಿ ದಕ್ಷಿಣ ಭಾಗದಲ್ಲಿ ಒಂದು ಕಿರು ಬಾಗಿಲನ್ನು ನಿನ್ನಿಸಲಾಯಿತು. ಗುಡಿಯ ಹೊರಗಡೆ ದಕ್ಷಿಣಕ್ಕೆ ಬಸವಣ್ಣನ ಗುಡಿ, ಗುರುವಿನ ಗುಡಿ, ನೈರುತ್ಯ ಮೂಲೆಯಲ್ಲಿ ತಿಮ್ಮಪ್ಪನ ಗುಡಿ, ಮೈಲಾರಲಿಂಗಪ್ಪನ ಗುಡಿಯ ಉತ್ತರಕ್ಕೆ ಐವತ್ತು ಅಡಿ ದೂರದಲ್ಲಿ ಹೆಗ್ಗಪ್ಪ (ಶಿವ)ನ ಗುಡಿ, ಅದರ ಪಕ್ಕದಲ್ಲಿ ತುಪ್ಪದ ಮಾಳವ್ವನ ಗುಡಿಗಳನ್ನು ನಿರಿಸಲಾಗಿತ್ತು. ದೇವಸ್ಥಾನದ ಎದುರಿಗೆ ರಂಗಮಧ್ಯದಿಂದ ಪೂತ್ವಕ್ಕೆ ನಲವತ್ತು ಅಡಿ ದೂರದಲ್ಲಿ ಕರುವಿನ ಮಲ್ಲಪ್ಪನ ಗುಡಿ, ಅದರ ದಕ್ಷಿಣಕ್ಕೆ ಪೌಳಿ ಬಾಗಿಲು ಮಾಡಿದರು.
ಹಿಂದಿನ ಸಂಚಿಕೆ ಇಲ್ಲಿದೆ: 3. ಎಲ್ಲರೂ ಲಿಂಗವಂತರಾದರು
ಗುಡಿಯ ಮುಂದಿನ ಹಳ್ಳದಾಚೆಗೆ ಇದ್ದ ಗುಡ್ಡದ ಗವಿಯಲ್ಲಿ ಬೆಟ್ಟದ ಮಲ್ಲಪ್ಪನ ಗುಡಿಗಳನ್ನು ನಿರಿಸಿದರು. ಈ ಎಲ್ಲಾ ಕಾರಗಳು ಮುಗಿದ ಬಳಿಕ ಸ್ವಾಮಿಯ ಪ್ರತಿಷ್ಠಾಪನೆ ಮಾಡಲು ಕರಿಆಲದ ಭೂತಪ್ಪನ ಬಲಭಾಗದಲ್ಲಿ ಒಂದು ಮೂಗುತ್ತವಿದ್ದು, ಅದರಲ್ಲಿ ಒಂದು ಬೇಟೆಗಿಡವು ಬೃಹದಾಕಾರವಾಗಿ ಬೆಳೆದಿತ್ತು. ಆ ಗಿಡದಲ್ಲಿ ಒಂದು ಜೇನುಗೂಡು ಕಟ್ಟಿತ್ತು. ಆ ಜೇನನ್ನು ಮುರಿದು ಅದರ ತುಪ್ಪವನ್ನು ಶೇಖರಿಸಿ, ಭರಮಗಿರಿ ಕುಂಚಿಟಿಗ ಒಕ್ಕಲಿಗರ ಪಟೇಲ ರಂಗಣ್ಣನನ್ನು ಕರೆಕಳಿಸಿ, ಅವನ ಕೈಗೆ ಜೇನು ತುಪ್ಪವನ್ನು ಕೊಟ್ಟು, ಮುನ್ನೂರು ಎಳನೀರು ತರಿಸಿ ಎಳನೀರು ಮತ್ತು ಜೇನುತುಪ್ಪದಿಂದ ಸ್ವಾಮಿಯ ವಿಗ್ರಹವನ್ನು ಅಭಿಷೇಕ ಮಾಡಿ ಪ್ರತಿಷ್ಠಾಪಿಸಿದರು.
ಈ ಸಂದರ್ಭದಲ್ಲಿ ಗೌನಳ್ಳಿ ಪಟೇಲ ದೊಡ್ಡಸಿದ್ದಪ್ಪ, ಗೊಂಚಿಕಾರ ದೊಡ್ಡ ಸಿದ್ದಪ್ಪ, ಮಂಗರಾಯ ಪಟ್ಟ, ಗುಡಿಹಳ್ಳಿ ಮತ್ತು ಭರಮಗಿರಿ ಪ್ರಮುಖರು ಸೇರಿದ್ದರು. ಇವರೆಲ್ಲರೂ ಸಮಾಲೋಚನೆ ಮಾಡಿ ‘ಸ್ವಾಮಿಯ ಜಾಡು ಜಪ್ತಿಯನ್ನು ಗೌನಹಳ್ಳಿ ಪಟೇಲ ದೊಡ್ಡಸಿದ್ದಪ್ಪ ಮತ್ತು ಗೊಂಚಿಕಾರ ದೊಡ್ಡಸಿದ್ದಪ್ಪರು ನೋಡಿಕೊಳ್ಳಬೇಕು’ ಎಂದು ಎಲ್ಲರೂ ತೀರಾನಿಸಿದರು. ಆಗ ಗೊಲ್ಲರ ದೊಯ್ಯಣ್ಣನೂ ಹಾಜರಿದ್ದನು. ಜತೆಗೆ ಸ್ವಾಮಿಯ ತೇಜಿಯೂ ಕೂಡಾ ಪಟೇಲರ ಸುಪರ್ದಿನಲ್ಲಿರತಕ್ಕದ್ದು ಮತ್ತು ಪೂಜಾರಿಯು ಪಟೇಲರು ನೀಡುವ ಸಲಹೆ, ಸೂಚನೆಗಳನ್ನು ಪಾಲಿಸತಕ್ಕದ್ದು ಎಂದು ತೀರಾನಿಸಿದರು.
ಈ ಸಂಬಂಧದ ತಾಮ್ರ ಶಾಸನವನ್ನು ಯರದಕಟ್ಟೆ ಭದ್ರಾಚಾರಿಯಿಂದ ಮಾಡಿಸಿ ಅದನ್ನು ಗೌನಹಳ್ಳಿ ಪಟೇಲರು ಮತ್ತು ಗೊಂಚಿಕಾರರ ಸುಪರ್ದಿಗೆ ಕೊಟ್ಟಿರುತ್ತಾರೆ.
ಮೈಲಾರಲಿಂಗ ಸ್ವಾಮಿಯ ಜಾತ್ರೆ
ಮೈಲಾರಲಿಂಗ ಸ್ವಾಮಿಯ ಪ್ರತಿಷ್ಠಾಪನೆ ಮಾಡಿದ ಕೆಲವು ದಿನಗಳಲ್ಲಿ ಮೂರು ವರ್ಷದ ಒಂದು ಕೂಸು ಮೈದುಂಬಿ ಗುಡಿಕಟ್ಟಿ ಸ್ವಾಮಿಯ ಪ್ರತಿಷ್ಠಾಪನೆ ಮಾಡಿದಿರಿ. ಈಗ ಜಾತ್ರೆ ಮಾಡಬೇಕು, ತೇರು ಹರಿಸಬೇಕು ಎಂದು ಅಪ್ಪಣೆಕೊಡಿಸಿತು. ಕೂಡಲೇ ಗೌನಳ್ಳಿ ಪಟೇಲರು ಮತ್ತು ಗೊಂಚಿಕಾರು, ಗ್ರಾಮದ ಇತರೆ ಮುಖ್ಯಸ್ಥರನ್ನು ಕರೆದು ಅವರೊಂದಿಗೆ ಸಮಾಲೋಚನೆ ಮಾಡಿ ಸ್ವಾಮಿಯ ಅಪ್ಪಣೆಯಂತೆ ನಡೆದುಕೊಳ್ಳಬೇಕೆಂದು ತೀರಾನಿಸಿದರು.
ಪಟೇಲರ ಜಮೀನಿನಲ್ಲಿ ಮತ್ತು ಗೊಂಚಿಕಾರರ ಜಮೀನಿನಲ್ಲಿ ಎರಡೆ- ರಡು ಭಾರಿ ಗಾತ್ರದ ಜಾಲಿಮರಗಳು ಬೆಳೆದಿದ್ದವು. ಅವುಗಳನ್ನು ಕಡಿಸಿ ಮತ್ತು ಒಣಗಿಸಿ ಅನಂತರ ಕೊಯ್ದು ಹೋಳು ಮಾಡಿಸಿ ಭರಮಗಿರಿ ದೊಡ್ಡ ಸಿದ್ದಪ್ಪನನ್ನು ಕರೆಸಿಕೊಂಡು ಅವನಿಂದ ತೇರಿನ ಗಾಲಿಗಳನ್ನು ಮಾಡಿಸಿದರು. ಅನಂತರ ಗೌನಳ್ಳಿ, ಪಟ್ಟ, ಗುಡಿಹಳ್ಳಿ ಮುಖ್ಯಸ್ಥರಲ್ಲದೆ ಭರಮಗಿರಿಯ ಗೌಡ್ರು ಮತ್ತು ಅನ್ಯಮತಸ್ತರು ಎಲ್ಲರೂ ಒಪ್ಪಿ, ಪೂಜಾರಿಯನ್ನು ಒಪ್ಪಿಸಿ ಜಾತ್ರೆ ಮಾಡಲು ಏರ್ಪಾಟು ಮಾಡಿದರು.
ಆಗ ಬೆಲಗೂರಿಗೆ ಹೋಗಿ, ಪೂಜಾರರ ಮೂರು ವರ್ಷದ ಹುಡುಗಿ ಗುಡಿಹಳ್ಳಿ ಗಣೇರ ವಾಲ್ಮೀಕಿಯ ಮತದ ದೊಡ್ಡ ಸಿದ್ದಪ್ಪರ ವಂಶದಲ್ಲಿ ಭಂಡಾರ ಮಾಡಿರುವವರು ಯಾರು ಎಂದು ವಿಚಾರಿಸಿಕೊಂಡ. ಅನಂತರ ‘ಪಟ್ಟಿ’ ಮಾಡಿರೆಂದು ಶ್ರೀ ಮೈಲಾರದ ಸಂಸ್ಥಾನದವರು ಈ ಹುಡುಗನಿಗೆ ಸ್ವಾಮಿ ಪಟ್ಟವನ್ನು ಕಟ್ಟಿದರು ಮತ್ತು ಊರ ಜನ ತೇರು ಕಟ್ಟಿದರು.
ಯುಗಾದಿ ಹಬ್ಬವಾದ ಬಳಿಕ ಬರುವ ಹುಣ್ಣಿಮೆಯ(ದಿನ) ರಾತ್ರಿ ಮೈಲಾರಲಿಂಗ ಸ್ವಾಮಿ ಮತ್ತು ಗಂಗೆ ಮಾಳವರಿಗೆ ಕಂಕಣ ಧಾರಣೆ ಮಾಡಿ, ರಾತ್ರಿಯೆಲ್ಲಾ ವಿವಾಹದ ಶಾಸ್ತ್ರಗಳನ್ನು ಗೌನಹಳ್ಳಿ ಗೌಡರು, ಗೊಂಚಿಕಾರರು, ಪಟ್ಟದ ಮುಖ್ಯಸ್ಥರು ಮತ್ತು ಗುಡಿಹಳ್ಳಿಯವರು ಮಾಡಿದರು. ಅದಕ್ಕೂ ಮುಂಚೆ ತಿಮ್ಮಪ್ಪ, ಹೆಗ್ಗಪ್ಪ ಮತ್ತಿತರ ಗುಡಿಗೋಪುರಗಳಲ್ಲಿ ದೀಪೋತ್ಸವ ಮಾಡಿದ್ದರು. ಬೆಳಕು ಹರಿಯುವ ಸಮಯಕ್ಕೆ ಲಗ್ನ ಶಾಸ್ತ್ರಗಳು ಮುಗಿದು ಎಲ್ಲರೂ ತಂತಮ್ಮ ಊರುಗಳಿಗೆ ಹಿಂತಿರುಗಿದರು.
ಮಾರನೇ ದಿನ ಸಂಜೆ ಮೈಲಾರಲಿಂಗಪ್ಪ ಮತ್ತು ಗಂಗಮಾಳವ್ವರನ್ನು ಅಲಂಕಾರ ಮಾಡಿ ಉಚ್ಚಾಯದಲ್ಲಿ (ಸಣ್ಣತೇರು) ಕೂಡಿಸಿ, ಶೀಬಾರದ ತನಕ ಉಚ್ಚಾಯವನ್ನು ಹರಿಸಿ, ಅನಂತರ ಉಚ್ಚಾಯವನ್ನು ಅದರ ಸ್ವಸ್ಥಾನಕ್ಕೆ ತಂದು ನಿಲ್ಲಿಸಿ ಎರಡೂ ದೈವಗಳನ್ನು ಗುಡಿದುಂಬಿಸಿದರು.
ಮೂರನೇ ರಾತ್ರಿ ಚಂದ್ರೋದಯವಾಗುತ್ತಲೇ ಗೌನಹಳ್ಳಿಯ ಗೌಡರು, ಗೊಂಚಿಕಾರರು ಮತ್ತಿತರರು ಎತ್ತಿನ ಬಂಡಿಗಳನ್ನು ಹೂಡಿಕೊಂಡು ಮನೆಮಂದಿಯ ಜತೆ ಗುಡಿಹಳ್ಳಿ ತಲುಪುತ್ತಾರೆ. ಅಷ್ಟೊತ್ತಿಗೆ ಪೂಜಾ- ರಿಯು ಮೈಲಾರಲಿಂಗಪ್ಪ ಮತ್ತು ದೈವದ ತಮ್ಮಂದಿರು ನೀಲಗಿರಿಯಪ್ಪರನ್ನು ಸುಂದರವಾಗಿ ಅಲಂಕರಿಸಿರುತ್ತಾನೆ. ಉರುಮೆ, ಚಮಾಳ, ಡೊಳ್ಳು ಮತ್ತು ಗೊರವರ ಡಮರುಗದ ಸದ್ದಿನಲ್ಲಿ ಪೂಜಾರಿ ದೈವಗಳನ್ನು ಪೂಜೆ ಮಾಡುತ್ತಾನೆ. ಅನಂತರ ಭಕ್ತರ ‘ಚಾಂಗಭಲೋ’ ಘೋಷಣೆಯಲ್ಲಿ ಪೂಜಾರಿ ಮಗದೊಬ್ಬರು ಮೈಲಾರ ಲಿಂಗಪ್ಪ ಮತ್ತು ನೀಲಗಿರಿಯಪ್ಪರನ್ನು ತಲೆ ಮೇಲೆ ಹೊತ್ತು ರಂಗಮಧ್ಯಕ್ಕೆ ಬರುತ್ತಾರೆ.
ನಾ ಉರುಮೆ ಸದ್ದು. ಡೊಳ್ಳಿನ ಸದ್ದು, ದೊಡ್ಡ ತಾಳಗಳ ಸಮ್ಮಗಳ ನಡುವೆ ಗೊರವರ ಡಮರುಗಗಳ ಸದ್ದಿನಲ್ಲಿ ಇಡೀ ವಾತಾವರಣ ಫೈನವಿರೇಳಿಸುತ್ತಿರುತ್ತದೆ.
ದೈವಗಳನ್ನು ಹೊತ್ತವರು ಮುಂದೆ ಚಲಿಸಲು ತಲೆಯ ಮೇಲಿನ ದೈವಗಳು ಸೂಚನೆ ನೀಡಿರುವುದಿಲ್ಲ. ಆಗ ಭಕ್ತರು ‘ಏಳುಕೋಟಿ ಏಳುಕೋಟಿ ಚಾಂಗಛಲೋ’ ಮುಂತಾದ ಉದ್ವೇಷ, ಪರಾಕುಗಳನ್ನು ಉಗ್ಗಡಿಸುತ್ತಿರುವಾಗ ಗೊರವರು ಒಬ್ಬರಾಗುತ್ತೂ ಒಬ್ಬರು ಪರಾಕುಗಳನ್ನು ಪಠಿಸುತ್ತಾರೆ. ಪ್ರತಿ ವಾಕ್ಯಕ್ಕೂ ‘ಬಲಾವ್ರು’ (ಭಲಾಹೌದು) ಎಂದು ಸಮರ್ಥಿಸುತ್ತಾರೆ. ಆಗ ಗೌನಹಳ್ಳಿ ಪಟೇಲರು ಮತ್ತು ಗೊಂಚಿಕಾರರ ಹಿರಿಯರು ತಮ್ಮ ರುಮಾಲು ಬಿಚ್ಚಿ ಅದನ್ನು ದೈವಗಳ ಮುಂದಿರಿಸಿ ಸಾಷ್ಟಾಂಗ ನಮಸ್ಕರಿಸುತ್ತಾರೆ. ಈ ಎಲ್ಲಾ ಸಡಗರದಲ್ಲಿ ದೈವ ಹೊತ್ತವರು ಠೀವಿಯಿಂದ ಮುಂದಡಿ ಇಡುತ್ತಾರೆ. ಅದೇ ಠೀವಿಯಲ್ಲಿ ಅಲಂಕರಿಸಿದ ತೇರಿನ ಮುಂಭಾಗಕ್ಕೆ ಬರುತ್ತಲೇ ಪೂಜಾರಿಯ ಮಗ ದೈವಗಳನ್ನು ಮತ್ತು ತೇರನ್ನು ಪೂಜಿಸುತ್ತಾನೆ. ಅನಂತರ ದೈವಗಳು ರಥವನ್ನೇರುತ್ತವೆ. ಜತೆಯಲ್ಲಿ ಪೂಜಾರಿ ಗೌಡರು ಕೂಡಾ ತೇರನ್ನು ಹತ್ತುತ್ತಾರೆ. ಆಗ ಗೌನಹಳ್ಳಿ ಗೊಂಚಿಕಾರರ ಮನೆಯಲ್ಲಿ ಮೀಸಲು ಅಕ್ಕಿಯಿಂದ ಮಾಡಿರುವ ‘ಬಲಿ ಅನ್ನ’ವನ್ನು ತೇರಿನ ಸುತ್ತ ಹಾಕಿ ತೇರಿನ ಗಾಲಿಗಳ ಮುಂದೆ ಎಡ ಹಾಕುತ್ತಾರೆ. ಕೂಡಲೇ ಏಳುಕೋಟಿ ಚಾಂಗಭಲೋ ಉದ್ವೇಷಗಳು ಮುಗಿಲು ಮುಟ್ಟುವಂತೆ ಭಕ್ತರು ಕೂಗುತ್ತಾರೆ. ಈ ಎಲ್ಲ ಸಡಗರದ ಮಧ್ಯೆ ತೇರು ಮುಂದೆ ಮುಂದೆ ಹರಿಯುತ್ತದೆ. ಈ ಸಂದರ್ಭದಲ್ಲಿ ಭಕ್ತರು ‘ತೂರು ಬೆಲ್ಲ ಮೆಣಸು’ ಎಂದು ಬಾಳೆಹಣ್ಣು’ ಮಂಡಕ್ಕಿ ಇತ್ಯಾದಿಗಳನ್ನು ತೇರಿನ ಮೇಲೆ ಎಸೆಯುತ್ತಾರೆ. ಹೀಗೆ ಎಸೆಯುವುದರಿಂದ ತಮ್ಮ ಕೋರಿಕೆಗಳು ಈಡೇರುತ್ತವೆ ಎಂದು ಭಕ್ತರು ಭಾವಿಸುತ್ತಾರೆ.
ಹಿಂದಿನ ಸಂಚಿಕೆ ಇಲ್ಲಿದೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು
ತೇರು ತನ್ನದೇ ಠೀವಿಯಿಂದ ಶೀಬಾರ (ಪೇಟೆ ಬಸಪ್ಪ) ತಲುಪುತ್ತಲೇ ಎಲ್ಲಾರಿಗೂ ಪಾನಕ ಫಲಾಹಾರ ವಿತರಣೆ ಮಾಡಲಾಗುತ್ತದೆ. ಈ ಮಧ್ಯೆ ಪೂಜಾರಿಯು ದೈವಗಳಿಗೆ ಮತ್ತು ಶೀಬಾರದ ಬಳಿ ಜಗುಲಿ ಮೇಲೆ ಬನ್ನಿ ಮರದ ಬುಡದಲ್ಲಿ ಸ್ಥಾಪಿತವಾಗಿರುವ ಪೇಟೆ ಬಸಪ್ಪನಿಗೆ ಪೂಜೆ ಸಲ್ಲಿಸುತ್ತಾನೆ. ಭಕ್ತರು ಜಯ ಘೋಷಗಳಿಂದ ತೇರನ್ನು ತಿರುಗಿಸಿ ಅದರ ಸ್ವಸ್ಥಾನಕ್ಕೆ ಮುಟ್ಟಿಸುತ್ತಾರೆ. ಆಗ ದೈವಗಳನ್ನು ಪೂಜಾರಿ ಮಗದೊಬ್ಬರು ತಮ್ಮ ತಲೆಯ ಮೇಲೆ ಹೊತ್ತು ಠೀವಿಯಿಂದ ಗುಡಿಯ ಮುಂಭಾಗಕ್ಕೆ ಬರುತ್ತಾರೆ.
ಅಲ್ಲಿ ಕರುವಿನ ಮಲ್ಲಪ್ಪನ ಗುಡಿಯ ತೆಂಕಲ ಮಗ್ಗುಲಲ್ಲಿ ನಿಲ್ಲಿಸಿರುವ ಬಂಡೆಗೂಟ- ಕೈ ಕಬ್ಬಿಣದ ಸರಪಳಿಯನ್ನು ಸುತ್ತಿಕಟ್ಟಿ ಅದಕ್ಕೆ ಪೂಜೆ ನೆರವೇರಿಸುತ್ತಾರೆ. ದೈವಗಳೆರಡೂ ತೆಂಕಲ ಮುಖವಾಗಿ ನಿಂತು ಬೆಳಿಗ್ಗೆಯಿಂದಲೇ ಒಷ್ಟೊತ್ತಿನ ವ್ರತದಲ್ಲಿರುವ ಗೊರವರು ನಡೆಸಿಕೊಡುವ ಸರಪಳಿ ಪವಾಡದ ಸಾನಿಧ್ಯ ವಹಿಸಿರುತ್ತವೆ.
ಗೊರವರು ಭಕ್ತಿಯಿಂದ ಹದಿನೈದು ಅಡಿ ಉದ್ದದ ಸರಪಳಿಯನ್ನು ಗುಂಜಾಡುತ್ತಾರೆ. ಹೀಗೆ ಗುಂಜಾಡುವಾಗ ಸರಪಳಿಯ ಒಂದು ಕೊಂಡಿ ಹಿಗ್ಗಿ ಬಾಯಿ ಬಿಡುತ್ತದೆ. ಆಗ ಪವಾಡವಾಯಿತೆಂದು ಪೂಜೆ ಮಾಡಿ ಸಂಭ್ರಮಿಸುತ್ತಾರೆ. ಈ ಪವಾಡ ಕೂಡಲೇ ಆದರೆ ಈ ಸಾಲಿನಲ್ಲಿ ಮಳೆ ಬೆಳೆದಂಡಿಯಾಗಿ ಆಗಿ ಭಕ್ತರು ಸುಖವಾಗಿರುತ್ತಾರೆಂದು ಜನರ ನಂಬಿಕೆ.
ಇದು ಮುಕ್ತಾಯವಾಗುವ ಸಮಯಕ್ಕೆ ಪೂರಾ ಬೆಳ್ಳಂಬೆಳಗಾಗಿರುತ್ತದೆ. ಪವಾಡ ನೆರವೇರಿಸಿದ ಗೊರವರು ಹತ್ತಿರದ ಗುಡ್ಡಗಳಲ್ಲಿ ಹುಡುಕಾಡಿ ತೊಡೆ ಗಾತ್ರದ ಧೂಪದ ಮರವನ್ನು ಅಗೆದು ಬೇರು ಸಮೇತ ಕಿತ್ತು ಪೂಜಿಸಿ ಹೊತ್ತು ಗೌನಳ್ಳಿಗೆ ತರುತ್ತಾರೆ. (ಕೆಲವು ವರ್ಷ ದನಗಾಹಿಗಳಾಗಿ ಗೊರವರು ಗುಡ್ಡಕ್ಕೆ ಹೋಗಿದ್ದಾಗ ಅಲ್ಲಲ್ಲಿ ಹುಟ್ಟಿ ಬೆಳೆದಿರುವ ಧೂಪದ ಮರವನ್ನು ಗುರುತಿಸಿರುತ್ತಾರೆ). ಧೂಪದ ಮರಕ್ಕೆ ಮೈಲಾರಲಿಂಗ ಸ್ವಾಮಿಗೆ ಹಾಕಿದ್ದ ಹೂಹಾರಗಳಿಂದ ಸಿಂಗರಿಸಿಕೊಂಡು ಪವಾಡದ ಸರಪಳಿಯನ್ನು ಮರದ ಬೊಡ್ಡೆಗೆ ಸುತ್ತಿ ಹಿಂದೆ ಮುಂದೆ ಧೂಪದ ಮರವನ್ನು ಹೊತ್ತು ಚಿಕ್ಕುಂಬತ್ತಿಗೆ ಗೌನಹಳ್ಳಿಗೆ ತಲುಪಿ ಉರುಮೆ ಡೊಳ್ಳುಗಳನ್ನು ನುಡಿಸಿಕೊಂಡು ಊರಿನ ನಿವಾಸಿಗಳ ಮನೆಮನೆಯಲ್ಲಿ ಪೂಜೆ ಮಾಡಿಸಿ ಕಾಣಿಕೆ ಪಡೆದು- ಕೊಂಡು ಮದ್ಯಾಹ್ನದ ಹೊತ್ತಿಗೆ ಊರಿನ ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿರುವ ಬ್ರಹ್ಮದೇವರ ಸ್ಥಾನ ಸೇರುತ್ತಾರೆ. ಊರಿನ ಪ್ರತಿ ಮನೆಗಳವರು ನಿನ್ನೆಯಿಂದಲೆ ಹುಣಿಸೆಮರಗಳ ನೆರಳಲ್ಲಿ ಹತ್ತಾರು ಒಲೆಗಳನ್ನು ಹೂಡಿ ಬೇಯಿಸಿರುವ ಸಜ್ಜೆ ರೊಟ್ಟಿ ಕಾಯಾಲು (ತೆಂಗಿನಕಾಯಿ ರಸ), ಪಾಯಸ, ಅನ್ನ ಸಾರಿನ ಎಡೆಗಳನ್ನು ಬ್ರಹ್ಮದೇವರ ಗುಡಿ ತಾವ ತಂದು ದೈವಕ್ಕೆ ಎಡೆಮಾಡಿ ಅಲ್ಲಿಗೆ ಬಂದು ತಲುಪಿರುವ ನೂರಾರು ಜನ (ಗುಡಿಹಳ್ಳಿಯಿಂದಲೂ ಭಕ್ತರು ಬಂದಿರುತ್ತಾರೆ) ಭಕ್ತರಿಗೆ ಉಣಬಡಿಸಿ ಕೃತಾರ್ಥರಾಗುತ್ತಾರೆ.
ಗೊರವರೆಲ್ಲಾ ಪೂಜೆಯಾದ ಮೇಲೆ ದೇವರ ಪ್ರಸಾದವನ್ನು ಸ್ವೀಕರಿಸುವುದರ ಮೂಲಕ ತಮ್ಮ ಒಷ್ಟೊತ್ತಿನ ವ್ರತವನ್ನು ತ್ಯಜಿಸುತ್ತಾರೆ.
ಹೊತ್ತು ಪಡುವಣಕ್ಕೆ ವಾಲಿದಂತೆ ಗೌನಳ್ಳಿ ಗೌಡ್ರು ಮನೆತನದವರು ಮತ್ತು ಗೊಂಚಿಕಾರ ಮನೆತನದವರು ಮತ್ತಿತರರು ಮತ್ತು ಗೊರವರು ಗುಡಿಹಳ್ಳಿ ಹಾದಿ ತುಳಿಯುತ್ತಾರೆ.
ಇವರಲ್ಲಿ ಕೆಲವರು ತಮ್ಮ ಭಕ್ತಾನುಸಾರ ನೆನೆಸಿದ ಕಡಲೆಕಾಳು ಮತ್ತು ತೆಂಗಿನ ಕಾಯಿಗಳನ್ನು ಒಯ್ಯುತ್ತಾರೆ. ಗುಡಿಹಳ್ಳಿ ದೇವಸ್ಥಾನದಲ್ಲಿ ಪೂಜಾರಿಯು ನೀಲಗಿರಿಯಪ್ಪ ದೈವಕ್ಕೆ ಅಲಂಕಾರ ಮಾಡಿರುತ್ತಾನೆ. ಗೌಡು, ಗೊಂಚಿಕಾರರು ಮತ್ತೆಲ್ಲರೂ ಆಗಮಿಸಿದ ಬಳಿಕ ಅಲಂಕರಿಸಿದ ದೈವದ ಜತೆಗೆ ಮೈಲಾರಲಿಂಗಪ್ಪನ ಪ್ರತಿನಿಧಿಯಾದ ‘ಸಾಂಗ’ವನ್ನು ಹೊತ್ತು ದೇವಸ್ಥಾನದ ಎದುರು ಇರುವ ದೇವರ ಮರಡಿಯ ಬೆಟ್ಟದ ಮಲ್ಲಪ್ಪನ ಗುಡ್ಡವನ್ನು ಹತ್ತಿ ಅಲ್ಲಿರುವ ಸ್ವಾಭಾವಿಕ ಗವಿಯ ಪಕ್ಕದಲ್ಲಿ ಸ್ವಾಮಿಯ ಗದ್ದುಗೆ ಮಾಡಿ, ಗುಹೆಯಲ್ಲಿ ಸ್ಥಾಪಿಸಿರುವ ದೈವಕ್ಕೂ ಮತ್ತು ನೀಲಗಿರಿಯಪ್ಪ ಹಾಗೂ ಸಾಂಗಕ್ಕೆ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿ ಭಕ್ತರಿಗೆಲ್ಲಾ ನೆನಗಡಲೆ, ತೆಂಗಿನಕಾಯಿ ತುರಿಯ ಫಳಾರ ಹಂಚುತ್ತಾರೆ.
ಆನಂತರ ನಿಧಾನಕ್ಕೆ ಬೆಟ್ಟ ಇಳಿದು ಮೂಡಲ ಶೀಬಾರದ ಬಳಿಯಿಂದ ದೋಣಿ ಸೇವೆ ಬಯಲಿಗೆ ದೈವಗಳು ಆಗಮಿಸುತ್ತವೆ. ಆಗ ಗುಡಿಯಲ್ಲಿರುವ ಮೈಲಾರಲಿಂಗಪ್ಪ ದೈವವನ್ನು ಹೊರಡಿಸಿಕೊಂಡು ನೀಲಗಿರಿಯಪ್ಪನ ಸನ್ನಿಧಿಗೆ ಸೇರುತ್ತಾರೆ. ಅಲ್ಲಿ ಎರಡೂ ದೈವಗಳ ಭೇಟಿಯಾಗಿ ಎರಡೂ ದೈವಗಳು ಮಡಿಬಟ್ಟೆಯ ಮೇಲೆ ನಡೆದು ಗುಡಿಯನ್ನು ತಲುಪುತ್ತಾರೆ.
ಅಲ್ಲಿ ಎರಡೂ ದೈವಗಳನ್ನು ಗದ್ದುಗೆ ಮಾಡಿ ಪೂಜೆ ಮಂಗಳಾರತಿ ಮಾಡುತ್ತಾರೆ. ಇಲ್ಲಿಗೆ ಜಾತ್ರೆಯ ನಾಲ್ಕನೇ ದಿನದ ಸೇವೆ ಮುಗಿಯುತ್ತದೆ.
ಮಾರನೇ ದಿನ ಜಾತ್ರೆಯ ಐದನೇ ಮತ್ತು ಕೊನೆಯ ದಿನ ಸಂಜೆ ಬಿಸಿಲು ಕಡಿಮೆಯಾಗಿ ಜನರು ಓಡಾಡಲು ಶುರು ಮಾಡುವ ಸಮಯಕ್ಕೆ ಗುಡಿಹಳ್ಳಿಯ ದೋಣಿಸೇವೆ ಬಯಲಿಗೆ ನೀರು ಚಿಮುಕಿಸಿ ಧೂಳು ಕಡಿಮೆ ಮಾಡುತ್ತಾರೆ.
ಬಯಲು ಆರಿ ಅಲ್ಲಿನ ಪರಿಸರ ತುಸು ತಂಪಾಗುವ ಸಮಯಕ್ಕೆ ಭಕ್ತರು ಆಗಮಿಸತೊಡಗುತ್ತಾರೆ. ದೇವರ ಗುಡಿಯಲ್ಲಿ ಗೌಡ್ರು ಮತ್ತು ಗೊಂಚಿಕಾರ ಮನೆತನದವರು ಮತ್ತೆ ಕೆಲವು ಭಕ್ತರು ಪೂಜಾರಿ ದೈವಗಳಿಗೆ ಅಲಂಕಾರ ಮಾಡುವುದನ್ನು ಗಮನಿಸುತ್ತಿರುತ್ತಾರೆ. ಇನ್ನೇನು ಅಲಂಕಾರ ಮಾಡುವುದು ಮುಗಿಯಿತು ಅನ್ನುವಾಗ ದೈವಗಳನ್ನು ತೇಜಿ ಮತ್ತು ಆನೆಗಳ ಮೇಲೆ ಕೂರಿಸಿ, ಹೊರಲು ನಾಲ್ಕು ಬಿದಿರಿನ ಅಡ್ಡೆಗಳನ್ನು, ಎರಡೆರಂತೆ ಅಲಾದಿಯಾಗಿ ನವರಂಗದಲ್ಲಿ ಜೋಡಿಸಿಟ್ಟು ತೇಜಿ ಮತ್ತು ಆನೆಗಳನ್ನು ಒಂದೊಂದಾಗಿ ಮೇಲೆತ್ತಿ ಪೀಠದ ಮಣೆಗಳನ್ನು ಅಡ್ಡೆಗಳ ಮೇಲಿಟ್ಟು ತೇಜಿ ಮತ್ತು ಆನೆಗಳನ್ನು ಎತ್ತಿತಂದು ಪೀಠಗಳ ಮೇಲಿರಿಸಿ ಹಗ್ಗಗಳಿಂದ ಬಿಗಿಯಾಗಿ ಕಟ್ಟುತ್ತಾರೆ.
ಆನಂತರ ಎರಡೂ ದೈವಗಳನ್ನು ಅಂದರೆ ಮೈಲಾರಲಿಂಗಪ್ಪನನ್ನು ತೇಜಿಯ ಮೇಲೆ ಮತ್ತು ನೀಲಗಿರಿಯಪ್ಪನನ್ನು ಆನೆಗಳ ಮೇಲೆ ಕೂರಿಸಿ ಹೊಲವನ್ನಗಳಿಂದ ಬಿಗಿಯುತ್ತಾರೆ. ಇದೆಲ್ಲಾ ಮುಗಿದ ಬಳಿಕ ಅವರೆಲ್ಲಾ ದೈವಗಳಿಗೆ ಅಡ್ಡಬಿದ್ದು ತಮ್ಮ ಭಕ್ತಿಯನ್ನು ತೋರುತ್ತಾರೆ. ಆಗ ಪೂಜಾರಿಯು ಎರಡೂ ದೈವಗಳಿಗೆ ಮಂಗಳಾರತಿ ಎತ್ತುತ್ತಾನೆ. ಕೂಡಲೇ ಕಾಯುತ್ತಿರುವ ಯುವಕರು ಸಾಮೂಹಿಕವಾಗಿ ‘ಜಾಂಗಭಲೋ’ ಎಂದು ಉದ್ವೇಷ ಮಾಡುತ್ತಾ ದೇವರ ಅಡ್ಡೆಗಳನ್ನು ಎತ್ತಿ ತಮ್ಮ ಹೆಗಲ ಮೇಲಿಟ್ಟುಕೊಳ್ಳುತ್ತಾರೆ. ಅಲ್ಲಿ ಕೇಳಿ ಬರುತ್ತಿರುವ ಜೋಡಿ ಉರುಮೆ, ಡೊಳ್ಳು, ಢಮರುಗ, ಚಮಾಳಗಳ ಸದ್ದಿನಲ್ಲಿ ‘ಚಾಂಗದಲೋ’ ಉದ್ಯೋಷ ಎಲ್ಲಾ ಕಡೆ ನಿನದಿಸುತ್ತದೆ. ಒಂದರ ಪಕ್ಕ ಇನ್ನೊಂದು ದೈವಗಳು ಅಡ್ಡೆ ಮೇಲಿಂದ ಅತ್ಯಂತ
ಮನೋಹರವಾಗಿ ಕಾಣಿಸುತ್ತವೆ. ಠೀವಿಯಿಂದ ನಿಂತಿರುವ ದೈವಗಳು ಮುಂದಡಿ ಇಡಲು ಗೊರವರು ಪರಾಕು ಹೇಳುತ್ತಾರೆ. ಇವುಗಳ ಮಧ್ಯೆ ದೈವಗಳು ನಿಧಾನವಾಗಿ ಮುಂದೆ ಚಲಿಸಿ ಇತರೆ ದೈವಗಳಿರುವೆಡೆ ಪೂಜೆ ಮಾಡಿಸಿಕೊಂಡು ದೋಣಿ ಸೇವೆ ಬಯಲಿನ ಜಗಲಿ ಮೇಲೆ ವಿರಾಜಮಾನರಾಗುತ್ತಾರೆ. ಆಗ ಸಿಂಗರಿಸಿಕೊಂಡಿರುವ ಸಿಡಿಯಾಡುವ ಯುವಕನನ್ನು ಮೆರವಣಿಗೆಯಲ್ಲಿ ಕರೆತಂದು ಅವನು ಸ್ವಾಮಿಗೆ ನಮಸ್ಕರಿಸಿ ಸಿಡಿ ತೆಂಕಲಿಗೆ ನೂರು ಅಡಿ ದೂರದಲ್ಲಿರುವ ಮರದ ಬಳಿ ಸಾಗುತ್ತಾನೆ.
ಸುಮಾರು 40, 50 ಅಡಿ ಉದ್ದ ಇರುವ ಸಿಡಿ ಮರದ ಒಂದು ತುದಿಗೆ ಅವನನ್ನು ಕೆಳಮುಖವಾಗಿ ಕಟ್ಟುತ್ತಾರೆ. ಇನ್ನೊಂದು ತುದಿಯಲ್ಲಿ ದೈವವನ್ನು ಕಟ್ಟಿರುತ್ತಾರೆ. ವಾದ್ಯಗಳ ಕಿವಿಗಡಚಿಕ್ಕುವ ಸದ್ದಿನಲ್ಲಿ ಸಿಡಿಮರ ಮೂರು ಸುತ್ತು ಸುತ್ತಿದ ಬಳಿಕ ನಿಲ್ಲಿಸಿ ಸಿಡಿಯಾಡಿದ ಯುವಕನನ್ನು ಇಳಿಸುತ್ತಾರೆ.
ಅವನು ಕೃತಜ್ಞತಾ ಭಾವದಿಂದ ದೈವಗಳಿಗೆ ಅಡ್ಡಬಿದ್ದು ನಮಸ್ಕರಿಸಿ ಅದೇ ಮೆರವಣಿಗೆಯಲ್ಲಿ ಗುಡಿಯ ಹಿಂದಕ್ಕೆ ಹೋಗಿ ಬಿಸಿ ನೀರಲ್ಲಿ ಮಿಂದು ಹೊಸಾ ಬಟ್ಟೆ ಧರಿಸಿ ತನ್ನವರನ್ನು ಕೂಡಿಕೊಳ್ಳುತ್ತಾನೆ.
ಅಷ್ಟರಲ್ಲಿ ಗದ್ದುಗೆ ಮಾಡಿರುವ ದೈವಗಳ ಮುಂದುಗಡೆ ದೊಡ್ಡ ದೊಡ್ಡ ಜಮಖಾನಗಳನ್ನು ಹಾಸುತ್ತಾರೆ. ಕೂಡಲೇ ಗೊರವರು ತಮ್ಮ ತಮ್ಮ ಹಿತ್ತಾಳೆಯ, ಕಂಚಿನ ದೋಣಿಗಳನ್ನು ಜಮಖಾನದ ಮೇಲೆ ಸಾಲಾಗಿ ಜೋಡಿಸಿಡುತ್ತಾರೆ. ದೈವದ ಮುಂದುಗಡೆ ದೊಡ್ಡ ದೊಡ್ಡ ಅರಿವಾಣದ ಕಡಾಯಿಗಳನ್ನು ಇಟ್ಟಿರುತ್ತಾರೆ. ಭಕ್ತಾದಿಗಳು ತಮ್ಮ ಕೋರಿಕೆಗಳನ್ನು ದೋಣಿಯೊಳಗೆ ಸುಲಿದ ಬಾಳೆಹಣ್ಣು ಸಕ್ಕರೆ ತುಪ್ಪ ಮುಂತಾದುವನ್ನು ಹಾಕುತ್ತಾರೆ. ದೈವದ ಮುಂದಿರಿಸಿರುವ ಅರಿವಾಣ, ಕಡಾಯಿಗಳಿಗೂ ಹಣ್ಣು ತುಂಬಿಸುತ್ತಾರೆ. ಈ ಹಣ್ಣಿಗೆ ಅಂಬಾರಿ ಹಣ್ಣು ಎಂದು ಕರೆಯಲಾಗಿದೆ.
ಸುಮಾರು ಒಂದು ಗಂಟೆ ಕಾಲ ದೋಣಿಗಳಿಗೆ ಬಾಳೆಹಣ್ಣು ತುಂಬಿಸುವ ಕಾರ ಮುಗಿಯುವ ಸಮಯಕ್ಕೆ ಸೊಂಟದಿಂದ ಮೇಲಕ್ಕೆ ಬರಿಮೈಯ ಗೊರವರು ಮತ್ತೆ ಕೆಲವರು ಕಂಬಳಿಯಿಂದ ಹೊಲಿಸಿರುವ ಉದ್ದನೆಯ ನಿಲುವಂಗಿ ಮತ್ತು ಕರಡಿಗೂದಲಿನ ಟೊಪ್ಪಿಗೆಯಲ್ಲಿ ತಮ್ಮ ತಮ್ಮ ಡಮರುಗಗಳನ್ನು ನುಡಿಸುತ್ತಾ ಲಯ ಬದ್ಧವಾಗಿ ಕುಣಿಯುತ್ತಾ ದೈವದ ಗುಣಗಾನ ಮಾಡುತ್ತಾರೆ.
ಸುಮಾರು ಹೊತ್ತು ಇದು ನಡೆದ ಮೇಲೆ ಢಮರುಗಗಳನ್ನು ಎತ್ತಿಟ್ಟು ಕರಡಿಗಳ ರೀತಿ ಒಬ್ಬರನ್ನೊಬ್ಬರು ಕಚ್ಚಾಡತೊಡಗುತ್ತಾರೆ. (ಗೊರವರು ಮೈಲಾರಲಿಂಗನ ಭಕ್ತರು ಕರಡಿಗಳೆಂದು ಒಂದು ನಂಬಿಕೆ). ಈ ಕಚ್ಚಾಟ, ನೂಕಾಟ ತಾರಕಕ್ಕೇರಿ ಒಬ್ಬನನ್ನು ಕಡಿದು ಸಾಯಿಸಿದಂತೆ ನಟಿಸಿ ಅವನಿಗೆ ಕಂಬಳಿ ಹೊದೆಸಿ ಮಲಗಿಸುತ್ತಾರೆ. ಸತ್ತವನ ಪರವಾಗಿ ಅನುಕಂಪದ ‘ಧರ ಕೊಡ್ರಮ್ಮಾ’, ‘ಧರ ಕೊಡ್ರಪ್ಪೋ’ ಮುಂತಾಗಿ ಭಿಕ್ಷೆ ಎನ್ನುತ್ತಾರೆ. ಅನಂತರ ಕಡಿಸಿಕೊಂಡವನನ್ನು ಸ್ವಾಮಿಯ ತೀರ್ಥವನ್ನು ಪ್ರೋಕ್ಷಿಸಿ ಏಳಿಸುತ್ತಾರೆ. ಆಗ ವಸೂಲಾದ ಧಮ್ಮದ ಭಿಕ್ಷೆ ಹಣವನ್ನು ಅವನಿಗೆ ತಲುಪಿಸುತ್ತಾರೆ.
ಅನಂತರ ಎಲ್ಲಾ ಗೊರವರು ಕೈಯಿಂದ ಮುಟ್ಟದೆ ದೋಣಿಯ ಬಾಳೆಹಣ್ಣನ್ನು ಬಾಯಿಂದ ತಿನ್ನತೊಡಗುತ್ತಾರೆ. ಇದು ಕರಡಿಗಳು ಹಣ್ಣು ತಿನ್ನುವ ಬಗೆಯನ್ನು ನೆನಪಿಸುತ್ತದೆ. ಹಣ್ಣು ತಿನ್ನುವಾಗ ಮಧ್ಯೆ ಮಧ್ಯೆ ತಲೆ ಎತ್ತಿ ಸ್ವಾಮಿಯ ಕಡೆ ನೋಡುತ್ತಾ ಕರಡಿಯ ರೀತಿ ಗುರ್ ಎಂದು ಸದ್ದು ಮಾಡುತ್ತಾರೆ.
ಬಾಳೆಹಣ್ಣನ್ನು ಪೂರ್ತಿ ತಿನ್ನಲಾಗುವುದಿಲ್ಲ. ಉಳಿದುದನ್ನು ಮತ್ತು ಪಕ್ಕದಲ್ಲಿ ಹಾಕಿರುವುದನ್ನು ಗೊರವಯ್ಯನ ಸಂಬಂಧಿಗಳು ಎತ್ತಿ ಒಯ್ಯುತ್ತಾರೆ. ಈಗ ಗೌನಹಳ್ಳಿ ಗೌಡ್ರು, ಗೊಂಚಿಕಾರರು, ಮುಖ್ಯಸ್ಥರು ದೈವದ ಮುಂದಿನ ಅರಿವಾಣ ಕಡಾಯಿಗಳಲ್ಲಿ ತುಂಬಿಸಿರುವ ‘ಅಂಬಾರಿ ಹಣ್ಣ’ನ್ನು ಮುಖ್ಯಸ್ಥರಿಗೆ ಕೈವಾಡಸ್ತರು, ಸಿಡಿ ಆಡಿದವನು ಮತ್ತಿತರರಿಗೆ ಅಲ್ಲದೆ ಹತ್ತಿರದ ಊರುಗಳಾದ ಭರಮಗಿರಿ, ಕರಿಯಣ್ಣನ ಹಟ್ಟಿ, ಬಳಗಟ್ಟ ಮುಂತಾದ ಊರುಗಳ ಮುಖ್ಯಸ್ಥರಿಗೂ ಹಂಚುತ್ತಾರೆ.
ಇದೆಲ್ಲಾ ಮುಕ್ತಾಯವಾಗಲು ಒಂದು ಗಂಟೆಗಿಂತ ಹೆಚ್ಚು ಸಮಯ ಹಿಡಿಯುತ್ತದೆ. ಎಷ್ಟೋ ಜನ ಭಕ್ತರು ತಮ್ಮ ಊರುಗಳಿಗೆ ಹೊರಡುವ ತಯಾರಿ ನಡೆಸುತ್ತಿರುತ್ತಾರೆ.
ಈಗ ಸ್ವಾಮಿ ಓಕುಳಿಯಾಡುತ್ತಾನೆಂದು ಭಕ್ತರು ದೈವದ ಸೇವೆಗೆ ಬಿಟ್ಟಿರುವ ಕೆಲವು ದೇವದಾಸಿಯರ ಮೇಲೆ ಓಕುಳಿ ಎರಚಾಡುತ್ತಾರೆ. ಇದು ಮುಗಿದ ಕೂಡಲೆ ಎಲ್ಲರೂ ಸ್ವಾಮಿಗಳನ್ನು ಎತ್ತಿ ಮೆರವಣಿಗೆಯಲ್ಲಿ ಗುಡಿದುಂಬಿಸಲು ಹೊರಡುತ್ತಾರೆ. ಗುಡಿದುಂಬಿಸುವುದಕ್ಕೆ ಗಂಗಾದೇವತೆ ಪೂಜೆ ಮಾಡಿ ಸ್ವಾಮಿಯ ಜಾತ್ರೆ ಕಾರಗಳು ಮುಕ್ತಾಯವಾಗುತ್ತವೆ. ಮೊದಲಿಗೆ ಜಾತ್ರೆ ಮಾಡಿದಾಗ ಒಂದು ನೂರು ವರಹ ಖರ್ಚಾಗಿರುತ್ತೆ. ಅದನ್ನು ಗೌನಳ್ಳಿ ಗೌಡರು ಮತ್ತು ಗೊಂಚಿಕಾರರು ಸೇರಿ ಖರ್ಚು ವೆಚ್ಚ ವಹಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಭರಮಗಿರಿ ದೊಡ್ಡಸಿದ್ದಪ್ಪನಿಗೆ ಉಡುಗೊರೆ ನೀಡಿ ಗೌರವಿಸಿದ್ದರು.
ಈ ಕಾರಗಳೆಲ್ಲಾ ಮುಗಿದ ಮೇಲೆ ಮೈಲಾರಲಿಂಗಪ್ಪ ದೈವವನ್ನು ತೇಜಿಯ ಮೇಲೆ ಕೂಡಿಸಿ ಅನೇಕ ಭಕ್ತರ ಜತೆ ದೈವವನ್ನು ಗೌನಳ್ಳಿಗೆ ಒಯ್ಯುತ್ತಾರೆ. ಉರುಮೆ, ಡೊಳ್ಳುಗಳ ಸದ್ದು ಸೋಬಾನೆ ಗರತಿಯರ ಹಾಡುಗಳಿಂದ ಈ ಪಯಣ ಸ್ಮರಣೀಯವಾಗಿರುತ್ತದೆ.
ಗೌನಳ್ಳಿ ತಲುಪಿದ ಸ್ವಾಮಿಯ ಬಾಲಕನೊಬ್ಬನ ಮೇಲೆ ಮೈದುಂಬಿ, ‘ನಾನು (ಹಿರೇ) ಮೈಲಾರದಿಂದ ಬರುವಾಗ ತನ್ನ ತಂಗಿಯೂ ಜತೆಯಲ್ಲೇ ಬಂದಿದ್ದಾಳೆ’ ಎಂದು ತಿಳಿಸಿತು. ‘ಆಕೆ ಇರುವ ಠಾವು ಯಾವುದು’ ಎಂದು ಕೇಳಲಾಗಿ ‘ಗೌನಳ್ಳಿ ಬಡಗಲ ದಿಕ್ಕಿನಲ್ಲಿರುವ ಸುತ್ತು ಕಮರದ ಮರಗಳ ನಡುವೆ ಇರುತ್ತಾಳೆ’ ಎನ್ನಲು ಗ್ರಾಮಸ್ಥರು ಆ ಸ್ಥಳಕ್ಕೆ ತಲುಪಿ ಪ್ರಾರ್ಥಿಸಿದರು. ಆಗ ದೇವಿ ಕಾಣಿಸಿಕೊಂಡಳು. ‘ನಿನಗೆ ಯಾರನ್ನು ಪೂಜಾರಿಯಾಗಿ ಮಾಡಬೇಕು’ ಎಂದು ಕೇಳಿದರು. ಆಗ ಮೈಲಾರಲಿಂಗಸ್ವಾಮಿಯು ‘ಗುಡಿಹಳ್ಳಿಯ ವಾಲ್ಮೀಕಿ ಮತಸ್ಥನಾದ ದೊರೆನೀಲಪ್ಪನ ಮಗನಿಗೆ ಪೂಜಾರಿಕೆಯನ್ನು ನೀಡಿರಿ ಮತ್ತು ಕೊಳಹಾಳಿಗೆ ಹೋಗಿ ಪಟ್ಟದ ಪೂಜಾರಿಯನ್ನು ಕರೆ ತಂದು ಅವನಿಂದ ಈ ಹುಡುಗನಿಗೆ ಪೂಜಾರಿಕೆ ಪಟ್ಟ ಕಟ್ಟಿರಿ’ ಎಂದು ಸೂಚಿಸಲು, ಹಾಗೆಯೇ ಮಾಡಿದ್ದರು.
ಆನಂತರ ಅಮ್ಮನಿಗೆ ಜಲ್ಲಿಯನ್ನು ಮಾಡಬೇಕೆಂದು ಕರಿಯಾಲದ ಹೊಳೆಗೆ ತಂದರು. ಆ ತಾಯಿ ಮೈಲಾರಲಿಂಗ ದೈವಕ್ಕೆ ಶರಣು ಹೇಳಿದಳು ಮತ್ತು “ನನಗೆ ‘ಕರಿಮೈನ ಕುರಿಮರಿಯ ಹಾರ’ವನ್ನು ಕೊಡಬೇಕು. ಯಾರು ಕೊಡುತ್ತೀರಾ” ಎಂದು ಕೇಳಿದಳು. ಆಗ ಗೌಡರು ಮತ್ತು ಗೊಂಚಿಕಾರರು ಸಮಾಲೋಚನೆ ಮಾಡಿ ಗೊಲ್ಲರಹಟ್ಟಿಯ ದೊಡ್ಡ ದಾಸಪ್ಪನನ್ನು ಕರೆಸಿ ಅಮ್ಮನ ಬೇಡಿಕೆಯನ್ನು ತಿಳಿಸಿದರು. ಕೂಡಲೇ ಆತನು “ಆಯಮ್ಮ ಎಷ್ಟು ಮರಿಗಳನ್ನು ಕೇಳಿದರೂ ಕೊಡುತ್ತೇನೆ” ಅಂದು ತಿಳಿಸಿ ಹಟ್ಟಿಯಿಂದ ಜೋನುಕುರಿ ಮರಿಯನ್ನು ತರಿಸಿದನು. ಅಲಂಕಾರಗೊಂಡಿದ್ದ ಅಮ್ಮ ಠೀವಿಯಿಂದ ಜಲ್ಲಿ ಹೊಳೆಯಿಂದ ಬಂದಳು. ಅಮ್ಮನ ಎದುರಲ್ಲಿ ಜೋನುಕುರಿಮರಿಯನ್ನು ಕಡಿದರು. ಮರಿಕೊಟ್ಟ ‘ಬೊನಗು’ ಗೌಡರ ಮನೆಗೆ ಹೋಗಬೇಕು ಹೊತ್ತ ಮರಿ ತಳವಾರನ ಮನೆಗೆ ಹೋಗಬೇಕು. ಇದೇ ರೀತಿ ಪಟೇಲರು ಗೊಂಚಿಕಾರರು ಮತ್ತು ಪೂಜಾರಿ ಎಲ್ಲರೂ ಮಾತಿನಂತೆ ನಡೆದುಕೊಳ್ಳಬೇಕು ಮತ್ತು ಸತ್ವರೂ ತಮ್ಮ ಒಪ್ಪಿಗೆ ಸೂಚಿಸಬೇಕು ಎಂಬುದು ಎರಡನೇ ತಾಮ್ರ ಶಾಸನದ ಪಾಠ.
** *
ಗೌನಳ್ಳಿ ಗುಡ್ಡದಾಚೆಗಿನ ಕೆಲವು ಹಳ್ಳಿಗಳಲ್ಲಿ ಊರಿನ ದೈವಗಳ ಜಾತ್ರೆಗಳು ಸಾಮಾನ್ಯವಾಗಿ ಉಗಾದಿ ಹಬ್ಬ ಆಚರಣೆ ನಂತರ ಏರ್ಪಡುತ್ತಿದ್ದವು. ಗುಡಿಹಳ್ಳಿ ಮೈಲಾರಲಿಂಗನ ಜಾತ್ರೆಯೂ ಉಗಾದಿ ಆದ ಬಳಿಕ ಹುಣ್ಣಿಮೆಯಿಂದ
ಆರಂಭಗೊಳ್ಳುತ್ತಿತ್ತು. ಮಾನೋಮಿಯಲ್ಲಿ ಗುಡಿಯ ಉತ್ತರಕ್ಕೆ ಅರ್ಧ ಮೈಲು ದೂರದಲ್ಲಿದ್ದ ಮೂರು ಬನ್ನಿ ಮರಗಳ ಮುಂದೆ ಒಂದು ಜಗುಲಿ ನಿನ್ನಿಸಲಾಯಿತು. ಮಾನೋಮಿಯ ದಿನ ಹೊತ್ತು ವಾಲಿದ ಮೇಲೆ ಗೌನಳ್ಳಿ ಗೌಡ್ರ ಮನೆತನದವರು ಗೊಂಚಿಕಾರರ ಮನೆತನದವರು ಮತ್ತಿತರ ಪ್ರಮುಖರು ಊರಿನಿಂದ ಹೊರಟು ಗುಡಿಹಳ್ಳಿಯ ದೇವಸ್ಥಾನ ತಲುಪಿ ಅಲ್ಲಿ ಸ್ವಾಮಿಯ ಅಲಂಕಾರ ಮಾಡಿ ಅಡ್ಡೆ ಮೇಲೆ ಸ್ವಾಮಿಯನ್ನು ಹೊತ್ತು ಮಣಭಾರದ ಬಾಣಪ್ಪನೊಂದಿಗೆ ಗುಡಿಯ ನೈರುತ್ಯಕ್ಕೆ ಸುಮಾರು ಒಂದು ಮೈಲಿ ದೂರ ಇರುವ ಕರಿಯಾಲದ ಹಳ್ಳಕ್ಕೆ ತಲುಪುತ್ತಾರೆ.
ಅಲ್ಲಿ ಒಂದು ಹೊಸಾ ವರ್ತಿ ತೋಡಿ ಅದರಲ್ಲಿ ಕಾಣಿಸಿಕೊಂಡ (ಚಿಲುಮೆ) ಗಂಗಾದೇವತೆಯ ಪೂಜಿ ಮಾಡುತ್ತಾರೆ. ಅಲ್ಲಿಂದ ಹೊರಟು ಶೀಬಾರದ ಉತ್ತರಕ್ಕೆ ಒಮ್ಮೊಟ್ಟಿಗೆ ಬೆಳೆದಿರುವ ಮೂರು ಬನ್ನಿಮರದ ಬಳಿ ತಲುಪಿ, ಬನ್ನಿ ಮರಗಳ ಮುಂದಿನ ಜಗುಲಿಯ ಮೇಲೆ ಸ್ವಾಮಿಯ ಗದ್ದುಗೆ ಮಾಡುತ್ತಾರೆ. ಅನಂತರ ಭಕ್ತರೆಲ್ಲರ ಸಮ್ಮುಖದಲ್ಲಿ ಪೂಜಾರಿಯು ದೈವದ ಪೂಜೆ ನೆರವೇರಿಸುತ್ತಾನೆ. ಮಂಗಳಾರತಿ ಆದ ಬಳಿಕ ಪೂಜಾರಿಯು ದೈವದ ಅಪ್ಪಣೆ ಪಡೆದು ಕೈಯ್ಯಲ್ಲೊಂದು ಬಿಲ್ಲು, ಮೂರು ಬಾಣಗಳೊಂದಿಗೆ ಮೂಡಲ ದಿಕ್ಕಿಗೆ ಐವತ್ತು ಹೆಜ್ಜೆ ನಡೆದು ಬಿಲ್ಲಿಗೆ ಬಾಣಗಳನ್ನು ಹೂಡಿ ಮೂರು ದಿಕ್ಕಿಗೆ ತಲಾ ಒಂದೊಂದು ಬಾಣಗಳನ್ನು ಎಸೆಯುತ್ತಾನೆ. ಅಲ್ಲಿಗೆ ‘ಅಂಬು ಎಸೆಯುವುದು’ ಮುಕ್ತಾಯವಾಗುತ್ತದೆ.
ಅನಂತರ ಸ್ವಾಮಿಯನ್ನು ‘ಚಾಂಗು ಭಲೋ’ ಎಂಬ ಸಾಮೂಹಿಕ ಘೋಷಣೆಯೊಂದಿಗೆ ಮೇಲೆತ್ತಿ ಮಣಭಾರದ ಬಾಣಪ್ಪನೊಂದಿಗೆ ಗುಡಿಯ ಬಳಿಗೆ ತಲುಪುತ್ತಾರೆ. ಅಲ್ಲಿ ಸ್ವಾಮಿ ತೆಂಕಲ ಮುಖವಾಗಿ ನಿಲ್ಲುತ್ತದೆ. ಕೂಡಲೇ ಗೊರವರು ತಮ್ಮ ಹೆಗಲಮೇಲೆ (ಗಂಗಾಪೂಜೆ ಮಾಡಿಕೊಂಡು) ಹೊತ್ತು ತಂದಿರುವ ಸರಪಳಿಯನ್ನು ಕಲ್ಲು ಗೂಟಕ್ಕೆ ತೊಡರಿಸಿ ಪೂಜೆ ಮಾಡಿ ಗುಂಜಾಡುತ್ತಾರೆ. ಸಾಮಾನ್ಯವಾಗಿ ಅರ್ಧಗಂಟೆಯೊಳಗೆ ಸರಪಳಿ ಪವಾಡ ಆಗುತ್ತದೆ. (ಕೆಲ ವರ್ಷ ಹಗಲು ರಾತ್ರಿ ಗುಂಜಾಡಿದರೂ ಸರಪಳಿ ಪವಾಡ ಆಗದಿರುವುದು ಇದೆ). ಇದಾದ ಬಳಿಕ ಸ್ವಾಮಿಯನ್ನು ಗುಡಿಯ ನವರಂಗದಲ್ಲಿ ಗದ್ದುಗೆ ಮಾಡಿ ಪೂಜೆ ಮಾಡಿ ಅನಂತರ ಸ್ವಾಮಿಯನ್ನು ಎಂಟು ಜನ ಕಟ್ಟುಮಸ್ತಾದ ಯುವಕರ ಹೆಗಲ ಮೇಲಿರಿಸಿಕೊಂಡು ಗೌನಹಳ್ಳಿಗೆ ನಡೆ- ಯುತ್ತಾರೆ. ಊರು ತಲುಪಿದ ಬಳಿಕ ತಾನು ಇಂಥವರ ಮನೆಯಲ್ಲಿ ಒಂದು ಅಥವಾ ಎರಡು ತಿಂಗಳು ತಂಗುವುದಾಗಿ ಆಯಾ ಮನೆಗಳ ಬಾಗಿಲ ಬಳಿ ಗುನ್ನ (ಅಡ್ಡೆಯಿಂದ ಗೋಡೆಯನ್ನು ತಿವಿಯುವುದು) ಹಾಕಿದ ಆ ಮನೆಗಳಲ್ಲಿ ಸ್ವಾಮಿಯನ್ನು ಬಿಡದಿ ಮಾಡಲಾಗುತ್ತದೆ.
ನಿಗದಿ ಪಡಿಸಿದ ಸಮಯದ ತನಕ ಪೂಜಾರಿ ಆ ಮನೆಗೆ ಬಂದು ಎರಡು ಹೊತ್ತು ಸ್ವಾಮಿಯ ಪೂಜೆಯನ್ನು ನೆರವೇರಿಸುತ್ತಾನೆ. ಅವಧಿ ಮುಗಿದ ಬಳಿಕ ಸ್ವಾಮಿ ಇನ್ನೊಬ್ಬ ಭಕ್ತರ ಮನೆಗೆ ದಯಮಾಡಿಸುತ್ತದೆ.
ಮಾರಿಗುಡಿಗಳ ನಿರಾಣ
ಗೌನಳ್ಳಿಯ ಬಡಗಲ ದಿಕ್ಕಿನ ಸುತ್ತು ಕಮರದ ನಡುವೆ ಇದ್ದ ಮಾರಿಯ ಸ್ಥಳ ಪೂಜಾರ್ಹವಾಯಿತು. ಮಾರಿಯ ಜಲ್ಲಿ ಸೇವೆ ಆದ ಮೇಲೆ ರೈತರೆಲ್ಲಾ ತಮ್ಮ ತಮ್ಮ ಜಮೀನು ಹಸನು ಮಾಡುವುದು. ಗೆಮ್ಮೆ ಬಿತ್ತುವುದು, ಪೈರಿಗೆ ಎಡೆ ಹೊಡೆಯುವುದು ಮುಂತಾದ ಕಾವ್ಯಗಳಲ್ಲಿ ತೊಡಗಿಕೊಂಡಿದ್ದರು.
ಮುಂಗಾರ ಫಸಲು ಕೊಯ್ಲಿಗೆ ಬಂದು ಎಲ್ಲರೂ ಕಟಾವು ಮಾಡಿ ಬಣವೆಗಳಲ್ಲಿ ಮೆದೆಗಳನ್ನು ಬಣವೆ ಹಾಕಿದ್ದರು. ಈಗ ಎಲ್ಲರಿಗೂ ಕೊಂಚ ನಿರಾಳ. ಗೌಡರ ಕನಸಿನಲ್ಲಿ ಮಾರಿದೇವತೆ ಸುತ್ತು ಕಮರದ ಬಳಿ ತನಗೊಂದು ಗುಡಿಯನ್ನು ಕಟ್ಟಿಸಲು ಸೂಚಿಸಿದಳು.
ಗೌಡರು, ಗೊಂಚಿಕಾರರು ಮತ್ತಿತರರನ್ನು ಕರೆದು ಕನಸಿನ ವಿಚಾರವನ್ನು ಹಂಚಿಕೊಂಡರು. ಎಲ್ಲರೂ ದೇವಿಗೊಂದು ಗುಡಿ ಕಟ್ಟಲು ಸಮ್ಮತಿಸಿದರು. ಗುಡಿ ನಿರಾಣಕ್ಕೆ ಹೊಸಾ ಮುಟ್ಟು ಬೇಕೆಂದು ಗೌಡರು, ಗೊಂಚಿಕಾರರು ಮತ್ತೆಲ್ಲರೂ ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಬೇವಿನ ಮರಗಳನ್ನು ಕಡಿದು ಒಣಗಲು ಬಿಟ್ಟರು. ಹತ್ತಿರದಲ್ಲಿ ಸಿಕ್ಕ ಕಲ್ಲುಗಳನ್ನು ಹೇರಿ ಪಾಯ ತೋಡಿ, ನಿರಾಣ ಕಾವ್ಯವನ್ನು ಆಯ ಪ್ರಕಾರವೇ ಕೈಗೊಂಡರು. ಕೆಸರುಮಣ್ಣಿನಲ್ಲಿ ಕಟ್ಟಡ ನಿರಾಣ ದಿನಗಳೆಯುತ್ತಿದ್ದಂತೆ ಮೇಲೆದ್ದು ನಿಂತಿತು.
ಆಗ ಕಂಬ, ತೊಲೆ, ಜಂತೆಗಳನ್ನು ಜೋಡಿಸಿ, ಮಾಳ್ವಂತ ಹರಡಿ ಮಾಳಿಗೆ ಗುಡಿಯನ್ನು ಕಟ್ಟಿದರು. ಈ ಗುಡಿಗೆ ಹೊರಗಿನ ಮಾರಿಗುಡಿ ಎಂದು ಹೆಸರಿಟ್ಟರು. ಇಲ್ಲಿ ಮಾರಿದೇವತೆಗೆ ಪ್ರಾಣಿ ಬಲಿ ನಡೆಯುತ್ತಿತ್ತು. (ಭಕ್ತರು ಹೆಚ್ಚು ಮಂದಿ ಕುಂಚಿಟಿಗ ಲಿಂಗಾಯ್ತರಿದ್ದರು. ಹೀಗಾಗಿ ಊರೊಳಗೆ ಇನ್ನೊಂದು ಗುಡಿಯನ್ನು ನಿರಿಸಿ ಇಲ್ಲಿ ಪ್ರಾಣಿ ಬಲಿಯ ನಿಷೇಧ ಮಾಡಬೇಕೆಂದು ತೀರಾನಿಸಿದ್ದರು).
ಕಾಲಾನುಕ್ರಮದಲ್ಲಿ ಊರ ಮಾರಿಗೆ ವರ್ಷದಲ್ಲಿ ಎರಡು ಉತ್ಸವಗಳನ್ನು ಮಾಡಲು ಊರಿನ ಮುಖಂಡರು ತೀರಾನಿಸಿದರು. ಒಂದು ಹಿಟ್ಟಿನ ಮಾರಿ (ತಂಬಿಟ್ಟಿನ ಮಾರಿ), ಇನ್ನೊಂದು ದೋಸೆ ಮಾರಿ. ಹಿಟ್ಟಿನ ಮಾರಿ ಉತ್ಸವದಲ್ಲಿ ಮಾರಿಯ ಭಕ್ತರು ಬೇರೆ ಕಡೆ ಆಚರಣೆಯಲ್ಲಿರುವ ರೀತಿ ಗಂಡಸರು ಹೆಂಗಸರು ಬೇವಿನ ಸೊಪ್ಪಿನಲ್ಲಿ ಮೈಮುಚ್ಚಿಕೊಂಡು (ಬೇವಿನ ಸೀರೆ) ತಂಬಿಟ್ಟಿನ ಆರತಿಯನ್ನು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಮಾರಿಗುಡಿ ತಲುಪಿ ಗುಡಿಯ ಸುತ್ತ ಮೂರು ಪ್ರದಕ್ಷಿಣೆ ಹಾಕಿ ಅನಂತರ ಹತ್ತಿರದಲ್ಲಿ ಬೇವಿನ ಸೀರೆ ಕಳಚಿ ಮೈತೊಳೆದುಕೊಂಡು ಹೊಸ ಬಟ್ಟೆ ಧರಿಸಿ ಗುಡಿಯೊಳಗೆ ನಡೆದು ಮಾರಿಗೆ ಮಂಗಳಾರತಿ ಮಾಡಬೇಕು.
ಮೊದಲ ದಿನ ಸಂಜೆ ಊರ ಮುಂದಲ ದೇವಕನ್ನಿಕೆಯರು ಇದ್ದಾರೆಂದು ನಂಬಿರುವ ಕುಡಿಯುವ ನೀರಿನ ಬಾವಿ ಬಳಿಯಿಂದ ಸಾಲಂಕೃತಗೊಂಡಿರುವ ಮಾರಿಯ ಜಲ್ಲಿ ನಡಿಗೆ ಆರಂಭಗೊಳ್ಳುತ್ತದೆ. ಪೂಜಾರಿ ತಲೆ ಮೇಲೆ ಹೊತ್ತ ಮಾರಿ ಮೂರು ಹೆಜ್ಜೆ ನಡೆಯುತ್ತಲೇ ಕರಿಬಣ್ಣದ ಕುರಿ ಮರಿಯನ್ನು ಬಲಿಕೊಡಲಾಗುತ್ತದೆ.
ಉರುಮೆ, ಡೊಳ್ಳು ಹಾಡು ಹೇಳುವ ಮಹಿಳೆಯರು ಮುಂದೆ ಮುಂದೆ ನಡೆಯುತ್ತಿದ್ದರೆ. ಮಾರಿ ಅವರ ಹಿಂದೆ ಹಿಂದೆ ಊರ ಹೊರಗಿನ ರಸ್ತೆಯಲ್ಲಿ ನಡೆದು ಹೊರಗಿನ ಮಾರಿ ಗುಡಿ ತಲುಪುತ್ತಾಳೆ. ಅಲ್ಲಿ ವಿಜೃಂಭಣೆಯಿಂದ ಮಂಗಳಾರತಿಯಾಗಿ ಗುಡಿ ಪ್ರವೇಶಿಸುತ್ತಾಳೆ.
ಸ್ವಲ್ಪ ಹೊತ್ತಿಗೆಲ್ಲಾ ಊರೊಳಗಿಂದ ಗೌಡರು, ಗೊಂಚಿಕಾರರು ಮತ್ತು ಮಾರಿಯ ಭಕ್ತರು ಮಾರಿ ಗುಡಿಯತ್ತ ನಡೆಯುತ್ತಾರೆ. ಗುಡಿ ಮುಂದೆ ಬಲಿ ಕೊಡಲೆಂದು ಕಂಬಕ್ಕೆ ಕಟ್ಟಿರುವ ಒಂದು ಕೋಣ ಹಗ್ಗ ಜಗ್ಗಾಡುತ್ತಾ ಅಲ್ಲಿನ ದೃಶ್ಯವನ್ನು ನೋಡುತ್ತಿರುತ್ತದೆ. ಒಬ್ಬೊಬ್ಬರಾಗಿ ಬಂದು ಕೂಡಿಕೊಂಡ ಜನ ಗೌಡರ ಮನೆಯಿಂದ ನುಚ್ಚಕ್ಕಿ ಅನ್ನ ಬರುತ್ತಲೇ ಉರುಮೆ, ಡೊಳ್ಳಿನವರು ಹುಮ್ಮಸ್ಸಿನಿಂದ ನುಡಿಸುತ್ತಾ ಅಲ್ಲಿರುವ ಎಲ್ಲರಿಗೂ ಹುರುಪು ನೀಡುತ್ತಾರೆ. ಒಂದಿಬ್ಬರು ಯಜಮಾನರು ಹೊರಗೆ ಬಂದು ತಲೆ ಎತ್ತಿ ಆಕಾಶದತ್ತ ದಿಟ್ಟಿ ಹರಿಸುತ್ತಾರೆ. ಆಕಾಶದಲ್ಲಿ ಕೂರಿಗೆದಾಳು ಎಂದು ಹೆಸರಿಸಿರುವ ಮೂರು ಚುಕ್ಕಿಗಳು ನೆತ್ತಿಬಿಟ್ಟು ಪಡುವಗಡೆ ವಾಲಿರುತ್ತವೆ. ಅವರು ಸಮಯ ಆಯಿತೆಂದು ತಲೆಯಾಡಿಸುತ್ತಲೇ ಪೂಜಾರಿ ಮತ್ತಿತರರು ಅಮ್ಮನ ತೀರ್ಥ ಭಂಡಾರಗಳನ್ನು ಕೋಣನ ಹಣೆಗೆ ಮುಟ್ಟಿಸುತ್ತಾರೆ.
ಇಬ್ಬರು ಮೂವರು ಯುವಕರು (ಸಾಮಾನ್ಯವಾಗಿ ನಾಯ್ಕರ ಜಾತಿಯವರು) ಕೋಣವನ್ನು ಹಿಡಿದು ಅಮ್ಮನ ಇದಿರು ತಂದು ನಿಲ್ಲಿಸುವ ಹೊತ್ತಿಗೆ ಮಸೆದಿರುವ ದೊಡ್ಡ ಮಚ್ಚು ಹಿಡಿದಿರುವಾತ ಶರೀರದಲ್ಲಿ ಯಾವುದೋ ಶಕ್ತಿ ಹೊಕ್ಕಿದೆ ಎಂಬಂತೆ ನೆಗೆಯುತ್ತಾ ಕೋಣನ ಬಳಿಗೆ ಧಾವಿಸಿ ಅದರ ಕೊರಳಿಗೆ ಮಚ್ಚು ಬೀಸುತ್ತಾನೆ.
ಹಿಂದಿನ ಸಂಚಿಕೆ ಇಲ್ಲಿದೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಒಂದೇ ಏಟಿಗೆ ಕೋಣನ ತಲೆ ತುಂಡರಿಸದಿದ್ದರೆ ಎರಡನೇ ಏಟಿಗೆ ಅದು ತುಂಡಾಗುತ್ತದೆ. ಕೋಣನ ಶರೀರದಿಂದ ಚಿಮ್ಮುವ ರಕ್ತವನ್ನು ಒಂದು ಹರಿವಾಣದಂಥ ಪಾತ್ರೆಯಲ್ಲಿ ಹಿಡಿದುಕೊಳ್ಳುತ್ತಾರೆ. ಅನಂತರ ಕೂಡಲೇ ಕೋಣದ ಒಂದು ಮುಂಗಾಲಿನ ಮಣಿಕಟ್ಟನ್ನು ಕತ್ತರಿಸಿ ಕೋಣನ ತಲೆಯ ಬಾಯಿಯನ್ನು ಅಗಲಿಸಿ ಅದರೊಳಗೆ ಅಡ್ಡಲಾಗಿ ಕಡಿದ ಕೋಣನ ಕಾಲಿನ ತುಂಡನ್ನು ಇರಿಸುತ್ತಾರೆ.
ಮಾರನೇ ದಿನ ದೊಡ್ಡುಂಬೊತ್ತಿಗೆ ಕುಂಚಿಟಿಗ ಲಿಂಗಾಯ್ತರ ಹೆಣ್ಣುಮಕ್ಕಳು ಒಟ್ಟಾಗಿ ಮಾರಿಗುಡಿಗೆ ಹೋಗಿ ಮಾರಿಗೆ ಆರತಿ ಮಾಡುತ್ತಾರೆ. ಮಧ್ಯಾಹ್ನದ ಮೇಲೆ ನಾಯ್ಕರು ಮತ್ತು ಬೋವಿ ಜನರ ಹೆಣ್ಣು ಮಕ್ಕಳು ಮತ್ತು ಸಂಜೆಗೆ ಗೊಲ್ಲರ ಹೆಣ್ಣುಮಕ್ಕಳು ಒಟ್ಟಿಗೆ ಬಂದು ಮಾರಿಗೆ ಆರತಿ ಮಾಡುತ್ತಾರೆ.
ತಿರುಗದಿನ ಸಂಜೆಗೆ ಸಾಲಂಕೃತಗೊಂಡ ಮಾರಿ ದೇವತೆ ಹೊಳೆಪೂಜೆ ಯೊಂದಿಗೆ, ಹಿಟ್ಟಿನ ಮಾರಿ ಜಾತ್ರೆ ಮುಕ್ತಾಯವಾಗುತ್ತದೆ.
ಮುಂದುವರೆಯುವುದು…