Connect with us

Kannada Novel : 17. ಕೊಳ್ಳಿ ಇಕ್ಕಿದರು

Habbida Malemadhyadolage

ಸಂಡೆ ಸ್ಪಷಲ್

Kannada Novel : 17. ಕೊಳ್ಳಿ ಇಕ್ಕಿದರು

CHITRADURGA NEWS | 19 JANUARY 2025

ಉಗಾದಿ ಹಬ್ಬ ಸಮಿಪಿಸುತ್ತಿತ್ತು. ಗೌನಳ್ಳಿ ನಿವಾಸಿ ರೈತರ ಸುಗ್ಗಿ ಕಾರಗಳು ಅರ್ಧಂಬರ್ಧ ಆಗಿದ್ದವು. ಕೆಲವರು ತೆನೆಗಳ ಮೇಲೆ ರೋಣಗಲ್ ಹೊಡೆದು ಸಣ್ಣಗೆ ಮಾಡಿಕೊಂಡು ಉಬ್ಬಲು ಎಬ್ಬಿಸಿ ಕಾಳುಗಳನ್ನು ಬೇರ್ಪಡಿಸಲು ಉತ್ತಾಣಿ ಗಿಡದ ಶೆಳ್ಳನ್ನು ಆಡಿಸುತ್ತಿದ್ದರೆ ಮತ್ತೆ ಕೆಲವರು ಸಣ್ಣ ಉಲ್ಲು ಬೇಡಿಸಲು ಹಗಲು ರಾತ್ರಿ ಕಾಳನ್ನು ತೂರಿಕೊಳ್ಳಲು ಪೇಚಾಡುತ್ತಿದ್ದರು. ಗಾಳಿ ಜೋರಾಗಿ ಬೀಸುತ್ತಿರಲಿಲ್ಲವಾಗಿ ‘ಇದೆಲ್ಲೋಗಿ ಗುಡ್ಡದ ಗವಿ ಸೇರಂಡೈತೋ’ ಅನ್ನುತ್ತಾ ಓಲಿಗ್ಗ ಸ್ವಾಮಿ ಓಲಿಗ್ಗಾ” ಎಂದು ಅದನ್ನು ಕೂಗಿ ಕರೆಯುತ್ತಿದ್ದುದು ವಾಡಿಕೆಯಾಗಿತ್ತು.

ಕಣದಲ್ಲೇ ಮಲಗಿಕೊಂಡು ಬೆಳಗಿನ ಜಾವ ಗಾಳಿ ಬೀಸಿದಾಗ ತೂರಿಕೊಳ್ಳುತ್ತಿದ್ದರು. ಇಂಥದೊಂದು ರಾತ್ರಿ ಮನೆಗೆ ಬಂದು ಊಟ ಮಾಡಿಕೊಂಡು ಇನ್ನೇನು ಕಣಕ್ಕೆ ಹೊರಡಬೇಕು ಅನ್ನುತ್ತಿರುವಾಗ ಗೊಲ್ಲ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡು ಒಣಗಿದ್ದ ಬಾದೆ ಹುಲ್ಲನ್ನು ಸುಡುತ್ತಿತ್ತು. ಗುಡ್ಡದ ಮೇಲೆ ಅಲ್ಲಲ್ಲಿ ಬೆಳೆದಿದ್ದ ಉದೇದ್ದ ಮರಗಿಡಗಳು, ಉಳಿಬ್ಯಾಲದ, ತೆರೇದ ಗಿಡ ಮರಗಳು ಬೆಂಕಿಗೆ ಆಹುತಿಯಾಗುವಾಗ ಬೆಂಕಿಯ ಜ್ವಾಲೆ ಎತ್ತರಕ್ಕೆ ಎಳುತ್ತಿತ್ತು, ಬೆಂಕಿಯನ್ನು ಮೊದಲು ಕಂಡವರಾರೊ ಕೂಗುಹಾಕಿ, ಶಿಳ್ಳು, ಶೇಕೆಗಳಿಂದ ಊರ ಮಂದಿಯನ್ನು ಎಚ್ಚರಿಸಿದ್ದರು.

ಬೆಂಕಿಯನ್ನು ಕಂಡು ಮತ್ತು ಕೂಗು ಕೇಳಿಸಿಗೊಂಡವರು ಕಂಬಳಿಗಳನ್ನು ಮನೆಯಲ್ಲಿ ಬಿಸಾಡಿ ದೊಡ್ಡವರು ಚಿಕ್ಕವರೆನ್ನದೆ ಕಾಲಲ್ಲಿ ಮೆಟ್ಟು ಮೆಟ್ಟಿಕೊಂಡು ಗೊಲ್ಲ ಗುಡ್ಡದ ದಿಕ್ಕಿನತ್ತ ಓಡುತ್ತಿದ್ದರು. ‘ಬಸವನ ಪತ್ರ ಸುಟ್ಟೋದ್ರೆ ದನಕರು ಕಲ್ ಕಡೀಬೇಕೆ’ ಎಂದು ಕೆಲವರು ವಿಷಾದಿಸುತ್ತಾ ನಡೆದಿದ್ದರೆ “ಯಾವ ಸೂಳೆಮಗ ಗುಡ್ಡಕ್ಕೆ ಬೆಂಕಿ ಇಕ್ಕಿರಬೌದು” ಎಂದು ಯೋಚಿಸುವವರೇ ಎಲ್ಲಾ. ಇದಿರಿಗೆ ಸಿಕ್ಕಿದ ಗಿಡ ಮರಗಳ ಹಸಿರು ಸೊಪ್ಪನ್ನು ಮುರಿದುಕೊಂಡು ಅದರಿಂದ ಬೆಂಕಿಯನ್ನು ರಪಾ ರಪಾ ಬಡಿದು ನಂದಿಸುತ್ತಾ ಸಾಗಿದ್ದರು. ಸದ್ಯ ಗಾಳಿ ರಭಸವಾಗಿ ಬೀಸುತ್ತಿರಲಿಲ್ಲವಾಗಿ ಬೆಂಕಿಯ ಜ್ವಾಲೆ ವೇಗವಾಗಿ ಹರಡುತ್ತಿರಲಿಲ್ಲ. ಉರಿಯ ಜ್ವಾಲೆ ಹತ್ತಿರಕ್ಕೆ ಬಿಟ್ಟುಕೊಳ್ಳದಿದ್ದ ಕಡೆ ಇದಿರು ಬೆಂಕಿಯನ್ನು ಹಚ್ಚಿ ಎರಡೂ ಉರಿಗಳು ಕೂಡಿಕೊಂಡು ತಮ್ಮಷ್ಟಕ್ಕೆ ತಾವೇ ಉರಿದು ನಂದುವಂತೆ ಮಾಡಿದ್ದರು.

ಹಿಂದಿನ‌ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

ಬೆಂಕಿ ನಂದಿಸುವುದು ಬಹುತೇಕ ಮುಗಿದಿರುವಾಗ “ಎಲ್ಲಾರೂ ಒಂದೀಟು ಕಿವಿಕೊಟ್ಟು ಆಲಿಸ್ರಪ್ಪ. ಯಾವ ಸೂಳೆ ಮಗ ಗುಡ್ಡಕೆ ಬೆಂಕಿ ಹಚ್ಚಿರಬೌದು ಸ್ವಲ್ಪ ಯೋಚನೆ ಮಾಡ್ರಿ” ಎಂದು ಹಿರಿಯನೊಬ್ಬ ವಿಚಾರಿಸಿದ್ದ. “ಗುಡ್ಡಕ್ಕೆ ಬೆಂಕಿ ಹಟ್ಟೋ ಅಂಥೋನು ನಮ್ಮೂರಾಗೇ ಇಲ್ಲ ಬಿಡ್ರಿ. ಇದ್ಯಾರೋ ಬ್ಯಾ- ರೇ ಊರೋರ ಕರಾಮತ್ತು. ಇನ್ನ ಅದಿನೈದು ದಿನ ತಿಂಗಳಿಗೆ ಅಶ್ವಿನಿ ಮಳೆ ಆರಂಭ ಆಗುತ್ತೆ. ಅದೇನನಾ ಬಂದ್ರೆ ಬೆಂಕಿಗೆ ಸುಟ್ಟಿರ ಬಾದೆ ಉಲ್ಲು ಕಳ್ಳ ಎಲ್ಲಾ ಚಿಗುರಾವೆ ಕುರಿಗೊಳ್ಳೆ ಮೇವಾಗುತ್ತೆ ಅಮ್ಮ ಕೆಟ್ಟ ಯೋಚನೆ ಮಾಡೀರೋರ ಕಸುಬು ಇದು” ಎಂದು ತನ್ನ ವಿವೇಕವನ್ನು ಹೇಳಿದ್ದ ಇನ್ನೊಬ್ಬ.

“ಓಹೋ ಇದು ಕುರಿ ಸಾಕಿದೊದ್ದೇ ಕರಾಮತ್ತು. ಅಂಗಾದ್ರೆ ನಡೀರಿ ಗೊಲ್ಲಟ್ಟಿಗೋಗಿ ಹುಡುಕನಾ. ಒಂದು ಐದಾರು ಜನ ಕುರಿಯಟ್ಟಿ ಕಡಿಗೋಗನ. ಇನ್ನೊಂದು ಐದಾರು ಜನ ಗೊಲ್ಲಟ್ಟಿ ಕಡಿಗೋಗಿ ಯಾರು ಕಳ್ಳ ನಿದ್ದೆ ಮಾಡ್ತಿದಾರೆ ಅಮ್ಮ ನೋಡಾನ” ಇನ್ನೊಬ್ಬರು ತಮ್ಮ ಬುದ್ಧಿವಂತಿಕೆಯನ್ನು ಹೇಳಿಕೊಂಡಿದ್ದರು.

“ನೋಡಪ್ಪಾ ನಾಯಿಗಳು ಗೌಡಮ್ಮ ದೊಗಳಿಕೆಂಡು ಬತ್ತಾನೆ. ಕೈಯಾಗೆ కల్లు ఓడకండర్రి, ಬಂದ ಕಡಿಗೆ ಕಲ್ಲೆಸಿರಿ, ಕಲ್ಲೇನಾದ್ರು ನಾಯಿಗೆ ಬಡಿದ್ರೆ ಕುಯ್ ಗುಡುತ್ತಾ ಓಡೋಗುತ್ತೆ, ಅಷ್ಟೊತ್ತಿಗೆ “ಯಾರವು” ಅದು ಕುರಿಯಟ್ಟ ಹುಡುಗ್ರು ಗೊಟ್ಟ ಜನ ಕೂಗಾಡ್ತರೆ ಆವಾಗ ನಿಮ್ ಬುದ್ದಿ ಮ್ಯಾಲೆ ಕಳ್ಳನ್ನ ಹಿಡೀಬೇಕು” ಎಲ್ಲಾ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದರು.

ಈ ಮಾತುಗಳನ್ನು ಕೇಳುತ್ತಲೇ ಯುವಕರಂಥವರು ಮುಂದೆ ಸಾಗಿದ್ದರು. ಕುರಿಯಟ್ಟಿಗಳು ಹತ್ತಿರವೇ ಇದ್ದದ್ದರಿಂದ ಅಲ್ಲಿಗೆ ಹೊರಟಿದ್ದವರು ಮುಂಚೆಯೇ ತಲುಪಿದ್ದರು. ಅವರೆಣಿಕೆಯಂತೆ ಐದಾರು ನಾಯಿಗಳು ಬೊಬ್ಬೆಂದು ಬೊಗಳಿಕೊಂಡು ಹತ್ತಿರ ಬಂದಿದ್ದವು. ಒಂದೆರಡಕ್ಕೆ ಗುರಿಯಿಟ್ಟು ಹೊಡೆದಿದ್ದ ಕಲ್ಲುಗಳು ಬಡಿದು ಅವು ಕಯ್ಯಯ್ಯೋ ಕಯ್ಯಯ್ಯೋ ಎಂದು ಸದ್ದು ಮಾಡುತ್ತಾ ಹಿಂದೆ ಓಡಿದ್ದವು.

ಕಾವಲಿನ ಹುಡುಗರು “ಯಾರಪ್ಪೋ ನಾಯಿಗೊಡಬ್ಯಾಡ್ರಿ ಕಾಲು ಮುರಕಂತಾವೆ”. ಆತಂಕದಿಂದ ಕೂಗಿಕೊಂಡಿದ್ದರು. “ಎದ್ದಳಲೇ, ಇಲ್ಯಾಸಿ ಯಾರನಾ ಓಡೋದ್ರೇನೋ? ನಿಮ್ ನಾಯಿ ಬೊಗಳಲಿಲ್ವೆ?” ಇವರೂ ಕೂಗಿ ಕೇಳಿದ್ದರು. “ಇಲ್ಲ ಕಣಣ್ಣಾ ಯಾರೂ ನಾವು ಕಾಲ್ವೇ”. “ಗುಡ್ಡಕ್ಕೆ ಬೆಂಕಿ ಬಿದ್ದದ್ದು ನಿಮಿಗೆ ಕಾಣಿಸ್ಲಿಲ್ವೇ. ಎಲ್ಲಾ ಮಳ್ಳಿಗು” ಇನ್ನೊಬ್ಬರು ಗದರಿಸಿ ಕೇಳಿದ್ದರು. “ಅಣ್ಣಾ ದೇವ್ರಾಣೆ ನಾವು ಕಾಣಿ. ನಮ್ಮ ನಾಯಿ ಬೊಗಳೇ ಇಲ್ಲ. ಈವಾಗ್ಲೆ ಬೊಗಳಿದ್ದು ನಿಮ್ಮನ್ನ ನೋಡಿ. ನಾವೇನೂ ಅರೀದೋರು ಕಣಣ್ಣಾ” ಎಂದು ಸತ್ಯವನ್ನೇ ನುಡಿದಿದ್ದರು. ತಿಂದು ಸತ್ಯವನ್ನೇ ನುಡಿದಿದ್ದರು.

ಹಿಂದಿನ‌ ಸಂಚಿಕೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು

ಇವರನ್ನು ಸೂಕ್ತವಾಗಿ ಗಮನಿಸಿದ್ದವರೊಬ್ಬರು “ಇಗೇನೂ ಗೊತ್ತಿಲ್ಲ ನಡೀರಿ ಮುಂದಕ್ಕೋಗನಾ” ಎಂದು ಮುಂದೆ ನಡೆದಿದ್ದರು. ಗೊಲ್ಲರಹಟ್ಟಿ ಕಡೆಗೆ ಹೋಗಿದ್ದವರಿಗೂ ನಾಯಿಗಳು ಬೊಗಳಿ ಇವರ ಆಗಮನವನ್ನು ಆಕ್ಷೇಪಿಸಿದ್ದವು. ಯಾರೋ ಒಬ್ಬರು ಬೀಸಿದ ಕಲ್ಲು, ಒಂದು ನಾಯಿಗೆ ಬಡಿದು ಅದು ಕುಯ್‌ಗುಡುತ್ತಾ ಹಿಂದೆ ಸರಿದಿತ್ತು.

ಇಷ್ಟು ಗದ್ದಲವಾದರೂ ಗುಡಿಸಲು ಮುಂದೆ ಮಲಗಿದ್ದವರು ಹೆಣ್ಣು ಗಂಡು ಗಾಢ ನಿದ್ದೆಯಲ್ಲಿದ್ದವರು. ಕೆಲವರಂತೂ ಮೈಮೇಲೆ ಬಟ್ಟೆ ಎಳೆದುಕೊಳ್ಳದೆ ಸಣ್ಣಗೆ ಸುಳಿಯುತ್ತಿದ್ದ ಗಾಳಿಗೆ ಮೈಯೊಡ್ಡಿದ್ದರು. “ಎದ್ದಳೋ ನಾಯಿ ಇಷ್ಟು ಬೊಗಳಿದ್ರೂ ಸಕ್ಕಂ ಸರಗ ಮನಿಗೈದಿರಾ” ಇವರ ತಂಡದಿಂದ ಒಬ್ಬರು ಮಲಗಿದ್ದವರನ್ನು ಏಳಿಸಲು ಯತ್ನಿಸಿದ್ದರು. ಒಂದಿಬ್ಬರು ಎದ್ದು ಪಕ್ಕದಲ್ಲಿದ್ದ ಹೆಂಗಸರ ಮೈ ಮೇಲೆ ಬಟ್ಟೆ ಹೊದೆಸಿ “ಯಾಕ್ರಣ್ಣಾ ಈಟತ್ತಿನಾಗ ಬಂದ್‌ದೀರ ಏನಾಗೈತಣ್ಣಾ” ಕಣ್ಣುಜ್ಜುತ್ತಲೇ ಮಾತಾಡಿದ್ದ. ಹತ್ತಿರ ಮಲಗಿದ್ದವರು ಗೊರಕೆ ಹೊಡೆಯುತ್ತಿದ್ದರು. “ಥೊ ಇವರಜ್ಜಿನಾಡ ಈ ನನಮಕ್ಕಿಗೂ ಗೊತ್ತಿರಂಗಿಲ್ಲ. ಪಾಪ ಮನಿಕ್ಕೆಂಬ್ಲಿ” ಅಂದುಕೊಂಡು ಹಿರಿಯನೊಬ್ಬ “ಬರ್ರೆಪ್ಪಾ ನಾಳಿಕ್ಕಲ್ಲದಿದ್ರೂ ಆಮೇಲೆ ಗೊತ್ತಾದೇ ಆಗುತ್ತೆ ಯಾರು ಗುಡ್ಡಕ್ಕೆ ಕೊಳ್ಳಿ ಇಕ್ಕಿರೋರು” ಅನ್ನುತ್ತಾ ಊರ ಕಡೆಗೆ ಹೆಜ್ಜೆ ಹಾಕಿದ ಆತನನ್ನು ಉಳಿದವರು ಹಿಂಬಾಲಿಸಿದ್ದರು.

ಇವರು ಓಣಿಗೆ ತಲುಪುವ ಹೊತ್ತಿಗೆ ಕುರಿಯಟ್ಟಿ ಕಡೆಗೆ ಹೋಗಿದ್ದವರು ಕೂಡಿಕೊಂಡಿದ್ದರು. “ಇಲ್ಲ ಬಿಡ್ರಪ್ಪ ಇದು ನಮ್ಮೂರ ಗೊಬ್ರ ಕೆಲಸ್ಸಾ ಅಲ್ಲ. ಗುಡ್ಡಕ್ಕೆ ಬೆಂಕಿಹಚ್ಚೇ ಧೈಯ್ಯ ಇವರಿಗೆಲ್ಲಿ ಬರುತ್ತೆ. ಇನ್ಯಾವ ಸೂಳೆಮಗ ಇಂಥ ದ್ರೋಹದ ಕೆಲಸ ಮಾಡಿರಬೌದು” ಅನ್ನುತ್ತಾ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದರು.

ಇವರನ್ನುಳಿದು ಗುಡ್ಡದ ಬಳಿಯೇ ಇದ್ದವರು ಬೆಂಕಿ ಸಂಪೂರ್ಣ ಆರಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಊರಿಗೆ ಸೇರುವ ಓಣಿಯನ್ನು ತಲುಪಿದ್ದರು. ಮೂರುಜನ ಮೂತ್ರ ವಿಸರ್ಜನೆಗೆಂದು ಪಕ್ಕಕ್ಕೆ ಸರಿದು, ಹಿಂದಕ್ಕೆ ತಿರುಗಿ ಗುಡ್ಡವನ್ನು ನೋಡುತ್ತಾ ಬರುತ್ತಿರುವಾಗ ಹತ್ತಿರದಲ್ಲಿ ಯಾರೋ ಸಣ್ಣಗೆ ಕೆಮ್ಮಿದ ಸದ್ದು ಕೇಳಿಸಿತ್ತು. ಗಕ್ಕನೆ ನಿಂತ ಅವರಿಗೆ ಅನುಮಾನಾಸ್ಪದವಾಗಿ ಮತ್ತೆರಡು ಬಾರಿ ಕೆಮ್ಮಿದ ಸದ್ದು ಕೇಳಿಸಿತ್ತು.

ಹಿಂದಿನ‌ ಸಂಚಿಕೆ: 3. ಎಲ್ಲರೂ ಲಿಂಗವಂತರಾದರು

ಸದ್ದು ಬಂದ ಕಡೆಗೆ ಮೈಯೆಲ್ಲಾ ಕಿವಿಯಾಗಿ ಆಲಿಸುತ್ತಾ ಸಪ್ಪಳ ಮಾಡದೆ ಅತ್ತ ನಡೆದಿದ್ದ ಇವರಿಗೆ ಯಾರೋ ಗುಸಗುಸ ಮಾತಾಡುವ ಸದ್ದು ಕೇಳಿಸಿತ್ತು. ಕೂಡಲೆ ಇವರು ಅತ್ತ ನಡೆದು ಈಚಲಗಿಡಗಳ ಮರೆಯಲ್ಲಿ ನಿಂತರು. “ಊರ ಜನಾನೋ ಯಾರೋ ಓಡಿಬಂದು ಬೆಂಕಿ ಕೆಡಿಸಿದಾರೆ. ಉಸಾರಾಗಿ ನಾವು ತಪ್ಪಿಸಬೇಕು. ಈ ದೊಡ್ಡ ಬಾಂದುಗದ ಮ್ಯಾಲೆ ಮನಿಕ್ಕೆಂಡು ಮೊದ್ಲ ಕೋಳಿ ಕೂಗಲೇ ತಿರುಗ ಗುಡ್ಡತ್ತಕೋಗಿ ಬೆಂಕಿ ಹಚ್ಚಿ ಇತ್ತಾಗಿ ಬರಮಗಿರಿ ಕಡೀಕೋಡೋಗನ” ಎಂದು ಒಬ್ಬ ತನ್ನ ಯೋಜನೆಯನ್ನು ತಿಳಿಸಿದರೆ ಇನ್ನೊಬ್ಬ “ಬ್ಯಾಡ ಕಣಯ್ಯಾ ಗುಡ್ಡಕ್ಕೆ ಬೆಂಕಿ ಹಚ್ಚಾ ಯೋಸೈ ಬಿಟ್ಬಿಡು.

ಕುರಿ ಕಾಯಾರಾಗಿ ಮತ್ಯಾರೇ ಇತ್ತಾಗಿ ಬಂದ್ರೆ ಸಿಗೇ ಆಕ್ಯಂಡ್ ಬಿಡ್ತೀವಿ. ಯಾವೂರು ನಿಮ್ಮು ಈಟತ್ತಿಗೆಲೆ ಇಲ್ಯಾಕೆ ಬಂದಿದ್ದೀರಾ ಅತ್ತ ಕೇಳಿದರೆ, ಏನೇಳ್ತಿಯಾ ಬೆಳಗಿನ ಜಾವತ್ತಕ ಈ ಬಾಂಗ್ಲದ ಮ್ಯಾಲೆ ಅಡ್ಡಾಗಿದ್ದು, ಮೊದ್ದ ಕೋಳಿ ಕೂಗ್ತಾಲೂ ಎದ್ದೋಗಿ ಬಿಡನಾ ಮೊದ್ದೇ ಕಾಣದ್ದ ಜಾಗ. ಎಲ್ಲೆಲ್ಲಿ ಯಾತ್ಯಾತವದವೋ” ಎಂದು ತನ್ನ ಆತಂಕವನ್ನು ಸಣ್ಣಗಿನ ದನಿಯಲ್ಲೇ ಹೇಳಿಕೊಂಡ.

ಇವರ ಮಾತುಗಳನ್ನು ಕೇಳಿಸಿಕೊಂಡಿದ್ದ ಊರವರಿಗೆ ಗುಡ್ಡಕ್ಕೆ ಕೊಳ್ಳಿ ಹಚ್ಚಿದ ಕಿರಾತಕರು ಇವರೇ ಎಂದು ಖಾತ್ರಿಯಾಗಿತ್ತು. ತಡ ಮಾಡದೆ ಈಚಲ ಗಿಡದ ಈಚೆಗೆ ನೆಗೆದು ಇಬ್ಬರನ್ನೂ ಬಿಗಿಯಾಗಿ ಕೊಸರಾಡದಂತೆ ಹಿಡಿದುಕೊಂಡಿದ್ದರು. ಇಬ್ಬರ ಕೈಗಳನ್ನೂ ಮಡಿಚಿ ಬೆನ್ನ ಹಿಂದೆ ಮಾಡಿ ಹಿಡಿದುಕೊಂಡು “ನಡೀರಿ ಊರಾಗೆ ವಿಚಾರ ಮಾಡಾನ” ಅಂದು ಬಿಗಿಯಾಗಿ ಹಿಡಿದುಕೊಂಡು ಓಣಿಗೆ ಕರೆತಂದರು. ಮುಂದೆ ನಡೆಯುತ್ತಿದ್ದವರಿಗೆ ಕೂಗು ಹಾಕಿ “ಅಲ್ಲೇ ನಿಂತಳೀ ಗುಡ್ಡಕ್ಕ ಬೆಂಕಿ ಹಚ್ಚಿದೋರು ಸಿಗೆಹಾಕ್ಯಂಡದಾರೇ” ಎಂದು ಎರಡು ಮೂರು ಬಾರಿ ಕೂಗಿದ್ದರು.

ಇಬ್ಬರು ಆಗಂತುಕರೊಂದಿಗೆ ಬರುತ್ತಿದ್ದವರು ಅವರಿಗೆ ರಪಾ ರಪಾ ಎಲ್ಲೇಟು ಕೆನ್ನೆಗೆ ಬಾರಿಸಿ “ಯಾವೂರೋ ನಿದ್ದು? ಗುಡ್ಡಕ್ಯಾಕೆ ಬೆಂಕಿ ಹಚ್ಚಿದೀರಿ?” ಮುಂತಾಗಿ ಕೇಳಿದ್ದರು. ಅವರಲ್ಲೊಬ್ಬ “ಅಣ್ಣ ಹೊಡೀ ಬ್ಯಾಡ್ರಿ. ನಮ್ಮೂರು ಈಸ್ಲಗೆರೆ ಮೂಡ್ಲ ಸೀಮೆ ಕಣಣ್ಣಾ. ನಾವು ಗೊಬ್ರು ಕಣಣ್ಣಾ. ನಮ್ಮೋವು ಎಲ್ಲಾ ಆರು ಸಲಿಗೆ ಕುರಿ ಐದಾವೆ. ಹೊಲ್ದ ಕೊಯ್ದು ಮುಗದೇಟಿಗೆ ಮೇವು ನೀರು ಹುಡಿಕೊಂಡು ಕುರಿ ಹೊಡಕಂಡು ಪಡುವ ಹೋಗ್ತಿವಿ. ಈ ಸಲ ನಾವು ಹೋಗಕಾಗ್ಲಿಲ್ಲ. ಬಾಳ ದಿನಕ್ಕೆ ನಮ್ಮೆಂಗುಸ್ರು ಬಸರಾಗಿದ್ದು, ನಾವು ಪಡುವ ಹೋದಾಗ ಎರಿಗೆ ಆದ್ರೆ ಕಷ್ಟ ಅಮ್ಮ ನಾವು ಉಳಕಂಡ್ರಿ” ಇನ್ನೂ ಹೇಳುತ್ತಿದ್ದವನನ್ನು ಗದರಿಸಿ ನಿನ್ನೇಣಿ ಬಸರಾಗಿ ಹಡದ್ರೆ ನಮ್ಮ ಗುಡ್ಡಕ್ಕೆ ಬೆಂಕಿ ಹಚ್ಚು ಅಮ್ಮ ಹೇಳಿದ್ಯಾರೋ ಮಂಗ ನನಮಗನೆ” ಎಂದು ಒಬ್ಬಾತ ಗದಿರಿಸಿದ. ಅವನು ತೆಪ್ಪಗಾದ.

ಹಿಂದಿನ‌ ಸಂಚಿಕೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ

ಇನ್ನೊಬ್ಬ, “ಅಣ್ಣಾ ನಮ್ ಕಡೀಕೆ ಒಂದು ಹುಲ್ಲಿನ ಮೋಟೂ ಸಿಗಲ್ಲ ಕಣಣ್ಣಾ. ನಾವು ದಿನಾ ಕುರಿ ಮೇಸಾಕಮ್ರ ದೂರದೂರಕ್ಕೆ ಹೋಗ್ತಿವಿ. ಏಣುಕಲ್ ಗುಡ್ಡ, ಇಕ್ಕನೂರು, ಕೋಡಿಹಳ್ಳಿ ತಂಕ ಹೋಗಿ ಬಂದಿದ್ದೀವಿ. ಎಲ್ಲೆಲ್ಲೂ ಕರೈಮೋಟೂ ಇಲ್ಲ. ಕುರಿ ಮೇವಿಲ್ಲೆ ಬಡಕಲಾಗಿ, ನೋಡಿದರೆ ಹೊಟ್ಟೆ ಉರಿಯುತ್ತೆ” ರಾಗವಾಗಿ ಹೇಳುತ್ತಿದ್ದವನನ್ನು ಮಧ್ಯೆ ತಡೆದು “ಕುರಿಗೆ ಮೇವಿಲ್ಲಾ ಅಮ್ಮ ಇಲ್ಯಾಕೆ ಬಂದಿದ್ರಿ ಗುಡ್ಡಕ್ಯಾಕೆ ಬೆಂಕಿ ಹಚ್ಚಿದ್ರಿ? ಅದನ್ನು ಹೇಳೋ ಅಂದ್ರೆ ನಿನ್ನೆಂಗು ಬಸಿರಾಗಿದ್ದು, ಕುರಿ ಬಡಕಲಾಗಿರೋದನ್ನ ಹೇಳೀರಲೇ” ಇನ್ನೊಬ್ಬಾತ ಅಸಹನೆಯಿಂದ ಗದರಿ ಮಾತಾಡಿದ್ದ.

“ಇವರ ಹಿಂಗೆ ಕೇಳಿದ್ರೆ ಬಾಯಿ ಬಿಚ್ಚಲ್ಲ ಊರಾಕೋಗಿ ಗೌಡ್ರ ಮನೆ ಕಂಬಕ್ಕಟ್ಟಿ ಮೆಣಸಿನಕಾಯಿ ಉದ್ರ ಹಾಕನ ಆವಾಗ ಕಣ್ಣಾಗೆ ಮೂಗಿನಾಗೆ ನೀರು ಸೋರಿದ್ರೆ ಬಾಯಿ ಬಿಡ್ತಾರೆ” ಅಂದು ಮುಂದಿನ ಯೋಚನೆಯನ್ನು ತಿಳಿಸಿದ. ಆವಾಗ ಮೊದಲು ಮಾತಾಡಿದ್ದವನು “ಅಣ್ಣಾ ನನ್ನು ಸಮಾಂತ್ರ ತೆಪ್ಪಾಗೈತೆ. ನೀವು ಏನು ಸಿಕ್ಸಿ ಕೊಟ್ಟೂ ನಾವು ಅನುಬವಿಸ್ತೀವಿ.” ಎಂದು ನೀರುಗಣ್ಣಾದ.

ಹೀಗೆ ಮಾತಾಡುತ್ತಲೇ ಓಣಿ ಬಾಯಿಗೆ ಬಂದರು. ತತ್‌ಕ್ಷಣವೇ ಕಣದಲ್ಲಿರುವ ಧಾನ್ಯದ ರಾಸಿಗಳು ನೆನಪಾದವು. “ಈವಾಗ ಗೌಡ್ರ ಮನೆತಕೋಗಿ ಇಬ್ರೂ ದೊಡ್ ಮನುಸರ ಕಂಬಕ್ಕಟ್ಟಿ ನಮ್ ನಮ್ ಕಣಕ್ಕೋಗನ, ಗೌಡ್ರ ಗೊಂಚಿಗಾರೂ ಇವರನ್ನ ಇಶಾರಿಸ್‌ಗೆಂಬ್ಲಿ” ಎಂದು ಒಬ್ಬಾತ ಸೂಚಿಸಿದ ಸಲಹೆಯನ್ನು ಎಲ್ಲರೂ ಅನುಮೋದಿಸಿದರು. ಗುಡ್ಡದ ಬೆಂಕಿ ಆರಿಸಲು ಹೋಗಿದ್ದವರು ಹಿಂತಿರುಗಿ ಬರುವುದನ್ನೇ ನಿರೀಕ್ಷಿಸುತ್ತಿದ್ದ ಗೌಡ್ರು, ಗೊಂಚಿಗಾರರು ಮತ್ತಿತರ ಹಿರಿಯರಿಗೆ ನಡೆದಿದ್ದ ವಿಚಾರಗಳನ್ನು ವಿವರಿಸಿದ ಒಂದಿಬ್ಬರು “ಅಣ್ಣಾ ನೀವು ವಿಚಾರಿಸ್ಸಲ್ಲಿ ನಾವು ಕಣಕ್ಕೋಗುತೀವಿ” ಎಂದು ತಿಳಿಸಿದರು.

ಹಿಂದಿನ‌ ಸಂಚಿಕೆ: 5. ಕೆನ್ನಳ್ಳಿಯ ದುರಂತ

ಗುಡ್ಡಕ್ಕೆ ಬೆಂಕಿ ಕಾಣಿಸಿದ್ದವರನ್ನು ಕೂಡಲೇ ಗೌಡ್ರಮನೆ ಕಂಬಗಳಿಗೆ ನಿಲ್ಲಿಸಿ ಕಟ್ಟಿ ಎಲ್ಲರೂ ತಮ್ಮ ಕಣಗಳಿಗೆ ತೆರಳಿದರು. ಸಿದ್ದಲಿಂಗಪ್ಪನಿಂದ ಮಾಹಿತಿ ಪಡೆದಿದ್ದ ಯಜಮಾನಪ್ಪರು ಮತ್ತಿಬ್ಬರು ಗೌಡ್ರ ಮನೆ ಬಳಿಗೆ ಆಗಮಿಸಿದ ಬಳಿಕ ಕಂಬಕ್ಕೆ ಕಟ್ಟಿಸಿಗೊಂಡಿದ್ದವರನ್ನು “ಯಾವೂರೋರಪ್ಪಾ ಇಲ್ಲಿಗ್ಯಾತಕ್ಕೆ ಬಂದಿದ್ರಿ” ಗೌಡರು ವಿಚಾರಿಸಿದಾಗ ಕೆಮ್ಮಿ ಸಿಗೆಹಾಕಿಕೊಂಡಿದ್ದವ ನೀರುಗಣ್ಣಾಗಿ

“ಗೌಡ್ರೆ ನಮ್ಮೂರು ಮೂಡ್ಲ ಸೀಮೆ ಈಸ್ಟಗೆರೆ ಸ್ವಾಮಿ ತೆಪ್ ಮಾಡಿ ಬಿಟ್ಟಿ ಸ್ವಾಮಿ. ನಮ್ಮವೆಲ್ಲ ಆರು ಸಲಿಗೆ ಕುರಿ ಐದಾವೆ ಸ್ವಾಮಿ. ಕೊಯ್ದುಗಾಲ ಮುಗೀತಲೆ ಕುರೀಗೆ ಮೇವು ನೀರು ಹುಡಿಕೊಂಡು ಪಡುವ ಹೋಗಬೇಕಿತ್ತು ಸ್ವಾಮಿ ಮದುವ್ಯಾದ ಬಾಳ ದಿನಕ್ಕೆ ನಮ್ಮೆಂಗುಸ್ರು ಬಸಿರಾಗಿದ್ದು ಸ್ವಾಮಿ. ಕುರಿ ಹೊಡಕಂಡು ಹೋಗಿತ್ತಾವ ಎರಿಗೆ ಆದ್ರೆ ಬಾಣಿ ಮೊಗನ್ನ ನೋಡಿಕೆಮಗಾಗಲ್ಲ. ಇಲ್ಲೇ ಬಿಟ್ಟೋಗನಾಂದ್ರೆ ಒಬ್ಬಂಟಿಯ್ತು. ಊರಾಗೂ ಕಷ್ಟ ಅಮ್ಮ ಪಡುವ ಹೋಗಲಿಲ್ಲ”.

“ನಮ್ಮೂರ ಕೆರೆ ಬತ್ತಿ ಹೋಗಿತ್ತು. ಬೆಳಗೀಲೆ ಕುರಿ ಹೊಡಕಂಡು ಸುತ್ತಾ ಮುತ್ತಾ ತಿರುಗಾಡಿದಿವಿ. ಎಲ್ಲೆಲ್ಲೂ ಒಂದು ಕರಿಕೆ ಮೋಟೂ ಸಿಗಲ್ಲ. ಬ್ಯಾಸ್ಕೆ ಕಾಲ ಬ್ಯಾರೆ. ಮದ್ದೆಂದಾಗ ಎಲ್ಲೆನಾ ಒಂದು ಮರದಡೇಲಿ ಕುರಿ ತರುಬಿ ಹೊತ್ತು ನೂಕುತಿದ್ವಿ ಮೇವಿಲ್ಲೆ ಒಂದು ತಿಂಗಳಿಗೆ ಎಲ್ಲಾ ಬಡಕಲಾಗಿ ಬಿಟ್ಟಿದಾವೆ. ನೋಡಿದರೆ ಕಣ್ಣೀರು ಬತ್ತಾವೆ”.

ಹಿಂದಿನ‌ ಸಂಚಿಕೆ: 6. ಎಲ್ಲೆಲ್ಲಿಂದಲೋ ಬಂದರು

“ನಮ್ಮೂರಾಗೆ ಇಂಥಾ ಗುಡ್ಡ ಪಡ್ಡ ಇಲ್ಲ. ಇನ್ನೇನು ಉಗಾದಿ ಹಬ್ಬ ಹತ್ತಿರಕೆ ಬಂತು. ಮುಂಗಾರಮಳೆ ಏನನಾ ಮುಂಗಂಡು ಬಂದ್ರೆ, ಗುಡ್ಡದಾಗಿರೋ ಬಾದೆ ಹುಲ್ಲು ಕಳ್ಳ ಸರನ ಸಿಗದಲ್ಲ ಅದ್ಯೆ ಒಂದೀಟು ಬೆಂಕಿ ಕಾಣಿದರೆ ಮೋಟೆಲ್ಲ ಸಿಗುತ್ತಾವೆ. ಕುರಿ ಬಾಯಿಗೆ ಸಿಗ್ತಾವೆ. ಅಂಟ್ಕಂಡು ಈಟು ದೂರ ಬಂದು ದೊಡ್ ತಪ್ ಮಾಡಿಬಿಟ್ಟಿ ಸ್ವಾಮಿ” ಅಳುವದನಿಯಲ್ಲಿ ನಿವೇದಿಸಿಕೊಂಡಿದ್ದ.

“ನೀನೇಳೋದೆಲ್ಲ ಸತ್ಯಾನೇ ಇರಬೌದು. ನಮ್ ಜನ ಕುರಿಯಾರಿರಬೌದು, ಬ್ಯಾಸಾಯ್ತಾರು ಇರಬೌದು ಅಥವ ಇನ್ಯಾವುದೇ ಕಸುಬುದಾರು ಇರಬೌದು ನಮ್ಮನ್ನೆಲ್ಲಾ ಕಾಪಾಡ್ತಾ ಇರೋ ಗುಡ್ಡಗಳಿಗೆ ಕೊಳ್ಳಿ ಕೊಡೋ ದ್ರೋಹದ ಕೆಲ್ಲಾ ಮಾಡಲ್ಲ. ಗುಡ್ಡಕ್ಕೆ ಬೆಂಕಿ ಹಚ್ಚದೂ ಒಂದೇ ಮನೆಗೆ ಬೆಂಕಿ ಹಚ್ಚೇದೂ ಒಂದೇ, ಗುಡ್ಡಕ್ಕೆ ಬೆಂಕಿ ಬಿದ್ರೆ ಬರೇ ಬಾದೆ ಹುಲ್ಲು ಕಳ್ಳ ಸುಡೋದಿಲ್ಲ. ಎಲ್ಲಾ ಗಿಡ, ಮರ, ಪ್ರಾಣಿ, ಪಕ್ಷಿ ಎಲ್ಲಾ ನಾಶ್ಚ ಆಗ್ತಾವೆ. ಅವೆಲ್ಲಾ ನಮಿಗೆ ಶಾಪ ಹಾಕ್ತಾವೆ. ಸುಟ್ಟೋದ ಗಿಡ ಮರ ಮತ್ತೆ ಚಿಗುರಿ ಮೊದಲಿನಂಗಾಗಕೆ ವರ್ಷ ಎಲ್ಲೋರ್ಸಾ ಬೇಕಾಗುತ್ತೆ. ಇನ್ನಾ ಸುಟ್ಟು ಕರಿಕಲಾಗಿರೋ ಜೀವ ಜಂತುಗಳು ಏನು ತಪ್ ಮಾಡಿದ್ದು, ನೀನು ನಿನ್ನೆಂಡ್ತಿ ಹೆರೋ ಒಂದು ಕೂಸಿಗೆ, ಮುನ್ನೂರು ಕುರೀಗೆ ಇಷ್ಟು ಯಥೆ ಪಡೋನು ನೂರಾರು ಸಾವಿರಾರು ಹುಳಹುಪ್ಪೆ ಪ್ರಾಣಿ ಪಕ್ಷಿ ಸಾಯುತ್ತಿದ್ದಲ್ಲಾ ಅದರ ಕಷ್ಟ ನಷ್ಟ ಯೋಚನೆ ಮಾಡೀದೀಯಾ” ನಿಧಾನವಾಗಿ ಅಷ್ಟೇ ಆತಂಕದಿಂದ ಗೌಡ್ರು ಮಾತಾಡಿದ್ದರು.

ಇವರ ಮಾತುಗಳನ್ನು ಆಲಿಸಿದ್ದ, ಗೊಂಚಿಕಾರೂ ಯಜಮಾನಪ್ಪಾರು ಊರಿ ಇತರರುತೀರಬೇಕರಗೊಂಡಿದ್ದರು. ಕಂಬಕ್ಕೆ ಕಟ್ಟಿಸಿಕೊಂಡಿರುವರು ತೀರಾ ಯಜಮಾನಪ್ಪರಿಗೆ ‘ಇಂಥಾ ದ್ರೋಹದ ಕಾಯವನ್ನು ನಮ್ಮೂರವರಾರಾದರೂ ಅನುಕರಿಸಿದರೆ ಗತಿಯೇನು’ ಎಂಬ ಆತಂಕ ಕಾಡಿತ್ತು.

ಹಿಂದಿನ‌ ಸಂಚಿಕೆ: 7. ಊರು ತೊರೆದು ಬಂದವರು

ಕಂಬಕ್ಕೆ ಕಟ್ಟಿಸಿಗೊಂಡಿದ್ದವನೊಬ್ಬ “ಸ್ವಾಮಿ ಒಂದೀಟು ಬಿಟ್ರೆ ಸ್ವಾಮಿ ಕಾಲುಮಡೇ ಮಾಡ್ತೀನಿ” ಅಂದಾಗ ಒಬ್ಬರು ಅವನ ಕಟ್ಟು ಸಡಿಲಿಸಿ ಮನೆ ಮಗ್ಗುಲಿಗೆ ಕರೆದೊಯ್ದರು. ಅವನು ಹಿಂತಿರುಗಿ ಬಂದವನೇ ಗೌಡ್ರ, ಗೊಂಚಿಕಾರರ, ಯಜಮಾನಪ್ಪರ ಮತ್ತೆಲ್ಲರ ಕಾಲಿಗೆ ಬಿದ್ದು, ಕಾಲು ಹಿಡಿದುಕೊಂಡು ಗೋಳಾಡಿದ. ಕಂಬದಲ್ಲಿದ್ದವನು ನಿಂತಲ್ಲಿಯೇ “ಕೂಡ್ಲಳ್ಳಿ ಸಂಗಮೇಶಾ, ಈರಕರಿಯಣ್ಣಾ ಕಾಪಾಡ್ರಪ್ಪಾ” ಎಂದು ಹಲುಬಿದ.

“ಈ ವಿಷ್ಯ ನಾವೇ ತೀರಾನ ಮಾಡಕಾಗಲ್ಲ ಕಣಕ್ಕೋಗಿರೋರು ಎಲ್ಲ ಬರಲಿ, ಅಲ್ಲೆತನಕ ಇಬ್ಬರೂ ದನದ ಮನೆಯಾಗೆ ಕೂಡಾಕಿ ಬಾಗಲ ಸಿಲಕ ಹ್ಯಾಕ್ಯಂಡ್ ಬರಿ” ಎಂದು ಗೌಡರು ಸೂಚಿಸಿದರು. ಕೂಡಲೆ ಕಂಬದಲ್ಲಿದ್ದವನನ್ನು ಬಿಚ್ಚಿ ಇಬ್ಬರನ್ನೂ ಎದುರಿಗಿದ್ದ ದನದ ಮನೆಯಲ್ಲಿ ಕೂಡಿಹಾಕಿ ಬಾಗಿಲಿಗೆ ಬೀಗ ಜಡಿದರು.

ದನದ ಮನೆಯಲ್ಲಿ ಕತ್ತಲು. ಅಗಂತುಕರು ಒಳ ಪ್ರವೇಶಿಸುತ್ತಲೇ ಕೆಲವು ದನಗಳು ಬೆದರಿದ್ದವು. ಒಳ ಬಂದವರನ್ನು ಮೂಸಿನೋಡಿ ಹಿಂದೆ ಸರಿದಿದ್ದವು. ಇವರಿಬ್ಬರೂ ಮದ್ಯಾಹ್ನ ಊಟ ಮಾಡಿದ್ದರು. ಹೊಸದುರ್ಗ ಕಡೆಗೆ ಹೋಗುತ್ತಿದ್ದ ಕುಂಬಾರರ ಗಾಡಿಯಲ್ಲಿ ಬಳಗಟ್ಟೆ ಸಮಾಪ ಬಂದು ಗಾಡಿ ಇಳಿದು ಗುಡ್ಡದ ದಿಕ್ಕಿಗೆ ನಡೆದಿದ್ದರು. ಅಡ್ಡ ಹರಿಯುತ್ತಿದ್ದ ಹಳ್ಳದ ನೀರನ್ನು ಹೊಟ್ಟೆ ತುಂಬಾ ಕುಡಿದು ಕತ್ತಲಾಗುವ ತನಕ ಅಲ್ಲೊಂದು ಬಾಂದುವಿನ ಮೇಲೆ ಕುಳಿತಿದ್ದು ಅನಂತರ ಗುಡ್ಡದ ಕಡೆಗೆ ನಡೆದು ಸೊಂಪಾಗಿ ಬೆಳೆದಿದ್ದ ಬಾದೆ ಹುಲ್ಲಿಗೆ ಬೆಂಕಿ ಕಾಣಿಸಿ ಗುಡ್ಡ ಇಳಿದು ಹೋಗಿ ಸಂಜೆ ಕುಳಿತಿದ್ದ ಬಾಂದು ತಲುಪಿ ಅದರ ಮೇಲೆ ಕುಳಿತುಕೊಂಡಿದ್ದರು.

ಹಿಂದಿನ‌ ಸಂಚಿಕೆ: 8. ಮೋಜಣಿಕೆ ಮಾಡಿದರು  

ಪಕ್ಷಿ ಸಾಯುತ್ತಿದ್ದಲ್ಲಾ ಅದರ ಕಷ್ಟ ನಷ್ಟ ಯೋಚನೆ ಮಾಡೀದೀಯಾ” ನಿಧಾನವಾಗಿ ಅಷ್ಟೇ ಆತಂಕದಿಂದ ಗೌಡ್ರು ಮಾತಾಡಿದ್ದರು.

ಇವರ ಮಾತುಗಳನ್ನು ಆಲಿಸಿದ್ದ, ಗೊಂಚಿಕಾರೂ ಯಜಮಾನಪ್ಪಾರು ಊರಿ ಇತರರುತೀರಬೇಕರಗೊಂಡಿದ್ದರು. ಕಂಬಕ್ಕೆ ಕಟ್ಟಿಸಿಕೊಂಡಿರುವರು ತೀರಾ ಯಜಮಾನಪ್ಪರಿಗೆ ‘ಇಂಥಾ ದ್ರೋಹದ ಕಾಯವನ್ನು ನಮ್ಮೂರವರಾರಾದರೂ ಅನುಕರಿಸಿದರೆ ಗತಿಯೇನು’ ಎಂಬ ಆತಂಕ ಕಾಡಿತ್ತು.

ಕಂಬಕ್ಕೆ ಕಟ್ಟಿಸಿಗೊಂಡಿದ್ದವನೊಬ್ಬ “ಸ್ವಾಮಿ ಒಂದೀಟು ಬಿಟ್ರೆ ಸ್ವಾಮಿ ಕಾಲುಮಡೇ ಮಾಡ್ತೀನಿ” ಅಂದಾಗ ಒಬ್ಬರು ಅವನ ಕಟ್ಟು ಸಡಿಲಿಸಿ ಮನೆ ಮಗ್ಗುಲಿಗೆ ಕರೆದೊಯ್ದರು. ಅವನು ಹಿಂತಿರುಗಿ ಬಂದವನೇ ಗೌಡ್ರ, ಗೊಂಚಿಕಾರರ, ಯಜಮಾನಪ್ಪರ ಮತ್ತೆಲ್ಲರ ಕಾಲಿಗೆ ಬಿದ್ದು, ಕಾಲು ಹಿಡಿದುಕೊಂಡು ಗೋಳಾಡಿದ. ಕಂಬದಲ್ಲಿದ್ದವನು ನಿಂತಲ್ಲಿಯೇ “ಕೂಡ್ಲಳ್ಳಿ ಸಂಗಮೇಶಾ, ಈರಕರಿಯಣ್ಣಾ ಕಾಪಾಡ್ರಪ್ಪಾ” ಎಂದು ಹಲುಬಿದ.

ಹಿಂದಿನ‌ ಸಂಚಿಕೆ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ

“ಈ ವಿಷ್ಯ ನಾವೇ ತೀರಾನ ಮಾಡಕಾಗಲ್ಲ ಕಣಕ್ಕೋಗಿರೋರು ಎಲ್ಲ ಬರಲಿ, ಅಲ್ಲೆತನಕ ಇಬ್ಬರೂ ದನದ ಮನೆಯಾಗೆ ಕೂಡಾಕಿ ಬಾಗಲ ಸಿಲಕ ಹ್ಯಾಕ್ಯಂಡ್ ಬರಿ” ಎಂದು ಗೌಡರು ಸೂಚಿಸಿದರು. ಕೂಡಲೆ ಕಂಬದಲ್ಲಿದ್ದವನನ್ನು ಬಿಚ್ಚಿ ಇಬ್ಬರನ್ನೂ ಎದುರಿಗಿದ್ದ ದನದ ಮನೆಯಲ್ಲಿ ಕೂಡಿಹಾಕಿ ಬಾಗಿಲಿಗೆ ಬೀಗ ಜಡಿದರು.

ದನದ ಮನೆಯಲ್ಲಿ ಕತ್ತಲು. ಅಗಂತುಕರು ಒಳ ಪ್ರವೇಶಿಸುತ್ತಲೇ ಕೆಲವು ದನಗಳು ಬೆದರಿದ್ದವು. ಒಳ ಬಂದವರನ್ನು ಮೂಸಿನೋಡಿ ಹಿಂದೆ ಸರಿದಿದ್ದವು. ಇವರಿಬ್ಬರೂ ಮದ್ಯಾಹ್ನ ಊಟ ಮಾಡಿದ್ದರು. ಹೊಸದುರ್ಗ ಕಡೆಗೆ ಹೋಗುತ್ತಿದ್ದ ಕುಂಬಾರರ ಗಾಡಿಯಲ್ಲಿ ಬಳಗಟ್ಟೆ ಸಮಾಪ ಬಂದು ಗಾಡಿ ಇಳಿದು ಗುಡ್ಡದ ದಿಕ್ಕಿಗೆ ನಡೆದಿದ್ದರು. ಅಡ್ಡ ಹರಿಯುತ್ತಿದ್ದ ಹಳ್ಳದ ನೀರನ್ನು ಹೊಟ್ಟೆ ತುಂಬಾ ಕುಡಿದು ಕತ್ತಲಾಗುವ ತನಕ ಅಲ್ಲೊಂದು ಬಾಂದುವಿನ ಮೇಲೆ ಕುಳಿತಿದ್ದು ಅನಂತರ ಗುಡ್ಡದ ಕಡೆಗೆ ನಡೆದು ಸೊಂಪಾಗಿ ಬೆಳೆದಿದ್ದ ಬಾದೆ ಹುಲ್ಲಿಗೆ ಬೆಂಕಿ ಕಾಣಿಸಿ ಗುಡ್ಡ ಇಳಿದು ಹೋಗಿ ಸಂಜೆ ಕುಳಿತಿದ್ದ ಬಾಂದು ತಲುಪಿ ಅದರ ಮೇಲೆ ಕುಳಿತುಕೊಂಡಿದ್ದರು.

ಹಿಂದಿನ‌ ಸಂಚಿಕೆ: 10. ಹೊಸ ಬಂಡಿಗಳ ಆಗಮನ

ಗುಡ್ಡಕ್ಕೆ ಹಚ್ಚಿದ್ದ ಕಿಚ್ಚು ಹಬ್ಬುತ್ತಲೇ ಇಬ್ಬರಿಗೂ ಖುಷಿಯಾಗಿತ್ತು. ‘ಗುಡ್ಡದ ಬೆಂಕಿ ಆರಿಸಿದ ಜನ ನಾವಿದ್ದ ಕಡೆಗೆ ಯಾಕೆ ಬಂದಿದ್ರು, ಅವರಿಗೆ ಕತ್ತಲಾಗ ಹೆಂಗೆ ಗುಮಾನಿ ಆಗಿತ್ತು. ನಾವಿಬ್ರೂ ಗುಸಗುಸ ಮಾತಾಡಿಕೆಂಡೂ ಅವರೆಂಗೆ ಕೇಳಿಸಿಗಂಡಿದ್ರು? ಅಂತೂ ನಮ್ಮ ಅದೃಷ್ಟ ಕೈಕೊಟ್ಟಿತೆ. ಬೆಳಿಗ್ಗೆ ಇನ್ನೇನು ಕಾದೈತೋ, ಒದೆ ಬೀಳೋದಂತೂ ಖಾತ್ರಿ’ ಅಂಡ್ಕಂಡ್ರು,

ಹೀಗೆ ಯೋಚಿಸುತ್ತಾ ದನದ ಮುಂದಿನ ಹುಲ್ಲು ಗ್ವಾಂದಿಗೆಯಲ್ಲಿ ಅಡ್ಡಾದರು. ಕಾಡಿನಲ್ಲಿ ಹೊಲಗಳಲ್ಲಿ ಕುರಿ ಮಂದೆ ಮುಂದೆ ಮಲಗಿ ರೂಢಿ ಇದ್ದುದರಿಂದ ಗ್ವಾಂದಿಗೆಯ ತುಸು ಹುಲ್ಲು ಹಾಸಿಗೆಯಾಗಿತ್ತು. ಹೊಟ್ಟೆ ಹಸಿದಿದ್ದರೂ ಶರೀರಗಳಿಗೆ ವಿಶ್ರಾಂತಿ ಬೇಕಾಗಿತ್ತು. ಇದ್ದಲ್ಲಿಯೇ ನಿದ್ದೆ ಹೋದರು.

ಬೆಳಗ್ಗೆ ದನದ ಮನೆಯ ಬಾಗಿಲು ತೆರೆದು ಒಳಗಿದ್ದ ದನಕರುಗಳನ್ನು ಹೊರಗೆ ಬಿಟ್ಟು ಸಗಣಿ ಕಸ ಬಳಿಯುವ ಹುಡುಗರು ಗ್ವಾಂದಿಗೆಯಲ್ಲಿ ಮಲಗಿದ್ದವರನ್ನು ಏಳಿಸಿರಲಿಲ್ಲ.

ಹಿಂದಿನ‌ ಸಂಚಿಕೆ: 11. ಬಂಡಿ ತಂದ ಬದಲಾವಣೆ

ರಾತ್ರಿ ಕಣಗಳಿಗೆ ಹೋಗಿ ಬೆಳಗಿನಲ್ಲಿ ಬೀಸಿದ್ದ ಗಾಳಿಯಲ್ಲಿ ಕಾಳು ತೂರಿ- ಕೊಂಡು ರಾಸಿ ಮಾಡಿ ಮನೆಗೆ ಹಿಂದಿರುಗಿದವರು ಒಬ್ಬೊಬ್ಬರೇ ಗೌಡರ ಮನೆ ಬಳಿಗೆ ಆಗಮಿಸುತ್ತಿದ್ದರು. ಮೊದಲು ಬಂದವರು ಕಂಬಗಳಿಗೆ ನಿಲ್ಲಿಸಿ ಕಟ್ಟಿದ್ದವರನ್ನು ಕಾಣದೆ ಆತಂಕವಾಗಿತ್ತು. ಗೌಡ್ರ ಮನೆಯಲ್ಲಿ ವಿಚಾರಿಸಿ ದನದ ಮನೆ ಹೊಕ್ಕು ಗ್ವಾಂದಿಗೆಯಲ್ಲಿ ನಿದ್ದೆಗೆ ಜಾರಿದ್ದವರನ್ನು ಏಳಿಸಿಕೊಂಡು ಅವರ ಮೂತ್ರ ವಿಸರ್ಜನೆ ಮಾಡಿಸಿ ಮತ್ತೆ ಕಂಬಗಳಿಗೆ ನಿಲ್ಲಿಸಿ ಕಟ್ಟಿದರು.

ಎಲ್ಲರೂ ಆಗಮಿಸಿದ ಬಳಿಕ ವಿಚಾರಿಸೋಣವೆಂದು ನಿರೀಕ್ಷಿಸುತ್ತಿದ್ದವರಿಗೆ ಹೊರಗಿಂದ ಬಂದ ಗೌಡರು “ಅವರನ್ನ ನೀರಕಡೀಕೆ ಕರಕಂಡೋಗಿ ಬರೆಪ್ಪಾ” ಎಂದು ಸೂಚಿಸಿದರು. “ಏನಪ್ಪಾ ನೀರಕಡೀಕೋಗಬೇಕಾ ಹೆಂಗೆ” ಎಂದು ಕೇಳಿದಾಗ ಇಬ್ಬರೂ ಮೆಲ್ಲಗೆ ತಲೆ ಹಾಕಿದ್ದರು. ಉದ್ದನೆಯ ಅಣಿಯಗ್ಗಗಳಿಂದ ಇಬ್ಬರ ಬಲಗೈಗಳನ್ನು ಬಿಗಿಯಾಗಿ ಬಂಧಿಸಿ ಹಗ್ಗದ ಇನ್ನೊಂದು ತುದಿಯನ್ನು ಹಿಡಿದುಕೊಂಡು ನಾಲ್ಕು ಜನ ಇಬ್ಬರನ್ನು ಹಳ್ಳದಂಚಿಗೆ ಕರೆದೊಯ್ದರು.

ಹಿಂದಿನ‌ ಸಂಚಿಕೆ: 12. ಜಂಗಮಯ್ಯರ ಆಗಮನ

ಇಬ್ಬರೂ ತಲೆ ಎತ್ತದೆ ಅವಮಾನಿತರಾಗಿ ಮೂಕ ಪಶುಗಳಂತೆ ನಾಣ ಹಿಂದೆ ಹೋಗಿ ಹಳ್ಳದಂಚಿನ ಗಿಡದ ಮರೆಯಲ್ಲಿ ಮಲಬಾಧೆ ತೀರಿಸಿಕೆ ನಾಲ್ವರ ಎದುರೆ ಕುಂಡೆ ತೊಳೆದುಕೊಂಡು ಹಳ್ಳದ ನೀರಲ್ಲಿ ಮುಖ
ಕೈಕಾಲು ಒರೆಸಿಕೊಂಡು ಗೌಡರ ಹಜಾರಕ್ಕೆ ಹಿಂತಿರುಗಿದರು. ಅಲ್ಲಿನ ಜನ ಸಂದಣಿಯನ್ನು ನೋಡಿ ಗುಡ್ಡಕ್ಕೆ ಬೆಂಕಿ ಕಾಣಿಸಿದವರಿಗೆ ದಿಗಿಲಾಗಿತ್ತು. ಅದನ್ನು ತೋರ್ಪಡಿಸಿಕೊಳ್ಳದೆ ಮೌನವಾಗಿದ್ದರು.

ಮತ್ತೆ ಇಬ್ಬರನ್ನೂ ಕಂಬಗಳಿಗೆ ಬಿಗಿದುಕಟ್ಟಲಾಯಿತು. ಇಬ್ಬರನ್ನೂ ಹಳ್ಳಕ್ಕೆ ಕರೆದೊಯ್ದಿದ್ದಾಗ ಗೌಡರು ಮತ್ತು ಗೊಂಚಿಕಾರರು ರಾತ್ರಿ ನಡೆದಿದ್ದ ವಿಚಾರಗಳನ್ನು ಊರವರಿಗೆ ವಿವರಿಸಿದ್ದರು ಮತ್ತು ಇಬ್ಬರಿಗೂ “ಎಚ್ಚರಿಕೆಯ ಮಾತು ಹೇಳಿ ಅವರೂರಿಗೆ ಕಳಿಸುವುದೇ ಸೂಕ್ತ” ಎಂದು ಕೂಡಾ ತಿಳಿಸಿದ್ದರು.

ಕೆಲವು ಯುವಕರಂಥವರಿಗೆ ಇಬ್ಬರನ್ನೂ ಸರಿಯಾಗಿ ತದುಕಬೇಕೆಂದು ಇಚ್ಛೆಯಾಗಿತ್ತು. ರಾತ್ರಿ ಊಟವಿಲ್ಲದೆ ಮುಖ ಸಪ್ಪಗೆ ಮಾಡಿಕೊಂಡಿದ್ದ ಮತ್ತು ಅವಮಾನದಿಂದ ಕುಂದಿ ಹೋಗಿದ್ದವರನ್ನು ನೋಡುತ್ತಲೆ ಇವರ ರಾತ್ರಿಯ ಸಿಟ್ಟು ಕಡಿಮೆಯಾಗಿತ್ತು.

ಇಷ್ಟೊತ್ತಿಗೆ ಅಲ್ಲಿಗೆ ಆಗಮಿಸಿದ ಯಜಮಾನಪ್ಪರು “ಇವತ್ತೆ ನೋಡ್ರಪ್ಪ ಇಷ್ಟು ಜನ ಇಲ್ಲಿ ಕೂಡಿಕೆಂಡಿರಾದು. ಈ ಮಂಗನನ್ನಮಕ್ಕು ದುಡುಕಿಬಿಟ್ಟಿದಾರೆ. ನಾವೇನನಾ ಎಚ್ಚೆತ್ತಗಂಡು ಓಡೋಗಿ ಬೆಂಕಿ ಆರಿಸದಿದ್ರೆ ಸತ್ವನಾಥ್ ಆಗಾದು. ಗೊಂಚಿಕಾರರನ್ನು ಅಲ್ಲಿ ಕಾಣದೆ ‘ಯಾರಾನಾ ಹೋಗಿ ಗೊಂಚಿಗಾರನ್ನ ಕರಕಂಡ್ ಬರೆಪ್ಪಾ’ ಅನ್ನುತ್ತ ಚಪ್ಪಡಿ ಮೇಲೆ ಕುಳಿತರು.

ಹಿಂದಿನ‌ ಸಂಚಿಕೆ: 13. ಮತ್ತೆರಡು ಬಂಡಿ ತಂದರು

ಗೊಂಚಿಕಾರರು ಆಗಮಿಸುತ್ತಲೇ “ಏನಪ್ಪಾ ಏನು ತೀರಾನ ಮಾಡಿದಿರಿ” ಎಂದು ಅಲ್ಲಿ ಸೇರಿದ್ದವರನ್ನು ವಿಚಾರಿಸಿದ್ದರು. “ಇವರ ಸುಮ್ಮೆ ಬಿಡಬಾರದು ಬೆಂಕಿ ಹಾಕಿ ಮೆಂಚೆಕಾಯಿ ಊದ್ರ (ಹೊಗೆ) ಹಾಕಿ ಸಿಕ್ಷೆ ಕೊಡಬೇಕು” ಒಬ್ಬಾತ ಆವೇಶದಿಂದ ಮಾತಾಡಿದ. ಆತನ ಸಲಹೆಗೆ ಯುವಕರಂಥವರು ಸಹಮತ ವ್ಯಕ್ತಪಡಿಸಿದರೂ ಹಿರಿಯರು ಮುಗುಳ್ಳಕ್ಕಿದ್ದರು. ಈ ಸಮೂಹದ ಕಲಾಪಗಳನ್ನು ನೊಡಲು ಬೋವಿ ಮತ್ತಿತರ ಜನಾಂಗದವರೂ ಅಲ್ಲಿಗೆ ಆಗಮಿಸಿದರು.

ಗೌಡರು ತಮ್ಮ ದನಿ ಎತ್ತರಿಸಿ “ನೋಡ್ರಪ್ಪಾ ಈ ಇಬ್ರು ಅಯೋಗ್ಯರು ನಮ್ಮ ತಾಯಿ ಸಮಾನ ಆಗಿರೋ ಗುಡ್ಡಕ್ಕೆ ಕೊಳ್ಳಿ ಇಕ್ಕಿ ನಮ್ಮ ಬದುಕಿಗೇ ಕೊಳ್ಳಿ ಇಕ್ಕಿದಾರೆ. ಈ ಅಯೋಗ್ಯರಿಗೆ ಗುಡ್ಡದ ಮಹತ್ವ ಗೊತ್ತಿಲ್ಲ. ನಮ್ಮೂರ ಮೂಡ ಮತ್ತೆ ಪಡುವಗಡೆಗೆ ಇರೋ ಗುಡ್ಡದ ಸಾಲು ನಮಿಗೆ ಕ್ವಾಟೆ ಇದ್ದಂಗೆ. ನಮ್ಮ ದನ, ಕರು, ಕುರಿ ಆಡು ಗುಡ್ಡದಾಗಿರೋ ಮೇವು, ಹುಲ್ಲು ಸೊಪ್ಪು ತಿಂದಂಡು ಬದುಕ್ತಾ ಇದಾವೆ. ಅಂದ್ರೆ ನಮ್ಮ ಬದುಕಿಗೆ ಗುಡ್ಡಗಳು ಆಸರೆ ಆಗಿದಾವೆ, ನನ್ನ ಪೂರೀಕರು ಇದನ್ನೆಲ್ಲಾ ತಿಳಕಂಡು ಮುಂದಾಲೋಚನೆಯಿಂದ ಇಲ್ಲಿ ಊರು ಕಟ್ಟಿದಾರೆ. ಇದೆಲ್ಲ ಈ ಮೂರ್ಕ ಮುಂಡೇವಕ್ಕೆ ಹೆಂಗೆ ಗೊತ್ತಾಗಬೇಕು”.

ಹಿಂದಿನ‌ ಸಂಚಿಕೆ: 14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ

“ಇವು ಇವತ್ತೇ ಮೊದ್ಲು ಇವತ್ತೇ ಕಡೆ ಎಂದೂ ಅವ್ರ ಕುರಿ ಹೊಡಕಂಡು ಇತ್ತಾಗೆ ಅಡ್ಡಾಡಕೂಡದು. ಗುಡ್ಡಗಳು ನಮಿಗೆ ಆಸ್ಕರ ಆಗಿರೋದ್ರಿಂದ ನಾವು ಗುಡ್ಡಗಳ ರಕ್ಷಣೆ ಮಾಡಬೇಕು. ಅಡವಿ ಕಡೇಗೆ ಹೋಗೋರು ಯಾರು ಮಚ್ಚು, ಕುಡಗೊಲು ತಗಂಡೋಗಬಾರು. ಒಂದು ಗಿಡ ಅಡ್ಡ ಮರಕ್ಕೆ ಕಚ್ಚಿಕ್ಕಬಾರು, ಜತೇಲಿ ಕಡ್ಡಿ ಪೆಟ್ಟೆನೂ ತಗಂಡೋಗಬಾರು. ಚಳಿಯಾಗುತ್ತೆ ಅತ್ತ ಬೆಂಕಿ ಹಚ್ಚಿ ಮೈ ಬೆಚ್ಚಗೆ ಮಾಡ್ಕೊಬಾರು. ಮೈ ನಡುಗೋವಂಥ ಚಳಿ ಈ ಪ್ರದೇಶದಾಗೆ ಆಗಲ್ಲ.

ತಿಳೀತೇನಪ್ಪಾ” ಅಂದು ಗೊಂಚಿಕಾರು ಮತ್ತು ಯಜಮಾನಪ್ಪರ ಕಡೆ ನೋಡಿದರು. ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ. “ಮತ್ತೆ ಗುಡ್ಡಕ್ಕೆ ಬೆಂಕಿ ಹಚ್ಚಿದೋರಿಗೆ ಏನು ಸಿಕ್ಷೆ ಕೊಡಬೇಕು ಅದನ್ನ ಹೇಳಲಿಲ್ಲ ಗೌಡ್ರು”. ಒಬ್ಬಾತ ತನ್ನ ಬೇಸರವನ್ನು ವ್ಯಕ್ತಪಡಿಸಿದ. “ನೀನೇ ಹೇಳಪ್ಪ ಏನು ಶಿಕ್ಷೆ ಕೊಡೋನ” ಮತ್ತೊಬ್ಬರು ಪ್ರತಿಕ್ರಿಯಿಸಿದರು. ಆತನಿಗೆ ಏನೂ ತಿಳಿಯದೆ ಪೆಚ್ಚಾದ.

ಮತ್ತೆ ಗೌಡರೇ ಮಾತಾಡಿದರು. “ಈಟತ್ತಿಗೆ ಇವರಿಗೆ ಗೊತ್ತಾಗೈತೆ ನಾವು ಗುಡ್ಡಕ್ಕೆ ಕೊಳ್ಳಿ ಇಕ್ಕಿದ್ದು ಸಮಾಂತ್ರ ತಪ್ಪು ಅಮ್ಮ. ಅವರ ಒದ್ದರೆ ಏನೂ ತಿಳುಕಂಬಾದಿಲ್ಲ. ಸಾಕು ಇಲ್ಲೀತಂಕ ಅವರ ತಪ್ಪೇನೂ ಅಮ್ಮ ಅವರಿಗೆ ಗೊತ್ತಾಗಂಗೆ ಮಾಡಿದೀವಿ. ಸಾಕು ಅವರ ಕಂಬದಿಂದ ಬಿಚ್ಚಿಬಿಡ್ರಿ. ಅಯೋಗ್ಯರು ಯಾವಾಗ ಉಂಡಿದ್ರೋ ಏನೋ. ಅವರ ಹೊಟ್ಟೆಗೆ ಒಂದೀಟು ಕೂಳಾಕಿ ತೆಂಕಲ ದಾರಿ ತೋರಿಬಿಡ್ರಿ. ಹೋಗಿ ಊರು ಸೇರಮ್ಮಿ. ಅವನ ಹೇಣಿ ಬಸಿರಿಯಂತೆ” ನಿಧಾನವಾಗಿ ಅವರಾಡಿದ ಮಾತುಗಳನ್ನು ಕೇಳಿದ ಜನಕ್ಕೆ ಕಣದಲ್ಲಿನ ಕಾಳಿನ ರಾಸಿಗಳು ಕೈಬೀಸಿ ಕರೆದಿದ್ದವು. ಕೆಲವರು “ಈ ಸಂಪತ್ತಿಗೆ ಇವರ ಹಿಡಕಂಡ್ ಬಂದ್ವಾ” ಎಂದು ಬೇಸರಿಸಿದ್ದರು. ಒಬ್ಬೊಬ್ಬರಂತೆ ಎದ್ದು ತಮ್ಮಗಳ ಮನೆ ಕಡೆ ನಡೆದಿದ್ದರು.

ಹಿಂದಿನ ಸಂಚಿಕೆ ಓದಿ:  15.ಹಿರೇ ಬಡಗಿ ಗೌನಹಳ್ಳಿಗೆ ಬಂದರು 

ಕಂಬದ ಕಟ್ಟುಗಳನ್ನು ಬಿಚ್ಚಿದ ಕೂಡಲೇ ಇಬ್ಬರೂ ಗೌಡರ, ಗೊಂಚಿಕಾರರ, ಯಜಮಾನಪ್ಪರ ಮತ್ತುಳಿದವರ ಕಾಲಿಗೆ ಬಿದ್ದು ಗೋಳಾಡಿದರು. “ಇನ್ನೆಂದೂ ಇಂಥಾ ಕೆಟ್ ಕೆಲ್ಲ ಮಾಡಾದಿಲ್ಲ. ಸ್ವಾಮಿ” ಎಂದು ಸಾರಿ ಸಾರಿ ಹೇಳಿದ್ದರು. ಊರವರಿಗೆ ಇದೇ ಮೊದಲ ದ್ರೋಹದ ಘಟನೆಯಾಗಿತ್ತು. ‘ಓದಿಯಾದ್ರಿಂದ ಈ ಆಯೋಗ್ಯರು ಎಂತಾ ತಿದ್ದಿಕೆಂಡಾರು. ಹೋಗಲಿ ಅವರಿಗೆ ಅವರ ತಪ್ಪು ಗೊತ್ತಾಗಿದೆ. ಇಷ್ಟೆ ಸಾಕು ಅಂದುಕೊಂಡವರು ಬಾಳ ಜನ.

ಗೌಡರ ಸೂಚನೆಯಂತೆ ಇಬ್ಬರಿಗೂ ಊಟ ಹಾಕಿ ಕಳ್ಳಣಿವೆಯ ಹಾದಿಯನ್ನು ತೋರಿಸಲಾಗಿತ್ತು.

ಇಬ್ಬರೂ ನಡೆದು ಹೋಗುತ್ತಾ ಒಬ್ಬರನ್ನೊಬ್ಬರು ದೂಷಿಸಿಕೊಂಡಿದ್ದರು. ಅನಂತರ ಗೌನಳ್ಳಿಗರ ಔದಾರವನ್ನು ಸ್ಮರಿಸಿಕೊಂಡು “ಈ ಊರ ಜನರಂಥೋ ಎಲ್ಲೂ ಕಂಡೇ ಇಲ್ಲ”. ಎಂದು ಗಟ್ಟಿಯಾಗಿ ಮಾತಾಡಿಕೊಳ್ಳುತ್ತಾ ಕಳ್ಳಣಿಮೆ ದಿಕ್ಕಿನ ಕಡೆ ಮೂಡಿದ್ದ ಕಾಲು ಹಾದಿಗುಂಟಾ ನಡೆದಿದ್ದರು.

ಗೊಲ್ಲರ ಹಟ್ಟಿ ಮತ್ತು ಅವರ ಕುರಿಹಟ್ಟಿಗಳ ಬಳಿ ರಾತ್ರಿ ಮಲಗಿದ್ದವರು ಬೆಳಿಗ್ಗೆ ಏಳುತ್ತಲೇ ಗೊಲ್ಲಗುಡ್ಡದ ಸಮಾಪ ಹೋಗಿ ರಾತ್ರಿ ಬೆಂಕಿಗೆ ಆಹುತಿಯಾಗಿರುವ ಪ್ರದೇಶವನ್ನು ವೀಕ್ಷಿಸಿದರು. “ರಾತ್ರಿ ಗಾಳಿ ಏನಾದ್ರು ಜೋರಾಗಿ ಬೀಸಿದ್ರೆ ಏಟು ಸುಟ್ಟೋಗತಿತ್ತೋ, ಗಕ್ಕನ ನೋಡಿಕೆಂಡ ಊರಜನ ಓಡಿಬಂದು ಬೆಂಕಿ ಆರಿದಾರೆ.

ಹಿಂದಿನ ಸಂಚಿಕೆ ಓದಿ: 16. ಬಡಗಿ ಕಂಡ ಗೌನಳ್ಳಿ

ನಮಿಗೆಂಥಾ ನಿದ್ದೆ ಬಂದಿತ್ತು, ಥೋ ತಗಿ ಸೋಮಾರಿಗಳು, ಹಗಲೆಲ್ಲಾ ಕುರಿ ಹಿಂದೆ ಅಲೆದಾಡತೀವಿ ರಾತ್ರಿ ಎಲ್ಲೆದ್ದು ಮುದ್ದೆ ಕತ್ರಿಸಿ ಗೊರಕೆ ಹೊಡಕಂಡ್ ಮನಿಕೆಝಾ ವಿ. ಗುಡ್ಡಕ್ಕೆ ಕೊಳ್ಳಿ ಕಾಣಿ- ರೋರು ಯಾರು ಅಮ್ಮ ಹುಡಿಕ್ಯಾಡತಾರೆ. ನಮ್ಮಟ್ಟಿಗೂ ಬರಬೌದು. ಎತ್ತಪ್ಪ, ಜುಂಜಪ್ಪ, ಈರ ಕರಿಯಣ್ಣ ನಮ್ಮನ್ನ ಕಾಪಾಡ್ರಪ್ಪಾ” ಎಂದು ಪ್ರಾರ್ಥಿಸಿದ್ದರು.

Click to comment

Leave a Reply

Your email address will not be published. Required fields are marked *

More in ಸಂಡೆ ಸ್ಪಷಲ್

To Top
Exit mobile version