ಸಂಡೆ ಸ್ಪಷಲ್
Kannada Novel: 22. ಜಂಗಮಯ್ಯರಲ್ಲಿ ಬಿಕ್ಕಟ್ಟು

CHITRADURGA NEWS | 02 MARCH 2025
ಇಂಥಾ ಬರದ ಬೇಸಗೆಯಲ್ಲೂ ಬೇವಿನ ಮರಗಳು ಚಿಗುರಿ ಹೂಬಿಟ್ಟಿದ್ದವು. ಬೇರೆಲ್ಲಾ ಗಿಡಮರಗಳೂ ಚಿಗುರಿದ್ದವು. ಹಿಂದೆಯೇ ಯುಗಾದಿ ಹಬ್ಬವೂ ಬಂದಿತ್ತು. ಊರಿನಲ್ಲಿ ಹಿಂದಿನ ಹಬ್ಬದಾಚರಣೆಯ ಲವಲವಿಕೆ ಖುಷಿ ಕಂಡು ಬರಲಿಲ್ಲ. ನೀರೊಳೆ ಹಾದಿ ಬಳಿಯ ಹುಣಿಸೆ ಮರಕ್ಕೆ ಮಿಣಿಯ ಗಂಡುಯ್ಯಾಲೆ ಕಟ್ಟುತ್ತಿದ್ದವರು ತಡವಾಗಿ ಕಟ್ಟಿದ್ದರಾದರೂ ಕೆಲವೇ ಯುವಕರು ಉಯ್ಯಾಲೆ ಆಡಿ ಸೋತಿದ್ದರು. ಊರ ಸಮಿಪದ ನಾಕುಣಿಸೆ ಮರಗಳಲ್ಲಿ ಹೆಣ್ಣು ಮಕ್ಕಳ ಉಯ್ಯಾಲೆಗಳು ಕಂಡುಬರಲಿಲ್ಲ.
ಹಿಂದಿನ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

ಉಗಾದಿ ಹಬ್ಬದ ಮೊದಲ ದಿನ ಕೆಲವು ಜನ ಮೈ ಕೈಗೆ ಹರಳೆಣ್ಣೆ ಸವರಿಕೊಂಡು ಕೇರಿಗಳಲ್ಲಿ ಓಡಾಡಿದ್ದರು. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಸಿಹಿ ಅಡಿಗೆ ಮಾಡಿ ಊಟ ಮಾಡಿದ್ದರು. ಮಡಿವಾಳರು ಲಿಂಗಾಯ್ತರ ಮನೆಗಳಲ್ಲಿ ನೀಡಿಸಿಕೊಂಡು ತಂದಿದ್ದ ಸಿಹಿ ಊಟ ಉಂಡಿದ್ದರೆ ಜಂಗಮಯ್ಯರು ಕಂತೆಭಿಕ್ಷದಿಂದ ತಂದಿದ್ದ ಭಕ್ಷ್ಯಗಳನ್ನು ಸವಿದಿದ್ದರು. ಕೆಲವು ಭಕ್ತರು ದೇವರಿಗೆ ಎಡೆ ತೆಗೆದಂತೆ ಜಂಗಮಯ್ಯರಿಗೂ ಎಡೆ ತೆಗೆದು ಅವರ ಮನೆಗೇ ತಲುಪಿಸಿದ್ದರು.
ಇಂಥಾ ಬರದಲ್ಲೂ ಹಾಲು ಹೈನಕ್ಕೆ ಕೊರತೆ ಇರಲಿಲ್ಲ. ಊರಿನ ಅರ್ಧಕ್ಕರ್ಧ ಲಿಂಗಾಯ್ತರ ಮನೆಗಳಲ್ಲಿ ಸಿಗುತ್ತಿದ್ದ ಮಂದನ್ನ ಮಜ್ಜಿಗೆಯನ್ನು ಊರವರೆಲ್ಲಾ ಸವಿಯುತ್ತಿದ್ದರು.

ಯುಗಾದಿಯ ಮೂರನೇ ದಿನ ಜಂಗಮಯ್ಯರು ಪಂಚಾಂಗ ಶ್ರವಣ ಮಾಡಿಸುತ್ತಿದ್ದರು. ಅಂದು ಸಂಜೆ ಊರಿನ ಜನ ವೀಳೇದೆಲೆ ಅಡಿಕೆ ಜತೆಗೆ ದಕ್ಷಿಣೆಯನ್ನು ಒಂದು ತಟ್ಟೆಯಲ್ಲಿ ಒಯ್ದು ಜಂಗಮರಿಗೆ ಸಲ್ಲಿಸಿ, ಹೆಸರುಬಲ ಮತ್ತು ಮಳೆ ಬೆಳೆ ವಿಚಾರಗಳನ್ನು ಕೇಳುವುದು ವಾಡಿಕೆ. ಗೌಡ್ರು, ಗೊಂಚಿಕಾರು ಮತ್ತು ಕಾಮಜ್ವರು ಮಳಿಯಪ್ಪಯ್ಯರ ಬಳಿ ಪಂಚಾಂಗ ಶ್ರವಣ ಮಾಡಿಸಲು ಕೋರಿದಾಗ, ಅವರು “ಇದು ವಿಜಯನಾಮ ಸಂವತ್ಸರ ಕಳೆದ ಸಾಲಿನ ನಂದನ ಸಂವತ್ಸರದ ಶಿಲ್ಕು ಈ ಸಾಲಿನಲ್ಲಿಯೂ ಮುಂದುವರಿದರೂ ಆರಿದ್ರಾ ಮಳೆಯಿಂದ ಮಳೆಗಾಲ ಆರಂಭವಾಗಿ ಸಣ್ಣ ಫಸಲಿನ ಬೀಜದ ಬಿತ್ತನೆಯಾಗುತ್ತದೆ. ದನಕರುಗಳಿಗೆ ಮೇವು ಸಮೃದ್ಧಿಯಾಗಿ ಆಗುತ್ತದೆ. ಹಾಲು ಹೈನಕ್ಕೇನೂ ಕೊರತೆ ಇರುವುದಿಲ್ಲ.” ಮುಂತಾಗಿ ತಿಳಿಸಿ ತಾಂಬೂಲ ಸವಿದಿದ್ದರು.
ಹಿಂದಿನ ಸಂಚಿಕೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು
ಊರಿನ ಜನ ನಿಟ್ಟುಸಿರುಬಿಟ್ಟು ಹೊಸಾ ವರ್ಷವನ್ನು ಸ್ವಾಗತಿಸಿದ್ದರು. ಮಡಿವಾಳರು ‘ಬಸವನಹಳ್ಳದ ಎಲ್ಲಾ ಮಡುವುಗಳು ಬತ್ತಿ ಹೋಗಿರುವುದರಿಂದ ಮೈಲಿಗೆ ಬಟ್ಟೆಗಳನ್ನು ಮಡಿ ಮಾಡುವುದು ಕಷ್ಟವಾಗಿದೆ. ಅದಕ್ಕೆ ಊರ ಬಾವಿ ಸನೇಪ ಬಂಡೆ ಜೋಡಿಸ್ಕಂಡು ಬಟ್ಟೆ ಒಗೀತೀವಿ. ಅದಕ್ಕೆ ಅನುಮತಿ ಬೇಕು” ಎಂದು ಗೌಡರಲ್ಲಿ ವಿನಂತಿ ಸಲ್ಲಿಸಿದ್ದರು. ‘ಆಗಲಿ ಬಾವಿ ಮೂಡಗಡೀಕೆ ಮಸ್ತ್ ಕಲ್ಲು ಬಂಡೆ ಕೆಡವಿದೀವಿ ನಿಮಿಗೆ ಬೇಕಾದ್ದು ಹಾಕ್ಯಂಡು ಬಟ್ಟೆ ಒಗೀರಿ’ ಎಂದು ಅವರು ಅನುಮತಿ ನೀಡಿದ್ದರು.
ಯುಗಾದಿ ಅಮಾವಾಸ್ಯೆಯಿಂದ ಹದಿನೈದು ದಿನಕ್ಕೆ ಬಂದ ಹುಣ್ಣಿಮೆಯಿಂದ ಗುಡಿಹಳ್ಳಿ ಮೈಲಾರ ಲಿಂಗಪ್ಪನ ಕಂಕಣ ಶಾಸ್ತ್ರ, ಉಚ್ಚಾಯ, ತೇರು, ದೋಣಿ ಸೇವೆಗಳು ಯಥಾವತ್ತಾಗಿ ನಡೆದವು. ಭಣಗುಟ್ಟುವ ರಣಬಿಸಿಲಿನಲ್ಲಿ ಜನ ಜಾನುವಾರು ಇಳಿಬಿಸಿಲನ್ನೇ ಕಾಯ್ದು ಹೊರ ಬರುತ್ತಿದ್ದರು. ಊರ ಬಾವಿಯ ಬಳಿ ದನಗಳಿಗೆ ನೀರು ಕುಡಿಸಲು ಒಂದು ಕಲ್ಲು ಬಾನಿಯನ್ನು ಸಾಗಿಸಿ ಗಿಲ್ಲು ರಿಲ ಅಧಲಶಧನ ಜನ ಬಾವ ಳ ಇಂದು ನಿರನ್ನು ತಂದು ಬಾನಿಗೆ ಸುರಿದು ದನಗಳಿಗೆ ನೀರು ಕುಡಿಸುವಂತೆ.
ಹಿಂದಿನ ಸಂಚಿಕೆ: 3. ಎಲ್ಲರೂ ಲಿಂಗವಂತರಾದರು
ಇಂಥ ಮರ್ಭರ ಸನ್ನಿವೇಶದಲ್ಲಿ ಜಂಗಮಯ್ಯರ ಮನೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಅವರ ಮನೆಯಲ್ಲಿ ಮಳೆಯಪ್ಪರ ಒಂದು ವರ್ಷದ మగు రుద్రయ్య మరుళయ్యర ఆరు లింగళ కూలను మురుగరద్రయ్య ಬೆಳೆಯುತ್ತಿದ್ದರು. ಮಕ್ಕಳ ವಿಚಾರದಲ್ಲಿ ಐಗಳ ಮನೆಯಲ್ಲಿ ವಿರಸ ಉಂಟಾಗುತ್ತಿತ್ತು. ರುದ್ರಯ್ಯನಿಗೆ ಒಂದು ವರ್ಷದ ಮಗುವಾದರೂ ಅನ್ನ ಮುದ್ದೆ ತಿನ್ನಿಸುವುದನ್ನು ರೂಢಿ ಮಾಡಿಸದೆ ಅವನ ತಾಯಿ ಬರೀ ಹಾಲು ಕುಡಿಸುತ್ತಾ ಬೆಳೆಸಿದ್ದರು. ಪ್ರತಿ ದಿನ ಬೆಳಿಗ್ಗೆ ಗೌಡರು ನೀಡುತ್ತಿದ್ದ ತಂಬಿಗೆ ತುಂಬಿದ ನೊರೆ ಹಾಲು ರುದ್ರಯ್ಯನಿಗೆ ಮೂರು ಹೊತ್ತು ಕುಡಿಸಲು ಸಾಕಾಗುತ್ತಿರಲಿಲ್ಲ.
ಆರು ತಿಂಗಳ ಕೂಸಾಗಿದ್ದ ಮುರುಗೇಂದ್ರಯ್ಯನ ತಾಯಿ ‘ಒಂದು ವರ್ಷದ ಮಗನಾದರೂ ಅನ್ನ ಮುದ್ದೆ ತಿನ್ನಿಸಬಾರದೆ’ ಎಂದು ಯೋಚಿಸುತ್ತಿದ್ದರು. ತನ್ನ ಮಗುವಿಗೆ ಹಾಲು ಕುಡಿಸಲು ಸಾಧ್ಯವಾಗದೆ ಆಕೆ ವ್ಯಾಕುಲಗೊಂಡಿದ್ದರು. ತನ್ನ ಕೂಸು ಬಡವಾಗತೊಡಗಿದ್ದ. ಹೆರಿಗೆ ಮಾಡಿಸಿದ್ದ ಸೂಲಗಿತ್ತಿ ಮನೆಗೆ ಬಂದು “ಯಾಕಮ್ಮಾ ಕೂಸು ಬಡವಾಗಕೆ ಬಿಟ್ಟಿದೀಯ.
ಹಿಂದಿನ ಸಂಚಿಕೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ
ಆರು ತಿಂಗಳಾಗೈತೆ ರಾಗಿ ಸರಿ ತಿನಿಸಾದು ರೂಢಿ ಮಾಡಬಾರದೆ” ಎಂದು ಸಲಹೆ ನೀಡಿದ್ದಳು. ‘ಮಾರಾಯರು ಗೌಡ್ರು ಊರಿಗೆ ಬಂದಾಗಿಂದ ಪ್ರತೀದಿನ ತಂಬಿಗೆ ತುಂಬಾ ಕರೆದ ಹಾಲು ಕರೆದಂತೆ ಕೊಡತೀದಾರೆ. ಈ ಹಾಲನ್ನು ತಾನು ಮುಟ್ಟುವಂತಿಲ್ಲ ತನ್ನ ಎದೆ ಹಾಲು ಮಗುವಿಗೆ ಸಾಲದು. ಇದನ್ನು ಯಾರತ್ರ ಹೇಳಿಕೊಳ್ಳಲಿ’ ಆಕೆಯ ಅಳಲು.
ಗಂಡನಿಗೆ ಇದು ಗೊತ್ತಿದ್ದರೂ ಆತ ಸುಮ್ಮನಿರುತ್ತಿದ್ದ. ಒಂದು ದಿನ ಕಂತೆಭಿಕ್ಷದ ಬಿಸಿ ರಾಗಿಮುದ್ದೆಯನ್ನು ಮುರುಗೇಂದ್ರಯ್ಯನಿಗೆ ತಿನ್ನಿಸಲು ಪ್ರಯಾಸ ಪಡುತ್ತಿದ್ದ ಅವನ ತಾಯಿಯ ಅಸಹಾಯಕತೆಯನ್ನು ನೋಡಿದ ಮಳೆಯಪ್ಪಯ್ಯ “ಒಂದಿಷ್ಟು ಹಾಲಲ್ಲಿ ಕಲೆಸಿ ತಿನ್ನಿಸಮ್ಮಾ” ಎಂದು ಸಲಹೆ ನೀಡಿದರೂ ಆ ಹಾಲನ್ನು ಮುಟ್ಟಲಿಲ್ಲ. ತನ್ನ ಪತ್ನಿ ಪ್ರತಿಕ್ರಿಯಿಸದೆ ಸುಮ್ಮನಿದ್ದುದನ್ನು ಕಂಡು “ಏನೋ ಲೋಪವಾಗಿದೆ” ಎಂದು ಊಹಿಸಿದ್ದರು.
ಊಟವಾದ ಬಳಿಕ “ಅಯ್ಯಾ ಹೊಲದ ಕಡೆ ಹೋಗಿ ಬರನಾ ಬಾ” ಎಂದು ಮಳೆಯಪ್ಪಯ್ಯ ಮರುಳಯ್ಯರನ್ನು ಕರೆದುಕೊಂಡು ಹೊಲದ ಕಡೆ ನಡೆದರು. ಅಲ್ಲಿಗೆ ತಲುಪಿದಾಗ ತಡವಾಗಿ ಊರಿದ್ದ ಹರಳು ಬೀಜಗಳು ಮೊಳೆತು ಚಿಕ್ಕ ಚಿಕ್ಕ ಗಿಡಗಳಾಗಿ ನೀರಿಲ್ಲದೆ ಮುರುಟಿ ಹೋಗಿದ್ದವು. ಜಮಾನು ಸುತ್ತ ಮೇರೆಯಲ್ಲಿ ಗುಂಡಿ ತೋಡಿ ಊರಿದ್ದ ಹುಣಿಸೆ ಮತ್ತು ಬೇವಿನ ಸಸಿಗಳು ಕೂಡಾ ಪಿಯೋ ಅನ್ನುತ್ತಿದ್ದವು. ‘ಇಂಥಾ ಬೇಸಗೆಯಲ್ಲಿ ಎಲ್ಲಿಂದ ನೀರು ತಂದು ಹಾಕುವುದು’ ಎಂದು ಇಬ್ಬರೂ ವ್ಯಾಕುಲಗೊಂಡಿದ್ದರು. ಅಲ್ಲೆಲ್ಲೂ ಗಿಡಮರಗಳಿಲ್ಲದೆ ಗೊಂಚಿಕಾರರ ಕಟ್ಟೆಗೆ ನಡೆದು ಅಲ್ಲಿದ್ದ ಮಾವಿನ ಮರದ ಕೆಳಗೆ ಕುಳಿತರು.
ಹಿಂದಿನ ಸಂಚಿಕೆ: 5. ಕೆನ್ನಳ್ಳಿಯ ದುರಂತ
ಮಾತಾಡಲು ಪ್ರಯತ್ನಿಸಿದರೂ ಒಂದು ಕ್ಷಣ ಮಳಿಯಪ್ಪಯ್ಯರಿಗೆ ಮಾತಾಡಲಾಗಲಿಲ್ಲ. ಅವರು ತಮ್ಮ ಬಾಲ್ಯ, ಯೌವನದ ದಿನಗಳನ್ನು ಮತ್ತು ಬೆಟ್ಟದಳ್ಳಿಯಿಂದ ಊರು ತೊರೆದು ದಿನಗಟ್ಟಲೆ ನಡೆದು ಗೌನಳ್ಳಿಗೆ ಬಂದು ನೆಲಸಿದುದನ್ನು ಜ್ಞಾಪಿಸಿಕೊಂಡು ಭಾವುಕರಾದರು.
ಮರುಳಯ್ಯನಿಗೂ ಮಾತು ಹೊರಡಲಿಲ್ಲ. ಆತನೂ ವ್ಯಾಕುಲಗೊಂಡಿದ್ದ. ಮಳಿಯಪ್ಪಯ್ಯ ಎರಡು ಬಾರಿ ಕೆಮ್ಮಿದರೂ ಗಂಟಲುಬ್ಬಿ ಬಂದಿತ್ತು. ಸ್ವಲ್ಪ ಹೊತ್ತು ತಡೆದು “ಅಯ್ಯಾ ನನ್ನೇಣಿ ಮಗನ್ನ ಹಡೆದ ಮ್ಯಾಲೆ ಸ್ವಾರ್ಥಿಯಾಗಿಬಿಟ್ಟಿದಾಳೆ. ಮಗನ್ನ ಹಠಮಾರಿ ಮಾಡಿಬಿಟ್ಟಿದಾಳೆ. ನಿನ್ನ ಗಮನಕ್ಕೆ ಬಂದ್ರೂ ಯಾಕೆ ಸುಮ್ಮಿದ್ದೆ” ಕಷ್ಟ ಪಟ್ಟು ಮಾತಾಡಿದ್ದರು. ಮರುಳಯ್ಯನಿಗೆ “ಅಣ್ಣಾ ನೀನೆಲ್ಲಿ ಬೇಜಾರು ಮಾಡ್ಕೊತೀಯೋ ಅಂತ ನಾನು ತಡಕಂಡಿದ್ದೆ” ಆತನೂ ಭಾವುಕನಾಗಿ ಇಷ್ಟು ಮಾತಾಡಿದ್ದ.
ಹಿಂದಿನ ಸಂಚಿಕೆ: 6. ಎಲ್ಲೆಲ್ಲಿಂದಲೋ ಬಂದರು
ಮುಂದೆ ಯಾರೂ ಮಾತಾಡಲಿಲ್ಲ. ತುಂಬಾ ಸಮಯ ಸುಮ್ಮನೇ ಕೂತಿದ್ದರು. ಇಳಿ ಹೊತ್ತಾದ ಮೇಲೆ “ಬಾರಪ್ಪಾ ಮನಿಗೋಗಾನ” ಎಂದು ಮಳಿಯಪ್ಪಯ್ಯ ಎದ್ದರು. ಇಬ್ಬರೂ ಊರಕಡೆ ನಡೆದರು.
ಮನೆ ತಲುಪಿದ ಮರಳಯ್ಯನನ್ನು ಎದುರುಗೊಂಡ ಆತನ ಪತ್ನಿ ನಗುಮುಖದಿಂದ “ಮುರುಗಿ ಈವೊತ್ತು ಮುದ್ದೆ ತಿಂದ್ ಬಿಟ್ಟಾ” ಅಂ-ದರು. ಅವನಿಗೆ ಸಂತೋಷವಾಗಿತ್ತು. “ಭೇದಿ ಸಲೀಸಾಗಿ ಆಗಬೇಕಾದ್ರೆ ಬಿಸಿ ನೀರು ಕುಡಿಸು” ಸಲಹೆ ನೀಡಿದ. ಮುರುಗೇಂದ್ರನ ಆರೋಗ್ಯದಲ್ಲಿ ಏನೂ ಏರುಪೇರಾಗಲಿಲ್ಲ. ಕಂತೆಭಿಕ್ಷದಿಂದ ತರುತ್ತಿದ್ದ ಬಿಸಿ ಬಿಸಿ ರಾಗಿಮುದ್ದೆಯನ್ನು ಸಣ್ಣಗೆ ಮಿದುಕೆ ಮಾಡಿ ತಿನ್ನಿಸಿದರೆ ಸುಮ್ಮನೆ ನುಂಗುತ್ತಿದ್ದ. ಅನಂತರ ಅವನ ತಾಯಿ ಎದೆಗಾನಿಸಿಕೊಂಡು ಸ್ವಲ್ಪ ಹೊತ್ತು ಹಾಲು ಕುಡಿಸಿ ಮಲಗಿಸಿದರೆ ಸುಖನಿದ್ರೆ ಮಾಡುತ್ತಿದ್ದ. ಇದರಿಂದ ತಾಯಿ ತಂದೆಯರಿಬ್ಬರ ಬೇಗುದಿ ಕಮ್ಮಿಯಾಯಿತು.
ಹಿಂದಿನ ಸಂಚಿಕೆ: 7. ಊರು ತೊರೆದು ಬಂದವರು
ಮಳಿಯಪ್ಪಯ್ಯ ದಿನದಿಂದ ದಿನಕ್ಕೆ ಅಂತರುಖಿಯಾದರು. ಸ್ನಾನ ಮಾಡಿ ಮಡಿಯುಟ್ಟು ಪೂಜೆ ಮಾಡಿ ಕಂತೆಭಿಕ್ಷಕ್ಕೆ ನಾಲ್ಕಾರು ಮನೆಗಳನ್ನು ಎಡತಾಕಿ ಮನೆಗೆ ಮರಳಿ ಪ್ರಸಾದ ಉಂಡು ಸ್ವಲ್ಪ ಹೊತ್ತು ಊರಬಾವಿಯ ಕಡೆಗೆ ಹೋಗಿ ತಿರುಗಾಡಿ ಬರುತ್ತಿದ್ದರು. ಅವರಿಗೆ ಬದಲಾಗಿದ್ದ ಮಡದಿಯ ವರ್ತನೆ ತಲೆ ತಿನ್ನುತ್ತಿತ್ತು. ‘ಮನುಷ್ಯ ಹೇಗೆ ಸ್ವಾರ್ಥಿಯಾಗುತ್ತಾನಲ್ಲಾ ದೊಡ್ಡ ಮನುಷ್ಯರು ಗೌಡ್ರು ಪ್ರತಿ ದಿನಾ ತಂಬಿಗೆ ತುಂಬಾ ನೊರೆ ಹಾಲು ಕೊಡುತ್ತಿದ್ದಾರೆ. ಅವರು ಕೊಡದಿರುತ್ತಿದ್ದರೆ ಹೆಂಗೆ ಮಾಡುತ್ತಿದ್ದಳು? ನಮ್ಮ ಬದುಕೇ ಅತಂತ್ರವಾಗಿರುವಾಗ ಇವಳೇಕೆ ಹೀಗಾದಳು? ಅವಳಿಗೆ ತಿಳಿಹೇಳಬೇಕು’ ಅಂದುಕೊಂಡು ಮನೆಗೆ ಮರಳಿದರು.
ಮನೆಯಲ್ಲಿ ಮೌನ ಆವರಿಸಿತ್ತು. ಮರುಳಯ್ಯನ ಪತ್ನಿ ತನ್ನ ಮಗನ ಜತೆ ಹೊರಗಿದ್ದಳು. ಮನೆಯೊಳಗೆ ಅವರ ಪತ್ನಿ ಮಗ ರುದ್ರಯ್ಯನನ್ನು ಜೋಲಿಯಲ್ಲಿ ಮಲಗಿಸಲು ತೂಗುತ್ತಿದ್ದರು. ಮಳಿಯಪ್ಪಯ್ಯ ಕಲ್ಲು ಬಂಡೆಯ ಮೇಲೆ ಕುಳಿತು “ರುದ್ರಯ್ಯ ಒಂದು ವರ್ಷದ ಮಗ ಆಗಿದಾನೆ. ಅವನಿಗೆ ಬಿಸಿ ಮುದ್ದೆ ಉಣ್ಣಿಸೋದನ್ನ ರೂಢಿ ಮಾಡಿಸಬಾರದೆ.
ನೋಡು ಮುರುಗಿ ಮುದ್ದೆ ಉಂಡ್ಕಂಡು ಸೆಮಟಿಗೆಯಂಗಾಗಿದಾನೆ” ಮೆಲುದನಿಯಲ್ಲಿ ಮಾತಾಡಿದ್ದರು. ಇವರ ಮಾತಿಗೆ ಪತ್ನಿ ಹರ ಅನ್ನಲಿಲ್ಲ ಶಿವ ಅನ್ನಲಿಲ್ಲ. ಅಷ್ಟೊತ್ತಿಗೆ ಮರುಳಯ್ಯನ ಪತ್ನಿ ಮಗನನ್ನು ಎತ್ತಿಕೊಂಡು ಒಳಗೆ ಬಂದರು. “ದೀಪ ಮುಡಿಸಮ್ಮ” ಎಂದು ಆಕೆಗೆ ತಿಳಿಸಿ ಮೈತೊಳೆದುಕೊಳ್ಳಲು ಮೇಲೆದ್ದರು. ಸ್ನಾನ ಮಾಡಿ ನಿಷ್ಠೆಯಿಂದ ಶಿವ ಪೂಜೆ ಮಾಡಿದರು.
ಹಿಂದಿನ ಸಂಚಿಕೆ: 8. ಮೋಜಣಿಕೆ ಮಾಡಿದರು
ಹಿಂದೆಯೇ ಮರುಳಯ್ಯ, ಶಿವಲಿಂಗಯ್ಯ ಮೈತೊಳೆದು ಶಿವ ಪೂಜೆ ಮಾಡಿದ್ದರು. ಶಿವಪೂಜೆ ಮಾಡಿದ ಬಳಿಕ ಮೂರೂ ಜನ ಕಂತುಭಿಕ್ಷೆಗೆ ತೆರಳಿ ಶಿವಭರ ಎರಡೆರಡು ಮನೆಗಳಿಗೆ ಹೋಗಿ, ಭಕ್ತರು ನೀಡಿದ ಭಕ್ಷ್ಯಗಳನ್ನು ತಂದರು. ಕೂಡಲೇ ಮರುಳಯ್ಯನ ಪತ್ನಿ ಜೋಳಿಗೆಯಲ್ಲಿದ್ದ ಮುದ್ದೆ, ಅನ್ನ ಆಮ್ರ, ಮಜ್ಜಿಗೆ ಇತ್ಯಾದಿಗಳನ್ನು ಬೇರ್ಪಡಿಸಿ ಅವರ ಮನೆಯ ಪಾತ್ರೆಗಳಿಗೆ ವರ್ಗಾಯಿಸಿ ಬಿಸಿ ರಾಗಿಮುದ್ದೆಯ ಮಿದಿಕೆಗಳನ್ನು ಮಾಡಿ ಆಮ್ರದಲ್ಲಿ ಅದ್ದಿ ಮಗ ಮುರಿಗೇಂದ್ರಯ್ಯನಿಗೆ ತಿನ್ನಿಸಿದರು. ತಿನ್ನಿಸಿಯಾದ ಬಳಿಕ ಎದೆಗಾನಿಸಿಕೊಂಡು ಹಾಲುಣಿಸಿದರು.
ಮಳಿಯಪ್ಪಯ್ಯರ ಪತ್ನಿ ಮಣೆ ಹಾಕಿ ಮೂವರಿಗೂ ಊಟಕ್ಕೆ ನೀಡಿದರು. ಮಳಿಯಪ್ಪಯ್ಯ ಒಂದು ಮುರುಕು ಮುದ್ದೆ ಉಂಡು ಮಜ್ಜಿಗೆ ಕುಡಿದು ಮೇಲೆದ್ದರು. “ಯಜಮಾನರು ಯಾಕೋ ಹೊಟ್ಟೆ ತುಂಬಾ ಉಣ್ಣಲಿಲ್ಲ”ವೆಂದು ಅವರ ಪತ್ನಿ ಗಮನಿಸಿದರು. ತಮ್ಮಂದಿರಿಗೂ ಇದು ಅರಿವಾಗಿತ್ತು. ಅನಂತರ ಮೂರುಜನ ಹೆಣ್ಣು ಮಕ್ಕಳು ಶಿವಪೂಜೆ ಮಾಡಿ ಊಟಕ್ಕೆ ಕುಳಿತು ಊರಿನ ಲಿಂಗಾಯ್ತರ ಮನೆಯ ಹೆಣ್ಣು ಮಕ್ಕಳು ಮಾಡಿದ್ದ ಅಡಿಗೆಯನ್ನು ಉಂಡು ತೇಗಿದರು. ದಿನೇ ದಿನೇ ಮಳಿಯಪ್ಪಯ್ಯ ಅರ್ಧ ಊಟ ಮಾಡುವುದನ್ನು ರೂಢಿಸಿಕೊಂಡರು. ಹೀಗಾಗಿ ಅವರ ಕಂತೆಭಿಕ್ಷದ ಮನೆಗಳ ಸಂಖ್ಯೆ ಕಡಿಮೆಯಾಗಿತ್ತು. ಇದನ್ನು ಮನೆಯ ಎಲ್ಲರೂ ಗಮನಿಸಿದ್ದರು.
ಹಿಂದಿನ ಸಂಚಿಕೆ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ
ಈ ಮಧ್ಯೆ ರುದ್ರಯ್ಯನಿಗೆ ಹಾಲು ಕುಡಿಸುವುದನ್ನು ಕಡಿಮೆ ಮಾಡಿ ರಾಗಿ ಮುದ್ದೆಯನ್ನು ಹಾಲಿನಲ್ಲಿ ಕಲೆಸಿ ಅವನಿಗೆ ತಿನ್ನಿಸುವುದನ್ನು ಅವನ ತಾಯಿ ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಮುರಿಗೇಂದ್ರಯ್ಯನ ತಾಯಿ ಹಾಲಿನ ಬದಲು ರಾಗಿಮುದ್ದೆಯ ಮಿಡಿಕೆಗಳನ್ನು ಆಮ್ರದಲ್ಲಿ ಅದ್ದಿ ತಿನ್ನಿಸುವುದನ್ನು ರುದ್ರಯ್ಯನ ತಾಯಿ ಕಂಡಿದ್ದರೂ ಆ ತಾಯಿ ತನ್ನ ಮಗನಿಗೆ ಹಾಲಿನಲ್ಲಿ ಮುದ್ದೆ ಕಲೆಸಿ ತಿನ್ನಿಸುವುದನ್ನು ಬಿಟ್ಟಿರಲಿಲ್ಲ.
ಹಾಲಿನಲ್ಲಿ ಮುದ್ದೆ ಕಲೆಸಿ ತಿನ್ನಿಸುವುದನ್ನು ರೂಢಿಸಿದ ಬಳಿಕ ರುದ್ರಯ್ಯನ ಹಾಹಾಕಾರ ಕಡಿಮೆಯಾಗಿತ್ತು. ಎರಡೂ ಮಕ್ಕಳು ಮದ್ಯಾಹ್ನ ಉಂಡು ಮಲಗಿದರೆ ಹಗಲೂಟದೊತ್ತಿಗೆ ಎಚ್ಚರಗೊಳ್ಳುತ್ತಿದ್ದರು. ಆದರೆ ಸುಮ್ಮನೇ ಆಟವಾಡಿಕೊಂಡಿರುತ್ತಿದ್ದರು. ಮನೆಯ ಹೆಣ್ಣು ಮಕ್ಕಳಿಗೆ ಊರು ಬಾವಿಯಿಂದ ನೀರು ತರುವುದು, ಬಟ್ಟೆ ಒಗೆದುಕೊಳ್ಳುವುದು, ನೀರು ಕಾಯಿಸಲು ಸೌದೆ ಪುಳ್ಳೆ ಜೋಡಿಸಿಕೊಳ್ಳುವುದು ಸರಳವಾಗಿತ್ತು. ಮನೆಯ ಹಿರಿಯರಾದ ಮಳೆಯಪ್ಪಯ್ಯ ಈ ಬದಲಾವಣೆಯನ್ನು ಗಮನಿಸಿದ್ದರೂ ತಮ್ಮ ಅಲ್ಪಾಹಾರದ ನಿಯು ಬಿಟ್ಟಿರಲಿಲ್ಲ. ಅವರ ಪತ್ನಿ ಇದು ತನ್ನ ಮೇಲಿನ ಕೋಪವೆಂದೇ ಭಾವಿಸಿದ್ದರು.
ಸುಮಾರು ದಿನ ಮಳಿಯಪ್ಪಯ್ಯ ಪತ್ನಿಯ ಸಂಗಡ ಮಾತಾಡಿರಲಿಲ್ಲ. ಆಕೆ ದಿಟ್ಟಿ ಇಟ್ಟು ಅವರ ಮುಖವನ್ನು ನೋಡಿದರೂ ಇವರು ನಿಲ್ಲಪ್ತರಾಗಿರುತ್ತಿದ್ದರು.
ಹಿಂದಿನ ಸಂಚಿಕೆ: 10. ಹೊಸ ಬಂಡಿಗಳ ಆಗಮನ
‘ಇದರಿಂದ ಉತ್ತಮ ಫಲಿತಾಂಶ ದೊರೆಯಲಿ’ ಎಂಬುದೇ ಅವರ ಇದೆ ಯಾಗಿತ್ತು. ಅವರ ಪತ್ನಿ ನಿಧಾನವಾಗಿ ತಮ್ಮ ಪರಿಸ್ಥಿತಿಯನ್ನು ಅರಿಯಲು ಯತ್ನಿಸಿದ್ದರು. ‘ತಾವಿರುವುದು ಊರಿನ ಗೌಡ್ರು, ಗೊಂಚಿಕಾರು ಕಟ್ಟಿಸಿಕೊಟ್ಟ ಗುಡಿಸಿಲಿನಲ್ಲಿ. ಮಹಾ ಉದಾರಿಗಳಾದ ಗೌಡ್ರು ಎರಡು ವರ್ಷದಿಂದ ಪ್ರತಿದಿನ ಬೆಳಿಗ್ಗೆ ಒಂದು ತಂಬಿಗೆ ತುಂಬಾ ನೊರೆ ಹಾಲು ಕೊಡುತ್ತಾರೆ. ಅವರ ವರ್ತನೆಯಲ್ಲಿ ಎಳ್ಳಷ್ಟೂ ಬದಲಾವಣೆಯಾಗಿಲ್ಲ. ಎಂಥಾ ಗೊಟ್ಟು ಬಂದರೂ ನಮ್ಮನ್ನು ಕೈ ಹಿಡಿದು ಸಾಕುತ್ತಿದ್ದಾರೆ. ಇಂಥಾ ಊರಿನಲ್ಲಿ ನಾನು ಮಗನ ಮೇಲಿನ ವ್ಯಾಮೋಹದಿಂದ ದುಡುಕಿಬಿಟ್ಟೆ’ ಎಂದು ಕಂಬನಿದುಂಬಿದರು. ‘ತನ್ನ ವರ್ತನೆಯಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕು’ ಎಂದು ಆಕೆ ತೀರಾನಿಸಿದರು.
‘ಮನಸ್ಸಿನಂತೆ ಮಾದೇವ’ ಅನ್ನೋ ಗಾದೆಯಂತೆ ಮಳಿಯಪ್ಪಯ್ಯ ಮತ್ತು ಅವರ ಪತ್ನಿಯಲ್ಲಿ ಆದ ಬದಲಾವಣೆಯಿಂದ ಮನೆಯಲ್ಲಿ ಸೌಹಾರ್ದ ವಾತಾವರಣ ಮರುಕಳಿಸಿತ್ತು.
ಆದರೆ ನಾವೆಷ್ಟು ವರ್ಷ ಈ ಗುಡಿಸಲಲ್ಲಿ ವಾಸ ಮಾಡಬೇಕು. ನಮ್ಮದೇ ಆದ ಒಂದು ಮನೆ ಕಟ್ಟಬಾರದೆ ಎಂಬ ಆಲೋಚನೆ ಮಳಿಯಪ್ಪಯ್ಯ ಮತ್ತು ಮರುಳಯ್ಯ ಇಬ್ಬರಲ್ಲೂ ಉಂಟಾಗಿತ್ತು. ‘ಇದೇ ಕಂತೆಭಿಕ್ಷ ಮುಂದುವರಿಸಿಕೊಂಡು ಮನೆ ಕಟ್ಟಬೇಕು. ಗೌಡ್ರು ಗೊಂಚಿಕಾರರು ಯಜಮಾನಪ್ಪಾರೂ ನಕ್ಕುಬಿಟ್ಟಾರು, ಈ ವಿಷ್ಯ ಕೇಳಿ’ ಅಂದುಕೊಂಡರೂ ಇಂಥದೊಂದು ವಿಚಾರ ತಲೆ ಹೊಕ್ಕ ಮೇಲೆ ಅದರ ಬಗ್ಗೇನೇ ಆಲೋಚನೆಗಳು ಬರುತ್ತವೆ.
ಹಿಂದಿನ ಸಂಚಿಕೆ: 11. ಬಂಡಿ ತಂದ ಬದಲಾವಣೆ
ಒಂದು ದಿನ ಗೌಡ್ರು, ಗೊಂಚಿಕಾರು ಮತ್ತು ಯಜಮಾನ ಕಾಮಜ್ವರು ಗೌಡ್ರ ಅಟ್ ಮಾಳಿಗೆಯಲ್ಲಿ ಉಳಿತಿದ್ದ ಸಮಯವನ್ನು ನೋಡಿಕೊಂಡು ಮಳಿಯಪ್ಪಯ್ಯ ಮತ್ತು ಮರುಳಯ್ಯ ಇಬ್ಬರೂ ಅಲ್ಲಿಗೆ ನಡೆದರು. “ಏನು ಗುರುಗಳು ಇಬ್ಬರೇ ಬಂದ್ರಿ ಇನ್ನೊಬ್ಬರೆಲ್ಲಿ” ಗೌಡ್ರು ಇವರನ್ನು ವಿಚಾರಿಸಿದರು.
“ನಮ್ಮಿಬ್ಬರದೂ ಒಂದು ವಿಚಾರ ಇತ್ತು. ಅದನ್ನು ನಿಮ್ಮತ್ರ ಪ್ರಸ್ತಾಪ ಮಾಡಾನಾ ಅಂತ ಬಂದ್ವಿ” ಮಳಿಯಪ್ಪಯ್ಯ ತಿಳಿಸಿ ಅವರ ಸನಿಹದಲ್ಲಿ ಕುಳಿತು “ನಾವು ನಿಮೂರಿಗೆ ಪರದೇಶಿಗಳಂಗೆ ಬಂದ್ವಿ, ಬಂದೋರಿಗೆ ಯಜಮಾನಪ್ಪೋರು ಮನೆಗೆ ಕರಕಂಡ್ ಬಂದು ಬಿಸಿ ನೀರಾಗೆ ಸ್ನಾನ ಮಾಡ್ಲಿ ಬಿಸಿ ಬಿಸಿ ರಾಗಿಮುದ್ದೆ ಪಡವಲಕಾಯಿ ಸೀಪದಾರ್ಥ ಊಟ ಮಾಡಿಸಿದ್ದರು. ಅವರು ಮತ್ತು ನೀವೆಲ್ಲಾ ಮುತುವರ್ಜಿ ವಹಿಸಿ ವಾಸ ಮಾಡಾಕೊಂದು ಮನೆ ಕಟ್ಟಿಕೊಟ್ರಿ.
ಜಮಿನು ಮಾಡಿಕೊಟ್ರಿ, ಅಷ್ಟೇ ಅಲ್ಲದೆ ನಮ್ಮನ್ನೆಲ್ಲಾ ಅನ್ನ ಕೊಟ್ ಸಾಕ್ತಾ ಇದೀರಾ” ಹೇಳಿಕೊಳ್ತಾ ಇದ್ದ ಅವರನ್ನ ಮಧ್ಯದಲ್ಲಿ ತಡೆದು “ಇದೆಲ್ಲಾ ನಿಮಿಗೆ ಬಾಳದೊಡ್‌ದಾಗಿ ಕಂಡೈತೆ. ಕಷ್ಟದಾಗಿರೋರಿಗೆ ಒಂದೀಟು ಆಸ್ಕರ ಆಗೋದು ಮನುಷ್ಯರ ಕರ್ತವ್ಯ. ಅದನ್ನೇ ನಾವು ಮಾಡಿದ್ದೀವಿ. ಅದೆಲ್ಲಾ ಈವಾಗ್ಯಾಕೆ ನೆನಿಸ್ಕಳೀರಿ” ಯಜಮಾನ ಕಾಮಜ್ಜ ನಗುಮುಖದಿಂದ ಪ್ರತಿಕ್ರಿಯಿಸಿದರು. “ನೀವು ದೊಡ್ ಮನಿಸ್ಯರು ನಿಮಿಗೆ ಅಂಗೇ ಕಾಣಿಸೋದು. ದಿಕ್ಕು ದೆಸೆ ಇಲ್ಲದೋರಿಗೆ ಅತ್ರಕರೆದು ಆಶ್ರಯಕೊಟ್ರೆಲ್ಲಾ ಅದೇನು ಸಾಮಾನ್ಯ ವಿಷ್ಯಾನೇ” ಮಳಿಯಪ್ಪಯ್ಯ ಗಂಭೀರವಾಗಿ ಮಾತಾಡಿದರು.
ಹಿಂದಿನ ಸಂಚಿಕೆ: 12. ಜಂಗಮಯ್ಯರ ಆಗಮನ
“ಸರಿ ಈವಾಗಿಂದೇನ್ ವಿಚಾರ ಅದನ್ನೇಳಿ” ಗೌಡರು ಕೇಳಿದರು. ಆವಾತಗ ಮಳಿಯಪ್ಪಯ್ಯ ಸಂಕೋಚ ಪಟ್ಟುಕೊಂಡು “ನಮ್ಮಿಬ್ಬರಿಗೆ ನಿಮ್ಮೂರಿಗೆ ಬಂದ ಮೇಲೆ ಒಂದೊಂದು ಗಂಡು ಮಗು ಆಗಿದೆ. ನಮ್ಮ ಶಿವಲಿಂಗಯ್ಯನಿಗೆ ಇನ್ನೂ ಮಕ್ಕಳಾಗಲಿಲ್ಲ. ಈಗ ಜನ ಜಾಸ್ತಿ ಆಗಿದೀವಿ. ಮನೆ ಇಕ್ಕಟ್ಟಾಗಿದೆ. ಮನೇನೇ ಇಲ್ಲಿದ್ದಾಗ ಅದೇ ಸಾಕಾಗಿತ್ತು. ಅದ್ರೆ ನಾನೂ ಮರುಳಯ್ಯ ಒಂದೊಂದ್ ಮನೆ ಕಟ್ಟಿಕೊಳ್ಳೋಣಾಂತಿದ್ದೀವಿ. ಅದಕ್ಕೆ ನಿಮ್ಮ ಆಶೀಗ್ವಾದ ಆಗಬೇಕು” ಎಂದು ನಿಧಾನವಾಗಿ ಪ್ರಸ್ತಾಪಿಸಿದರು. ಇದನ್ನು ಕೇಳುತ್ತಲೇ ಗೌಡ್ರು, ಗೊಂಚಿಕಾರು ಮತ್ತು ಕಾಮಚ್ಚಾರು ಮುಖ ಮುಖ ನೋಡಿಕೊಂಡರು. ಸ್ವಲ್ಪ ಹೊತ್ತು ಎಲ್ಲರೂ ಮೌನಿಗಳಾದರು.
ಅನಂತರ ಕಾಮಜ್ಜರು ಮಾತಾಡಿ “ಆರು ಜನ ದೊಡ್ಡಾಳು, ಅದರಾಗೂ ಮುವ್ವಾರು ಹೆಣಮಕ್ಕು ಮತ್ತೆ ಎಲ್ಡ್ ಕೂಸುಗಳು ಒಂದು ಗುಡ್ಡಾಗಿರೋಕೆ ನಿಜಕ್ಕೂ ಇಕ್ಕಟ್ಟಾಗುತ್ತೆ. ಇವಾಗ್ಲೆ ಬ್ಯಾರೆ ಬ್ಯಾರೆ ಇದ್ದು ಬಿಡಾನಾ ಯೋಚೆ ಮಾಡೀದೀರ. ಸರಿ ಮನೆ ಅಂದ್ರೆ ಸುಮ್ಮೆ ಆಗಲ್ಲ, ಕಲ್ಲು ಮಣ್ಣು ಮರ ಮುಟ್ಟು
ಎಲ್ಲಾ ಬೇಕಾಗುತ್ತೆ, ತಕ್ಷಣ ಬೇಕು ಅಂದ್ರೆ ಯಾವೂ ಸಿಗಲ್ಲ”, ಕೈ ತಿರುವುತ್ತಾ ಹೇಳಿದರು.
ಹಿಂದಿನ ಸಂಚಿಕೆ: 13. ಮತ್ತೆರಡು ಬಂಡಿ ತಂದರು
ಯಜಮಾನ ಕಾಮಜ್ವರ ಅಭಿಪ್ರಾಯವನ್ನು ಅನುಮೋದಿಸುತ್ತಾ ಗೊಂಚಿಕಾರು “ಗುಡ್ಡು ಮನೆಯಾದ್ರೆ ಬ್ಯಾಗ್ಗೆಗೆ ಬೆಂಕಿ ಭಯ ಆದ್ರೂ ನಮ್ಮೂರಾಗೆ ನೂರು ಗುಡ್ಲು ಐದಾವೆ. ಇನ್ನಾ ಮಾಳಿಗೆ ಮನೆ ಅಂದ್ರೆ ಕಂಭ, ತೊಲೆ, ಜಂತೆ ಮಾಳ್ವಂತ, ಬಾಗಿಲ ಕದಕ್ಕೆ ಹಲಗೆ, ಜಾಲು ಮತ್ತೆ ಪಡಸಾಲೆಗೆ ಸುಟ್ಟ ಕಲ್ಲೆ ಬಂಡೆ ಇಂಥಾವೆಲ್ಲಾ ಬೇಕಾಗ್ತವೆ. ನೀವು ಎಂಥಾ ಮನೆ ಕಟ್ಟಿಸ್ಟೇಕು ಅಂದ್ಯಂಡಿದಿರಾ” ಮಳಿಯಪ್ಪಯ್ಯರನ್ನು ಕೇಳಿದರು.
ಇವರ ಮಾತು ಕೇಳಿ ಮಳಿಯಪ್ಪಯ್ಯ ಮತ್ತು ಮರುಳಯ್ಯ ಅಧೀರರಾದರು ಮತ್ತು ಯೋಚನಾಗ್ರಸ್ತರಾದರು. “ನೀವು ಇವರ ಮಾತ್ ಕೇಳಿ ಹೆದರಿಕೋ ಬ್ಯಾಡ್ರಿ, ಹೆದರಿಕ್ಕೆಂಡ್ರೆ ನೀವು ಏನೂ ಮಾಡಾಕಾಗಲ್ಲ. ಇವರೇಳಿದ್ದೆಲ್ಲಾ ನಿಜಾನೆ. ಆದ್ರೆ ನಿಧಾನವಾಗಿ ಆಲೋಚನೆ ಮಾಡಬೇಕು”. “ಇವೊತ್ತು ಆರಂಭಮಾಡಿದರೆ ಮುಂದ್ದ ವರ್ಷಕ್ಕೆ ಕೈಗೂಡಬೌದು. ಯಾಕಂದ್ರೆ ಮಾಳಿಗೆ ಮನೆ ಕಟೀವಿ ಅಂದ್ಳಿ, ಒಣಗಿದ ಮರಮುಟ್ಟು ಇಲ್ಲ. ಯಾರಾನಾ ಪುಣ್ಯಾತ್ಮರು ಅವರ ಹೊಲ್ದಾಗಿರೋ ಬೇವಿನ ಮರಾನೋ ಇನ್ಯಾತ್ತೋ ಕೊಟ್ರೆ ಅದನ್ನ ಕಡಿದು ನೆಲಕ್ಕುರುಳಿಸಿದರೆ ಅದು ಒಣಗಾಕೆ ಒಂದೊಕ್ಸಿ ಬೇಕು.
ಆ ಮೇಲೆ ಅದನ್ನ ಕೊಯ್ಲಿ ಮುಟ್ಟು ಮಾಡಿಕಾಬೇಕು. ನಿಧಾನಕ್ಕೆ ಯೋಚನೆ ಮಾಡ್ರಿ” ಧೈಯ್ಯ ತುಂಬಲು ಗೌಡ್ರು ಮಾತಾಡಿದರು. “ಮದುವೆ ಮಾಡಿ ನೋಡು, ಮನೆಕಟ್ಟಿ ನೋಡು” ಅಮ್ಮ ಇದಕೆ ಗಾದೆ ಮಾತೇಳಿರೋದು. “ನಾವು ಈ ಊರಿಗೆ ಬಂದಾಗ ಎಳ್ಳು ದಿನದಾಗೆ ನಮಿಗೆ ವಾಸಕ್ಕೆ ಮನೆ ಕಟ್ಟಿಕೊಟ್ಟಿದ್ರು. ಎಷ್ಟು ಜನ ಸೇರಂಡು ತರಾತುರಿಯಾಗೆ ಕಟ್ಟಿಕೊಟ್ಟಿದ್ರು. ಆಗಿನ ಪರಿಸ್ಥಿತೀನೆ ಬ್ಯಾರೆ ಈಗಿನ ಪರಿಸ್ಥಿತೀನೇ ಬ್ಯಾರೆ. ಪಾಪ ಇವರು ನಮ್ಮ ಹಿತೈಷಿಗಳಾಗಿ ಹೇಳ್ತಾ ಇದಾರೆ”. ಅಂದುಕೊಂಡ ಮಳಿಯಪ್ಪಯ್ಯ”ಯಜಮಾನೆ ನಿಮ್ಮನ್ನ ಬಿಟ್ಟು ನಾವೇನೂ ಮಾಡಕಾಗದಿಲ್ಲ. ಇನ್ನೆರಡು ದಿನದಾಗೆ ನಮ್ಮ ತೀರಾನ ತಿಳಿಸ್ತೀನಿ” ಅಂದರು.
ಹಿಂದಿನ ಸಂಚಿಕೆ: 14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ
ಮಳೆಯಪ್ಪಯ್ಯರ ಮಾತಿಗೆ ಗೌಡ್ರು ಗೊಂಚಿಕಾರು ಮತ್ತು ಯಜಮಾನ ಕಾಮಜ್ಜ ಹುಸಿನಗೆ ನಕ್ಕರು. “ಅಶ್ರೀ ಕುಂಟ ‘ಆಕಾಶಕ್ಕೆ ನೆಗೀತೀನಿ’ ಅಂಬಂಗಾತು ನಿಮ್ಮ ಯೋಚನೆ, ಕುಂಟಪ್ಪ ಆಕಾಶಕ್ಕೆ ನೆಗೀದಿದ್ರೂ ಯೋಚೆ ಮಾಡದೇನೂ ತಪ್ಪಲ್ಲ. ಇನ್ನೆರಡು ದಿನದಾಗೆ ನೀವೇನು ಆಲೋಚನೆ ಮಾಡ್ತೀರಾ. ಮಾಳಿಗೆ ಮನೆ ಕಟ್ಟೋದು ಬ್ಯಾಡ ಗುಡ್ಲುಮನೆ ಕಟ್‌ತೀವಿ ಅನ್ನಬೌದು. ಎರಡು ದಿನ ಯಾಕೆ ಇವೋತ್ತೇ ತೀರಾನ ಮಾಡಿಬಿಡಿ” ಗೌಡ್ರು ಜಂಗಮಯ್ಯರಿಗೆ ಧೈಯ್ಯ ತುಂಬುವ ಮಾತಾಡಿದರು.
ಯಜಮಾನು “ಸರಿಬಿಡಪ್ಪ” ಎಂದು ಗೌಡರ ಮಾತನ್ನು ಅನುಮೋದಿಸಿದರು. “ನಿಮಿಗೆ ಇಂಥಾ ತೀರಾನ ಮಾಡಕಾಗದಿಲ್ಲ. ಯಾಕಂದ್ರೆ ಐದಾರು ವರ್ಷದಿಂದ ಅತಂತ್ರದ ಬಾಳ್ವೆ ಮಾಡೀದಿರ. ಎಂಟುಜನ ಒಂದು ಸಣ್ಣ ಗುಡಿಸಲಾಗೆ ಇರೋದು ಸ್ವಲ್ಪ ಕಷ್ಟಾನೆ. ನೀವು ಇಂಗೆ ಮಾಡಬೌದು. ಮಾಳಿಗೆ ಮನೆ ದಾಯಕ್ಕೆ ತರ ತೋಡಿ ಕಲ್ಲು ಕೆಸರು ಮಣ್ಣಾಗೆ ಗ್ವಾಡೆ ಕಟ್ಟಾನ. ಅದೆಷ್ಟು ದಿನ ಹಿಡಿಯುತ್ತೋ.
ಅಷ್ಟೊತ್ತಿಗೆ ಮರಮುಟ್ಟು ಜತೆಯಾದ್ರೆ ಮಾಳಿಗೆ ಮನೆ ಕಟ್ರಿ, ಆಗಲಿಲ್ಲ, ಹುಲ್ಲು ಹೊದಿದ್ದೆಂಡು ಗುಡ್ಡು ಮನೆ ಮಾಡಿಕೆ. ಮುಂದೆ ಮರಮುಟ್ಟು ಜತೆಯಾದಾಗ ಮಾಳಿಗೆ ಮನೆ ಮಾಡಿಕೋಬೌದು” ಯಜಮಾನ ಕಾಮಜ್ಜ ನಿಧಾನವಾಗಿ ತಮ್ಮ ಅನುಭವವನ್ನು ಹಂಚಿಕೊಂಡರು. “ಇಗಳಪ್ಪಾ ಆಯ್ಯನ ಮಾತು ಅಂದ್ರೆ ಅನುಭವದ ಮಾತು. ಸ್ವಾಮೇರೇ ನೀವು ಇಂಗೇ ಮಾಡ್ಕಳಿ” ಎಂದು ಗೌಡರು ದನಿಗೂಡಿಸಿದರು.
ಹಿಂದಿನ ಸಂಚಿಕೆ ಓದಿ: 15.ಹಿರೇ ಬಡಗಿ ಗೌನಹಳ್ಳಿಗೆ ಬಂದರು
ಈ ಆಲೋಚನೆ ಮಳಿಯಪ್ಪಯ್ಯ ಮತ್ತು ಮರುಳಯ್ಯ ಇಬ್ಬರಿಗೂ ಸಮಂಜಸ ಮತ್ತು ಸೂಕ್ತವಾಗಿ ಕಂಡಿತ್ತು. ಇಬ್ಬರ ಮುಖಗಳೂ ಅರಳಿದವು. “ನಿಮ್ಮೊಷ್ಟು ಅನುಭವ ನಮಗಿಲ್ಲ. ನೀವೇಳಿದಂಗೆ ಆಗಲಿ”. ಮಳಿಯಪ್ಪಯ್ಯ ಒಪ್ಪಿಗೆ ಸೂಚಿಸಿದರು.
“ಜಾಗ ನೋಡೀದಿರಾ ನೋಡಿದ್ರೆ ಎದ್ದೇಳಿ ಹೋಗಿ ಗುರಾ ಮಾಡಾನ” ಗೊಂಚಿಕಾರು ಸಲಹೆ ನೀಡಿದರು. “ಏನ್ ಸ್ವಾಮಿ ಗುರು ಮಾಡಿ ಬರಾನೇ” ಗೌಡ್ರ ದನಿಗೂಡಿಸಿದರು. ಜಂಗಮಯ್ಯರಿಬ್ಬರೂ ಮುಖ ಮುಖ ನೋಡಿ-ಕೊಂಡು ಮೇಲೆದ್ದರು. “ಐನೋರೇ ಇಪ್ಪತ್ತು ಮುವ್ವತ್ತು ಗೂಟ ಬೇಕಾಗ್ತವೆ ಅವನ್ನು ಕೆತ್ತಿಗಂಡು ರ್ಬ ಹೋಗಿ. ಆಯಾ ಗುರು ಮಾಡಿ ಬರಾನ” ಕಾಮಜ್ಜ ಸಲಹೆ ನೀಡಿದರು. ಗೌಡರ ಮನೆಯಿಂದ ಒಂದು ಮಚ್ಚು ಮತ್ತೊಂದು ಕೈಬಾಳಿ ಇಸಗಂಡು ಜಂಗಮಯ್ಯರು ಗೂಟಗಳನ್ನು ತಯಾರಿಸಲು ತೆರಳಿದರು.
ಇಬ್ಬರೂ ಅತ್ತ ತೆರಳಿದ ಬಳಿಕ ಮೂರು ಜನ ಹಿರಿಯರು ಐಗಳ ಗೃಹ ನಿರ್ಮಾಣ ಕುರಿತು ಚರ್ಚೆ ಮಾಡಿದರು “ಎಂಟೆಂಟು ಕಂಬದಾವೆರಡು ಮಾಳಿಗೆ ಮನೇನೇ ಕಟ್ಟಾನ: ಮುಟ್ಟು ಜೋಡಿಸಬೇಕು. ನಮ್ಮ ಬಣವೆಗೆ ಆಟ್ಟಿನಡಿಗಾಕಿರೋವೆರಡು ತೊಲೆ ಸಿಗತಾವೆ. ಇನ್ನ ಹದಿನಾರು ಶಂಭಬೇಕಾಗ್ತವೆ. ಇವಕ್ಕೆ ಬೇವಿನ ಮರನೇ ಆಗಬೇಕು” ಯಜಮಾನ ಕಾಮಜ್ಜ ಮಾತಾಡಿದರು. ನಮ್ಮೊಲದಾಗೆರಡು ಬಾಗೆಮರ ಐದಾವೆ. ಬಾಗೆ ಮರದ ಮುಟ್ಟು ವಾಸದ ಮನಿಗಾಕಕೆ ಬರುತ್ತಾ?” ಗೊಂಚಿಕಾರರು ಪ್ರಸ್ತಾಪಿಸಿದರು. “ವಾಸದ ಮನೀಗೆ ಬಾಗೇಮರದ ಮುಟ್ಟು ಹಾಕಬಾರು. ಇನ್ನಾ ದೇವಸ್ಥಾನಕ್ಕೆ ಬಳಸಬೌದು” ಗೌಡ್ರು ತಮ್ಮ ಅಭಿಪ್ರಾಯ ತಿಳಿಸಿ “ನಮ್ಮುಡುಗರನ್ನು ಕೇಳಬೇಕು. ಅಡವೇಗೆಲ್ಲಾನ ಕಂಭಕ್ಕೆ ಬರೋ ಅಂಥ ಬೇವಿನಗಿಡ ಮರ ಐದಾವೇನೋ”. ಯೋಚನೆಯನ್ನು ತಿಳಿಸಿದರು.
ಹಿಂದಿನ ಸಂಚಿಕೆ ಓದಿ: 16. ಬಡಗಿ ಕಂಡ ಗೌನಳ್ಳಿ
“ಊರಾಗ್ಯಾರನಾ ಮರ ಕೊಟ್ಟಾರೇನೋ ಕೇಳಬೇಕು” ಅಂದು ಗೌಡರು “ನೆಂಟ್ರೆ ಹಗಲೂಟದೊತ್ತಾಗೈತೆ ಊಟ ಮಾಡಾನ ಬರಿ ಅಣ್ಣಯ್ಯ ಹಗಲೂಟ ಉಂಬಾದಿಲ್ಲ” ಎಂದು ಗೊಂಚಿಕಾರರನ್ನು ಗೌಡರು ಹಗಲೂಟಕ್ಕೆ ಕ ರೆದರು. ನೆಂಟ್ರೆ ಹೊಟ್ಟೆ ಗಡುಸಾಗೈತೆ. ಊಟ ಬ್ಯಾಡ ಒಂದೀಸು ಮಜ್ಜಿಗೆ ಕೊಡಾಕೇಳಿ” ಗೊಂಚಿಕಾರರು ತಿಳಿಸಿದರು. “ನನಿಗೂ ಊಟ ಬ್ಯಾಡ. ಅಮ್ಮಾ ಮೂರು ಲೋಟ ಮಜ್ಜಿಗೆ ಕೊಡ್ರಮ್ಮ” ಹೆಣ್ಣು ಮಕ್ಕಳಿಗೆ ತಿಳಿಸಿ ಮಜ್ಜಿಗೆ ತರಿಸಿ ಮೂರುಜನ ಕುಡಿದು ಅಟ್ ಮಾಳಿಗೆಯಲ್ಲೇ ಅಡ್ಡಾದರು.
ಮಾಳಿಯಪ್ಪಯ್ಯ ಮರುಳಯ್ಯ ಕೈಯಲ್ಲಿ ಮಚ್ಚು ಕೈ ಬಾಕ್ಸಿ ಹಿಡಿದು ಗೂಟಗಳನ್ನು ಜೋಡಿಸಲು ಅವರ ಮನೆ ಬಳಿಯಿಂದ ಹಳ್ಳದ ಕಡೆ ತೆರಳುತ್ತಿರುವಾಗ ಶಿವಲಿಂಗಯ್ಯ ನೋಡಿ “ಅಣ್ಣಾ ನಾನೂ ಬಲ್ಲೆ” ಎಂದು ಕೇಳಿದ. “ಯಾರ ಮನೆಯಗನಾ ಒಂದು ಮಚ್ಚು ಇಸಗಂಡ್ ಬಾ ಹಳ್ಳದ್ದಂಡೇಗಿದ್ದೀವಿ” ಮರುಳಯ್ಯ ತಿಳಿಸುತ್ತಲೇ ಮುಂದೆ ಹೋಗಿದ್ದರು. ಇವು ಯಾಕೆ ಹೋಗ್ತಾ ಇದಾರೆ ಏನು ತರಾಕ ಹೋಗ್ತಾ ಇದಾರೆ” ಒಂದೂ ತಿಳಿಯದು.
ಆದರೂ ಹತ್ತಿರದ ಒಂದು ಮನೆಗೋಗಿ “ಮಚ್ಚು ಇದ್ರೆ ಕೊಡ್ರಮ್ಮ ಆ ಮೇಲೆ ತಂದು ಕೊಡ್ತೀನಿ” ಎಂದು ಕೇಳಿದ. ಮನೆಯಾಕೆ “ಯಾತಕೆ ಸ್ವಾಮಿ, ಏನು ಕಡೀಬೇಕು?” ವಿಚಾರಿಸಿದ್ದಳು. ಈತನ ಬಳಿ ಉತ್ತರ ಇರಲಿಲ್ಲ. “ಯಾಕೊ ಗೊತ್ತಿಲ್ಲ. ನಮ್ಮಣ್ಣ ಹೇಳಿದ್ದು” ಅಂದು ಆಕೆ ಕೊಟ್ಟ ಮಚ್ಚು ಹಿಡಿದು ಈತನೂ ಹಳ್ಳದ ಬಳಿಗೆ ನಡೆದ. ಅಲ್ಲಿ ಹಳ್ಳದ ದಂಡೆಯಲ್ಲಿ ರಟ್ಟೆ ಗಾತ್ರದ ಗಳುಗಳನ್ನು ಹುಡುಕಿ ಗುದ್ದುಮೊಳದ ಉದ್ದಕ್ಕೆ ತುಂಡರಿಸುತ್ತಿದ್ದ ಅಣ್ಣಂದಿರನ್ನು ಕಂಡು “ಇವನ್ನ ಕೂಡಾಕ್ತಿನಿ” ಅನ್ನುತ್ತಾ ಒಂದು ಕಡೆ ಕೂಡಿ ಹಾಕಲಾರಂಭಿಸಿದ. “ನಾವು ಹುಡಿಕೊಂಡು ಹಳ್ಳದ ದಂಡೆಗುಂಟಾ ಮುಂದುಕ್ಕೋಗ್ತಿವಿ, ನೀನು ಅವನ್ನೆಲ್ಲಾ ಮನೆ ಹತ್ರ ತಗಂಡೋಗು” ಮಳಿಯಪ್ಪಯ್ಯ ತಿಳಿಸಿ ಮುಂದೆ ಹೋಗಿದ್ದರು.
ಹಿಂದಿನ ಸಂಚಿಕೆ ಓದಿ: 17. ಕೊಳ್ಳಿ ಇಕ್ಕಿದರು
ಮಳಿಯಪ್ಪಯ್ಯ, ಮರುಳಯ್ಯ ತಲಾ ಒಂದೊಂದು ಹೊರೆ ಗೂಟಗಳನ್ನು ಹೊತ್ತು, ಹೊತ್ತು ಮಾರುದ್ದ ಇರುವಾಗ ಮನೆಗೆ ಬಂದರು. ಗೂಟಗಳನ್ನು ಕೆತ್ತಿ ಚೂಪು ಮಾಡಲು ಶಿವಲಿಂಗಯ್ಯನಿಗೆ ಸೂಚಿಸದಿದ್ದರಿಂದ ಆತ ಅವುಗಳನ್ನು ತಂದು ಒತ್ತಟ್ಟಿಗೆ ಸುರಿದಿದ್ದ. ಇಬ್ಬರೂ ಹಿಂತಿರುಗಿದ ಬಳಿಕ ನೀರು ಕುಡಿದು ದಣಿವಾರಿಸಿಕೊಂಡು ಗೂಟಗಳ ಒಂದು ತುದಿಯನ್ನು ಚೂಪು ಮಾಡ ತೆ-ಡಗಿದರು. ಶಿವಲಿಂಗಯ್ಯ ಏನೊಂದೂ ವಿಚಾರಿಸದೆ ತಾನೂ ಗೂಟಗಳ ಒಂದು ತುದಿಯನ್ನು ಮೊನಚು ಮಾಡತೊಡಗಿದ. ಮನೆಯ ಹೆಣ್ಣು ಮಕ್ಕಳಿಗೂ ಗೊತ್ತಿರಲಿಲ್ಲ. ಸಂಜೆಯ ಹೊತ್ತಿಗೆ ಮುವ್ವತ್ತು ಗೂಟಗಳನ್ನು ಸಿದ್ಧಪಡಿಸಿದ್ದರು.
ಒಂದು ಸಣ್ಣ ನಿದ್ದೆ ಮಾಡಿ ಎದ್ದ ಗೌಡ್ರು, ಗೊಂಚಿಕಾರರು ಮತ್ತು ಯಜಮಾನ ಕಾಮಜ್ಜರು ಐಗಳ ಮನೆಕಡೆ ನಡೆದರು. ಅಲ್ಲಿ ಮೂವರು ಅಯ್ಯಗಳು ಗೂಟಗಳನ್ನು ಸಿದ್ಧಪಡಿಸುತ್ತಿದ್ದರು. ಒಂದೆರಡು ಗೂಟಗಳನ್ನು ಕೈಲಿಡಿದು ನೋಡಿದ ಯಜಮಾನರುಗಳು “ಎಲ್ಲಿ ಸಿಕ್ಕಿದವಪ್ಪಾ, ಒಳ್ಳೇ ಗೂಟಾನೇ ಸಿಕ್ಕಿದಾವೆ” ಗೌಡ್ರು ವಿಚಾರಿಸಿದರು. “ಇಲ್ಲೇ ಹಳ್ಳದ ಗಡ್ಡೆಗೆ ಸಿಕ್ಕಿದವು ಗೌಡ್ರೆ” ಮಳಿಯಪ್ಪಯ್ಯ ತಿಳಿಸಿದರು.
ಹಿಂದಿನ ಸಂಚಿಕೆ ಓದಿ: 18. ಜಂಗಮಯ್ಯರಿಗೆ ಪುತ್ರೋತ್ಸವ
“ಜಾಗ ಎಲ್ಲಿ ಅಮ್ಮ ನೋಡೀದೀರಾ? ಅಥ ಬೆಳಿಗ್ಗೆ ನೋಡಬೇಕಾ?” ಗೊಂಚಿಕಾರು ವಿಚಾರಿಸಿದರು. ಮರುಳಯ್ಯ ನಿಮ್ಮನೆ ಎದುರಿಗಿನ ಬಯಲಿನಾಗೆ ಕಟ್ಟಾನ ಅಲ್ತಾನೆ. ನಾನು ಊರ ವರಿಚ್ಚಿಗೆ ಕೆನ್ನಳ್ಳಿ ದಿಕ್ಕಿಗೆ ತರ ಹಾಕಾನಾ ಅಂದ್ಯಂಡಿದ್ದೀನಿ” ಮಳಿಯಪ್ಪಯ್ಯ ಸಂಕೋಚದಿಂದ ತಮ್ಮ ನಿರ್ಧಾರವನ್ನು ಹೊರಗೆಡವಿದರು. ಯಜಮಾನರುಗಳು ಮುಖ ಮುಖ ನೋಡಿಕೊಂಡು “ಓಹೋ ನೀವಾಗ್ಲೆ ಜಾಗಾನೂ ಗುರು ಮಾಡ್ಕಂಡ್ ಇದೀರಿ”. ಯಜಮಾನ ಕಾಮಜ್ಜ ಆಶ್ಚರ್ಯ ವ್ಯಕ್ತಪಡಿಸಿದರು.
ಶಿವಲಿಂಗಯ್ಯನಿಗೆ ಅರ್ಧಕ್ಕರ್ಧ ವಿಷಯ ತಿಳಿದು ಸಖೇದಾಶ್ಚರವಾಗಿತ್ತು. ಮಳೆಯಪ್ಪಯ್ಯ ಮತ್ತು ಮರುಳಯ್ಯರ ಮುಖಗಳನ್ನು ತದೇಕ ದೃಷ್ಟಿಯಿಂದ ಗಮನಿಸಿದ. ‘ಎಲಾ ಇವರ ಬ್ಯಾರೆ ಮನೆ ಕಟ್ಟಾಕೆ ಹೊಳ್ಳಿದಾರೆ ನನಿಗೊಂದೀಟೂ ಇವರ ಗುಟ್ಟು ಗೊತ್ತಾಗಲಿಲ್ಲ” ಎಂದು ನೊಂದುಕೊಂಡ. ಹೆಣ್ಣುಮಕ್ಕಳಿಗೆ ಏನೊಂದೂ ಗೊತ್ತಾಗಲಿಲ್ಲ, ಹೊತ್ತು ಮುಳುಗೋದಕ್ಕೆ ಮುಂಚೆ ಹೆಣ್ಣಮಕ್ಕಳು ಮನೆ ಮುಂದೆ ಚಾಪೆ ಹಾಸಿ ಕೂಡಲು ಯಜಮಾನುಗಳನ್ನು ಕರೆದರು.
ಹಿಂದಿನ ಸಂಚಿಕೆ ಓದಿ: 19. ಊರ ಬಾವಿ ತೋಡಿದರು
“ಕೂಡ್ರದೇನೂ ಬ್ಯಾಡ ನಾಳೆ ಬೆಳಿಗ್ಗೆ ಗೂಟ ಹಿಡಕಂಡ್ ಬರಿ ಜಾಗ ಅಳತೆ ಮಾಡಿ ಗೂಟ ಬಡಿಯಾನ” ಎಂದು ತಿಳಿಸಿ ಯಜಮಾನುಗಳು ಹೊರಟು ಶಿವಲಿಂಗಯ್ಯ ನೀರು ತರುವ ನೆಪದಲ್ಲಿ ಊರ ಬಾವಿ ದಿಕ್ಕಿಗೆ ಹೊರಟು ನಿಂತು ಹೆಂಡತಿಗೆ ಹಿಂದೆ ಬರಲು ಸನ್ನೆ ಮಾಡಿದ. ಸ್ವಲ್ಪ ಸಮಯದ ಬಳಿಕ ಆಕೆಯೂ ಊರ ಬಾವಿಯ ದಿಕ್ಕಿಗೆ ನಡೆದಳು. ಗಂಡ ಹೆಂಡತಿ ಜತೆಯಾಗುತ್ತಲೇ ಶಿವಲಿಂಗಯ್ಯ ತನ್ನ ಬೇಗುದಿಯನ್ನು ಹೊರಹಾಕಿದ. “ಆಯ್ತು, ಇವರಿಗೆ ಮಕ್ಕಳಾಗಿದಾರೆ. ಆದ್ರೆ ಬ್ಯಾರೆ ಮನೆ ಕಟ್ಟಬೇಕು ಅ ತೀರಾನ ಮಾಡಿದೀವಿ ಅಮ್ಮ ಒಂದ್ ಮಾತ ಹೇಳೋದ್ ಬ್ಯಾಡ್ಡೆ? ಎಂಥ ಅಣ್ಣ ತಮ್ಮಗಳು, ಬ್ಯಾರೆ ಮನೆ ಮಾಡಿ ಇನ್ಯಾವ ಸುಖ ಪಡ್ತಾರೆ.
ಕಂತೆಭಿಕ್ಷ ಮಾಡೋದ್ ತಪ್ಪಿಲ್ಲ. ಈವಾಗಿರೋ ಮನೆ ಇಕ್ಕಟ್ಟಾಗೈತೆ. ಬ್ಯಾರೆ ಮನೆ ಕಟ್ಟಬೇಕು ಅತ್ತ ಯೋಚನೆ ಮಾಡಿದೀವಿ ಅಮ್ರ ತಿಳಿಸಬೌದಿತ್ತಲ್ಲಾ” ಎಂದು ಶಿವಲಿಂಗಯ್ಯ ಹಲುಬಿದ. ಅವನ ಪತ್ನಿ “ಶಿವ ನಮಿಗೊಂದ್ ಮಗನ್ನೋ ಮಗಳೊ ಕೊಟ್ಟಿಲ್ಲ. ಅವು ಬ್ಯಾರೆ ಮನೆ ಕಟ್ಟಿಗಂಡ್ರೆ ನಾವಿಬ್ರೆ ಈ ಮನಿಯಾಗಿರಬೇಕು. ಇರಾನ ಬಿಡ್ರಿ, ಶಿವ ಹೆಂಗೆಂಗೆ ನಡುಸ್ತಾನೋ ಅಂಗೆಂಗ ಇರಾ” ಎಂದು ಆತನ ಪತ್ನಿ ದನಿಗೂಡಿಸಿದಳು. ಇಬ್ಬರೂ ಬಾವಿ ಇಳಿದು ಗಡಿಗೆಗಳಲ್ಲಿ ನೀರು ತುಂಬಿಸಿಕೊಂಡು ಮನೆಯತ್ತ ನಡೆದರು.
ಮಳಿಯಪ್ಪಯ್ಯ, ಮರುಳಯ್ಯ ಊರಿನ ಯಜಮಾನರುಗಳ ಹಿಂದೆ ಹೋಗಿದ್ದರು. ಅವರ ಪತ್ನಿಯರು ನೀರಿನ ಗಡಿಗೆಗಳನ್ನು ಹೊತ್ತು ಬಂದ ಶಿವಲಿಂಗಯ್ಯ ಮತ್ತು ಅವನ ಪತ್ನಿಯರ ಮುಖಗಳನ್ನು ಗಮನಿಸಿದರು. ಇವರಿಬ್ಬರೂ ನಿಲ್ಲಪ್ತರಂಗೆ ಕಂಡು ಬಂದಿದ್ದರು.
ಗೌಡರ ಮನೆಮುಟ್ಟಿ ಹಿಂತಿರುಗಿದ ಮಳಿಯಪ್ಪಯ್ಯ ಮತ್ತು ಮರುಳಯ್ಯ “ನೀರು ತೋಡ್ರಮ್ಮಾ” ಅನ್ನುತ್ತಾ ಮನೆ ಬಾಗಿಲಿಗೆ ಬಂದರು. ಸ್ನಾನ ಶಿವಪೂಜೆಗಳನ್ನು ಮಾಡಿ ಜೋಳಿಗೆ ಹಿಡಿದು ಭಿಕ್ಷಕ್ಕೆ ಹೊರಟರು, ತಲಾ ಎರಡೆರಡು ಮನೆಗಳನ್ನು ಮುಟ್ಟಿ ಭಕ್ಷ್ಯಗಳನ್ನು ತಂದು ಮೊದಲು ಗಂಡಸರು ಊಟ ಮಾಡುತ್ತಿದ್ದರು. ಊಟಕ್ಕೆ ಕುಳಿತ ಬಳಿಕ ಲಿಂಗಕ್ಕೆ ನೈವೇದ್ಯ ಮಾಡಿ ಮೊದಲ ತುತ್ತು ನುಂಗುತ್ತಲೇ ಕೆಮ್ಮಿ ನೀರು ಕುಡಿದ ಮಳೆಯಪ್ಪಯ್ಯ “ಏನಾದ್ರೂ ವಿಷಯ ಬಾಯಿಗೆ ಬಂದಿದ್ದನ್ನ ಹೇಳದಿದ್ರೆ ಇಂಗೆ ಗಂಟಾಗೆ ಸಿಕ್ಕೆಂಡ್ ಬಿಡುತ್ತೆ. ‘ಶಿವಲಿಂಗಣ್ಣಾ, ನಿನಿಗೆ ಮೊದ್ದೇ ಹೇಳಬೇಕಾಗಿತ್ತು.
ಹಿಂದಿನ ಸಂಚಿಕೆ ಓದಿ: 20. ಕಾಮಜ್ಜ ಒಡ್ಡು ಕಟ್ಟಿದ
ಈಗ ಈ ಮನಿಯಾಗೆ ಆರುಜನ ದೊಡ್ಡರು ಎರಡು ಕೂಸು ಸೇರಿ ಎಂಟು ಜನ ಆಗೈದೀವಿ. ಮಕ್ಕು ಬೆಳೆದು ದೊಡ್ಡರಾಗ್ತಾರೆ. ಆವಾಗ ಈ ಮನೆ ಇಕ್ಕಟ್ಟು ಅಮ್ಮ ಗೊತ್ತಾಗುತ್ತೆ. ಅದ್ರೆ ಮುಂದಾದ್ರೂ ಒಂದೊಂದು ಮನೆ ಕಟ್ಟಿಸ್ ಬೇಕು ಅಮ್ಮ ಯೋಚನೆ ಬಂದೇ ಬರುತ್ತೆ ಅದ್ಯೆ ಈವಾಗಿಂದ್ದೇ ಮನೆ ಕಟ್ಟೋಕೆ ಆರಂಭಿಸಿದ್ರೆ ಮುಂದೊಸಕ್ಕೆ ಪೂರಾ ಕಳ್ಕೊಬೌದು. ಅಂತ ಆಲೋಚನೆ ಮಾಡಿ ನಾನು ಮರುಳಯ್ಯ ಊರಿನ ಯಜಮಾನತ್ರ ಪ್ರಸ್ತಾಪ ಮಾಡಿದಿವಿ. ಅವರು ಬಾಳಾ ದೊಡ್ ಮನುಸ್ತು, ‘ಕಟ್ಗಳ್ಳಿ ಅದಕ್ಯಾರು ಬ್ಯಾಡಯ್ತಾರೆ. ಆಯದಂಗೆ ಅಳೆದು ಗುಪ್ತಾಕ್ ಬೇಕು. ಒಂದಿಪ್ಪತ್ ಮೂವ್ವತ್ ಗೂಟ ಜೋಡಿಸ್ಕಳಿ’ ಅಂದ್ರು. ಈಗ ಎಲ್ಲರೂ ಸೇರಿ ಗೂಟ ಮಾಡ್ಕಂಡ್ ಇದೀವಿ. ನಾಳೆ ಬೆಳಿಗ್ಗೆ ಅಳೆದು ಗುರು ಮಾಡಬೇಕು. ಎಲ್ಲರೂ ಸೇರಿ ಗುರು ಮಾಡಿಕೆಂಬನಾ” ನಿಧಾನವಾಗಿ ತಿಳಿಸಿದರು.
ಶಿವಲಿಂಗಯ್ಯ ಹರ ಅನ್ನಲಿಲ್ಲ ಶಿವ ಅನ್ನಲಿಲ್ಲ. ಮಳಿಯಪ್ಪಯ್ಯರ ಪತ್ನಿ “ಜಾಗ ಎಲ್ಲಿ ನೋಡಿದೀರಾ” ಕೇಳಿದರು. “ಮರುಳಯ್ಯ ಗೌಡ್ರು ಗೊಂಚಿಗಾರ ಮನೆ ನಡುವೆ ಬಯಲಿನಾಗೆ ಮನೆ ಕಟ್ಟುತ್ತಾನೆ. ನಾನು ಊರ ಹೊರಿಚ್ಚಿಗೆ ಕೆನ್ನಳ್ಳಿ ದಿಕ್ಕಿಗೆ ಜಾಗ ನೋಡಿದ್ದೀನಿ”. ಮಳಿಯಪ್ಪಯ್ಯ ತಿಳಿಸಿದರು. “ಅಯ್ಯೋ ಶಿವನೆ ಅಲ್ಲಿ ಮನೆ ಕಟ್ಟಿದರೆ ಊರು ಬಾವಿಗೆ ದೂರಾಗುತ್ತಲ್ಲ. ಯಾರು ನೀರು ಹೊರಬೇಕು” ಆ ತಾಯಿ ತಮ್ಮ ಆತಂಕ ವ್ಯಕ್ತಪಡಿಸಿದರು. “ಮನೆ ಕಟ್ಟಾಕೆ ಇನ್ನಾ ಎಲ್ಲೋರಾ ಆಗುತ್ತೆ ನೋಡಾನ” ಮಳಿಯಪ್ಪಯ್ಯ ತಾತ್ಕಾಲಿಕ ಸಮಾಧಾನ ಹೇಳಿದರು.
ಮಾರನೇ ದಿನ ದೊಡ್ಡುಂಬೊತ್ತಿಗೆ ಜಂಗಮಯ್ಯರು ಗೂಟಗಳ ಕಟ್ಟುಗಳನ್ನು ಹೊತ್ತು ಗೌಡರ ಮನೆ ಎದುರಿಗಿನ ಬಯಲಲ್ಲಿ ಇಳಿಸಿ ಅಲ್ಲಿದ್ದ ಗಿಡಗಳನ್ನು ಕಿತ್ತು ಸ್ವಚ್ಚ ಗೊಳಿಸುತ್ತಿದ್ದರು ಮಳಿಯಪ್ಪಯ್ಯ ಗೌಡ್ರು, ಗೊಂಚಿಕಾರು ಮತ್ತು ಯಜಮಾನ ಕಾಮಜ್ಜರನ್ನು ಕರೆದು ಬಂದರು. ಸ್ವಲ್ಪ ಹೊತ್ತಿನಲ್ಲೇ ಮೂವರು ಕೈಲಿ ಅಣಿಯಗ್ಗಗಳನ್ನು ಹಿಡಿದು ಬಂದರು. “ಏನಪ್ಪಾ ಗುರುವ, ಯಾವ ಆಯದಾಗೆ ಮನೆ ಕಟ್ಟುತೀರಾ?” ವಿಚಾರಿಸಿದ ಗೌಡರು “ನಾವೆಲ್ಲಾ ವೃಷಭಾಯ ಮತ್ತೆ ಧ್ವಜಾಯದ ಮನೇನೇ ಕಟ್ಟಂಡಿರಾದು” ಎಂದು ಜಂಗಮಯ್ಯರಿಗೆ ತಿಳಿಸಿದರು.
“ನಮ್ ಕಡೇಲೆಲ್ಲಾ ಧ್ವಜಾಯದ ಮನೆಗಳೇ ಕಟ್ಟಿರೋದು. ಅಂಗೇ ಕಟ್ಟಾನ. ಧ್ವಜಾಯದ ಆಯಾನೇ ಗುರು ಹಾಕ್ಟಿಡಿ” ಯಜಮಾನರಲ್ಲಿ ಕೋರಿಕೊಂಡರು. ಮೊಳದುದ್ದದ ಒಂದು ಕೋಲನ್ನು ಕತ್ತರಿಸಿಕೊಂಡು ದೇವ ಮೂಲೆಯಿಂದ ಪಡುವ ಮತ್ತು ಟೆಂಕಲ ದಿಕ್ಕಿಗೆ ಅಳೆದರು. “ಮೂಡಾ ಪಡುವ ಹನ್ನೊಂದು ಗಜ. ಟೆಂಕ ಬಡಗಾ ಎಂಟು ಗಜ ಮ್ಯಾಲೊಂದು ಅಡಿ” ಇದೇ ಏನಪ್ಪಾ ನಿಮ್ ಧ್ವಜಾಯ” ಗೌಡರು ಮಳಿಯಪ್ಪಯ್ಯರನ್ನು ಖಚಿತಪಡಿಸಲು ಕೇಳಿದರು. “ಮೊಳದ ಕೋಲಿನಾಗೆ ಇಪ್ಪತ್ತೆಳು ಕೋಲು ಅಳಿಯಪ್ಪ. ಅದಾದ ಮ್ಯಾಲೆ ಟೆಂಕ, ಬಡಗಾ ಹಲ್ನಾರು ಕೋಲು ಅಳಿ. ಮ್ಯಾಲೊಂದು ಅಡಿ ಸೇರಿಸಿ ಗೂಟ ಬಡೀರಿ” ಎಂದು ಗೌಡರೇ ಅಲ್ಲಿ ಸೇರಿದ್ದ ಊರಿನ ಕೆಲ ಯುವಕರನ್ನು ಅಳೆಯಲು ಪ್ರಚೋದಿಸಿದ್ದರು.
ಹಿಂದಿನ ಸಂಚಿಕೆ ಓದಿ: 21. ದುಷ್ಟನಿಂದ ದೂರ ಹೋದವರು
ಮಳಿಯಪ್ಪಯ್ಯ ಮತ್ತು ಮರುಳಯ್ಯ ವಿಸ್ಮಯರಾಗಿ ನೋಡನೋಡುತ್ತಲೇ ಅಣಿಯಗ್ಗಗಳನ್ನು ಗೂಟಗಳಿಗೆ ಸುತ್ತರಿಸಿ ಅಡ್ಡಡ್ಡಲಾಗಿ ಎಳೆದು ಬಿಗಿಯಾಗಿ ಕಟ್ಟಿದರು. ಮಳಿಯಪ್ಪಯ್ಯ ಮತ್ತು ಮರುಳಯ್ಯ ಅಳತೆ ಕೋಲಿನಿಂದ ಉದ್ದ, ಅಗಲ ಮತ್ತು ಅಡ್ಡಲಾಗಿ ಅಳೆದು ಸಮಾಧಾನ ಪಟ್ಟುಕೊಂಡರು, ಗೌಡ್ರು, ಗೊಂಚಿಕಾರರು ಅಲ್ಲಿದ್ದ ಯುವಕರನ್ನು “ನಾಲಕ್ಕು ಮೂಲೆಗೆ ನಾಲಕ್ಕು. ಮಧ್ಯಕೊಂದು, ಆಮೇಲೆ ಒಂದೊಂದು ಜಾಬಿಗೆ ಒಂದೊಂದು ಗೂಟ ಬಡೀರಿ” ಎಂದು ತಿಳಿಸುತ್ತಲೇ ಅವರು ಉದ್ದ, ಅಗಲದ ಹಗ್ಗಗಳನೆತ್ತಿ ಗೂಟ ಬಡಿದರು.
“ಆತೇ ಗುರುಗಳೆ, ನಡೀರಿ ನಿಮ್ ಜಾಗದತ್ರ ಹೋಗೋಣ” ಎಂದು ಗೌಡರು ಜಂಗಮಯ್ಯರನ್ನು ಹೊರಡಿಸಲು ಸೂಚನೆ ನಿಡಿದರು. ಅವರು ಮರು ಮಾತನಾಡದೆ ಗೂಟಗಳನ್ನು ಹೊತ್ತು ಊರಿನ ಬಡಗಲ ದಿಕ್ಕಿಗೆ ಹೊರಟರು. ಅಲ್ಲಿಯೂ ಕೆಲ ಗಿಡಗಂಟೆಗಳಿದ್ದುವು. ಊರಿನ ಯುವಕರು ತಲಾ ಒಂದು ಎರಡರಂತೆ ಕಿತ್ತು ಹಾಕಿದರು. ಮಳಿಯಪ್ಪಯ್ಯ ತಲೆ ಮೇಲಕ್ಕೆ ಬಂದಿದ್ದ ಸೂರದೇವನನ್ನು ಸ್ಮರಿಸಿ ದೇವಮೂಲೆಯನ್ನು ಗುರುತು ಮಾಡಿ ಅಲ್ಲೊಂದು ಗೂಟವನ್ನು ನಿಲ್ಲಿಸಿದರು. “ಗೂಟದಿಂದ ಪಡುವಲಕ್ಕೆ ಹನ್ನೊಂದು ಗಜ ಅಳೆದು ಅಲ್ಲೊಂದು ಗೂಟವನ್ನು ಅರ್ಧಕ್ಕೆ ಬಡಿಯಿರಿ.
ಆ ಗೂಟದಿಂದ ಟೆಂಕಲಿಗೆ ಎಂಟುಗಜ ಮತ್ತೊಂದು ಅಡಿ ಸೇರಿಸಿ ಅಲ್ಲೊಂದು ಗೂಟವನ್ನು ಅರ್ಧಕ್ಕೆ ಬಡಿಯಿರಿ” ಎಂದು ಮೂರು ಮೂಲೆಗಳನ್ನು ಗುರುತು ಮಾಡಿದರು. “ತಡೀರಪ್ಪಾ ಅಳತೆಕೋಲಿನಾಗೆ ಉದ್ದ ಅಗಲ ಅಳೀರಿ. ಆಮೇಲೆ ಅಡ್ಡಡ್ಡ ಹಗ್ಗ ಹಿಡೀರಿ. ಈಗ ನಾಕನೇ ಮೂಲೆ ಸಿಗುತ್ತೆ” ಎಂದು ಗೌಡರು ಯುವಕರಿಗೆ ಸೂಚಿಸಿದರು. ಅಳತೆ ಕೋಲಿನಿಂದ ಅಳೆಯುತ್ತಲೇ ನಾಲ್ಕು ಮೂಲೆಗಳು ಮತ್ತು ನಿವೇಶನದ ಮಧ್ಯದ ಭಾಗವೂ ಸಿಕ್ಕಿತ್ತು.
ಮೊದಲ ನಿವೇಶನಕ್ಕೆ ಗೂಟಗಳನ್ನು ಬಡಿದಂತೆ ಇಲ್ಲಿಯೂ ಗೂಟಗಳನ್ನು ಬಡಿದು ಅವುಗಳ ಹೊರಭಾಗದಲ್ಲಿ ತರ ತೋಡಲು ಗುರುತು ಮಾಡಿದರು.
