
CHITRADURGA NEWS | 20 FEBRUARY 2026
ಚಿತ್ರದುರ್ಗ: ಹಣ ಸಂಪಾದನೆಗಾಗಿ ಯುಪಿಎಸ್ಸಿ(UPSC) ಆಯ್ಕೆ ಮಾಡುವವರು ಈ ಕ್ಷೇತ್ರಕ್ಕೆ ಸೂಕ್ತರಾಗುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.

ಇದನ್ನೂ ಓದಿ: ಸಹಾಯ ಧನ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ
ನಗರದ ವಾಲ್ಮೀಕಿ ಭವನದಲ್ಲಿ ದಿ ನೇರ್ಲಿಗೆ ಫೌಂಡೇಶನ್ ವತಿಯಿಂದ ಯುಪಿಎಸ್‌ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ಮಾರ್ಗದರ್ಶನ ನೀಡುವ ʼಬೆಳಕುʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
IAS ಅಧಿಕಾರ ಎನ್ನುವುದು ಕೇವಲ ಉದ್ಯೋಗವಲ್ಲ, ಅದು ಒಂದು ಮಹತ್ತರ ಜವಾಬ್ದಾರಿ. ಸಮಾಜದ ಸಮಸ್ಯೆಗಳ ಬಗ್ಗೆ ಸಂವೇದನೆ, ಜವಾಬ್ದಾರಿತನ ಮತ್ತು ಸೇವಾ ಭಾವನೆ ಇರುವವರು ಮಾತ್ರ ಈ ದಾರಿಗೆ ಬರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ವಿದ್ಯಾರ್ಥಿಗಳಿಗೆ UPSC ತಯಾರಿಯ ಪ್ರತಿ ಹಂತವನ್ನು ವಿವರವಾಗಿ ತಿಳಿಸಿದರು. ತಯಾರಿಗಾಗಿ ಬಳಸಬೇಕಾದ ಪುಸ್ತಕಗಳು, ಅಧ್ಯಯನಕ್ಕೆ ಉಪಯುಕ್ತವಾದ ವೆಬ್‌ಸೈಟ್‌ಗಳು, ಓದಬೇಕಾದ ಪ್ರಮುಖ ವಿಷಯಗಳು ಸೇರಿದಂತೆ ತಮ್ಮ ಸಿದ್ಧತೆಯ ಅನುಭವವನ್ನು ಹಂಚಿಕೊಂಡರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 20 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಸಹಾಯಕ ಆಯುಕ್ತ ಡಾ. ವೆಂಕಟೇಶ್ ನಾಯಕ್ ಹಾಗೂ ಕಾಂತರಾಜ್ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಶಿಸ್ತಿನ ಮಹತ್ವ ಹಾಗೂ ನಿರಂತರ ಪರಿಶ್ರಮದ ಅಗತ್ಯವನ್ನು ವಿವರಿಸಿದರು.
ದಿ ನೇರ್ಲಿಗೆ ಫೌಂಡೇಶನ್ ಸಂಸ್ಥಾಪಕಿ ಮಮತಾ ನೇರ್ಲಿಗೆ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗಾಗಿ ಶೀಘ್ರದಲ್ಲೇ “Prep Nation” ಎಂಬ AI ಆಧಾರಿತ ಉಚಿತ ಮಾಕ್ ಟೆಸ್ಟ್ ಪ್ಲಾಟ್‌ಫಾರ್ಮ್ ಆರಂಭಿಸಲಾಗುವುದು.
ದೇಶದಾದ್ಯಂತ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವ ವಿದ್ಯಾರ್ಥಿಗಳು ಈ ವೇದಿಕೆಯ ಮೂಲಕ ನೈಜ ಸಮಯದ ಮಾಕ್ ಪರೀಕ್ಷೆಗಳನ್ನು ಉಚಿತವಾಗಿ ಅಭ್ಯಾಸ ಮಾಡಬಹುದಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕಿರಿಯ ವಯಸ್ಸಿಗೆ ನ್ಯಾಯಾಧೀಶರಾದ ಸೋನು, ಮಧು
ಹಿರಿಯೂರು ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರಮೋದ್ ಹಾಗೂ ಸ್ವಾಯತ್ತ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಕರಿಯಪ್ಪಮಾಳಿಗೆ ಮಾತನಾಡಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
