
CHITRADURGA NEWS | 20 FEBRUARY 2026
ಚಿತ್ರದುರ್ಗ: ಅತ್ಯಂತ ಕಿರಿಯ ವಯಸ್ಸಿಗೆ ನ್ಯಾಯಾಧೀಶರಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಇಬ್ಬರು ಆಯ್ಕೆಯಾಗಿದ್ದಾರೆ.
ಗುಡ್ಡದರಂಗವ್ವನಹಳ್ಳಿ ಮೂಲದ ಯುವತಿ ವಕೀಲಿಕೆಯಲ್ಲಿ ತೊಡಗಿಸಿಕೊಂಡಿದ್ದ ಸೋನು ಹಾಗೂ ವಡ್ಡರಸಿದ್ದವ್ವನಹಳ್ಳಿಯ ಯುವಕ ಮಧು ಈ ಸಾಧನೆ ಮಾಡಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಇದನ್ನೂ ಓದಿ: ನಿಮ್ಮ ಬೈಕ್ ಕಳ್ಳತನವಾಗಿದೆಯೇ ಹಾಗಿದ್ದರೆ ಈ ಸುದ್ದಿ ಓದಿ..
ನ್ಯಾಯಾಂಗ ಇಲಾಖೆ ನಡೆಸಿದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ನಗರದ ಎರಡು ಕಾನೂನು ಕಾಲೇಜಿನ ಈ ಇಬ್ಬರು ಆಯ್ಕೆಯಾಗಿದ್ದು, ಇಬ್ಬರ ವಯಸ್ಸು 29 ವರ್ಷ.
ಚಿತ್ರದುರ್ಗ ತಾಲೂಕು ವಡ್ಡರಸಿದ್ದವ್ವನಹಳ್ಳಿಯ ಟಿ.ಮಧು 36ನೇ ರ್ಯಾಂಕ್ ಹಾಗೂ ಗುಡ್ಡದರಂಗವ್ವನಹಳ್ಳಿಯ ಬಿ.ಸೋನು 69ನೇ ರ್ಯಾಂಕ್ ಪಡೆದು ನ್ಯಾಯಾಧೀರಾಗುತ್ತಿದ್ದಾರೆ.
ಇದನ್ನೂ ಓದಿ: ನಾಯಕನಹಟ್ಟಿ ಜಾತ್ರೆ | ರಾಜಕೀಯ ಮತ್ತು ವೈಯಕ್ತಿಕ ಪ್ರಚಾರದ ಬ್ಯಾನರ್‍ಗಳಿಗೆ ಅವಕಾಶವಿಲ್ಲ | ADC ಕುಮಾರಸ್ವಾಮಿ
ಕನ್ನಡ ಮಾಧ್ಯಮದಲ್ಲೇ ಅಧ್ಯಯನ ಮಾಡಿರುವ ಮಧು, ಉನ್ನತ ಸಾಧನೆ ಮಾಡಬೇಕು ಎಂಬ ಹಂಬಲದೊಂದಿಗೆ ಮುನ್ನಡೆದಿದ್ದು, ಸರಸ್ವತಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಅಧ್ಯಯನ ಮುಗಿಸಿದ ನಂತರ ಮೂರನೇ ಪ್ರಯತ್ನದಲ್ಲಿ ನ್ಯಾಯಾಂಗ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಎಲ್ಲಿಯೂ ಕೋಚಿಂಗ್ ಹೋಗಿಲ್ಲ. ನ್ಯಾಯಾಧೀಆರ ಮಾರ್ಗದರ್ಶನ, ಆನ್‌ಲೈನ್‌ನಲ್ಲಿ ಸಿಗುವ ಮಾಹಿತಿಗಳನ್ನು ಹೆಕ್ಕಿ ಸ್ವಯಂ ಅಧ್ಯಯನದ ಮೂಲಕ ತಯಾರಿ ಮಾಡಿಕೊಂಡಿದ್ದೆ. ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಕ್ಕಿರುವುದು ಸಂತಸ ತಂದಿದೆ.
| ಬಿ.ಸೋನು.
ಕಾನೂನು ಪದವಿ ಓದುವಾಗಲೇ ಇಂಗ್ಲಿಷ್ ಕಲಿತು ಅಂತಿಮ ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್‌ನಲ್ಲಿ ಪಾಸಾಗಿದ್ದರು. ನ್ಯಾಯಾಂಗ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್ ಎರಡೂ ಭಾಷೆಯಲ್ಲೂ ಬರೆದಿದ್ದಾರೆ.
ಇದನ್ನೂ ಓದಿ: ಅಕ್ಕಿ ನೀರಿಗೆ ಕಪ್ಪು ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಏನಾಗುತ್ತದೆ ಗೊತ್ತಾ?
ಮೊದಲ ಬಾರಿ ಪರೀಕ್ಷೆಗೆ ಪ್ರಯತ್ನ ಮಾಡಿದಾಗ ಪ್ರಿಲಿಮ್ಸ್, ಮೈನ್ಸ್ ಆಗಿದ್ದರೂ ವೈಒ ಸೆಲೆಕ್ಟ್ ಆಗಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಪ್ರಿಲಿಮ್ಸ್ ಬರೆದಿದ್ದರೂ ಮೈನ್ಸ್ ಬರೆಯುವಾಗ ಚಿಕ್ಕಪ್ಪನ ಅಗಲಿಕೆಯಿಂದ ಪರೀಕ್ಷೆ ಎದುರಿಸಲಾಗಿರಲಿಲ್ಲ. ಈಗ ಮೂರನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ. ಟಿ.ಮಧು ಸದ್ಯ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಸಹಾಯಕ ಕಾನೂನು ನೆರವು ಅಭಿರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಗರದ ವಿ.ಪಿ.ಬಡಾವಣೆಯಲ್ಲಿ ನೆಲೆಸಿರುವ ಬಿ.ಸೋನು ಮೊದಲ ಪ್ರಯತ್ನದಲ್ಲೇ ನ್ಯಾಯಾಂಗ ಪರೀಕ್ಷೆಯಲ್ಲಿ 69ನೇ ರ‍್ಯಾಂಕ್ ಗಳಿಸಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ರಾಜ್ಯ ಬಜೆಟ್ | ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಮೀಸಲಿಡುವಂತೆ DCM ಗೆ ಮನವಿ
ದಾವಣಗೆರೆಯಲ್ಲಿ ಬಿಬಿಎಂ, ಬೆಂಗಳೂರು ವಿವಿಯಲ್ಲಿ ಎಂಬಿಎ ಪದವಿ, ಚಿತ್ರದುರ್ಗದ ಎಸ್‌ಜೆಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದು, ಕಳೆದ ಎರಡೂವರೆ ವರ್ಷದಿಂದ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನ್ಯಾಯಾಲಯದಲ್ಲಿ ಕಲಾಪಗಳ ವೀಕ್ಷಣೆ, ಹಿರಿಯ ನ್ಯಾಯವಾದಿಗಳ ಸಲಹೆ, ಆನ್‌ಲೈನ್ ಬಳಸಿಕೊಂಡು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಕೇಸ್‌ಗಳ ಅಧ್ಯಯನ ಮಾಡಿ ತಯಾರಿ ಮಾಡಿಕೊಂಡಿದ್ದೆ. ತೇರ್ಗಡೆ ಆಗುವ ಭರವಸೆ ಇತ್ತು.
| ಟಿ.ಮಧು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
