
CHITRADURGA NEWS | 20 FEBRUARY 2026
ಚಿತ್ರದುರ್ಗ: ಕಳೆದ ಐದಾರು ವರ್ಷಗಳಿಂದ ಚಿತ್ರದುರ್ಗ ಕೊಟೆ ಪೊಲೀಸ್ ಠಾಣೆ ಪೊಲೀಸರ ವಶದಲ್ಲಿರುವ 30 ಮೋಟಾರ್ ಸೈಕಲ್‍ಗಳ ವಾರಸುದಾರರ ಪತ್ತೆ ಮಾಡಿ ವಿಲೇವಾರಿ ಮಾಡಲು ಉದ್ದೇಶಿಸಿದ್ದು, ಬೈಕ್ ಕಳೆದುಕೊಂಡಿರುವ ಸಾರ್ವಜನಿಕರು, ಠಾಣೆಯ ಆವರಣದಲ್ಲಿರುವ ಮೋಟಾರ್ ಬೈಕ್‍ಗಳನ್ನು ಗುರುತಿಸಿ, ದಾಖಲೆಗಳನ್ನು ಹಾಜರುಪಡಿಸುವಂತೆ ಕೋಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಆಕಾಶವಾಣಿಯಲ್ಲಿ ಅರೆಕಾಲಿಕ ವರದಿಗಾರರ ಹುದ್ದೆ | ಅರ್ಜಿ ಅಹ್ವಾನ

ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಸುಮಾರು ಐದಾರು ವರ್ಷಗಳಿಂದ ಹೀರೋಹೋಂಡಾ, ಬಜಾಜ್, ಹೀರೋ, ಹೋಂಡಾ ಆಕ್ಟೀವಾ, ಟಿ.ವಿ.ಎಸ್ ಹಾಗೂ ಇತರೆ ಕಂಪನಿಗಳ ವಾರಸುದಾರರು ಪತ್ತೆಯಾಗದೇ ಇರುವ 30 ಮೋಟಾರ್ ಸೈಕಲ್‍ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಈ ಬೈಕ್‍ಗಳನ್ನು ನಿಯಮಾನುಸಾರ ವಿಲೇವಾರಿ ಮಾಡುವಂತೆ ಚಿತ್ರದುರ್ಗದ 2ನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯವು ಆದೇಶ ನೀಡಿರುತ್ತಾರೆ.
ನಿಯಮಾನುಸಾರ ವಿಲೇವಾರಿ ಮಾಡಲು ಕಾಲಮಿತಿ ಇರುವುದರಿಂದ, ಮೋಟಾರು ಬೈಕ್‍ಗಳನ್ನು ಕಳೆದುಕೊಂಡಿರುವ ಸಾರ್ವಜನಿಕರು, ವಾರಸುದಾರರು ಕೋಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ, ಠಾಣೆಯ ಆವರಣದಲ್ಲಿರುವ ಬೈಕ್‍ಗಳನ್ನು ಗುರುತಿಸಿ, 10 ದಿನಗಳ ಒಳಗಾಗಿ ದಾಖಲಾತಿಗಳನ್ನು ಹಾಜರುಪಡಿಸಿದಲ್ಲಿ, ನಿಯಮಾನುಸಾರ ಸಂಬಂಧಿಸಿದ ವಾರಸುದಾರರಿಗೆ ಬೈಕ್ ಅನ್ನು ಬಿಟ್ಟುಕೊಡಲಾಗುವುದು.
ಇದನ್ನೂ ಓದಿ: ಜಿಲ್ಲಾ ಬಂಜಾರ(ಲಂಬಾಣಿ) ಸಂಘದ ಪದಾಧಿಕಾರಿಗಳ ಆಯ್ಕೆ | ನಾಗೇಂದ್ರ ನಾಯ್ಕ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ
ಒಂದು ವೇಳೆ ಬೈಕ್‍ಗಳನ್ನು ಕಳೆದುಕೊಂಡಿರುವ ಸಾರ್ವಜನಿಕರು, ವಾರಸುದಾರರು ಯಾರೂ ಸಹ 10 ದಿನಗಳ ಒಳಗಾಗಿ ದಾಖಲೆಗಳನ್ನು ಹಾಜರುಪಡಿಸದೇ ಇದ್ದಲ್ಲಿ, ಅಂತಹ ಬೈಕ್‍ಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಬೆಲೆ ನಿಗದಿಮಾಡಿಸಿಕೊಂಡು, ಸಾರ್ವಜನಿಕ ಹರಾಜು ಪ್ರಕ್ರಿಯೆ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೋಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
