CHITRADURGA NEWS | 19 FEBRUARY 2026
ಚಿತ್ರದುರ್ಗ: ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನಾಗೇಂದ್ರ ನಾಯ್ಕ್ ಅವರನ್ನು ಪುನರಾಯ್ಕೆ ಮಾಡಲಾಯಿತು.
ಇದನ್ನೂ ಓದಿ: ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆಯ ಸೂಚನೆ
ಗೌರವಾಧ್ಯಕ್ಷರಾಗಿ ಜಿ.ರಾಜಾನಾಯ್ಕ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ನಾಯ್ಕ್, ಉಪಾಧ್ಯಕ್ಷರಾಗಿ ಮಾಧವ್ ನಾಯ್ಕ್, ಡಾ.ಚಂದ್ರಾನಾಯ್ಕ್, ಡಾ.ಗೋಪಾಲ್ ನಾಯ್ಕ್ ಅವರನ್ನು ಮುಂದುವರೆಸಲಾಯಿತು.
ನೂತನ ಉಪಾಧ್ಯಕ್ಷರಾಗಿ ಕೃಷ್ಣಾನಾಯ್ಕ್, ಜಿಲ್ಲಾ ಕಾರ್ಯದರ್ಶಿಯಾಗಿ ಪ್ರಕಾಶ್ ರಾಮಾನಾಯ್ಕ್, ಸಂಘಟನಾ ಕಾರ್ಯದರ್ಶಿ ಸುರೇಶ್ ನಾಯ್ಕ್, ಖಜಾಂಚಿ ಹಾಲ್ಯಾನಾಯ್ಕ್, ಕಾನೂನು ಸಲಹೆಗಾರರಾಗಿ ಲೋಕೇಶ್ ನಾಯ್ಕ್ ಹಾಗೂ ಎಲ್ಲ ತಾಲೂಕುಗಳ ಪ್ರತಿನಿಧಗಳನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಆರ್.ನಾಗೇಂದ್ರ ನಾಯ್ಕ್, ಎಲ್ಲರ ಸಹಕಾರದಿಂದ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಸಮಾಜದ ಸಂಘಟನೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಫೆ.21 ರಂದು ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ದಿಶಾ ಸಭೆ
ಸಭೆಯಲ್ಲಿ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶ್ರಿ ನಂದಮಸಂದ್ ಸ್ವಾಮೀಜಿ, ಎಂಕಾ ಸಾದು, ಶಿವಾನಾಯ್ಕ್, ಹನುಮಾನಾಯ್ಕ್, ಮೋತಿರಾಮ್ ನಾಯ್ಕ, ಗೋವಿಂದ್ ನಾಯ್ಕ್, ಯಶವಂತ್ ನಾಯ್ಕ್, ವಿಷ್ಣುನಾಯ್ಕ್, ಅನಂತ್ ನಾಯ್ಕ್, ವೀಣಾ ಬಾಯಿ, ಲಕ್ಷ್ಮಿ ಬಾಯಿ, ರತ್ನಮ್ಮ ಮತ್ತಿತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
