
CHITRADURGA NEWS | 29 DECEMBER 2025
ಚಿತ್ರದುರ್ಗ: ನಗರದ ಜೆಸಿಆರ್ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಗಮಕ ಲಾಭಿಮಾನಿಗಳ ಸಂಘದ 40ನೇ ವಾರ್ಷಿಕೋತ್ಸವದ ಸ್ಮರಣೆಗಾಗಿ ನಡೆಸುತ್ತಿರುವ ಮಾಸಿಕ ಗಮಕದ 29ನೇ ಕಾರ್ಯಕ್ರಮ ನಡೆಯಿತು. ಗಮಕ ವಾಚನ – ವ್ಯಾಖ್ಯಾನಕ್ಕಾಗಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗಗಳನ್ನು ಆಯ್ಕೆ ಮಾಡಿಕೊಲ್ಳಲಾಗಿತ್ತು.
ಕಾವ್ಯ ವಾಚನ ಮಾಡಿದ ನಿವೃತ್ತ ಪ್ರಾಚಾರ್ಯ ವಿದ್ವಾನ್ ಅನಂತ ಕೃಷ್ಣಜೋಯಿಸರು, ಸಂಗೀತದ ವಿವಿಧ ರಾಗ, ಆಲಾಪಗಳ ಸಹಿತ ಸ್ಪಷ್ಟ ಪದೋಚ್ಚಾರ, ಉಚ್ಚಕಂಠ, ದ್ವನಿಯ ಏರಿಳಿತ, ಮೊದಲಾದ ಕೌಶಲ್ಯಗಳನ್ನು ಬಳಸಿಕೊಂಡು ಕಗ್ಗಗಳನ್ನು ವಾಚನ ಮಾಡಿದರು.

ಈ ಸುದ್ದಿ ಓದಿ: ರಾಮತೀರ್ಥಾಮೃತ ಕೃತಿ ಲೋಕಾರ್ಪಣೆ ಸಮಾರಂಭ | ಜನವರಿ 1
ಅಕ್ಕಿಯೊಳಗನ್ನವನು ಮೊದಲಾರು ಕಂಡವರು, ಪುಸ್ತಕದಿ ದೊರೆತರಿವು, ಹೊಟ್ಟೆಯೊಂದರ ರಗಳೆ , ಗ್ರೀಸಿನಾ ಕಬ್ಬ ಮೊದಲಾದ ಪದ್ಯಗಳನ್ನು ವಾಚಿಸಿದರು.
ವ್ಯಾಖ್ಯಾನಕಾರ ವಿದ್ವಾನ್ ಗಣಪತಿ ಭಟ್ ವಾಚನಕ್ಕೆ ಪ್ರಾಚೀನ , ಅರ್ವಾಚೀನ ಹಾಗೂ ಸಮಕಾಲಕನ ವಿದ್ಯಮಾನಗಳ ಮೆರಗು ಹಚ್ಚಿ ಪದ್ಯಗಳ ಜೀವ ದ್ರವ್ಯಕ್ಕೆ ವ್ಯತ್ಯಯವಾಗದಂತೆ ಕೇಳುಗರ ಅರಿವಿನ ವಿಸ್ತಾರ ಹೆಚ್ಚಾಗುವಂತೆ ವ್ಯಾಖ್ಯಾನ ಮಾಡಿದರು.
ಈ ಸುದ್ದಿ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 29 | ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಕಾರ್ಯಕ್ರಮ ಉದ್ಘಾಟಿಸಿದ ಬಸವೇಶ್ವರ ಪುನರ್ಜೋತಿ ಐ ಬ್ಯಾಂಕ್ ಅಧ್ಯಕ್ಷೆ ಗಾಯತ್ರಿ ಶಿವರಾಂ ಮಾತನಾಡಿ, ಗಮಕ ಕಲೆ ಮಾನವರ ರಸಭಾವಗಳನ್ನು ಉದ್ದೀಪಿಸುವ ಸಂಗೀತ ಪ್ರಕಾರವಾಗಿದೆ. ಇಲ್ಲಿ ವಿವಿಧ ರಾಗಗಳನ್ನು ಬಳಸಿಕೊಂಡು ಕಾವ್ಯದ ಅಂತಃಸತ್ವವನ್ನು ಕಲಾರಸಿಕರಿಗೆ ಫಲಕಾರಿಯಾಗಿ ಮುಟ್ಟಿಸುವ ಪ್ರಮುಖ ಸಾಧನವಾಗಿದೆ. ಚತುರ ಗಮಕಿಗಳು ಪ್ರಭಾವಶಾಲಿ ವಾಚನದಿಂದ, ಅಕ್ಷರಸ್ಥರನ್ನು ಮಾತ್ರವಲ್ಲದೆ, ನಿರಕ್ಷರಿಗಳನ್ನೂ ಕಾವ್ಯಪ್ರಯೋಗ ಪರಿಣತರನ್ನಾಗಿ ಮಾಡಲಾಗಿದೆ ಎಂದು ಬಣ್ಣಿಸಿದರು.
ಕೆ.ಆರ್.ರಮಾದೇವಿ ವೆಂಕಣ್ಣಾಚಾರ್ ಅಧ್ಯಕ್ಷತೆ ವಹಿಸಿದ್ದರು. ಗಾಯಕ ಗಂಗಾಧರ್ ಗಮಕ ಪ್ರಾರ್ಥನೆ ಮಾಡಿದರು. ಸಂಘದ ಕಾರ್ಯದರ್ಶಿ ವಿದ್ವಾನ್ ಮೀನಾಕ್ಷಿ ಭಟ್ ಸ್ವಾಗತಿಸಿದರು. ಸಂಸ್ಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಶಶಿಧರ ಶ್ಯಾನುಭೋಗ್ ಅತಿಥಿಗಳನ್ನು ಪರಿಚಯಿಸಿದರು. ನಿರ್ದೇಶಕಿ ಬಿ.ಎಲ್.ಉಮಾ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಅಧ್ಯಕ್ಷೆ ಉಪಾಧ್ಯಕ್ಷ ಶ್ರೀ ಅನಂತಕೃಷ್ಣ ವಂದಿಸಿದರು.
ಈ ಸುದ್ದಿ ಓದಿ: ಅಲ್ಯೂಮಿನಿಯಂ ಫಾಯಿಲ್‍ನಲ್ಲಿ ಪ್ಯಾಕ್ ಮಾಡಿದ ಫುಡ್ ತಿಂದರೆ ಏನಾಗುತ್ತದೆ ಗೊತ್ತಾ ?
ಜನವರಿ 25ಕ್ಕೆ ಮುಂದಿನ ಗಮಕ:
ಮುಂದಿನ ಮಾಸಿಕ ಕಾರ್ಯಕ್ರಮ ಜನವರಿ 25 ಭಾನುವಾರ ಸಂಜೆ 6 ಗಂಟೆಗೆ ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಪ್ರಾಂಗಣದಲ್ಲಿ ನಡೆಯಲಿದೆ. ಅಂದು ಗಮಕಿ ಚಂಪಕಾ ಶ್ರೀಧರ್ ಅವರ ವಾಚನಕ್ಕೆ ವಿದ್ವಾನ್ ಅಚ್ಯುತ ಅವಧಾನಿಯವರು ವ್ಯಾಖ್ಯಾನ ನೀಡುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
