CHITRADURGA NEWS | 29 DECEMBER 2025
ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ರಾಮಾತೀರ್ಥ ಆಶ್ರಮದ ಕುರಿತು ಸಾಕಷ್ಟು ಜನರಿಗೆ ಸರಿಯಾದ ಮಾಹಿತಿ ಇಲ್ಲ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಮಹತ್ವದ ಕೃತಿ ರಚಿಸಿದ್ದಾರೆ.
ರಾಮತೀರ್ಥಾಮೃತ ಹೆಸರಿನಲ್ಲಿ ಗುರುಗಳ ಕುರಿತು ಪುಸ್ತಕ ರಚಿಸಿದ್ದು, ಇದರ ಬಿಡುಗಡೆ ಸಮಾರಂಭ ಜನವರಿ ೧ ಗುರುವಾರ ಬೆಳಗ್ಗೆ ೧೨ ಗಂಟೆಗೆ ರಾಮತೀರ್ಥಾಶ್ರಮದಲ್ಲಿನಡೆಯಲಿದೆ.
ಇದನ್ನೂ ಓದಿ:
ಕಾರ್ಯಕ್ರಮವನ್ನು ಪ್ರಹ್ಲಾದ ಗುರುಗಳು ಉದ್ಘಾಟಿಸಲಿದ್ದು, ಕೃತಿಯನ್ನು ರಾಮಕೃಷ್ಣಾಶ್ರಮದ ಶ್ರೀ ಬ್ರಹ್ಮನಿಷ್ಠಾನಂದ ಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ.
ಜಲತಜ್ಞ ಡಾ.ಎನ್.ದೇವರಾಜ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡುವರು. ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯದರ್ಶಿಗಳಾದ ಸತ್ಯನಾರಾಯಣರಾವ್, ಬೆಂಗಳೂರು ಕಾಮಧೇನು ಪುಸ್ತಕ ಭವನದ ಎಸ್.ಎಂ.ದೀಪಕ್, ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್, ಎಸ್.ನಾರಾಯಣಪ್ಪ, ಸಿ.ಯು.ಗಿರೀಶ್ ಮತ್ತಿತರರು ಉಪಸ್ಥಿತರಿರುವರು.
ರಾಮತೀರ್ಥಾಶ್ರಮ ಕುರಿತ ಸಣ್ಣ ಪರಿಚಯ:
ಇಲ್ಲಿ ನಡೆಯುವುದು ಗುಪ್ತಭಕ್ತಿ. ಶಾಂತವೀರರು ತಾವು ಗಳಿಸಿದ ಎಲ್ಲ ಸಿದ್ಧಿಗಳನ್ನು ರಾಮತೀರ್ಥರಿಗೆ ಧಾರೆ ಎರೆಯುವೆ ಎಂದಾಗ ನಿನ್ನ ಪಾದವೊಂದೇ ಸಾಕು ಎಂದು ನಯವಾಗಿ ನಿರಾಕರಿಸಿ ಗುರುವಿನ ಮಹಿಮೆ ಜಗತ್ತಿಗೆ ಸಾರಿದ ರಾಜಯೋಗಿ ರಾಮತೀರ್ಥರು.
ಇದನ್ನೂ ಓದಿ:
ಇದು ಜಾತಿ ಪೀಠವಲ್ಲ, ಯೋಗ ಪೀಠ, ಜಾತ್ಯಾತೀತ ಮನೋಭಾವದೊಂದಿಗೆ ಆಶ್ರಮ ನಡೆಯುತ್ತಿದೆ. ಸರ್ಕಾರದ ಕೃಪಾಶೀರ್ವಾದಕ್ಕೆ ಕಾಯುವಂತಿಲ್ಲ. ಆಶ್ರಮದ ಅಡಿಯಲ್ಲಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಇತ್ಯಾದಿ ನಡೆಸುವಂತಿಲ್ಲ.
ಸದ್ಭಕ್ತರಿಗೆ ಭಗವಂತನೆಡೆಗೆ ಕರೆದೊಯ್ಯುವ ತ್ರಿಮೂರ್ತಿಗಳಾದ ಶಾಂತಾ ರಾಮತೀರ್ಥ ಚೂಡಾ ಮಾತೆಯರ ಪುಣ್ಯಭೂಮಿ ಇದು.
ಇದನ್ನೂ ಓದಿ:
ಆ ಹೊತ್ತಿನ ಮಳೆ ಆ ಹೊತ್ತಿನ ಬೆಳೆ ಎಂಬ ನಿಲುವಿಗೆ ಬದ್ಧವಾಗಿ ಆಶ್ರಮವಿದೆ. ಆಶ್ರಮದ ಬಗ್ಗೆ ಎಂದೂ ಪ್ರಚಾರ ಮಾಡದ, ಜಾತಿಯತೆಯ ಕಟ್ಟುಪಾಡುಗಳಿಲ್ಲದ ಆಶ್ರಮ.
ಕಾವಿ ಧರಿಸಬೇಡಿ, ಕಾವಿಯ ಗುಣ ಸಂಪಾದನೆ ಮಾಡಿ ಎಂಬ ಮಾತಾಜಿಯವರ ಮಾತು ವೇದವಾಖ್ಯವಿದ್ದಂತೆ. ಇಲ್ಲಿ ನಡೆಯುವ ಹುಣ್ಣಿಮೆ ರಥೋತ್ಸವ, ಗುರುಪೂರ್ಣಿಮೆ ಕಾರ್ಯಕ್ರಮಗಳು, ಪ್ರಸಾದ ಕೂಡಾ ಭಿಕ್ಷೆಯಿಂದಲೇ ನಡೆಯಬೇಕು ಎಂದು ಕಟ್ಟಪ್ಪಣೆ ಮಾಡಿದ್ದು, ಈಗಲೂ ಯಥಾ ಪ್ರಕಾರ ನಡೆಯುತ್ತಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

