CHITRADURGA NEWS | 16 MARCH 2024
ಚಿತ್ರದುರ್ಗ : ನಗರದಲ್ಲಿನ ವಿದ್ಯಾವಂತ ಮಹಿಳೆಯಾಗಲಿ ಅಥವಾ ಗ್ರಾಮೀಣ ಭಾಗದಲ್ಲಿರುವ ಮಹಿಳೆಯಾಗಲಿ ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ನೋವಿನ ಸಂಗತಿ ಎಂದು ಬರಹಗಾರ್ತಿ ಸೌಮ್ಯ ಪುತ್ರನ್ ಹೇಳಿದರು.
ಇದನ್ನೂ ಓದಿ: ರಸಾಯನಶಾಸ್ತ್ರದಲ್ಲಿ ಪಿಹೆಚ್‍ಡಿ ಪಡೆದ ಈ.ವಿಶಾಲ

ನಗರದ ಎಸ್.ಜೆ.ಎಂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಶಿಮುಶ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,
ಮನೋಸಂಸ್ಕøತಿಯಲ್ಲಿ ಸ್ತ್ರೀಯರ ಹಿರಿಮೆ ಬಗ್ಗೆ ಉಲ್ಲೇಖಿಸಲಾಗಿದೆ, ಇಂದಿನ ಕಾಲಘಟ್ಟದಲ್ಲಿ ಹೆಣ್ಣು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ, ವೇಶ್ಯಾವಾಟಿಕೆ, ಅಪಹರಣ, ಆಸಿಡ್ ದಾಳಿ, ಅತ್ಯಾಚಾರ ಹೀಗೆ ಹತ್ತು ಹಲವಾರು ಸಾಮಾಜಿಕ ಪಿಡುಗುಗಳಿಗೆ ಹೆಣ್ಣು ಬಲಿಯಾಗುತ್ತಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಸ್ತ್ರೀಯರೇ ಹೆಚ್ಚು ಮನರೋಗಕ್ಕೆ ತುತ್ತಾಗುತ್ತಿರುವುದಕ್ಕೆ ಅವರ ಮೇಲೆ ನಡೆಯುತ್ತಿರುವ ಶೋಷಣೆ ಕಾರಣ ಎಂದು ಹೇಳಿದರು.
ಇದನ್ನೂ ಓದಿ: ನರೇಗಾದಡಿ ಕೆಲಸ ಕೊಡುತ್ತೇವೆ | ಯಾರು ಗುಳೇ ಹೋಗಬೇಡಿ
ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿ, ರಾಜಕೀಯವಾಗಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಸೌಲಭ್ಯಗಳನ್ನು ನೀಡುವ ಮೂಲಕ ಮಹಿಳೆಯನ್ನು ಓಟ್ ಬ್ಯಾಂಕ್ನ್ನಾಗಿ ಮಾಡಿಕೊಳ್ಳುತ್ತಿರುವುದು ನಿಜವಾಗಿಯೂ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆಯೇ ಎನ್ನುವುದು ಯಕ್ಷ ಪ್ರಶ್ನೆ ಆಗಿರುವುದರಿಂದ ಮಹಿಳೆಯರು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮಾದಾರ ಚನ್ನಯ್ಯ ಗುರುಪೀಠಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿ.ಸಿ. ಪಾಟೀಲ್ ಭೇಟಿ
ಎಸ್.ಜೆ.ಎಂ ದಂತ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯರಾದ ಡಾ. ಆರ್.ಗೌರಮ್ಮ ಮಾತನಾಡಿ, ಲಿಂಗ ತಾರತಮ್ಯ, ಸಬಲೀಕರಣ, ಸಮಾನತೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ, ಆದರೆ ಮಹಿಳೆಗೆ ಮಹಿಳೆಯೇ ನಿಜವಾದ ಶತ್ರು, ರಾಣಿ ಅಬ್ಬಕ್ಕ, ಕಿತ್ತೂರ್ ರಾಣಿ ಚೆನ್ನಮ್ಮ, ವೀರ ವನಿತೆ ಒನಕೆ ಓಬವ್ವ ಇವರುಗಳೆಲ್ಲ ದೇಶ ರಕ್ಷಣೆಯಲ್ಲಿ ತೊಡಗಿದವರು, ಆಟೋ ಡ್ರೈವರ್ ನಿಂದ ಹಿಡಿದು ಪೈಲೆಟ್ ವರೆಗೆ ಮಹಿಳೆಯರಿದ್ದಾರೆ, ಎಲ್ಲ ರಂಗಗಳಲ್ಲಿಯೂ ಹೆಣ್ಣಿನ ಸಾಧನೆ ಇದೆ, ಜಾತಿ ನಿಂದನೆ ಕೇಸಿಗೆ ಕೆಲವು ಮಹಿಳೆಯರೇ ಪ್ರಚೋದಿಸುತ್ತಿರುವ ಪ್ರಕರಣಗಳನ್ನು ಸಾಕಷ್ಟಿವೆ, ಕೆಲವೊಮ್ಮೆ ಮಹಿಳೆ ಮೇಲೆ ಭ್ರಷ್ಟಾಚಾರದ ಆರೋಪವು ಕೇಳಿ ಬರುತ್ತದೆ, ಎಲ್ಲವನ್ನು ಸಹಿಸಿಕೊಳ್ಳುವ ಶಕ್ತಿ ಮಹಿಳೆಗೆ ಇದೆ ಎಂದು ಗುಣಗಾನ ಮಾಡಿದರು.
ಇದನ್ನೂ ಓದಿ: ಬೋರ್‍ವೆಲ್ ಕೊರೆಯಲು ಏಕರೂಪ ದರ ನಿಗದಿ
ಈ ವೇಳೆ ಬರಹಗಾರ್ತಿ ಸೌಮ್ಯ ಪುತ್ರನ್ ನವರ ವಿಷ ವರ್ತುಲ ಕೃತಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಸುನೀಲ್ ವಡವಡಗಿ, ಡಾ. ಗಜಲ ಯಾಸ್ಮಿಲ್, ಡಾ. ಪ್ರಣೀತ, ದಯಾ ಪುತ್ತೂರ್ಕರ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
