
CHITRADURGA NEWS | 15 SEPTEMBER 2025
ಚಿತ್ರದುರ್ಗ: ನಗರದ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸರ್.ಎಂ.ವಿಶ್ವೇಶ್ವಯ್ಯರನವರ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ್ ದಿನ ಆಚರಿಸಲಾಯಿತು.
ಇದನ್ನೂ ಓದಿ: ಅಣಬೆ ಬೇಸಾಯ ಕುರಿತು ತರಬೇತಿ | 50 ಜನ ರೈತರಿಗೆ ಅಹ್ವಾನ

ಪ್ರಾಂಶುಪಾಲರಾದ ಡಾ.ಪಿ.ಬಿ.ಭರತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್.ಎಂ.ವಿಶ್ವೇಶ್ವಯ್ಯರನವರ ಜನ್ಮದಿನವನ್ನು ಇಂಜಿನಿರ‍್ಸ್ ಡೇ ಆಗಿ ದೇಶಾಂದ್ಯಂತ ಆಚರಿಸುತ್ತಿರುವುದು ಕನ್ನಡಿಗರಾದ ನಮಗೆಲ್ಲಾ ಹೆಮ್ಮೆಯ ವಿಚಾರ.
ದೇಶದ ಪ್ರಗತಿಗೆ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಅಪಾರ. ಇಂಜಿನಿಯರಿಂಗ್ ಎನ್ನುವುದು ಕೇವಲ ಪುಸ್ತಕದ ತಿಳುವಳಿಕೆ ಅಷ್ಟೇ ಅಲ್ಲ. ಅದು ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಜ್ಞಾನವನ್ನು ಬಳಸುವ ಕಲೆ.
ಇಂಜಿನಿಯರ್ಸ್ ಗಲು ದೇಶದ ಮೂಲ ಸೌಕರ್ಯ ನಿರ್ಮಾಣ, ಉದ್ಯಮ ಮತ್ತು ತಂತ್ರಜ್ಞಾನ, ಕಮ್ಯೂನಿಕೇಶನ್, ಮೆಡಿಕಲ್, ಅಂತರಿಕ್ಷ, ಪರಿಸರ ರಕ್ಷಣೆ, ಶಕ್ತಿ ಉತ್ಪಾದನೆಯಂತಹ ಕ್ಷೇತ್ರಗಳ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.
ನಮ್ಮ ದೇಶಕ್ಕೆ ಅನನ್ಯ ಕೊಡುಗೆಗಳನ್ನು ನೀಡಿದಂತಹ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ವಿಕ್ರಂ ಸಾರಾಭಾಯ್, ಹೋಮಿ ಜಹಾಂಗೀರ್ ಬಾಬಾ, ಶ್ವೇತ ಕ್ರಾಂತಿಯ ಪಿತಾಮಹ ವರ್ಗಿಸ್ ಕುರಿಯನ್, ರತನ್ ಟಾಟಾ, ಇನ್ಫೋಸಿಸ್ ನಾರಾಯಣಮೂರ್ತಿಯಂತವರು ಇಂದಿಗೂ ಪ್ರಸ್ತುತ.
ಗೂಗಲ್ ಸಿಇಒ ಸುಂದರ್ ಪಿಚ್ಚೆ ಹಾಗೂ ಮೈಕ್ರೋಸಾಪ್ಟ್ ಸಿಇಒ ಸತ್ಯ ನಾದೆಲ್ಲರಂತವರು ಭಾರತೀಯರ ಸಾಮರ್ಥ್ಯವನ್ನು ಜಾಗತೀಕ ವೇದಿಕೆಯಲ್ಲಿ ತೋರಿಸಿಕೊಟ್ಟಿದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 15 | ಮೆಕ್ಕೆಜೋಳ ರೇಟ್ ಎಷ್ಟಿದೆ?
ವಿದ್ಯಾರ್ಥಿಗಳೇ ನೀವು ಭವಿಷ್ಯದ ಇಂಜಿನಿಯರುಗಳು, ನಿಮ್ಮ ಹಾದಿಯಲ್ಲಿ ಹೊಸ ಆವಿಷ್ಕಾರಗಳು, ತಾಂತ್ರಿಕ ಸಾಧನೆಗಳು ಹಾಗೂ ಸಮಾಜಮುಖಿ ಕೊಡುಗೆಗಳು ಇರಲಿ.
ಸರ್.ಎಂ.ವಿಶ್ವೇಶ್ವರಯ್ಯನವರ ನುಡಿಯಂತೆ “ವರ್ಕ್ ಯುವರ್ ಪ್ಲಾನ್, ಪ್ಲಾನ್ ಯುವರ್ ವರ್ಕ್” ಪ್ರತಿಯೊಬ್ಬರು ಶ್ರಮ ಮತ್ತು ಶಿಸ್ತಿನ ಮೂಲಕ ದೇಶದ ತಾಂತ್ರಿಕ ಶಕ್ತಿಯಾಗಿ ಬೆಳೆಯಿರಿ ಎಂದು ನುಡಿದರು.
ಪ್ರಾಧ್ಯಾಪಕ ಡಾ.ಹೆಚ್.ಜೆ.ಲೋಕೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಂ.ಪೃಥ್ವಿರಾಣಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
