
CHITRADURGA NEWS | 15 SEPTEMBER 2025
ಚಿತ್ರದುರ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಧೃಢ ನಿರ್ಧಾರದಿಂದ ಭಾರತ ದೇಶ ಉತ್ತಮವಾದ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಇದನ್ನೂ ಓದಿ: ಇಂಜಿನಿಯರ್ ಗಳು ದೇಶದ ನಿರ್ಮಾತೃಗಳು | JMIT ಪ್ರಾಚಾರ್ಯ ಡಾ.ಪಿ.ಬಿ.ಭರತ್
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮೇರಿಕಾದ ಅಧ್ಯಕ್ಷ ಟ್ರಂಪ್ ನಮ್ಮ ದೇಶದ ಮೇಲೆ ವಿನಾಕಾರಣ ಕಿಡಿಕಾರಿದ್ಧಾರೆ, ಇದರ ಬಗ್ಗೆ ಮೋದಿಯವರು ಯಾವುದೇ ರೀತಿಯಿಂದಲೂ ಸಹಾ ಮಾತನಾಡದೇ ಚೈನಾ ಹಾಗೂ ರಷ್ಯಾದ ಜೊತೆಯಲ್ಲಿ ಮಾತನಾಡಲು ಪ್ರಾರಂಭ ಮಾಡಿದಾಗ ಅಮೇರಿಕಾ ಬಗ್ಗಿದೆ ಎಂದರು.
ಅಮೆರಿಕಾದಲ್ಲಿ ಟ್ರಂಪ್ ಅಧ್ಯಕ್ಷರಾಗಲು ಅಲ್ಲಿನ ಅನಿವಾಸಿ ಭಾರತೀಯರು ಸಹಾ ಸಹಾಯ ಮಾಡಿದ್ದಾರೆ, ಅವರಿಗೆ ಮತ ನೀಡಿದ್ದಾರೆ, ಟ್ರಂಪ್ ರವರು ಗೆಲ್ಲುವುದಕ್ಕೂ ಮನ್ನಾ ಒಂದು ಥರ ಇದ್ದರೆ ಗೆದ್ದ ಮೇಲೆ ಒಂದು ಥರ ಆಗಿದ್ದು, ಭಾರತದ ಮೇಲೆ ವಿನಾಕಾರಣ ಕಿಡಿ ಕಾರುತ್ತಿದ್ದಾರೆ.
ತೆರಿಗೆಯನ್ನು ಹೆಚ್ಚಳ ಮಾಡುವುದರ ಮೂಲಕ ನಮ್ಮ ದೇಶದ ಮೇಲೆ ಗಧಾ ಪ್ರವಾಹ ಸಾರಿದ್ದಾರೆ, ಇದರ ಬಗ್ಗೆ ನಮ್ಮ ದೇಶದ ಪ್ರಧಾನ ಮಂತ್ರಿಗಳು ಇದರ ಬಗ್ಗೆ ತೆಲೆಕೆಡಿಸಿಕೊಳ್ಳದೇ ಚೈನಾ ಮತ್ತು ರಷ್ಯಾ ದೇಶದ ಜೊತೆಯಲ್ಲಿ ಮಾತನಾಡಿದಾಗ ಇದನ್ನು ಕಂಡ ಅಮೆರಿಕಾ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದು ಭಾರತ ದೇಶದ ಮೇಲಿನ ಭಯ ಹಾಗೂ ಗೌರವ ಮೂಡಿದ್ದು, ಸಿಟ್ಟನ್ನು ಕಡಿಮೆ ಮಾಡಿಕೊಂಡಿದ್ದಾರೆ ಇದು ನಮ್ಮ ಪ್ರಧಾನಿಯಿಂದ ಸಾಧ್ಯವಾಗಿದೆ ಎಂದರು.
ಇದನ್ನೂ ಓದಿ: ಅಣಬೆ ಬೇಸಾಯ ಕುರಿತು ತರಬೇತಿ | 50 ಜನ ರೈತರಿಗೆ ಅಹ್ವಾನ
ನಮ್ಮ ದೇಶದ ಪ್ರಜೆಗಳು ಬೇರೆ ದೇಶಗಳಿಂದ ವಸ್ತುಗಳನ್ನು ತರಿಸುವುದನ್ನು ಕಡಿಮೆ ಮಾಡಿ, ನಮ್ಮ ದೇಶದಿಂದ ಬೇರೆ ದೇಶಗಳಿಗೆ ರಫ್ತು ಮಾಡಲು ಮುಂದಾಗಬೇಕಿದೆ. ನಮ್ಮ ದೇಶದ ಅರ್ಥಿಕ ಪರಿಸ್ಥಿತಿ ಉತ್ತಮವಾಗಿದೆ.
ಮುಂದಿನ ದಿನದಲ್ಲಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಮೂರನೇ ಸ್ಥಾನಕ್ಕೆ ಬರಲಿದೆ ಆದರೆ ಇದನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಕೆಟ್ಟದಾಗಿ ಮಾತನಾಡುತ್ತಿವೆ ಎಂದ ಅವರು, ಉತ್ತರ ಭಾರತದಲ್ಲಿ ಹಲವಾರು ಸಮಸ್ಯೆಗಳು ಇವೆ ಅವುಗಳನ್ನು ಬಗೆ ಹರಿಸುವಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳು ಮುಂದಾಗಿದ್ದಾರೆ.
ನಮ್ಮ ಪಕ್ಷಕ್ಕೆ ಅಧಿಕಾರಕ್ಕಿಂತ ದೇಶ ಮೊದಲು ಆದರೆ ಬೇರೆ ಪಕ್ಷದವರಿಗೆ ಪಕ್ಷಕ್ಕಿಂತ ಅಧಿಕಾರ ಮೊದಲು ಎನ್ನುವಂತಾಗಿದೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ಬೇರೆ ಪಕ್ಷಗಳಿಗಿಂತ ವಿಭೀನ್ನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ ದಾರಿಯಲ್ಲಿ ಹೋಗುವವರಿಗೆಲ್ಲಾ ನಮ್ಮಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದಿಲ್ಲ, ಇಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಕಾಟಾಚಾರಕ್ಕೆ ಆಗದೇ ನಿಜವಾದ ರೀತಿಯಲ್ಲಿ ಕೆಲಸ, ಪಕ್ಷದ ಸಂಘಟನೆಯನ್ನು ಮಾಡಬೇಕಿದೆ.
ಇದನ್ನೂ ಓದಿ: ಉಪಜಾತಿ ಕಾಲಂನಲ್ಲಿ ಕುಂಚಿಟಿಗ ಎಂದು ನಮೂದಿಸಿ | ಎಸ್.ಲಿಂಗಮೂರ್ತಿ
ಹಿಂದಿನ ಅಧ್ಯಕ್ಷರರು ಉತ್ತಮವಾಗಿ ಕೆಲಸವನ್ನು ಮಾಡಿದ್ದಾರೆ, ನೀವುಗಳು ಸಹಾ ಇದಕ್ಕಿಂತ ಉತ್ತಮವಾಗಿ ಕೆಲಸವನ್ನು ಮಾಡಿ ಪಕ್ಷವನ್ನು ನಗರ, ಗ್ರಾಮಾಂತರ ಪ್ರದೇಶದಲ್ಲಿ ಸಂಘಟಿಸಬೇಕಿದೆ. ಈಗ ಪಕ್ಷದಲ್ಲಿ ಸ್ಥಾನ ಸಿಗದಿದ್ದವರು ಆಸಮಾಧಾನಗೊಳ್ಳದೇ ಪಕ್ಷದ ಸಂಘಟನೆಯಲ್ಲಿ ತೊಡಗಿ ಮುಂದೆ ಉತ್ತಮವಾದ ಸ್ಥಾನ ಸಿಗಲಿದೆ ಎಂದು ಹೇಳಿದರು.
ಮುಂದಿನ ದಿನದಲ್ಲಿ ಜಿ.ಪಂ, ತಾ.ಪಂ.ಹಾಗೂ ನಗರಸಭೆಯ ಚುನಾವಣೆಗಳು ಬರುತ್ತವೆ. ಇದಕ್ಕೆ ಪಕ್ಷದ ಪದಾಧಿಕಾರಿಗಳು ಸಜ್ಜಾಗಬೇಕಿದೆ. ಇದಕ್ಕೆ ಈಗಿನಿಂದಲೇ ಚುನಾವಣೆಗೆ ಸಜ್ಜಾಗಬೇಕಿದೆ. ತಮ್ಮ ದೈನಂದಿನ ಚಟುವಟಿಕೆಯಲ್ಲಿ ಪಕ್ಷದ ಕೆಲಸ ಸಹಾ ಮಾಡಲು ಮುಂದಾಗಬೇಕಿದೆ.
ಪ್ರತಿ ಮೂರು ವರ್ಷಕೊಮ್ಮೆ ಪದಾಧಿಕಾರಿಗಳ ಸ್ಥಾನಕ್ಕೆ ನೇಮಕ ನಡೆಯಲಿದ್ದು, ಪ್ರತಿಬಾರಿಯೂ ಸಹಾ ಹೊಸದಾದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ, ಇದರಿಂದ ಹೊಸಬರಿಗೆ ಅವಕಾಶ ಸಿಕ್ಕತೆ ಆಗುತ್ತದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 15 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ನಗರಮಂಡಲದ ಮಾಜಿ ಅಧ್ಯಕ್ಷ ಚಾಲುಕ್ಯ ನವೀನ್, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ರಾಜ್ಯ ರೈತ ಮೋಚಾರ್ಯದ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಗ್ರಾಮಾಂತರ ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ಕೆ.ನಾಗರಾಜ್, ಮಂಡಲದ ಮಾಜಿ ಅಧ್ಯಕ್ಷ ಕಲ್ಲೇಶಯ್ಯ, ವಕ್ತಾರ ನಾಗರಾಜ್ ಬೇದ್ರೇ ಸೇರಿದಂತೆ ಇತರರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
