CHITRADURGA NEWS | 12 MAY 2025
ಚಿತ್ರದುರ್ಗ: ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವತಿಯಿಂದ ವಿಶ್ವ ರೆಡ್‍ಕ್ರಾಸ್ ದಿನಾಚರಣೆ ಅಂಗವಾಗಿ ಎರಡು ದಿನಗಳ ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರ ನಡೆಯಿತು
Also Read: ವಿಜೃಂಭಣೆಯ ಪಾಂಡುರಂಗ ವಿಠಲ ರಥೋತ್ಸವ

ರೆಡ್‍ಕ್ರಾಸ್ ಮತ್ತು ರೇಂಜರ್ಸ್ ಮತ್ತು ರೋವರ್ಸ್‍ನ ಸ್ವಯಂಸೇವಕರು ತುರ್ತು ಪರಿಸ್ಥಿತಿಯಲ್ಲಿ ಉದ್ಭವಿಸಬಹುದಾದ ಘಟನೆಗಳಿಗೆ ಮುನ್ನೆಚ್ಚರಿಕೆ ಕ್ರಮಗಳು ಕೈಗೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ ಹಾಗೂ ಕೃತಕ ಸ್ಫೋಟಗಳು ಸಂಭವಿಸಿ ಅಣಕು ಕವಾಯತು ನಡೆಸಿದರು.
ಅನೇಕ ಜನರು ಗಾಯಗೊಂಡಾಗ ತಕ್ಷಣ ಸ್ವಯಂಸೇವಕರು ಕಾರ್ಯಪ್ರವೃತ್ತರಾಗಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಸ್ಟ್ರೇಚರ್ ಬಳಸಿ ಅವರನ್ನು ಸ್ಥಳಾಂತರಿಸಿದರು. ಸಿಪಿಆರ್ ಮತ್ತು ಬ್ಯಾಂಡೇಜಿಂಗ್ ಮಾಡಲಾಯಿತು. ತುರ್ತು ಸಮಯದಲ್ಲಿ ಜೀವ ಉಳಿಸುವ ಕ್ರಮಗಳು ಅಣಕು ಕವಾಯತು ನಡೆಸಿದರು. ರಾಷ್ಟ್ರಮಟ್ಟದ ತರಬೇತುದಾರ ಡಾ.ಕುಮಾರ್ ವಿ.ಎಲ್.ಎಸ್ ಅವರು ಅಣಕು ಪ್ರದರ್ಶನ ನಿರ್ದೇಶಿಸಿದರು.
Also Read: ಅಡಿಕೆ ಧಾರಣೆ | 12 ಮೇ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಈ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ಅಗಡಿ, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಸಿದ್ದರಾಮ ಚೆನ್ನಗೊಂಡ, ರೆಡ್‍ಕ್ರಾಸ್ ರಾಜ್ಯ ಆಡಳಿತ ಮಂಡಳಿ ಸದಸ್ಯ ಅನಂತ ರೆಡ್ಡಿ, ಕಾರ್ಯದರ್ಶಿ ಮಜಹರ್ ಉಲ್ಲಾ, ಖಜಾಂಚಿ ವಿರೇಶ್, ನಿರ್ದೇಶಕರಾದ ಗುರುಮೂರ್ತಿ, ಶಿವರಾಮ್, ಯುವ ರೆಡ್‍ಕ್ರಾಸ್ ಸಂಯೋಜಕ ಕೃಷ್ಣಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ರಾಘವೇಂದ್ರ ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
