
CHITRADURGA NEWS | 15 FEBRUARY 2026
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಳಗಿನಿಂದಲೂ ದೇವರ ನಾಮ ಸ್ಮರಣೆ, ದೇಗುಲಗಳಲ್ಲಿ ವಿಶೇಷ ಪೂಜೆ, ಉಪವಾಸ ವ್ರತಾಚರಣೆ ಮೂಲಕ ಶಿವರಾತ್ರಿ ಆಚರಿಸಲಾಯಿತು.
ಇದನ್ನೂ ಓದಿ: ಅಡಿಕೆ ಧಾರಣೆ | ಫೆಬ್ರವರಿ 14 | ತೀರ್ಥಹಳ್ಳಿ ಮಾರುಕಟ್ಟೆ ರೇಟ್

ಶಿವರಾತ್ರಿ ಅಂಗವಾಗಿ ನಗರದ ದೇವಸ್ಥಾನಗಳಲ್ಲಿ ಶಿವನಿಗೆ ಅಭಿಷೇಕ, ಬಿಲ್ವಾರ್ಚನೆ, ಕ್ಷೀರಾಭಿಷೇಕ, ರುದ್ರಾಭಿಷೇಕ, ಬೆಣ್ಣೆ, ತುಪ್ಪ, ಮೊಸರು, ಎಳೆ ನೀರು ಸೇರಿದಂತೆ ಪಂಚಾಮೃತ ಹಾಗೂ ರುದ್ರಾಭಿಷೇಕ ಉಪವಾಸ ವ್ರತಾಚರಣೆ ಮೂಲಕ ಶಿವನ ಒಲುಮೆ ಗಳಿಸಲು ಪ್ರಾರ್ಥನೆ ಮಾಡಲಾಯಿತು.

ಶಿವ ದೇಗುಲಗಳಲ್ಲಿ ಬಿಲ್ವಪತ್ರೆ ಪ್ರಿಯ ಮಹಾದೇವನಿಗೆ ಬಿಲ್ವ, ಬನ್ನಿ ಪತ್ರೆ ಸೇರಿದಂತೆ ಹೊಂಬಾಳೆ, ಕನಕಾಂಬರ, ದುಂಡು ಮಲ್ಲಿಗೆ, ಸೇವಂತಿಗೆ, ಗುಲಾಬಿ ಸೇರಿದಂತೆ ನಾನಾ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ನಗರದ ಚಿಕ್ಕಪೇಟೆಯ ಆನೆಬಾಗಿಲ ಬಳಿಯಿರುವ ಪಾತಾಳೇಶ್ವರ ಗುಡಿಯಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಕೋಟೆಯೊಳಗಿನ ಕಾಶಿ ವಿಶ್ವನಾಥ, ನಗರದ ಕೋಟೆ ರಸ್ತೆಯ ಶ್ರೀ ಗಾರೆ ಬಾಗಿಲು ಈಶ್ವರ ಮಂದಿರ, ರಂಗಯ್ಯನ ಬಾಗಿಲ ಬಳಿಯ ಶ್ರೀ ಉಮಾ ಮಹೇಶ್ವರನ ದೇವಸ್ಥಾನ, ಚಿಕ್ಕಪೇಟೆಯ ಶ್ರೀ ಮಲ್ಲಿಕಾರ್ಜುನ ದೇಗುಲಗಳಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ನೆರವೇರಿದವು. ಕೋಟೆ ಸಮೀಪದ ಕರಿವರ್ತಿ ಈಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದವು.
ಇದನ್ನೂ ಓದಿ: ದ್ವೇಷಕ್ಕೆ ಸುಟ್ಟು ಹೋಯ್ತು 22 ಲೋಡ್ ಮೆಕ್ಕೆಜೋಳ
ಮೇಲುದುರ್ಗದಲ್ಲಿನ ಶ್ರೀ ಸಂಪಿಗೆ ಸಿದ್ಧೇಶ್ವರ, ಹಿಡಂಬೇಶ್ವರ, ವೀರಭದ್ರ, ಭೈರವೇಶ್ವರ, ಗಾರೇಹಟ್ಟಿಯ ಮಹಾಬಲೇಶ್ವರ ದೇಗುಲ ಸೇರಿದಂತೆ ನಾನಾ ಶಿವನ ದೇಗುಲಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಹಾ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು.

ಮೇಲುದುರ್ಗದ ಶ್ರೀ ಗೋಪಾಲಕೃಷ್ಣ, ತ್ಯಾಗರಾಜ ಬೀದಿಯ ಸುಬ್ರಹ್ಮಣ್ಯೇಶ್ವರ, ವೆಂಕಟರಮಣ ಸ್ವಾಮಿ, ಗಣಪತಿ, ಆಂಜನೇಯ ಸ್ವಾಮಿ, ಶ್ರೀರಾಮ ಮಂದಿರ, ನರಸಿಂಹ ದೇವಾಲಯ, ಚನ್ನಕೇಶವ, ಮರಡಿ ಆಂಜನೇಯ, ರಾಘವೇಂದ್ರ ಸ್ವಾಮಿ, ಯೋಗ ನರಸಿಂಹ, ಶ್ರೀ ಮೈಲಾರಲಿಂಗೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು.
ಶ್ರೀ ಏಕನಾಥೇಶ್ವರಿ, ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ, ಚೌಡೇಶ್ವರಿ, ಬರಗೇರಮ್ಮ ಸೇರಿದಂತೆ ನವದುರ್ಗಿಯರು, ಶಕ್ತಿ ದೇವಿಯರ ದೇವಸ್ಥಾನಗಳಲ್ಲೂ ವಿಶೇಷ ಪೂಜಾ ಕೈಂಕರ್ಯ ಜರುಗಿದವು.
ಇದನ್ನೂ ಓದಿ: ಕೆರೆಯಲ್ಲಿ ತೇಲಿ ಹೋದ ಸೀರೆ ಹಿಡಿಯಲು ಹೋದ ಮಕ್ಕಳ ದುರ್ಮರಣ

ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಕೆಲ ದೇವಸ್ಥಾನಗಳಲ್ಲಿ ಭಕ್ತರು ಭಜನೆ ಕಾರ್ಯಕ್ರಮ ನಡೆಸಿದರು.
ನೀಲಕಂಠೇಶ್ವರ ದರ್ಶನಕ್ಕೆ ಸರತಿ ಸಾಲು:
ಶಿವರಾತ್ರಿ ಜಾಗರಣೆ ಹಿನ್ನೆಲೆಯಲ್ಲಿ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿದ್ದರು. ನೀಲಕಂಠೇಶ್ವರ ದೇವಸ್ಥಾನದಿಂದ ಗಾಯತ್ರಿ ಭವನ ವೃತ್ತದವರೆಗೆ ಸಾಗುವ ರಸ್ತೆವರೆಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.

ಇದನ್ನೂ ಓದಿ: ಹೆಚ್ಚು ಅಂಕ ಪಡೆದು ಮೆಡಿಕಲ್, ಇಂಜಿನಿಯರಿಂಗ್ ಸೀಟು ಪಡೆಯಿರಿ | ಶಾಸಕ ಎಂ.ಚಂದ್ರಪ್ಪ
ದೇವಸ್ಥಾನದ ಮುಂಭಾಗದಲ್ಲಿ ಶಿವಲಿಂಗದ ಆಕೃತಿಯಲ್ಲಿ ವಿಶೇಷ ಅಲಂಕಾರ ಮಾಡಿದ್ದರೆ, ಒಳಗೆ ಶಿವನ ವಿವಿಧ ಅವತಾರಗಳನ್ನು ಬಿಂಬಿಸಿ ದೇಗುಲವನ್ನೇ ಅಲಂಕರಿಸಲಾಗಿತ್ತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
