
CHITRADURGA NEWS | 05 JANUARY 2026
ಚಿತ್ರದುರ್ಗ: ಮಧ್ಯ ಕರ್ನಾಟಕ ಭಾಗದಲ್ಲಿರುವ ಕೋಟೆನಾಡು ಚಿತ್ರದುರ್ಗ ರಾಜ್ಯದ ಸಂಪರ್ಕ ದೃಷ್ಟಿಯಿಂದಲೂ ಕೇಂದ್ರಬಿಂದುವಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ರಾಜ್ಯದ ಎಲ್ಲ ಭಾಗದ ವಾಹನಗಳು ಬಹುತೇಕ ಚಿತ್ರದುರ್ಗ ಜಿಲ್ಲೆಯಲ್ಲೇ ಹಾದು ಹೋಗುತ್ತವೆ.

ಇದನ್ನೂ ಓದಿ: 90 ಕೆರೆಗಳಿಗೆ ಭದ್ರಾ ಮೇಲ್ದಂಡೆ ನೀರು | ಸಚಿವ ಡಿ.ಸುಧಾಕರ್ ಮಾಹಿತಿ
ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಚಿತ್ರದುರ್ಗ ಜಿಲ್ಲೆ ರೈಲ್ವೇ ಸಂಪರ್ಕದಲ್ಲಿ ತುಸು ಹಿಂದುಳಿದಿದೆ. ಜಿಲ್ಲೆಯ ಒಂದು ಪಾರ್ಶ್ವ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರಿನಲ್ಲಿ ರೈಲ್ವೇ ಜಂಕ್ಷನ್ ಇದೆ. ಆದರೆ, ಅದರಿಂದ ಜಿಲ್ಲೆಗೆ ಭಾರೀ ಅನುಕೂಲವೇನು ಇಲ್ಲ.
ಚಿತ್ರದುರ್ಗ ಜಿಲ್ಲಾ ಕೇಂದ್ರವಾದರೂ ಇಲ್ಲಿನ ರೈಲು ಬಳಕೆ ಕಡಿಮೆಯಾಗಿದೆ. ಚಿಕ್ಕಜಾಜೂರು – ಚಿತ್ರದುರ್ಗ ನಡುವಿನ ಬಹುತೇಕ ರೈಲುಗಳ ಕಳೆದ ಕೆಲ ತಿಂಗಳಿಂದ ರದ್ದಾಗಿರುವುದು ಎಲ್ಲರಿಗೂ ಗೊತ್ತೇ ಇದೆ.
ಇದನ್ನೂ ಓದಿ: ಅಡಿಕೆ ಕಳ್ಳರ ಬಂಧನ | ಈಚೆಗೆ ಸಿರಿಗೆರೆ ಭಾಗದ ಅಡಿಕೆ ತೋಟದಲ್ಲಿ ಅಡಿಕೆ ಕಳುವು | ಭರಮಸಾಗರ ಪೊಲೀಸರ ಕಾರ್ಯಾಚರಣೆ
ಈ ನಡುವೆ ಜಿಲ್ಲೆಯ ಜನರ ಸುಧೀರ್ಘ ಹೋರಾಟಕ್ಕೆ ಸ್ಪಂದಿಸಿರುವ ಸರ್ಕಾರಗಳು ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಬಹುತೇಕ ಇನ್ನೊಂದು ವರ್ಷದಲ್ಲಿ ಕಾಮಗಾರಿ ಮುಗಿಯಲಿದ್ದು, ಮುಂದಿನ ವರ್ಷ ಹೊಸ ಮಾರ್ಗದಲ್ಲಿ ರೈಲು ಸಂಚಾರ ಮಾಡಲಿದೆ.
ಈ ಮಾರ್ಗದಿಂದ ದಾವಣಗೆರೆ, ಚಿತ್ರದುರ್ಗ ಭಾಗದಿಂದ ಬೆಂಗಳೂರು ತಲುಪುವುದು ಬಹಳ ಸುಲಭವಾಗಲಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು ಭಾಗದಿಂದ ಚಿತ್ರದುರ್ಗ ಸಂದಿಸುವ ರೈಲು ಮಾರ್ಗಗಳು ಇಲ್ಲಿಂದ ನೇರವಾಗಿ ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಲಿವೆ.
ಮೈಸೂರು – ಚಿತ್ರದುರ್ಗ ರೈಲು ಮಾರ್ಗದ ಬೇಡಿಕೆ:
ಈ ನಡುವೆ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಿಂದ ಚಿತ್ರದುರ್ಗಕ್ಕೆ ರೈಲು ಮಾರ್ಗ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬಂದಿದೆ.
ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದ ಬಳಕೆದಾರರ ಸಲಹಾ ಸಮಿತಿ ಸದಸ್ಯ ಕೊಂಡಜ್ಜಿ ವಿಶ್ವನಾಥ್ ಅವರು ಈ ಸಂಬಂಧ ರೈಲ್ವೇ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Narendra modi: 2027ಕ್ಕೆ ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಪೂರ್ಣ | ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಕೊಂಡಜ್ಜಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊಂಡಜ್ಜಿ ವಿಶ್ವನಾಥ್ ಅವರು ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಈಗಾಗಲೇ ಭದ್ರಾವತಿಯಿಂದ ಹೊಳಲ್ಕೆರೆ ಸಂಪರ್ಕಿಸುವ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಇದು ಮಲೆನಾಡು ಸಂಪರ್ಕ ಮಾಡಲು ಅನುಕೂಲವಾಗಲಿದೆ.
ಇದನ್ನೂ ಓದಿ:ಚಿತ್ರದುರ್ಗ – ತುಮಕೂರು ರೈಲು ಮಾರ್ಗ | ಹಳಿ ಪರಿಶೀಲಿಸಿದ ಸಚಿವ ಸೋಮಣ್ಣ | ಒಂದು ವರ್ಷದಲ್ಲಿ ಚಾಲನೆ
ಇದರೊಂದಿಗೆ ಸಂಸದ ಗೋವಿಂದ ಕಾರಜೋಳ ಅವರು ವಿಜಯಪುರ ಜಿಲ್ಲೆಯ ಆಕಮಟ್ಟಿಯಿಂದ ಚಿತ್ರದುರ್ಗಕ್ಕೆ ರೈಲ್ವೇ ಮಾರ್ಗ ನಿರ್ಮಾಣ ಆಗಬೇಕು ಎಂಬ ಮಾತುಗಳನ್ನು ಆರಂಭದಿಂದಲೂ ಆಡುತ್ತಿದ್ದಾರೆ.
ರೈಲ್ವೇ ಸಂಪರ್ಕದಲ್ಲಿ ಕ್ರಾಂತಿ !
ದಾವಣಗೆರೆ, ಚಿತ್ರದುರ್ಗ, ತುಮಕೂರು ರೈಲು ಮಾರ್ಗದ ಕನಸು ನನಸಾಗುವ ಹೊತ್ತಿನಲ್ಲೇ ಹೊಸ ಹೊಸ ನಿರೀಕ್ಷೆಗಳು ಗರಿಗೆದರುತ್ತಿವೆ. ಒಂದು ವೇಳೆ ಆಲಮಟ್ಟಿ – ಚಿತ್ರದುರ್ಗ ಹಾಗೂ ಮೈಸೂರು – ಚಿತ್ರದುರ್ಗ ಹಾಗೂ ಭದ್ರಾವತಿ – ಹೊಳಲ್ಕೆರೆ ಮಾರ್ಗಗಳು ಮುಂದಿನ ವರ್ಷಗಳಲ್ಲಿ ಕಾರ್ಯಗತವಾದರೆ ಚಿತ್ರದುರ್ಗದಲ್ಲಿ ರೈಲ್ವೇ ಕ್ರಾಂತಿಯೇ ಆಗುವುದರಲ್ಲಿ ಅನುಮಾನವಿಲ್ಲ.
ಹೇಳಿ ಕೇಳಿ ಚಿತ್ರದುರ್ಗ ಐತಿಹಾಸಿಕ ಪ್ರವಾಸಿ ತಾಣ. ಏಳು ಸುತ್ತಿನ ಕೋಟೆ, ಮಠಗಳು, ವಾಣಿವಿಲಾಸ ಸಾಗರ ಜಲಾಶಯ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳು ಜಿಲ್ಲೆಯಲ್ಲಿ ಗಮನ ಸೆಳೆಯುತ್ತಿವೆ. ರೈಲ್ವೇ ಮಾರ್ಗಗಳು ನಿರ್ಮಾಣವಾದರೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬಂದು ಹೋಗಲು ಸಂಪರ್ಕ ಸಾಧನಗಳು ಸೃಷ್ಟಿಯಾದರೆ ಸಂಪರ್ಕ ಕ್ರಾಂತಿ ಗ್ಯಾರೆಂಟಿ.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಮತ್ತೊಂದು ರೈಲು ಮಾರ್ಗ | ಮಲೆನಾಡಿನಿಂದ ಅರೆ ಮಲೆನಾಡು ಸಂಪರ್ಕ | 1825 ಕೋಟಿ ವೆಚ್ಚ
ಈ ನಿಟ್ಟಿನಲ್ಲಿ ಚಿತ್ರದುರ್ಗ ಭಾಗದಿಂದಲೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಒಂದಿಷ್ಟು ಒತ್ತಡ ಹಾಕುವ ಮೂಲಕ ಭವಿಷ್ಯದ ಚಿತ್ರದುರ್ಗಕ್ಕಾಗಿ ಹೊಸ ರೈಲು ಮಾರ್ಗ ಪಡೆದುಕೊಳ್ಳಬೇಕಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

ಮೈಸೂರಿನಿಂದ ಎಲ್ಕ ಕಡೆಗೂ ರೈಲು ಸಂಪರ್ಕ ಇದೆ, ಆದರೆ ಚಿತ್ರದುರ್ಗಕ್ಕೆ ಮಾತ್ರ ಇಲ್ಲಾ. ಬೆಂಗಳೂರಿನಿಂದ ಹೊಸಪೇಟೆಗೆ ಚಿತ್ರದುರ್ಗ ಮಾರ್ಗವಾಗಿ ಓಡುತ್ತಿರುವ ರೈಲನ್ನು ಮೈಸೂರಿನಿಂದ ಪ್ರಾರಂಬಿಸಿದರೆ, ಈ ಬೇಡಿಕೆಯು ಈಡೇರಿಸಿದಂತೆ ಆಗುತ್ತದೆ. ಬೆಂಗಳೂರು ನಿಲ್ದಾಣದ ಮೇಲು ಒತ್ತಡ ಕಡಿಮೆ ಆಗುತ್ತದೆ.