CHITRADURGA NEWS | 15 MAY 2025
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಮತ್ತೊಂದು ರೈಲು ಮಾರ್ಗ ಮಂಜೂರಾತಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ರೈಲು ಮಾರ್ಗದ ಅಂತಿಮ ಸರ್ವೇ ಮಾಡಲು ಕೇಂದ್ರ ಸರ್ಕಾರದ ರೈಲ್ವೇ ಇಲಾಖೆ ಆದೇಶ ಮಾಡಿದೆ.

ಇದನ್ನೂ ಓದಿ: ಹೊಳಲ್ಕೆರೆ | ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಸಾವು
ಕೇಂದ್ರದ ರೈಲ್ವೇ ಮತ್ತು ಜಲಶಕ್ತಿ ಸಚಿವಾಲಯದ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ರೈಲ್ವೇ ಜಂಕ್ಷನ್‌ನಿಂದ ಶಿವಮೊಗ್ಗ ಜಿಲ್ಲೆ ಭದ್ರಾವತಿಗೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದನ್ನು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಸಿದ್ದಾಪುರದಲ್ಲಿ ವೀರಭದ್ರ ದೇವರ ಉತ್ಸವಮೂರ್ತಿ ಪ್ರತಿಷ್ಠಾಪನೆ | ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಭಾಗೀ
ದಾವಣಗೆರೆ ಜಿಲ್ಲೆ ವ್ಯಾಪ್ತಿಯ ಚನ್ನಗಿರಿ ಮಾರ್ಗವಾಗಿ ಭದ್ರಾವತಿಯಿಂದ ಚಿಕ್ಕಜಾಜೂರಿಗೆ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಇದರ ಅಂತರ 73 ಕಿ.ಮೀ ಇರಲಿದೆ. ಇದಕ್ಕಾಗಿ ಸರ್ಕಾರ 1825 ಕೋಟಿ ರೂ. ವೆಚ್ಚ ಮಾಡಲು ತಯಾರಾಗಿದೆ.
ಪ್ರವಾಸೋದ್ಯಮ, ವ್ಯಾಪಾರ, ವಹಿವಾಟಿಗೆ ಅನುಕೂಲ:
ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆ ಈಗ ಅಕ್ಷರಶಃ ನಾಡಿನ ಮಧ್ಯ ಭಾಗವೇ ಆಗಿ ಹೋಗುತ್ತಿದೆ. ರಾಜ್ಯದ ಎಲ್ಲ ದಿಕ್ಕುಗಳಿಂದಲೂ ಕೋಟೆನಾಡಿಗೆ ರೈಲು ಸಂಪರ್ಕ ಸಿಗುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಮಹತ್ದವ ಕೊಡುಗೆ ಸಿಕ್ಕಂತಾಗುತ್ತದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಮೇ 13 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಈಗಾಗಲೇ ದಾವಣಗೆರೆ-ಚಿತ್ರದುರ್ಗ-ತುಮಕೂರು ಸಂಪರ್ಕ ಕಲ್ಪಸುವ ನೇರ ರೈಲು ಮಾರ್ಗದ ಕೆಲಸ ಭರದಿಂದ ಸಾಗುತ್ತಿದೆ. ಇದರ ನಡುವೆಯೇ ಈಗ ಕೇಂದ್ರ ಸರ್ಕಾರ ಮಲೆನಾಡಿನಿಂದ ಬಯಲು ಸೀಮೆಗೆ ಸಂಪರ್ಕ ಕಲ್ಪಿಸುವ ಹೊಸ ಮಾರ್ಗದ ಸರ್ವೇ ಮಾಡಲು ಆದೇಶಿಸಿದೆ.
ಈಗ ಮಲೆನಾಡಿನಿಂದ ಅರೆ ಮಲೆನಾಡಿಗೆ ರೈಲು ಸಂಪರ್ಕ ಸಿಗುವುದರಿಂದ ಶಿವಮೊಗ್ಗ ಜಿಲ್ಲೆಗೆ ಬರುವ ಪ್ರವಾಸಿಗರು ಚಿತ್ರದುರ್ಗ ಕಡೆಗೂ ಹಾಗೂ ಚಿತ್ರದುರ್ಗಕ್ಕೆ ಬಂದ ಪ್ರವಾಸಿಗರು ಶಿವಮೊಗ್ಗದ ಕಡೆಗೂ ಓಡಾಡಲು ಅನುಕೂಲವಾಗಲಿದೆ.
ಇದನ್ನೂ ಓದಿ: ಲಿವರ್ ಕ್ಯಾನ್ಸರ್‌ನ ಆರಂಭಿಕ ಚಿಹ್ನೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ
ಇಲ್ಲಿಂದ ಬಳ್ಳಾರಿ, ವಿಜಯನಗರ ಜಿಲ್ಲೆಗೂ ರೈಲು ಮಾರ್ಗ ಇರುವುದರಿಂದ ಹಂಪಿಗೆ ಬರುವ ಪ್ರವಾಸಿಗರು ಮಲೆನಾಡು ತಲುಪಲು ಚಿತ್ರದುರ್ಗದ ಮೂಲಕ ಹಾದು ಹೋಗಬೇಕಾಗುತ್ತದೆ. ಇದರೊಟ್ಟಿಗೆ ತುಮಕೂರು ನೇರ ರೈಲು ಮಾರ್ಗ ಕೂಡಾ ಬಂದು ಸೇರುವುದರಿಂದ ಮಲೆನಾಡು, ಉತ್ತರ ಕರ್ನಾಟಕ ಭಾಗದ ಜನತೆ ರಾಜಧಾನಿ ಬೆಂಗಳೂರು ತಲುಪುವುದು ಸುಲಭವಾಗುತ್ತದೆ.
ಅಡಿಕೆ ಮಾರುಕಟ್ಟೆಗೂ ಅನುಕೂಲ:
ಈಗಾಗಲೇ ಚನ್ನಗಿರಿ ಹಾಗೂ ಶಿವಮೊಗ್ಗ ಜಿಲ್ಲೆ ಅಡಿಕೆಗೆ ಹೆಸರಾಗಿವೆ. ಚಿತ್ರದುರ್ಗ ಜಿಲ್ಲೆಯಲ್ಲೂ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಇಲ್ಲಿನ ಭೀಮಸಮುದ್ರ ಅಡಿಕೆ ಮಾರುಕಟ್ಟೆ ದೇಶದಲ್ಲೇ ಹೆಸರಾಗಿದೆ. ಈಗ ಅಡಿಕೆ ವರ್ತಕರು ಮಲೆನಾಡಿನಿಂದ ಬಯಲು ಸೀಮೆಗೆ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳಲು ರೈಲು ಮಾರ್ಗ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ.
ಇದನ್ನೂ ಓದಿ: 2027ಕ್ಕೆ ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಪೂರ್ಣ | ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ
ರೈಲ್ವೇ ಸಚಿವರಾದ ವಿ.ಸೋಮಣ್ಣ ಅವರ ದೂರದೃಷ್ಟಿಯ ಫಲವಾಗಿ ಮಲೆನಾಡಿನಿಂದ ಚಿತ್ರದುರ್ಗ ಜಿಲ್ಲೆಗೆ ರೈಲು ಮಾರ್ಗ ಮಂಜೂರಾಗುತ್ತಿದೆ. ರಾಜ್ಯದ ಬಗ್ಗೆ ಸರಿಯಾದ ಜ್ಞಾನ ಹೊಂದಿರುವ ಸೋಮಣ್ಣ ಅವರು ಜನರಿಗೆ ಎಲ್ಲೆಲ್ಲಿ ಅನುಕೂಲ ಆಗಲಿದೆ ಎನ್ನುವುದನ್ನು ನೋಡಿ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಈ ಕಾರ್ಯ ನನಗೆ ಬಹಳ ಸಂತೋಷ ತಂದಿದೆ.
| ಡಾ.ಎಂ.ಚಂದ್ರಪ್ಪ, ಹೊಳಲ್ಕೆರೆ ಶಾಸಕರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number

ರೈಲ್ವೆ ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣ ಅವರ ಕಾರ್ಯ ಶ್ಲಾಘನೀಯವಾಗಿದೆ ಚಿಕ್ಕಜಾಜೂರಿನಿಂದ ಭದ್ರಾವತಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಮೂಲಕ ಬಯಲು ಸೀಮೆ ಹಾಗೂ ಮಲೆನಾಡನ್ನು ಸಂಪರ್ಕಿಸುವುದು ನೂತನ ರೈಲ್ವೆ ಮಾರ್ಗದಿಂದ ಎಲ್ಲಾ ಜನತೆಗೆ ಅನುಕೂಲವನ್ನು ಕಲ್ಪಿಸಲು ಮಾನ್ಯ ಸಚಿವರು ಕೈಗೊಂಡ ಕ್ರಮ ಅತ್ಯಂತ ಸಂತಸ ತಂದಿದೆ ಯಾರೇ ಆಗಲಿ ತಾವು ಮಾಡುವ ಕೆಲಸ ಅತ್ಯುತ್ತಮವಾಗಿದ್ದಲ್ಲಿ ಅಂತಹ ಕೆಲಸ ಅವರನ್ನು ಗುರುತಿಸುತ್ತದೆ ಆದ್ದರಿಂದ ಮಾತಿಗಿಂತ ಕೃತಿ ಲೇಸು ಎನ್ನುವಂತೆ ಸನ್ಮಾನ್ಯ ಶ್ರೀ ಸೋಮಣ್ಣ ಅವರ ಕಾರ್ಯ ಯಶಸ್ವಿಯಾಗಲಿ ನಮ್ಮ ರಾಜ್ಯದ ಮೂಲೆ ಮೂಲೆಗೂ ರೈಲು ಸಂಪರ್ಕ ಕಲ್ಪಿಸುವಂತಹ ಅವಕಾಶಗಳು ದೊರೆಯಲಿ ಹಾಗೆಯೇ ಹೈ ಸ್ಪೀಡ್, ಬುಲೆಟ್ ಟ್ರೈನ್, ರೈಲು ಮಾರ್ಗ ಆದಷ್ಟು ಶೀಘ್ರದಲ್ಲಿ ನಮ್ಮ ರಾಜ್ಯಕ್ಕೆ ಬರಲಿ ಎಂದು ಆಶಿಸೋಣ ಶುಭವಾಗಲಿ ಶುಭದಿನ 👍🏼👍🏼🙏🏼🙏🏼🙏🏼💐💐💐
ಬಯಲು ಸೇನೆ ಹಾಗೂ ಮಲೆನಾಡು ಭಾಗಕ್ಕೆ ನೂತನವಾಗಿ ರೈಲ್ವೆ ಸಂಪರ್ಕಕ್ಕೆ ಚಾಲನೆ ನೀಡಿರುವಂತಹ ಮಾನ್ಯ ರೈಲ್ವೆ ಖಾತೆಯ ಸಚಿವರಾಗಿರುವಂತಹ ಸನ್ಮಾನ್ಯ ಶ್ರೀ ಸೋಮಣ್ಣ ಅವರಿಗೆ ಅಭಿನಂದನೆಗಳು ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರಿನಿಂದ ಭದ್ರಾವತಿಯ ವರೆಗೆ ನೂತನ ರೈಲು ಮಾರ್ಗವನ್ನು ನಿರ್ಮಿಸಲು ಚಾಲನೆ ನೀಡಿರುವಂತಹ ಮಾನ್ಯ ಸಚಿವರ ಕಾರ್ಯ ಶ್ಲಾಘಗನಿಯವಾಗಿದೆ, ಮಾತಿಗಿಂತ ಕಲ್ತಿ ಲೇಸು ಎನ್ನುವಂತೆ ಮಾನ್ಯ ಸಚಿವರು ತಮ್ಮ ರಾಜ್ಯದ ಉದ್ದಗಲಕ್ಕೂ ರೈಲ್ವೆ ಸಂಪರ್ಕವನ್ನು ಕಲ್ಪಿಸುವಲ್ಲಿ ಹೆಚ್ಚಿನ ಶ್ರಮವನ್ನು ವಹಿಸುತ್ತಿರುವುದು ಜನಸಾಮಾನ್ಯರಿಗೆ ತಿಳಿದ ಸಂಗತಿಯಾಗಿದೆ ಹಾಗೆಯೇ ಹೈ ಸ್ಪೀಡ್ ರೈಲು ಮಾರ್ಗಗಳನ್ನು ಹಾಗೂ ಬುಲೆಟ್ ಟ್ರೈನ್ ಮಾರ್ಗಗಳು ನಮ್ಮ ರಾಜ್ಯಕ್ಕೆ ಬರಲಿ ಕೇವಲ ಹೊರದೇಶಗಳಿಗೆ ಮಾತ್ರ ಸೀಮಿತವಾಗಿರುವಂತಹ ಪ್ರಗತಿಶೀಲ ರಾಷ್ಟ್ರವಾಗಿರುವಂತಹ ನಮ್ಮ ಭಾರತಕ್ಕೆ ದೊರೆಯುವಂತಾಗಲಿ ಇಂತಹ ಅವಕಾಶಗಳು ನಮ್ಮ ದೇಶದ ಪ್ರಜೆಗಳಿಗೆ ತೊರೆಯಲಿ ಎಂದು ಆಶಿಸುತ್ತೇನೆ. ಶುಭವಾಗಲಿ ಶುಭದಿನ 👍🏼👍🏼👍🏼🙏🏼🙏🏼💐💐💐