CHITRADURGA NEWS | 14 MAY 2025
ಚಿತ್ರದುರ್ಗ: ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಭಕ್ತ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ನೂತನ ಉತ್ಸವಮೂರ್ತಿ ಪ್ರತಿಷ್ಠಾಪನೆ, ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಮಠದ ಶಿಲಾಮಠ ತಾವರೆಕೆರೆ, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು.
Also Read: ಉತ್ತಮ ದೃಷ್ಟಿಗೆ ಪೋಷಕಾಂಶವುಳ್ಳ ತರಕಾರಿ, ಹಣ್ಣು ಸೇವಿಸಿ | ನೇತ್ರ ತಜ್ಞ ಡಾ.ಪ್ರದೀಪ್

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ವೀರಭದ್ರಸ್ವಾಮಿಯ ಗುಗ್ಗಳ ಸಮಯದಲ್ಲಿ ಕೆಂಡವನ್ನು ತುಳಿದಾಗ ಹಾಗೂ ಭಕ್ತಾಧಿಗಳ ಕೈಗೆ, ಬಾಯಿಗೆ ಸೂತ್ರವನ್ನು ಹಾಕಿದಾಗ ಅವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಇದು ವೀರಭದ್ರನ ಪಾವಡ ಎಂದು ತಿಳಿಸಿದರು.
ಭಗವಂತನ ಸೇವೆಯಲ್ಲಿ ಉತ್ಸಾಹ ಮತ್ತು ಭಕ್ತಿ ಇರಬೇಕು ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಡಿಮೆ ಅವಧಿಯಲ್ಲಿ ಈ ಕಾರ್ಯವನ್ನು ನಿರ್ಮಿಸಿರುವುದು ಸಂತೋಷದ ವಿಷಯ. ದೇವಸ್ಥಾನದಲ್ಲಿ ಸ್ವಚ್ಛತೆ ಕಾಪಾಡಿ ಕೊಂಡು ನಿತ್ಯ ಪೂಜಾ ಕಾರ್ಯಕ್ರಮ ಗಳನ್ನು ನಡೆಸುವುದು ಮುಖ್ಯ ಎಂದರು.
ವೀರಭದ್ರ ನಮ್ಮ ದೇಶದಲ್ಲಿ ಮಾತ್ರವಲ್ಲಿ ಹೊರ ದೇಶದಲ್ಲಿಯೂ ಸಹಾ ಇದ್ದಾನೆ, ಈತನನ್ನು ಆರಾಧನೆ ಮಾಡುವವರ ಸಂಖ್ಯೆ ಬೇರೆ ದೇವರುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
Also Read: CBSE RESULT | ಸ್ಟೆಪ್ಪಿಂಗ್ ಸ್ಟೋನ್ ಶಾಲೆ ಅಮೋಘ ಸಾಧನೆ | ಸತತ 8ನೇ ವರ್ಷ 100% ಫಲಿತಾಂಶ
ಮಸೀದಿ, ಚರ್ಚ್ ಹಾಗೂ ದೇಗುಲಗಳಲ್ಲಿ ಇರುವುದು ದೇವರೇ. ಅವರವರ ಭಕ್ತಿ, ಭಾವಕ್ಕೆ ತಕ್ಕಂತೆ ಇರುವ ದೇವರ ನೆಲೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಜೀವನದ ಮೌಲ್ಯಗಳು ಎಲ್ಲ ಧರ್ಮಗಳಲ್ಲಿ ಅಡಕವಾಗಿವೆ.
ದೇಗುಲದಂತೆ ಮನಸ್ಸು ಶುದ್ಧವಾಗಿರಲಿ ಎನ್ನುವುದು ಮುಖ್ಯ, ಪ್ರತಿ ವರ್ಷ ಅನೇಕ ದೇಗುಲಗಳು ನಿರ್ಮಾಣವಾಗುತ್ತಿವೆ, ಆದರೆ ಜನರ ಹೃದಯದಲ್ಲಿ ಭಕ್ತಿ ಮತ್ತು ಮಾನವೀಯ ಮೌಲ್ಯಗಳು ಬೆಳೆಯುತ್ತಿಲ್ಲ. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ನೀಡಬೇಕು. ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಅವರ ಹೃದಯದಲ್ಲಿ ಬಿತ್ತಬೇಕು. ಇಲ್ಲದಿದ್ದರೆ ಪಕ್ಕದ ರಾಷ್ಟ್ರಗಳಲ್ಲಿರುವಂತೆ ಕ್ರೂರತ್ವ ಬೆಳೆಯುವ ಅಪಾಯವಿದೆ ಎಂದು ಹೇಳಿದರು.
Also Read: SSLC CBSE RESULT | ಇಂಡಿಯನ್ ಇಂಟರ್ ನ್ಯಾಷನಲ್ ಉತ್ತಮ ಫಲಿತಾಂಶ
ಸಿದ್ದಲಿಂಗಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಟೇಲ್ ರುದ್ರಪ್ಪ, ಜಯ್ಯಣ್ಣ, ಆರೂಢಚಾರ್ಯ, ಪ್ರಸನ್ನಕುಮಾರ್, ನಿರಂಜನ್ ಪಾಪಣ್ಣ, ಸೇರಿದಂತೆ ಇತರರು ಭಾಗವಹಿಸಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
