
CHITRADURGA NEWS | 17 OCTOBER 2025
ಚಿತ್ರದುರ್ಗ: ಮಹತ್ವದ ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗದ ಕಾಮಗಾರಿಯನ್ನು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ದಿನ ಭವಿಷ್ಯ | 17 ಅಕ್ಟೋಬರ್ | ಉದ್ಯೋಗಿಗಳಿಗೆ ಕೆಲಸದ ಒತ್ತಡ, ಹೊಸ ವಾಹನ ಖರೀದಿ, ಹಠಾತ್ ಪ್ರಯಾಣ
ತುಮಕೂರಿನ ಊರುಕೆರೆ, ತಿಮ್ಮರಾಜನಹಳ್ಳಿ ಬಳಿ ರೈಲ್ವೇ ಟ್ರಾಲಿ ಮೂಲಕ ಹಳಿಗಳ ಮೇಲೆ ತೆರಳಿ ಕಾನಗಾರಿಯನ್ನು ವೀಕ್ಷಣೆ ಮಾಡಿದರು.
ಈ ವೇಳೆ ಶಾಸಕರಾದ ಸುರೇಶ್ ಗೌಡ, ಜ್ಯೋತಿ ಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಹೆಬ್ಬಾಕ ಹಾಗೂ ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಚಿವ ವಿ.ಸೋಮಣ್ಣ, ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲ್ವೆ ಮಾರ್ಗದ ಕಾಮಗಾರಿ 2027ರ ಜನವರಿಯೊಳಗೆ ಪೂರ್ಣಗೊಳ್ಳಲಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ನೇರ ರೈಲು ಮಾರ್ಗ ಯೋಜನೆಗೆ 2011-12ರಲ್ಲಿ ಕೇಂದ್ರ ಸರ್ಕಾರದಿಂದ ಮಂಜೂರಾತಿ ಸಿಕ್ಕಿದ್ದು, ಒಟ್ಟು 2,140 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಆಗುತ್ತಿದೆ.
ಈ ಯೋಜನೆ ಅನುಷ್ಠಾನಗೊಂಡರೆ ದಾವಣಗೆರೆಯಿಂದ ತುಮಕೂರು ಪ್ರಯಾಣ ಎರಡು ಗಂಟೆಯಾಗಲಿದೆ ಎಂದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ | ಸಾಧಕರಿಗೆ ಸನ್ಮಾನ | ಅರ್ಜಿ ಆಹ್ವಾನ
ಈ ಮೊದಲು ಬೆಂಗಳೂರು ತಲುಪಲು ಒಟ್ಟು 327 ಕಿ.ಮೀ ಕ್ರಮಿಸಬೇಕಾಗಿತ್ತು. ಇದೀಗ ನೂತನ ನೇರ ರೈಲು ಮಾರ್ಗದಿಂದ ಒಟ್ಟು 196 ಕಿ.ಮೀ ಮಾತ್ರವಾಗಲಿದೆ. ಬರೊಬ್ಬರಿ 60 ಕಿ.ಮೀ ಪ್ರಯಾಣ ಕಡಿತವಾಗಲಿದೆ. ಇದರಿಂದ ಜನರಿಗೆ ಹಣ, ಸಮಯ ಹಾಗೂ ಪ್ರಯಾಣವೂ ಕಡಿಮೆಯಾಗಲಿದೆ.
ದಾವಣಗೆರೆಯಿಂದ ವಂದೇ ಭಾರತ್ ರೈಲಿನಲ್ಲಿ 327 ಕಿ.ಮೀ ದೂರವನ್ನು 3 ಗಂಟೆ 25 ನಿಮಿಷಗಳಲ್ಲಿ ಬೆಂಗಳೂರು ತಲುಪಬಹುದಾಗಿದೆ.
ದಾವಣಗೆರೆ ಜಿಲ್ಲೆಯಲ್ಲೂ ಕಾಮಗಾರಿ:
ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಕಾಮಗಾರಿ ನಡೆಯುತ್ತಿದೆ. ದಾವಣಗೆರೆ – ಭರಮಸಾಗರ – ಚಿತ್ರದುರ್ಗ ಮಧ್ಯದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಜಮೀನಿನಲ್ಲಿ ರೈತರು ಬೆಳೆಗಳನ್ನು ಬೆಳೆದಿದ್ದು, ಅವರಿಗೆ ತೊಂದರೆಯಾಗದಂತೆ, ಕಟಾವಿನ ಬಳಿಕವೇ ರೈಲ್ವೆ ಕಾಮಗಾರಿ ಆರಂಭಿಸುವಂತೆ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಈ ಹಿಂದೆಯೇ ಸೂಚನೆ ನೀಡಿದ್ದರು.
234 ಎಕರೆ ಭೂಸ್ವಾಧೀನ:
ಈ ನೇರ ರೈಲ್ವೆ ಮಾರ್ಗ ಯೋಜನೆಗೆ ದಾವಣಗೆರೆ ಜಿಲ್ಲೆಯಲ್ಲಿ 236 ಎಕರೆ ಭೂಮಿ ಅಗತ್ಯವಿತ್ತು. ಈ ಪೈಕಿ ಒಟ್ಟು 234 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಉಳಿದ 2ರಿಂದ 3 ಎಕರೆ ಮಾತ್ರ ಸ್ವಾಧೀನ ಬಾಕಿಯಿದೆ. ಅಲ್ಲದೆ, 3-4 ತಿಂಗಳಲ್ಲಿ ಈ ಎಲ್ಲ ಪ್ರಕ್ರಿಯೆ ಮುಗಿಸಿ, ಬಾಕಿಯಿರುವ 4-5 ಕಾಮಗಾರಿ ಆರಂಭಿಸುವುದಾಗಿ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.

ದಾವಣಗೆರೆ – ಚಿತ್ರದುರ್ಗದಲ್ಲಿ ಈ ರೈಲ್ವೆ ಮಾರ್ಗಕ್ಕೆ ಒಟ್ಟು 2,409 ಎಕರೆ ಭೂಮಿ ಅವಶ್ಯಕತೆ ಇತ್ತು. ಅದರಲ್ಲಿ, 145 ಎಕರೆ ಭೂಸ್ವಾಧೀನ ಪ್ರಕ್ರಿಯೆ ಮಾತ್ರ ಬಾಕಿ ಇದೆ. ನಾಲ್ಕು ತಿಂಗಳಲ್ಲಿ ಅದು ಮುಗಿಯುತ್ತದೆ. ಇದು ತುಂಬಾ ವರ್ಷಗಳ ಬೇಡಿಕೆ.
ಗಂಟೆಗೆ 110 ರಿಂದ 135 ಕಿ.ಮೀ ವೇಗ:
ಈ ಮಾರ್ಗದ ವೇಗವನ್ನು ಗಂಟೆಗೆ 80 ಕಿ.ಮೀ. ಇರುವುದನ್ನು, ಬಳಿಕ 110 ರಿಂದ 135 ಕಿ.ಮೀ.ಗೆ ಹೆಚ್ಚಿಸಿದ್ದೇವೆ ಎಂದು ಸಚಿವ ಸೋಮಣ್ಣ ತಿಳಿಸಿದರು.
ಹೊಸ ಮಾರ್ಗದಲ್ಲಿ 16 ರೈಲ್ವೇ ನಿಲ್ದಾಣ:
ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಹಲವು ಗ್ರಾಮ, ಪಟ್ಟಣ, ನಗರಗಳು ಇದೇ ಮೊದಲ ಬಾರಿಗೆ ರೈಲು ಸೇವೆಗೆ ತೆರೆದುಕೊಳ್ಳುತ್ತಿವೆ.
ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 16 ಹೊಸ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ: ಬೀದಿ ನಾಟಕ ಪ್ರದರ್ಶನ | ಕಲಾತಂಡಗಳಿಂದ ಅರ್ಜಿ ಆಹ್ವಾನ
ತುಮಕೂರು (ಹಳೆ ನಿಲ್ದಾಣ), ಉರಕೆರೆ ತಿಮ್ಮರಾಜನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ, ತಾವರೆಕೆರೆ, ಆನೆಸಿದ್ರಿ, ಹಿರಿಯೂರು ಮೇಟಿ ಕುರ್ಕೆ, ಐಮಂಗಲ, ಪಾಲವ್ವನಹಳ್ಳಿ, ದೊಡ್ಡಸಿದ್ಧವನಹಳ್ಳಿ, ಚಿತ್ರದುರ್ಗ (ಹಳೆ ನಿಲ್ದಾಣ), ಸಿರಿಗೆರೆ ಕ್ರಾಸ್, ಭರಮಸಾಗರ ಹೆಬ್ಬಾಳು, ಆನಗೋಡು, ತೋಳಹುಣಸೆ (ಹಳೆ ನಿಲ್ದಾಣ), ದಾವಣಗೆರೆ (ಹಳೆ ನಿಲ್ದಾಣ) ನಿಲ್ದಾಣಗಳು ಎಂದು ಗುರುತಿಸಲಾಗಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

