ಮುಖ್ಯ ಸುದ್ದಿ
Highcourt: ಶಾಸಕ ಟಿ.ರಘುಮೂರ್ತಿಗೆ ಮೊದಲ ಜಯ | ಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

CHITRADURGA NEWS | 05 SEPTEMBER 2024
ಚಿತ್ರದುರ್ಗ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಚಳ್ಳಕೆರೆ ಶಾಸಕ ರಘುಮೂರ್ತಿ ಅವರಿಗೆ ಹೈಕೋರ್ಟ್ (Highcourt) ಹಸಿರು ನಿಶಾನೆ ತೋರಿಸಿದೆ.
ಸೆ.4 ಬುಧವಾರ ರಘುಮೂರ್ತಿ ಸಲ್ಲಿಸಿದ್ದ ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ, ನಿರ್ದೇಶಕ ಸ್ಥಾನಕ್ಕೆ ಅವರು ಸಲ್ಲಿಸಿರುವ ನಾಮಪತ್ರ ಅಂಗೀಕರಿಸುವಂತೆ ಚುನಾವಣಾಧಿಕಾರಿಗೆ ಸೂಚಿಸಿದೆ.

ಇದನ್ನೂ ಓದಿ: ಸೂರ್ಯಕಾಂತಿಗೆ 7280 ರೂ. ದರ ನಿಗಧಿ | ಖರೀದಿ ಕೇಂದ್ರ ಸ್ಥಾಪಿಸಲು ಡಿಸಿ ಆದೇಶ
ಉಳಿದಂತೆ ಅನರ್ಹಗೊಂಡಿರುವ ಸೊಸೈಟಿಗಳ ಪ್ರತಿನಿಧಿಗಳು ಮತದಾನ ಮಾಡುವ ಬಗ್ಗೆ ಸೆ.9ಕ್ಕೆ ವಿಚಾರಣೆ ಮುಂದೂಡಿದೆ.

ಡಿಸಿಸಿ ಬ್ಯಾಂಕ್
ಸಚಿವ ಡಿ.ಸುಧಾಕರ್ ಅಧ್ಯಕ್ಷರಾಗಿರುವ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಸೆ.12ರಂದು ಚುನಾವಣೆ ನಿಗಧಿಯಾಗಿದೆ. ಈ ಹಿನ್ನೆಲೆಯಲ್ಲಿ ಸೆ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು.
ಇದನ್ನೂ ಓದಿ: ಪುರಪ್ರವೇಶ ಮಾಡಿದ ಹಿಂದೂ ಮಹಾಗಣಪತಿ | ಸಾವಿರಾರು ಜನ ಸೇರಿ ಮೆರವಣಿಗೆ ಮೂಲಕ ಸ್ವಾಗತ
ಆದರೆ, ಬೈಲಾ ಉಲ್ಲಂಘನೆ ಆರೋಪದಡಿ ಶಾಸಕ ರಘುಮೂರ್ತಿ ಪ್ರತಿನಿಧಿಸುವ ಕಡಬನಕಟ್ಟೆ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಸುಮಾರು 200 ಸೊಸೈಟಿಗಳನ್ನು ಅನರ್ಹಗೊಳಿಸಲಾಗಿತ್ತು.
ಶಾಸಕ ಟಿ.ರಘುಮೂರ್ತಿ ಅವರನ್ನು ಡಿಸಿಸಿ ಬ್ಯಾಂಕಿನಿಂದ ದೂರವಿಡುವ ತಂತ್ರವಾಗಿ ಸಚಿವ ಡಿ.ಸುಧಾಕರ್ ಒತ್ತಡದಿಂದ ಅಧಿಕಾರಿಗಳು ಈ ಕೆಲಸ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು.
ಇದನ್ನೂ ಓದಿ: ಅಹೋಬಲ TVSನಲ್ಲಿ ಹೊಸ ಜುಪಿಟರ್ 110 ಸಿಸಿ ಸ್ಕೂಟಿ ಲಾಂಚ್
ಚಳ್ಳಕೆರೆ ತಾಲೂಕಿನ ನಗರಂಗೆರೆ ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರತಿನಿಧಿಸುವ ಡಿ.ಸುಧಾಕರ್ ಕಳೆದ ನಾಲ್ಕು ಅವಧಿಗೆ ಅಧ್ಯಕ್ಷರಾಗಿದ್ದಾರೆ. ಡಿಸಿಸಿ ಬ್ಯಾಂಕನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎನ್ನುವ ಬಗ್ಗೆ ಆರೋಪ ಕೇಳಿ ಬಂದಿವೆ.
ನಿರ್ದೇಶಕ ಸ್ಥಾನಕ್ಕೆ 53 ನಾಮಪತ್ರ ಸಲ್ಲಿಕೆ:
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಸೆ.4 ಸಂಜೆ 4 ಗಂಟೆಯವರೆಗೆ ಅವಕಾಶವಿತ್ತು. ಈ ಅವಧಿಯಲ್ಲಿ 12 ಸ್ಥಾನಗಳಿಗೆ ಒಟ್ಟು 53 ನಾಮಪತ್ರ ಸಲ್ಲಿಕೆಯಾಗಿವೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಕೋರ್ಟ್ ಮೆಟ್ಟಿಲೇರಿದ ಶಾಸಕ ರಘುಮೂರ್ತಿ | 200 ಸೊಸೈಟಿ ಅನರ್ಹ
ಶಾಸಕ ಟಿ.ರಘುಮೂರ್ತಿ ಸೆ.3 ರಂದೇ ನ್ಯಾಯಾಲಯದ ಮೊರೆ ಹೋಗುವುದಾಗಿ ಷರಾ ಬರೆದು ನಾಮಪತ್ರ ಸಲ್ಲಿಸಿದ್ದದ್ದರು.
ಹಾಲಿ ಅಧ್ಯಕ್ಷ, ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ, ಎಸ್.ಆರ್.ಗಿರೀಶ್, ಟಿ.ಎಸ್.ಪ್ರಭುದೇವ್, ಜಿಂಕಲ್ ಬಸವರಾಜ್, ಎಂ.ಭಾರತಿ, ಬಿ.ಕರಿಯಪ್ಪ, ಎಚ್.ಬಿ.ಮಂಜುನಾಥ್, ಕೆ.ಅನಂತ್, ತಿಪ್ಪೇಸ್ವಾಮಿ ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಿದ್ದಾರೆ.
