Dina Bhavishya
Dina Bhavishya: ದಿನ ಭವಿಷ್ಯ | ಆಗಸ್ಟ್ 22 | ಚಿತ್ರದುರ್ಗ ನ್ಯೂಸ್

CHITRADURGA NEWS | 22 AUGUST | 2024
ಆತ್ಮೀಯ ಚಿತ್ರದುರ್ಗ ನ್ಯೂಸ್ ಓದುಗರಿಗೆ ನಮಸ್ಕಾರ. ಇಂದಿನಿಂದ ಪ್ರತಿ ದಿನ ನಿಮ್ಮ ರಾಶಿ ಭವಿಷ್ಯ(Dina BHAVISHYA) ಪ್ರಕಟಿಸುತ್ತಿದ್ದೇವೆ.
2024 ಆಗಸ್ಟ್ 22 ಗುರುವಾರ ಚಂದ್ರನು ಮೀನಾ ರಾಶಿ ಪ್ರವೇಶ ಮಾಡಲಿದ್ದಾನೆ. ಈ ದಿನ ಸರ್ವಾರ್ಥ ಸಿದ್ಧಿ ಯೋಗವಿದೆ. ಮೇಷದಿಂದ ಮೀನಾ ರಾಶಿವರೆಗಿನ 12 ರಾಶಿಗಳ ಇಂದಿನ ಭವಿಷ್ಯ ಇಲ್ಲಿದೆ.

ಮೇಷ: ಈ ದಿನ ನಿಮ್ಮ ವ್ಯವಹಾರದಲ್ಲಿ ಮಿಶ್ರಫಲ. ವಿವೇಚನೆ ಇಲ್ಲದೆ ಹಣಕಾಸು ಖರ್ಚು ಮಾಡಿ ನಷ್ಟ ಅನುಭವಿಸುತ್ತೀರಿ. ಹಣದ ವಿಚಾರದಲ್ಲಿ ಎಚ್ಚರ. ದೂರದ ಪ್ರಯಾಣ ಮುಂದೂಡಿ.
ವೃಷಭ: ಮಿತ್ರರಿಂದ ಅನುಕೂಲವಿದೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಇಂದು ಕಿರಿಕಿರಿ ಆಗುವ ಸಾಧ್ಯತೆ ಇದೆ. ಮಾನಸಿಕ ಗೊಂದಲ, ತಳಮಳ ಇರುವ ದಿನ ಎಚ್ಚರವಾಗಿರಿ.
ಮಿಥುನ: ಇಂದು ನಿಮ್ಮ ಅದೃಷ್ಟದ ದಿನ. ಉತ್ತಮ ಧನ ಆದಾಯವಿದೆ. ಆದರೆ, ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಮಟ್ಟಿನ ಕಿರಿಕಿರಿ ಇರುತ್ತದೆ. ನ್ಯಾಯಾಲಯದ ಪ್ರಕರಣದಲ್ಲಿ ಸಮಸ್ಯೆಯಾಗುವ ಸಾಧ್ಯತೆ.
ಕಟಕ: ಉದ್ಯೋಗದಲ್ಲಿ ಯಶಸ್ವಿಯಾಗುವಿರಿ. ಆದರೆ, ತಂದೆ ಮಕ್ಕಳಲ್ಲಿ ಕಿರಿಕಿರಿಯಾಗುವ ಸಾಧ್ಯತೆ ಇದೆ. ಅನೇಕ ಆಸೆ ಆಕಾಂಕ್ಷೆಗಳಿಗೆ ಬಲಿಯಾಗುವಿರಿ. ಎಚ್ಚರಿಕೆ ವಹಿಸಿ.
ಇದನ್ನೂ ಓದಿ: ಆತಂಕ ಮೂಡಿಸಿದ 6 ವಿದ್ಯಾರ್ಥಿಗಳ ನಾಪತ್ತೆ ಪ್ರಕರಣ | ವಸತಿ ಶಾಲೆಯಿಂದ ಬೆಳಗ್ಗೆ ತೆರಳಿದ್ದ ಮಕ್ಕಳು | ಬೆಂಗಳೂರಿನಲ್ಲಿ ಪತ್ತೆ
ಸಿಂಹ: ಇಂದು ನಿಮಗೆ ವಿಪರೀತ ಅದೃಷ್ಟದ ದಿನ. ವಿಪರೀತ ರಾಜಯೋಗದ ದಿನ. ಆದರೆ, ಆಲಸ್ಯ ಬಾಧಿಸುತ್ತದೆ. ಸೋಮಾರಿಗಳಾಗುವಿರಿ. ಜಿಗುಪ್ಸೆ ಕಾಡಲಿದೆ. ಕಾಲಿಗೆ ತೊಂದರೆಯಾಗಿ ಸಣ್ಣಪುಟ್ಟ ಪೆಟ್ಟಾಗುವ ಸಾಧ್ಯತೆ ಎಚ್ಚರ.
ಕನ್ಯಾ: ನಿಮಗೆ ಬಂಧುಗಳಿಂದ ತೊಂದರೆಯಿದೆ. ನೆರೆಹೊರೆಯವರಿಂದಲೂ ಸಮಸ್ಯೆ ಇದ್ದು, ನಿದ್ರಾಭಂಗವಾಗಲಿದೆ. ವಿಚ್ಚೇಧನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಜಯ ಸಿಗಲಿದೆ.
ತುಲಾ: ಇಂದು ಬಹಳ ಎಚ್ಚರವಾಗಿರಿ. ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದಲ್ಲೂ ತೊಂದರೆಯಿದೆ. ಆರ್ಥಿಕವಾಗಿ ಸಂಕಷ್ಟದ ದಿನವಾಗಿದೆ.
ವೃಶ್ಚಿಕ: ನಿಮಗೆ ಹೆಣ್ಣು ಮಕ್ಕಳಿಂದ ಸಾಕಷ್ಟು ಅನುಕೂಲ ಆಗಲಿದೆ. ಆದರೆ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಕಾಡಲಿದೆ. ಆರ್ಥಿಕವಾಗಿ ಹೆಚ್ಚು ಅನುಕೂಲವಿದೆ.
ಧನಸ್ಸು: ಇಂದು ಮಕ್ಕಳಿಗೆ ಹೆಚ್ಚು ಅವಕಾಶಗಳು ಲಭಿಸಲಿವೆ. ಧನಹಾನಿಯಾಗಲಿದೆ. ತಾಯಿಯ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗುವ ಸಾಧ್ಯತೆ. ವಾಹನ ಚಲಾಯಿಸುವಾಗ ಎಚ್ಚರವಹಿಸಿ. ಅಪಘಾತದ ಸಂಭವ ಇದೆ.
ಮಕರ: ಇಂದು ನಿಮಗೆ ಶುಭಯೋಗವಿದೆ. ಉತ್ತಮ ಸ್ನೇಹಿತರ ಪರಿಚಯವಾಗಲಿದೆ. ಆದರೆ, ಕಾನೂನು ಬಾಹಿರವಾಗಿ ಹಣ ಸಂಪಾದನೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಶಾಲೆ ವಿರುದ್ಧ ಪೋಷಕರ ಅಸಮಧಾನ | ಮಕ್ಕಳಿಗೆ ಕ್ರೂರ ದಂಡನೆಯ ಆರೋಪ | ಸಮಗ್ರ ತನಿಖೆಗೆ ತಹಶೀಲ್ದಾರ್ ಸೂಚನೆ
ಕುಂಭ: ಇಂದು ಹೆಚ್ಚು ಖರ್ಚು. ಸಾಲ ಮಾಡುವ ಪರಿಸ್ಥಿತಿ ಬರಬಹುದು. ನಿಮ್ಮ ಕಾರ್ಮಿಕರಿಂದ ಸಮಸ್ಯೆ ಆಗಬಹುದು.
ಮೀನಾ: ಬಂಧುಗಳಿಂದ ಮಾನಹಾನಿ ಸಾಧ್ಯತೆ. ತಂದೆಯ ಆರೋಗ್ಯದಲ್ಲೂ ವ್ಯತ್ಯಾಸ ಆಗಲಿದೆ. ಆಧ್ಯಾತ್ಮದ ಮೊರೆ ಹೋಗಿ. ದೇವರ ಪ್ರಾರ್ಥನೆ ಮಾಡಿ.
