Connect with us

    DREAM WORLD ಶಾಲೆ ವಿರುದ್ಧ ಪೋಷಕರ ಅಸಮಧಾನ | ಮಕ್ಕಳಿಗೆ ಕ್ರೂರ ದಂಡನೆಯ ಆರೋಪ | ಸಮಗ್ರ ತನಿಖೆಗೆ ತಹಶೀಲ್ದಾರ್ ಸೂಚನೆ

    Thahasildar fathima

    ಹೊಳಲ್ಕೆರೆ

    DREAM WORLD ಶಾಲೆ ವಿರುದ್ಧ ಪೋಷಕರ ಅಸಮಧಾನ | ಮಕ್ಕಳಿಗೆ ಕ್ರೂರ ದಂಡನೆಯ ಆರೋಪ | ಸಮಗ್ರ ತನಿಖೆಗೆ ತಹಶೀಲ್ದಾರ್ ಸೂಚನೆ

    https://chat.whatsapp.com/Jhg5KALiCFpDwME3sTUl7x

    ಹೊಳಲ್ಕೆರೆ: ಹೊಳಲ್ಕೆರೆ ಪಟ್ಟಣದ ಖಾಸಗಿ ವಸತಿ ಶಾಲೆ ಡ್ರೀಮ್ ವರ್ಲ್ಡ್ (DREAM WORLD) ಬಗ್ಗೆ ಪೋಷಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಮಕ್ಕಳು ಹೊರಗೆ ಎಗ್‍ರೈಸ್ ತಿಂದಿದ್ದಕ್ಕೆ ಬಸ್ಕಿ ಹೊಡೆಸಿ ಶಿಕ್ಷೆ ಕೊಟ್ಟಿದ್ದಾರೆ. ಹೊರಗೆ ಹೋಗಿ ಚಾಕೊಲೇಟ್ ತಿಂದರೂ ಕ್ರೂರವಾಗಿ ಶಿಕ್ಷಿಸುತ್ತಿದ್ದರು ಎನ್ನುವ ವಿಚಾರವನ್ನು ಪೋಷಕರು ಬಯಲಿಗೆ ಹಾಕಿದ್ದಾರೆ.

    ಇದನ್ನೂ ಓದಿ: ಆತಂಕ ಮೂಡಿಸಿದ 6 ವಿದ್ಯಾರ್ಥಿಗಳ ನಾಪತ್ತೆ ಪ್ರಕರಣ | ವಸತಿ ಶಾಲೆಯಿಂದ ಬೆಳಗ್ಗೆ ತೆರಳಿದ್ದ ಮಕ್ಕಳು | ಬೆಂಗಳೂರಿನಲ್ಲಿ ಪತ್ತೆ

    ಇಂದು ಬೆಳಗ್ಗೆ 6 ಮಕ್ಕಳು ನಾಪತ್ತೆಯಾಗಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಸಂಬಂಧ ತಹಶೀಲ್ದಾರ್ ಬೀಬಿ ಫಾತಿಮಾ ಕೂಡಾ ಶಾಲೆಗೆ ಭೇಟಿ ನೀಡಿ ಮಕ್ಕಳು, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಜೊತೆ ಮಾತನಾಡಿ ಬಂದಿದ್ದಾರೆ.

    ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿರುವ ತಹಶೀಲ್ದಾರ್, ಸರ್ಕಾರದ ಅನುಮತಿ ಪಡೆಯದೇ ಹಾಸ್ಟೆಲ್ ನಡೆಸುತ್ತಿದ್ದರು ಎನ್ನುವ ವಿಚಾರ ಗಮನಕ್ಕೆ ಬಂದಿದೆ ಎಂದು ಹೇಳಿದರು.

    ಇದನ್ನೂ ಓದಿ: ಚಿತ್ರದುರ್ಗದ ಈ ಗ್ರಾಮಕ್ಕೆ ರಾಜ್ಯದಲ್ಲೇ ಅತಿ ಹೆಚ್ಚು ಮಳೆ | ತುಂಬಿ ಹರಿದ ಹಳ್ಳಕೊಳ್ಳ

    ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಸಮಗ್ರವಾಗಿ ವಿಚಾರಣೆ ನಡೆಸಿ ವರದಿ ನೀಡಲು ತಿಳಿಸಿದ್ದು, ವರದಿ ಬಂದ ನಂತರ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದು ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

    ಶಾಲೆಯ ಪ್ರಿನ್ಸಿಪಾಲ್ ಶಶಿಕಲಾ ಮಾತನಾಡಿ, ಶಾಲೆಯಿಂದ ಹೋಗಿರುವ ಎಲ್ಲ ಮಕ್ಕಳು ಚೆನ್ನಾಗಿ ಓದುತ್ತಿದ್ದರು. ಯಾವ ಕಾರಣಕ್ಕೆ ಹೋದರು ಎನ್ನುವುದು ನನಗೂ ಗೊತ್ತಿಲ್ಲ. ತಿಂಗಳ ಹಿಂದೆ ಒಬ್ಬ ಹುಡುಗ ಅವರ ಮನೆಯಿಂದ ನಾಪತ್ತೆಯಾಗಿದ್ದ. ಅವನು ಎಲ್ಲ ಮಕ್ಕಳಿಗೆ ಸಲಹೆ ನೀಡಿ ಕರೆದುಕೊಂಡು ಹೋಗಿದ್ದಾನೆ ಎನ್ನುವ ಮಾಹಿತಿಯಿದೆ ಎಂದಿದ್ದಾರೆ.

    ಇದನ್ನೂ ಓದಿ: ಆಯಿಲ್‌ಸಿಟಿಗೆ ವರುಣಾಘಾತ | ನೀರಿನಲ್ಲೇ ನಿಂತು ರಾತ್ರಿ ಕಳೆದ ಜನರು

    ವಿದ್ಯಾರ್ಥಿ ನಿಲಯ ನಡೆಸಲು ಅನುಮತಿ ಪಡೆದುಕೊಂಡಿದ್ದೇವೆ. ಎರಡು ದಿನಗಳಲ್ಲಿ ಮಾಹಿತಿ ನೀಡುತ್ತೇವೆ. ಶಾಲೆಗೆ ಸಿ.ಸಿ.ಕ್ಯಾಮರಾ ಅಳವಡಿಸಲಾಗಿತ್ತು. ಮೂರು ದಿನಗಳ ಹಿಂದ ಮಳೆಯಿಂದ ಕೆಳಗೆ ಬಿದ್ದು ಹಾಳಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಶಾಲೆಯಲ್ಲಿ ಓದಿಗೆ ಸಾಕಷ್ಟು ಒತ್ತಡ, ಗೈರು ಹಾಜರಾದರೆ ಕ್ರೂರವಾಗಿ ದಂಡನೆ ವಿಧಿಸುತ್ತಿರುವ ವಿಚಾರ ತಿಳಿದು ಬಂದಿದೆ. ಇದರಿಂದ ಮಕ್ಕಳು ಆಘಾತಕ್ಕೆ ಒಳಗಾಗಿದ್ದಾರೆ. ಜೂನ್ ತಿಂಗಳಲ್ಲೇ ಎಲ್ಲ ಖಾಸಗಿ ಶಾಲೆ ಮುಖ್ಯಸ್ಥರನ್ನು ಕರೆಯಿಸಿ ಒತ್ತಡ ಹಾಕದಂತೆ ತಿಳುವಳಿಕೆ ನೀಡಿದ್ದರೂ ಉಲ್ಲಂಘಿಸಿದ್ದಾರೆ. ಸಮಗ್ರ ವರದಿ ತರಿಸಿಕೊಂಡು ಕಾನೂನು ಕ್ರಮ ಜರುಗಿಸುತ್ತೇವೆ.

    | ಬೀಬಿ ಫಾತಿಮಾ, ಹೊಳಲ್ಕೆರೆ ತಹಶೀಲ್ದಾರ್.

    Click to comment

    Leave a Reply

    Your email address will not be published. Required fields are marked *

    More in ಹೊಳಲ್ಕೆರೆ

    To Top