
CHITRADURGA NEWS | 12 SEPTEMBER 2024
ಚಿತ್ರದುರ್ಗ: ಬಸ್ಸಿನ (ಮೇಲ್ಛಾವಣಿ) ಮೇಲೆ 25 ರಿಂದ 30 ಜನರನ್ನು ಕೂರಿಸಿಕೊಂಡು ಬಂದ ಖಾಸಗಿ ಬಸ್ ಚಾಲಕ ಹಾಗೂ ಮಾಲಿಕರ ಮೇಲೆ ದೂರು (FIR) ದಾಖಲಾಗಿದೆ.
ಜಗಳೂರು ಕಡೆಯಿಂದ ಚಿತ್ರದುರ್ಗಕ್ಕೆ ಬಂದ ಖಾಸಗಿ ಬಸ್ಸಿನ ಟಾಪ್‍ನಲ್ಲಿ ಸಾಕಷ್ಟು ಜನ ಕುಳಿತು ಪ್ರಯಾಣ ಮಾಡುತ್ತಿರುವುದನ್ನು ಗಮನಿಸಿದ ಚಿತ್ರದುರ್ಗ ಸಂಚಾರಿ ಪೊಲೀಸರು, ಜೆಎಂಐಟಿ ವೃತ್ತದ ಬಳಿ ಬಸ್ ತಡೆದು ಜನರನ್ನು ಇಳಿಸಿ ಬಸ್ ಚಾಲಕನ ಮೇಲೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ; ನಿರ್ಲಕ್ಷ್ಯ ತೋರಿದರೆ ಎಫ್‍ಐಆರ್ | ಅಧಿಕಾರಿಗಳಿಗೆ ಡಿಸಿ ವೆಂಕಟೇಶ್ ಎಚ್ಚರಿಕೆ
ಜನರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಬಸ್ಸಿನ ಮೇಲೆ 25 ರಿಂದ 30 ಜನರನ್ನು ಕೂರಿಸಿಕೊಂಡು ಬಂದ ಚಾಲಕ ಕಂಚೋಬಳಪ್ಪ, ನಿರ್ವಾಹಕ ದಿನೇಶ್ ಹಾಗೂ ಬಸ್ ಮಾಲಿಕರಾದ ಎಸ್.ಜಯಕುಮಾರ್ ವಿರುದ್ಧ ಸಂಚಾರಿ ಪೊಲೀಸರು ದೂರು ದಾಖಲಿಸಿದ್ದಾರೆ.
ಮುಂದಿನ ದಿನಗಳಲ್ಲೂ ಯಾವುದೇ ಬಸ್ಸಿನಲ್ಲಿ ಈ ರೀತಿಯಲ್ಲಿ ಜನರ ಪ್ರಾಣಕ್ಕೆ ತೊಂದರೆಯಾಗುವಂತೆ ಟಾಪ್‍ನಲ್ಲಿ ಕೂರಿಸಿಕೊಂಡು ಚಾಲನೆ ಮಾಡಿದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ | ಐದು ಜನರ ಗೆಲುವು

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
