ಮುಖ್ಯ ಸುದ್ದಿ
City council election: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ | ನಾಮಪತ್ರ ಸಲ್ಲಿಸಿದ ಸದಸ್ಯೆಯರು

CHITRADURGA NEWS | 26 AUGUST 2024
ಚಿತ್ರದುರ್ಗ: ಚಿತ್ರದುರ್ಗದ ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.

ಬಿ.ಎನ್.ಸುಮಿತಾ ರಾಘವೇಂದ್ರ ನಾಮಪತ್ರ ಸಲ್ಲಿಕೆ
ಅಧ್ಯಕ್ಷ ಸ್ಥಾನಕ್ಕೆ 29ನೇ ವಾರ್ಡ್ ಸದಸ್ಯೆ ಬಿ.ಎನ್.ಸುಮಿತಾ ರಾಘವೇಂದ್ರ, 32 ನೇ ವಾರ್ಡ್‌ನ ಎಸ್.ಸಿ.ತಾರಕೇಶ್ವರಿ ಹಾಗೂ ಉಪಾಧ್ಯಕ್ಷ ಸ್ಥಾನಕದ್ಕೆ 33ನೇ ವಾರ್ಡ್‌ನ ಸದಸ್ಯೆ ಜಿ.ಎಸ್.ಶ್ರೀದೇವಿ ಚಕ್ರವರ್ತಿ ಹಾಗೂ 22 ವಾರ್ಡ್‌ನ ಬಿ.ಎಸ್.ರೋಹಿಣಿ ನವೀನ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಕ್ಲಿಕ್ ಮಾಡಿ ಓದಿ: ವಾರದೊಳಗೆ ಭೂಸ್ವಾಧೀನ ಪೂರ್ಣಗೊಳಿಸಿ | ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೂಚನೆ

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಗದ್ದುಗೆಗೆ ಹಿಡಿಯಲು ತಂತ್ರ, ಪ್ರತಿತಂತ್ರಗಳು ಕ್ಷಣದಿಂದ ಕ್ಷಣ ರೋಚಕ ತಿರುವು ಪಡೆಯುತ್ತಿವೆ.

ಜಿ.ಎಸ್.ಶ್ರೀದೇವಿ ಚಕ್ರವರ್ತಿ ನಾಮಪತ್ರ ಸಲ್ಲಿಕೆ
ಎರಡನೇ ಅವಧಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ , ಉಪಾಧ್ಯಕ್ಷ ಸ್ಥಾನ ಬಿಸಿಎಂ ‘ಎ’ ಮಹಿಳೆಗೆ ಮೀಸಲಾಗಿದೆ.

ಎಸ್.ಸಿ.ತಾರಕೇಶ್ವರಿ ನಾಮಪತ್ರ ಸಲ್ಲಿಕೆ
35 ಸದಸ್ಯ ಬಲದ ಚಿತ್ರದುರ್ಗ ನಗರಸಭೆಯಲ್ಲಿ ಬಿಜೆಪಿಗೆ 17 ಸದಸ್ಯರಿದ್ದಾರೆ. ಜೆಡಿಎಸ್ 6, ಪಕ್ಷೇತರ 7 ಸದಸ್ಯರಿದ್ದು, ಕಾಂಗ್ರೆಸ್ 5 ಸದಸ್ಯ ಸ್ಥಾನಗಳಲ್ಲಿಗೆದ್ದಿತ್ತು.

ಬಿ.ಎಸ್.ರೋಹಿಣಿ ನವೀನ್ ನಾಮಪತ್ರ ಸಲ್ಲಿಕೆ
ಅದರಲ್ಲಿಒಬ್ಬ ಸದಸ್ಯರು (ಪೊಲೀಸ್ ಮಲ್ಲಿಕಾರ್ಜುನ್) ಅಕಾಲಿಕ ಮರಣದಿಂದ ಈಗ 4 ಸ್ಥಾನಗಳಿಗೆ ಕುಸಿದಿದೆ.
