ಮುಖ್ಯ ಸುದ್ದಿ
Muncipolity: ತೀವ್ರ ಕುತೂಹಲ ಮೂಡಿಸಿದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ | ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ರಣತಂತ್ರ | ಸಂಸದ ಗೋವಿಂದ ಕಾರಜೋಳ ಪ್ರತಿತಂತ್ರ

CHITRADURGA NEWS | 26 AUGUST 2024
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಬೆಳಗ್ಗೆ 10 ಗಂಟೆಯಿಂದ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಕಳೆದ ಅವಧಿಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ತಿಪ್ಪಮ್ಮ ವೆಂಕಟೇಶ್ ಅಧ್ಯಕ್ಷರಾಗಿ ಅವಧಿ ಪೂರ್ಣಗೊಳಿಸಿದ್ದರು.

ಈಗ ಎರಡನೇ ಅವಧಿ ಪ್ರಾರಂಭವಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆಗೆ ಮೀಸಲಾಗಿದೆ.
ಇದನ್ನೂ ಓದಿ: ಶರಣ ಸಂಸ್ಕøತಿ ಉತ್ಸವಕ್ಕೆ ಯಾರು ಎಷ್ಟು ವಾಗ್ದಾನ ಮಾಡಿದ್ರು
35 ಸದಸ್ಯ ಬಲದ ಚಿತ್ರದುರ್ಗ ನಗರಸಭೆಯಲ್ಲಿ ಬಿಜೆಪಿಗೆ 17 ಸದಸ್ಯರಿದ್ದಾರೆ. ಜೆಡಿಎಸ್ 6, ಪಕ್ಷೇತರ 7 ಸದಸ್ಯರಿದ್ದು, ಕಾಂಗ್ರೆಸ್ 5 ಸದಸ್ಯ ಸ್ಥಾನಗಳಲ್ಲಿ ಗೆದ್ದಿತ್ತು. ಅದರಲ್ಲಿ ಒಬ್ಬ ಸದಸ್ಯರು (ಪೊಲೀಸ್ ಮಲ್ಲಿಕಾರ್ಜುನ್) ಅಕಾಲಿಮ ಮರಣದಿಂದ ಈಗ 4 ಸ್ಥಾನಗಳಿಗೆ ಕುಸಿದಿದೆ. ಶಾಸಕರ ಮತ ಸೇರುವುದರಿಂದ ಮತ್ತೆ ಸದಸ್ಯ ಬಲ ಹೆಚ್ಚಾಗಿದೆ.
ಇತ್ತ ಬಿಜೆಪಿ ಜೊತೆಗೆ ಸಂಸದ ಗೋವಿಂದ ಕಾರಜೋಳ ಅವರ ಮತವೂ ಸೇರಲಿದೆ. ಈಗಾಗಲೇ ಸಂಸದರ ನೇತೃತ್ವದಲ್ಲಿ ನಗರಸಭೆ ಚುನಾವಣೆ ಸಂಬಂಧ ಮಾತುಕತೆ ನಡೆದಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯ ಕೆಲ ಸದಸ್ಯರು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದರಿಂದ ಎರಡನೇ ಅವಧಿಗೆ ಬಿಜೆಪಿಯೇ ಅಧಿಕಾರ ಹಿಡಿಯುವ ಬಗ್ಗೆ ಅನುಮಾನವಿದೆ.
ಇದನ್ನೂ ಓದಿ: ಶರಣ ಸಂಸ್ಕøತಿ ಉತ್ಸವದ ಗೌರವಾಧ್ಯಕ್ಷರಾಗಿ ರುದ್ರೇಶ್ವರ ಸ್ವಾಮೀಜಿ, ಅಧ್ಯಕ್ಷರಾಗಿ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ)
ಆದರೆ, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರ ಇರುವುದರಿಂದ ಜೆಡಿಎಸ್ ಸದಸ್ಯರು ಬಿಜೆಪಿ ಜೊತೆ ಸೇರಿದರೆ ಅಧಿಕಾರ ನಿಶ್ಚಿತ.
ಕೈ ಹಿಡಿದ ಇಬ್ಬರು ಪಕ್ಷೇತರ ಸದಸ್ಯರು:
ಚುನಾವಣೆ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಪಕ್ಷೇತರರಾಗಿ ಗೆದ್ದಿದ್ದ ನಗರಸಭೆಯ 29ನೇ ವಾರ್ಡ್ ಸದಸ್ಯೆ ಸುಮಿತಾ ರಾಘವೇಂದ್ರ ಹಾಗೂ 24ನೇ ವಾರ್ಡ್ ಸದಸ್ಯ ದಾವುದ್ ಶಾಸಕ ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದಾರೆ.
ಒಂದು ಹಂತದಲ್ಲಿ ಸುಮಿತಾ ರಾಘವೇಂದ್ರ ಅವರೇ ಕಾಂಗ್ರೆಸ್ ಕಡೆಯಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ:
ಕಳೆದ ವಿಧಾನಸಭೆ ಚುನಾವಣೆ ವೇಳೆ ಕೆಲ ಸದಸ್ಯರು ಪಕ್ಷವಿರೋಧ ಕೆಲಸ ಮಾಡಿದ ದೂರುಗಳಿವೆ. ಈ ನಡುವೆ ನಗರಸಭೆಯಲ್ಲಿ ಬಹುಮತ ಇರುವುದರಿಂದ ಅಧಿಕಾರಿ ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಪೊಲೀಸ್ ಇಲಾಖೆಯಿಂದ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಮಹತ್ವದ ಸೂಚನೆ
ಸ್ಥಳೀಯವಾಗಿ ಬಿಜೆಪಿಗೆ ಶಾಸಕರಿಲ್ಲ. ಆದರೆ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಿಲುವು ಏನಾಗಿದೆ ಎನ್ನುವುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.’ಸಂಸದ ಗೋವಿಂದ ಕಾರಜೋಳ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಈಗ ಗೋವಿಂದ ಕಾರಜೋಳ ಅವರಿಗೆ ಚಿತ್ರದುರ್ಗ ನಗರಸಭೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳುತ್ತಾ ಅಥವಾ ಅತಂತ್ರ ನಗರಸಭೆ ಸೃಷ್ಟಿಯಾಗಿ ಎಲ್ಲ ಪಕ್ಷಗಳ ಸದಸ್ಯರು ಸೇರಿ ಒಬ್ಬರನ್ನು ಅಧ್ಯಕ್ಷರನ್ನು ಮಾಡಿಕೊಳ್ಳುತ್ತಾರಾ, ಶಾಸಕ ವೀರೇಂದ್ರ ಪಪ್ಪಿ ಕೈ ಮೇಲಾಗುತ್ತಾ ಎನ್ನುವುದನ್ನು ಕಾದು ಇಂದು ಮಧ್ಯಾಹ್ನ 12 ಗಂಟೆವರೆಗ ಕಾದು ನೋಡಬೇಕಿದೆ.
