CHITRADURGA NEWS | 18 SEPTEMBER 2025
ಚಿತ್ರದುರ್ಗ: ಪ್ರತಿ ವರ್ಷವೂ ದಸರಾ ಹಬ್ಬಕ್ಕಾಗಿ ಸರ್ಕಾರ ಶಾಲೆಗಳಿಗೆ ರಜೆ ಘೋಷಿಸುತ್ತದೆ. ಕ್ರಿಶ್ಚಿಯನ್ ಶಾಲೆಯವರು ಹಬ್ಬದ ರಜೆಗಳನ್ನು ಕಡಿತಗೊಳಿಸಿ ಕ್ರಿಸ್‍ಮಸ್ ಹಬ್ಬಕ್ಕೆ ನೀಡುತ್ತ ಹಿಂದೂ ಧಾರ್ಮಿಕ ಹಬ್ಬಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲ. ಕ್ರಿಶ್ಚಿಯನ್ ಶಾಲೆಗಳ ಗೇಟ್‍ಗಳಿಗೆ ಬೀಗ ಹಾಕುತ್ತೇವೆ ಎಂದು ಶ್ರೀ ರಾಮಸೇನೆ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.

ಇದನ್ನೂ ಓದಿ: ಮೊಳಕಾಲ್ಮೂರು ಜವಳಿ ಪಾರ್ಕ್ ಮಾಡಲು ಸಹಕಾರ | ಕೆ.ಎಸ್.ನವೀನ್
ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಹಬ್ಬದ ರಜೆಯನ್ನು ಕ್ರಿಶ್ಚಿಯನ್ ಕಾನ್ವೆಂಟ್‍ಗಳು ಮೊಟಕುಗೊಳಿಸಿ ಮಕ್ಕಳಿಗೆ ಪಾಠ ಹೇಳುವುದರ ಜೊತೆ ಪರೀಕ್ಷೆಗಳನ್ನು ಘೋಷಿಸುತ್ತವೆ. ಶೇ.90 ರಷ್ಟು ಹಿಂದೂ ವಿದ್ಯಾರ್ಥಿಗಳು ಕ್ರಿಶ್ಚಿಯನ್ ಕಾನ್ವೆಂಟ್‍ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಶಿಕ್ಷಕರು, ಸಿಬ್ಬಂದಿಗಳು ಕೂಡ ಹಿಂದೂಗಳಿದ್ದಾರೆ. ದಸರಾ ಇನ್ನಿತರೆ ಹಬ್ಬಗಳನ್ನು ಹಿಂದೂಗಳು ಶಾಸ್ತ್ರೋಕ್ತ ವೈಜ್ಞಾನಿಕವಾಗಿ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಸಾಮರಸ್ಯ ಮೂಡಿಸುವ ಹಬ್ಬಗಳನ್ನು ಕ್ರಿಶ್ಚಿಯನ್ನರು ಹತ್ತಿಕ್ಕಲು ನಾವುಗಳು ಬಿಡುವುದಿಲ್ಲ. ಈ ಸಂಬಂಧ ಶಿಕ್ಷಣ ಮಂತ್ರಿಗಳಿಗೆ, ಇಲಾಖೆಯ ಉಪ ನಿರ್ದೇಶಕರುಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಹಿಂದೂಗಳನ್ನು ನೇರವಾಗಿ ಮತಾಂತರಗೊಳಿಸದಿದ್ದರೂ ಮಾನಸಿಕ ಹಾಗೂ ಸಾಂಸ್ಕøತಿಕವಾಗಿ ಕ್ರಿಶ್ಚಿಯನ್ ಶಾಲೆಗಳಲ್ಲಿ ಮತಾಂತರವಾಗುತ್ತಿದೆ. ಬಸವಣ್ಣ, ಗಾಂಧಿ, ಅಂಬೇಡ್ಕರ್ ಫೋಟೋಗಳನ್ನು ಶಾಲೆಯಲ್ಲಿಡಬೇಕು. ಯಾವ ಕ್ರಿಶ್ಚಿಯನ್ ಶಾಲೆಗಳಲ್ಲಿಯೂ ಈ ಮೂವರು ಮಹನೀಯರ ಫೋಟೋಗಳಿಲ್ಲ. ರಾಜ್ಯೋತ್ಸವ ಕೂಡ ಆಚರಣೆ ಮಾಡಲ್ಲ, ಹಾಗಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ ಎಂದರು.
ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಮೆರವಣಿಗೆ ಯಾವುದೇ ತೊಂದರೆಯಿಲ್ಲದೆ ಸುಸೂತ್ರವಾಗಿ ಮುಗಿಯಿತು. ಡಿಜೆ ವಾಹನ ಮಾಲೀಕರುಗಳ ವಿರುದ್ದ ಕೇಸ್ ಹಾಕಿರುವುದನ್ನು ಪ್ರಶ್ನಿಸಿದರೆ ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಉತ್ತರ ನೀಡುತ್ತಿದ್ದಾರೆ.
ಇದನ್ನೂ ಓದಿ: AC ಮಹಿಬೂಬ್ ಜಿಲಾನಿ ಖುರೇಷಿ ಸಮ್ಮುಖದಲ್ಲಿ ಪಹಣಿ ತಿದ್ದುಪಡಿ ಕಾರ್ಯ
ದಿನಕ್ಕೆ ಐದು ಬಾರಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದರಿಂದ ಶಬ್ಬ ಬರುವುದಿಲ್ಲವೇ. ಹಿಂದೂಗಳಿಗೊಂದು, ಮುಸಲ್ಮಾನರಿಗೊಂದು ಕಾನೂನು ಇದೆಯಾ ಎಂದು ಪ್ರಶ್ನಿಸಿದ ಅವರು, ಸುಮೋಟೋ ಕೇಸು ದಾಖಲಿಸಿ ಬೆಳಗಿನ ಜಾವ 4.30 ಕ್ಕೆ ಅಲ್ಲಾ ಕೂಗುವುದನ್ನು ನಿಲ್ಲಿಸಬೇಕು. ಹಿಂದೂಗಳ ಮೇಲೆ ದಬಾವಣೆ ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ರಾಮಸೇನೆ ದಕ್ಷಿಣ ಪ್ರಾಂತ ರಾಜ್ಯಾಧ್ಯಕ್ಷ ಸೈಟ್ ಬಾಬಣ್ಣ, ಸುಂದರೇಶ್ ನಾಡಗಲ್ ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
