
CHITRADURGA NEWS | 18 SEPTEMBER 2025
ಚಿತ್ರದುರ್ಗ: ಒಬ್ಬ ವ್ಯಕ್ತಿ ಪರಿಪೂರ್ಣವಾಗಲು ಪಠ್ಯದ ಜೊತೆಗೆ ದೈಹಿಕವಾಗಿಯೂ ಸಹಾ ಪರಿಪೂರ್ಣವಾಗಿ ಇದ್ಧಾಗ ಮಾತ್ರ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಶ್ರೀ ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ಮೊಳಕಾಲ್ಮೂರು ಜವಳಿ ಪಾರ್ಕ್ ಮಾಡಲು ಸಹಕಾರ | ಕೆ.ಎಸ್.ನವೀನ್

ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಹಾಗೂ ಎಸ್.ಜೆ.ಎಂ.ವಿದ್ಯಾಪೀಠ, ಗಾರೇಹಟ್ಟಿಯ ಶ್ರೀ ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಾಲದ ಚಿತ್ರದುರ್ಗ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು,
ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ ಗೆಲುವನ್ನು ಸಾಧಿಸುವುದರ ಮೂಲಕ ರಾಜ್ಯ ಮಟ್ಟಕ್ಕೆ ಹೋಗಬೇಕಿದೆ ಅಲ್ಲಿಯೂ ಸಹಾ ಗೆಲುವನ್ನು ಸಾಧಿಸುವುದರ ಮೂಲಕ ರಾಷ್ಟ್ರ ಮಟ್ಟಕ್ಕೆ ಹೋಗಬೇಕಿದೆ ಇಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡುವುದರ ಮೂಲಕ ಗೆಲುವನ್ನು ಸಾಧಿಸಬೇಕಿದೆ ಎಂದು ಕರೆ ನೀಡಿದರು.
ಚಿತ್ರದುರ್ಗ ಶ್ರೀಮಠ ಕಲೆ. ಸಾಹಿತ್ಯ ಸಂಸ್ಕøತಿಕ ಕಾರ್ಯಕ್ರಮಗಳಿಗೆ, ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಿದೆ ಮುಂದಿನ ದಿನದಲ್ಲಿ ನಡೆಯುವ ಶರಣ ಸಂಸ್ಕøತಿ ಉತ್ಸವದಲ್ಲಿ ಯುವ ಜನೋತ್ಸವವನ್ನು ಹಮ್ಮಿಕೊಂಡಿದ್ದು ಇದರಲ್ಲಿ ಯುವ ಜನತೆ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ ಎಂದ ಶ್ರೀಗಳು,
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 18 | ಹತ್ತಿ ರೇಟ್ ಎಷ್ಟಿದೆ?
ಈ ಕ್ರೀಡಾಕೂಟವನ್ನು ನಡೆಸಲು ಶ್ರೀ ಮಠಕ್ಕೆ ಅವಕಾಶ ಕಲ್ಪಿಸಿದ್ದು ಉತ್ತಮವಾದ ಅವಕಾಶವಾಗಿದೆ, ಪಿಯು ಉಪನಿರ್ದೇಶಕರು ಈ ಬಾರಿ ಫಲಿತಾಂಶವನ್ನು ಚನ್ನಾಗಿ ತರುವ ಸಲುವಾಗಿ ಶ್ರಮವನ್ನು ಹಾಕುತ್ತಿದ್ದಾರೆ ಇದಕ್ಕೆ ಎಲ್ಲರು ಸಹಾ ಸಹಕಾರವನ್ನು ನೀಡಬೇಕಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ.ಸ್ನೇಹ, ಸೌಹಾರ್ತೆತೆ ,ಪ್ರೀತಿ, ವಿಶ್ವಾಸ,ಸಹನಾಶೀಲತೆ, ಪರಸ್ಪರ ಸಹಕಾರ ಹಾಗೂ ಗೌರವ ಸಂಪಾದನೆಗೆ ಕ್ರೀಡಾಕೂಟಗಳು ಅತ್ಯುತ್ತಮ ವೇದಿಕೆಯನ್ನು ನಿರ್ಮಿಸುತ್ತವೆ, ಆಟಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ ಹಾಗೂ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಕಲೆಗಾರಿಕೆ ವೃದ್ದಿಯಾಗುತ್ತದೆ ಎಂದರು.
ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ಮಾತನಾಡಿ, ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಹಾಗೂ ಇವರನ್ನು ಕ್ರೀಡೆಯಲ್ಲಿ ಭಾಗವಹಿಸಲು ಕರೆ ತಂದ ಪ್ರೋತ್ಸಾಹ ನೀಡಿದ ಶಿಕ್ಷಕರಿಗೂ ಸಹಾ ಧನ್ಯವಾದಗಳು, ಕ್ರೀಡೆಯಲ್ಲಿ ಎಲ್ಲರೂ ಸಹಾ ಕ್ರೀಡೆಯಲ್ಲಿ ಭಾಗವಹಿಸುವುದಿಲ್ಲ ಅಸಕ್ತಿ ಇರುವವರು ಸಹಾ ಮಾತ್ರ ಭಾಗವಹಿಸುತ್ತಾರೆ.
ಇದನ್ನೂ ಓದಿ: ಅಲೆಮಾರಿ ಅಭಿವೃದ್ಧಿ ನಿಗಮ | ವಿವಿಧ ಯೋಜನೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಇವರಿಗೆ ಪ್ರೋತ್ಸಾಹ ನೀಡಲು ಶಿಕ್ಷಕರು ಇರುತ್ತಾರೆ, ಇಬ್ಬರು ಸೇರಿದಾಗ ಮಾತ್ರ ಉತ್ತಮವಾದ ಕ್ರೀಡಾಪಟುಗಳು ಆಗಲು ಸಾಧ್ಯವಿದೆ. ಕ್ರೀಡೆ ಎನ್ನುವುದು ಬರೀ ಪದಕವನ್ನು ಗೆಲುವುದಕ್ಕೆ ಮಾತ್ರ ಆಗದೇ ನಮ್ಮ ಆರೋಗ್ಯವನ್ನು ಕಾಪಾಡುವುದಕ್ಕೆ ಸಹಾ ಅನಿವಾರ್ಯವಾಗಿದೆ ಎಂಬುದನ್ನು ಮರೆಯಬಾರದು.
ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬ ವಿದ್ಯಾರ್ತಿಯೂ ಸಹಾ ಕ್ರೀಡೆಯಲ್ಲಿ ಭಾಗವಹಿಸುವುದು ಅಗತ್ಯವಾಗಿದೆ. ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯಬಾರದು ಇಂದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಮೀಸಲು ಸೌಲಭ್ಯವಿದೆ.ಇದರ ಸದುಪಯೋಗ ನಿಮ್ಮದಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ಉಪ ನಿರ್ದೇಶಕರಾದ ಕೆ.ತಿಮ್ಮಯ್ಯ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಗಳಿವೆ.ಆದ್ದರಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡ ತೀರ್ಪುಗಾರರು ಪೂರ್ವಗ್ರಹ ಪೀಡಿತರಾಗದೆ ನಿಜವಾದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರ್ತಿಸಿ ಆಯ್ಕೆ ಮಾಡುವ ಮೂಲಕ ಈ ಜಿಲ್ಲೆಯ ಪ್ರತಿಷ್ಠೆ ಮತ್ತು ಗೌರವವನ್ನು ಹೆಚ್ಚಿಸಬೇಕು ಎಂದರು.
ಇದನ್ನೂ ಓದಿ: ಯುವಜನೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಮ್ಯಾರಥಾನ್ ಸ್ಪರ್ಧೆ
ಜಿಲ್ಲಾ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಪಿ.ಎಂ.ಜಿ. ರಾಜೇಶ್, ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಆರ್.ಮಲ್ಲೇಶ್ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಅನಿತ ರಮೇಶ್, ಪ್ರಾಂಶುಪಾಲರಾದ ಇ.ಗುರುಮೂರ್ತಿ, ಡಾ.ಶಬ್ಬೀರ್ ಅಹಮ್ಮದ್ ಖಾನ್, ವಸಂತಕುಮಾರ್, ಉಪನ್ಯಾಸಕರಾದ ಆರ್.ಚಂದ್ರಶೇಖರ್, ಕೆ.ನಾಗರಾಜ್, ಟಿ.ಪೆನ್ನಯ್ಯ, ಕ್ರೀಡಾ ಸಂಚಾಲಕ ರಂಗಪ್ಪ, ಬಡಾವಣೆಯ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್, ವಿವಿಧ ತಾಲ್ಲೂಕುಗಳಿಂದ ಪ್ರಾಂಶುಪಾಲರು, ಕ್ರೀಡಾಪಟುಗಳು, ದೈಹಿಕ ನಿರ್ದೇಶಕರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
