
CHITRADURGA NEWS | 18 SEPTEMBER 2025
ಚಿತ್ರದುರ್ಗ: ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕದ ವತಿಯಿಂದ “ಯುವಜನೋತ್ಸವ”ದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಇದೇ ಸೆಪ್ಟೆಂಬರ್ 24ರಂದು ಬೆಳಿಗ್ಗೆ 6.30ಕ್ಕೆ 5 ಕಿ.ಮೀ ಮ್ಯಾರಥಾನ್ (Red Ribbon Run-Youth for HIV/AIDS) ಸ್ಪರ್ಧೆ ಏರ್ಪಡಿಸಲಾಗಿದೆ.
ಇದನ್ನೂ ಓದಿ: ಪಕೋಡಾ ಮಾರಿ ನರೇಂದ್ರ ಮೋದಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಮ್ಯಾರಥಾನ್ ಸ್ಪರ್ಧೆಯು ಕನಕ ವೃತ್ತ, ಮುಖ್ಯವೃತ್ತ, ಪ್ರವಾಸಿ ಮಂದಿರ, ಆಸ್ಪತ್ರೆ ವೃತ್ತ ಮಾರ್ಗವಾಗಿ ಒನಕೆ ಓಬವ್ವ ಸ್ಟೇಡಿಯಂ ತಲುಪಲಿದೆ.
ಮ್ಯಾರಥಾನ್ ಮಾರ್ಗಸೂಚಿಗಳು: 17 ರಿಂದ 25 ವರ್ಷದ ಕಾಲೇಜು ವಿದ್ಯಾರ್ಥಿಗಳು ಮಾತ್ರ ಮ್ಯಾರಥಾನ್‍ನಲ್ಲಿ ಭಾಗವಹಿಸಬೇಕು. ಕಾಲೇಜು ಮುಖ್ಯಸ್ಥರು ನೀಡಿರುವ ಐಡಿ ಕಾರ್ಡ್, ಲೆಟರ್ ಕಡ್ಡಾಯವಾಗಿರುತ್ತದೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗುತ್ತದೆ.
ಬಹುಮಾನದ ವಿವರ:
ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು. ಮೊದಲನೇ ಬಹುಮಾನ ರೂ.5000/-, ದ್ವಿತೀಯ ಬಹುಮಾನ ರೂ.3500/- ಹಾಗೂ ತೃತೀಯ ಬಹುಮಾನ ರೂ.2500/- ಬಹುಮಾನ ನೀಡಲಾಗುವುದು.
ಇದನ್ನೂ ಓದಿ: ಡಿ.ಜೆ. ಮಾಲಿಕರ ಮೇಲೆ ಕ್ರಿಮಿನಲ್ ಕೇಸ್ | ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿದ್ದ 6 ಡಿಜೆ, ವಾಹನ ಮಾಲಿಕರ ಮೇಲೆ ಕಾನೂನು ಕ್ರಮ
ಸೆ.22 ರೊಳಗೆ ನೊಂದಾಯಿಸಿಕೊಳ್ಳುವುದು ಹಾಗೂ ನೊಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9845674099, 9964525258, 97393943687 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
