
CHITRADURGA NEWS | 24 DECEMBER 2025
ಚಿತ್ರದುರ್ಗ: ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಎರಡನೇ ಅಯ್ಯಪ್ಪ ಸ್ವಾಮಿ ಶಬರಿಮಲೆ ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಇರುಮುಡಿ ಹೊತ್ತು ತಂದು 18 ಮೆಟ್ಟಿಲ ಹತ್ತಿ ಅಯ್ಯಪ್ಪಸ್ವಾಮಿ ದೇವರ ದರ್ಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆ | ಮೆಮೋಗ್ರಾಫಿ, ಎಂಡೋಸ್ಕೋಪಿ ಸೌಲಭ್ಯಗಳು ಹೊಸದಾಗಿ ಪ್ರಾರಂಭ

ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಸನ್ನಿಧಾನದಲ್ಲಿ ಈಶ್ವರ, ಆಂಜನೇಯ, ನವಗ್ರಹ, ನಾಗಬನ, ಗಣಪತಿ, ಸುಬ್ರಹ್ಮಣ್ಯ ದೇವರುಗಳು, ಶ್ರೀ ವಿಷ್ಣು ದೇವಸ್ಥಾನ ಹಾಗೂ ವಿಶಾಲವಾದ ಸ್ಥಾನದ ವ್ಯವಸ್ಥೆ ಇದೆ. ಬಂದಿರುವ ಮಾಲಾಧಾರಿಗಳಿಗೆ ಪ್ರಸಾದ ವ್ಯವಸ್ಥೆ ಇದೆ.
ರಾತ್ರಿ ಮಲಗಲು ವಿಶಾಲವಾದ ಪರಂಗಣವಿದೆ. ಈ ದೇವಸ್ಥಾನವು ಕರ್ನಾಟಕದಲ್ಲಿ ಸಾಕಷ್ಟು ಪ್ರಸಿದ್ಧಿ ಹೊಂದಿದ್ದು, ಶಬರಿಮಲೆಗೆ ಹೋಗಲು ಆರ್ಥಿಕ ಹಾಗೂ ಸಮಯ ಇಲ್ಲದ ಭಕ್ತಾದಿಗಳಿಗೆ ಈ ಒಂದು ದೇವಸ್ಥಾನ ವರದಾನವಾಗಿದೆ.
ರಾಯಚೂರು ಹಾಗೂ ಗುಲ್ಬರ್ಗ ಅಂತಹ ಸ್ಥಳಗಳಿಂದ ಹುಬ್ಬಳ್ಳಿ ಭಾಗದಿಂದಲೂ ಸುತ್ತಮುತ್ತಲಿನ ಮಾಲಾಧಾರಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನವನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಅಡಿಕೆ ಸಿಪ್ಪೆಯನ್ನು ಸಾವಯವ ಗೊಬ್ಬರ ಮಾಡಿ | ಕಾಂಪೊಸ್ಟ್ ಕಲ್ಚರ್ ಉಪಯೋಗ ತಿಳಿಯಿರಿ | ರಜನಿಕಾಂತ್
ಈ ಎಲ್ಲಾ ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಸಕಲ ಸೌಲಭ್ಯವನ್ನು ಒದಗಿಸುತ್ತಿರುವ ಕರ್ನಾಟಕ ಅಯ್ಯಪ್ಪ ಸ್ವಾಮಿ ಅನ್ನ ಪ್ರಸಾದದ ಅಧ್ಯಕ್ಷರಾದ ಶರಣ್ ಕುಮಾರ್, ಕಾರ್ಯದರ್ಶಿ ಎಂ.ಪಿ.ವೆಂಕಟೇಶ್, ಮಲ್ಲಿಕಾರ್ಜುನ್, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 9448664865 ಗೆ ಸಂಪರ್ಕಿಸಬಹುದು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
