CHITRADURGA NEWS | 24 DECEMBER 2025
ಚಿತ್ರದುರ್ಗ: ಅನ್ಯ ಜಾತಿಯ ಯುವಕನ ಜೊತೆಗೆ ಮಗಳು ಮದುವೆಯಾದ ಕಾರಣಕ್ಕೆ ತಂದೆಯೇ ಹಲ್ಲೆ ನಡೆಸಿ, ಯುವತಿ ಮೃತಪಟ್ಟಿದ್ದು, ಇದೊಂದು ಅಮಾನವೀಯ ಘಟನೆ. ಸಮಾಜ ಇಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.
ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಘಟನೆ ನಡೆದು ಮೂರ್ನಾಲ್ಕು ದಿನವಾದರೂ ಪ್ರಜ್ಞಾವಂತ ಸಮಾಜದ ಚಿಂತಕರು ಖಂಡಿಸಲಿಲ್ಲ. ಬಸವಾದಿ ಶರಣರ ತತ್ವಗಳನ್ನು ಅಳವಡಿಸಿಕೊಂಡಿದ್ದೇವೆಂದು ಹೇಳುವ ಧಾರ್ಮಿಕ ಚಿಂತಕರು ಕೃತ್ಯ ಖಂಡಿಸುತ್ತಾರೆಂದು ಭಾವಿಸಿದ್ದೆವು. ಈವರೆಗೆ ಅದು ಆಗಲಿಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಕಲಚೇತನರಿಗೆ ಬಸ್ ಪಾಸ್ | ಅರ್ಜಿ ಅಹ್ವಾನ
ಕೆಳಜಾತಿಯ ಯುವಕನೋರ್ವ ಮೇಲ್ವರ್ಗದ ಯುವತಿಯನ್ನು ಮದುವೆಯಾದ ಎಂಬ ಕಾರಣಕ್ಕೆ ತನ್ನ ಮಗಳನ್ನೇ, ಅದರಲ್ಲೂ ಏಳು ತಿಂಗಳ ಗರ್ಭಿಣಿಯನ್ನು ಮನುಷತ್ವ ಬಿಟ್ಟು ಕ್ರೂರವಾಗಿ ಕೊಲ್ಲುವುದೆಂದರೆ ಏನು ಏಂದು ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ.
ದಲಿತರು, ಶೋಷಿತರ ಮೇಲೆ ಮತ್ತು ಅವರಿಗೆ ಸಂಬಂಧಿಸಿದವರ ಮೇಲೆ ದೌರ್ಜನ್ಯಗಳು ನಡೆದರೆ ದಲಿತರೆ ಧ್ವನಿ ಎತ್ತಬೇಕು. ಮೇಲ್ವರ್ಗದವರು ಮೇಲೆ ಇಂತಹ ಪ್ರಕರಣಗಳು ನಡೆದರೆ ದಲಿತರಾದಿಯಾಗಿ ಎಲ್ಲರೂ ಅವರೊಟ್ಟಿಗೆ ಧ್ವನಿ ಎತ್ತಬೇಕು ಎಂದಿದ್ದಾರೆ.
ಇದನ್ನೂ ಓದಿ: ಅಡಿಕೆ ಸಿಪ್ಪೆಯನ್ನು ಸಾವಯವ ಗೊಬ್ಬರ ಮಾಡಿ | ಕಾಂಪೊಸ್ಟ್ ಕಲ್ಚರ್ ಉಪಯೋಗ ತಿಳಿಯಿರಿ | ರಜನಿಕಾಂತ್
ಇದೇ ಹುಬ್ಬಳ್ಳಿಯಲ್ಲಿ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೇಲ್ವರ್ಗದ ಯುವತಿಯನ್ನು ಮದುವೆಯಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಅನ್ಯ ಧರ್ಮಿಯ ಯುವಕ ಕಾಲೇಜು ಕ್ಯಾಂಪಸ್‌ನಲ್ಲಿಯೇ ಚಾಕುವಿನಿಂದ ಚುಚ್ಚಿ ಕೊಂದಿದ್ದ. ಮರು ದಿನವೇ ವಿದ್ಯಾರ್ಥಿ ಸಂಘಟನೆಗಳು , ಹೋರಾಟಗಾರರು ಬೀದಿಗಿಳಿದರು ಧಾರ್ಮಿಕ ಪೀಠಾಧಿಪತಿಗಳು ಸಾಲು ಸಾಲಾಗಿ ಯುವತಿಯ ಮನೆಗೆ ಭೇಟಿ ಕೊಟ್ಟರು.
ಅಂದು ಕೊಲೆಯಾದವಳು ಮೇಲ್ವರ್ಗದ ಹುಡುಗಿ. ಇವತ್ತು ಕೊಲೆಯಾದವಳು ಮೇಲ್ವರ್ಗದ ಹುಡುಗಿಯೇ. ಅಂದು ಬೀದಿಗಿಳಿದು ಖಂಡಿಸಲು ಕಾರಣ ಅದೊಂದು ಧರ್ಮಾಧರಿತ ಕೊಲೆಯಾಗಿತ್ತು. ಇದು ಜಾತಿ ಆಧಾರಿತ ಕೊಲೆಯಾಗಿದೆ. “ದಯವೇ ಧರ್ಮದ ಮೂಲ” “ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ” ಎಂದು ಹೇಳಿದ ಬಸವಣ್ಣನವರ ಅನುಯಾಯಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 24 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಜಾತಿಯ ಕಾರಣಕ್ಕೆ ಗರ್ಭಿಣಿ ಮಗಳನ್ನು ಕ್ರೂರವಾಗಿ ಕೊಲ್ಲುವಷ್ಟು ಮಟ್ಟಕ್ಕೆ ಈ ಸಮಾಜ ಇಳಿದಿದೆ. ಕೃತ್ಯವೆಸಗಿದವರು ಕಾನೂನಿನಿಂದ ತಪ್ಪಿಸಿಕೊಳ್ಳಬಾರದು ಎಂದು ಮಾದಾರ ಚನ್ನಯ್ಯ ಶ್ರೀಗಳು ಆಗ್ರಹಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
