Connect with us

    ಮೂರು ದಿನಗಳಲ್ಲಿ ಮಳೆ ಸಾಧ್ಯತೆ | ಭಾರತೀಯ ಹವಾಮಾನ ಇಲಾಖೆ ವರದಿ

    ಮಳೆ

    ಮುಖ್ಯ ಸುದ್ದಿ

    ಮೂರು ದಿನಗಳಲ್ಲಿ ಮಳೆ ಸಾಧ್ಯತೆ | ಭಾರತೀಯ ಹವಾಮಾನ ಇಲಾಖೆ ವರದಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 08 MARCH 2024

    ಚಿತ್ರದುರ್ಗ: ಕಳೆದ ವರ್ಷ ಮಳೆಯಿಲ್ಲದ ಕಾರಣ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಮತ್ತಿತರೆ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದ ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸುವ ಕೆಲಸ ಮಾಡುತ್ತಿದ್ದಾರೆ.

    ರೈತರ ಸ್ಥಿತಿಯಂತೂ ಅಪ್ಪಾ ದೇವರೇ, ಯಾವಾಗ ಮಳೆ ಬರುತ್ತಪ್ಪಾ ಎನ್ನುವಂತಾಗಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಸಾಕಷ್ಟು ಮಳೆ ಸುರಿಯುತ್ತಿದೆ. ಅಂಥದ್ದೊಂದು ಹದ ಮಳೆ ನಮಗೆ ಸುರಿದರೆ ನಾವು ಬದುಕಿ ಬಿಡುತ್ತೇವೆ ಎನ್ನುವ ಭಾವನೆ ಬಂದಿದೆ.

    ಇದನ್ನೂ ಓದಿ: ಕೀ ಓಟರ್ಸ್ ಮೇಲೆ ಕಣ್ಣಿಟ್ಟ ಕಾರಜೋಳ

    ದಿನದಿಂದ ದಿನಕ್ಕೆ ಕೊಳವೆ ಬಾವಿಗಳಲ್ಲಿನ ನೀರು ಕಡಿಮೆ ಆಗುತ್ತಲೇ ಇದೆ. ಈಗಾಗಲೇ ಬಹುತೇಕ ಬೋರ್ ವೆಲ್‍ಗಳು ನಿಂತು ಹೋಗಿವೆ. ರೈತರು ನೀರಿಗಾಗಿ ಹತ್ತಾರು ಕೊಳವೆ ಬಾವಿ ಕೊರೆಯಿಸಿ ಲಕ್ಷಾಂತರ ಕಳೆದುಕೊಂಡಿದ್ದಾರೆ. ಕೊನೆಯ ಆಸರೆ ಎನ್ನುವಂತೆ ಟ್ಯಾಂಕರ್ ಮೂಲಕ ನೀರು ಹೊಡೆಯುತ್ತಿದ್ದಾರೆ.

    ಆದರೆ, ಅದಕ್ಕಾದರೂ ದುಡ್ಡು ಬೇಕಲ್ಲ. ಎಷ್ಟು ದಿನ ಅಂತಾ ದಿನ ದೂಡುವುದು. ಒಂದು ಹಸಿ ಮಳೆ ಬಂದರೆ ಬೋರ್‍ವೆಲ್‍ಗಳು ರೀಚಾರ್ಜ್ ಆಗುತ್ತವೆ ಎನ್ನುವ ಭರವಸೆಯಿಂದ ಮುಂದಿನ ದಿನಗಳನ್ನು ಎದುರು ನೋಡುವಂತಾಗಿದೆ.

    ಇದನ್ನೂ ಓದಿ: ಸಿದ್ದರಾಮಯ್ಯ ಒಮ್ಮೆ ‘ಬಾದಾಮಿ’ ನೆನಪಿಸಿಕೊಳ್ಳಲಿ | ಗೋ ಬ್ಯಾಕ್‌ ಹೇಳಿಕೆಗೆ ತಿರುಗೇಟು ನೀಡಿದ ಕೆ.ಎಸ್‌.ನವೀನ್‌

    ಈ ನಡುವೆ, ಹವಾಮಾನ ಇಲಾಖೆ ಸಂತಸದ ಸುದ್ದಿಯೊಂದನ್ನು ಕೊಟ್ಟಿದೆ. ಇನ್ನೆರಡು ದಿನ ಕಾಯಿರಿ ಮಳೆ ಬಂದೇ ಬರುತ್ತೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಹೇಳುತ್ತಿದೆ.

    ರಣ ಬಿಸಿಲಿಗೆ ತತ್ತರಿಸಿರುವ ಜನ ಹಾಗೂ ಕಾದು ಕಾವಲಿಯಂತಾಗಿರುವ ಇಳೆಗೆ ತುರ್ತಾಗಿ ಮಳೆ ಬರಬೇಕಿದೆ. ಇನ್ನೆರಡು ದಿನಗಳ ಕಾಲ ತೀವ್ರ ಬಿಸಿಲು ಕಾಯಲಿದ್ದು, ಆನಂತರ ಗುಡುಗು ಸಹಿತ ಮಳೆ ಬರಲಿದೆ ಎನ್ನುವುದು ರೈತರು ನಿಟ್ಟುಸಿರು ಬಿಡುವ ಸುದ್ದಿಯಾಗಿದೆ.

    ಇದನ್ನೂ ಓದಿ: ನಸುಕಿನಲ್ಲಿ ಖಾಸಗಿ ಬಸ್ ಪಲ್ಟಿ | ಭೀಕರ ಅಪಘಾತ | ಸ್ಥಳದಲ್ಲೇ ಮೂವರ ದುರ್ಮರಣ

    ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಏಪ್ರಿಲ್ 9 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ.

    ಮುಂದಿನ ಏಳು ದಿನಗಳ ಕಾಲ ವಾತಾವರಣದ ಹವಾಮಾನ ಕುರಿತ ವರದಿ ನೀಡಿದ್ದು, ಏಪ್ರಿಲ್ 8 ರಂದು ಕರಾವಳಿ ಭಾಗದಲ್ಲಿ ಮಳೆಯಾಗಲಿದೆ.

    ಏಪ್ರಿಲ್ 10 ರಿಂದ ಬಹುತೇಕ ಜಿಲ್ಲೆಗಳಿಗೆ ಮಳೆ:

    ಏಪ್ರಿಲ್ 9 ಅಥವಾ 10 ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಏಪ್ರಿಲ್ 14 ರವರೆಗೆ ಮಳೆ ಸುರಿಯುವ ಸಾಧ್ಯತೆ ಲೆಕ್ಕಾ ಹಾಕಲಾಗಿದೆ.

    ಇದನ್ನೂ ಓದಿ:  ಅಡಿಕೆ ಧಾರಣೆ | 6 ಏಪ್ರಿಲ್ | ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್

    ಚಿತ್ರದುರ್ಗ ಜಿಲ್ಲೆಯಲ್ಲಿ ಏಪ್ರಿಲ್ 8 ರಂದು ಮಳೆಯ ಮನ್ಸೂಚನೆ ಎನ್ನುವಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಇದು ಹೀಗೆ ಮುಂದುವರೆದರೆ ಮುಂದಿನ ಮೂರು ದಿನಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top