Dina Bhavishya
Yearly Rashi Bhavishya in Kannada: ಯುಗಾದಿ ನಂತರ ಇಡೀ ವರ್ಷದ ರಾಶಿ ಭವಿಷ್ಯದ ಫಲಾಫಲ

Yearly Rashi Bhavishya in Kannada: ಯುಗಾದಿ ನಂತರ ಇಡೀ ವರ್ಷದ ರಾಶಿ ಭವಿಷ್ಯದ ಫಲಾಫಲ. ಯಾವ ರಾಶಿಯವರಿಗೆ ಈ ವರ್ಷ ಶುಭ, ಅಶುಭ ಎಂಬ ಸಮಗ್ರ ಮಾಹಿತಿಯನ್ನು ಜ್ಯೋತಿಷಿ ಸಿದ್ದಮ್ಮನಹಳ್ಳಿ ಕಾಶೀನಾಥ್ ಹಿರೇಮಠ್ ಅವರು ಸಮಗ್ರವಾಗಿ ವಿವರಿಸಿದ್ದಾರೆ.
ಮೇಷರಾಶಿ- (Yearly Rashi Bhavishya in Kannada)
ಮೇಷ ರಾಶಿಯು ನಿರುದ್ಯೋಗಿಗಳಿಗೆ ಉದ್ಯೋಗದ ಸಂಕೇತವಾಗಿದೆ. ಮೇಷ ರಾಶಿಯ ಉದ್ಯೋಗಿಗಳು ದ್ವಿತೀಯಾರ್ಧದಲ್ಲಿ ಉನ್ನತ ಸ್ಥಾನ ಮತ್ತು ಬಡ್ತಿಗಳನ್ನು ಪಡೆಯುತ್ತಾರೆ.
ವ್ಯಾಪಾರಿಗಳಿಗೆ ಲಾಭದಾಯಕವಾಗಿರುತ್ತದೆ. ವ್ಯವಹಾರದಲ್ಲಿ ಯಶಸ್ಸು ಮತ್ತು ಆರ್ಥಿಕ ಲಾಭ ಇರುತ್ತದೆ. ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗಲಿದೆ. ಉದ್ಯೋಗದಲ್ಲಿರುವವರಿಗೆ ಉನ್ನತ ಸ್ಥಾನ ದೊರೆಯಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ.
ಕೌಟುಂಬಿಕ ನೆಮ್ಮದಿ ದೊರೆಯುತ್ತದೆ. ವೃತ್ತಿ-ವ್ಯವಹಾರದ ವಿಷಯದಲ್ಲಿ ಉತ್ತಮ ಫಲಿತಾಂಶ ಸಿಗಲಿದ್ದು, ಕೌಟುಂಬಿಕ ನೆಮ್ಮದಿ ಮತ್ತು ಸಂತೋಷ, ವರ್ಷವಾಗಲಿದೆ. ವೈಯಕ್ತಿಕ ತೊಂದರೆಗಳು ಮತ್ತು ಕೆಲಸದ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಸಮಯ ಬರಲಿದೆ.
Read More: ಮೂರು ದಿನಗಳಲ್ಲಿ ಮಳೆ ಸಾಧ್ಯತೆ | ಭಾರತೀಯ ಹವಾಮಾನ ಇಲಾಖೆ ವರದಿ
ವೃಷಭ- (Yearly Rashi Bhavishya)
ಕುಟುಂಬದಲ್ಲಿ ಪ್ರತಿಯೊಬ್ಬರಲ್ಲಿಯೂ ಪರಸ್ಪರ ಸಹಕಾರ ಇರುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳ ಜೊತೆ ಸಹನೆಯಿಂದ ವರ್ತಿಸಿ ಕೆಲಸ ಸಾಧಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಗಳಿಸುವಿರಿ. ವಿದ್ಯಾರ್ಥಿಗಳೂ ಸಹಪಾಠಿಗಳ ಜೊತೆಗೂಡಿ ಕಲಿಕೆಯಲ್ಲಿ ಮುಂದುವರೆಯುತ್ತಾರೆ.
ಸ್ವಂತ ನಿರ್ಧಾರಗಳನ್ನು ಎಲ್ಲರೊಂದಿಗೆ ಚರ್ಚಿಸಿ ಕಾರ್ಯಗತಗೊಳಿಸುವಿರಿ. ಯಾವುದೇ ರೀತಿಯ ಅನುಮಾನ ಉಂಟಾದಲ್ಲಿ ಆತ್ಮೀಯರ ಸಲಹೆ ಸೂಚನೆಗಳನ್ನು ಪಾಲಿಸುವಿರಿ. ಪ್ರಯಾಣಿಸುವ ವೇಳೆಯಲ್ಲಿ ಎಚ್ಚರಿಕೆಯ ಅಗತ್ಯವಿದೆ. ವಿವಾಹದ ಮಾತುಕತೆ ನಡೆಯಲಿದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ.
ಕುಟುಂಬದ ಹಿರಿಯರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸುವಿರಿ. ಹೊಸತನದ ನಿರೀಕ್ಷೆಯಿಂದ ದಿನವನ್ನು ಆರಂಭಿಸುವಿರಿ. ನಿರೀಕ್ಷಿತ ಯಶಸ್ಸು ದೊರೆಯುವ ಕಾರಣ ಸಂತಸದಿಂದ ಇರುವಿರಿ. ಕುಟುಂಬದಲ್ಲಿ ಸ್ನೇಹಮಯ ವಾತಾವರಣ ಇರುತ್ತದೆ. ಉದ್ಯೋಗದಲ್ಲಿನ ಅಡ್ಡಿ ಆತಂಕಗಳು ತಾವಾಗಿಯೇ ದೂರವಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಬಿಡುವಿಲ್ಲದೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಹಣದ ತೊಂದರೆ ಎದುರಾಗದು.
ಮಿಥುನ-(Yearly Rashi Bhavishya)
ಸಂದರ್ಭಕ್ಕೆ ತಕ್ಕಂತೆ ತೆಗೆದುಕೊಳ್ಳುವ ತೀರ್ಮಾನ ಬದಲಾಯಿಸುವಿರಿ. ಮನಸ್ಸು ಮಗುವಿನಂತೆ ಮುಗ್ಧವಾಗಿದ್ದರೂ ಆಡುವ ಮಾತು ಕಠೋರವಾಗಿರುತ್ತದೆ.
ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸೋದರ ಸಂಬಂಧದಲ್ಲಿ ಅನಾವಶ್ಯಕ ವಾದ ವಿವಾದಗಳು ಸದಾಕಾಲ ಇರುತ್ತದೆ. ಕುಟುಂದವರನ್ನು ಬಹಳ ಗೌರವದಿಂದ ಕಾಣುವಿರಿ. ಹಾಗೆಯೇ ಕಿರಿಯರನ್ನು ಪ್ರೀತಿಸುವಿರಿ.
ಈ ಮೂಲಕ ಕುಟುಂಬದಲ್ಲಿ ಶಾಂತಿ ನೆಮ್ಮದಿಯನ್ನು ಉಳಿಸಲು ಸಂಪೂರ್ಣ ಕಾರಣರಾಗುವಿರಿ. ಸ್ಥಿರವಾದ ಮನಸ್ಸು ಇಲ್ಲದೇ ಹೋದರೂ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ತಡವಾಗಿಯಾದರೂ ಒಮ್ಮೆ ಕೈಗೊಂಡ ಕೆಲಸ ಕಾರ್ಯಗಳಲ್ಲಿ ಜಯಗಳಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಸಂಗಾತಿಯೊಂದಿಗೆ ವಿದೇಶಕ್ಕೆ ಅಥವಾ ದೂರದ ಪ್ರದೇಶಕ್ಕೆ ವಿಹಾರದ ಸಲುವಾಗಿ ಪ್ರಯಾಣ ಬೆಳೆಸುವಿರಿ. ಕುಟುಂಬದ ಏಳಿಗೆಗಾಗಿ ವಿವಿಧ ಯೋಜನೆಗಳಲ್ಲಿ ಹಣ ವಿನಿಯೋಗಿಸುವಿರಿ.
ಕಟಕ-(Yearly Rashi Bhavishya in Kannada)
ಮಾನಸಿಕ ಒತ್ತಡವಿದ್ದರೂ ಕ್ರಿಯಾಶೀಲತೆ ಸದಾ ಕಾಪಾಡುತ್ತದೆ. ಆಧುನಿಕತೆಗೆ ಮಾರುಹೋಗದೆ ಸಂಪ್ರದಾಯದ ಧಾರ್ಮಿಕ ಕೆಲಸಗಳಿಗೆ ಪ್ರಥಮ ಆದ್ಯತೆ ನೀಡುವಿರಿ. ಕೊಂಚ ಪ್ರಯತ್ನ ಪಟ್ಟರೆ ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿಯೂ ಹೆಚ್ಚಿನ ಜವಾಬ್ದಾರಿ ನಿಮ್ಮದಾಗುತ್ತದೆ. ಆದ್ದರಿಂದ ಕೊಂಚ ಕಷ್ಟವೆನಿಸಿದರೂ ಕೌಟುಂಬಿಕ ಜೀವನ ಮತ್ತು ವೃತ್ತಿ ಜೀವನದ ನಡುವೆ ಒಂದು ಸಮತೋಲನವನ್ನು ಕಾಯ್ದುಕೊಳ್ಳುವಿರಿ.
ಒಟ್ಟಾರೆ ನಿಮ್ಮ ಬುದ್ಧಿಶಕ್ತಿಯೇ ನಿಜವಾದ ಅಸ್ತ್ರವಾಗುತ್ತದೆ. ಹಲವು ಬಾರಿ ಸಾಮರ್ಥ್ಯಕ್ಕೆ ಮೀರಿದ ಕೆಲಸ ಕಾರ್ಯಗಳು ಎದುರಾಗುತ್ತವೆ. ಧಾರ್ಮಿಕ ವಿಚಾರಗಳಿಗೆ ಹೆಚ್ಚಿನ ಹಣ ವಿನಿಯೋಗಿಸುವಿರಿ. ರವಿ ಗ್ರಹದ ಪ್ರಭಾವದಿಂದ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ.
ಬುದ್ಧಿವಂತಿಕೆಯ ಮತ್ತು ಸಂದರ್ಭಕ್ಕೆ ಅನುಸಾರ ಮಾತನಾಡುವ ಕಾರಣ ಎದುರಾಗುವ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು. ದಿನ ಕಳೆದಂತೆ ಕುಟುಂಬದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ.
ಸಿಂಹ-(Yearly Rashi Bhavishya in Kannada)
ಕುಟುಂಬದಲ್ಲಿನ ಹಿರಿಯರ ಮಾತಿನಂತೆ ನಡೆದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಮೊದಲ ನಾಲ್ಕು ತಿಂಗಳು ಉತ್ತಮ ಸ್ಥಾನಮಾನ ಲಭಿಸುತ್ತದೆ. ಆನಂತರ ಅದನ್ನು ಉಳಿಸಿಕೊಳ್ಳಲು ಹೆಚ್ಚಿನಪ್ರಯತ್ನ ಬೇಕಾಗುತ್ತದೆ. ಸಾಧ್ಯವಾದಷ್ಟು ನಯಗಾರಿಕೆಯ ವಿಧಾನವನ್ನು ಅನುಸರಿಸಬೇಕು.
ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಎಂದಿಗೂ ಬದಲಿಸದ ಮನಸ್ಸಿರುತ್ತದೆ. ಸದಾಕಾಲ ಅಧಿಕಾರದಲ್ಲಿ ಉಳಿಯಲು ಬಯಸುತ್ತಾರೆ. ಉತ್ತಮ ಜ್ಞಾನವಿದ್ದರೂ ಸಹ ಅದನ್ನು ಬಳಸಿಕೊಳ್ಳುವ ರೀತಿ ನೀತಿಯ ಅನುಭವ ಇರುವುದಿಲ್ಲ.
ನಿಮ್ಮ ಯೋಜನೆಗಳಿಗೆ ಸಹಾಯ ಸಹಕಾರ ನೀಡುವ ಆತ್ಮೀಯರು ಕಡಿಮೆ ಇರುತ್ತಾರೆ. ಕುಟುಂಬದಲ್ಲಿ ಕೆಲವೊಮ್ಮೆ ಶಾಂತಿ ನೆಮ್ಮದಿಯ ಕೊರತೆ ಕಂಡುಬರುತ್ತದೆ. ಮೇಲಧಿಕಾರಿಗಳ ಸಹಕಾರ ದೊರೆತರೆ ಆನಂತರ ಸಹೋದ್ಯೋಗಿಗಳ ಬೆಂಬಲ ಇರುತ್ತದೆ.
ಒಟ್ಟಾರೆ ವರ್ಷಪೂರ್ತಿ ಕಾರ್ಯಕ್ಷೇತ್ರದಲ್ಲಿ ಅಧಿಪತಿಗಳಂತೆ ಮೆರೆಯುವಿರಿ. ಆದರೆ ಸಿಡುಕುತನ ಮತ್ತು ಹಠದಿಂದ ಮಾತ್ರ ತೊಂದರೆ ಎದುರಿಸಬೇಕಾಗುತ್ತದೆ.
ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಆದರೆ ದುಡುಕದೆ ಕಾದು ನೋಡುವ ತಂತ್ರವನ್ನು ಅನುಸರಿಸುವುದು ಒಳ್ಳೆಯದು. ಕಾನೂನಿಗೆ ಗೌರವ ನೀಡಿ ವ್ಯಾಪಾರ ವ್ಯವಹಾರಗಳನ್ನು ಮುಂದುವರಿಸಬೇಕು. ಪಾಲುಗಾರಿಕೆಯ ವ್ಯವಹಾರವಿದ್ದಲ್ಲಿ ಅನಾವಶ್ಯಕ ವಾದ ವಿವರಗಳು ಎದುರಾಗುತ್ತದೆ. ಸಾಧ್ಯವಾದಷ್ಟು ಎಲ್ಲರ ಪ್ರೀತಿ-ವಿಶ್ವಾಸವನ್ನು ಗಳಿಸಲು ಪ್ರಯತ್ನಿಸಿ.
ಕನ್ಯಾ-(Rashi Bhavishya)
ಜೀವನವು ಒಂದು ರೀತಿಯ ತಪ್ಪು ಹಾದಿಯಲ್ಲಿ ಇರುತ್ತದೆ. ಉದ್ಯೋಗದ ವಿಚಾರದಲ್ಲಿ ಹಾದಿ ತಪ್ಪುವ ಸಾಧ್ಯತೆಗಳಿವೆ. ಆದ್ದರಿಂದ ಶಾಂತಿ ಸಂಯಮದಿಂದ ಎಲ್ಲರೊಂದಿಗೆ ಬೆರೆತು ಬಾಳುವ ಬುದ್ದಿಯನ್ನು ಬೆಳೆಸಿಕೊಳ್ಳಬೇಕು.
ಬಾಳುವ ರೀತಿ ನೀತಿಯನ್ನು ಬದಲಿಸಿಕೊಂಡರೆ ಸುಗಮವಾಗಿ ನಡೆಯಲಿದೆ. ಮನದಲ್ಲಿರುವ ಹಿಂಜರಿಕೆ ಮತ್ತು ಕೀಳರಿಮೆ ದೂರವಾದಲ್ಲಿ ಅಪರೂಪದ ಅವಕಾಶಗಳು ದೊರೆಯುತ್ತವೆ
ಕುಟುಂಬದಲ್ಲಿನ ಕೆಲಸ ಕಾರ್ಯಗಳು ಸುಲಭ ಗತಿಯಲ್ಲಿ ನಡೆಯಲಾರವು. ವಿನಾಕಾರಣ ಟೀಕಿಸುವ ಗುಣ ಇರುವ ಕಾರಣ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುವುದಿಲ್ಲ. ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ನಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮನಸ್ಸಿಗೆ ನೆಮ್ಮದಿಯು ಇರುತ್ತದೆ.
ಹೊಸ ವಸ್ತುಗಳ ಅನ್ವೇಷಣೆ, ಹೊಸ ವಿಚಾರಗಳ ಅಧ್ಯಯನ ಜೀವನದಲ್ಲಿನ ಯಶಸ್ವಿಗೆ ಕಾರಣವಾಗುತ್ತದೆ, ತಡವಾದರೂ ಕೆಲಸ ಕಾರ್ಯಗಳಲ್ಲಿ ಉತ್ತಮ ಮಟ್ಟದ ಯಶಸ್ಸನ್ನು ಗಳಿಸುವಿರಿ, ಆಧ್ಯಾತ್ಮಿಕ ನೆಲಗಟ್ಟಿನಲ್ಲಿ ವಿಶೇಷ ಸಾಧನೆ ಮಾಡಬಹುದು. ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳಲ್ಲಿ ವಿಶೇಷವಾದ ಆಸಕ್ತಿ ತೋರುವಿರಿ.
ಅಪೂರ್ಣಗೊಂಡಿದ್ದ ಹಲವಾರು ಕೆಲಸ ಕಾರ್ಯಗಳು ಸುಲಭವಾಗಿ ಕೈಗೂಡಲಿವೆ. ವಿರೋಧಿಯು ಎಷ್ಟೇ ಶಕ್ತಿಶಾಲಿಯಾಗಿದ್ದರು ಸಹ ಸೋಲಪ್ಪಲೇ ಬೇಕಾಗುತ್ತದೆ. ಹೆಚ್ಚಿನ ನಂಬಿಕೆ ಉಂಟಾಗುತ್ತದೆ. ಅನಿವಾರ್ಯವಾಗಿ ಅಪರಿಚಿತರ ಜೊತೆಯಲ್ಲಿ ವಿವಾಹವು ನೆರವೇರುತ್ತದೆ.
ಪ್ರತಿಯೊಂದು ಕೆಲಸ ಕಾರ್ಯಗಳ ಮೇಲು ಕೆಲವರ ಬೇರೊಬ್ಬರ ಒತ್ತಡ ಇರುತ್ತದೆ. ಆದರೆ ಕುಟುಂಬದ ಹಿರಿಯರ ಮತ್ತು ಗುರುಹಿರಿಯರ ಸಹಾಯ ಸಹಕಾರ ಸದಾ ಕಾಲ ದೊರೆಯುತ್ತದೆ. ಉದ್ಯೋಗದಲ್ಲಿ ವಿಶೇಷ ಎನ್ನದೇ ಹೋದರು ಸಾಧಾರಣ ಮಟ್ಟದ ಜಯ ಲಭಿಸುತ್ತದೆ.
ಸಮಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಸಮಯ ವ್ಯರ್ಥವಾಗಬಾರದೆಂಬ ಕಾರಣದಿಂದ ಉಪ ವೃತ್ತಿಯನ್ನು ಆರಂಭಿಸುವಿರಿ. ಕುಟುಂಬದವರ ಸಹಾಯದಿಂದ ಹಣಕಾಸು ಸಂಸ್ಥೆ ಆರಂಭಿಸುವ ಸಾಧ್ಯತೆಗಳಿವೆ.
ತುಲಾ-(Yearly Dina Bhavishya in Kannada)
ಈ ವರ್ಷದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ಕುಟುಂಬದಲ್ಲಿ ಒತ್ತಡವಿದ್ದರೂ ಗೆಲ್ಲಬೇಕೆಂಬ ಆಸೆ ಹೆಚ್ಚಾಗಿರುತ್ತದೆ. ಅವೀರಥ ಪ್ರಯತ್ನದಲ್ಲೂ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಮಕ್ಕಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ನೀತಿ ನಿಯಮಗಳಿಗೆ ಮೊದಲ ಆದ್ಯತೆ ನೀಡಿ ಎಲ್ಲರ ಮನೆ ಗೆಲ್ಲುವಿರಿ.
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ವರ್ಷಪೂರ್ತಿ ಒಂದು ರೀತಿಯ ಸವಾಲುಗಳು ಎದುರಾಗಲಿದೆ. ಸೋಲಿನ ವೇಳೆ ಬೇರೆಯವರನ್ನು ಟೀಕಿಸುವಿರಿ. ಸ್ವಲ್ಪ ಶಾಂತಿ ಸಹನೆಯಿಂದ ವರ್ತಿಸಿದರೆ ಸಮಸ್ಯೆಗಳಿಂದ ಪಾರಾಗಬಹುದು.
ಕುಟುಂಬಕ್ಕೆ ಸೇರಿದ ಭೂ ವಿವಾದವು ಸುಖಾಂತ್ಯಗೊಳ್ಳುತ್ತದೆ. ನಿಮ್ಮ ಪ್ರತಿಯೊಂದು ಕೆಲಸ ಕಾರ್ಯದ ಮೇಲೆ ಬೇರೆಯವರ ಪ್ರಭಾವವಿರುತ್ತದೆ. ತಪ್ಪು ಮಾಡಿದರೆ ಕಷ್ಟಪಡಬೇಕಾಗುತ್ತದೆ. ಆದ್ದರಿಂದ ಯಾವುದೇ ಕೆಲಸ ಕಾರ್ಯವಾದರೂ ಸ್ವಂತ ನಿರ್ಧಾರಗಳಿಗೆ ಬದ್ಧರಾಗುವುದು ಒಳ್ಳೆಯದು.
ಹಳೆಯ ವಿಚಾರಗಳಿಗೆ ಕಟ್ಟು ಬೀಳದೆ ಸದಾ ಕಾಲ ಹೊಸ ಜೀವನ ಮತ್ತು ಬದಲಾವಣೆಗಳನ್ನು ನಿರೀಕ್ಷೆ ಮಾಡುವಿರಿ. ಆತ್ಮೀಯರಿಗೆ ಸಹಾಯವಾಗಲೆಂದು ಪಾಲುದಾರಿಕೆಯ ವ್ಯಾಪಾರ ಆರಂಭಿಸಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರ ಅಚಲವಾಗಿದ್ದಲ್ಲಿ ಗೆಲುವು ನಿಮ್ಮದೇ. ನಿಮ್ಮ ಸಕಾರಾತ್ಮಕ ಮನೋಭಾವನೆ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಕುಟುಂಬದಲ್ಲಿನ ಶ್ರೇಯೋಭಿವೃದ್ಧಿಗಾಗಿ ಧಾರ್ಮಿಕ ಕಾರ್ಯಗಳನ್ನು ನಡೆಸುವಿರಿ.
ವೃಶ್ಚಿಕ-(Yearly Dina Bhavishya in Kannada)
ಪರಿಶ್ರಮದಿಂದ ಮಾತ್ರ ತಮ್ಮ ಗುರಿ ತಲುಪಲು ಸಾಧ್ಯ. ಜನ ಸಾಮಾನ್ಯರನ್ನು ಸುಲಭವಾಗಿ ಆಕರ್ಷಿಸುವಂತಹ ಆಕರ್ಷಣೆ ನಿಮ್ಮಲ್ಲಿದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಸಮಯಕ್ಕೆ ತಕ್ಕಂತೆ ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ.
ಆತ್ಮೀಯರ ಜೊತೆ ಹಣಕಾಸಿನ ವಿಚಾರದಲ್ಲಿ ವಿವಾದ ಉಂಟಾಗಬಹುದು. ಸ್ವಂತ ಮನೆಯ ಆಸೆ ಸುಲಭವಾಗಿ ಕೈಗೂಡುತ್ತದೆ. ಹಿರಿಯ ಸೋದರಿಯ ಕೌಟುಂಬಿಕ ಜೀವನದಲ್ಲಿ ಸುಖ ಶಾಂತಿ, ಮನೆ ಮಾಡಿರುತ್ತದೆ. ಕೆಲಸದ ಯಶಸ್ಸಿಗೆ ಹೆಚ್ಚಿನ ಶ್ರಮದ ಅವಶ್ಯಕತೆ
ಆತ್ಮವಿಶ್ವಾಸ ಒಳ್ಳೆಯದು, ಆದರೆ ನಾನೇ ಸರಿ ಎಂಬ ಭಾವನೆ ಬಿಡುವುದು ಒಳ್ಳೆಯದು. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಒಮ್ಮೆ ಕೈಹಿಡಿದ ಕೆಲಸ ಕಾರ್ಯಗಳು ಸಂಪೂರ್ಣವಾಗುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ. ಅನಿರೀಕ್ಷಿತ ಆದಾಯ ಹಣಕಾಸಿನ ಕೊರತೆಯನ್ನು ನೀಗಿಸುತ್ತದೆ.
ನಿಮ್ಮ ಮಾತಿಗೆ ಬೆಲೆ ನೀಡಿ ಆತ್ಮೀಯರು ಮರಳಿ ಸಂಪರ್ಕಕ್ಕೆ ಬರುತ್ತಾರೆ. ಸೋದರರ ಜೊತೆಗಿನ ವಿರಸ ಮರೆಯಾಗಲಿದೆ. ಚಿಕ್ಕ ಪುಟ್ಟ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ. ಆತ್ಮೀಯರು ನಿಮ್ಮೊಂದಿಗೆ ವಾದ ವಿವಾದದಲ್ಲಿ ತೊಡಗುತ್ತಾರೆ. ಆದರೆ ನಯವಾದ ಮಾತು ಕತೆಯಿಂದ ಅವರನ್ನು ಸಮಾಧಾನಗೊಳಿಸುವಿರಿ. ಉದ್ಯೋಗ ಬದಲಿಸಲು ಯೋಚಿಸುವಿರಿ.
ಧನು ರಾಶಿ-(Yearly Dina Bhavishya in Kannada)
ಸಮಾಜದಲ್ಲಿ ಉನ್ನತ ಸ್ಥಾನಮಾನ ಲಭಿಸುತ್ತದೆ. ಹೆಚ್ಚು ಕಡಿಮೆ ಮೊದಲ ಅರ್ಧ ವರ್ಷ ಸಂಪೂರ್ಣ ಶುಭಫಲಗಳನ್ನೇ ನೀಡಲಿವೆ. ಆನಂತರ ಸಣ್ಣ ಪುಟ್ಟ ಕೆಲಸಗಳಿಗೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇರುತ್ತದೆ. ಯೋಚಿಸದೆ ಆಡುವ ಮಾತುಗಳು ಮತ್ತು ತೆಗೆದುಕೊಳ್ಳುವ ನಿರ್ಧಾರ ವಿವಾದವನ್ನು ಹುಟ್ಟು ಹಾಕುತ್ತದೆ.
ಆರೋಗ್ಯದಲ್ಲಿ ಇದ್ದ ಸಮಸ್ಯೆಯು ದೂರವಾಗುತ್ತದೆ. ಆದರೆ ಕುಟುಂಬದಲ್ಲಿ ಆತಂಕದ ಸ್ವಲ್ಪ ಪರಿಸ್ಥಿತಿ ಇರುತ್ತದೆ. ನಿಮ್ಮನ್ನು ದ್ವೇಷಿಸುವವರ ಮನಸ್ಸಿನಲ್ಲಿಯೂ ನಿಮ್ಮ ಬಗ್ಗೆ ಪ್ರೀತಿ ಇರುತ್ತದೆ. ಧೈರ್ಯ ಸಾಹಸದ ಗುಣ ಇರುವ ಕಾರಣ ಯಾವ ಕೆಲಸವೂ ಕಷ್ಟವೆನಿಸುವುದಿಲ್ಲ.
ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಎಂದಿಗೂ ಬದಲಿಸುವುದಿಲ್ಲ. ಸಿಡುಕುತನದಿಂದ ದೂರವಾದಾಗಲು ಪ್ರೀತಿಯ ಮಾತಿಗೆ ಸೋತು ಹೋಗುವಿರಿ.
ಸ್ವಂತ ಕೆಲಸ ಕಾರ್ಯದಲ್ಲಿಯೂ ಕಾದು ನೋಡುವ ತಂತ್ರವನ್ನು ಅನುಸರಿಸುವುದು ಒಳ್ಳೆಯದು. ವಿರೋಧಿಗಳನ್ನು ಮಟ್ಟ ಹಾಕುವ ತಂತ್ರಗಾರಿಕೆ ತಿಳಿದಿರುತ್ತದೆ. ಬೇಗನೆ ಕೋಪ ಬರುತ್ತದೆ, ಆದರೆ ಬಹುಕಾಲ ಉಳಿಯದು. ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರಿಯುವ ಮನಸ್ಸಿರುತ್ತದೆ. ವಯಸ್ಸಿನ ಅಂತರವಿಲ್ಲದೆ ಎಲ್ಲರ ಸಲಹೆಗೂ ಗೌರವ ನೀಡುವಿರಿ.
ಆಕಸ್ಮಿಕವಾಗಿ ಪರಿಚಯದವರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಗುರುತು ಪರಿಚಯ ಇರುವವರೊಂದಿಗೆ ಅಥವಾ ಸಂಬಂಧದಲ್ಲಿ ವಿವಾಹವಾಗುತ್ತದೆ. ಆತ್ಮೀಯರ ಸಹಾಯ ಸಹಕಾರ ಸದಾ ಕಾಲ ದೊರೆಯಲಿದೆ. ತಪ್ಪನ್ನು ಮಾಡಿದರೆ ಒಪ್ಪಿಕೊಳ್ಳುವ ದೊಡ್ಡತನ ತೋರುವಿರಿ.
ಮಕರ ರಾಶಿ-(Yearly Dina Bhavishya in Kannada)
ಕುಟುಂಬದ ಪ್ರಮುಖ ಜವಾಬ್ದಾರಿಯನ್ನು ಸುಲಭವಾಗಿ ನಿರ್ವಹಿಸುವಿರಿ. ಸೋದರ ಅಥವಾ ಸೋದರಿಯು ಮನೆ ಕೊಳ್ಳುವ ಅಥವಾ ಕಟ್ಟುವ ಕೆಲಸದಲ್ಲಿ ಹಣಕಾಸಿನ ನೆರವನ್ನು ನೀಡುವಿರಿ. ಪುರಾತನ ಕಾಲದ ಧಾರ್ಮಿಕ ಕೇಂದ್ರ ಒಂದರ ಪುನರುಜ್ಜೀವನ ಕಾರ್ಯದಲ್ಲಿ ಭಾಗಿಯಾಗುವಿರಿ.
ದುಡಿಯುವ ಕೈಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಆರ್ಥಿಕ ಪರಿಸ್ಥಿತಿಯು ನಿಧಾನ ಗತಿಯಲ್ಲಿ ಅಭಿವೃದ್ಧಿ ಹೊಂದಲಿದೆ. ಸರಿಯಾದ ತೀರ್ಮಾನಗಳನ್ನು ಕೈಗೊಳ್ಳಿರಿ. ಸೋಲು ಗೆಲುವನ್ನು ಸಮಾನವಾಗಿ ಕಂಡರೂ ಮನದಲ್ಲಿಯೇ ಯೋಚನೆಗೆ ಒಳಗಾಗುವಿರಿ.
ಆದಾಯವಿಲ್ಲದ ಯಾವುದೇ ಕೆಲಸವನ್ನು ಮಾಡಲು ಒಪ್ಪುವುದಿಲ್ಲ ಕಷ್ಟಪಟ್ಟು ದುಡಿಯಲು ಹಿಂಜರಿಯುವುದಿಲ್ಲ. ಆದರೆ ಯಾವುದೇ ವಿಚಾರದಲ್ಲಿಯೂ ಬೇಗನೆ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ. ಮಾತನಾಡಲು ಆರಂಭಿಸಿದರೆ ಬೇರೆಯವರಿಗೆ ಬೇಸರವಾಗುವಷ್ಟು ಮಾತನಾಡುವಿರಿ. ಯಾವುದೇ ಒತ್ತಡದ ಸನ್ನಿವೇಶದಲ್ಲಿಯೂ ಸೂಕ್ತವಾದ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲಿರಿ.
ಕುಟುಂಬದ ಪ್ರತಿಯೊಂದು ವಿಚಾರದಲ್ಲಿಯೂ ನಿಮ್ಮ ತೀರ್ಮಾನವೇ ಅಂತಿಮವಾಗುತ್ತದೆ. ವರ್ಷದ ಮೊದಲ ಮೂರು ತಿಂಗಳು ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿವೆ. ಆದರೆ ವರ್ಷದ ದ್ವಿತೀಯ ಭಾಗದಲ್ಲಿ ಕೆಲಸ ಕಾರ್ಯಗಳು ಸುಲಭಗತಿಯಲ್ಲಿ ನಡೆಯಲಿದೆ.
ಹಣದ ಬಗ್ಗೆ ಆಸೆ ಇರುವುದಿಲ್ಲ. ಆದರೆ ಹಣ ಗಳಿಸುವ ಅವಕಾಶವನ್ನು ಬೇರೆಯವರ ಹಣಕಾಸಿನ ವಿವಾದದಿಂದ ದೂರ ಉಳಿಯಲು ಪ್ರಯತ್ನಿಸುವಿರಿ. ಹೊಸ ಬಗೆಯ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ತಾಯಿಯವರ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಅವಿವಾಹಿತರಿಗೆ ವಿವಾಹವಾಗುವ ಕಾಲ ಒದಗಿ ಬರಲಿದೆ. ಸಂತಾನ ಲಾಭವಿದೆ. ವಿದ್ಯಾರ್ಥಿಗಳು ಕಷ್ಟಪಡದೆ ತಮ್ಮ ಮನದ ಗುರಿಯನ್ನು ತಲುಪುತ್ತಾರೆ.
ಕುಂಭ ರಾಶಿ (Yearly Rashi Bhavishya in Kannada)
ಆತ್ಮೀಯರ ಸಹಾಯದಿಂದ ಸ್ವಂತ ಉದ್ದಿಮೆಯನ್ನು ಸ್ಥಾಪಿಸುವಿರಿ. ಯಾರಿಂದಲೂ ಸಾಲವಾಗಿ ಹಣವನ್ನು ಪಡೆಯುವುದಿಲ್ಲ. ಇದೇ ರೀತಿ ಯಾರಿಗೂ ಸಾಲವಾಗಿ ಹಣದ ಸಹಾಯವನ್ನು ಮಾಡುವುದಿಲ್ಲ.
ತಾಯಿಯವರ ಸಹಾಯದಿಂದ ಕುಟುಂಬದಲ್ಲಿ ವಿವಾಹ ಕಾರ್ಯವನ್ನು ನೆರವೇರಲಿದೆ. ಸಮಾಜದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ. ಮನಸ್ಸಿದ್ದಲ್ಲಿ ಸಮಾಜದ ಗಣ್ಯ ವ್ಯಕ್ತಿಗಳ ಮೂಲಕ ರಾಜಕೀಯವನ್ನು ಪ್ರವೇಶಿಸಬಹುದು. ಸ್ತ್ರೀಯರಿಗೆ ವಿಶೇಷವಾದಂತಹ ಸ್ಥಾನ ದೊರೆಯಲಿವೆ.
ಅವಿವಾಹಿತರಿಗೆ ವಿವಾಹ ಯೋಗವಿದೆ. ಕುಟುಂಬದ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ. ಕೆಲಸ ಕಾರ್ಯಗಳಲ್ಲಿಯೂ ಕುಟುಂಬದ ಹಿರಿಯರಿಗೆ ಸಹಾಯ ಮಾಡುವಿರಿ. ಕುಟುಂಬಕ್ಕೆ ಸಂಬಂಧಪಟ್ಟ ಹಣಕಾಸಿನ ವಿವಾದ ಒಂದು ದೂರವಾಗಲಿದೆ. ಅಧಿಕಾರಿಗಳು ಕೆಲಸವನ್ನು ಮೆಚ್ಚಿ ಉನ್ನತ ಸ್ಥಾನ ನೀಡಲಿದ್ದಾರೆ.
ಹಣಕಾಸಿನ ಕೊರತೆಯನ್ನು ಕಡಿಮೆ ಮಾಡಲು ಸಹೋದ್ಯೋಗಿಗಳ ಜೊತೆಗೂಡಿ ಸ್ವಂತ ಸಂಸ್ಥೆಯನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಕಲಿಕೆಯಲ್ಲಿ ಮುಂದುವರೆಯಬೇಕು. ಹತ್ತಾರು ಜನರಿಗೆ ಉಪಯೋಗವಾಗುವಂತಹ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ.
ವಿವಾಹಿತರು ಕುಟುಂಬದ ಆಡಳಿತವನ್ನು ನಿರ್ವಹಿಸುತ್ತಾರೆ. ಲೋಹದ ವಸ್ತುವಿನಿಂದ ಅಪಾಯಕಾರಿ ಸನ್ನಿವೇಶ ಎದುರಾಗಬಹುದು. ಮನಸ್ಸಿಗೆ ಒಪ್ಪುವ ಕೆಲಸಗಳನ್ನು ಮಾತ್ರ ಮಾಡುವಿರಿ. ಸಹಬಾಳ್ವೆಯಲ್ಲಿ ಹೆಚ್ಚಿನ ಅಕ್ಕರೆ ಮತ್ತು ನಂಬಿಕೆ ಇರುತ್ತದೆ.
ಮೀನ-(Yearly Rashi Bhavishya in Kannada)
ಪೂರ್ವ ನಿಯೋಜನೆ ಇಲ್ಲದೆ ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಬೇಡಿರಿ . ಮಕ್ಕಳಿಗೆ ಅನಿರೀಕ್ಷಿತವಾಗಿ ವಿವಾಹ ಸಂಬಂಧ ಕೈಗೂಡುತ್ತದೆ.
ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಸಂಬಂಧವರೇ ಇಲ್ಲದವರು ಹೇಳುವ ಮಾತನ್ನು ನಂಬದಿರಿ. ಬಹುದಿನದಿಂದ ನಿರೀಕ್ಷೆಯಿದ್ದ ಕೆಲಸವೊಂದು ನೆರವೇರಲಿದೆ.
ಜನಪ್ರತಿನಿಧಿಗಳು ನಯವಾಗಿ ಜನರೊಂದಿಗೆ ವರ್ತಿಸುತ್ತಾರೆ. ಇದರಿಂದಾಗಿ ಉನ್ನತ ಸ್ಥಾನಮಾನ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ.
ಒಂದೇ ಮನಸ್ಸಿನಿಂದ ಕೈಗೊಳ್ಳುವ ನಿರ್ಧಾರಗಳು ಜೀವನಕ್ಕೆ ಹೊಸ ಅರ್ಥವನ್ನು ನೀಡುತ್ತವೆ. ಈ ವರ್ಷದಲ್ಲಿ ಒಂದೆರಡು ಬಾರಿ ಉದ್ಯೋಗವನ್ನು ಬದಲಾಯಿಸುವ ಸೂಚನೆಗಳಿವೆ.
ಕೇವಲ ಮಾತಿನಿಂದಲೇ ಎಲ್ಲವನ್ನು ಸಾಧಿಸಲು ಸಾಧ್ಯವಿಲ್ಲ. ಚಿಕ್ಕ ಪುಟ್ಟ ವಿಚಾರವಾದರೂ ಬದಲಾಗದ ಮನಸ್ಸು ಮುಖ್ಯವಾಗುತ್ತದೆ.
ಜೀವನದ ಪ್ರಮುಖ ಘಟ್ಟವನ್ನು ತಲುಪಲು ಹಿರಿಯ ಸೋದರಿಯ ಅಥವಾ ಸ್ನೇಹಿತರ ಸಹಾಯ ದೊರೆಯುತ್ತದೆ. ಹಣದ ಕೊರತೆ ಉಂಟಾದರೂ ಅದನ್ನು ಸರಿದೂಗಿಸುವ ಸಾಮರ್ಥ್ಯ ನಿಮ್ಮಲ್ಲಿರುತ್ತದೆ. ಮನದಲ್ಲಿ ಇರುವ ಭಯದ ಮನಸ್ಥಿತಿಯನ್ನು ಮರೆಯುವ ಪ್ರಯತ್ನ ಮಾಡಿ. ಹಣದ ತೊಂದರೆ ಬಾರದು. ಆದರೆ ಖರ್ಚು ವೆಚ್ಚಗಳ ಬಗ್ಗೆ ನಿಯಂತ್ರಣ ಹೊಂದಿರಬೇಕು.
English Summary: Yearly Rashi Bhavishya in Kannada (April 08 2024, To April 08, 2025 ): Get your Yearly horoscope in Kannada for libra, leo, gemini, taurus, virgo, Aries, Cancer, Scorpio, Pisces, Capricorn.
