CHITRADURGA NEWS | 08 MARCH 2024
ಚಿತ್ರದುರ್ಗ: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ ಬೆಳ್ಳಂ ಬೆಳಗ್ಗೆ ಮತ ಬೇಟೆಗೆ ಇಳಿಯುತ್ತಿದ್ದು, ಪ್ರತಿ ದಿನವೂ ಒಂದೊಂದು ಕಡೆಗಳಲ್ಲಿ ಬೇರೆ ಬೇರೆ ವಲಯದ ಜನರನ್ನು ಭೇಟಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ.
ಒಂದು ದಿನ ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ವಾಯು ವಿಹಾರದಲ್ಲಿ ತೊಡಗಿದ್ದವರನ್ನು ಮಾತನಾಡಿಸಿದ ನಂತರ ರಸ್ತೆ ಬದಿಯಲ್ಲಿ ಚಹಾ ಕುಡಿಯುತ್ತಾ, ತರಕಾರಿ ಖರೀದಿಸುವ ಮೂಲಕ ಮತಬೇಟೆ ಆರಂಭಿಸಿದ್ದರು.
ಇದನ್ನೂ ಓದಿ: Yearly Rashi Bhavishya in Kannada: ಯುಗಾದಿ ನಂತರ ಇಡೀ ವರ್ಷದ ರಾಶಿ ಭವಿಷ್ಯದ ಫಲಾಫಲ
ಮತ್ತೊಂದು ದಿನ ಚಂದ್ರವಳ್ಳಿ ಪ್ರದೇಶ, ನಗರದ ವಿವಿಧ ಸಮುದಾಯಗಳ ಪ್ರಮುಖರ ಮನೆಗಳಿಗೆ ಭೇಟಿ ನೀಡುವ ಮೂಲಕ ಗಮನ ಸೆಳೆದಿದ್ದರು.
ಇಂದು ಅಂದರೆ, ಸೋಮವಾರ ನಗರದ ಸಂತೆ ಹೊಂಡದ ಬಳಿ ತೆರಳಿ ತರಕಾರಿ, ಹಣ್ಣು, ಹೂವು, ಕಾಯಿ ಮಾರುವವರ ಬಳಿ ಮತಯಾಚನೆ ಮಾಡಿದರು. ತರಕಾರಿ ಖರೀದಿಗಾಗಿ ಬಂದವರನ್ನು ಮಾತನಾಡಿಸಿ, ತಮ್ಮ ಮತಪತ್ರ ನೀಡಿ ಮತಯಾಚನೆ ಮಾಡಿದರು. ಇದೇ ವೇಳೆ ಎಲ್ಲಮ್ಮನನ್ನು ಹೊತ್ತು ಬಂದ ಮಹಿಳೆಯೊಬ್ಬರಿಗೆ ಮತಪತ್ರ ನೀಡಿ ಮತಯಾಚನೆ ಮಾಡಿ ಆಶೀರ್ವಾದ ಬೇಡಿಕೊಂಡರು.
ಇದನ್ನೂ ಓದಿ: ಮೂರು ದಿನಗಳಲ್ಲಿ ಮಳೆ ಸಾಧ್ಯತೆ | ಭಾರತೀಯ ಹವಾಮಾನ ಇಲಾಖೆ ವರದಿ
ಈ ವೇಳೆ ಬಿಜೆಪಿ ಜಿಲ್ಲಾ ಖಜಾಂಚಿ ಮಾಧುರಿ ಗಿರೀಶ್, ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ನಗರ ಯುವಮೋರ್ಚಾ ಅಧ್ಯಕ್ಷ ರಾಮು, ಶೈಲಜಾ ರೆಡ್ಡಿ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಮತ್ತಿತರರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
